Tag: Rishabh Shetty

  • ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣಕ್ಕೆ 3 ದಿನವಷ್ಟೇ ಬಾಕಿ

    ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣಕ್ಕೆ 3 ದಿನವಷ್ಟೇ ಬಾಕಿ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಪ್ರೀಕ್ವೆಲ್ ಚಿತ್ರದ ಶೂಟಿಂಗ್ ಇದೇ ಏಪ್ರಿಲ್ 15ರಿಂದ ನಡೆಯಲಿದೆ. ಈಗಾಗಲೇ ಶೂಟಿಂಗ್ (Shooting) ಸ್ಥಳದಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದು, ಚಿತ್ರೀಕರಣಕ್ಕಾಗಿ ಬಹೃತ್ ಸೆಟ್ ಅನ್ನು ರಿಷಬ್ ಊರಿನಲ್ಲಿ ನಿರ್ಮಾಣವಾಗಿದೆ. ಅಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆ.

    ಕಾಂತಾರ 1 (Kantara) ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಆಗಲೇ ಒಟಿಟಿಗೆ ಚಿತ್ರವನ್ನು ಮಾರಿಕೊಂಡಿದ್ದಾರೆ ನಿರ್ಮಾಪಕ ವಿಜಯ ಕಿರಗಂದೂರು. ಕಾಂತಾರ ಚಿತ್ರದ ಒಟಿಟಿ (OTT) ಹಕ್ಕನ್ನು ಪ್ರೈಮ್ ವಿಡಿಯೋ ಖರೀದಿಸಿದ್ದು, ಭಾರೀ ಮೊತ್ತಕ್ಕೆ ಸೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಸಿನಿಮಾದ ಬಜೆಟ್ ನ ಅರ್ಧದಷ್ಟು ದುಡ್ಡು ಒಟಿಟಿಯಿಂದಲೇ ಬಂದಿದೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಈ ನಡುವೆ ‘ಕಾಂತಾರ’  ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ವೈರಲ್ ಆಗಿದೆ. ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರೀಚೆಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ಎನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

     

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ್ ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ಪೊಲೀಸ್ ಧ್ವಜ ದಿನ: ‘ಲಾಫಿಂಗ್ ಬುದ್ಧ’ ತಂಡದಿಂದ ಗೌರವ

    ಪೊಲೀಸ್ ಧ್ವಜ ದಿನ: ‘ಲಾಫಿಂಗ್ ಬುದ್ಧ’ ತಂಡದಿಂದ ಗೌರವ

    ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಲಾಫಿಂಗ್ ಬುದ್ಧ (Laughing Buddha) ಸಿನಿಮಾ ಶೂಟಿಂಗ್ ಕೆಲಸಗಳು ಈಗಾಗಲೇ ಮುಗಿದಿವೆ. ಇದೀಗ ಇದೇ ಚಿತ್ರತಂಡದಿಂದ ಕರ್ನಾಟಕ ಪೊಲೀಸ್ ಇಲಾಖೆಗೆ (Police Flag) ಶುಭಾಶಯಗಳು ರವಾನೆಯಾಗಿವೆ.

    ಪೊಲೀಸ್ ಧ್ವಜ ದಿನದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದೆ. ಧೈರ್ಯದ ಮತ್ತೊಂದು ಹೆಸರು ಮತ್ತು ಪ್ರತೀಕವಾಗಿರುವ ಕೆಚ್ಚೆದೆಯ  ಪೊಲೀಸರಿಗೆ ನಮ್ಮ ಲಾಫಿಂಗ್ ಬುದ್ಧ ಚಿತ್ರತಂಡದಿಂದ ಅಭಿನಂದನೆಗಳು ಎಂದಿದೆ.

    ರಿಷಬ್ ಶೆಟ್ಟಿ (Rishabh Shetty) ಫಿಲಂಸ್ ಬ್ಯಾನರ್ ನಲ್ಲಿ ಲಾಫಿಂಗ್ ಬುದ್ಧ ಸಿನಿಮಾ ನಿರ್ಮಾಣವಾಗುತ್ತಿದೆ. ಭರತ್ ರಾಜ್ ಎಂ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ತೇಜು ಬೆಳವಾಡಿ, ಸುಂದರ್ ರಾಜ್ ಸೇರಿ ಇನ್ನೂ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

    ಶೂಟಿಂಗ್ ವಿಚಾರಕ್ಕೆ ಬಂದರೆ, ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಶೀಘ್ರದಲ್ಲಿಯೇ ಲಾಫಿಂಗ್ ಬುದ್ಧ ಚಿತ್ರಮಂದಿರಕ್ಕೆ ಬರಲಿದೆ.

  • ವಿವಿಧ ಭಾಷೆಯ 70ಕ್ಕೂ ಹೆಚ್ಚು ಸಿರೀಸ್ ಮತ್ತು ಸಿನಿಮಾ: ಪ್ರೈಮ್ ವಿಡಿಯೋಮಹತ್ವದ ಹೆಜ್ಜೆ

    ವಿವಿಧ ಭಾಷೆಯ 70ಕ್ಕೂ ಹೆಚ್ಚು ಸಿರೀಸ್ ಮತ್ತು ಸಿನಿಮಾ: ಪ್ರೈಮ್ ವಿಡಿಯೋಮಹತ್ವದ ಹೆಜ್ಜೆ

    ತ್ಯಂತ ಮೆಚ್ಚಿನ ಮನರಂಜನೆ ತಾಣವಾಗಿರುವ  ಪ್ರೈಮ್ ವಿಡಿಯೋ (video) ನಿನ್ನೆ ತನ್ನ ಅತ್ಯಂತ ಬಹುನಿರೀಕ್ಷಿತ ಮತ್ತು ವೈವಿಧ್ಯಮಯ ಕಂಟೆಂಟ್ (Content) ಅನ್ನು ಅನಾವರಣಗೊಳಿಸುತ್ತಿದ್ದು, ತನ್ನ ಎರಡನೇ ಪ್ರೈಮ್ ವಿಡಿಯೋ ಪ್ರೆಸೆಂಟ್ಸ್ ಇಂಡಿಯಾ ಶೋಕೇಸ್‌ನಲ್ಲಿ ಸುಮಾರು 70 ಸಿರೀಸ್ ಮತ್ತು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದೆ. ಈ ಬಹುತೇಕವು ಮುಂದಿನ 2 ವರ್ಷಗಳಲ್ಲಿ ಪ್ರೀಮಿಯರ್ ಆಗಲಿವೆ. 40 ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು ಮತ್ತು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ 29 ಸಿನಿಮಾಗಳು ಇದರಲ್ಲಿ ಸೇರಿರಲಿವೆ. ಗ್ರಾಹಕರನ್ನು ರಂಜಿಸಲು  ಭಾರತದ ಅತ್ಯುತ್ತಮ ಮನರಂಜನೆಯನ್ನು ಇದು ಒದಗಿಸುವ ಭರವಸೆ ನೀಡುತ್ತದೆ.

    ಕುಟುಂಬದ ಎಲ್ಲರಿಗೂ ಏನಾದರೂ ಒಂದನ್ನು ಪ್ರೈಮ್ ವಿಡಿಯೋದ ಮುಂಬರುವ ಒರಿಜಿನಲ್ಸ್‌ ಕೊಡುತ್ತದೆ. ಇದರಲ್ಲಿ ವಿವಿಧ ಶ್ರೇಣಿಯ ಸಿರೀಸ್ ಮತ್ತು ಸಿನಿಮಾಗಳು ಇರಲಿವೆ. ಅಲ್ಲದೆ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಕಂಟೆಂಟ್ ಕೂಡಾ ಇರಲಿದೆ. ಆಕರ್ಷಕ ಥ್ರಿಲ್ಲರ್‌ಗಳಿಂದ, ಮನಮುಟ್ಟುವ ಡ್ರಾಮಾಗಳು, ನಗೆಯುಕ್ಕಿಸುವ ಕಾಮಿಡಿಗಳು ಮತ್ತು ಎದೆ ನಡುಗಿಸುವ ಹಾರರ್‌, ಅತ್ಯಂತ ಕುತೂಹಲ ಕೆರಳಿಸುವ ಶೋಗಳು, ಯುವ ಸಮೂಹಕ್ಕೆಂದೇ ರೂಪಿಸಿದ ಸುಂದರ ಕಥೆಗಳು, ಅತ್ಯಂತ ಉತ್ಸಾಹ ಚಿಮ್ಮಿಸುವ ಆಕ್ಷನ್‌ ಸಿನಿಮಾಗಳು ಮತ್ತು ಸಂಗೀತ ಭರಿತ ಡ್ರಾಮಾಗಳು ಎಲ್ಲವೂ ಇದರಲ್ಲಿವೆ. ಇದರ ಜೊತೆಗೆ ಭಾರತದ ಅತ್ಯಂತ ಪ್ರತಿಷ್ಠಿತ ಫಿಲ್ಮ್ ಸ್ಟೂಡಿಯೋಗಳ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತದೆ. ಇವು ಥಿಯೇಟರ್‌ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಈ ವೇದಿಕೆಗೆ ಲಗ್ಗೆ ಇಡಲಿವೆ.

    ‘ಪ್ರೈಮ್ ವಿಡಿಯೋದಲ್ಲಿ, ವಿವಿಧ ಮನರಂಜನೆ ವಿಧಾನಗಳ ಮೂಲಕ ಭಾರತೀಯ ಗ್ರಾಹಕರ ಮನರಂಜಿಸಲು ನಾವು ಹೆಚ್ಚು ಗಮನ ಹರಿಸಿದ್ದೇವೆ. ಹೊಸ ವಿಧಾನದ ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು, ನೇರವಾಗಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ವಿವಿಧ ಭಾಷೆಗಳಲ್ಲಿ ಥಿಯೇಟರ್‌ನಲ್ಲಿ ಹಿಟ್ ಆದ ಅತಿ ದೊಡ್ಡ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ಗ್ರಾಹಕರಿಗೂ ನಾವು ಮೊದಲ ಆಯ್ಕೆಯಾಗಿರಬೇಕು ಎಂದು ಬಯಸುತ್ತೇವೆ’ ಎಂದು ಪ್ರೈಮ್ ವಿಡಿಯೋ ಇಂಡಿಯಾದ ಕಂಟ್ರಿ ಡೈರೆಕ್ಟರ್ ಸುಶಾಂತ್ ಶ್ರೀರಾಮ್ ಹೇಳಿದ್ದಾರೆ. 2023 ರಲ್ಲಿ ನಮ್ಮ ಕಂಟೆಂಟ್ ಹೊಸ ಗಡಿಯನ್ನು ಮೀರಿದೆ. ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು ಮತ್ತು ಪ್ರೈಮ್ ಮೆಂಬರ್‌ ಎಂಗೇಜ್‌ಮೆಂಟ್ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಮುಂಚೂಣಿಯಲ್ಲಿರಲು ಸಹಾಯ ಮಾಡಿದೆ. ನಮ್ಮ ಗ್ರಾಹಕರಿಂದ ನಾವು ಪಡೆದ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಪ್ಲಾಟ್‌ಫಾರಂನಲ್ಲಿರುವ ಪ್ರತಿ ಕಥೆಯೂ ಅವರಿಗೆ ಮೆಚ್ಚುಗೆಯಾಗಬೇಕು ಎಂದು ನಾವು ಆಶಿಸುತ್ತೇವೆ. ಇದಕ್ಕೆ ಅನುಗುಣವಾಗಿ ನಾವು ಈವರೆಗಿನ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯವಾದ ಮನರಂಜನೆಯನ್ನು ಒದಗಿಸಲು ಬಯಸಿದ್ದೇವೆ ಮತ್ತು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿನ ಪ್ರೇಕ್ಷಕರನ್ನು ನಮ್ಮ ಮುಂಬರುವ ಸಿರೀಸ್‌ ಮತ್ತು ಸಿನಿಮಾಗಳು ಮನರಂಜಿಸಲಿದೆ ಎಂದು ನಾವು ಖಾತರಿ ಹೊಂದಿದ್ದೇವೆ’ ಎಂದು ಅವರು ಹೇಳುತ್ತಾರೆ.

    ‘ವೈವಿಧ್ಯಮಯ, ಅಸಲಿ ಮತ್ತು ನೆಲಮೂಲದ ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಪ್ರೈಮ್ ವೀಡಿಯೋ ಬದ್ಧವಾಗಿದೆ. ಇದರಿಂದ ಭಾಷೆ ಮತ್ತು ಭೌಗೋಳಿಕ ಗಡಿಗಳನ್ನೂ ಮೀರಲಿದೆ’ ಎಂದು ಪ್ರೈಮ್ ವಿಡಿಯೋದ ಭಾರತ ಮತ್ತು ಆಗ್ನೇಯ ಏಷ್ಯಾದ ಒರಿಜಿನಲ್ಸ್‌ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದ್ದಾರೆ. 2023 ರಲ್ಲಿ, ನಮ್ಮ ಕಂಟೆಂಟ್ ಅನ್ನು 210 ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರತಿ ವಾರವೂ ವೀಕ್ಷಿಸಲ್ಪಟ್ಟಿದೆ. ಕಳೆದ 52 ವಾರಗಳ ಪೈಕಿ 43 ರಲ್ಲಿ ವಿಶ್ವಾದ್ಯಂತ ಪ್ರೈಮ್ ವೀಡಿಯೋದಲ್ಲಿ ಅಗ್ರ 10 ರಲ್ಲಿ ಟ್ರೆಂಡ್ ಆಗಿದೆ. ನಮ್ಮ ಶೋಗಳು ಮತ್ತು ಸಿನಿಮಾಗಳ ರಾಷ್ಟ್ರೀಯ ಮತ್ತು ಜಾಗತಿಕ ಪರಿಣಾಮ ನಮಗೆ ಸಂತೃಪ್ತಿ ನೀಡುವ ಸಂಗತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಕಂಟೆಂಟ್ ಅನ್ನು ನಾವು ಇನ್ನಷ್ಟು ಪ್ರಚುರಪಡಿಸಲು ನಮಗೆ ಖುಷಿಯಾಗುತ್ತದೆ. ಕಥೆಗಾರರು ಮತ್ತು ಪ್ರತಿಭಾವಂತರ ಮನೆಯಾಗಿರುವ ನಾವು ಭಾರತೀಯ ಮನರಂಜನೆ ವಲಯದಲ್ಲಿನ ಪ್ರಮುಖ ವ್ಯಕ್ತಿಗಳ ಜೊತೆಗೆ ಪಾಲುದಾರಿಕೆ ವಹಿಸಲು ನಾವು ಉತ್ಸುಕರಾಗಿದ್ದೇವೆ. ತಾಜಾ, ಶಕ್ತಿಯುತ, ಸ್ಫೂರ್ತಿದಾಯಕ ಮತ್ತು ಮನರಂಜನೆಯ ಕಥೆಗಳನ್ನು ರಚಿಸಲು ಈ ಮೂಲಕ ನಮಗೆ ಶಕ್ತಿ ಒದಗಲಿದೆ. ಭಾರತ ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳಲು ನಮ್ಮ ಮುಂಬರುವ ಸಿನಿಮಾಗಳು ಮತ್ತು ಸರಣಿಗಳು ಹೊಸ ದಾರಿಯನ್ನು ಹಾಕಿಕೊಡಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ’ ಎಂದಿದ್ದಾರೆ.  ಈ ಸಮಾರಂಭದಲ್ಲಿ ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ  (Rishabh Shetty) ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಕಾಲೇಜು ದಿನಗಳಲ್ಲೇ ‘ಕಾಂತಾರ’ ಕಥೆ ಹೊಳೆದಿತ್ತು: ನಟ ರಿಷಬ್ ಶೆಟ್ಟಿ

    ಕಾಲೇಜು ದಿನಗಳಲ್ಲೇ ‘ಕಾಂತಾರ’ ಕಥೆ ಹೊಳೆದಿತ್ತು: ನಟ ರಿಷಬ್ ಶೆಟ್ಟಿ

    ಕಾಂತಾರ ಸಿನಿಮಾ ಕುರಿತಂತೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ ರಿಷಬ್ ಶೆಟ್ಟಿ (Rishabh Shetty). ಅಮೆಜಾನ್ ಪ್ರೈಂ ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್, ಕಾಂತಾರ ಸಿನಿಮಾದ ಕಥೆ (Story) ಇಂದು ನಿನ್ನೆ ಹೊಳೆದದ್ದು ಅಲ್ಲ. ಕಾಲೇಜು ದಿನಗಳಲ್ಲೇ ಎರಡೂ ಭಾಗದ ಕಥೆಯನ್ನು ನಾನು ಕಲ್ಪಿಸಿಕೊಂಡಿದ್ದೆ. ನನ್ನ ನೆಲದ ಕಥೆಯನ್ನು ಹೇಳಬೇಕು ಅಂತ ಅವತ್ತೆ ಅನಿಸಿತ್ತು ಎಂದು ಮಾತನಾಡಿದ್ದಾರೆ.

    ಸಿನಿಮಾ ರಂಗಕ್ಕೆ ಬಂದ ನಂತರ ಕಾಂತಾರದ ಕಥೆಗೆ ಮತ್ತಷ್ಟು ಶಕ್ತಿ ಬಂದು, ಸಿನಿಮಾ ಮಾಡುವ ಹಾಗಾಯಿತು ಎಂದು ನೆನಪಿಸಿಕೊಂಡಿದ್ದಾರೆ. ಕಾಂತಾರ ಚಾಪ್ಟರ್ 1ಕ್ಕಾಗಿ ಅವರು ಊರ ಹತ್ತಿರವೇ ಸೆಟ್ ಹಾಕಿಸಿದ್ದಾರಂತೆ ರಿಷಬ್. ಮುಂದಿನ ತಿಂಗಳಿಂದ ಚಿತ್ರದ ಚಿತ್ರೀಕರಣ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

    ಕಾಂತಾರ 1 (Kantara) ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಆಗಲೇ ಒಟಿಟಿಗೆ ಚಿತ್ರವನ್ನು ಮಾರಿಕೊಂಡಿದ್ದಾರೆ ನಿರ್ಮಾಪಕ ವಿಜಯ ಕಿರಗಂದೂರು. ಕಾಂತಾರ ಚಿತ್ರದ ಒಟಿಟಿ (OTT) ಹಕ್ಕನ್ನು ಪ್ರೈಮ್ ವಿಡಿಯೋ ಖರೀದಿಸಿದ್ದು, ಭಾರೀ ಮೊತ್ತಕ್ಕೆ ಸೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಸಿನಿಮಾದ ಬಜೆಟ್ ನ ಅರ್ಧದಷ್ಟು ದುಡ್ಡು ಒಟಿಟಿಯಿಂದಲೇ ಬಂದಿದೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಈ ನಡುವೆ ‘ಕಾಂತಾರ’  ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ವೈರಲ್ ಆಗಿದೆ. ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರೀಚೆಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ಎನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

     

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ್ ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ಚಿತ್ರೀಕರಣಕ್ಕೂ ಮುನ್ನ ‘ಕಾಂತಾರ 1’ ಚಿತ್ರ ಸೋಲ್ಡ್ ಔಟ್

    ಚಿತ್ರೀಕರಣಕ್ಕೂ ಮುನ್ನ ‘ಕಾಂತಾರ 1’ ಚಿತ್ರ ಸೋಲ್ಡ್ ಔಟ್

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ 1 (Kantara) ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಆಗಲೇ ಒಟಿಟಿಗೆ ಚಿತ್ರವನ್ನು ಮಾರಿಕೊಂಡಿದ್ದಾರೆ ನಿರ್ಮಾಪಕ ವಿಜಯ ಕಿರಗಂದೂರು. ಕಾಂತಾರ ಚಿತ್ರದ ಒಟಿಟಿ (OTT) ಹಕ್ಕನ್ನು ಪ್ರೈಮ್ ವಿಡಿಯೋ ಖರೀದಿಸಿದ್ದು, ಭಾರೀ ಮೊತ್ತಕ್ಕೆ ಸೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಸಿನಿಮಾದ ಬಜೆಟ್ ನ ಅರ್ಧದಷ್ಟು ದುಡ್ಡು ಒಟಿಟಿಯಿಂದಲೇ ಬಂದಿದೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಈ ನಡುವೆ ‘ಕಾಂತಾರ’ (Kantara) ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ವೈರಲ್ ಆಗಿದೆ. ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರೀಚೆಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ಎನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

     

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ್ ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ಕಾಂತಾರ ಶೂಟಿಂಗ್ ಶುರು: ‘ರಾಜನ’ ಪಾತ್ರಧಾರಿಗೆ ದೈವದ ಅಭಯ

    ಕಾಂತಾರ ಶೂಟಿಂಗ್ ಶುರು: ‘ರಾಜನ’ ಪಾತ್ರಧಾರಿಗೆ ದೈವದ ಅಭಯ

    ರಿಷಬ್ ಶೆಟ್ಟಿ (Rishabh Shetty) ಸದ್ದಿಲ್ಲದೇ ಕಾಂತಾರ 1 (Kantara) ಸಿನಿಮಾದ ಶೂಟಿಂಗ್ (Shooting) ಪ್ರಾರಂಭಿಸಿದ್ದಾರೆ. ಕುಂದಾಪುರದಲ್ಲಿ ಹಾಕಿರುವ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ರಾಜನ ಪಾತ್ರವನ್ನು ಮಾಡುತ್ತಿರುವ ವಿನಯ್ ಬಿದ್ದಪ್ಪ (Vinay Biddappa) ದೈವದ ಸನ್ನಿಧಿಗೆ ಹೋಗಿದ್ದಾರೆ. ಸಿನಿಮಾ ಕುರಿತಂತೆ ದೈವ ಅವರಿಗೆ ಅಭಯ ನೀಡಿದೆ.

    ಇತ್ತೀಚೆಗಷ್ಟೇ ಪುತ್ತೂರಿನ ಪನಡ್ಕದಲ್ಲಿ ನಡೆದ ದೈವದ ನೇಮದಲ್ಲಿ ಕಲ್ಲುರ್ಟಿ ದೈವದ ಬಳಿ ಕಾಂತಾರದಲ್ಲಿ ರಾಜನ ಪಾತ್ರವನ್ನು ನಿರ್ವಹಿಸುತ್ತಿರುವ ವಿನಯ್ ಬಿದ್ದಪ್ಪ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಧರ್ಮಕ್ಕೆ ಅಪಚಾರ ಆಗದಂತೆ ಸಿನಿಮಾ ಮಾಡಿ ಎಂದು ದೈವ ಅಭಯ ನೀಡಿದೆ.

    ಇತ್ತೀಚಿನ ದಿನಗಳಲ್ಲಿ ಸಿನಿಮಾ, ಕಿರುತೆರೆ, ಯಕ್ಷಗಾನ ಮತ್ತು ಇತರ ಯಾವುದೇ ಸಮಾರಂಭದಲ್ಲಿ ದೈವವನ್ನು ತೋರಿಸಬಾರದು ಎನ್ನುವ ಹೋರಾಟ ನಡೆದಿದೆ. ಕಾಂತಾರ ಚಿತ್ರಕ್ಕೂ ಈ ಬಿಸಿ ತಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದೈವಗಳು ಈ ಚಿತ್ರಕ್ಕೆ ಅಭಯ ನೀಡುತ್ತಿವೆ. ಹಾಗಾಗಿ ಯಾವುದೇ ಮಂಡೆಬಿಸಿ ಇಲ್ಲದೇ ಶೆಟ್ಟರು ಸಿನಿಮಾ ಮಾಡುತ್ತಿದ್ದಾರೆ.

     

    ಕಾಂತಾರ 1 ಚಿತ್ರಕ್ಕಾಗಿಯೇ ಬೃಹತ್ ಸೆಟ್ ಗಳನ್ನು ಹಾಕಲಾಗಿದ್ದು, ಸದ್ಯ ಅದೇ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಟೀಮ್ ಬಿಟ್ಟರೆ ಬೇರೆಯವರಿಗೆ ಅಲ್ಲಿ ಅವಕಾಶವಿಲ್ಲದಂತೆ ಕಾಳಜಿ ವಹಿಸಲಾಗಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿರುವ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ.

  • ಬೆಂಗಳೂರು ‘ಫಿಲ್ಮ್ ಫೆಸ್ಟಿವಲ್’ನಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಅನ್ಯಾಯ

    ಬೆಂಗಳೂರು ‘ಫಿಲ್ಮ್ ಫೆಸ್ಟಿವಲ್’ನಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಅನ್ಯಾಯ

    ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Bangalore, Film Festival)  ಜೈ ಶಂಕರ್ (Jai Shankar) ನಿರ್ದೇಶನದ, ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಆಯ್ಕೆಯಾಗದೇ ಇರುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸೇರಿದಂತೆ ಸಾಕಷ್ಟು ಸಿನಿಮಾ ಪ್ರೇಮಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಸುದ್ದಿಯೊಂದರಲ್ಲಿಓದಿದ ಪ್ರಕಾರ ಅವರ ಸಿನೆಮಾ 2023 ರಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆದಿದೆ ಎಂದರೆ, ಚಿತ್ರೋತ್ಸವದ ಮಾನದಂಡದ ಪ್ರಕಾರ ಆಯ್ಕೆಯಾಗಲು ಎಲ್ಲಾ ಅರ್ಹತೆಯನ್ನು ಪಡೆದಿದೆ. ಬುಸಾನ್ ಸೇರಿದಂತೆ ವಿವಿಧ ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವ ಸಿನಿಮಾ ಆಯ್ಕೆಯಾಗದಿರುವುದಕ್ಕೆ ನೀಡಿರುವ ಕಾರಣ ಸಮಂಜಸವಾಗಿಲ್ಲ. ಅರ್ಹ ಸಿನಿಮಾನ ಆಯ್ಕೆ ಮಾಡದಿರುವುದು ದುರಂತ. ಶಿವಮ್ಮ ಸಿನಿಮಾಗೆ ನ್ಯಾಯ ಸಿಗಲೇಬೇಕು ಎಂದು ಮಂಸೋರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಅದರಲ್ಲಿ ನಮ್ಮ ರಿಷಬ್ ಶೆಟ್ಟಿ (Rishabh Shetty) ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.  ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ಈ ಸಿನಿಮಾ  ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ಕೊಡುಗೆ.

    ಈವರೆಗೂ ಶಿವಮ್ಮ (Shivamma) ಗೆದ್ದ  ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022, ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್  ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್  ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ  ಅಂತರ್ರಾಷ್ಟ್ರೀಯ ಚಿತ್ರೋತ್ಸವ  ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

     

    ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಂಡಿದೆ. ಶಿವಮ್ಮ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ. ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

  • ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?

    ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?

    ಇಂದು ಶ್ರೀರಾಮಲಲ್ಲಾ (Ramlalla) ಪ್ರಾಣಪ್ರತಿಷ್ಠಾಪನೆಗೆ ಕೆಲವೇ ಗಂಟೆ ಬಾಕಿ ಇದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ (Ayodhya) ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಭಾಗಿಯಾಗಿದ್ದಾರೆ.

    ಈಗಾಗಲೇ ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty), ಅನಿಲ್ ಕುಮಾರ ಸ್ವಾಮಿ, ಬಾಲಿವುಡ್ ಖ್ಯಾತ ನಟ ಅಮಿತಾಬ್‌ ಬಚ್ಚನ್‌, ತೆಲುಗು ನಟರಾದ ಚಿರಂಜೀವಿ, ರಾಮ್‌ಚರಣ್, ಪವನ್‌ ಕಲ್ಯಾಣ್‌ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ತ್‌, ಕತ್ರಿನಾ ಕೈಫ್‌ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸಿದ್ದಾರೆ.

    ಕೇವಲ ಸಿನಿಮಾ ನಟರು ಮಾತ್ರವಲ್ಲ, ಕ್ರೀಡಾ ತಾರೆ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ವೆಂಕಟೇಶ್‌ ಪ್ರಸಾದ್‌, ಆರ್‌.ಅಶ್ವಿನ್‌, ಸೈನಾ ನೆಹ್ವಾಲ್‌ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸಿದ್ದು, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

     

    ಅಯೋಧ್ಯೆಯಲ್ಲಿಂದು ಮೋದಿ:
    ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
    ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌
    ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
    ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
    ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌ ಸಾರ್ವಜನಿಕ ಭಾಷಣ
    ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
    ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

  • ರಾಮಮಂದಿರ ಉದ್ಘಾಟನೆ : ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ ರಿಷಬ್

    ರಾಮಮಂದಿರ ಉದ್ಘಾಟನೆ : ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ ರಿಷಬ್

    ನವರಿ 22ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿ  (Rishabh Shetty)ಅವರನ್ನೂ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಅವರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ರಿಷಬ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಅವಕಾಶಕ್ಕಾಗಿ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಜೊತೆ ಕನ್ನಡದ ಇನ್ನೂ ಅನೇಕ ನಟರಿಗೂ ಆಹ್ವಾನ ನೀಡಲಾಗಿದೆ.  ಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ (Nikhil Kumar) ಅವರಿಗೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಉದ್ಘಾಟನೆಗೆ ಕುಟುಂಬ ಸಮೇತ ಬರುವಂತೆ, ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ನೀಡಲಾಗಿದೆ. ಯಶ್ ಅವರಿಗೂ ಬರುವಂತೆ ಆಹ್ವಾನ ನೀಡಲಾಗಿದೆಯಂತೆ. ಕನ್ನಡ ಸಿನಿಮಾ ರಂಗದ ಬೆರಳೆಣಿಕೆಯ ಕಲಾವಿದರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ.

    ಒಂದು ಕಡೆ ಉದ್ಘಾಟನೆಗೆ ಆಹ್ವಾನ ಸಿಗುತ್ತಿದ್ದರೆ ಮತ್ತೊಂದು ಕಡೆ ಸಿನಿಮಾ ಸೆಲೆಬ್ರಿಟಿಗಳು ಕೂಡ ದೇಣಿಗೆ ನೀಡುತ್ತಿದ್ದಾರೆ. ಹುಭಾಷಾ ನಟಿ ಪ್ರಣೀತಾ ಸುಭಾಷ್(Pranitha Subhash), ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1 ಲಕ್ಷ ದೇಣಿಗೆ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ನಟಿ  ಪಾತ್ರರಾಗಿದ್ದಾರೆ.

     

    ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನಟಿ ನೀಡಿದ್ದಾರೆ. ಈ ಕುರಿತು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಚಳುವಳಿ ಎಂದು ಬರೆದು ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಣೀತಾ ಮನವಿ ಮಾಡಿದ್ದಾರೆ.

  • ಬಾಲಿವುಡ್ ಸ್ಟಾರ್ ನಿರ್ದೇಶಕನನ್ನು ಭೇಟಿ ಮಾಡಿದ ರಿಷಬ್

    ಬಾಲಿವುಡ್ ಸ್ಟಾರ್ ನಿರ್ದೇಶಕನನ್ನು ಭೇಟಿ ಮಾಡಿದ ರಿಷಬ್

    ಕಾಂತಾರ ಸಿನಿಮಾ ನಂತರ ರಿಷಬ್‍ ಶೆಟ್ಟಿ (Rishabh Shetty) ಬಾಲಿವುಡ್ (Bollywood) ಗೆ ಹಾರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಕುರಿತಂತೆ ರಿಷಬ್ ಕೂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಈ ಸುದ್ದಿ ಪುಷ್ಠಿ ಎನ್ನುವಂತೆ ರಿಷಬ್ ಬಾಲಿವುಡ್ ನ ಖ್ಯಾತ ನಿರ್ದೇಶಕ, ಲಗಾನ್ ಖ್ಯಾತಿಯ ಅಶುತೋಷ್ ಗೋವರಿಕ್ (Ashutosh Govarik) ಅವರನ್ನು ಭೇಟಿ ಮಾಡಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಅಶುತೋಷ್ ಗೋವರಿಕ್ ಅವರ ಮುಂಬರುವ ಸಿನಿಮಾದಲ್ಲಿ ರಿಷಬ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗಿದೆ. ನಿನ್ನೆಯಷ್ಟೇ ಅಶುತೋಷ್ ಗೋವರಿಕ್ ಅವರ ಆಫೀಸಿನಲ್ಲಿ ಈ ಜೋಡಿ ಭೇಟಿಯಾಗಿದೆ. ಕ್ಯಾಮೆರಾಗೆ ಪೋಸ್ ಕೂಡ ನೀಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಿಷಬ್ ಬಾಲಿವುಡ್ ಗೆ ಹಾರೋದು ಪಕ್ಕಾ ಆದಂತಾಗಿದೆ.

    ಒಂದು ಕಡೆ ಬಾಲಿವುಡ್ ಸುದ್ದಿ ನೀಡಿ ಅಭಿಮಾನಿಗಳ ಸಂಭ್ರಮಕ್ಕೆ ರಿಷಬ್ ಕಾರಣರಾಗಿದ್ದರೆ, ಮತ್ತೊಂದು ಕಡೆ ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ ದೈವಗಳ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದ ಚಿತ್ರೀಕರಣ ನಿರ್ವಿಘ್ನವಾಗಿ ನಡೆಯಲು ಮತ್ತೆ ದೈವಗಳ (Daiva) ದರ್ಶನ ಪಡೆಯುತ್ತಿರುವ ರಿಷಬ್ ಶೆಟ್ಟಿ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭೇಟಿ ನೀಡಿದ್ದು, ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದಾರೆ.

    ಸ್ವಯಂಪ್ರೇರಿತವಾಗಿ ದೈವದ ಅಭಯ ಪಡೆಯಲು ಆಗಮಿಸಿದ ರಿಷಬ್ ಶೆಟ್ಟಿಗೆ, ಧೈರ್ಯ ಕಳೆದುಕೊಳ್ಳದಂತೆ ದೈವದ ಸೂಚನೆ ಸಿಕ್ಕಿದೆ. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ದೈವ ಸೂಚನೆ ನೀಡಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿದೆ.

     

    ಈಗಾಗಲೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವೀವ್ಸ್‌ ಪಡೆದಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದರು. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದರು.