Tag: River Bank

  • 15 ದಿನದಲ್ಲಿ ಓರ್ವ ವ್ಯಕ್ತಿ ಸೇರಿ, ಹತ್ತಾರು ಮೂಕ ಜೀವಗಳನ್ನು ಬಲಿ ಪಡೆದ ಮೊಸಳೆಗಳು

    15 ದಿನದಲ್ಲಿ ಓರ್ವ ವ್ಯಕ್ತಿ ಸೇರಿ, ಹತ್ತಾರು ಮೂಕ ಜೀವಗಳನ್ನು ಬಲಿ ಪಡೆದ ಮೊಸಳೆಗಳು

    – ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ

    ಯಾದಗಿರಿ: ಜಿಲ್ಲೆಗೆ ಒಂದು ಕಡೆ ಕೊರೊನಾ ಮತ್ತೊಂದು ಕಡೆ ಮೊಸಳೆ ಕಾಟ ಶುರುವಾಗಿದೆ. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ, ನದಿ ತೀರದಲ್ಲಿ ಮೊಸಳೆಗಳ ಸಾಮ್ರಾಜ್ಯ ನಿರ್ಮಾಣವಾಗಿದೆ.

    ಕಳೆದ 15 ದಿನಗಳಿಂದ ಮೊಸಳೆಗಳು ಕೃಷ್ಣಾ ನದಿ ಪಾತ್ರದ ಜನರಿಗೆ ಉಪಟಳ ನೀಡುತ್ತಿವೆ. ಕಳೆದ 15 ದಿನಗಳ ಅಂತರದಲ್ಲಿ ಓರ್ವ ವ್ಯಕ್ತಿ ಸೇರಿದಂತೆ ಹತ್ತಾರು ಮೂಕ ಜೀವಿಗಳನ್ನು ಮೊಸಳೆಗಳು ಬಲಿ ಪಡೆದಿವೆ. ಜಿಲ್ಲೆಯ ವಡಗೇರಾ ತಾಲೂಕಿನ ಭೀಮಾ ಮತ್ತು ಕೃಷ್ಣಾ ಸಂಗಮ, ಬೆಂಡಬಂಳಿ, ಕೊಡಾಲ, ಶಿವಪುರ ನದಿ ಪಾತ್ರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಆಹಾರ ಅರಸಿ ನದಿ ತೀರಕ್ಕೆ ಬರುತ್ತಿರುವ ಮೊಸಳೆಗಳಿಗೆ, ಆಡು, ಕುರಿ, ಆಕಳು, ಎಮ್ಮೆ ಬಲಿಯಾಗುತ್ತಿವೆ.

    ಇದರ ಜೊತೆಗೆ ನದಿ ತೀರದ ಜಮೀನಿನ ಹೊಂದಿರುವ ರೈತರ ಮೇಲೂ ದಾಳಿ ಮಾಡುತ್ತಿರುವ ಮೊಸಳೆಗಳು, ಮಾರಣಾಂತಿಕ ಹಲ್ಲೆ ನಡೆಸುತ್ತಿವೆ. ಇದರಿಂದಾಗಿ ಜನರು ಭಯ ಭೀತರಾಗಿದ್ದು, ನದಿ ತೀರಕ್ಕೆ ತೆರಳಲು ಭಯ ಪಡುವಂತಾಗಿದೆ.