Tag: rising

  • ಅಡುಗೆ ಎಣ್ಣೆ ಹೈಕ್ – ಗೃಹಿಣಿಯರಿಗೆ ಶಾಕ್ ಕೊಟ್ಟ ಸರ್ಕಾರ

    ಅಡುಗೆ ಎಣ್ಣೆ ಹೈಕ್ – ಗೃಹಿಣಿಯರಿಗೆ ಶಾಕ್ ಕೊಟ್ಟ ಸರ್ಕಾರ

    ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಕ್ಕಿ ಮತ್ತು ವಿದ್ಯುತ್ ದರ ಏರಿಸಿ ಸರ್ಕಾರ ಶಾಕ್ ಕೊಟ್ಟಿದ್ದು ಆಯ್ತು. ಇದೀಗ ಅಡುಗೆ ಎಣ್ಣೆಯ ಬೆಲೆ ಹೆಚ್ಚು ಮಾಡಿದ್ದಾರೆ.

    ಪ್ರತಿದಿನ ದರ ಏರಿಕೆ ಭಯದಲ್ಲಿ ಜೀವನ ನಡೆಸುತ್ತಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಅಡುಗೆ ಎಣ್ಣೆ ದರ ಏರಿಕೆ ಮಾಡಿ ಶಾಕ್ ನೀಡಿದೆ. ಎಣ್ಣೆ ಇಲ್ಲದೆ ಒಗ್ಗರಣೆ ಸಹ ಹಾಕೋದಕ್ಕೆ ಆಗೋದಿಲ್ಲ. ಅಂತದ್ರಲ್ಲಿ ಅಡುಗೆ ಮನೆಯಲ್ಲಿ ಅತೀ ಹೆಚ್ಚು ಬಳಕೆಯಾಗುವ ಸನ್ ಫ್ಯೂರ್, ಜೆಮಿನಿ, ಗೋಲ್ಡ್ ವಿನ್ನರ್ ಸೇರಿದಂತೆ ದೀಪಕ್ಕೆ ಬಳಸುವ ಎಣ್ಣೆ ಬೆಲೆ ಸಹ ಒಂದೇ ವಾರದಲ್ಲಿ 10 ರಿಂದ 12 ರೂಪಾಯಿ ಹೆಚ್ಚಳವಾಗಿದೆ. ಅಡುಗೆ ತೈಲದ ಮೇಲೆ ಆಮದು ಸುಂಕ ಹೆಚ್ಚಾಗಿರುವುದೆ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

    ಯಾವ ಯಾವ ಎಣ್ಣೆ, ದರ ಎಷ್ಟು?

    ಅಡುಗೆ ಎಣ್ಣೆ                               ಹಳೆ ದರ                          ಹೊಸ ದರ
    ಸನ್‍ಫ್ಯೂರ್                                 88ರೂ.                           98ರೂ.
    ಗೋಲ್ಡ್ ವಿನರ್                            89ರೂ.                           100ರೂ.
    ಜೆಮಿನಿ                                       88ರೂ.                           100ರೂ.
    ಹಿಮಾಮಿ ಹೆಲ್ತಿ ಅಂಡ್ ಟೇಸ್ಟೀ         85ರೂ.                           95ರೂ.
    ಕಡಲೆಕಾಯಿ ಎಣ್ಣೆ                         84ರೂ.                           95ರೂ.
    ದೀಪದ ಎಣ್ಣೆ                               72ರೂ.                            85ರೂ.

    ಅಡಿಗೆ ಎಣ್ಣೆ ರೇಟ್ ಹೈಕ್‍ನಿಂದ ಎಣ್ಣೆ ಕೊಳ್ಳುವುದಕ್ಕೆ ಬಂದ ಗೃಹಿಣಿಯರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪೆಟ್ರೋಲ್ ರೇಟ್ ಹೈಕ್ ಆದರೆ ಪ್ರೊಟೆಸ್ಟ್ ಮಾಡುತ್ತಾರೆ ನಮ್ಮ ಕಷ್ಟ ಕೇಳುವವರು ಯಾರು ಅಂತ ಗೃಹಿಣಿಯರು ಪ್ರಶ್ನೆ ಮಾಡುತ್ತಾ ಇದ್ದಾರೆ.

    ರೀಟೈಲ್ ನಲ್ಲಿ ಈ ದರವಿದ್ದು, ಮಾಲ್ ಗಳಲ್ಲಿ ಅಡುಗೆ ತೈಲದ ರೇಟ್ 100ರ ಗಡಿ ದಾಟಿದೆ.

  • ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ, ಪೆಟ್ರೋಲ್-ಡೀಸೆಲ್ ಬೆಲೆ ಭಾರೀ ಏರಿಕೆ

    ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ, ಪೆಟ್ರೋಲ್-ಡೀಸೆಲ್ ಬೆಲೆ ಭಾರೀ ಏರಿಕೆ

    ನವದೆಹಲಿ: 2014 ರಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಆಧಿಕಾರ ವಹಿಸಿಕೊಂಡ ಬಳಿಕ ಇಂಧನ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

    ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 3 ರೂ. ಏರಿಕೆಯಾಗಿದೆ. ಡೀಸೆಲ್  ದರದಲ್ಲಿ ಎರಡು ತಿಂಗಳ ಅಂತರಲ್ಲಿ 5.85 ಪೈಸೆ ಹೆಚ್ಚಳವಾಗಿದೆ. ಡಿಸೆಂಬರ್ 31 ರಂದು ಪೆಟ್ರೋಲ್ ದರ 71.06 ರೂ ಇದ್ದರೆ, ಪ್ರಸ್ತುತ ಒಂದು ತಿಂಗಳ ಬಳಿಕ 74.07 ರೂ. ಗೆ ಹೆಚ್ಚಳವಾಗಿದೆ.

    ಡೀಸೆಲ್  ದರ ಡಿಸೆಂಬರ್ ಪ್ರಾರಂಭದಲ್ಲಿ ಲೀಟರ್ ಗೆ 59.23 ಇದ್ದು, ಪ್ರಸ್ತುತ 65.08 ರೂ. ಗೆ ಏರಿಕೆ ಆಗುವುದರೊಂದಿಗೆ ಬರೋಬ್ಬರಿ 5 ರೂ. ಹೆಚ್ಚಳವಾಗಿದೆ. ನಿರಂತರವಾಗಿ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಿರುವ ಪರಿಗೆ ಪೆಟ್ರೋಲ್ ಬಂಕ್ ಮಾಲೀಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೆರುತ್ತಿದ್ದು, ಫೆಬ್ರವರಿ ತಿಂಗಳ ಆರಂಭದಲ್ಲೇ ಭಾರೀ ಪ್ರಮಾಣದಲ್ಲಿ ಇಂಧನ ಬೆಲೆ ಏರಿಕೆ ಯಾಗಿದೆ. 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಕುರಿತು ನಿರೀಕ್ಷಿಸಲಾಗುತ್ತಿದೆ.

    ಈಗಾಗಲೇ ಬಳಕೆದಾರರ ಮೇಲಿನ ಹೊರೆ ತಗ್ಗಿಸುವುದಕ್ಕಾಗಿ ಕೇಂದ್ರ ಇಂಧನ ಸಚಿವಾಲಯ ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    2017ರ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿತ್ತು. ಬೆಲೆ ಏರಿಕೆಯಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    2014ರಿಂದ 2016ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ.ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!