Tag: Rishikesh

  • ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

    ಕೆಲವರು ಧರ್ಮವನ್ನೂ ಮೀರಿ ದೇವರ ಆರಾಧನೆಯಲ್ಲಿ ನಂಬಿಕೆ ಇಡ್ತಾರೆ. ಇದೀಗ ಬಾಲಿವುಡ್ ನಿರ್ದೇಶಕಿ, ನೃತ್ಯ ನಿರ್ದೇಶಕಿ, ನಟಿ ನಿರ್ಮಾಪಕಿ ಫರ‍್ಹಾ ಖಾನ್ (Farah Khan) ರಿಷಿಕೇಶಕ್ಕೆ ತೆರಳಿ ಗಂಗಾರತಿಯಲ್ಲಿ (Ganga aarti)  ಪಾಲ್ಗೊಂಡಿದ್ದಾರೆ. ಕೈಮುಗಿದು ಓಂ ನಮಃ ಶಿವಾಯ ಎಂದಿದ್ದಾರೆ. ಜೈ ಭೋಲೇನಾಥ್ ಎಂದಿರುವ ದೃಶ್ಯಗಳನ್ನ ಅವರೇ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಂ ಧರ್ಮದ ಫರ‍್ಹಾ ಖಾನ್ ಮೊದಲ ಬಾರಿ ರಿಷಿಕೇಶಕ್ಕೆ (Rishikesh) ತೆರಳಿದ್ದು, ಇದನ್ನು ಅದ್ಭುತ ಅನುಭವ ಎಂದು ವರ್ಣಿಸಿದ್ದಾರೆ.

    ತಮ್ಮ ಮನೆಯ ಅಡುಗೆಭಟ್ಟ ದಿಲೀಪ್ ಜೊತೆ ರಿಷಿಕೇಶಕ್ಕೆ ತೆರಳಿರುವ ಫರ‍್ಹಾ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡ ಬಗೆ ವಿಶೇಷವಾಗಿದೆ. ಹಣೆಯಲ್ಲಿ ಸಿಂಧೂರವಿಟ್ಟು ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ. ದೀಪ ಹಿಡಿದು ಗಂಗಾರತಿ ಮಾಡಿದ್ದಾರೆ. ಹೀಗೆ ಧಾರ್ಮಿಕ ಆಚರಣೆ ಮಾಡ್ತಿರುವ ಫರ‍್ಹಾ ಫೋಟೋ ವೀಡಿಯೋಗಳು ಇನ್ಸ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

    ಅನೇಕರು ಫರ‍್ಹಾ ಖಾನ್ ನಡೆದುಕೊಂಡ ರೀತಿಗೆ ಭೇಷ್ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಅಸ್ತಗ್‌ಫಿರುಲ್ಲ (ದೇವರ ಆಶೀರ್ವಾದ ನಿಮ್ಮ ಮೇಲಿರಲಿ) ಎಂದು ಕಾಮೆಂಟ್ ಬರೆದಿದ್ದಾರೆ. ಹೀಗೆ ಫರ‍್ಹಾ ಖಾನ್ ಧಾರ್ಮಿಕ ಆಚರಣೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  • ಆರೋಪಿ ಬಂಧನಕ್ಕೆ ಏಮ್ಸ್‌ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!

    ಆರೋಪಿ ಬಂಧನಕ್ಕೆ ಏಮ್ಸ್‌ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!

    ಡೆಹ್ರಾಡೂನ್‌: ಮಹಿಳಾ ವೈದ್ಯೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸ್ (Police) ಅಧಿಕಾರಿಗಳು ಬೊಲೆರೋ ಜೀಪ್‌ ವಾಹನವನ್ನು ಏಮ್ಸ್ (AIIMS) ಆಸ್ಪತ್ರೆಗೆ ನುಗ್ಗಿಸಿದ ಘಟನೆ ಋಷಿಕೇಶದಲ್ಲಿ (Rishikesh) ನಡೆದಿದೆ.

    ಸಿನಿಮಾದಂತೆ ಏಮ್ಸ್‌ ತುರ್ತು ಚಿಕಿತ್ಸಾ ವಾರ್ಡ್‌ ಮೂಲಕ ವಾಹನ ಸಂಚರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ವೈರಲ್‌ (Video Viral) ಆಗಿದೆ. ಏಮ್ಸ್‌ನಲ್ಲಿರುವ ನರ್ಸಿಂಗ್ ಅಧಿಕಾರಿ ಸತೀಶ್‌ ಕುಮಾರ್‌ ಮಹಿಳಾ ವೈದ್ಯೆಯೊಬ್ಬರನ್ನು ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಲೈಂಗಿಕವಾಗಿ ನಿಂದಿಸಿದ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

     

     

    ಈತನನ್ನು ಸೇವೆಯಿಂದಲೇ ವಜಾಗೊಳಿಸುವಂತೆ ಏಮ್ಸ್‌ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದರು.

    ಆತನನ್ನು ಬಂಧಿಸಿ ಕರೆ ತರುತ್ತಿದ್ದಾಗ ಪ್ರತಿಭಟನಕಾರರು ಪೊಲೀಸ್‌ ವಾಹನವನ್ನು ಸುತ್ತುವರಿದು ಆತನನನ್ನು ಕೂಡಲೇ ಸೇವೆಯಿಂದಲೇ ತೆಗೆದು ಹಾಕುವಂತೆ ಆಗ್ರಹಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

     

    ವಾಹನ ನುಗ್ಗಿಸಿದ್ದು ಯಾಕೆ?
    ನಾಲ್ಕನೇ ಮಹಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಅರೆಸ್ಟ್‌ ಮಾಡಲು ಆಸ್ಪತ್ರೆಗೆ ಬಂದಿದ್ದರು.  ಆಸ್ಪತ್ರೆಯ ಹೊರಗಡೆ ಭಾರೀ ಸಂಖ್ಯೆಯಲ್ಲಿ ಏಮ್ಸ್‌ ವೈದ್ಯರು, ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದರು. ಬಂಧಿಸಿ ಕರೆ ತರುವಾಗ ಆತನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಆಸ್ಪತ್ರೆಯ ಒಳಗಡೆ ವಾಹನ ನುಗ್ಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

     

  • ‘ಸಮುದ್ರಂ’ ಚಿತ್ರದ ವಿವಾದ : ನಟಿ ಅನಿತಾ ಭಟ್ ಪ್ರತಿಕ್ರಿಯೆ ಏನು?

    ‘ಸಮುದ್ರಂ’ ಚಿತ್ರದ ವಿವಾದ : ನಟಿ ಅನಿತಾ ಭಟ್ ಪ್ರತಿಕ್ರಿಯೆ ಏನು?

    ಮ್ಮ ನಿರ್ಮಾಣದ ‘ಸಮುದ್ರಂ’ (Samudram) ಸಿನಿಮಾದ ಹಾರ್ಡ್ ಡಿಸ್ಕ್ ನೀಡಿಲ್ಲವೆಂದು ಮತ್ತು ಹಾಡ್ಸ್ ಡಿಸ್ಕ್ ಕೊಡುವಂತೆ ಕೇಳಿದರೆ ಚಿತ್ರದ ಸಿನಿಮಾಟೋಗ್ರಾಫರ್ ರಿಶಿಕೇಷ್ (Rishikesh) ಎನ್ನುವವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಸಿನಿಮಾದ ನಾಯಕಿ ಮತ್ತು ಚಿತ್ರಕ್ಕೆ ಸಹಯೋಗ ನೀಡಿರುವ ಅನಿತಾ ಭಟ್ (Anita Bhatt) ಪ್ರತಿಕ್ರಿಯೆ ನೀಡಿದ್ದಾರೆ.

    ‘ಈ ಸಿನಿಮಾ ಶುರು ಮಾಡಿದ್ದು ನಾವೇ. ನಾನೇ ಈ ಸಿನಿಮಾವನ್ನು ಮೊದಲು ನಿರ್ಮಾಣ ಮಾಡಿದ್ದು. ಆನಂತರ ಹಣಕಾಸಿನ ತೊಂದರೆ ಆದ ಕಾರಣಕ್ಕಾಗಿ ನಿರ್ದೇಶಕ ರಾಘವ ಮಹರ್ಷಿ ಅವರು ರಾಜಲಕ್ಷ್ಮಿ ಅವರನ್ನು ಕರೆತಂದರು. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ರಾಜಲಕ್ಷ್ಮಿ (Rajalakshmi) ನಿರ್ಮಾಪಕರು ತಾವೊಬ್ಬರೇ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದರು. ಅದಕ್ಕೂ ಒಪ್ಪಿ, ನಾವು ಈವರೆಗೂ ಮಾಡಿರುವ ಖರ್ಚನ್ನು ಕೊಡುವಂತೆ ಕೇಳಿದಾಗ ಒಪ್ಪಿಕೊಂಡರು. ಈವರೆಗೂ ಅವರು ಹಣ ಕೊಟ್ಟಿಲ್ಲ’ ಎನ್ನುತ್ತಾರೆ ಅನಿತಾ ಭಟ್.

    ಮುಂದುವರೆದು ಮಾತನಾಡಿದ ಅನಿತಾ, ‘ಟೆಕ್ನಿಷನ್ ಗೆ ಕೊಡಬೇಕಾದ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಸಿನಿಮಾಟೋಗ್ರಾಫರ್ ರಿಶಿಕೇಷ ಅವರಿಗೂ ದುಡ್ಡು ಕೊಡಬೇಕು. ಹಾಗಾಗಿ ಇಬ್ಬರ ಮಧ್ಯ ಮನಸ್ತಾಪವಾಗಿದೆ. ಈ ದೂರು ಕೊಡುವುದು ಇವತ್ತಿನದ್ದೇನೂ ಅಲ್ಲ. ಈ ಹಿಂದೆ ಎರಡ್ಮೂರು ಬಾರಿ ಹೀಗೆ ಮಾಡಿ ತೊಂದರೆ ಕೊಟ್ಟಿದ್ದಾರೆ. ಇದರಲ್ಲಿ ರಿಶಿಕೇಷ್ ಅವರದ್ದು ಯಾವುದೇ ತಪ್ಪಿಲ್ಲ’ ಅಂತಾರೆ ಅನಿತಾ ಭಟ್.

    ‘ರಾಜಲಕ್ಷ್ಮಿ ಅವರ ವಿರುದ್ಧ ನಾವೂ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದರು. ಆದರೆ, ಈಗ ಅವರ ವರ್ತನೆಯೇ ಬೇರೆಯಾಗಿದೆ. ಆ ಸಿನಿಮಾಗಾಗಿ ಈಗಲೂ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ಕೊಡಬೇಕಾದ ಹಣವನ್ನು ಕೊಡಬೇಕು’ ಎನ್ನುವುದು ಅನಿತಾ ಭಟ್ ಮಾತು.

    ‘ಸಿನಿಮಾಗಳಿಗೆ ಸುಪ್ರೀಂ ಅಂದರೆ ಅದು ನಿರ್ದೇಶಕರು. ಸಿನಿಮಾಟೋಗ್ರಾಫರ್ ಹೇಗೆ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಲು ಸಾಧ್ಯ? ಹಣಕಾಸಿನ ವಿಷಯದಲ್ಲಿ ಮನಸ್ತಾಪ ಆಗಿರುವುದು ನಿಜ. ಅದನ್ನು ಹೇಳದೇ ಸುಖಾಸುಮ್ಮನೆ ಯಾರಿಗೂ ತೊಂದರೆ ಕೊಡಬಾರದು. ಆ ಸಿನಿಮಾದಲ್ಲಿ ನಾನ ನಟಿಸಿದ್ದೇನೆ. ನಿರ್ಮಾಪಕಿಯೂ ಆಗಿದ್ದೇನೆ. ಆ ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಸಹಾಯವನ್ನು ಈಗಲೂ ನಾನು ಮಾಡಲು ಸಿದ್ದಳಿದ್ದೇನೆ. ಆದರೆ, ತಂಡವನ್ನು ಒಡೆಯುವುದು ಸರಿಯಾದದ್ದು ಅಲ್ಲ’ ಅಂತಾರೆ ಅನಿತಾ ಭಟ್.ಇದನ್ನೂ ಓದಿ:ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ

    ಏನಿದು ವಿವಾದ?

    ಅನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ‘ಸಮುದ್ರಂ’ ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿನಿಮಾಟೋಗ್ರಫರ್ ರಿಶಿಕೇಷ್ ಸಮುದ್ರಂ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ನಿರ್ಮಾಪಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚಿತ್ರತಂಡ ದೂರು ನೀಡಿದೆ.

    ರಾಜಲಕ್ಷ್ಮಿ ಸಿನಿ ಕ್ರಿಯೇಷನ್ ನಿರ್ಮಾಣ  ಮತ್ತು ಅನಿತಾ ಭಟ್ ಕ್ರಿಯೇಷನ್ ಹಾಗೂ ಡಾಟ್ ಟಾಕೀಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಡಿಐ ಜವಾಬ್ದಾರಿಯನ್ನು ರಿಶಿಕೇಷ್ ವಹಿಸಿಕೊಂಡಿದ್ದರಂತೆ. ಇದಕ್ಕೆ ಹಂತಹಂತವಾಗಿ 19 ಲಕ್ಷ ಹಣವನ್ನೂ ನಿರ್ಮಾಪಕರಿಂದ ಪಡೆದುಕೊಂಡಿದ್ದರಂತೆ ರಿಶಿಕೇಷ್. ಇಲ್ಲಿಯವರೆಗೂ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಪರಾರಿ’ ಆಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಿರ್ಮಾಪಕರು ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಮುದ್ರಂ’ ಚಿತ್ರದ ಛಾಯಾಗ್ರಾಹಕನ ಮೇಲೆ ದೂರು

    ‘ಸಮುದ್ರಂ’ ಚಿತ್ರದ ಛಾಯಾಗ್ರಾಹಕನ ಮೇಲೆ ದೂರು

    ನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ‘ಸಮುದ್ರಂ’ (Samudram) ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ (Rishikesh) ವಿರುದ್ಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿನಿಮಾಟೋಗ್ರಫರ್ ರಿಶಿಕೇಷ್ ಸಮುದ್ರಂ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ನಿರ್ಮಾಪಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚಿತ್ರತಂಡ ದೂರು ನೀಡಿದೆ.

    ರಾಜಲಕ್ಷ್ಮಿ ಸಿನಿ ಕ್ರಿಯೇಷನ್ ನಿರ್ಮಾಣ  ಮತ್ತು ಅನಿತಾ ಭಟ್ (Anita Bhatt) ಕ್ರಿಯೇಷನ್ ಹಾಗೂ ಡಾಟ್ ಟಾಕೀಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಡಿಐ ಜವಾಬ್ದಾರಿಯನ್ನು ರಿಶಿಕೇಷ್ ವಹಿಸಿಕೊಂಡಿದ್ದರಂತೆ. ಇದಕ್ಕೆ ಹಂತಹಂತವಾಗಿ 19 ಲಕ್ಷ ಹಣವನ್ನೂ ನಿರ್ಮಾಪಕರಿಂದ ಪಡೆದುಕೊಂಡಿದ್ದರಂತೆ ರಿಶಿಕೇಷ್. ಇಲ್ಲಿಯವರೆಗೂ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಪರಾರಿ’ ಆಗಿದ್ದಾರೆ ಎಂದು ದೂರಿನಲ್ಲಿ (Complainant) ಉಲ್ಲೇಖಿಸಲಾಗಿದೆ.

     

    ನಿರ್ಮಾಪಕರು ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರಾಖಂಡದಲ್ಲಿ ಭಾರೀ ಮಳೆ – ಮನೆಯೊಳಗೆ ಸಿಲುಕ್ಕಿದ್ದ 50 ಜನರ ರಕ್ಷಣೆ

    ಉತ್ತರಾಖಂಡದಲ್ಲಿ ಭಾರೀ ಮಳೆ – ಮನೆಯೊಳಗೆ ಸಿಲುಕ್ಕಿದ್ದ 50 ಜನರ ರಕ್ಷಣೆ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಭಾರೀ ಮಳೆಯಾಗುತ್ತಿದ್ದು, ಮಳೆಯ (Rain) ಪರಿಣಾಮ ಋಷಿಕೇಶದ (Rishikesh) ಧಲ್ವಾಲ (Dhalwala) ಮತ್ತು ಖಾರಾ (Khara) ಪ್ರದೇಶಗಳು ಜಲಾವೃತವಾಗಿದೆ.

    ಬುಧವಾರ ರಾತ್ರಿ ಸುರಿದ ತೀವ್ರ ಮಳೆಯ ಪರಿಣಾಮ ಅನೇಕ ಮನೆಗಳು ಮುಳುಗಡೆಯಾಗಿದ್ದು, ಧಲ್ವಾಲ ಮತ್ತು ಖಾರದಲ್ಲಿ ನೀರಿನಲ್ಲಿ ಮುಳುಗಿರುವ ಮನೆಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (SDRF) ಕರೆಸಲಾಗಿದೆ. ಇದನ್ನೂ ಓದಿ: ನಾವು ಕಾಶ್ಮೀರಿಗಳೊಂದಿಗೆ ಮಾತನಾಡುತ್ತೇವೆ ಹೊರತು ಪಾಕಿಸ್ತಾನಿಗಳೊಂದಿಗಲ್ಲ: ಅಮಿತ್ ಶಾ

    ಎಸ್‌ಡಿಆರ್‌ಎಫ್ ತಂಡ ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಮುಳುಗಿದ್ದ ಮನೆಗಳಿಂದ ಸುಮಾರು 50 ಜನರನ್ನು ರಕ್ಷಿಸಿ ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಋಷಿಕೇಶ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಜನರ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗೆ ಸಿಲುಕಿದವರ ರಕ್ಷಣೆಗೆ ಎಸ್‌ಡಿಆರ್‌ಎಫ್ ತಂಡದ ಅಗತ್ಯವಿದೆ ಎಂದು ಎಸ್‌ಡಿಆರ್‌ಎಫ್‌ಗೆ ಮನವಿ ಮಾಡಿದ ಹಿನ್ನೆಲೆ ಎಸ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ: ಮೋದಿ ವಿರುದ್ಧ ರಾಹುಲ್‌ ಕಿಡಿ

    ವಿಪತ್ತು ನಿರ್ವಹಣಾ ಕೇಂದ್ರವು ರಾಜ್ಯದ ಮಳೆ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಬುಧವಾರ ತಿಳಿಸಿದ್ದಾರೆ. ಅಲ್ಲದೇ ಚಾರ್‌ಧಾಮ್ ಯಾತ್ರಾರ್ಥಿಗಳು ಹವಾಮಾನದ ಬಗ್ಗೆ ಮಾಹಿತಿಯನ್ನು ಪಡೆದ ಬಳಿಕ ಪ್ರಯಾಣವನ್ನು ಮುಂದುವರಿಸಲು ಸಲಹೆ ನೀಡಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಅತ್ಯಾಚಾರ: ಇದು ಮಾನವೀಯತೆ ಮೀರಿದ ಕ್ರೌರ್ಯ, ಕಾಮುಕರಿಗೆ ಕ್ಷಮೆಯಿಲ್ಲವೆಂದ ಸಚಿನ್‌ ಪೈಲಟ್‌

    ಭಾರೀ ಮಳೆಯ ಪರಿಣಾಮ ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ 9 ಮಂದಿ ಸಾವನ್ನಪಿದ್ದು, ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ

    ಕುಡಿದ ಮತ್ತಿನಲ್ಲಿ ಗೂಳಿ ಸವಾರಿ ಮಾಡಿದ ಯುವಕ

    ಡೆಹ್ರಾಡೋನ್: ಕುಡಕನೊಬ್ಬ ಬೀದಿಯಲ್ಲಿ ಗೂಳಿಯ (Bull) ಮೇಲೆ ಸವಾರಿ ಮಾಡಿದ ಘಟನೆ ಉತ್ತರಾಖಂಡದ (Uttarakhand) ರಿಷಿಕೇಶದ (Rishikesh) ತಪೋವನ ಪ್ರದೇಶದಲ್ಲಿ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಯುವಕ (Drunk Man) ವೈರಲ್ ವೀಡಿಯೋವನ್ನು ಮಾಡಲು ಈ ರೀತಿ ಮಾಡಿದ್ದ. ಯುವಕನು ಗೂಳಿಯ ಮೇಲೆ ಕುಳಿತು ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಉತ್ತರಾಖಂಡದ ಪೊಲೀಸರು ತನಿಖೆ ನಡೆಸಿದ್ದಾರೆ.

    ಈ ವೇಳೆ ಯುವಕನನ್ನು ಉತ್ತರಾಖಂಡದ ರಿಷಿಕೇಶದ ತಪೋವನ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಆತನ ವಿರುದ್ಧ ಮಧ್ಯರಾತ್ರಿಯ ಸಮಯದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವುದು ಹಾಗೂ ಪ್ರಾಣಿಗಳನ್ನು ಅನುಚಿತವಾಗಿ ನಡೆಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ವಿಚಾರಣೆಗೆ ಒಳಪಡಿಸಿ ಭವಿಷ್ಯದಲ್ಲಿ ಪ್ರಾಣಿಗಳೊಂದಿಗೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯ ಕುರಿತು ಉತ್ತರಾಖಂಡ ಪೊಲೀಸರು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಋಷಿಕೇಶದ ತಪೋವನದಲ್ಲಿ ಕುಡುಕನೊಬ್ಬ ಗೂಳಿಯ ಮೇಲೆ ಸವಾರಿ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ವೀಡಿಯೋಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಭವಿಷ್ಯದಲ್ಲಿ ಈ ರೀತಿ ಪ್ರಾಣಿಗಳೊಂದಿಗೆ ಅನುಚಿತವಾಗಿ ವರ್ತಿಸದಂತೆ ಯುವಕನಿಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ವೀಡಿಯೋ ಕುರಿತು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದರೇ, ಇನ್ನೂ ಕೆಲವರು ಈ ವೀಡಿಯೋವನ್ನು ಜೆಲ್ಲಿಕಟ್ಟಿಗೆ ಹೋಲಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

  • ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಯಾದಗಿರಿ: ಪೊಲೀಸರೇನು ಹುಚ್ಚರಾ ಎಂದು ಪ್ರತಿಭಟನಾ ನಿರತರರಿಗೆ ಸಿನಿಮಾ ಸ್ಟೈಲ್‍ನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಗರಂ ಆಗಿದ್ದಾರೆ.

    ಇಂದು ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರ ಸಹಿತ ನಾಮಫಲಕ ಹಾಕುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂರ್ಘಷ ಏರ್ಪಟಿತ್ತು. ಹೀಗಾಗಿ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಎಸ್.ಪಿ ಋಷಿಕೇಶ್ ಪೊಲೀಸರು ನಿಮಗೆ ಹಚ್ಚಾರ ತರ ಕಾಣುತ್ತೇವಾ? ನಾವು ಏನ್ ಮಾಡಿದ್ದೀವಿ ನಿಮಗೆ ಎಂದು ಪ್ರತಿಭಟನಾಕಾರರ ವಿರುದ್ಧ ಗರಂ ಆದರು.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರದಲ್ಲಿ ಪೊಲೀಸರಿಗೆ ಕುರುಬ ಸಮುದಾಯದ ಕುಮ್ಮಕ್ಕಿದೆ. ಅದ್ದರಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.