Tag: Rishi Kapoor

  • ರಿಷಿ ಕಪೂರ್ ಕೊನೆಯುಸಿರೆಳೆದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಆಲಿಯಾ

    ರಿಷಿ ಕಪೂರ್ ಕೊನೆಯುಸಿರೆಳೆದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಆಲಿಯಾ

    ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia Bhatt) ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಚೊಚ್ಚಲ ಮಗುವಿನ ಬರುವಿಕೆಗಾಗಿ ಕಾಯ್ತಿದ್ದಾರೆ. ಈಗ ಜ್ಯೂನಿಯರ್ ಕಪೂರ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ.

    ಬಿಟೌನ್ ಅಂಗಳದ ಚೆಂದದ ಜೋಡಿ ಆಲಿಯಾ ಮತ್ತು ರಣ್‌ಬೀರ್ (Ranbir Kapoor) ಕಳೆದ ಏಪ್ರಿಲ್‌ನಲ್ಲಿ ಹಸೆಮಣೆ ಏರಿದ್ದರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹೊಸ ಬಾಳಿಗೆ ಕಾಲಿಟ್ಟಿದ್ದರು. ಇದೀಗ ತುಂಬು ಗರ್ಭಿಣಿಯಾಗಿರುವ ಆಲಿಯಾ(Alia Bhatt) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ನಾನು ಪ್ರೀತಿಸಿದ ಮೊದಲ ಹುಡುಗಿ ಸಮಂತಾ: ಟ್ವೀಟ್ ಮಾಡಿದ ವಿಜಯ್ ದೇವರಕೊಂಡ

    ಆಲಿಯಾ ತಾವು ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ ನಂತರವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈಗ ಸಿನಿಮಾಗೆ ಬ್ರೇಕ್‌ ಕೊಟ್ಟು, ವಿಶ್ರಾಂತಿ ಪಡೆಯುತ್ತಿದ್ದಾರೆ. ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಂತರ ಒಂದು ವರ್ಷದ ಹೆರಿಗೆ ವಿರಾಮವನ್ನು ಆಲಿಯಾ ತೆಗೆದುಕೊಳ್ಳುತ್ತಾರೆ.

    ಮುಂಬೈನ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆರಿಗೆ ನಡೆಯಲಿದೆ. ಹಿರಿಯ ನಟ ರಿಷಿ ಕಪೂರ್ (Rishi Kapoor) ವಿಧಿವಶರಾದ ಆಸ್ಪತ್ರೆಯಲ್ಲಿ ಆಲಿಯಾ ಹೆರಿಗೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆ ಸಿಬ್ಬಂದಿ ಜೊತೆಗಿನ ರಿಷಿ ಕಪೂರ್ ಕೊನೆಯ ವಿಡಿಯೋ

    ಆಸ್ಪತ್ರೆ ಸಿಬ್ಬಂದಿ ಜೊತೆಗಿನ ರಿಷಿ ಕಪೂರ್ ಕೊನೆಯ ವಿಡಿಯೋ

    ಮುಂಬೈ: ಬಾಲಿವುಡ್ ರೊಮ್ಯಾಂಟಿಕ್ ಹೀರೋ, ಬಾಬಿ ರಿಷಿಕಪೂರ್ ನಿಧನದ ಬಳಿಕ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಸ್ಪತ್ರೆ ಸಿಬ್ಬಂದಿ ರಿಷಿ ಕಪೂರ್ ಅವರಿಗಾಗು ಹಾಡು ಹಾಡಿದ್ದಾರೆ. ಹಾಡು ಕೇಳಿದ ಬಳಿಕ ಮಾತನಾಡಿರುವ ರಿಷಿ ಕಪೂರ್, ನನ್ನ ಆಶೀರ್ವಾದ ನಿಮ್ಮ ಜೊತೆಯಲ್ಲಿರುತ್ತದೆ. ಶ್ರಮವಿಲ್ಲದೇ ಯಶಸ್ಸು ಸಿಗಲ್ಲ. ಆ ಯಶಸ್ಸಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಿ. ಹೆಸರು, ಗೌರವ ಎಲ್ಲವೂ ಶ್ರಮದಿಂದಲೇ ಬರುತ್ತೆ. ಅದರ ಜೊತೆಗೆ ಅದೃಷ್ಟವೂ ನಿನ್ನ ಜೊತೆಗಿರಲಿ ಎಂದು ರಿಷಿ ಕಪೂರ್ ಹರಿಸಿದ್ದಾರೆ.

    ಇಂದು ಮಧ್ಯಾಹ್ನ ಬಾಬಿ ರಿಷಿಕಪೂರ್ ಅವರ ಅಂತಿಮ ವಿಧಿ ವಿಧಾನಗಳನ್ನು ಚಂದನವಾಡಿ ಸ್ಮಶಾನದಲ್ಲಿ ನೆರೆವೇರಿಸಲಾಯ್ತು. ಪತ್ನಿ, ಪುತ್ರ ಸೇರಿದಂತೆ ಕೇವಲ 24 ಜನರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಪುತ್ರಿ ರಿದ್ಧಿಮಾ ಕಪೂರ್ ಸಾಹನಿ ದೆಹಲಿಯಲ್ಲಿರೋದರಿಂದ ತಂದೆಯ ಅಂತಿಮ ದರ್ಶನ ಸಹ ಪಡೆಯಲಾಗಲಿಲ್ಲ.

    https://www.instagram.com/p/B_mge62nOt7/?utm_source=ig_embed

    ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಿದ್ಧಿಮಾ ಚಾರ್ಟರ್ ಫ್ಲೈಟ್ ಮೂಲಕ ತೆರಳಲು ಅನುಮತಿ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಲಾಕ್‍ಡೌನ್ ಹಿನ್ನೆಲೆ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಆದ್ರೆ ದೆಹಲಿ ಪೊಲೀಸರು ರಸ್ತೆ ಮಾರ್ಗವಾಗಿ ತೆರಳಲು ಅನುಮತಿ ನೀಡಿದ್ದರು. ರಸ್ತೆ ಮೂಲಕ 1400 ಕಿ.ಮೀ. ಪ್ರಯಾಣ ಮಾಡಬೇಕು. ಹಾಗಾಗಿ ಕುಟುಂಬಸ್ಥರು ಇಂದು ಮಧ್ಯಾಹ್ನವೇ ಪುತ್ರಿಯ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

    ರಿಷಿ ಕಪೂರ್ ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು ಸೇರಿದಂತೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಕರೀನಾ ಕಪೂರ್, ಅನಿಲ್ ಅಂಬಾನಿ, ಆಲಿಯಾ ಭಟ್, ರೀಮಾ ಜೈನ್, ಮನೋಜ್ ಜೈನ್, ಆದರ್ ಜೈನ್, ಆನೀಶಾ ಜೈನ್, ವಿಮಲ್ ಪಾರೀಖ್, ಡಾ.ಟಂಡನ್ ಮತ್ತು ರಾಹುಲ್ ರವೈಲ್ ಸೇರಿದಂತೆ ಆಪ್ತರು ಭಾಗಿಯಾಗಿದ್ದರು.

  • ‘ರಿಷಿ ಕಪೂರ್ ನನ್ನ ಬಾಲ್ಯದ ಹೀರೋ’- ನಟನ ನಿಧನಕ್ಕೆ ಕಂಬನಿ ಮಿಡಿದ ಕುಂಬ್ಳೆ

    ‘ರಿಷಿ ಕಪೂರ್ ನನ್ನ ಬಾಲ್ಯದ ಹೀರೋ’- ನಟನ ನಿಧನಕ್ಕೆ ಕಂಬನಿ ಮಿಡಿದ ಕುಂಬ್ಳೆ

    ಮುಂಬೈ: ಭಾರತೀಯ ಚಲನಚಿತ್ರವು ಶ್ರೇಷ್ಠ ಬಾಲಿವುಡ್ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ಒಂದು ದಿನದ ನಂತರದಲ್ಲೇ ಹಿರಿಯ ನಟ ರಿಷಿ ಕಪೂರ್ ಅವರು 67ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಬಾಲಿವುಡ್‍ಗೆ ಮತ್ತೊಂದು ಆಘಾತದ ಸಂಗತಿಯಾಗಿದೆ.

    ರಿಷಿ ಕಪೂರ್ ಅವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

    ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ರಿಷಿ ಕಪೂರ್ ಅವರು ನನ್ನ ಬಾಲ್ಯದ ಹೀರೋ. ಅವರು ಇಂದು ನಮ್ಮನ್ನು ಅಗಲಿದ್ದಾರೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಸೆಹ್ವಾಗ್ ಟ್ವೀಟ್ ಮಾಡಿ, ರಿಷಿ ಕಪೂರ್ ಜಿ ಅವರ ನಿಧನದ ಸುದದಿ ಆಘಾತವನ್ನು ಉಂಟು ಮಾಡಿದೆ. ಅಗಲಿ ನೋವನ್ನು ಹಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಓಂ ಶಾಂತಿ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿದ್ದ ರಿಷಿ ಕಪೂರ್ ಅನಾರೋಗ್ಯದ ಕಾರಣ ಏಪ್ರಿಲ್ 2ರಿಂದ ಏನನ್ನೂ ಪೋಸ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ತಿಳಿಸಿದ್ದರು ರಿಷಿ ಕಪೂರ್. ದೀಪಿಕಾ ಪಡುಕೋಣೆ ಜೊತೆಗೆ ಹಾಲಿವುದ್ ಸಿನಿಮಾ ‘ದಿ ಇಂಟರ್ನ್’ ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ಆ ನಂತರ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

  • ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

    ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

    ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್(67) ಇಂದು ಮುಂಬೈನ ಎಚ್‍ಎನ್ ರಿಯಲಯನ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಕ್ಯಾನ್ಸರ್ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿದ್ದ ರಿಷಿ ಕಪೂರ್ ಅನಾರೋಗ್ಯದ ಕಾರಣ ಏಪ್ರಿಲ್ 2ರಿಂದ ಏನನ್ನೂ ಪೋಸ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ತಿಳಿಸಿದ್ದರು ರಿಷಿ ಕಪೂರ್. ದೀಪಿಕಾ ಪಡುಕೋಣೆ ಜೊತೆಗೆ ಹಾಲಿವುದ್ ಸಿನಿಮಾ ‘ದಿ ಇಂಟರ್ನ್’ ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದರು.

    ಈ ಬಗ್ಗೆ ಟ್ವೀಟ್ ಮಾಡಿರುವ ನಟ ಅಮಿತಾಬ್ ಬಚ್ಚನ್, ರಿಷಿ ಕಪೂರ್ ಇನ್ನಿಲ್ಲ ಎಂದು ಬರೆದುಕೊಂಡಿದ್ದಾರೆ.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ಆ ನಂತರ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

    ನಿನ್ನೆಯಷ್ಟೇ ಬಾಲಿವುಡ್ ನ ಖ್ಯಾತ  ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದರು. ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್ ಖಾನ್ (53) ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದರು. ಶನಿವಾರವಷ್ಟೇ ಅವರ ತಾಯಿ ತೀರಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆ ಇರ್ಫಾನ್ ಖಾನ್ ಅವರು ತಾಯಿಯ ಅಂತಿಮ ಸಂಸ್ಕಾರಕ್ಕೆ ಹೋಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದರು.

  • ತಪ್ಪು ತಿಳ್ಕೋಬೇಡಿ, ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್

    ತಪ್ಪು ತಿಳ್ಕೋಬೇಡಿ, ಮದ್ಯದಂಗಡಿ ತೆಗೆಯಿರಿ: ರಿಷಿ ಕಪೂರ್

    ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್, ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳನ್ನು ತೆಗೆಯಬೇಕೆಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

    ಕೊರೊನಾ ತಡೆಗೆ ಪ್ರಧಾನಿಗಳು ದೇಶವನ್ನು ಲಾಕ್‍ಡೌನ್ ಮಾಡಿದಾಗಿನಿಂದಲೂ ರಿಷಿ ಕಪೂರ್ ಈ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಟ್ವೀಟ್ ಮಾಡಿರುವ ರಿಷಿ ಕಪೂರ್, ಒಂದು ಕಾರಣಕ್ಕಾಗಿ ಪರವಾನಿಗೆ ಪಡೆದ ಮದ್ಯದಂಗಡಿಗಳನ್ನು ತೆರೆದರೆ ಸೂಕ್ತ ಎಂದಿದ್ದಾರೆ.

    ರಿಷಿ ಕಪೂರ್ ಟ್ವೀಟ್: ಸರ್ಕಾರ ಪ್ರತಿಸಂಜೆ ಲೈಸನ್ಸ್ ಹೊಂದಿರುವ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬೇಕು. ನೀವು ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ಜನರು ಮನೆಯಲ್ಲಿ ಡಿಪ್ರೆಶನ್ ಮತ್ತು ಗೊಂದಲಗಳ ನಡುವೆ ಬಂಧಿಯಾಗಿದ್ದಾರೆ. ಪೊಲೀಸ್, ವೈದ್ಯರು ಮತ್ತು ಜನರನ್ನು ಡಿಪ್ರೆಶನ್ ನಿಂದ ಮುಕ್ತಿಗೊಳಿಸಲು ಮದ್ಯದ ಅವಶ್ಯಕತೆ ಇದೆ. ನೀವು ಎಷ್ಟೇ ಬಂದ್ ಮಾಡಿದ್ರೂ ಬ್ಲಾಕ್ ನಲ್ಲಿ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ ಸರ್ಕಾರವೇ ಪ್ರತಿದಿನ ಸಂಜೆ ಮದ್ಯದಂಗಗಡಿಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬೇಕು.

    ಮದ್ಯದಂಗಡಿಗಳ ತೆರೆಯುವದಿಂದ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಚೇತರಿಕೆ ಕಾಣುವ ಸಾಧ್ಯತೆಗಳು ಹೆಚ್ಚಿವೆ. ಜನರು ಫ್ರೆಸ್ಟ್ರೆಶನ್ ನಿಂದ ಡಿಪ್ರೆಶನ್ ಗೆ ಒಳಗಾಗುವುದನ್ನು ತಡೆಯಬೇಕಿದೆ. ಬಂದ್ ನಡುವೆ ಜನ ಕಷ್ಟಪಟ್ಟು ಮದ್ಯ ಖರೀದಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ತನ್ನ ಮಳಿಗೆಗಳಲ್ಲಿ ಮದ್ಯದ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಹೇಳಿದ್ದಾರೆ.

  • ರಿಷಿ ಕಪೂರ್ ಅವರನ್ನ ರೂಡ್ ಎಂದ ಮಹಿಳಾ ಅಭಿಮಾನಿ – ವಿಡಿಯೋ ನೋಡಿ

    ರಿಷಿ ಕಪೂರ್ ಅವರನ್ನ ರೂಡ್ ಎಂದ ಮಹಿಳಾ ಅಭಿಮಾನಿ – ವಿಡಿಯೋ ನೋಡಿ

    ಮುಂಬೈ: ಸಿನಿಮಾ ನಟ-ನಟಿಯರನ್ನು ಕಂಡರೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಇತ್ತೀಚಿಗೆ ರಿಶಿ ಕಪೂರ್ ತಮ್ಮ ಕುಟುಂಬದ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಭಿಮಾನಿವೊಬ್ಬರು ಸೆಲ್ಫಿ ಕೇಳಿದ್ದಾರೆ. ಆದರೆ ರಿಶಿ ನೋ ಎಂದು ಅಭಿಮಾನಿಯ ಕಣ್ಣಲ್ಲಿ ನೀರು ಹಾಕಿಸಿದ್ದಾರೆ.

    ಇತ್ತೀಚಿಗೆ ರಿಶಿ ಕಪೂರ್ ಪತ್ನಿ ನೀತು ಸಿಂಗ್, ಮಗ ರಣ್‍ಬೀರ್ ಕಪೂರ್, ಮಗಳು ರಿದ್ದೀಮಾ ಹಾಗೂ ಮೊಮ್ಮಗಳು ಸಮಾರಾ ಜೊತೆ ಬಾಂದ್ರಾದ ಪಾಶ್ ರೆಸ್ಟೋರೆಂಟ್ ಗೆ ಹೋಗಿದ್ದರು. ವರದಿಗಳ ಪ್ರಕಾರ ಮಹಿಳಾ ಅಭಿಮಾನಿ ರಿಶಿ ಅವರ ಹತ್ತಿರ ಸೆಲ್ಫಿಗಾಗಿ ಕೇಳಿಕೊಂಡಿದ್ದಾರೆ. ಆದರೆ ರಿಶಿ ‘ನೋ’ ಎಂದು ಅಭಿಮಾನಿಗೆ ಹೇಳಿದ್ದಾರೆ.

    ಸೆಲ್ಫಿಗಾಗಿ ರಿಶಿ ಅವರು ನಿರಾಕರಿಸಿದ್ದಾಗ ಮಹಿಳೆ ನೀವು ತುಂಬಾ ‘ರೂಡ್’ ಎಂದು ಹೇಳಿದ್ದಾರೆ. ಇದನ್ನು ಕೇಳಿ ರೊಚ್ಚಿಗೆದ್ದ ರಿಶಿ ಕಪೂರ್ ನಿಮಗೆ ಅರ್ಥವಾಗುವುದಿಲ್ಲ. ನೀವು ತುಂಬಾ ‘ರೂಡ್’ ಎಂದು ಹೇಳಲು ನಿಮಗೆ ತುಂಬಾ ಸುಲಭ ಎಂದು ಹೇಳಿ ತಿರುಗೇಟು ನೀಡಿದರು.

    ಆಗ ಸರಿಯಾದ ಸಮಯಕ್ಕೆ ರಣ್‍ಬೀರ್ ಕಪೂರ್ ಬಂದು ರಿಶಿ ಅವರನ್ನು ತಡೆದು ಕಾರಿನಲ್ಲಿ ತಮ್ಮ ಕುಟುಂಬದ ವಾಪಸ್ ಕಳುಹಿಸಿದ್ದರು.

    ಈ ಹಿಂದೆ ಹಿರಿಯ ನಟಿ ಜಯಾ ಬಚ್ಚನ್ ಜೊತೆ ಅಭಿಮಾನಿವೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾಗ ಅವರ ಮೇಲೆ ಕೋಪಗೊಂಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=oNAxDJGH_hI