Tag: Risk

  • ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

    ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

    ನ್ಯೂಯಾರ್ಕ್: ಇಂಟರ್‌ನೆಟ್ ಸ್ಥಗಿತಗೊಳಿಸುವುದು ಅಥವಾ ಅಡೆತಡೆಗಳನ್ನು ಹೇರುವುದರಿಂದ ತೀವ್ರವಾದ ಪರಿಣಾಮಗಳು ಉಂಟಾಗಬಹುದು. ಹೀಗಾಗಿ ದೇಶಗಳು ಇಂಟರ್‌ನೆಟ್ ಮೇಲೆ ನಿರ್ಬಂಧ ಹೇರುವುದನ್ನು ಕೂಡಲೇ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.

    ಇಂಟರ್‌ನೆಟ್ ಸ್ಥಗಿತಗೊಳಿಸುವಿಕೆಯಿಂದ ಲಕ್ಷಾಂತರ ಜನರ ಜೀವನ ಹಾಗೂ ಮಾನವ ಹಕ್ಕುಗಳ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಬೆಂಕಿಗಾಹುತಿ

    ಇಂಟರ್‌ನೆಟ್ ಹಾಗೂ ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡರೆ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ತಮ್ಮ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದು, ಮತದಾರರು ಅಭ್ಯರ್ಥಿಗಳ ಮಾಹಿತಿಯಿಂದ ವಂಚಿತರಾಗುವುದು, ಕರಕುಶಲ ತಯಾರಕರು ಗ್ರಾಹಕರಿಂದ ದೂರ ಉಳಿಯುವುದು ಹಾಗೂ ಹಿಂಸಾತ್ಮಕ ದಾಳಿಯ ಸಂದರ್ಭ ಶಾಂತಿಯನ್ನು ಸ್ಥಾಪಿಸಲು ಸಹಾಯಕ್ಕೆ ಅಧಿಕಾರಿಗಳನ್ನು ಕರೆಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

    ಈ ಬಗ್ಗೆ ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್, ಡಿಜಿಟಲ್ ಜಗತ್ತು ಮಾನವ ಜಗತ್ತಿಗೆ ಅತ್ಯಗತ್ಯವಾಗಿದೆ. ಇಂತಹ ಸಮಯದಲ್ಲಿ ಸ್ಥಗಿತಗಳಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

    ಇಂಟರ್‌ನೆಟ್ ಸ್ಥಗಿತಗೊಂಡರೆ, ಲೆಕ್ಕಿಸಲಾಗದಷ್ಟು ಹಾನಿ ಉಂಟಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಜಾಗತಿಕ ಗಮನವನ್ನು ಸೆಳೆದ ಮೊದಲ ಮುಖ್ಯ ಇಂಟರ್‌ನೆಟ್ ಸ್ಥಗಿತ 2011ರಲ್ಲಿ ಈಜಿಪ್ಟ್‌ನಲ್ಲಿ ನಡೆದಿತ್ತು. ತಹ್ರೀರ್ ಸ್ಕ್ವೇರ್ ಪ್ರದರ್ಶನದ ಸಮಯದಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡು, ಹಿಂಸಾತ್ಮಕ ಘಟನೆಗಳು ನಡೆದವು. ಹಲವು ಹತ್ಯೆಗಳು ನಡೆದು, ನೂರಾರು ಜನರು ಬಂಧನಕ್ಕೊಳಗಾಗಿದ್ದರು ಎಂದು ತಿಳಿಸಿದರು.

    ಇಂತಹ ಸ್ಥಗಿತಗಳು ಸಂಭವಿಸಿತು ಎಂದಾದಲ್ಲಿ, ಜನರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಜನರನ್ನು ನಿಯಂತ್ರಿಸಲಾಗದಷ್ಟು ಮಟ್ಟದಲ್ಲಿ ಹಕ್ಕುಗಳ ಉಲ್ಲಂಘನೆ, ಹತ್ಯೆಗಳು ನಡೆಯಬಹುದು ಎಂದು ಹೇಳಿದ್ದಾರೆ.

    Live Tv

  • ಸಾವಿನ ದವಡೆಯಿಂದ ಪಾರಾದ 1 ವರ್ಷದ ಕಂದಮ್ಮ – ಶಾಕಿಂಗ್ ವಿಡಿಯೋ

    ಸಾವಿನ ದವಡೆಯಿಂದ ಪಾರಾದ 1 ವರ್ಷದ ಕಂದಮ್ಮ – ಶಾಕಿಂಗ್ ವಿಡಿಯೋ

    ಲಕ್ನೋ: ಚಲಿಸುತ್ತಿರುವ ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಗುವೊಂದು ರೈಲಿನ ಅಡಿಗೆ ತಾಯಿಯ ಕೈಯಿಂದ ಜಾರಿ ಹಳಿಯ ಮೇಲೆ ಬಿದ್ದ ಕೂಡಲೇ, ಹಳಿಯ ಮೇಲೆ ವೇಗವಾಗಿ ರೈಲೊಂದು ಹೋಗಿದೆ. ಇದರಿಂದ ಮಗುವು ಸಾವನ್ನಪ್ಪಿರಬಹುದು ಎಂದು ನಿಲ್ದಾಣದಲ್ಲಿ ಜನರು ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಹಳಿಯ ಗೋಡೆಯ ಸಿಲುಕಿದ್ದ ಮಗುವಿಗೆ ಯಾವುದೇ ಗಾಯಗಳಾಗದೇ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಮಥುರಾ ರೈಲ್ವೆ ಸ್ಟೇಷನ್‍ನಲ್ಲಿ ನಡೆದಿದೆ.

    ತಾಯಿ ಒಂದು ವರ್ಷದ ಸಾಹಿಬಾ ಎಂಬ ಹೆಸರಿನ ಹೆಣ್ಣು ಮಗುವನ್ನ ಕೈಯಲ್ಲಿ ಎತ್ತುಕೊಂಡು ರೈಲು ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಮಗು ತಾಯಿಯ ಕೈಯಿಂದ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಬಿದ್ದ ಮಗುವನ್ನ ಎತ್ತಲು ಹೋದಾಗ ಅದೇ ಸಮಯಕ್ಕೆ ವೇಗವಾಗಿ ರೈಲು ಬಂದಿದೆ. ರೈಲಿನ ಅಡಿಯಲ್ಲಿ ಸಿಲುಕಿದ್ದ ಮಗು ಸಾವನ್ನಪ್ಪಿರಬಹುದು ಎಂದು ಊಹಿಸುವಷ್ಟರಲ್ಲಿ, ಹಳಿಯ ಗೋಡೆಯ ಬದಿಯಲ್ಲಿ ಸಿಲುಕಿಕೊಂಡಿದ್ದ ಮಗು ಬದುಕುಳಿದಿರುವುದನ್ನ ಕಂಡ ಅಲ್ಲಿದ್ದ ಯುವಕರು ಕೂಡಲೇ ಕೆಳಗೆ ಜಿಗಿದು ಮಗುವನ್ನ ರಕ್ಷಿಸಿರುವುದನ್ನ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನ ಸೆರೆ ಹಿಡಿದ್ದಾರೆ.

    ಕೈ ಜಾರಿ ಮಗುವು ಹಳಿಯ ಮೇಲೆ ಬಿದ್ದದ್ದನ್ನ ಅಸಹಾಯಕವಾಗಿ ಪ್ರಯಾಣಿಕರು ಮತ್ತು ಮಗುವಿನ ಹೆತ್ತವರು ನೋಡುವ ಪರಿಸ್ಥಿತಿ ಎದುರಾಗಿತ್ತು. ಕಣ್ಣೆದುರೇ ಮಗುವಿನ ಪ್ರಾಣ ಹೋಯಿತೆಂದ ದುಃಖದಲ್ಲಿದ್ದ ತಾಯಿಗೆ ಮಗು ಪವಾಡದ ರೀತಿಯಲ್ಲಿ ಬದುಕುಳಿದ್ದನ್ನ ಕಂಡು ಸಂತಸವನ್ನ ವ್ಯಕ್ತಪಡಿಸಿದರು.

    ಈ ಘಟನೆಯಲ್ಲಿ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಪವಾಡವನ್ನ ನೋಡಿದ ಅಲ್ಲಿನ ಪ್ರಯಾಣಿಕರು ಮಗು ಬದುಕುಳಿದ್ದನ್ನ ನೋಡಿ ಹರೇ ರಾಮ್ ಹರೇ ರಾಮ್ ಎಂದು ಘೋಷಣೆಯನ್ನ ಕೂಗಿ ಸಂತಸ ವ್ಯಕ್ತಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಒಂದು ಫೋಟೋಗಾಗಿ ಸಾವಿನ ಜೊತೆ ಸೆಣಸಾಟ..!

    ಒಂದೇ ಒಂದು ಫೋಟೋಗಾಗಿ ಸಾವಿನ ಜೊತೆ ಸೆಣಸಾಟ..!

    -ನಂದಿಗಿರಿಧಾಮದಲ್ಲಿ ಪ್ರವಾಸಿಗರ ಹುಚ್ಚಾಟ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಒಂದೇ ಒಂದು ಸೆಲ್ಫೀಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.

    ಭೂಮಿ-ಬಾನು ಒಂದಾಗೋ ಆ ಜಾಗದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳೋಕೆ ತಮ್ಮ ಪ್ರಾಣದ ಜೊತೆ ಸೆಣಸಾಟ ನಡೆಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ನಿರ್ಮಿಸಿರುವ ಐರನ್ ಗ್ರಿಲ್ ಅನ್ನೇ ಹರಸಾಹಸ ಪಟ್ಟು ಹತ್ತುತ್ತಿರುವ ಯುವಕ-ಯುವತಿಯರು, ತಡೆ ಬೇಲಿಯನ್ನೇ ದಾಟಿ ಅಪಾಯಕಾರಿ ಸ್ಥಳಕ್ಕೆ ತಲುಪುತ್ತಿದ್ದಾರೆ. ಅಲ್ಲಿ ಫೋಟೋ, ಸೆಲ್ಫೀ ತೆಗೆದುಕೊಳ್ಳೋಕೆ ಇನ್ನಿಲ್ಲದ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಪ್ರವಾಸಿಗರು ಹೇಳಿದ್ದಾರೆ.

    ಈ ಹಿಂದೆ ದಟ್ಟ ಮಂಜಿನ ಮಧ್ಯೆ ಬೆಟ್ಟದ ಕೊನೆ ಆಳ-ಅಗಲ ತಿಳಿಯದೆ ಕೆಲವರು ಬೆಟ್ಟದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ತೋಟಗಾರಿಕೆ ಇಲಾಖೆ, ಪ್ರವಾಸಿಗರ ಹಿತದೃಷ್ಠಿಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಐರನ್ ಗ್ರಿಲ್ ಕಾಪೌಂಡು ನಿರ್ಮಿಸಿ ಅಪಾಯಕಾರಿ ವಯಲವೆಂದು ಘೋಷಣೆ ಮಾಡಿದೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯದ ಜೊತೆ ಫೋಟೋ ತೆಗೆದುಕೊಳ್ಳಲು ಇಲ್ಲಿರುವ ಐದಾರು ಅಡಿ ಎತ್ತರದ ಗ್ರಿಲ್ ನ್ನು ಹತ್ತಿ ಇಳಿದು ಅಪಾಯಕಾರಿ ಸ್ಥಳ ತಲುಪಿ ಹರಸಾಹಸ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವ ಹುಚ್ಚು ಸಾಹಸ ಹೆಚ್ಚಾಗಿದ್ದು, ನಂದಿಗಿರಿಧಾಮದ ಅಧಿಕಾರಿಗಳಿಗೆ ತಲೆನೋವಾಗಿದೆ ಎಂದು ವಿಶೇಷಾಧಿಕಾರಿ ರಮೇಶ್ ತಿಳಿಸಿದ್ದಾರೆ.

    ಅಸಲಿಗೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಅಂತಾನೇ ಬರುತ್ತಾರೆ. ಕೆಲವೆಡೆ ವಿವ್ಯೂ ಪಾಯಿಂಟ್ ನಿರ್ಮಾಣ ಮಾಡಿದ್ದು, ಅಲ್ಲಿ ಫೋಟೋ ತೆಗೆದುಕೊಳ್ಳೋಕೆ ಅವಕಾಶವಿದೆ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಕಾಪೌಂಡ್ ನಿರ್ಮಾಣ ಮಾಡಿ ಪ್ರವಾಸಿಗರ ಪ್ರವೇಶ ನಿಷೇಧ ಮಾಡಿದ್ದರೂ ಕೆಲವು ಯುವಕ-ಯುವತಿಯರು ಒಂದೇ ಒಂದು ಫೋಟೊಗಾಗಿ ಆಪತ್ತನ್ನೇ ಮೈ ಮೇಲೆ ಎಳೆದುಕೊಳ್ಳುತ್ತಾ ಹುಚ್ಚು ಸಾಹಸ ಮಾಡುತ್ತಿರುವುದು ಸ್ಥಳೀಯ ಪೋಲಿಸರು ಹಾಗೂ ಗಿರಿಧಾಮದ ಅಧಿಕಾರಿಗಳಿಗಳಿಗೂ ತಲೆನೋವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಮಧ್ಯರಾತ್ರಿಯ ಕಗತ್ತಲಲ್ಲಿ ಬೆಟ್ಟ ಸೇರಿದ್ದ ಯುವಕರು – ಟ್ರೆಕ್ಕಿಂಗ್‍ಗೆ ಬಂದು ಪಡಬಾರದ ಫಜೀತಿ ಪಟ್ಟರು

    ಚಿಕ್ಕಬಳ್ಳಾಪುರ: ಟ್ರೆಕ್ಕಿಂಗ್ ಬಂದ ಮೂವರು ಯುವಕರು ಮಧ್ಯರಾತ್ರಿಯ ಕಗ್ಗತ್ತಲ್ಲಿ ಬೃಹದಾಕರದ ಬೆಟ್ಟ ಹತ್ತಿ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲಾಗದೇ ಫಜೀತಿ ಪಟ್ಟ ಘಟನೆ ಚಿಕ್ಕಬಳ್ಳಾಪುರ ದಿವ್ಯ ಗಿರಿಧಾಮದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಕರ್ ಕುಮಾರ್, ಐಷು ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ದೀಪಾಂಶು ಟ್ರೆಕ್ಕಿಂಗ್‍ಗೆ ಆಗಮಿಸಿ ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಸುರಕ್ಷಿತವಾಗಿ ಇಳಿದಿದ್ದಾರೆ.


    ನಡೆದಿದ್ದೇನು?
    ಮೂವರು ಯುವಕರು ಪಡೆದು ಮಧ್ಯರಾತ್ರಿ ಕಾರಹಳ್ಳಿ ಕ್ರಾಸ್ ಮಾರ್ಗದ ಮುಖಾಂತರ ಕಡಿದಾದ ದಿವ್ಯಗಿರಿ ಬೆಟ್ಟದ ಅರ್ಧಭಾಗಕ್ಕೆ ತೆರಳಿದ್ದಾರೆ. ಆದರೆ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲು ಯತ್ನಿಸಿದ ವೇಳೆ ಅವರಿಗೆ ತಾವು ಆಗಮಿಸಿದ್ದ ಸ್ಥಳ ನೋಡಿ ಶಾಕ್ ಆಗಿದೆ. ಬೆಟ್ಟ ಹತ್ತಿ ಕಡಿದಾದ ಜಾಗದಲ್ಲಿ ಕೂತಿದ್ದ ಅವರಿಗೆ ಬೆಳಿಗ್ಗೆ ಇಳಿಯಲು ಹೆದರಿಕೆಯಾಗಿದೆ. ಏಕೆಂದರೆ ಬೆಟ್ಟದ ತೀರ ಕಡಿದಾದ ಜಾಗಕ್ಕೆ ತೆರಳಿದ್ದ ಯುವಕರು ಒಂದು ಹೆಜ್ಜೆ ಮುಂದಿಟ್ಟರೂ ಅಪಾಯ ಕಾದಿತ್ತು. ಅಪಾಯದ ತೀವ್ರತೆ ಅರಿತ ಯುವಕರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಈ ಯುವಕರ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಜೊತೆಗೂಡಿ ಯುವಕರ ರಕ್ಷಣೆ ಮಾಡಿದ್ದಾರೆ.

    ಮೂವರಲ್ಲಿ ದೀಪಾಂಶು ಚಾರಣದ ವೇಳೆ ಬಿದ್ದು ಗಾಯಗೊಂಡಿದ್ದು, ಮೊಣಕಾಲಿಗೆ ಗಂಭೀರವಾದ ಗಾಯವಾಗಿ ತೀವ್ರತರವಾದ ರಕ್ತಸ್ರಾವವಾಗಿದೆ. ಇದರಿಂದ ನಡೆಯಲು ಸಾಧ್ಯವಾಗದೇ ಸ್ಥಿತಿಗೆ ತಲುಪಿದ್ದ ಯುವಕನನ್ನು ಸಿಬ್ಬಂದಿ ಹೊತ್ತುಕೊಂಡು ರಕ್ಷಣೆ ಮಾಡಿದ್ದಾರೆ.

    ಚಾರಣಿಗರ ಹಾಟ್ ಸ್ಪಾಟ್: ಪಂಚಗಿರಿಗಿಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗುಡ್ಡಗಳು ಇತ್ತೀಚೆಗೆ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣಗಳಾಗಿ ಮಾರ್ಪಾಡಾಗಿವೆ. ಬೆಂಗಳೂರು ನಗರದಿಂದ ಕೂಗಳತೆ ದೂರದ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ, ದಿವ್ಯಗಿರಿ, ಚನ್ನಗಿರಿ ಸೇರಿದಂತೆ ಸ್ಕಂದಗಿರಿಗಳು ಈಗ ಟ್ರೆಕ್ಕಿಂಗ್ ತಾಣಗಳಾಗಿ ಮಾರ್ಪಾಡಾಗಿವೆ. ಸರ್ಕಾರವೂ ಕೂಡ ಸ್ಕಂದಗಿರಿ ಬೆಟ್ಟಕ್ಕೆ ಅಧಿಕೃತವಾಗಿ ಚಾರಣ ಆರಂಭಿಸಿ ಹಣ ಕೂಡ ಗಳಿಸುತ್ತಿದೆ. ಆದರೆ ಸ್ಕಂದಗಿರಿ ಬಿಟ್ಟು ಬೇರೆ ಯಾವ ಬೆಟ್ಟದಲ್ಲೂ ಚಾರಣ ಮಾಡುವಂತಿಲ್ಲ. ಇದರ ನಡುವೆಯೂ ಈ ಮೂವರು ಯುವಕರು ದಿವ್ಯಗಿರಿ ಬೆಟ್ಟಕ್ಕೆ ಸಾಗಿ ಅಪಾಯ ಎದುರಿಸಿದ್ದಾರೆ.

    ಸದ್ಯ ಗಾಯಾಳು ದೀಪಾಂಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಕ್ರಮವಾಗಿ ಚಾರಣ ಕೈಗೊಂಡ ಹಿನ್ನಲೆ ನಂದಿಗಿರಿಧಾಮ ಪೊಲೀಸ್ ಠಾಣೆ ಸೇರಿದ್ದಾರೆ. ಹೀಗಾಗಿ ಚಾರಣ ಎಂದು ಬೆಟ್ಟಕ್ಕೆ ಹೋಗುವ ಮುನ್ನ ಒಮ್ಮೆ ಯೋಚಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಬ್ಬನ್ ಪಾರ್ಕ್ ಬಳಿ ಹೋಗುವಾಗ ಎಚ್ಚರ- ಡೇಂಜರ್ ಸ್ಪಾಟ್ ಗುರುತಿಸಿದೆ ತೋಟಗಾರಿಕಾ ಇಲಾಖೆ

    ಕಬ್ಬನ್ ಪಾರ್ಕ್ ಬಳಿ ಹೋಗುವಾಗ ಎಚ್ಚರ- ಡೇಂಜರ್ ಸ್ಪಾಟ್ ಗುರುತಿಸಿದೆ ತೋಟಗಾರಿಕಾ ಇಲಾಖೆ

    ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಸುತ್ತ ಮುತ್ತಲಿನ ಹಡ್ಸನ್ ರಸ್ತೆಯಲ್ಲಿ ಸಂಚರಿಸುವವರು ಇನ್ಮುಂದೆ ಎಚ್ಚರಿಕೆಯಿಂದ ಸಂಚರಿಸಿ. ಯಾಕಂದ್ರೆ ರಾಜ್ಯ ತೋಟಗಾರಿಕ ಇಲಾಖೆ ಈ ಸ್ಥಳವನ್ನು ಡೇಂಜರ್ ಸ್ಪಾಟ್ ಎಂದು ಗುರುತಿಸಿದೆ.

    ಕಬ್ಬನ್ ಪಾರ್ಕ್‍ನ ಸುತ್ತಲು ಸುಮಾರು 90ಕ್ಕೂ ಹೆಚ್ಚು ವಯಸ್ಸಾದ ಮರಗಳನ್ನು ಗುರುತಿಸಿದ್ದು, ಅವುಗಳ ತೆರವಿಗೆ ಅನುಮತಿಗಾಗಿ ಕಾದು ಕುಳಿತಿದೆ. ಆದರೆ ಅನುಮತಿ ಪತ್ರ ಮಾತ್ರ ಇನ್ನೂ ಲಭಿಸಿಲ್ಲ. ಮರ ಕಡಿಯೋದಕ್ಕೆ ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಅನುಮತಿ ಗಾಗಿ ಬಿಬಿಎಂಪಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ರೂ ಇಲಾಖೆ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಘಟಕಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಅನುಮತಿ ಪತ್ರ ತಡವಾಗಲು ಕಾರಣ ಎನ್ನಲಾಗಿದೆ.

    ವಯಸ್ಸಾದ ಹಾಗೂ ಅಪಾಯಕಾರಿ ಮರಗಳನ್ನು ಗುರುತಿಸಲು ಸಮಿತಿಯನ್ನು ನೇಮಕ ಮಾಡಲಾಗಿದ್ದು, ಈ ಕುರಿತು ವರದಿಯನ್ನು ನೀಡಲಾಗಿದೆ. ಪ್ರತಿ ದಿನ ಸಾವಿರಾರು ಜನ ಪಾರ್ಕ್‍ಗೆ ಭೇಟಿ ನೀಡುತ್ತಾರೆ. ಅಲ್ಲದೇ ಲಕ್ಷಾಂತರ ವಾಹನ ಸವಾರರು ಪಾರ್ಕ್‍ನ ಆರು ಗೇಟ್‍ಗಳ ಸುತ್ತಲು ಸಂಚಾರಿಸುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ ಕಬ್ಬನ್ ಪಾರ್ಕ್ ಅಧಿಕಾರಿಗಳು.