Tag: Ritesh Deshmukh

  • ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಮುಂಬೈ: ಬಾಲಿವುಡ್‍ನ ಮುದ್ದಾದ ಜೋಡಿಗಳಲ್ಲಿ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ ಕೂಡ ಒಂದು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಹಾಸ್ಯದ ವೀಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ದಿನಗಳು ಹಿಂದೆ ಸಮಾರಂಭವೊಂದಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಿತೇಶ್, ನಟಿಯೊಬ್ಬರ ಜೊತೆ ಜೆನಿಲಿಯಾ ಮುಂದೆಯೇ ಅತೀ ಸಲುಗೆಯಿಂದ ನಡೆದುಕೊಂಡಿದ್ದರು. ಇದನ್ನು ಕಂಡು ಜೆನಿಲಿಯಾ ರಿತೇಶ್ ಮೇಲೆ ಆಕ್ರೋಶಗೊಂಡಿದ್ದರು. ಇದೀಗ ಈ ವೀಡಿಯೋವನ್ನು ಜೆನಿಲಿಯಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಮುಂದೇನಾಯ್ತು ಎಂದು ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿದ್ದಾರೆ.

    ವೀಡಿಯೋದಲ್ಲಿ ರಿತೇಶ್ ದೇಶ್‍ಮುಖ್ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಜೆನಿಲಿಯಾ ಸಮಾಧಾನದಿಂದ ಕೇಳುತ್ತಿರುತ್ತಾರೆ. ನಂತರ ರಿತೇಶ್ ಪ್ರೀತಿ ಜಿಂಟಾರನ್ನು ತಬ್ಬಿಕೊಂಡು, ಕೈಗೆ ಕಿಸ್ ಮಾಡುತ್ತಾರೆ. ಇದನ್ನು ನೋಡಿ ಜೆನಿಲಿಯಾ ಗರಂ ಆಗುತ್ತಾರೆ. ಬಳಿಕ ಮನೆಗೆ ಬಂದ ಮೇಲೆ ರಿತೇಶ್‍ರನ್ನು ಜೆನಿಲಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಿತೇಶ್ ಸಾಕಪ್ಪಾ ಸಾಕು ಎಂದು ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ. ಈ ಘಟನೆಯು 2019ರ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ವೀಡಿಯೋದಲ್ಲಿ ಜೆನಿಲಿಯಾ ಮುಖಭಾವನೆ ಎಲ್ಲರ ಗಮನ ಸೆಳೆದಿದೆ.

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೇರಿ ಕಸಮ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 2012ರ ಫೆಬ್ರವರಿ 3ರಂದು ಹಿಂದೂ ಸಂಪ್ರಾದಾಯ ಪ್ರಕಾರ ಸಪ್ತಪದಿ ತುಳಿದರು.

     

    View this post on Instagram

     

    A post shared by Genelia Deshmukh (@geneliad)

  • ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    – ರಿತೇಶ್ ಐಡಿಯಾಗೆ ಮೆಚ್ಚುಗೆ
    – ಅಮ್ಮನ ಹಳೆ ಸೀರೆಯಿಂದ ಹೊಸ ಬಟ್ಟೆ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ದೀಪಾವಳಿಯ ಹೊಸ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮನ ಹಳೆ ಸೀರೆಯಿಂದ ತಾವು ಹಾಗೂ ಇಬ್ಬರು ಮಕ್ಕಳಿಗೂ ರಿತೇಶ್ ಕುರ್ತಾ ಹೊಲಿಸಿಕೊಂಡಿದ್ದಾರೆ.

    ಅಮ್ಮನ ಹಳೆಯ ಸೀರೆಯನ್ನ ಬಳಸಿ ಹೊಸ ಬಟ್ಟೆ ಮಾಡಿಕೊಂಡಿರುವ ವೀಡಿಯೋ ರಿತೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಮ್ಮನ ಹಳೆ ಸೀರೆ. ಮಕ್ಕಳು ಮತ್ತು ನನಗೆ ದೀಪಾವಳಿಯ ಹೊಸ ಬಟ್ಟೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ರಿತೀಶ್ ಬರೆದುಕೊಂಡಿದ್ದಾರೆ.

    ಇನ್ನು ರಿತೇಶ್ ಐಡಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ತಾವು ಸಹ ಅಮ್ಮನ ಸೀರೆಯಲ್ಲಿ ಕುರ್ತಾ ಹೊಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಮ್ಮನ ಸೀರೆಯಲ್ಲಿ ಆಕೆಯ ಪ್ರೀತಿ ಮತ್ತು ಆಶೀರ್ವಾದ ಇರುತ್ತೆ. ಇಂತಹ ಪ್ರೀತಿಯ ಕ್ಯೂಟ್ ವೀಡಿಯೋ ಶೇರ್ ಮಾಡಿಕೊಂಡ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ.