ಬಿಡುಗಡೆಯಾದ ನಾಲ್ಕೂ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ (Kantara) ಸಿನಿಮಾವನ್ನು ಇಂದು ಸಂಜೆ 7 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆಯವರು ನೋಡಲಿದ್ದಾರೆ. ಕುಟುಂಬ ಸಮೇತರಾಗಿ ಮಂಗಳೂರಿನ (Mangalore) ಭಾರತ್ ಮಾಲ್ ನಲ್ಲಿರುವ ಬಿಗ್ ಸಿನಿಮಾಸ್ ನಲ್ಲಿ ಅವರು ಚಿತ್ರವನ್ನು ವೀಕ್ಷಿಸುತ್ತಿದ್ದು, ಸಿನಿಮಾ ತಂಡ ಕೂಡ ಈ ಸಂದರ್ಭದಲ್ಲಿ ಹಾಜರಿರಲಿದೆ. ಕಾಂತಾರ ಸಿನಿಮಾ ಆಗುವಲ್ಲಿ ವೀರೇಂದ್ರ ಹೆಗ್ಗಡೆ (Virendra Heggade) ಅವರು ಕೂಡ ಪ್ರಮುಖ ಪಾತ್ರವಹಿಸಿದ್ದರಿಂದ ಅವರ ಪ್ರತಿಕ್ರಿಯೆ ಕೂಡ ಮಹತ್ವ ಪಡೆದುಕೊಳ್ಳಲಿದೆ.
ಈಗಾಗಲೇ ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಸಿನಿಮಾವನ್ನು ನೋಡಿದ್ದು, ಮೆಚ್ಚಿ ಮಾತನಾಡಿದ್ದಾರೆ. ಬಿಡುಗಡೆಯಾದ ನಾಲ್ಕೂ ಭಾಷೆಯ ಕಲಾವಿದರು ಕೂಡ ಚಿತ್ರವನ್ನು ಕೊಂಡಾಡಿದ್ದಾರೆ. ನಿನ್ನೆಯಷ್ಟೇ ಕಾಂತಾರ ಸಿನಿಮಾವನ್ನು ವೀಕ್ಷಿಸಿರುವ ಕಂಗನಾ ರಣಾವತ್, ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಈ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವನ್ನು ನೋಡುವುದಾಗಿ ಈ ಹಿಂದೆ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ನಿನ್ನೆ ಸಿನಿಮಾ ನೋಡಿದ್ದಾರೆ. ಥಿಯೇಟರ್ ನಿಂದ ಆಚೆ ಬಂದು ಭಾವುಕರಾಗಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ನನಗಿದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನಿನ್ನೆಯಷ್ಟೇ ಕಾಂತಾರ (Kantara) ಸಿನಿಮಾವನ್ನು ವೀಕ್ಷಿಸಿರುವ ಕಂಗನಾ ರಣಾವತ್, ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಆಸ್ಕರ್ (Oscar) ಪ್ರಶಸ್ತಿಗಾಗಿ ಭಾರತದಿಂದ ಈ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವನ್ನು ನೋಡುವುದಾಗಿ ಈ ಹಿಂದೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ನಿನ್ನೆ ಸಿನಿಮಾ ನೋಡಿದ್ದಾರೆ. ಥಿಯೇಟರ್ ನಿಂದ ಆಚೆ ಬಂದು ಭಾವುಕರಾಗಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ನನಗಿದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾವನ್ನು ನೋಡುವುದಾಗಿ ಈ ಹಿಂದೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ನಿನ್ನೆ ಸಿನಿಮಾ ನೋಡಿದ್ದಾರೆ. ಥಿಯೇಟರ್ ನಿಂದ ಆಚೆ ಬಂದು ಭಾವುಕರಾಗಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ನನಗಿದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ಕಾಂತಾರ ಸಿನಿಮಾ ಇದೀಗ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್ (Rishabh Shetty), ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ಹೊಸದೊಂದು ಬಿರುದು ಕೊಡಲು ಮುಂದಾಗಿದ್ದಾರೆ.
ರಿಯಲ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಸೂಪರ್ ಸ್ಟಾರ್ ಹೀಗೆ ತಮ್ಮ ನೆಚ್ಚಿನ ಕಲಾವಿದರಿಗೆ ಅಭಿಮಾನಿಗಳು ಬಿರುದು ಕೊಟ್ಟು ಅಭಿಮಾನ ತೋರಿದ್ದಾರೆ. ರಿಷಬ್ ಶೆಟ್ಟಿ ಅವರಿಗೂ ಕೂಡ ಸದ್ಯ ‘ಡಿವೈನ್ ಸ್ಟಾರ್’ ಎಂದು ಬಿರುದು ಕೊಟ್ಟಿದ್ದು, ಅನೇಕರು ಇದೇ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ ನೋಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ‘ಡಿವೈನ್’ ಶಬ್ದವನ್ನು ಬಳಸಿಯೇ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಅಭಿಮಾನಿಗಳು ಇನ್ಮುಂದೆ ‘ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ’ ಎಂದು ಕರೆಯಲು ನಿರ್ಧರಿಸಿರುವ ಕುರಿತು ಚರ್ಚೆ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಕಾಂತಾರ (Kantara) ಸಕ್ಸಸ್ ಬೆನ್ನೆಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಹಾಗಂತ ರಿಷಬ್ ಏನೂ ಖಾಲಿ ಕುಳಿತಿರಲಿಲ್ಲ. ಒಂದು ಸಿನಿಮಾದ ನಿರ್ದೇಶನ, ಎರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಬೇಕಿತ್ತು. ಈ ನಡುವೆಯೇ ತೆಲುಗು ಸಿನಿಮಾ ರಂಗದಿಂದ ಶೆಟ್ಟರಿಗೆ ಭರ್ಜರ್ ಆಫರ್ ಬಂದಿದೆ. ಅದನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ನಿರ್ಮಾಪಕರಿಗೆ ಹೇಳಿದ್ದಾರೆ.
ಕಾಂತಾರ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದವರು ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ತಂದೆ ಅಲ್ಲು ಅರವಿಂದ್ (Allu Arvind). ಇವರ ಗೀತಾ ಆರ್ಟ್ಸ್ (Geetha Arts) ಪ್ರೊಡಕ್ಷನ್ ಹೌಸ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆಯೂ ಇದೆ. ಈಗ ಅದೇ ಬ್ಯಾನರ್ ನಲ್ಲೇ ರಿಷಬ್ ಅವರಿಗೆ ಆಫರ್ ಹೋಗಿದ್ದು, ಈ ಅವಕಾಶವನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಅಲ್ಲು ಅರವಿಂದ್ ತಿಳಿಸಿದ್ದಾರೆ. ಇದನ್ನೂ ಓದಿ:ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್
ತೆಲುಗಿನಲ್ಲಿ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದರು ಅರವಿಂದ್. ಈ ಸಕ್ಸಸ್ ಮೀಟ್ ನಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಹಲವರು ಸದಸ್ಯರಿದ್ದರು. ಇದೇ ಸಮಯದಲ್ಲೇ ತಮ್ಮ ಬ್ಯಾನರ್ ಮೂಲಕ ರಿಷಬ್ ಅವರು ಸಿನಿಮಾ ಮಾಡಲಿದ್ದಾರೆ ಎಂದು ಅರವಿಂದ್ ಘೋಷಣೆ ಮಾಡಿದರು. ಅದಕ್ಕೆ ರಿಷಬ್ ಕೂಡ ಒಪ್ಪಿಗೆ ಸೂಚಿಸಿದರು. ಇದಕ್ಕೂ ಮೊದಲು ತಮಗೆ ಸಣ್ಣದೊಂದು ಬ್ರೇಕ್ ಬೇಕಿರುವ ವಿಚಾರವನ್ನೂ ರಿಷಬ್ ಹಂಚಿಕೊಂಡರು.
Live Tv
[brid partner=56869869 player=32851 video=960834 autoplay=true]
ಭೂತಕೋಲ ಹಿಂದೂ ಸಂಸ್ಕೃತಿ ಎನ್ನುವ ವಿಚಾರವಾಗಿ ನಟ ಚೇತನ್ ಆಡಿದ ವಿರೋಧಿ ಮಾತುಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ. ಭೂತಕೋಲ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದರು. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ, ಅದೊಂದು ಬುಡಕಟ್ಟು ಸಂಪ್ರದಾಯ ಎಂದು ಹೇಳುವ ಮೂಲಕ ಚೇತನ್ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದರು.
ಚೇತನ್ (Chetan) ಈ ರೀತಿ ಹೇಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ನಾನಾ ರೀತಿಯ ಕಾಮೆಂಟ್ ಗಳು ಬಂದವು. ಅದರಲ್ಲೂ ಚೇತನ್ ಪೌರತ್ವದ (Citizenship) ಬಗ್ಗೆಯೂ ಪ್ರಶ್ನೆ ಮಾಡಲಾಯಿತು. ಚೇತನ್ ಭಾರತದ ಪೌರತ್ವ ಪಡೆದಿಲ್ಲ. ಹಾಗಾಗಿ ಭಾರತದ ಬಗ್ಗೆ ಮಾತನಾಡುವಂತಹ ನೈತಿಕ ಹಕ್ಕು ಅವರಿಗಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೂ ಚೇತನ್ ಇದೀಗ ಉತ್ತರಿಸಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೇತನ್, ‘ನಾನು ಚರ್ಚೆಯ ಮೂಲಕ ಗೆಲ್ಲಬೇಕು. ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾನು ಆಡಿದ ಮಾತುಗಳಲ್ಲಿ ಏನು ಸುಳ್ಳು ಇದೆ ಹೇಳಲಿ. ಯಾರಿಗೆ ನನ್ನನ್ನು ಸೋಲಿಸಲು ಆಗುವುದಿಲ್ಲವೋ, ಅವರು ಪೌರತ್ವದ ಬಗ್ಗೆ ಮಾತನಾಡುತ್ತಾರೆ. ನನ್ನ ಹುಟ್ಟು ನನ್ನ ಕೈಯಲ್ಲಿ ಇಲ್ಲ. ಯಾರ ಕೈಯಲ್ಲೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿ ಇರುತ್ತೇನೆ. ಹಾಗಾಗಿ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಅನಿವಾರ್ಯ’ ಅಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಕಾಂತಾರ (Kantara) ರೀತಿಯಲ್ಲಿ ತನ್ನ ಸಿನಿಮಾ (Cinema) ಹಿಟ್ ಆಗಲ್ಲ ಅಂತಾ ನಟ ಚೇತನ್‌ಗೆ (Chetan Ahimsa) ಹೊಟ್ಟೆ ಕಿಚ್ಚು ಇರಬಹುದು. ಹಾಗಾಗಿ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ತಿರುಗೇಟು ನೀಡಿದ್ದಾರೆ.
ನಟ ಚೇತನ ಅಂತೋರು ಬುಡಕಟ್ಟು ಜನಾಂಗದವರನ್ನು ಹಿಂದೂ ಧರ್ಮದಿಂದ ಬೇರೆ ಮಾಡುವ ಹುನ್ನಾರ ನಡೆಸಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಆದಿವಾಸಿ ಜನಾಂಗ, ದಲಿತ, ಹೀಗೆ ಎಲ್ಲರನ್ನೂ ಸೇರಿ ಹಿಂದೂ ಧರ್ಮವಾಗಿದೆ. ಆಕಾಶಕ್ಕೆ ಮುಖ ಮಾಡಿ ಉಗಳುವ ಕೆಲಸ ಮಾಡ್ತಿದ್ದಾರೆ. ಆದರೆ ಅದೇ ಅವರ ಮುಖಕ್ಕೆ ಬೀಳುತ್ತದೆ. ಈ ಹಿಂದೆ, ಹಿಂದಿಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿ ಸಿನಿಮಾ ಮಾಡಲಾಗುತ್ತಿತ್ತು. ಆಗ ಚೇತನ್‌ನಂತವರು ಸುಮ್ಮನಿದ್ದರು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನೀಡಿದ ಆದೇಶದಿಂದ ದೊಡ್ಮನೆ ಶೇಕ್
ಹಿಂದೂ ಧರ್ಮ (Hindu Religion) ಅವಹೇಳನವೇ ಅವರಿಗೆ ಬೇಕಿತ್ತು. ಆದರೆ ಇತ್ತೀಚೆಗೆ ಹಿಂದೂ ಧರ್ಮದ ಪರಂಪರೆ, ಆಚರಣೆ, ಸನಾತನ ಧರ್ಮ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾಗಳು ಬರುತ್ತಿದ್ದು, ಇದು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ
Live Tv
[brid partner=56869869 player=32851 video=960834 autoplay=true]
ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಹೇಳಿದ್ದರು. ಕಾಂತಾರ (Kantara) ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇದಕ್ಕೆ ಚೇತನ್ (Chetan) ಮತ್ತೆ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಬಳಸಿದ ‘ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದಾರೆ.
ಚೇತನ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗುತ್ತಿದ್ದಂತೆಯೇ ಅದಕ್ಕೆ ಸ್ಪಷ್ಟನೆ ಎನ್ನುವಂತೆ ಇಂದು ಮಾಧ್ಯಮ ಗೋಷ್ಠಿ ಕರೆದಿದ್ದರು ನಟ. ಅಲ್ಲಿಯೂ ತಾವಾಡಿದ ಮಾತಿಗೆ ಬದ್ಧರಾಗಿಯೇ ಮಾತನಾಡಿದರು. ಬುಡಕಟ್ಟು (Tribe) ನಮ್ಮ ಮೂಲ ಸಂಸ್ಕೃತಿ. ಇವರಿಗೆ 70 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿದೆ. ಹಿಂದೂ ಧರ್ಮಕ್ಕೆ ಕೇವಲ ಮೂರುವರೆ ಸಾವಿರ ವರ್ಷ ಇತಿಹಾಸ. ದೈವಾರಾಧನೆ, ಭೂತಕೋಲ ಇವುಗಳು ಬುಡಕಟ್ಟು ಸಂಸ್ಕೃತಿಗಳು. ಅದು ಹೇಗೆ ಹಿಂದೂ ಸಂಸ್ಕೃತಿ (Hindu Culture) ಆಗುತ್ತವೆ? ಎಂದು ನಿರೂಪಿಸಿದರು. ದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
ಕಾಂತಾರ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಸ್ಯಾಂಡಲ್ ವುಡ್‌ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ‘ಕಾಂತಾರ’ದ ಕಾಂತಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ‘ಡಿವೈನ್ ಸ್ಟಾರ್’ ಎಂದು ಬಿರುದು ಕೊಟ್ಟಿದ್ದು, ಅದೇ ಹೆಸರಿನಿಂದ ಕರೆಯುತ್ತಿದ್ದಾರೆ.
‘ಕಾಂತಾರ’ ಕುರಿತು ಪ್ರತಿಕ್ರಿಯಿಸಿದ್ದ ನಟ ಚೇತನ್ ಅಹಿಂಸಾ, ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಅದು ವಿವಾದಕ್ಕೆ (Controversy) ಕಾರಣವಾಗಿತ್ತು.
Live Tv
[brid partner=56869869 player=32851 video=960834 autoplay=true]
ಕಾಂತಾರ ಸಿನಿಮಾ ರಿಲೀಸ್ ಆದಾಗ ಜಗ್ಗೇಶ್ ಅಮೆರಿಕಾದಲ್ಲಿದ್ದರು. ಹಾಗಾಗಿ ಸಿನಿಮಾವನ್ನು ತಡವಾಗಿ ನೋಡಿ, ಆ ಅನುಭವವನ್ನು ಅಕ್ಷರಕ್ಕೆ ಇಳಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ತಮ್ಮಲ್ಲಾದ ಬದಲಾವಣೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನೇ ಇಲ್ಲಿ ಪ್ರಕಟಿಸಲಾಗಿದೆ.
ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು. ಕಾರಣ ನನ್ನ ಬದುಕಿಗೆ ಸಕಲವೂ ನೀಡಿದ ನನ್ನ ತಾಯಿ ಕನ್ನಡ (Kannada) ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗೂ ರಾಜಣ್ಣನ (ಡಾ.ರಾಜ್ ಕುಮಾರ್) ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವನು. ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು.
ಇತ್ತೀಚಿನ ಚಿತ್ರ ಕಾಂತಾರ (Kantara) ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲ. ಆದರೆ ನನ್ನ ಅಕ್ಕನ ಮಗ ಜೀವನ್ ಹಾಗು ನನ್ನ ಅನೇಕ ಚಿತ್ರ ‘ಗುರು’, ‘ಮೇಲುಕೋಟೆ ಮಂಜ’ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದನು ಇಂದು ಅಮೆರಿಕಾದ ( America) ಡೆನ್ವರ್ ನಲ್ಲಿ ವರೆಕಲ್ ಸಂಸ್ಥೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿರುವ. ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು. ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ.
ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆಯುವುದು ನನ್ನ 30 ವರ್ಷದ ಅಭ್ಯಾಸ. ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟಿ ಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ. ಕಾಂತಾರ ಕಡೆಯ 25 ನಿಮಿಷ ನಾನು ಎಲ್ಲಿರುವೆ ಎಂದು ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ಮೌನವಾಯಿತು.
ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ಮೂಕವಿಸ್ಮಿತನಾದೆ. ನಂತರ ನನಗೆ ಅನಿಸಿದ್ದು ಇದು ರಿಷಬ್ (Rishabh Shetty) ಮಾಡಿದ ಚಿತ್ರವಲ್ಲಾ, ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ. ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರ ದಯೆಯಿಂದ ರಿಷಬನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ.
ಕಾಂತಾರ ಸಿನಿಮಾ (Cinema)ಅಲ್ಲಾ, ರೋಮಾಂಚನ ಅನುಭವ. god bless entire team
Live Tv
[brid partner=56869869 player=32851 video=960834 autoplay=true]
ಕಾಂತಾರ ಸಿನಿಮಾದ ಬಗ್ಗೆ ಬರಹಗಾರ, ಚಿಂತಕ ರೋಹಿತ್ ಚಕ್ರತೀರ್ಥ ವಿಭಿನ್ನ ರೀತಿಯ ಒಳನೋಟವನ್ನು ಕಟ್ಟಿಕೊಟ್ಟಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಆ ಬರಹವನ್ನು ಇಲ್ಲಿ ಯಥಾವತ್ತಾಗಿ ಹಾಕಲಾಗಿದೆ.
ಒಂದೇ ಸಿನೆಮಾವನ್ನು ಒಂದು ದಿನದಲ್ಲಿ ಎರಡು ಸಲ ನಾನು ನೋಡಿದ್ದು ಇದೇ ಮೊದಲು. ಅರ್ಥವಾಗಲಿಲ್ಲ ಎಂದಲ್ಲ; ಆ ಸಿನೆಮಾವನ್ನು ಮತ್ತೊಮ್ಮೆ ಫೀಲ್ ಮಾಡಬೇಕು ಎಂದೇ ಎರಡನೇ ಸಲ ಹೋಗಿದ್ದು’ ಎಂದಿದ್ದಾನೆ ಒಬ್ಬ ಸಿನಿಮಾ ವಿಮರ್ಶಕ. ಆತ ಉತ್ತರ ಭಾರತದವನು. ಭೂತಕೋಲದ ಪರಿಕಲ್ಪನೆಯೇ ಅವನಿಗೆ ಹೊಚ್ಚಹೊಸದು. ಭೂತವಾಡುವ ಅಷ್ಟೂ ಮಾತುಗಳು ಹಿಂದಿ ಸಿನೆಮಾದಲ್ಲಿ ತುಳುವಿನಲ್ಲೇ ಬಂದಿವೆ. ‘ಅದನ್ನು ಖಂಡಿತ ಡಬ್ ಮಾಡಬಾರದು, ಅದು ತುಳುವಿನಲ್ಲೇ ಇರಬೇಕು’ ಎಂದು ಬೇರೆ ಆತ ಸಮರ್ಥನೆ ಕೊಟ್ಟ.
ಯೂಟ್ಯೂಬ್ ನೋಡಿ. ಕಾಂತಾರದ ಬಗ್ಗೆ ಹಿಂದಿ ವಿಮರ್ಶೆಗಳು ರಾಶಿರಾಶಿ ಬಂದು ಬಿದ್ದಿವೆ. ಹಾಗೆಯೇ ತೆಲುಗು, ತಮಿಳು ವಿಮರ್ಶೆಗಳೂ ದಂಡಿಯಾಗಿವೆ. ಭಾರತದ ಉದ್ದಗಲದ ಎಲ್ಲ ಪ್ರದೇಶಗಳ ಮಂದಿಯೂ ಈ ಸಿನೆಮಾವನ್ನು ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ. ಭೂತ ಎಂದರೇನು ಕೋಲ ಎಂದರೇನು ಕಂಬಳ ಎಂದರೇನು ಎಂದು ಗೊತ್ತಿಲ್ಲದ ಯಾವುದೋ ಶಿಮ್ಲ, ಕಾನ್ಪುರಗಳ ಮಂದಿಯೂ ಇದನ್ನು ಎಂಜಾಯ್ ಮಾಡುತ್ತಿದ್ದಾರೆ, ಮತ್ತೆ ಮತ್ತೆ ಥಿಯೇಟರಿಗೆ ನುಗ್ಗುತ್ತಿದ್ದಾರೆ ಎಂದರೆ ಅವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವ ಸಂಗತಿ ಯಾವುದು? ಬಿಜಿಎಮ್ ಅದ್ಭುತವಾಗಿದೆ, ದೃಶ್ಯಗಳು ಕಾವ್ಯಾತ್ಮಕವಾಗಿವೆ, ಡೈಲಾಗುಗಳು ಲವಲವಿಕೆಯಿಂದ ಕೂಡಿವೆ, ನಟನೆ ಚೆನ್ನಾಗಿದೆ ಎಲ್ಲವೂ ನಿಜ. ಆದರೆ ಈ ಒಂದೊಂದು ಅಂಶಗಳನ್ನು ಮೆಚ್ಚಿಕೊಂಡು ಎರಡನೇ ಶೋ ಟಿಕೇಟ್ ತೆಗೆದುಕೊಳ್ಳುವವರು ಹೆಚ್ಚಿಲ್ಲ. ಎರಡು, ಮೂರು, ನಾಲ್ಕು ಸಲ ನೋಡಬೇಕು ಎಂದು ಬಯಸುತ್ತಿರುವವರೆಲ್ಲರನ್ನೂ ಸೆಳೆಯುತ್ತಿರುವುದು ಕಾಂತಾರದ (Kantara) ಕಥೆಯೇ. ಮೇಲ್ನೋಟಕ್ಕೇನೋ ಇದು ಬಂಡಾಯದ, ಸಂಘರ್ಷದ ಕತೆ. ಆದರೆ ಆಳದಲ್ಲಿ ಅದು ಭಾರತದ ಮಣ್ಣಿನ ವಾಸನೆಯನ್ನು ಮೂಗಿಗೆ ಹಿಡಿಯುವ ಕತೆ. ಸನಾತನ ಧರ್ಮದ ಬೇರುಗಳನ್ನು ಕಾಲಿಗೆ ತೊಡರಿಸುವ ಕತೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ
ಭಾರತದ ನೂರಾನಲವತ್ತು ಕೋಟಿ ಜನಸಂಖ್ಯೆಯಲ್ಲಿ 80 ಕೋಟಿಯಷ್ಟೇ ಹಿಂದುಗಳಿದ್ದಾರೆಂದಾದರೂ ಭಾವಿಸೋಣ. ಈ ಹಿಂದುಗಳಲ್ಲಿ ತಮ್ಮ ಮನೆಯ ಆಚಾರ ವಿಚಾರಗಳನ್ನೇ ಪ್ರಶ್ನಿಸುವ ಎಬಡ ಎಡಬಿಡಂಗಿಗಳ ಸಂಖ್ಯೆ ಒಂದು ಲಕ್ಷವೂ ದಾಟಲಿಕ್ಕಿಲ್ಲ. ಮಿಕ್ಕವರೆಲ್ಲ ಅದೆಷ್ಟೇ ಆಧುನಿಕರಾದರೂ, ನಗರವಾಸಿಗಳಾದರೂ, ಕುಟುಂಬಗಳಿಂದ ದೂರವಿದ್ದರೂ ಅವರೊಳಗೊಂದು ಸನಾತನರಕ್ತ ಹರಿಯುತ್ತಿದೆ. ಜನ್ಮಜನ್ಮಾಂತರಗಳಲ್ಲಿ ಸೇರಿಕೊಂಡ ಸಂಸ್ಕಾರದ ಅಷ್ಟಿಷ್ಟಾದರೂ ಅಂಶ ಅವರೆಲ್ಲರೊಳಗೂ ಇದೆ. ಕಾಶ್ಮೀರದ ಹಿಂದು ಬೇರೆಯಲ್ಲ, ಕನ್ಯಾಕುಮಾರಿಯ ಹಿಂದು ಬೇರೆಯಲ್ಲ. ಭಾರತದ ನಾಲ್ದೆಸೆಗಳಲ್ಲಿರುವ ಎಲ್ಲ ಹಿಂದು ಸಮುದಾಯಗಳಲ್ಲೂ ಸಮಾನಾಂಶಗಳಿವೆ. ಮೇಲ್ನೋಟಕ್ಕೆ ಅವು ಭಿನ್ನವಾಗಿ, ಕೆಲವೊಮ್ಮೆ ತದ್ವಿರುದ್ಧವಾಗಿ ಕಾಣಬಹುದು. ಆದರೆ ಆ ಎಲ್ಲ ಆಚರಣೆ, ಸಂಸ್ಕಾರ, ಪೂಜೆಪುನಸ್ಕಾರಗಳ ಮೂಲ ಒಂದೇ. ಭಾರತವನ್ನು ಪಠ್ಯಪುಸ್ತಕಗಳಲ್ಲಿ “ವಿವಿಧತೆಯಲ್ಲಿ ಏಕತೆ” ಎನ್ನುವುದು ರೂಢಿ. ಅದು ಶುದ್ಧಾಂಗ ತಪ್ಪು. ಭಾರತದಲ್ಲಿರುವುದು “ಏಕತೆಯಲ್ಲಿ ವಿವಿಧತೆ”. ಆ ಏಕವೇ ಸನಾತನಧರ್ಮ. ಒಂದೇ ಕಾಂಡ ಇಲ್ಲಿ ಹಲವು ರೆಂಬೆಕೊಂಬೆಗಳನ್ನು ದೇಶಾದ್ಯಂತ ಪಸರಿಸಿದೆ. ದೈವದೇವರುಗಳಲ್ಲಿ ನಂಬಿಕೆ ಇಡುವುದು ಎಂಬ ಮೂಲಾಂಶವೇ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು. ಆದರೆ “ನಂಬಿಕೆ” ಎಂಬ ಮೂಲದ್ರವ್ಯ ಒಂದೇ. ಮತ್ತು ಈ ನಂಬಿಕೆ, ರಿಲಿಜನ್ನುಗಳು ಹೇರುವ “ಬಿಲೀಫ್”ಗಿಂತ ಸಂಪೂರ್ಣ ಭಿನ್ನವಾದದ್ದು. ಹಾಗಾಗಿಯೇ ಹಿಂದುಗಳು ದೇಶದ ವಿವಿಧ ಭಾಗಗಳಲ್ಲಿದ್ದರೂ ಕನೆಕ್ಟ್ ಆಗುತ್ತಾರೆ. ಕಾಮಾಕ್ಯಕ್ಕೆ ಹೋದರೂ ಶೃಂಗೇರಿಗೆ ಹೋದರೂ ಹಿಂದುವಿಗೆ ಕಾಣುವುದು ಶಕ್ತಿಯೇ – ಹೊರಗಿನ ರೂಪ ಭಿನ್ನವಾದ ಮಾತ್ರಕ್ಕೆ ಎರಡೂ ಬೇರೆ ಬೇರೆ ದೇವತೆಗಳೆಂಬ ನಿರ್ಣಯವನ್ನು ಹಿಂದು ಎಳೆಯಲಾರ.
ಹಿಂದು ಮೌನವಾಗಿರುತ್ತಾನೆ ನಿಜ, ಆದರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟ, ಖುಷಿ, ಸಂಭ್ರಮಗಳಿಗೆ ಸ್ಪಂದಿಸುತ್ತಾನೆ ಕೂಡ. ಹಾಗಾಗಿಯೇ ಕಾಶ್ಮೀರದ ಸೀಮಿತ ಪ್ರಾಂತ್ಯದ ಸಮಸ್ಯೆಯನ್ನು ತೋರಿಸಿದ “ಕಾಶ್ಮೀರ್ ಫೈಲ್ಸ್” ದೇಶಾದ್ಯಂತ ಜಯಭೇರಿ ಬಾರಿಸಿತು. ನೋಡಿದ ಪ್ರತಿಯೊಬ್ಬ ಹಿಂದುವಿಗೆ ಇದು ನನ್ನ ಕಥೆ, ನನ್ನದೇ ಕಥೆ… ಅನ್ನಿಸಿತು. ಕರಾವಳಿಯ ಸಣ್ಣ ಊರೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡರೂ ಕಾಂತಾರ ದೇಶದುದ್ದಕ್ಕೆ ಧೂಳೆಬ್ಬಿಸುತ್ತಿರುವುದೂ ಇದೇ ಕಾರಣಕ್ಕೆ. ಉತ್ತರದ, ಈಶಾನ್ಯದ, ವಾಯವ್ಯದ ಹಿಂದುಗಳಿಗೆ ಆ ಭೂತ – ನಮ್ಮದಲ್ಲ ಎಂದೇನೂ ಅನ್ನಿಸಿಲ್ಲ. ತಮ್ಮ ಊರುಗಳಲ್ಲಿ ನಡೆಯುವ ಯಾವುದೋ ಆಚರಣೆಗೆ, ಸಂಪ್ರದಾಯಗಳಿಗೆ ಭೂತಕೋಲವನ್ನು ಸಮೀಕರಿಸಿಕೊಂಡು ಆ ಎಲ್ಲ ಹಿಂದುಗಳೂ ಕಾಂತಾರದ ಕಥೆಯನ್ನು ಲೋಕಲೈಸ್ ಮಾಡಿಕೊಂಡಿದ್ದಾರೆ. ಹೇಗೆ ಕಾಶ್ಮೀರದ ಪಂಡಿತನ ಕಥೆ ನಮ್ಮೆಲ್ಲರ ಕಥೆಯೂ ಆಗುತ್ತದೋ ಹಾಗೆಯೇ ನಲ್ಕೆಯವನ ಕಥೆ ಕೂಡ ನಮ್ಮೆಲ್ಲರದೂ ಆಗುತ್ತದೆ.
ಗಮನಿಸಿ: ಕಾಶ್ಮೀರ್ ಫೈಲ್ಸ್ ಆಗಲಿ ಕಾಂತಾರವಾಗಲಿ, ಒಂದು ಚಿತ್ರವನ್ನು ಅದು ಇದ್ದಂತೆಯೇ ಪ್ರೇಕ್ಷಕನ ಮುಂದಿಡುತ್ತವೆಯೇ ಹೊರತು ಉಪದೇಶಕ್ಕೆ ಹೊರಡುವುದಿಲ್ಲ. ಇರುವ ಸಂಗತಿಯನ್ನು ಸೀಳಿ ಸೀಳಿ ಸಂಶೋಧನೆಗಿಳಿಯುವುದಿಲ್ಲ. ಎಡಬಿಡಂಗಿ ವಾದಗಳನ್ನು ಸುಖಾಸುಮ್ಮನೆ ತುರುಕುವುದಿಲ್ಲ. ಈ ದೇಶದ ಮಕ್ಕಳು, ನೆಲಮೂಲ ಸಂಸ್ಕೃತಿಯ ಜನ ತಮ್ಮ ನೆಲವನ್ನು ಉಳಿಸಿಕೊಳ್ಳಬೇಕಾದರೆ ದೈವದ ಆಶೀರ್ವಾದವೊಂದು ಇರಬೇಕಾಗುತ್ತದೆ ಎಂಬ – ಹಿಂದುವನ್ನು ಬಹಳ ಸುಲಭವಾಗಿ ಕನ್ವಿನ್ಸ್ ಮಾಡುವ ಒಂದು ಎಳೆಯ ಮೇಲೆ ‘ಕಾಂತಾರ’ದ ಇಡೀ ಕತೆ ನಿಂತಿದೆ. ಕಾಶ್ಮೀರ್ ಫೈಲ್ಸ್ ಕೂಡ ನೆಲಕ್ಕೆ ಸಂಬಂಧಪಟ್ಟ ಕತೆಯೇ. ಆದರೆ ಅಲ್ಲಿಯ (ಕಾಶ್ಮೀರದ) ಹಿಂದು, ದೈವವನ್ನು ಮರೆತಿದ್ದಾನೆ. ಒಂದಾನೊಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮಾರ್ತಾಂಡನ ದೇವಸ್ಥಾನವಾಗಲೀ ಶಾರದಾಪೀಠವಾಗಲೀ ಕಾಶ್ಮೀರದಲ್ಲಿ ೧೯೯೦ರ ಸಮಯದಲ್ಲಿ ಶಕ್ತಿಪೀಠಗಳಾಗಿ ಉಳಿದಿರಲಿಲ್ಲ. ರಾಕ್ಷಸರು ನುಗ್ಗಿಬಂದಾಗ ದೈವದ ಮೊರೆಹೋಗಬೇಕೆಂದು ಕಾಶ್ಮೀರದ ಹಿಂದುವಿಗೆ ಅನ್ನಿಸಲೇ ಇಲ್ಲ. ರಾತ್ರೋರಾತ್ರಿ ಅವರೆಲ್ಲರೂ ತಮ್ಮ ಮನೆಮಠಗಳನ್ನೆಲ್ಲ ತೊರೆದು ದಿಕ್ಕಾಪಾಲಾಗಿ ಚದುರಬೇಕಾಯಿತು. ‘ಕಾಶ್ಮೀರ್ ಫೈಲ್ಸ್’ ಸಮಸ್ಯೆಯ ಬಗ್ಗೆ ಮಾತಾಡಿತು; ‘ಕಾಂತಾರ’ ಆ ಸಮಸ್ಯೆಗೆ ಉತ್ತರ ಪಡೆಯುವ ದಾರಿಯನ್ನು ತೋರಿಸುತ್ತಿದೆ. ಈ ಎರಡೂ ಚಿತ್ರಗಳು ಹಿಂದುವಿನ ಭಾವಕೋಶದ ತಂತಿಯನ್ನು ಮೀಟಲು ಸಾಧ್ಯವಾದದ್ದಕ್ಕೇ ಜಯಭೇರಿ ಹೊಡೆದಿವೆ.
ವೈದಿಕ, ಅವೈದಿಕ, ಆರ್ಯ, ದ್ರಾವಿಡ, ಬ್ರಾಹ್ಮಣ, (Brahmin) ಶೂದ್ರ, ಮಾರ್ಗ, ದೇಸಿ ಎಂಬ ತಲೆಬುಡವಿಲ್ಲದ ಚರ್ಚೆಗಳನ್ನು ಎಡಬಿಡಂಗಿಗಳು ಬೆಳೆಸುತ್ತ ಹೋದಷ್ಟೂ ಹಿಂದೂಧರ್ಮದ ಅತ್ಯಂತ ಮೂಲಭೂತ ತತ್ತ್ವಗಳನ್ನು ಶೋಧಿಸುವ ‘ಕಾಂತಾರ’ದಂಥ ಸಿನೆಮಗಳು ಯಶಸ್ಸಿನ ಓಟದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತವೆ. ಏಕೆಂದರೆ ‘ಕಾಂತಾರ’ವನ್ನು ಮರಳಿ ಮರಳಿ ನೋಡಲು ನುಗ್ಗುತ್ತಿರುವ ಪ್ರೇಕ್ಷಕನ ಉತ್ಸಾಹವೆಂಬುದು – ಹಿಂದುತ್ವವನ್ನು ಒಡೆಯಲು ಹವಣಿಸುತ್ತಿರುವ ಭಂಜಕಶಕ್ತಿಗಳಿಗೆ ಕೊಡುತ್ತಿರುವ ಪರೋಕ್ಷ ಬೆತ್ತದೇಟು ಕೂಡ.
Live Tv
[brid partner=56869869 player=32851 video=960834 autoplay=true]
ರಿಷಬ್ ಶೆಟ್ಟಿ (Rishabh Shetty) ನಟನೆಯ ಕಾಂತಾರ (Kantara) ಸಿನಿಮಾ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ (Chetan Ahimsa) ಭೂತಕೋಲವು ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ.
ಕಾಂತಾರ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ ಸ್ಯಾಂಡಲ್ ವುಡ್‌ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, `ಕಾಂತಾರ’ದ ಕಾಂತಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ `ಡಿವೈನ್ ಸ್ಟಾರ್’ ಎಂದು ಬಿರುದು ಕೊಟ್ಟಿದ್ದು, ಅದೇ ಹೆಸರಿನಿಂದ ಕರೆಯುತ್ತಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ನಂತರ ರಿಷಬ್ ಶೆಟ್ಟಿಗೆ ಹೊಸ ಬಿರುದು: ಡಿವೈನ್ ಸ್ಟಾರ್ ಎಂದ ಫ್ಯಾನ್ಸ್
`ಕಾಂತಾರ’ (Kantara) ಕುರಿತು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ (Chetan Ahimsa), ನಮ್ಮ ಕನ್ನಡದ ಚಲನಚಿತ್ರ `ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ
ಕಾಂತಾರ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಸಿನಿಮಾವನ್ನು ಸ್ಟಾರ್ ಕಲಾವಿದರು ಕೂಡ ನೋಡಿದ್ದಾರೆ, ನೋಡಲು ಕಾಯುತ್ತಿದ್ದಾರೆ. ಬಾಲಿವುಡ್ (Bollywood) ಖ್ಯಾತ ನಟಿ ಕಂಗನಾ ರಣಾವತ್ ಕೂಡ ಕಾಂತಾರ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]