Tag: Rishabh Shetty

  • ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ ಯವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ.  ಗಿರಿ ಅಂದರೆ ನಾನ್ನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ. ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಅದ್ಭುತವಾದ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ಗಂಟೆಗಳ ಕಾಲ ಸಂಪೂರ್ಣ ಮನೋರಂಜನೆಯಿರುವ ಸಿನಿಮಾ ನಮ್ಮದು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ರಿಷಭ್ ಶೆಟ್ಟಿ.

     

    ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್ “ಕಥಾಸಂಗಮ” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆನಂತರ ನಾನು ಹಾಗೂ ಅನಿರುದ್ಧ್ ಮಹೇಶ್ ಸೇರಿ ಈ ಚಿತ್ರ ನಿರ್ದೇಶನ‌ ಮಾಡಿದ್ದೇವೆ ಎಂದರು ಕರಣ್ ಅನಂತ್. ಮತ್ತೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ನಾನು ಈ ಚಿತ್ರದಲ್ಲಿ ಗಿರಿಜಾ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ‌ ಹುಡುಗಿ. ತಾಯಿ ಇರುವುದಿಲ್ಲ. ತಂದೆ ಹಾಗೂ ಅಣ್ಣ ಇರುತ್ತಾರೆ ಎಂದು ನಾಯಕಿ ರಚನಾ ಇಂದರ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

    ನನ್ನ ಪಾತ್ರ ಕೂಡ ಚೆನ್ನಾಗಿದೆ. ಖುಷಿ ಜೋಕುಮಾರಸ್ವಾಮಿ ನನ್ನ ಪಾತ್ರದ ಹೆಸರು ಎಂದರು ನಟಿ ತಪಸ್ವಿನಿ. ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ‌.‌ ಇದರಲ್ಲೂ ಅದೇ ಹೆಸರು. ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ದಿನೇಶ್ ಮಂಗಳೂರು. ನಾನು ಎಲ್ಲಾ‌ ಜವಾಬ್ದಾರಿಯನ್ನು ರಿಷಭ್ ಅವರಿಗೆ ನೀಡಿದ್ದೀನಿ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು.  ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಂದೇಶ್ ಎನ್. ರಿಷಭ್ ಶೆಟ್ಟಿ, ರಚನ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಭರತ್ – ಪ್ರದೀಪ್ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv

  • ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ವಿರುದ್ಧ ರಿಷಭ್ ಶೆಟ್ಟಿ ‘ಕಾಂತಾರ’ ರಿಲೀಸ್

    ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ವಿರುದ್ಧ ರಿಷಭ್ ಶೆಟ್ಟಿ ‘ಕಾಂತಾರ’ ರಿಲೀಸ್

    ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ಎ.ಪಿ. ಅರ್ಜುನ್ ಏಪ್ರಿಲ್ 10 ರಂದೇ ಟೀಸರ್ ಮೂಲಕ ಹೇಳಿದ್ದರು. ಇದೀಗ ಅದೇ ದಿನದಂದೇ ಕನ್ನಡದ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದು ಕೂಡ ನಿರೀಕ್ಷಿತ ಸಿನಿಮಾವಾಗಿರುವುದರಿಂದ ಒಂದು ರೀತಿ ಪೈಪೋಟಿ ನಡೆಯಲಿದೆ.  ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾದ ದಿನಾಂಕವನ್ನು ನಿನ್ನೆ ಘೋಷಣೆ ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಈ ಸಿನಿಮಾ ಕೂಡ ಸೆಪ್ಟಂಬರ್ 30 ರಂದೇ ದೇಶದಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಮಾರ್ಟಿನ್ ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಎರಡನೇ ಸಿನಿಮಾ. ಈಗಾಗಲೇ ಈ ಜೋಡಿ ಗೆದ್ದಿದೆ. ಅಲ್ಲದೇ, ಧ್ರುವ ಸರ್ಜಾ ಅವರು ಸಿನಿಮಾ ಮಾಡುವುದೇ ಕಡಿಮೆ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈ ಸಿನಿಮಾದಲ್ಲಿ ಅದ್ಭುತ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದಾರಂತೆ. ಹೀಗಾಗಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಕನ್ನಡ ಸಿನಿಮಾ ರಂಗದ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ರಿಷಭ್ ಶೆಟ್ಟಿ ಅವರದ್ದು. ವಿಭಿನ್ನ ಸಿನಿಮಾಗಳನ್ನು ಮಾಡುವುದರಿಂದ, ಇವರದ್ದೇ ಆದ ನೋಡುಗ ಬಳಗವಿದೆ. ಅಲ್ಲದೇ, ಕಾಂತಾರ ಸಿನಿಮಾದ ಟ್ರೈಲರ್ ಕೆಜಿಎಫ್ 2 ಸಿನಿಮಾ ರಿಲೀಸ್ ವೇಳೆ ಬಿಡುಗಡೆ ಆಗುತ್ತು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಕೂಡ ಚೆನ್ನಾಗಿಯೇ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಎರಡೂ ಸಿನಿಮಾಗಳಲ್ಲಿ ಪ್ರೇಕ್ಷಕ ಅತೀ ಹೆಚ್ಚು ಯಾವ ಚಿತ್ರಕ್ಕೆ ಕೈ ಹಿಡಿಯಲಿದ್ದಾನೆ ನೋಡಬೇಕು.

  • ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕೆಜಿಎಫ್ 2 ಸಿನಿಮಾ ಐವತ್ತು ವರ್ಷ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದೆ ಸಂಸ್ಥೆ. ಈ ಹಿಂದೆ ಇದೇ ಬ್ಯಾನರ್ ನಲ್ಲಿ ಮೂಡಿ ಬಂದ ರಾಘವೇಂದ್ರ ಸ್ಟೋರ್ಸ್ ಚಿತ್ರದ ದಿನಾಂಕ ಕೂಡ ಗೊತ್ತು ಮಾಡಿತ್ತು. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟಂಬರ್ 30ರಂದು ದೇಶಾದ್ಯಂತ ರಿಲೀಸ್ ಆಗಲಿದೆ. ದಸರಾ ಹಬ್ಬದಂದು ಕಾಂತಾರವನ್ನು ವೀಕ್ಷಿಸಬಹುದಾಗಿದೆ. ಕೆಜಿಎಫ್ 2 ಸಿನಿಮಾ ರಿಲೀಸ್ ದಿನವೇ ಈ ಸಿನಿಮಾ ಟೀಸರ್ ಕೂಡ ಬಿಡುಗಡೆ ಆಗಿತ್ತು. ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಕರಾವಳಿ ಕಥೆಯನ್ನು ಹೇಳುವುದರಲ್ಲಿ ಫೇಮಸ್ ಆಗಿರುವ ರಿಷಭ್ ಶೆಟ್ಟಿ, ಈ ಸಿನಿಮಾದಲ್ಲೂ ಅಂಥದ್ದೇ ಒಂದು ವಿಭಿನ್ನ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಕಂಬಳವನ್ನು ಹಿನ್ನೆಲೆಯಾಗಿಟ್ಟುಕೊಂಡು ಹೊಸ ಬಗೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಿದ್ದಾರಂತೆ ನಿರ್ದೇಶಕರು. ಈಗಾಗಲೇ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾಗೆ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಕಾದುನೋಡಬೇಕು.

  • ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಮ್ಮ ನಿರ್ದೇಶನದ ಬ್ಯುಸಿ ನಡುವೆಯೂ ಯೋಗರಾಜ್ ಭಟ್ ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸುತ್ತಲೇ ಇರುತ್ತಾರೆ. ಈ ಹಿಂದೆ ರಿಷಭ್ ಶೆಟ್ಟಿ ನಟನೆಯ ‘ಬೆಲ್ ಬಾಟಮ್’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ಮಾಡಿದ್ದರು. ಆ ಪಾತ್ರದಲ್ಲಿ ನಿಜವಾಗಿಯೂ ಕಾಣಿಸಿಕೊಂಡಿದ್ದು ಯೋಗರಾಜ್ ಭಟ್ ಅವರಾ? ಎನ್ನುವಂತೆ ಅವರನ್ನು ಮೇಕ್ ಓವರ್ ಮಾಡಲಾಗಿತ್ತು. ಇದೀಗ ರಿಷಭ್ ಜತೆ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಭಟ್. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ರಿಷಭ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆ ಪಾತ್ರವು ಸಿನಿಮಾ ನಿರ್ದೇಶಕನನ್ನು ಪ್ರತಿನಿಧಿಸಲಿದೆಯಂತೆ. ಆ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದ ಕಥೆಯೇ ವಿಶೇಷವಾಗಿದೆಯಂತೆ. ಇದು ಸಹಾಯಕ ನಿರ್ದೇಶಕರ ಬದುಕಿನ ಕುರಿತಾಗಿದ್ದು, ಅವರಿಗೆ ಸ್ಫೂರ್ತಿ ನೀಡುವಂತ ಪಾತ್ರದಲ್ಲಿ ಭಟ್ ನಟಿಸಿದ್ದಾರಂತೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಇಬ್ಬರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ವಿಶೇಷ. ರಿಷಭ್ ಶೆಟ್ಟಿ ನಾಯಕನಾದರೆ, ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಇದನ್ನೂ ಓದಿ : ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

    ರಿಷಭ್ ಮಾತ್ರವಲ್ಲ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾಂತೆ. ಇವರ ಮಗನ ಪಾತ್ರದಲ್ಲಿ ರಿಷಭ್ ನಟಿಸಿದ್ದಾರೆ. ತಪಸ್ವಿನಿ ಮತ್ತು ರಚನಾ ಇಂದರ್ ಇಬ್ಬರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  • ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ನಾಳೆಯಿಂದ ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ತೆರೆಗೆ ಬರುತ್ತಿದೆ. ಇಂದು ಮಧ್ಯರಾತ್ರಿಯಿಂದಲೇ ಕೆಲವು ಕಡೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿ 1 ಗಂಟೆಯಿಂದ ಶುರುವಾಗುವ ಶೋಗಳು ನಿರಂತರವಾಗಿ ಐದಾರು ಪ್ರದರ್ಶನಗಳನ್ನು ಕಾಣುತ್ತಿವೆ. ಈ ಮಧ್ಯೆ ‘ಕೆಜಿಎಫ್ 2’ ಸಿನಿಮಾ ತಯಾರಿಸಿದ ಹೊಂಬಾಳೆ ಫಿಲ್ಮ್ಸ್ ಇನ್ನೆರಡು ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಹೌದು, ಕೆಜಿಎಫ್ 2 ಸಿನಿಮಾದ ನಂತರ ಹೊಂಬಾಳೆ ಫಿಲ್ಮ್ಸ್ ಹಲವಾರು ಚಿತ್ರಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಎರಡು ಚಿತ್ರಗಳ ಟೀಸರ್ ಅನ್ನು ಕೆಜಿಎಫ್ 2 ಸಿನಿಮಾ ಪ್ರದರ್ಶನದ ಮಧ್ಯೆ ಪ್ರದರ್ಶಿಸಲು ಸಂಸ್ಥೆ ನಿರ್ಧರಿಸಿದೆ. ಇಂದು ಮಧ್ಯ ರಾತ್ರಿಯಲ್ಲೇ ಈ ಟೀಸರ್ ಗಳು ಬಿಡುಗಡೆ ಆಗುತ್ತಿದ್ದು, ಅವುಗಳನ್ನು ನೀವು ಕಜಿಎಫ್ 2 ಸಿನಿಮಾ ವೀಕ್ಷಣೆಯ ಸಂದರ್ಭದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಮತ್ತು ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ’ ಚಿತ್ರಗಳ ಎರಡು ಟೀಸರ್ ಗಳು ರಿಲೀಸ್ ಆಗುತ್ತಿದ್ದು, ಈ ಎರಡೂ ಟೀಸರ್ ಅನ್ನು ನೀವು ಥಿಯೇಟರ್ ನಲ್ಲಿಯೇ ನೋಡಿ ಆನಂದಿಸಬಹುದಾಗಿದೆ. ಈಗಾಗಲೇ ಈ ಎರಡೂ ಚಿತ್ರಗಳೂ ನಾನಾ ಕಾರಣದಿಂದಾಗಿ ಕುತೂಹಲ ಮೂಡಿಸಿವೆ. ಇದನ್ನೂ ಓದಿ: ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಆಹಾರದ ಅರಿವನ್ನು ಮೂಡಿಸುತ್ತಲೇ ಬದುಕಿಗೆ ಒಂದೊಳ್ಳೆ ಸಂದೇಶವನ್ನು ನೀಡಲಿದೆಯಂತೆ. ಸಂತೋಷ್ ಆನಂದ್ ರಾವ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ನಗಿಸುತ್ತಲೇ ಹಲವು ವಿಚಾರಗಳನ್ನು ಈ ಸಿನಿಮಾ ಹೇಳಲಿದೆಯಂತೆ. ಜತೆಗೆ ಕಾಂತಾರ ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರ. ಈ ಸಿನಿಮಾದಲ್ಲಿ ದೇಶಿ ಕಥೆಯನ್ನು ಹೇಳುತ್ತಿದ್ದಾರಂತೆ ನಿರ್ದೇಶಕರು.

  • ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಭ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ‘ಮಿಷನ್ ಇಂಪಾಸಿಬಲ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಆನಂತರವೇ ಅವರು ತೆಲುಗಿಗೆ ಹಾರಿದ ಸುದ್ದಿ ಪಕ್ಕಾ ಆಗಿದೆ. ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ರಿಲೀಸ್ ಆಗಿರುವ ಟ್ರೇಲರ್ ಗಮನಿಸಿದರೆ, ಅದೊಂದು ಪಕ್ಕಾ ಕಾಮಿಡಿ ಮಾದರಿಯ ಸಿನಿಮಾ ಎನಿಸುತ್ತಿದೆ. ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಅರೆಸ್ಟ್ ಮಾಡಿದರೆ ಮೂರು ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮೂವರು ಮಕ್ಕಳು ಅವನ ಹಿಂದೆ ಬೀಳುವುದು. ಆ ಮೂವರು ಮಕ್ಕಳ ಕೀಟಲೆ ಹೀಗೆ ಟ್ರೇಲರ್ ಸಾಗುತ್ತದೆ. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ಅಂದಹಾಗೆ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಲೀಲ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಲೀಲ ಯಾರು? ಇವನ ಹಿನ್ನೆಲೆ ಏನು? ಇವನಿಂದ ಏನೆಲ್ಲ ಸಾಧ್ಯ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮಹತ್ವದ ಪಾತ್ರವಂತೂ ಆಗಿರುತ್ತದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಸಿನಿಮಾದ ಹೆಸರು ಮಿಷನ್ ಇಂಪಾಸಿಬಲ್ ಅಂತ ಇಟ್ಟಿದ್ದರೂ, ಕನ್ನಡದ ಅನೇಕ ನಂಟುಗಳನ್ನು ಈ ಸಿನಿಮಾ ಹೊಂದಿದೆ. ರಿಷಭ್ ಪಾತ್ರದ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ. ಕನ್ನಡದ ಭಾರೀ ಬಜೆಟ್ ಸಿನಿಮಾ ಕೆಜಿಎಫ್ ನ ಪ್ರಸ್ತಾಪ ಕೂಡ ಸಿನಿಮಾದಲ್ಲಿ ಆಗಿದೆ. ಈ ತೆಲುಗಿನಲ್ಲಿ ಸಿನಿಮಾದಲ್ಲಿ ತಾಪಸ್ಸಿ ಪನ್ನು ನಾಯಕಿ. ಉಳಿದಂತೆ ತೆಲುಗಿನ ನಟರೇ ತಾರಾಗಣದಲ್ಲಿ ಇದ್ದಾರೆ.

  • ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಒಂದಿಲ್ಲೊಂದು ಕಾರಣದಿಂದಾಗಿ ಪ್ರತಿ ವರ್ಷವೂ ವಿವಾದದಿಂದಲೇ ಶುರುವಾಗುತ್ತದೆ. ಸತತ 13 ವರ್ಷಗಳಿಂದ ಇದೇ ಆಗಿದೆ. ಈ ವರ್ಷವಾದರೂ ವಿವಾದಮುಕ್ತ ಚಿತ್ರೋತ್ಸವ ನಡೆಯಲಿ ಎನ್ನುವುದು ಚಿತ್ರೋದ್ಯಮದ ಆಸೆಯಾಗಿತ್ತು. ಕೊನೆಗೂ ಆಸೆ ಈಡೇರಲಿಲ್ಲ. ತಮ್ಮ ನಿರ್ಮಾಣದ ‘ಪೆದ್ರೊ’ ಚಿತ್ರಕ್ಕೆ ಚಿತ್ರೋತ್ಸವದಲ್ಲಿ ಮನ್ನಣೆ ಸಿಕ್ಕಿಲ್ಲವೆಂದ ನಿರ್ದೇಶಕ ಕಂ ನಿರ್ಮಾಪಕ ರಿಷಭ್ ಶೆಟ್ಟಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    “ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪಡೆದು, ವಿಮರ್ಶಕರಿಂದ ಪ್ರಶಂಸೆ ಪಡೆದ ಪೆದ್ರೂ ಚಿತ್ರ ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ. ನಮ್ಮ ಸಿನಿಮಾ ಚಿತ್ರೋತ್ಸವದಿಂದ ವಂಚಿತವಾಯಿತು ಎಂಬುದು ಎಷ್ಟು ಸತ್ಯವೋ ನಮ್ಮದೇ ಊರಿನ ಜನ ತಮ್ಮದೇ ಸಿನಿಮಾವನ್ನು ವೀಕ್ಷಿಸಲು ವಂಚಿತರಾದರು ಎಂಬುದು ಅಷ್ಟೇ ಸತ್ಯ. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ” ಎಂದು ಸುದೀರ್ಘವಾದ ಪತ್ರ ಬರೆದು, ಆರೋಪಿಸಿದ್ದಾರೆ ರಿಷಭ್. ಇದನ್ನೂ ಓದಿ : ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ರಿಷಭ್ ಅವರ ಆರೋಪಕ್ಕೆ ಮಂಸೋರೆ, ಅಭಯ್ ಸಿಂಹ ಸೇರಿದಂತೆ ಕೆಲ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು ಧ್ವನಿ ಗೂಡಿಸಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳಿಗೆ ಮಾನ್ಯತೆ ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

  • ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 5ಕ್ಕೆ ‘ಹೀರೋ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿರುವ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಚಿತ್ರದ ಕುತೂಹಲ ಭರಿತ ಟ್ರೇಲರ್ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಚಿತ್ರತಂಡದ ಮುಂದಿಟ್ಟಿದ್ರು. ಇದೀಗ ಪ್ರೇಕ್ಷಕ ಮಹಾಪ್ರಭುಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು, ಮಾರ್ಚ್ 5ರಂದು ‘ಹೀರೋ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಹೀರೋ’. ಬೆಲ್ ಬಾಟಂ ಸಿನಿಮಾ ನಂತರ ರಿಷಭ್ ನಾಯಕ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಭರತ್ ರಾಜ್ ‘ಹೀರೋ’ ನಿರ್ದೇಶಕ. ನಿರ್ದೇಶಕನಾಗಿ ಇದು ಇವರ ಮೊದಲ ಪ್ರಯತ್ನ ಕೂಡ ಹೌದು. ಲಾಕ್‍ಡೌನ್ ಅವಧಿಯಲ್ಲೇ ಇಡೀ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಸೈ ಎನಿಸಿಕೊಂಡಿತ್ತು ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಒಂದೊಂದೇ ಅಪ್ಡೇಟ್ಸ್ ನೀಡುತ್ತ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಚಿತ್ರದ ಟ್ರೇಲರ್ ಎಲ್ಲರ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವುದರ ಜೊತೆಗೆ ಸಿನಿಮಾ ಮೇಲಿನ ಒಲವನ್ನು ಇನ್ನಷ್ಟು ಹೆಚ್ಚು ಮಾಡಿದೆ.

    ಸಸ್ಪೆನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್, ಲವ್ ಎಲ್ಲಾ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಕ್ಷೌರಿಕನ ಪಾತ್ರದಲ್ಲಿ ರಿಷಭ್ ಶೆಟ್ಟಿ ಬಣ್ಣಹಚ್ಚಿದ್ದಾರೆ. ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶನದಲ್ಲಿ ‘ಹೀರೋ’ ಸಿನಿಮಾ ಸಾಹಸ ದೃಶ್ಯಗಳು ಮೂಡಿ ಬಂದಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಒಳಗೊಂಡಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಇದಕ್ಕಿಂತ ಮತ್ತೇನು ಬೇಕು ನನಗೆ – ಮುದ್ದಿನ ಮಡದಿಗೆ ರಿಷಭ್ ಶೆಟ್ಟಿಯ ಕ್ಯೂಟ್ ವಿಶ್

    ಇದಕ್ಕಿಂತ ಮತ್ತೇನು ಬೇಕು ನನಗೆ – ಮುದ್ದಿನ ಮಡದಿಗೆ ರಿಷಭ್ ಶೆಟ್ಟಿಯ ಕ್ಯೂಟ್ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್‍ಸ್ಟಾಗ್ರಾಮ್ ಮೂಲಕವಾಗಿ ಮುದ್ದಿನ ಮಡದಿಗೆ ರಿಷಭ್ ಸಾಲುಗಳ ಮೂಲಕ ಸಖತ್ ಕ್ಯೂಟಾಗಿ ವಿಶ್ ಮಾಡಿ ಸುದ್ದಿಯಾಗಿದ್ದಾರೆ.

    ರಿಷಭ್ ಶೆಟ್ಟಿ ಹಾಗೂ ಪ್ರಗತಿ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಸರಳವಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಚಾರವನ್ನು ರಿಷಭ್ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಮಡದಿ ಕುರಿತಾಗಿ ಕೆಲವು ಸಾಲುಗಳನ್ನು ಮುದ್ದಾಗಿ ಬರೆದುಕೊಂಡಿದ್ದಾರೆ. ರಿಷಭ್ ಶೆಟ್ಟಿ ವಿಶ್ ಮಾಡಿರುವ ರೀತಿ ಕಂಡ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ನಿನ್ನ ಕೈ ಹಿಡಿದು ಹೊಸದೊಂದು ಮೈಲಿಗಲ್ಲನ್ನು ತಲುಪಿದ್ದೇನೆ. ಹಿಂತಿರುಗಿ ನೋಡಿದರೆ, ಕಾಣುವುದೆಲ್ಲಾ ಕಷ್ಟ ಮರೆಸುವ ನಿನ್ನ ಮುಗ್ಧತೆಯಾಗಿದೆ. ನನ್ನನ್ನೂ ಮಗುವಾಗಿಸಿಬಿಡುವ ಮುಗ್ಧತೆ ನಿನಗಿದೆ. ಮಡದಿಯಾಗಿ, ತಾಯಿಯಾಗಿ ಬದುಕಿನೆಡೆಗಿರುವ ನಿನ್ನ ಬದ್ಧತೆ ಇದೆ. ಇದಕ್ಕಿಂತ ಮತ್ತೇನು ಬೇಕು ನನಗೆ?.. ಇಚ್ಛೆಯನರಿತು ನೆಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದಿದ್ದಾನೆ ಸರ್ವಜ್ಞ. ಸದ್ಯಕ್ಕೆ ನಾವು ಕಿಚ್ಚು ಗಿಚ್ಚು ಹಚ್ಚದೇ ಈ ಸಂಭ್ರಮದಲ್ಲೊಂದು ಒಲವಿನ ದೀಪ ಹಚ್ಚೋಣಾ ಬಾ. ಐ ಆ್ಯಮ್ ಲಕ್ಕಿ ಟು ಹಾವೇ ಯು ಇನ್ ಮೈ ಲೈಫ್..ಹ್ಯಾಪಿ ಆನಿವರ್ಸರಿ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಈ ಮುದ್ದಾದ ಜೋಡಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ. ರಿಷಭ್ ಅವರು ಪತ್ನಿಯ ಕುರಿತಾಗಿ ಬರೆದಿರುವ ಸಾಲುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ‘ಬೆಲ್ ಬಾಟಂ 2’ ಚಿತ್ರಕ್ಕೆ ಪವರ್ ಸ್ಟಾರ್ ಚಾಲನೆ – ಮತ್ತೆ ಬಂದ್ರು ಡಿಟೆಕ್ಟಿವ್ ದಿವಾಕರ್.!!

    ‘ಬೆಲ್ ಬಾಟಂ 2’ ಚಿತ್ರಕ್ಕೆ ಪವರ್ ಸ್ಟಾರ್ ಚಾಲನೆ – ಮತ್ತೆ ಬಂದ್ರು ಡಿಟೆಕ್ಟಿವ್ ದಿವಾಕರ್.!!

    ಬೆಲ್ ಬಾಟಂ ಸಿನಿಮಾ ಮೂಲಕ ಯಶಸ್ಸು ಕಂಡ ರಿಷಭ್ ಶೆಟ್ಟಿ – ನಿರ್ದೇಶಕ ಜಯತೀರ್ಥ ಜೋಡಿ ಮತ್ತೆ ಒಂದಾಗಿದ್ದಾರೆ. ‘ಬೆಲ್ ಬಾಟಂ 2’ ಚಿತ್ರದ ಮೂಲಕ ಈ ಜೋಡಿ ಮತ್ತೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದು ಹೊಸ ಕೇಸ್‍ನೊಂದಿಗೆ ಥ್ರಿಲ್ ನೀಡೋಕೆ ಬರ್ತಿದ್ದಾರೆ. ಬಹು ನಿರೀಕ್ಷಿತ ‘ಬೆಲ್ ಬಾಟಂ 2’ ಚಿತ್ರ ಸೆಟ್ಟೇರಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

    ಬೆಲ್ ಬಾಟಂ ಸೀಕ್ವೆಲ್ ಯಾವಾಗ ಬರುತ್ತೆ ಎಂಬ ಸಿನಿರಸಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಾರಿ ಚೆಂಡು ಹೂ ಕೇಸ್ ರಹಸ್ಯ ಭೇದಿಸಲು ಡಿಟೆಕ್ಟಿವ್ ದಿವಾಕರ್ ರೆಡಿಯಾಗಿದ್ದಾರೆ. ಟೈಟಲ್  ಫೋಸ್ಟರ್‌ನಲ್ಲಿರುವ ಕ್ಯೂರಿಯಸ್ ಕೇಸ್ ಆಫ್ ಚೆಂಡುವ ಎಂಬ ಟ್ಯಾಗ್‍ಲೈನ್ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಮೊದಲ ಭಾಗದಂತೆ ‘ಬೆಲ್ ಬಾಟಂ 2’ ಕೂಡ ಸಖತ್ ಥ್ರಿಲ್ಲಿಂಗ್‍ನಿಂದ ಕೂಡಿರಲಿದೆ ಎಂದು ಚಿತ್ರತಂಡ ತಿಳಿಸಿದ್ದು, 80ರ ದಶಕದ ರೆಟ್ರೋ ಮಾದರಿಯಲ್ಲೇ ಚಿತ್ರ ಮೂಡಿಬರಲಿದೆ. ಮೊದಲ ಭಾಗಕ್ಕೆ ಕಥೆ ಬರೆದಿದ್ದ ಟಿ.ಕೆ.ದಯಾನಂದ್ ಬೆಲ್ ಬಾಟಂ ಸೀಕ್ವೆಲ್‍ಗೂ ಕಥೆ ಬರೆದಿದ್ದಾರೆ.

    ಹರಿಪ್ರಿಯಾ ಜೊತೆ ಈ ಬಾರಿ ನಟಿ ತಾನ್ಯ ಹೋಪ್ ‘ಬೆಲ್ ಬಾಟಂ 2’ ಅಂಗಳಕ್ಕೆ ಹೊಸದಾಗಿ ಎಂಟ್ರಿಕೊಟ್ಟಿದ್ದು, ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್, ಪಿ.ಪಿ. ಸತೀಶ್‍ಚಂದ್ರ, ಸುಜಯ್ ಶಾಸ್ತ್ರಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಲ್ ಬಾಟಂ ಮೊದಲ ಭಾಗ ನಿರ್ಮಾಣ ಮಾಡಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ಮಾಪಕ ಸಂತೋಷ್ ಕುಮಾರ್. ಕೆ.ಸಿ ಅವರೇ ‘ಬೆಲ್ ಬಾಟಂ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಶೂಟಿಂಗ್ ಸಿದ್ಧತೆಯಲ್ಲಿರುವ ಡಿಟೆಕ್ಟಿವ್ ದಿವಾಕರ್ ಅಂಡ್ ಟೀಂ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ.