Tag: Rishabh Shetty

  • ‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

    ‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

    ವಾರ ಕರ್ನಾಟಕದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ಕೂಡ ಒಂದು. ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು (Review) ಬಂದಿರುವ ಕಾರಣದಿಂದಾಗಿ ಶುಕ್ರವಾರ ಬಿಡುಗಡೆ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಕಾಂತಾರ ಬಿಡುಗಡೆ ಆಗಿದ್ದು, ಕೋಟಿ ಕೋಟಿ ಹಣವನ್ನು ಬಾಚಿದೆ ಎಂದು ಅಂದಾಜಿಸಲಾಗಿದೆ.

    ಸ್ಯಾಂಡಲ್ ವುಡ್ (Sandalwood) ಸಿನಿ ಪಂಡಿತರ ಲೆಕ್ಕಾಚಾರದಂತೆ ಸಿನಿಮಾದ ಮೊದಲ ದಿನದ ಕಲೆಕ್ಷನ್ (Collection) ಐದರಿಂದ ಆರು ಕೋಟಿ ಎಂದು ಅಂದಾಜಿಸಲಾಗಿದ್ದು, ವೀಕೆಂಡ್ ಮುಗಿಯುವುದರೊಳಗೆ ಕಾಂತಾರ ಹದಿನೈದು ಕೋಟಿ ಬಾಚಲಿದೆ ಎಂದು ಹೇಳಲಾಗುತ್ತಿದೆ. ಮೂರೇ ದಿನಕ್ಕೆ ಕಾಂತಾರದ ಬಜೆಟ್ ವಾಪಸ್ಸಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿರುವುದು ಗಳಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕಾಂತಾರ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ರಿಷಬ್ ಶೆಟ್ಟಿ (Rishabh Shetty) ಅವರ ಆರ್ಭಟ ಎಲ್ಲವನ್ನೂ ಕೊಂಡಾಡಲಾಗುತ್ತಿದೆ. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿರುವುದರಿಂದ ಕಾಂತಾರ ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ನೋಡುಗರು ಸೇರಿಸಿಬಿಟ್ಟಿದ್ದಾರೆ.

    ಸಿನಿಮಾ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ಈ ಪ್ರಮಾಣದಲ್ಲಿ ಜನರು ಸಿನಿಮಾವನ್ನು ಸ್ವೀಕಾರ ಮಾಡುತ್ತಾರೆ ಎನ್ನುವ ಅಂದಾಜು ಇರಲಿಲ್ಲ. ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಮತ್ತೊಮ್ಮೆ ಸಾಬೀತಾಗಿದೆ ಎಂದೂ ರಿಷಬ್ ಹೇಳಿದ್ದಾರೆ. ತಮ್ಮ ನೆಲದ ಕಥೆ ಹೇಳಿರುವುದಕ್ಕೆ ಸಹಜವಾಗಿಯೇ ಅವರಿಗೆ ಹೆಮ್ಮೆ ಇದೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ನಿನ್ನೆ ರಾತ್ರಿಯಿಂದಲೇ ನೋಡುಗರಿಗೆ ಲಭ್ಯವಿದೆ. ಇಂದಿನಿಂದ ಥಿಯೇಟರ್ ನಲ್ಲಿ ಅಬ್ಬರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ರಂಗದಲ್ಲೇ ಸಾಕಷ್ಟು ಹೆಸರು ಮಾಡಿರುವ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya)  ಕೂಡ ಸಾಮಾನ್ಯ ನೋಡುಗಳಾಗಿ ಕೂತು ಸಿನಿಮಾ ನೋಡಿ, ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಸುದೀರ್ಘವಾಗಿ ವಿಮರ್ಶೆ (Review) ಕೂಡ ಮಾಡಿದ್ದಾರೆ.

    ಸಿನಿಮಾ ನೋಡಿದ ಮೇಲೆ ಕೆಲವು ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಪದಗಳೇ ಸಿಗುವುದಿಲ್ಲ. ಕೆಲವು ಸಿನಿಮಾಗಳು ಮಾತನಾಡಿಸುವುದಿಲ್ಲ, ಅವುಗಳು ಅಂತರಂಗವನ್ನು ಕಲಿಕೆ, ದಿವ್ಯ ಅನುಭವವನ್ನು ನಮಗೆ ದಾಟಿಸಿರುತ್ತವೆ. ಅಂತಹ ಚಿತ್ರಗಳ ಸಾಲಿಗೆ ಕಾಂತಾರ ಸೇರುತ್ತದೆ. ಸಿನಿಮಾ ನೋಡಿದ ನಂತರವೂ ಇನ್ನೂ ನಾನು ಕಾಂತರದಲ್ಲೇ ಇದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ಟೀಮ್ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಈ ಸಿನಿಮಾ ಕೇವಲ ನೋಡುವುದು ಮಾತ್ರವಲ್ಲ, ಅನುಭವಿಸಬೇಕಾದ ಚಿತ್ರ. ಈ ಚಿತ್ರ ನೋಡಿದ ನಂತರ ನಾನು ಭೂತ ಕೋಲ, ದೈವದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ (Arvind Kashyap)  ಅವರ ಕೆಲಸ ಖುಷಿ ಕೊಟ್ಟಿದೆ. ಅವರ ಸಿನಿಮಾಟೋಗ್ರಫಿಯು ನೇರವಾಗಿ ಕಾಂತಾರದೊಳಗೆ ನನ್ನನ್ನು ಕರೆದುಕೊಂಡು ಹೋಯಿತು. ನಾಯಕಿ ಸಪ್ತಮಿ ಗೌಡ (Saptami Gowda) ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

    ರಿಷಬ್ ಶೆಟ್ಟಿ (Rishabh Shetty)ಯವರನ್ನು ಹಾಡಿಹೊಗಳಿರುವ ರಮ್ಯಾ, ಕೊನೆಯ ಹತ್ತು ನಿಮಿಷಗಳ ಕಾಲ ರಿಷಬ್ ನಟನೆ ಸೂಪರ್ ಎಂದು ಹೇಳಿದ್ದಾರೆ. ಪ್ರೇಕ್ಷಕರು ಸಿನಿಮಾ ನೋಡಿದ ನಂತರ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತೀರಿ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಗುರುವಾರ ರಾತ್ರಿ ಸಿನಿಮಾ ನೋಡಿರುವ ರಮ್ಯಾ, ಚಿತ್ರತಂಡದ ಜೊತೆಗೆ ಫೋಟೋ ತಗೆದುಕೊಂಡೂ ಸಂಭ್ರಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ವಾರ ಕಾಂತಾರ ಜೊತೆ ತೋತಾಪುರಿ ರುಚಿ: ಮಣಿರತ್ನಂ ಸಿನಿಮಾನೂ ರಿಲೀಸ್

    ಈ ವಾರ ಕಾಂತಾರ ಜೊತೆ ತೋತಾಪುರಿ ರುಚಿ: ಮಣಿರತ್ನಂ ಸಿನಿಮಾನೂ ರಿಲೀಸ್

    ನಿರೀಕ್ಷೆ ಮೂಡಿಸಿರುವಂತಹ ನಾಲ್ಕು ಚಿತ್ರಗಳು ನಾಳೆ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿವೆ. ಈ ನಾಲ್ಕು ಸಿನಿಮಾಗಳಲ್ಲಿ ಮೂರು ಚಿತ್ರಗಳು ತಮ್ಮದೇ ಆದ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿವೆ. ದಸರಾ ಹಬ್ಬದ ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಪ್ರೇಕ್ಷಕರು ಯಾವೆಲ್ಲ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಮೇಕಿಂಗ್ ವಿಡಿಯೋ ಮತ್ತು ಕಥೆಯ ಕಾರಣದಿಂದಾಗಿ ರಿಷಭ್ ಶೆಟ್ಟಿ ನಟಿಸಿ, (Rishabh Shetty) ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮಂಗಳೂರು ನೆಲದ ದೇಸಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರಂತೆ ರಿಷಭ್. ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ಈ ಸಿನಿಮಾದಲ್ಲಿ ಹೇಳುತ್ತಿದ್ದು, ಕಿಶೋರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ.

    ಭಾವೈಕ್ಯತೆಯ ಸಂದೇಶ ಸಾರುವ  ಕಥಾಹಂದರ ಇರುವ ಚಿತ್ರ ತೋತಾಪುರಿ (Totapuri) ಈವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನವರಸನಾಯಕ ಜಗ್ಗೇಶ್ (Jaggesh) ಹಾಗೂ ಅದಿತಿ ಪ್ರಭುದೇವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಜಯ್‌ ಪ್ರಸಾದ್ ಅವರ ನಿರ್ದೇಶನವಿದೆ.  ಕಾನ್‌ಸ್ಟಿಟ್ಯೂಷನ್ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ  ಅಣ್ಣ ತಮ್ಮಂದಿರು ಎಂಬ ಅದ್ಭುತವಾದ ಸಂದೇಶ ಇರುವ ತೋತಾಪುರಿಯಲ್ಲಿ  ಉಪ್ಪು, ಹುಳಿ, ಖಾರ ಎಲ್ಲದರ ಸಮನಾದ ಮಿಶ್ರಣವಿದೆ ಚಿತ್ರದಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ನಾಯಕಿ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾಸುಂದರ್, ಹೇಮಾದತ್, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು  ನಟಿಸಿದ್ದಾರೆ.

    ಮಣಿರತ್ನಂ  (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan) ಕೂಡ ನಾಳೆ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಕನ್ನಡ ಮೂರು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದೊಂದು ಭಾರೀ ಬಜೆಟ್ ಸಿನಿಮಾ ಕೂಡ ಆಗಿದೆ. ಇದೊಂದು ಕಾದಂಬರಿ ಆಧರಿಸಿದ ಸಿನಿಮಾವಾಗಿದ್ದು, 1955 ಚೋಳರ ಆಳ್ವಿಕೆಯ ಸುತ್ತ ಹೆಣೆದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ನೈಜ ಘಟನೆಯ ಜೊತೆಗೆ ಫ್ಯಾಂಟಸಿ ಕೂಡ ಮಿಕ್ಸ್ ಆಗಿರುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ವಿಕ್ರಮ್, ಐಶ್ವರ್ಯ ರೈ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

    ಈ ಸಿನಿಮಾಗಳ ಜೊತೆಗೆ ವಿಕ್ರಮ್ ವೇದ (Vikram Veda) ಕೂಡ ನಾಳೆಯೇ ಬಿಡುಗಡೆ ಆಗುತ್ತಿದೆ. ಹೀಗಾಗಿ ಸಹಜವಾಗಿಯೇ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಬಹುತೇಕ ಚಿತ್ರಗಳು ನಿರೀಕ್ಷೆ ಮೂಡಿಸಿರುವುದರಿಂದ ಯಾರೆಲ್ಲ ಯಾವ ಸಿನಿಮಾಗಳನ್ನು ನೋಡಲಿದ್ದಾರೆ ಮತ್ತು ಬಾಕ್ಸ್ ಆಫೀಸಿನಲ್ಲಿ ಯಾವ ಚಿತ್ರಗಳಿಗೆ ಗೆಲುವು ಸಿಗಲಿದೆ ಎಂದು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಣ್ಣಿನ ಸೊಗಡಿನ ಅಪ್ಪಟ ದೇಸಿ ಕಥೆ ಕಾಂತಾರ : ರಿಷಭ್ ಶೆಟ್ಟಿ

    ಮಣ್ಣಿನ ಸೊಗಡಿನ ಅಪ್ಪಟ ದೇಸಿ ಕಥೆ ಕಾಂತಾರ : ರಿಷಭ್ ಶೆಟ್ಟಿ

    ಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ಇನ್ನೊಂದು ಚಿತ್ರ ‘ಕಾಂತಾರ’ ಈ ಶುಕ್ರವಾರ (ಸೆ. 30) ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಈ ಚಿತ್ರವನ್ನು ರಿಷಭ್ ಶೆಟ್ಟಿ (Rishabh Shetty) ಬರೆದು ನಿರ್ದೇಶನ ಮಾಡಿದ್ದಾರೆ. ‘ಕಾಂತಾರ’ (Kantara), ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಎನ್ನುವ ರಿಷಬ್, ‘ನಾನು ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದೆ. ಅರಣ್ಯ ಇಲಾಖೆ, ಭೂಮಿ ಒತ್ತುವರಿ … ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ. ದಕ್ಷಿಣ ಕನ್ನಡದಲ್ಲಿ ಭೂಮಿ ಎಂದರೆ ಅದು ಬರೀ ಭೂಮಿಯಲ್ಲ, ಅದೊಂದು ಸಂಸ್ಕೃತಿ. ಅಲ್ಲಿನ ದೈವ, ಕಂಬಳ, ಭೂತಕೋಲ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ ಅವರು.

    ಈ ಚಿತ್ರದ ವಿಶೇಷತೆಯೆಂದರೆ, ಅದು ಕಂಬಳದ ದೃಶ್ಯಗಳು. ಚಿತ್ರದಲ್ಲಿ ರಿಷಬ್ ಕೋಣ ಓಡಿಸಿದ್ದು, ಅದೇ ಚಿತ್ರದ ಹೈಲೈಟ್ ಎಂದು ಹೇಳಲಾಗುತ್ತಿದೆ. ‘ಇಲ್ಲಿ ನಾಯಕ ಎಂಥವನು ಎಂದು ತೋರಿಸುವುದಕ್ಕೆ ಕಂಬಳದ ದೃಶ್ಯವೂ ಇದೆ. ಈ ಚಿತ್ರಕ್ಕಾಗಿ ಒಂದಿಷ್ಟು ದಿನ ಅಭ್ಯಾಸ ಮಾಡಿ ಕಂಬಳದಲ್ಲಿ ಭಾಗವಹಿಸಿದೆ. ಊರಿನ ನಮ್ಮನೆ ಗದ್ದೆಯಲ್ಲೇ ಕಂಬಳದ ಚಿತ್ರೀಕರಣದ ನಡೆದಿದ್ದು. ಇಡೀ ಚಿತ್ರದ ಚಿತ್ರೀಕರಣ ನಮ್ಮ ಊರಿನ ಸುತ್ತಮುತ್ತ ಆಗಿದೆ’ ಎನ್ನುತ್ತಾರೆ ರಿಷಬ್. ಇದನ್ನೂ ಓದಿ:ಅನುಚಿತವಾಗಿ ವರ್ತಿಸಿದ ಅಭಿಮಾನಿಗೆ ನಟಿ ಸಾನಿಯಾ ದಂಡಂ ದಶಗುಣಂ

    ಚಿತ್ರವನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು ಮಾತನಾಡಿ, ‘ನಮ್ಮ ಹೊಂಬಾಳೆ ಸಂಸ್ಥೆಯು ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡುವುದರ ಜೊತೆಗೆ ಒಂದೊಳ್ಳೆಯ ಸಂದೇಶವನ್ನು ಹೇಳಿದ್ದಾರೆ. ಈ ಚಿತ್ರ ಸಹ ಹೊಂಬಾಳೆಯ ಇತರೆ ಚಿತ್ರಗಳಂತೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಮತ್ತು ಕನ್ನಡಿಗರು ಈ ಚಿತ್ರವನ್ನು ಅಪ್ಪಿಕೊಂಡು, ನಮ್ಮನ್ನು ಆಶೀರ್ವದಿಸುತ್ತಾರೆ’ ಎಂಬ ನಂಬಿಕೆ ಇದೆ ಎನ್ನುತ್ತಾರೆ.

    ‘ಕಾಂತಾರ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ (Saptami Gowda), ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ (Ajaneesh Loknath) ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಚಿತ್ರವನ್ನು ರಾಜ್ಯದಲ್ಲಿ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ವಿತರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಇಬ್ಬನಿ ತಬ್ಬಿದ ಇಳೆಯಲಿ  ‘ಬ್ಯಾಚುಲರ್ ಪಾರ್ಟಿ’ ಕೊಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

    ಇಬ್ಬನಿ ತಬ್ಬಿದ ಇಳೆಯಲಿ ‘ಬ್ಯಾಚುಲರ್ ಪಾರ್ಟಿ’ ಕೊಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

    ಕ್ಷಿತ್ ಶೆಟ್ಟಿ ಈಗ ಕೇವಲ ನಾಯಕರಾಗಷ್ಟೇ ಅಲ್ಲ. ನಿರ್ಮಾಪಕರಾಗೂ ಜನಪ್ರಿಯ. ತಮ್ಮ ಪರಂವಃ ಸ್ಟುಡಿಯೋಸ್ ಮೂಲಕ ಯುವಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬರುತ್ತಿದ್ದಾರೆ ರಕ್ಷಿತ್ ಶೆಟ್ಟಿ.  ಪ್ರಸ್ತುತ ಪರಂವಃ ಸ್ಟುಡಿಯೋಸ್ ನಿರ್ಮಿಸುತ್ತಿರುವ “ಬ್ಯಾಚುಲರ್ ಪಾರ್ಟಿ” ಹಾಗೂ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಗಳ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

    ಚಿತ್ರರಂಗದಲ್ಲಿ ಹೊಸರೀತಿಯ ಕಥೆಗಳು ಬರಬೇಕು. ಹೊಸರೀತಿಯಲ್ಲಿ ಯೋಚಿಸುವ ಕಥೆಗಾರರನ್ನು ನಾವು ಬರಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಪರಂವಃ ಸ್ಟುಡಿಯೋಸ್ ಸದಾ ಸಿದ್ದ.ನನ್ನ ಜೊತೆ “ಕಿರಿಕ್ ಪಾರ್ಟಿ” ಸಮಯದಿಂದ ಜೊತೆಗಿರುವ ಚಂದ್ರಜಿತ್ ಬೆಳ್ಳಿಯಪ್ಪ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರವನ್ನು ಹಾಗೂ ಅಭಿಜಿತ್ ಮಹೇಶ್ “ಬ್ಯಾಚುಲರ್ ಪಾರ್ಟಿ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎರಡು ಬೇರೆಯದೇ ತರಹದ ಕಥೆಗಳು. ಎರಡು ಚಿತ್ರಗಳಿಗೂ ಶುಭವಾಗಲಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಕ್ಷಿತ್ ಶೆಟ್ಟಿ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ನನಗೆ ಅವಕಾಶ ನೀಡಿರುವ ರಕ್ಷಿತ್ ಶೆಟ್ಟಿ ಅವರಿಗೆ ಧನ್ಯವಾದ. “ಬ್ಯಾಚುಲರ್ ಪಾರ್ಟಿ” ಹಾಸ್ಯ ಪ್ರಧಾನವಾದ ಉತ್ತಮ ಮನೋರಂಜನೆಯ ಚಿತ್ರ. ದಿಗಂತ್ ಮಂಚಾಲೆ, ರಿಷಬ್ ಶೆಟ್ಟಿ, ಅಚ್ಯುತಕುಮಾರ್, ಸಿರಿ ರವಿಕುಮಾರ್ ಮುಂತಾದವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದರು ನಿರ್ದೇಶಕ ಅಭಿಜಿತ್ ಮಹೇಶ್. ನಾನು, ಅಭಿಜಿತ್ ಹಾಗೂ ಚಂದ್ರಜಿತ್ ಒಟ್ಟಾಗಿ “ಕಿರಿಕ್ ಪಾರ್ಟಿ” ಯಲ್ಲಿ ಕೆಲಸ ಮಾಡಿದವರು. ಈಗ ಮತ್ತೊಮ್ಮೆ ಒಟ್ಟಾಗಿ ಸೇರಿದ್ದೇವೆ‌. ಅಭಿಜಿತ್ ಮಹೇಶ್ “ಬ್ಯಾಚುಲರ್ ಪಾರ್ಟಿ” ಯಲ್ಲಿ ಒಳ್ಳೆಯ ಪಾತ್ರ ನೀಡಿದ್ದಾರೆ. ಎರಡೂ ತಂಡಕ್ಕೂ ಒಳಿತಾಗಲಿ ಎಂದರು ರಿಷಬ್ ಶೆಟ್ಟಿ.

    ನನಗೆ ಪರಂವಃ ಸ್ಟುಡಿಯೋಸ್ ನಲ್ಲಿ ಇದು ಎರಡನೇ ಚಿತ್ರ. ಅಭಿಜಿತ್ ಮಹೇಶ್ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಎಲ್ಲರನ್ನು ನಕ್ಕು ನಗಿಸುವ ಉತ್ತಮ ಕಾಮಿಡಿ ಜಾನರ್ ನ ಚಿತ್ರ ಇದಾಗಲಿದೆ ಎಂದು ನಟ ದಿಗಂತ್ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸುತ್ತಿರುವ ಸಿರಿ ರವಿಕುಮಾರ್ ಹಾಗೂ ಜಯಲಕ್ಷ್ಮಿ ಸಹ ಪತ್ರಿಕಾಗೋಷ್ಠಿಯಲ್ಲಿದ್ದರು. ಚಿತ್ರದ ಆರಂಭದ ದಿನದಿಂದಲೂ  ನನ್ನ ತಂಡಕ್ಕೆ ಒಳ್ಳೆಯ ಕನಸುಗಳನ್ನು ತುಂಬಿದ್ದೀನಿ. ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ನಂಬಿ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಹಣ ವಾಪಸು ಬರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.‌ ನೋಡಿದ ಜನ ಕೆಲವು ವರ್ಷಗಳವರೆಗೂ  ನೆನಪಿನಲ್ಲಿಟ್ಟಿಕೊಳ್ಳಬೇಕು ಅಂತಹ ಸಿನಿಮಾ ಮಾಡಲು ಪ್ರಯತ್ನ ಮಾಡುತ್ತೇನೆ. ರಾತ್ರಿ ಮಲಗಿದ್ದಾಗ ಒಂದು ಒಳ್ಳೆಯ ಕನಸು ಬೀಳುತ್ತದೆ. ಆ ಕನಸಿನಿಂದ ಬೆಳಗ್ಗೆ ಎದ್ದ ಕೂಡಲೇ ಒಂದು ತರಹ ಉತ್ಸಾಹವಿರುತ್ತದೆ. ಆ ರೀತಿ ನಮ್ಮ ಚಿತ್ರದ ಕಥೆ ಸಾಗುತ್ತದೆ. “ಇಬ್ಬನಿ ತಬ್ಬಿದ ಇಳೆಯಲಿ” ಒಂದೊಳ್ಳೆ ರೊಮ್ಯಾನ್ಸ್ ಡ್ರಾಮ ಎನ್ನಬಹುದು ಎಂದು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇಂತಹ ಒಳ್ಳೆಯ ತಂಡದ ಜೊತೆಗೆ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದು ನಾಯಕ ವಿಹಾನ್ ತಿಳಿಸಿದರು. “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರದಲ್ಲಿ  ಅಭಿನಯಿಸುತ್ತಿರುವುದು ಖುಷಿ ತಂದಿದೆ. ಪಾತ್ರ ಕೂಡ ಚೆನ್ನಾಗಿದೆ.‌ ಇದು ನನ್ನ ಮೊದಲ ಪತ್ರಿಕಾಗೋಷ್ಠಿ ಎಂದರು ನಾಯಕಿ ಅಂಕಿತಾ ಅಮರ್.

    Live Tv
    [brid partner=56869869 player=32851 video=960834 autoplay=true]

  • ಸೆ.5ಕ್ಕೆ ರಿಷಭ್ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾದ ಟ್ರೈಲರ್ ರಿಲೀಸ್

    ಸೆ.5ಕ್ಕೆ ರಿಷಭ್ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾದ ಟ್ರೈಲರ್ ರಿಲೀಸ್

    ನ್ನಡದ ಹೆಸರಾಂತ ನಿರ್ದೇಶಕ, ನಟ ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಮತ್ತೊಂದು ದೃಶ್ಯ ತುಣುಕು ಇದೇ ಸೆಪ್ಟಂಬರ್ 5 ರಂದು ಬಿಡುಗಡೆ ಆಗಲಿದೆ. ಕಾಂತಾರ ಸಿನಿಮಾದ ಟ್ರೈಲರ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ ಹೊಂಬಾಳೆ ಫಿಲ್ಮ್ಸ್. ಎಲ್ಲರೂ ಇಷ್ಟ ಪಡುವಂತಹ ಟ್ರೈಲರ್ ಇದಾಗಲಿದೆ ಎಂದಿದ್ದಾರೆ ನಿರ್ದೇಶಕರು.

    ಭಾರತ ಚಿತ್ರರಂಗಕ್ಕೆ “ಕೆ.ಜಿ.ಎಫ್” ಎಂಬ ಅತ್ಯುತ್ತಮ ಚಿತ್ರ ನೀಡಿರುವ  ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ “ಕಾಂತಾರ” ಚಿತ್ರದ ಟ್ರೈಲರ್ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಶುಭದಿನದಂದು ಬಿಡುಗಡೆಯಾಗಲಿದೆ.  ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಈಗಾಗಲೇ ಹಲವು ವಿಶೇಷಗಳಿಂದ “ಕಾಂತಾರ” ಮನೆಮಾತಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಸಂಸ್ಕೃತಿಯನ್ನು ಬಿಂಬಿಸುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ “ಸಿಂಗಾರ ಸಿರಿಯೆ” ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ಬಿಡುಗಡೆಯಾಗಲಿರುವ ಟ್ರೈಲರ್ ಹಾಗೂ ಚಿತ್ರಕ್ಕಾಗಿ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಹಾಡು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಈ  ಚಿತ್ರದ ‘ಸಿಂಗಾರ ಸಿರಿಯೆ’ ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ರಿಷಭ್ ಕಂಡು ಅಭಿಮಾನಿಗಳು ಮಸ್ತ್ ಮಸ್ತ್‍ ಎಂದು ಅವರದ್ದೇ ಶೈಲಿಯ ಡೈಲಾಗ್ ಹೇಳುತ್ತಿದ್ದಾರೆ.

    ಅಜನೀಶ್ ಲೋಕನಾಥ್ ಸಂಗೀತ ನೀಡಿ, ಪ್ರಮೋದ್ ಮರವಂತೆ ಬರೆದಿರುವ “ಸಿಂಗಾರ ಸಿರಿಯೆ” ಹಾಡಿನಲ್ಲಿ ಕರುನಾಡ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ತೋರಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ.  ಅಲ್ಲದೇ ಹಾಡಿನ ಕಾನ್ಸೆಪ್ಟ್ ಕೂಡ ನೋಡುಗರಿಗೆ ಹಿಡಿಸಿದೆ. ಹೀಗಾಗಿ ಈ ಗೀತೆಯನ್ನು ಅಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ವಿಜಯ್ ಪ್ರಕಾಶ್,   ಅನನ್ಯ ಭಟ್ ಹಾಗೂ ಪನ್ನಾರ್ ವಲ್ಟುರ್ ಅವರ ಇಂಪಾದ ಗಾಯನ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಅಭಿನಯ ಅದ್ಭುತವಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರ ಯಾವಾಗ ತೆರೆಗೆ ಬರುವುದೊ? ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್

    ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್

    ನ್ನಡ ಚಿತ್ರರಂಗಕ್ಕೆ ಕೆ‌.ಜಿ.ಎಫ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಸಿರುವ “ಕಾಂತಾರ” ಚಿತ್ರದ ಮೊದಲ ಹಾಡು ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಹೆಸರಾಂತ ನಟ – ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿರುವುಲ್ಲದೆ, ನಾಯಕರಾಗೂ ನಟಿಸಿದ್ದಾರೆ.

    ಪ್ರಮೋದ್ ಮರವಂತೆ ರಚಿಸಿರುವ “ಸಿಂಗಾರ ಸಿರಿಯೆ” ಎಂಬ  ಮನಮೋಹಕ ಹಾಡಿನಲ್ಲಿ  ಜಾನಪದ ಸೊಗಡನ್ನು ಎತ್ತಿಹಿಡಿಯಲಾಗಿದೆ.  ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಈಗಾಗಲೇ ಸಿನಿಮಾದ ಟೀಸರ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿದ್ದು, ಸಾಕಷ್ಟು ನಿರೀಕ್ಷೆ ಕೂಡ ಮೂಡಿಸಿದೆ. ರಿಷಬ್ ಶೆಟ್ಟಿ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಬಹುತೇಕವಾಗಿ ಹಿಟ್ ಆಗುತ್ತಿರುವುದರಿಂದ, ಈ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೇ, ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳ ಚಿತ್ರ ಪ್ರೇಕ್ಷಕರನ್ನೂ ರಂಜಿಸಲಿದೆಯಂತೆ. ಅಂದಹಾಗೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಕ್ಷಿತ್ ಶೆಟ್ಟಿಗಾಗಿ ಒಂದಾಗಲಿದ್ದಾರೆ ರಿಷಭ್ ಶೆಟ್ಟಿ ಮತ್ತು ದಿಗಂತ್

    ರಕ್ಷಿತ್ ಶೆಟ್ಟಿಗಾಗಿ ಒಂದಾಗಲಿದ್ದಾರೆ ರಿಷಭ್ ಶೆಟ್ಟಿ ಮತ್ತು ದಿಗಂತ್

    ಕ್ಷಿತ್ ಶೆಟ್ಟಿ ಬ್ಯಾನರ್ ನಿಂದ ಮೂಡಿ ಬಂದ ಚಾರ್ಲಿ 777 ಸಿನಿಮಾ ನಿರೀಕ್ಷೆಗೂ ಮೀರಿ ಗೆದ್ದಿದೆ. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಿರುವ ಚಾರ್ಲಿಯ ಖುಷಿಯಲ್ಲಿರುವ ರಕ್ಷಿತ್ ಶೆಟ್ಟಿ, ತಮ್ಮ ಬ್ಯಾನರ್ ನಿಂದ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಮತ್ತು ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಸಿನಿಮಾವನ್ನು ಅಭಿಜಿತ್ ಮಹೇಶ್ ಎನ್ನುವವರು ನಿರ್ದೇಶನ ಮಾಡಲಿದ್ದಾರೆ.

    ರಕ್ಷಿತ್ ಶೆಟ್ಟಿ ಬಳಗದಲ್ಲೇ ಗುರುತಿಸಿಕೊಂಡಿರುವ ಅಭಿಜಿತ್ ಮಹೇಶ್ ಅವರಿಗೆ ಇದು ಚೊಚ್ಚಲ ಸಿನಿಮಾ. ಆದರೆ, ರಕ್ಷಿತ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿಯೇ ಈ ಹುಡುಗನಿಗಾಗಿ ಪರಮ್ ಸ್ಟುಡಿಯೋಸ್ ಬೆನ್ನಿಗೆ ನಿಂತಿದೆ. ಇದೇ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈಗಾಗಲೇ ಸಿನಿಮಾದ ಕೆಲಸ ಭರದಿಂದ ಸಾಗಿದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಇದೇ ಮೊದಲ ಬಾರಿಗೆ ರಿಷಭ್ ಮತ್ತು ದಿಗಂತ್ ಜೊತೆಯಾಗುತ್ತಿದ್ದು, ಇಬ್ಬರಿಗೂ ಹೊಸ ಬಗೆಯ ಪಾತ್ರವನ್ನು ಬರೆದುಕೊಂಡಿದ್ದಾರಂತೆ ನಿರ್ದೇಶಕರು. ಸದ್ಯ ರಿಷಭ್ ಕಾಂತಾರ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ಬೆಲ್ ಬಾಟಮ್ 2 ಸಿನಿಮಾ ಕೂಡ ಅವರು ಮಾಡಬೇಕಿದೆ. ದಿಗಂತ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗಾಗಿ ಕೆಲ ತಿಂಗಳ ನಂತರ ಈ ಸಿನಿಮಾ ಶುರುವಾಗಲಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ವಿದ್ಯಾಪೀಠ 5ನೇ ಆವೃತ್ತಿಗೆ ಅದ್ಧೂರಿ ಚಾಲನೆ- ಮೊದಲ ದಿನವೇ ವಿದ್ಯಾರ್ಥಿಗಳು, ಪೋಷಕರ ಸಾಗರ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋ ಗೆ ಶುಕ್ರವಾರ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಯಶಸ್ವಿಯಾಗಿದೆ.

    ವಿದ್ಯಾಪೀಠ ಎಕ್ಸ್ಪೋ 5ನೇ ಆವೃತ್ತಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಮತ್ತು ಮುಖ್ಯ ಅತಿಥಿಗಳು ಚಾಲನೆ ನೀಡಿದರು. ಗಾರ್ಡನ್ ಸಿಟಿ ವಿವಿಯ ಚಾನ್ಸಲರ್ ಡಾ.ವಿ.ಜೆ.ಜೋಸೆಫ್, ರಾಮಯ್ಯ ಕಾಲೇಜ್ ವಿವಿ ಕುಲಪತಿ ಡಾ.ಕುಲದೀಪ್ ರೈನಾ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ರಾಜೀವ್ ಗೌಡ, ನಿತಿನ್ ಮೋಹನ್, ಅದ್ವಿತೀಯ ಉದಯ್ ಭಾಗವಹಿಸಿ, ಮೊದಲ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

    ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಸಾಗರೋಪಾದಿಯಲ್ಲಿ ಹರಿದುಬಂದರು. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ

    ಎಕ್ಸ್‌ಪೋ 5ನೇ ಆವೃತ್ತಿಯಲ್ಲಿ 80ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗವಹಿಸಿವೆ. ವಿವಿಧ ಕೋರ್ಸ್‌ಗಳ ಮಾಹಿತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ತಜ್ಞರು, ಸಾಧಕರಿಂದ ಆತ್ಮಸ್ಥೈಯ ಮೂಡಿಸುವ ಉಪನ್ಯಾಸಗಳನ್ನು ನೀಡಲಾಗಿದೆ.

    ಮೊದಲ ದಿನ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ Build Confidence Through Value Based Education ಕುರಿತು ಉಪನ್ಯಾಸ ನೀಡಿದರು. ನಂತರ ಐಎಎಸ್ ಟಾಪರ್‌ಗಳಾದ ರಾಜೇಶ್ ಪೊನ್ನಪ್ಪ ಹಾಗೂ ಅರುಣ ಅವರು ತಮ್ಮ ಸಾಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನೂ ನೀಡಿದರು. ಇದೇ ವೇಳೆ ಎಕ್ಸ್‌ಪೋ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾರ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 816 ಮಂದಿಗೆ ಕೊರೊನಾ- ಸಾವಿನ ಪ್ರಕರಣ ಶೂನ್ಯ

    ಸಿನಿ ತಾರೆಯರಿಂದಲೂ ಶುಭಹಾರೈಕೆ: ಎಕ್ಸ್‌ಪೋ ದಲ್ಲಿ ಭಾಗವಹಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ, ನಟ ರಾಜು ಬಿ.ಶೆಟ್ಟಿ, ನಟಿ ಸುಧಾರಾಣಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

    ಒಟ್ಟಾರೆ ಮೊದಲ ದಿನದ ಎಕ್ಸ್‌ಪೋ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನೂ ಎರಡು ದಿನಗಳ ಕಾಲ ಎಕ್ಸ್‌ಪೋ ನಡೆಯಲಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

    Live Tv