ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ (Kantara) ಸಿನಿಮಾ ಇಂದಿನಿಂದ ಹಿಂದಿಯಲ್ಲಿ (Hindi) ರಿಲೀಸ್ ಆಗಿದೆ. ನಾಳೆ ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ತಮಿಳಿನಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲಿ 2500ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿದ್ದು, ತೆಲುಗು ಮತ್ತು ತಮಿಳಿನಲ್ಲೂ ನೂರಾರು ಚಿತ್ರಮಂದಿರಗಳು ಕಾಂತಾರಗಾಗಿ ಕಾಯುತ್ತಿವೆ.
ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ (Bollywood), ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್, ಕಾಂತಾರದ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ:ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್
ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ (Release) ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.
ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡ, ತೆಲುಗು (Telugu), ತಮಿಳು (Tamil) ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಕಾಂತಾರ (Kantara) ಸಿನಿಮಾ ನಾಳೆಯಿಂದ ಹಿಂದಿಯಲ್ಲಿ (Hindi) 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್, ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್, ಕಾಂತಾರದ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ.
ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಅಕ್ಟೋಬರ್ 14 ರಂದು ಹಿಂದಿಯಲ್ಲಿ, 15 ರಂದು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ (Release) ಆಗುತ್ತಿದೆ. ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ (Rishabh Shetty) ಬಾಲಿವುಡ್ (Bollywood) ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.
ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.
Live Tv
[brid partner=56869869 player=32851 video=960834 autoplay=true]
ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ “ಕಾಂತಾರ” (Kantara) ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ (Rishabh Shetty) ಅವರಿಗೆ ನಿಜಕ್ಕೂ ಅಭಿನಂದನೆ ಸಲ್ಲಬೇಕು.
ಸ್ಯಾಂಡಲ್‌ವುಡ್‌ನಲ್ಲಿ ಈಗ ಎಲ್ಲಿ ನೋಡಿದರೂ “ಕಾಂತಾರ”ದ್ದೇ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕೂಡ. ಇಂತಹ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ (Hindi) ಭಾಷೆಯಲ್ಲೂ “ಕಾಂತಾರ” ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ “ಕಾಂತಾರ” ಪ್ರದರ್ಶನವಾಗಲಿದೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ “ಕೆ.ಜಿ.ಎಫ್ 2” ಬಾಲಿವುಡ್ (Bollywood) ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿದ್ದು ಗಮನಾರ್ಹ. ಈಗ “ಕಾಂತಾರ” ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ (Vijay Kirgandur) ವಿಜಯ್ ಕಿರಗಂದೂರು.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿದ ಇಂದಿಗೆ ಒಂದು ವಾರ ಕಳೆದಿದೆ. ಇಂದಿನಿಂದ ಎರಡನೇ ವಾರದ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ (Box Office) ವಿಚಾರದಲ್ಲಿ ಅಚ್ಚರಿಯನ್ನೇ ಮೂಡಿಸುತ್ತಾ ಬಂದಿರುವ ಸಿನಿಮಾ, ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಏರುಗತಿಯಲ್ಲೇ ಸಾಗಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಸಂಭ್ರಮದಲ್ಲಿದೆ.
ಕಾಂತಾರ ಸಿನಿಮಾ ರಿಲೀಸ್ ಆಗಿ ಇಂದಿಗೆ ಎಂಟನೇ ದಿನ. ಇವತ್ತೂ ಕೂಡ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ವಾರದಿಂದ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಿವೆ. ಈ ವಾರವೂ ಹೇಳಿಕೊಳ್ಳುವಂತಹ ಯಾವುದೇ ಸಿನಿಮಾಗಳು ರಿಲೀಸ್ ಆಗದೇ ಇರುವ ಕಾರಣಕ್ಕಾಗಿ ಮತ್ತಷ್ಟು ಹಣ ಇದೇ ಸಿನಿಮಾಗೆ ಹರಿದು ಬರಲಿದೆ. ಇದನ್ನೂ ಓದಿ :ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ
ಸಿನಿಮಾ ರಿಲೀಸ್ ಆದ ಮೊದಲ ದಿನವೇ 4 ರಿಂದ 5 ಕೋಟಿ ಕಲೆಕ್ಷನ್ (Collection) ಮಾಡಿದೆ ಎಂದು ಅಂದಾಜಿಸಲಾಗಿತ್ತು. ಎರಡನೇ ದಿನ 6.50 ಕೋಟಿ, ಮೂರನೇ ದಿನ 8 ರಿಂದ 9 ಕೋಟಿ, ನಾಲ್ಕನೇ ದಿನ 5 ಕೋಟಿ, ಐದನೇ ದಿನ 7 ಕೋಟಿ, ಆರನೇ ದಿನ 8 ಕೋಟಿ, ಏಳನೇ ದಿನ 6 ಕೋಟಿ ಕಲೆಕ್ಷನ್ ಆಗಿದೆ ಎಂದು ಅಂದಾಜು ಲೆಕ್ಕಾಚಾರಗಳು ಹರಿದಾಡುತ್ತಿವೆ. ಎಂಟನೇ ದಿನ ಕೂಡ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿರುವುದರಿಂದ 6 ಕೋಟಿ ರೂಪಾಯಿ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಲ್ಲಿಗೇ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ 50 ಕೋಟಿ ಹಣ ಬಂದಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಸಿನಿಮಾ ತಂಡವಾಗಲಿ, ನಿರ್ಮಾಪಕರಾಗಲಿ ಅಧಿಕೃತ ಮಾಹಿತಿ ಕೊಡದೇ ಇದ್ದರೂ, ವಿತರಕರ ವಲಯದಿಂದ ಮತ್ತು ಸಿನಿ ಪಂಡಿತರಿಂದ ಇಂಥದ್ದೊಂದು ಲೆಕ್ಕಾಚಾರವಂತೂ ನಡೆದಿದೆ. ಈವರೆಗೂ ಕಾಂತಾರದಿಂದ ಬಂದಿರುವ ಹಣವೆಷ್ಟು ಎನ್ನುವುದನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬಹಿರಂಗ ಪಡಿಸಬೇಕಿದೆ. ಬಹುಶಃ ಮುಂದಿನ ದಿನಗಳಲ್ಲಿ ಅಧಿಕೃತವಾಗಿಯೇ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ಸಿಗಬಹುದು.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿವೆ. ಮೊದಲನೇ ದಿನದಿಂದಲೂ ಈವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ 25 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಪ್ರೇಕ್ಷಕನೂ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರೆ, ಶಿವಮೊಗ್ಗದಲ್ಲಿ ವಿಕೃತ ಮನಸ್ಸಿನವರು ಅವಹೇಳನ (Insulting) ಮಾಡಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಕಾಂತಾರ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಶಿವಮೊಗ್ಗದ ಗೋಡೆ ಗೋಡೆಗಳ ಮೇಲೆ ಕಾಂತಾರ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ. ಆ ಪೋಸ್ಟರ್ ನೋಡಿ ಕಣ್ತುಂಬಿಕೊಳ್ಳಬೇಕಾಗಿದ್ದ ಕೆಲ ವಿಕೃತ ಮನಸ್ಸಿನವರು ಪೋಸ್ಟರ್ ಮೇಲೆ ವಿಕೃತ ಬರಹವನ್ನೇ (Writing) ಬರೆದಿದ್ದಾರೆ. ದೇವರಿಗೆ ಅವಹೇಳನ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಈ ಬರಹವುಳ್ಳ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ‘F * * K YOU G * D’ ಅಂತಾ ಕಿಡಿಗೇಡಿಗಳು ಬರೆದಿದ್ದು, ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು (Police) ಭೇಟಿ ಪರಿಶೀಲನೆ ಮಾಡಿದ್ದು, ತಕ್ಷಣವೇ ಅವಹೇಳನಕಾರಿ ಬರಹ ತೆಗೆಸಿದ್ದಾರೆ ಪೊಲೀಸರು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ಮಾಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ರೀತಿಯಲ್ಲಿ ದೇವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ವೇದಿಕೆಯ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾಂತಾರ ಸಿನಿಮಾದ ನಂತರ ಹುಟ್ಟಿಕೊಂಡ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ಒಂದು ಕಡೆ. ಕನ್ನಡ ಸಿನಿಮಾಗಳಲ್ಲಿನ ಪ್ರಾದೇಶಿಕತೆ ಮತ್ತು ಸೊಗಡಿನ ಚರ್ಚೆ ಒಂದು ಕಡೆ. ಮೊದಲನೆಯ ಚರ್ಚೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಎರಡನೆಯ ಚರ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.. ಕನ್ನಡ ಸಿನಿಮಾಗಳಲ್ಲಿ ಇದುವರೆಗೆ ಬರೀ ಬೆಂಗಳೂರು, ಮಂಡ್ಯ, ಮೈಸೂರು, ಮಲೆನಾಡಿನ ಪ್ರಾದೇಶಿಕತೆ ಅಥವಾ ಪರಿಸರ ಅಥವಾ ಸೊಗಡು ಮಾತ್ರ ಇರುತ್ತಿತ್ತು. ಈಗ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಹೆಚ್ಚೆಚ್ಚು ಪ್ರಸಿದ್ಧವಾಗುತ್ತಿದೆ ಆದರೆ “ಎಂದಿನಂತೆ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಕನ್ನಡ ಚಿತ್ರರಂಗ ಕಡೆಗಣಿಸುತ್ತದೆ” ಎಂಬುದು. ಉತ್ತರ ಕರ್ನಾಟಕದ ಸೊಗಡನ್ನು ಹಾಸ್ಯಾಸ್ಪದವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂಬು ದೂರು ಮೊದಲಿನಿಂದಲೂ ಕೇಳುತ್ತಿದೆ, ಈಗಲೂ ಇದೆ. ಉತ್ತರ ಕರ್ನಾಟಕದಲ್ಲಿ ಒಂದು ಫಿಲ್ಮ್ ಚೇಂಬರ್ ಮಾಡಿದರೆ ಈ ಸಮಸ್ಯೆ ಸರಿಹೋಗುತ್ತದೆ, ಎಲ್ಲದಕ್ಕೂ ಬೆಂಗಳೂರಿನ ಮೇಲೆ ಅವಲಂಬಿತವಾಗುವುದರಿಂದಲೇ ಹೀಗಾಗಿದೆ, ಉತ್ತರ ಕರ್ನಾಟಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟಿದೆ, ಈಗ ಸಾಂಸ್ಕೃತಿಕವಾಗಿಯೂ ಕಡೆಗಣಿಸಲ್ಪಡುತ್ತಿದೆ ಎಂಬುದು ಸಾಮಾಜಿಕ ತಾಣಗಳ ಕಮೆಂಟ್ಸುಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು.
ವಾಸ್ತವದಲ್ಲಿ “ಫಿಲ್ಮ್ ಚೇಂಬರ್” ಮತ್ತು “ಪ್ರಾದೇಶಿಕತೆ” ಎರಡಕ್ಕೂ ಸಂಬಂಧವೇ ಇಲ್ಲ. ಸದ್ಯಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೆಚ್ಚಾಗಿ ಸಕ್ರಿಯವಾಗಿರುವುದು ಸಿನಿಮಾದ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಕೆಲಸದಲ್ಲಿ ಮತ್ತು ಯಾವುದಾದರೂ ಸಮಸ್ಯೆ ಅಥವ ವಿವಾದ ಹುಟ್ಟಿಕೊಂಡಾಗ ಅದನ್ನು ಬಗೆಹರಿಸುವ ಪ್ರಯತ್ನದಲ್ಲಿ. ಸಿನಿಮಾದ ಹೆಸರು ನೋಂದಾಯಿಸಲು ಮತ್ತು ಸಿನಿಮಾದ ಸೆನ್ಸಾರ್ ಮಾಡಿಸಲು ಬೆಂಗಳೂರಿನ ಮೇಲೆ ಅವಲಂಬಿತವಾಗಬೇಕು ಹೊರತು, ಒಟ್ಟು ಸಿನಿಮಾ ಮಾಡಲು ಬೆಂಗಳೂರನ್ನು ಅವಲಂಬಿಸುವ ಅಗತ್ಯವೇ ಇಲ್ಲ. ಸೆನ್ಸಾರ್ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ, ಅದು ರಾಜ್ಯ ರಾಜಧಾನಿಯಲ್ಲದೇ ಬೇರೆಲ್ಲೂ ಬ್ರಾಂಚ್ ಆಫೀಸ್ ತೆರೆಯುವುದಿಲ್ಲ. ಸಿನಿಮಾ ಹೆಸರಿನ ದೃಢೀಕರಣ ಪತ್ರವಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯ ನಡುವೆ ಇರುವ ನಂಟು. ಉಳಿದಂತೆ ಸಿನಿಮಾದ ಬೇರೆ ಎಲ್ಲ ಕೆಲಸಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಿ ಕುಳಿತು ಮಾಡಿಕೊಳ್ಳಬಹುದು. ತಂತ್ರಜ್ಞರು, ನಟರು ಮತ್ತು ಚಿತ್ರೀಕರಣಕ್ಕೆ ಅಗತ್ಯ ಉಪಕರಣಗಳನ್ನು ಸರಬರಾಜು ಮಾಡುವವರನ್ನು ಫೋನ್ ಮೂಲಕ ಸಂಪರ್ಕಿಸಿ, ವಿಡಿಯೋ ಕಾಲ್ ಮೂಲಕ ಭೇಟಿ ಮಾಡಿ ಮಾತನಾಡಿಕೊಂಡು, ಆನ್-ಲೈನ್ ಪೇಮೆಂಟ್ ಮಾಡಿ, contract mail confirmation ತೆಗೆದುಕೊಂಡು, physical documentationಗಳನ್ನು ಕೊರಿಯರ್ ಅಥವ speed post ಮೂಲಕ ವಿನಿಮಯ ಮಾಡಿಕೊಳ್ಳಬಹುದು.. ಇದನ್ನೂ ಓದಿ: ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಮಂಗಳೂರು ಸಹ ಬೆಂಗಳೂರಿನಿಂದ ಬಲುದೂರವೇ ಇದ್ದರೂ ಕನ್ನಡ ಸಿನಿಮಾದಲ್ಲಿ ಕರಾವಳಿಯ ಪ್ರಾದೇಶಿಕತೆ ಮತ್ತು ಸೊಗಡು ಪಸರಿಸಲು ಸಾಧ್ಯವಾಗುತ್ತದೆಂದರೆ, ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡು ಸಿನಿಮಾದಲ್ಲಿ ಬಳಕೆಯಾಗಲು ಬೆಂಗಳೂರು ದೂರವೆಂಬುದು ಕಾರಣ ಹೇಗಾಗುತ್ತದೆ!? ಜಿಲ್ಲೆಗೊಂದರಂತೆ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತೆರೆದರೂ ಅದು ಸಾಧ್ಯವಾಗುವುದಿಲ್ಲ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಎಲ್ಲ ಭಾಷೆಗಳ ಸಿನಿಮಾರಂಗಗಳಲ್ಲೂ ತಲಾ ಒಂದೊಂದೇ ಚಲನಚಿತ್ರ ವಾಣಿಜ್ಯ ಮಂಡಳಿಗಳಿದೆ. ಆದರೂ ಆಯಾ ಭಾಷೆಗಳ ಸಿನಿಮಾಗಳಲ್ಲಿ ಆಯಾ ಭಾಗದ ಎಲ್ಲ ಪ್ರಾದೇಶಿಕ ಸೊಗಡನ್ನು ಸಿನಿಮಾಗಳ ಮೂಲಕ ಜನರಿಗೆ ಪರಿಚಯ ಮಾಡಲಾಗಿದೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ಆಪ್ತವಾಗಿಸಲಾಗಿದೆ. ಅಲ್ಲಿ ಸಾಧ್ಯವಾದದ್ದು ಕನ್ನಡದಲ್ಲಿ ಯಾಕೆ ಸಾಧ್ಯವಾಗಿಲ್ಲ..?
ಇಚ್ಛಾಶಕ್ತಿಯ ಕೊರತೆ..!?
ಬೆಂಗಳೂರು, ಮೈಸೂರು, ಮಲೆನಾಡು ಮತ್ತು ಕರಾವಳಿ ಭಾಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ನಟರ, ರಂಗಭೂಮಿಯ ಹಿನ್ನೆಲೆ, ಇತಿಹಾಸ ಉತ್ತರ ಕರ್ನಾಟಕದ ಭಾಗದಲ್ಲಿದೆ. ಸಾಹಿತ್ಯಾಸಕ್ತರು, ಓದುಗರು ಮತ್ತು ಸಾಹಿತಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದೂ ಉತ್ತರ ಕರ್ನಾಟಕ ಎಂದರೆ ಸೂಳಿಮಗನ, ಅವನೌನ, ಬೋಸುಡಿಮಗನಾ, ಬಾಡ್ಕೋ, ಹಡ್ಶಿಮಗನಾ, ಹಡಾ ಎಂಬಿತ್ಯಾದಿ “ಬೈಗುಳಗಳೇ ನಮಗೆ ಭೂಷಣ, ಅವು ಬೈಗುಳಗಳಲ್ಲ ಬಹುಮಾನ” ಎಂದು ಬಿಂಬಿಸುತ್ತಾ, ಮೊದಲಿನಿಂದಲೂ ಉತ್ತರ ಕರ್ನಾಟಕ ಎಂದರೆ ಬೈಗುಳದ ಪದಗಳ ತವರು ಎಂಬ ತಪ್ಪು ಕಲ್ಪನೆಯನ್ನು ಮೂಡಿಸಲಾಗಿದೆ. ಇಂದಿನ 5G ಕಾಲದ ಉತ್ತರ ಕರ್ನಾಟಕದ Instagram, Facebook, YouTube Reels starಗಳು, double meaning short film ಶೂರರು ಉತ್ತರ ಕರ್ನಾಟಕ ಪ್ರಾದೇಶಿಕತೆ, ಪರಿಸರ ಮತ್ತು ಸೊಗಡನ್ನು ಅದೇ ರೀತಿಯಾಗಿ ಕಟ್ಟಿಕೊಡುತ್ತಿದ್ದಾರೆ. ಅದನ್ನು ಮೀರಿದ ಉತ್ತರ ಕರ್ನಾಟಕವನ್ನು ಯಾಕೆ ಕಟ್ಟಿಕೊಡುತ್ತಿಲ್ಲ? ಆ ಭಾಗದಲ್ಲಿ ಬರೆಯುವವರು ಕಡಿಮೆ ಇಲ್ಲ, ನಟಿಸುವವರು ಕಡಿಮೆ ಇಲ್ಲ, ಭೌಗೋಳಿಕವಾಗಿ ಸಾಕಷ್ಟು ವೈವಿದ್ಯತೆ ಇರುವ ಭಾಗ. ಉತ್ತರ ಕರ್ನಾಟಕ ಭಾಗದಿಂದ ಬಂದ ನಿರ್ಮಾಪಕರು, ನಟರು, ಬರಹಗಾರರು ಮತ್ತು ನಿರ್ದೇಶಕರುಗಳೂ ಸಹ ಸಿನಿಮಾದಲ್ಲಿ ಆ ಭಾಗದ ಪ್ರಾದೇಶಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇರುವುದು ಬೇಸರದ ವಿಚಾರವೇ.
ಕರ್ನಾಟಕದ ಒಂದು ಪ್ರಾದೇಶಿಕ ಸೊಗಡು ಕರ್ನಾಟಕದ ಇತರೆ ಭಾಗದ ಜನರಿಗೆ ಅರ್ಥವಾಗುವುದಿಲ್ಲ, ಆ ಕಾರಣಕ್ಕೆ ಸಿನಿಮಾಗಳಲ್ಲಿ ಬಳಕೆ ಆಗುತ್ತಿಲ್ಲ ಎಂಬುದು ಸುಳ್ಳು. ಕನ್ನಡದ ಮಕ್ಕಳ ಕರುಳ ಬಳ್ಳಿ ಒಂದೇ, ಕನ್ನಡದವರಿಗೆ ಕನ್ನಡವೇ ಅರ್ಥವಾಗುವುದಿಲ್ಲ ಅನ್ನುವ ನೆಪವನ್ನು ಒಪ್ಪಲಾಗದು. ಕೋಲಾರ-ಮುಳಬಾಗಿಲು ಭಾಗದ ಕನ್ನಡ ಮಿಶ್ರಿತ ತೆಲುಗು ಸೊಗಡನ್ನು ಬಳಸಿಕೊಂಡು ನಿರ್ಮಿಸಿದ “ಸಿನಿಮಾಬಂಡಿ” ಎಂಬ ಹೆಸರಿನ ಸಿನಿಮಾವನ್ನು ಆ ಭಾಷೆ ಅರ್ಥವಾಗದ, ಸಬ್ ಟೈಟಲ್ ಓದಲು ಬರದ ಹಲವಾರು ಕನ್ನಡಿಗರೂ ನೋಡಿ ಮೆಚ್ಚಿದ್ದಾರೆ.. “ಅಪರೇಷನ್ ಜಾವಾ” ಎಂಬ ಸಬ್ ಟೈಟಲ್ಸ್ ಇಲ್ಲದ ಅಪ್ಪಟ ಮಲಯಾಳಂ ಸಿನಿಮಾ ಬಗ್ಗೆ ಕನ್ನಡದ ಪ್ರೇಕ್ಷಕರು ಹೊಗಳಿ ಬರೆದಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ “ಕಮರ್ಷಿಯಲ್” “ಮಾಸ್” “ಆಕ್ಷನ್” ಎನ್ನಿಸಿಕೊಳ್ಳುವ ಮಾದರಿಯ ಸಿನಿಮಾಗಳಿಗೆ ಸಿಕ್ಕುವ ಬೆಂಬಲ ಪ್ರಯೋಗಾತ್ಮಕ ಸಿನಿಮಾಗಳಿಗೆ ಸಿಕ್ಕಿದ್ದು ಕಡಿಮೆಯೇ. ಅಲ್ಲಿನ ಪ್ರಾದೇಶಿಕತೆ ಹಾಗೂ ಸೊಗಡನ್ನು ಗಂಭೀರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಸಣ್ಣ ಮಟ್ಟದ ಪ್ರಯೋಗಗಳನ್ನು ಮಾಡುತ್ತಾ ಅಲ್ಲಿನ ನಿಜವಾದ ಉತ್ತರ ಕರ್ನಾಟಕವನ್ನು ಕಟ್ಟಿಕೊಡುವ ಪ್ರಯತ್ನ ಇನ್ನು ಮುಂದಾದರೂ ಆಗಬೇಕು..
ಸಿನಿಮಾ ಕೆಲಸಗಳಿಗೆ ಬೆಂಗಳೂರನ್ನು ಅವಲಂಬಿಸುವುದು ಬೇಕಾಗಿಲ್ಲ. ರಾಯಚೂರಿಗೆ ಹೈದರಾಬಾದ್ ಸಮೀಪದಲ್ಲಿದೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಪುಣೆ ಹತ್ತಿರದಲ್ಲಿದೆ. ಕ್ಯಾಮರಾ ಲೆನ್ಸ್ ಇತ್ಯಾದಿ ಚಿತ್ರೀಕರಣಕ್ಕೆ ಅಗತ್ಯ ಉಪಕರಣಗಳನ್ನು ಬೆಂಗಳೂರಿನಿಂದ ತೆಗೆದುಕೊಳ್ಳುವ ಬದಲು ಪುಣೆ, ಮುಂಬೈ ಅಥವ ಹೈದರಾಬಾದಿನಿಂದ ಪಡೆದುಕೊಳ್ಳಬಹುದು. ಸಿನಿಮಾ ಚಿತ್ರೀಕರಣೋತ್ತರ ಕೆಲಸಗಳಿಗೆ ಹೆಚ್ಚಿನ ಸೌಲಭ್ಯಗಳು ಪುಣೆ, ಮುಂಬೈ ಮತ್ತು ಹೈದರಾಬಾದಿನಲ್ಲಿ ಸಿಗುತ್ತದೆ. ಬಂಡವಾಳ ಹೂಡಿಕೆ ಸಾಧ್ಯವಾದರೆ ಉತ್ತರ ಕರ್ನಾಟಕದಲ್ಲಿ Edit, Dubbing, Sound Design suit ಹಾಕಿಕೊಳ್ಳುವುದು ಸಾಧ್ಯ. Foley ಕೆಲಸಗಳನ್ನು ಮುಂಬೈ, ಹೈದರಾಬಾದ್ ಅಥವ ಪುಣೆ ಸ್ಟುಡಿಯೋಗಳಿಂದ ಮಾಡಿಸಿಕೊಳ್ಳಬಹುದು. ಕಲರ್ ಗ್ರೇಡಿಂಗ್ ಮಾಡಲು DaVinci Resolve software ಉಚಿತವಾಗಿ ಸಿಗುತ್ತದೆ, freelancing colorists ಸಿಗುತ್ತಾರೆ. ಇನ್ನು ಬೇಕಿರುವುದು ಇಚ್ಛಾಶಕ್ತಿ ಮತ್ತು ಸಿನಿಮಾ ಪ್ರೇಮಿಗಳ ಬೆಂಬಲ. ಸಾಂಸ್ಕೃತಿಕವಾಗಿ ದೃಶ್ಯಮಾಧ್ಯಮದ ಮೂಲಕ ಉತ್ತರ ಕರ್ನಾಟಕದ ಪ್ರಾದೇಶಿಕತೆ ಮತ್ತು ಸೊಗಡನ್ನು ಪಸರಿಸುವ ಕೆಲಸ..
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಆರನೇ ದಿನ. ಈ ದಿನವೂ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ರಜೆಗಳ ಕಾರಣದಿಂದಾಗಿ ಶೆಟ್ಟರಿಗೆ ಜಾಕ್ ಪಾಟ್ ಹೊಡೆದಿದೆ. ಈಗಾಗಲೇ 25 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ಇದೀಗ ಕಾಂತಾರ ಸಿನಿಮಾದ ಕಲೆಕ್ಷನ್ (Collection) ಕುರಿತಾದದ್ದೇ ಮಾತು. ಶುಕ್ರವಾರದಿಂದ ಸೋಮವಾರದವರೆಗೂ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಾಲ್ಕನೇ ದಿನ ಕೂಡ ಭರ್ಜರಿಯಾಗಿಯೇ ಕಲೆಕ್ಷನ್ ಮಾಡಿದ್ದು, ನಾಲ್ಕು ಮತ್ತು ಐದನೇ ದಿನವೂ ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲಿಂಗ್ ಆಗುತ್ತಿವೆ.
ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ ವುಡ್ ನಲ್ಲಿ ಇದೀಗ ಕಾಂತಾರ (Kantara) ಸಿನಿಮಾದ ಕಲೆಕ್ಷನ್ ಕುರಿತಾದದ್ದೇ ಮಾತು. ಶುಕ್ರವಾರದಿಂದ ಸೋಮವಾರದವರೆಗೂ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಾಲ್ಕನೇ ದಿನ ಕೂಡ ಭರ್ಜರಿಯಾಗಿಯೇ ಕಲೆಕ್ಷನ್ ಮಾಡಿದ್ದು, ನಾಲ್ಕು ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ನಾಲ್ಕನೇ ದಿನವೂ ಕೂಡ ಉತ್ತಮ ಕಲೆಕ್ಷನ್ ಆಗಿದೆ.
ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ (Rishabh Shetty) ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲ್ಲಿಂಗ್ ಆಗುತ್ತಿವೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದೇ ರೀತಿಯ ಥಿಯೇಟರ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ (Box Office) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಶುಕ್ರವಾರ ಕಡಿಮೆ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಆಗಿತ್ತು. ನೋಡುಗರು ಅದ್ಭುತ ಪ್ರತಿಕ್ರಿಯೆ ಕೊಟ್ಟಿದ್ದರಿಂದ, ಸಂಖ್ಯೆ ಹೆಚ್ಚಾಗಿದೆ.
ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ (Rishabh Shetty) ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲಿಂಗ್ ಆಗುತ್ತಿವೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್
ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ (Kantara) , ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ, ಪ್ಯಾನ್ ಇಂಡಿಯಾ ಸ್ಟಾರ್ ಮತ್ತು ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಬರೆದುಕೊಂಡಿರುವ ಪ್ರಭಾಸ್ (Prabhas), ‘’ಕಾಂತಾರ’ ಚಿತ್ರ ನೋಡಿ ಬಹಳ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರ ದೊಡ್ಡ ಯಶಸ್ಸು ಗಳಿಸಲಿ’ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ
‘ಕೆಜಿಎಫ್’, ’ಯುವರತ್ನ’ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು, ‘ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್ನಡಿ (Hombale Films) ನಿರ್ಮಿಸಿದ್ದು, ಅದರ ಜೊತೆಗೆ ಪ್ರಭಾಸ್ ಅಭಿನಯದ ‘ಸಲಾರ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಪ್ರಭಾಸ್ ಅಲ್ಲದೆ ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದ ವಿಶಿಷ್ಟ ಆಚರಣೆಗಳನ್ನು ಕಟ್ಟಿಕೊಟ್ಟಿರುವ ರೀತಿಯ ಜೊತೆಗೆ, ಕ್ಲೈಮ್ಯಾಕ್ಸ್ ರೂಪಿಸಿರುವ ರೀತಿ ಮತ್ತು ಅದರಲ್ಲಿ ರಿಷಭ್ ಶೆಟ್ಟಿ ನಟಿಸಿರುವ ರೀತಿಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
Live Tv
[brid partner=56869869 player=32851 video=960834 autoplay=true]