Tag: Rishabh Shetty

  • ಆಸ್ಕರ್ ಅರ್ಹತೆ ಸುತ್ತಿನಲ್ಲಿ ಕಾಣಿಸಿಕೊಂಡ ‘ಕಾಂತಾರ’ ಸಿನಿಮಾ

    ಆಸ್ಕರ್ ಅರ್ಹತೆ ಸುತ್ತಿನಲ್ಲಿ ಕಾಣಿಸಿಕೊಂಡ ‘ಕಾಂತಾರ’ ಸಿನಿಮಾ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.

    ಈ ಕುರಿತು ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ ಮಾಡಿದ್ದು, ‘ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

    ಇತ್ತೀಚೆಗಷ್ಟೇ ಸಿನಿಮಾ ಶತದಿನೋತ್ಸವ ಪೂರೈಸಿದೆ. ಸದ್ಯದಲ್ಲೇ ಅದು ಟಿವಿಯಲ್ಲೂ ಪ್ರಸಾರವಾಗಲಿದೆ. ಇಷ್ಟೊಂದು ಸಂಭ್ರಮಗಳೊಂದಿಗೆ ಚಿತ್ರತಂಡ ಕಾಂತಾರ 2 ಸಿನಿಮಾದ ಸಿದ್ಧತೆಯನ್ನು ಸದ್ದಿಲ್ಲದೇ ಮಾಡುತ್ತಿದೆ. ಈಗಾಗಲೇ ಚಿತ್ರಕಥೆಯನ್ನು ಬರೆಯುವುದರಲ್ಲಿ ಚಿತ್ರತಂಡ ತೊಡಗಿಕೊಂಡಿದೆ ಎನ್ನುವ ಮಾಹಿತಿ ಇದೆ. ಆದರೆ, ಈ ವಿಷಯವನ್ನು ಸಿನಿಮಾ ಟೀಮ್ ಬಹಿರಂಗ ಪಡಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಟ್ಟಾಗಿ ‘ಹಾಸ್ಟೆಲ್ ಹುಡುಗರ’ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್ ವುಡ್ ತಾರೆಯರು

    ಒಟ್ಟಾಗಿ ‘ಹಾಸ್ಟೆಲ್ ಹುಡುಗರ’ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್ ವುಡ್ ತಾರೆಯರು

    ರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ, ಕ್ರಿಯೇಟಿವ್ ಕಂಟೆಂಟ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಚಿತ್ರದ ಮೊದಲ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಹಾಸ್ಟೆಲ್ ಹುಡುಗರು ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ಹೊರಟಿದೆ. ಇಂದು ಚಿತ್ರದ ‘ಪ್ರೊಟೆಸ್ಟ್ ಸಾಂಗ್’ ಚಿತ್ರತಂಡ ಬಿಡುಗಡೆ ಮಾಡಿದೆ. ಹಾಸ್ಟೆಲ್ ನಲ್ಲಿರುವ ಹುಡುಗರ ಕಥೆ, ವ್ಯಥೆ ಇರುವ ಈ ಹಾಡನ್ನು ಸಖತ್ ಮಜವಾಗಿ ಕಟ್ಟಿಕೊಡಲಾಗಿದ್ದು, ಅದಕ್ಕೆ ತಕ್ಕಂತೆ ಯೋಗರಾಜ್ ಭಟ್ ಸಾಹಿತ್ಯ, ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಹಾಡು ಕಿಕ್ ನೀಡುತ್ತಿದೆ. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ.  ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಪ್ರತಿ ಬಾರಿ ಯೂನೀಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೆಚ್ಚಿಕೊಂಡು ಪರಂವಃ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ರಾವಳಿ ಭಾಗದ ದೈವಗಳ (Daiva) ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ, ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಅನೇಕರು ದೈವಗಳ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ದೈವಗಳ ನಂಬಿಕೆ ಮತ್ತು ಅಪನಂಬಿಕೆಗಳ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ (Discussion) ನಡೆಯುತ್ತಿದೆ. ಈ ಚರ್ಚೆಗೆ ಕಾರಣವಾಗಿದ್ದು ನಟ ಕಿಶೋರ್ (Kishor) ಹಾಕಿರುವ ಪೋಸ್ಟ್ ಎನ್ನುವುದು ಗಮನಿಸಬೇಕಾದ ಅಂಶ.

    ಇತ್ತೀಚೆಗಷ್ಟೇ ದೈವಗಳಿಗೆ ಅಪಮಾನ ಮಾಡಿದವರು ಹೇಗೆ ರಕ್ತಕಾರಿಕೊಂಡು ಸತ್ತರು ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇಂಥದ್ದೊಂದು ವಿಡಿಯೋ ನೋಡಿದ್ದ ಕಿಶೋರ್ ಅವರು, ನಂಬಿಕೆ ಮತ್ತು ಮೂಢನಂಬಿಕೆ ಕುರಿತಾಗಿ ಸುದೀರ್ಘ ಬರೆದು ಪೋಸ್ಟ್ ಮಾಡಿದ್ದರು.  ಆ ಫೋಸ್ಟ್ ಕುರಿತಾಗಿಯೇ ಚರ್ಚೆ ನಡೆದಿದೆ. ಕಿಶೋರ್ ಹೇಳಿದ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಂಬಿಕೆ ಮತ್ತು ಮೂಢನಂಬಿಕೆ ಬಗ್ಗೆ ಮಾತನಾಡಿದ ಕಿಶೋರ್, ತಾವೇ ನಟಿಸಿದ್ದ ಕಾಂತಾರ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವಿದೆ. ಮೂಢನಂಬಿಕೆಯ ಬಗ್ಗೆ ಮಾತನಾಡುವವರು ಅದನ್ನು ಪ್ರಚೋದಿಸುವಂತಹ ಚಿತ್ರದಲ್ಲಿ ನಟಿಸಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರವರ ನಂಬಿಕೆ ಬಗ್ಗೆ ಯಾರೂ ಮಾತನಾಡಬಾರದು. ಅದನ್ನು ಅವರ ಪಾಲಿಗೆ ಬಿಟ್ಟುಬಿಡಬೇಕು ಎಂದೂ ಸಲಹೆ ನೀಡಿದ್ದಾರೆ.

    ಕಾಂತಾರ ಸಿನಿಮಾ ಬಂದ ನಂತರ ದೈವಗಳ ಬಗ್ಗೆ ರೀಲ್ಸ್ ಮಾಡಲಾಯಿತು. ಬೇರೆ ಬೇರೆ ಸನ್ನಿವೇಶಗಳಿಗೆ ಆ ಸಿನಿಮಾದ ದೃಶ್ಯಗಳನ್ನು ಹೋಲಿಸಲಾಯಿತು. ಹಾಗೆ ಮಾಡಬೇಡಿ ಎಂದು ಸ್ವತಃ ರಿಷಬ್ ಶೆಟ್ಟಿ (Rishabh Shetty) ಅವರೇ ಕೇಳಿಕೊಂಡರೂ, ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಕಾರಣದಿಂದಾಗಿಯೇ ಕಿಶೋರ್ ಸುದೀರ್ಘ ಬರಹವೊಂದನ್ನು ಬರೆದರು, ಇದೀಗ ಆ ಬರಹದ ಬಗ್ಗೆಯೂ ಚರ್ಚೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ 2 ಸಿನಿಮಾ ಬಗ್ಗೆ ಸುಳಿವು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು

    ಕಾಂತಾರ 2 ಸಿನಿಮಾ ಬಗ್ಗೆ ಸುಳಿವು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು

    ಈ ವರ್ಷದ ಸೂಪರ್ ಹಿಟ್ ‘ಕಾಂತರ’ ಸಿನಿಮಾ ಸಿಕ್ವಲ್ ಆಗತ್ತಾ, ಇಲ್ಲವಾ ಅನ್ನುವ ಗೊಂದಲವಿತ್ತು. ಮೊನ್ನೆಯಷ್ಟೇ ರಿಷಬ್ ಶೆಟ್ಟಿ ಅವರು ಕಾಂತಾರ 2 ಬಗ್ಗೆ ಸದ್ಯಕ್ಕೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಈ ಗೊಂದಲವನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಬಗೆಹರಿಸಿದ್ದಾರೆ. ಸದ್ಯದಲ್ಲೇ ಕಾಂತಾರ 2 ಸಿನಿಮಾ ಮಾಡದೇ ಇದ್ದರೂ, ಮಾಡುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಅವರು ಬೇರೊಂದು ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ಕಾಂತಾರ 2 ಸಿನಿಮಾದ ಕೆಲಸ ತಡವಾಗಬಹುದು. ಈ ಸಿನಿಮಾ ಸಿಕ್ವಲ್ ಮಾಡಬೇಕಾ? ಅಥವಾ ಪ್ರೀಕ್ವಲ್ ಮಾಡಬೇಕಾ ಎನ್ನುವ ಯೋಚನೆ ಮಾಡುತ್ತಿದ್ದೇವೆ. ಆದರೆ, ಸಿನಿಮಾ ಎರಡನೇ ಭಾಗ ಬರುವುದು ಪಕ್ಕಾ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾ ಬರುವುದು ಖಾತರಿಪಡಿಸಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈ ವರ್ಷದಲ್ಲಿ ಭಾರೀ ಸದ್ದು ಮಾಡಿತ್ತು. ದೇಶಾದ್ಯಂತ ಭರ್ಜರಿ ಗೆಲುವು ಪಡೆದಿತ್ತು. ನಾನಾ ಭಾಷೆಯ ಸಿನಿಮಾ ಗಣ್ಯರು ಈ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಹಾಗಾಗಿ ಕಾಂತಾರ 2 ಸಿನಿಮಾದ ಬಗ್ಗೆ ಅಭಿಮಾನಿಗಳು ಆಗ್ರಹಿಸಿದ್ದರು. ಈ ಕುರಿತು ದೈವವನ್ನೂ ಕೇಳಲಾಗಿತ್ತು. ದೈವವೂ ಕೂಡ ಅನುಮತಿ ಕೊಟ್ಟಿದ್ದರಿಂದ ಸಿನಿಮಾ ಬರುವುದು ಪಕ್ಕಾ ಆಗಿದೆ.

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿಂದ ಮೂಡಿ ಬಂದಿರುವ ಕಾಂತರ ಸಿನಿಮಾ, ಇದೀಗ ಆಸ್ಕರ್ ಅಂಗಳವನ್ನೂ ಮುಟ್ಟಿದೆ. ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿಯೂ ಇದೆ. ಜೊತೆಗೆ ಭಾರತದ ಆರ್.ಆರ್.ಆರ್  ರೀತಿಯ ಚಿತ್ರಗಳನ್ನು ಆಸ್ಕರ್ ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಬಗ್ಗೆ ರಿಷಬ್ ಮೌನ: ಬಾಲಿವುಡ್ ನಿರ್ದೇಶಕರ ಕಿತ್ತಾಟ

    ‘ಕಾಂತಾರ’ ಬಗ್ಗೆ ರಿಷಬ್ ಮೌನ: ಬಾಲಿವುಡ್ ನಿರ್ದೇಶಕರ ಕಿತ್ತಾಟ

    ಕಾಂತಾರ ಸಿನಿಮಾ ಬಿಡುಗಡೆಯಾದ ದಿನದಿಂದ ಈವರೆಗೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ. ಅದರಲ್ಲಿ ವಿವಾದಗಳು ಕೂಡ ಸೇರಿಕೊಂಡಿವೆ. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಕಾಂತಾರ ಬಗ್ಗೆ ರಿಷಬ್ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನ ಇಬ್ಬರು ನಿರ್ದೇಶಕರು ಮಾತ್ರ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಶುರು ಮಾಡಿದ್ದಾರೆ.

    ಕನ್ನಡ ಚಿತ್ರೋದ್ಯಮದಲ್ಲಿ ಕಾಂತಾರ 2 ಸಿನಿಮಾ ಬಗ್ಗೆ ಮಾತುಗಳು ಶುರುವಾಗಿದ್ದರೆ, ಬಾಲಿವುಡ್ ನಲ್ಲಿ ಕಾಂತಾರ ಸಿನಿಮಾದ ಬಗ್ಗೆಯೂ ಇನ್ನೂ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಕಾಂತಾರ 2 ಸಿನಿಮಾ ಮಾಡುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳುವ ಮೂಲಕ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಕಾಂತಾರ’ದ ವಿಚಾರವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

    ಗೆದ್ದ ಚಿತ್ರಗಳ  ಅನುಕರಣೆ ಮಾದರಿಯಾದದ್ದು ಅಲ್ಲ, ಗೆದ್ದ ಚಿತ್ರಗಳ ಫಾರ್ಮುಲಾಗಳ ಹಿಂದೆ ಬಿದ್ದ ಬಾಲಿವುಡ್ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕಾಂತಾರ, ಪುಷ್ಪ, ಕೆಜಿಎಫ್ 2 ರೀತಿಯ ಸಿನಿಮಾಗಳನ್ನು ಅನುಕರಿಸದಂತೆ ಅನುರಾಗ್ ಕಶ್ಯಪ್ ಸಂವಾದವೊಂದರಲ್ಲಿ ಹೇಳಿದ್ದರು. ಅವರ ಮಾತಿನ ಹಿಂದಿನ ಉದ್ದೇಶ ಗೆದ್ದ ಚಿತ್ರಗಳ ಮಾದರಿಯನ್ನು ಅನುಸರಿಸದೇ ಹೊಸ ರೀತಿಯ ಚಿತ್ರಗಳನ್ನು ಮಾಡಬೇಕು ಎನ್ನುವುದಾಗಿತ್ತು. ಆದರೆ, ವಿವೇಕ್ ಅಗ್ನಿಹೋತ್ರಿ ಅದನ್ನು ಅರ್ಥ ಮಾಡಿಕೊಳ್ಳದೇ ಇನ್ನೇನೊ ಕಾಮೆಂಟ್ ಮಾಡಿ ಚರ್ಚೆಗೆ ತಿದಿ ಒತ್ತಿದ್ದಾರೆ.

    ಅನುರಾಗ್ ಕಶ್ಯಪ್ ಅವರ ಮಾತನ್ನು ನಾನು ಒಪ್ಪುವುದಿಲ್ಲ. ಬಾಲಿವುಡ್ ಹಿನ್ನೆಡೆಗೆ ಅದು ಕಾರಣವಲ್ಲ ಎಂದು ಟಾಂಗ್ ನೀಡಿರುವ ವಿವೇಕ್ ಅಗ್ನಿಹೋತ್ರಿ, ಫಾಲೋವರ್ಸ್ ನಿಂದಲೇ ಪಾಠ ಮಾಡಿಸಿಕೊಂಡಿದ್ದಾರೆ. ಅನುರಾಗ್ ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹೆಡ್ ಲೈನ್ ನೋಡಿ ಕನ್ಫ್ಯೂಸ್ ಮಾಡಿಕೊಂಡಿರುವ ವಿವೇಕ್, ಈ ಮೂಲಕ ನೆಟ್ಟಿಗರ ತಮಾಷೆಯ ವಸ್ತುವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ 2’ ಸಿನಿಮಾದ ಪ್ಲ್ಯಾನ್ ಮುಂದೂಡಿದ ರಿಷಬ್ ಶೆಟ್ಟಿ: ಬೆಲ್ ಬಾಟಮ್ 2 ಮಾಡ್ತಾರಾ?

    ‘ಕಾಂತಾರ 2’ ಸಿನಿಮಾದ ಪ್ಲ್ಯಾನ್ ಮುಂದೂಡಿದ ರಿಷಬ್ ಶೆಟ್ಟಿ: ಬೆಲ್ ಬಾಟಮ್ 2 ಮಾಡ್ತಾರಾ?

    ಎರಡ್ಮೂರು ದಿನಗಳ ಹಿಂದೆಯಷ್ಟೇ ಕಾಂತಾರ 2 ಸಿನಿಮಾ ಮಾಡುವ ಕುರಿತು ದೈವ ಕೇಳಿದ್ದರು ನಿರ್ದೇಶಕ ರಿಷಬ್ ಶೆಟ್ಟಿ. ದೈವವು ಅಪ್ಪಣೆ ಕೊಡುವುದರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಗಮನಕ್ಕೂ ತರುವಂತೆ, ಅವರ ಪರವಾನಿಗೆ ತಗೆದುಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ, ಸರಿಯಾದ ಕ್ರಮದಲ್ಲಿ ಮತ್ತು ನಂಬಿಕೆ ಹಾಗೂ ಶ್ರದ್ಧೆಯಿಂದ ಸಿನಿಮಾ ಮಾಡುವಂತೆ ಸೂಚಿಸಿತ್ತು. ದೈವವೇ ಸಿನಿಮಾ ಮಾಡುವಂತೆ ಗ್ರೀನ್ ಸಿಗ್ನಲ್ ಕೊಟ್ಟನಂತರ ರಿಷಬ್ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಿಷಬ್ ಹೇಳಿದ್ದೇ ಬೇರೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ರಿಷಬ್ ಶೆಟ್ಟಿ, ಸದ್ಯಕ್ಕೆ ಕಾಂತಾರ 2 ಸಿನಿಮಾದ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಕಾಂತಾರ 2 ಸಿನಿಮಾ ಕುರಿತಾಗಿ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ ಎಂದೂ ಅವರು ಹೇಳಿದ್ದಾರೆ. ದೈವವನ್ನು ಕೇಳುವುದಕ್ಕಿಂತ ಮುಂಚೆ ಆಗಲೇ ಸ್ಕ್ರಿಪ್ಟ್ ಕೆಲಸದಲ್ಲೂ ಅವರು ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಟೀಮ್ ಕಟ್ಟಿಕೊಂಡು ಕಾಂತಾರ 2 ಕಥೆಯನ್ನು ಹೆಣೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳುವ ಮೂಲಕ ಎಲ್ಲವನ್ನೂ ನಿರಾಕರಿಸಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ರಿಷಬ್ ಶೆಟ್ಟಿ ಅವರು ಇಷ್ಟೊತ್ತಿಗಾಗಲೇ ಬೆಲ್ ಬಾಟಮ್ 2 ಸಿನಿಮಾ ಮಾಡಬೇಕಿತ್ತು. ವರ್ಷದ ಹಿಂದೆಯೇ ಈ ಸಿನಿಮಾ ಮುಹೂರ್ತ ಕೂಡ ಆಗಿದೆ. ಕಾಂತಾರ 2 ಸಿನಿಮಾ ಬಗ್ಗೆ ಯೋಚನೆ ಮಾಡದೇ ಇದ್ದರೆ, ಬೆಲ್ ಬಾಟಮ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಾ ಎನ್ನುವ  ಅನುಮಾನ ಕೂಡ ಮೂಡಿದೆ. ಆದರೆ, ಈ ಕುರಿತು ರಿಷಬ್ ಆಗಲಿ ಅಥವಾ ಬೆಲ್ ಬಾಟಮ್ 2 ಸಿನಿಮಾದ ನಿರ್ಮಾಪಕರಾಗಲಿ ಯಾವುದೇ ಮಾಹಿತಿ ನೀಡಿಲ್ಲ.

    ಕಾಂತಾರ 2 ಸದ್ಯಕ್ಕೆ ಮಾಡುತ್ತಿಲ್ಲ ಎಂದು ರಿಷಬ್ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಂತೆಯೇ ಬೆಲ್ ಬಾಟಮ್ ಸಿನಿಮಾದ ಸುದ್ದಿಗೆ ಮಹತ್ವ ಬಂದಿದೆ. ಬಲ್ಲ ಮೂಲಗಳ ಪ್ರಕಾರ ಕಾಂತಾರ 2 ಸಿನಿಮಾದ ನಂತರವಷ್ಟೇ ಬೆಲ್ ಬಾಟಮ್ 2 ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಿಷಬ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೂ ಯಾವ ಸಿನಿಮಾದ ಬಗ್ಗೆ ಶೆಟ್ಟರು ಮೊದಲು ಅಪ್ ಡೇಟ್ ಕೊಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಿ ‘ಕಾಂತಾರ 2’ ಮಾಡುವಂತೆ ನುಡಿದ ದೈವ

    ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಿ ‘ಕಾಂತಾರ 2’ ಮಾಡುವಂತೆ ನುಡಿದ ದೈವ

    ಕಾಂತಾರ 2 ಸಿನಿಮಾ ಮಾಡಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳುವಂತೆ ದೈವ ನುಡಿದಿರುವುದಾಗಿ ದೈವ ನರ್ತಕ ಉಮೇಶ್ ಪಂಬದ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ತಿಂಗಳ ಮೊದಲು ರಿಷಬ್ ಶೆಟ್ಟಿ ಹರಕೆ ನೇಮ ಕೊಡುವುದಾಗಿ ಹೇಳಿ ವೀಳ್ಯ ಕೊಟ್ಟಿದ್ದರು. ಮೊನ್ನೆ ರಿಷಬ್ ಮತ್ತು ಅವರ ತಂಡ ಬಂದು ದೈವದ ಹರಕೆ ಕೊಟ್ಟರು. ಚೆಂದದಿಂದ ದೈವ ಹರಕೆ ಸ್ವೀಕರಿಸಿ ಅವರಿಗೆ ಅಭಯ ಕೊಟ್ಟಿದೆ. ನಮಗೆ ಅವರ ಪರಿಚಯ ಇರಲಿಲ್ಲ, ನಡೆಸಿಕೊಟ್ಟವರು ಮಡಿವಾಳ ಕುಟುಂಬದವರು. ದೈವದ ನಡೆಯಲ್ಲಿ ಆದ ವಿಷಯ ನನಗೆ ಗೊತ್ತಿರಲ್ಲ, ಅದು ದೈವಕ್ಕೆ ‌ಮಾತ್ರ ಗೊತ್ತಿರುತ್ತೆ. ದೈವದ ನೇಮೋತ್ಸವ ಆದ ನಂತರ ನನಗೆ ಭಕ್ತರು ಬಂದು ಈ ಬಗ್ಗೆ ಹೇಳಿದರು’ ಎಂದರು.

    ಕಾಂತಾರ 2 ಸಿನಿಮಾ ಅನುಮತಿ ಬಗ್ಗೆ ಮಾತನಾಡಿದ ಉಮೇಶ್, ‘ಕಾಂತಾರ 2 ಸಿನಿಮಾ ‌ಮಾಡಲು ದೈವ ಅನುಮತಿ ಕೊಟ್ಟಿದೆ ಅಂತ ನನಗೆ ಭಕ್ತರು ಹೇಳಿದರು. ರಿಷಬ್ ಶೆಟ್ಟಿ ಎರಡನೇ ಭಾಗದ ಬಗ್ಗೆ ದೈವದ ಬಳಿ ಕೇಳಿದರು. ಆದರೆ ಅದಕ್ಕೆ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ಹೇಳಿದೆಯಂತೆ. ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ ಅಂತ ದೈವ ಹೇಳಿದೆಯಂತೆ. ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ‌ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ಹೇಳಿದೆ. ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಹೋಗಲು ದೈವ ಹೇಳಿದೆ’ ಎಂದಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಹೋಗ್ತಾ ಇರ್ತಾರೆ, ಮೊನ್ನೆ ದೈವವೂ ಧರ್ಮಸ್ಥಳಕ್ಕೆ ಹೋಗಲು ಅಪ್ಪಣೆ ಆಗಿದೆ. ಕಾಂತಾರ 2 ಮಾಡುವ ಮುನ್ನ ಖಾವಂದರ(ಹೆಗ್ಗಡೆ) ಬಳಿ ಅನುಮತಿ ಕೇಳಲು ದೈವ ಅಪ್ಪಣೆ ‌ಕೊಟ್ಟಿದೆಯಂತೆ. ರಿಷಬ್ ಬಹಳ ಒಳ್ಳೆಯವರು, ಬಹಳ ಸಂತೋಷದಿಂದ ಎಲ್ಲರಲ್ಲೂ ಇದ್ದರು. ನೇಮೋತ್ಸವದ ವೇಳೆಯೂ ಬಹಳ ಶುದ್ದಾಚಾರದಿಂದ ಅವರು ನಡೆಸಿಕೊಟ್ಟಿದ್ದಾರೆ. ನಾನು ನೋಡಿದ ಮಟ್ಟಿಗೆ ಅವರ ಸೇವೆ ನಮಗೆ ಸಂತೋಷ ಆಗಿದೆ, ಉಳಿದಿದ್ದು ದೈವಕ್ಕೆ ಬಿಟ್ಟಿದ್ದು. ದೈವದ ವಿಷಯದಲ್ಲಿ ಕೆಟ್ಟದ್ದು ಮಾಡಬಾರದು, ತಿಳಿದು ಮಾಡಲೇ ಬಾರದು. ಕಾಂತಾರ ಭಾಗ 2 ಮಾಡಲು ಅವರು ಮತ್ತಷ್ಟು ಶುದ್ದಾಚಾರ ಪಾಲಿಸಬೇಕು. ಮೊದಲ ಚಿತ್ರದಲ್ಲಿ ಬಹಳ ಶುದ್ದಾಚಾರ ಪಾಲಿಸಿ ಭಕ್ತಿಯಿಂದ ‌ಮಾಡಿದ್ದಾರೆ. ಹಾಗಾಗಿ ಎರಡನೇ ಭಾಗವನ್ನೂ ಅವರು ಅಷ್ಟೇ ಶುದ್ದಾಚಾರದಿಂದ ಮಾಡ್ತಾರೆ ಅನ್ನೋ ನಂಬಿಕೆ ಇದೆ’ ಎಂದಿದ್ದಾರೆ ಉಮೇಶ್ ಪಂಬದ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ

    ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ

    ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುತ್ತಾ ಎನ್ನುವ ಅನುಮಾನ ಎಲ್ಲರಲ್ಲಿತ್ತು. ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರಿಂದ ‘ಕಾಂತಾರ 2’ ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ಹಾಗಾಗಿಯೇ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

    ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ  ಪಂಜುರ್ಲಿ ಕೋಲದಲ್ಲಿ ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

    ಮಧ್ಯೆರಾತ್ರಿ ನಡೆದ ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೇ ಇದ್ದರೂ, ಕೋಲದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    ಪಂಜುರ್ಲಿ ದೈವವು ಕೂಡ `ಕಾಂತಾರ 2′ ಮಾಡಲು ಅನುಮತಿ ನೀಡಿದೆ. ಜೊತೆಗೆ ಕೆಲವು ಸಲಹೆ ಮತ್ತು ಎಚ್ಚರಿಕೆಗಳನ್ನ ಕೂಡ ನೀಡಿದೆ. ಪಾರ್ಟ್ 2ನಲ್ಲಿ ಈ ಹಿಂದಿನ ಕಲಾವಿದರೇ ಮುಂದುವರೆಯಲಿದ್ದಾರೆ. ಇನ್ನೂ ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ

    ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ

    ಮಂಗಳೂರು: ನಟ ರಿಷಬ್ ಶೆಟ್ಟಿ (Rishab Shetty) ನಟಿಸಿರುವ ಬ್ಲಾಕ್‍ಬಸ್ಟರ್ ಮೂವಿ ಕಾಂತಾರ (Kantara) ಚಿತ್ರವನ್ನು ವೀಕ್ಷಿಸಲೆಂದು ಥಿಯೇಟರ್ ಗೆ ಬಂದ ಜೋಡಿಯ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿಬಂದಿದೆ.

    ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ದಲ್ಲಿ ನಡೆದಿದೆ. ಸದ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐವರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ಹಮೀದ್, ಅಶ್ರಫ್, ಸಾದಿದ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ವಿರುದ್ಧ ದೂರು ನೀಡಲಾಗಿದೆ.

    ನಡೆದಿದ್ದೇನು..?: ಬಿಸಿರೋಡ್ ಮೂಲದ ಬಿಕಾಂ ವಿದ್ಯಾರ್ಥಿ ಹಾಗೂ 18 ವರ್ಷದ ಯುವತಿ ಸುಳ್ಯದ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ನೋಡಲು ಬಂದಿದ್ದರು. ಸಿನಿಮಾ ಆರಂಭಕ್ಕೆ ಸಮಯವಿದ್ದ ಹಿನ್ನೆಲೆಯಲ್ಲಿ ಇಬ್ಬರು ಪಾರ್ಕಿಂಗ್ ಜಾಗದಲ್ಲಿ ನಿಂತು ಮಾತನಾಡುತ್ತಿದ್ದರು. ಇದನ್ನೂ ಓದಿ: `ಕಾಂತಾರ’ ಸಿನಿಮಾ, ಬ್ಯಾನ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

    ಈ ವೇಳೆ 5ರಿಂದ 10 ಜನರ ಗುಂಪು ವಿದ್ಯಾರ್ಥಿಗಳ ಹತ್ತಿರ ಬಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕೆನ್ನೆಗೆ, ಬೆನ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಕೂಡಲೇ ಇಬ್ಬರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತಿಲ್ಲ: ರಿಷಬ್ ಶೆಟ್ಟಿ ಸ್ಪಷ್ಟನೆ

    ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತಿಲ್ಲ: ರಿಷಬ್ ಶೆಟ್ಟಿ ಸ್ಪಷ್ಟನೆ

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಾಲಿವುಡ್ ನಟ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಕಾಂಬಿನೇಷನ್ ಬಗ್ಗೆ ಸುದ್ದಿ ವೈರಲ್ ಕೂಡ ಆಗಿತ್ತು. ಈ ಹಿಂದೆ ರಿಷಬ್ ‘ನಾನು ಕನ್ನಡ ಸಿನಿಮಾದಲ್ಲಿ ಮಾತ್ರ ನಟಿಸುತ್ತೇನೆ. ಬೇರೆ ಚಿತ್ರೋದ್ಯಮವನ್ನು ಕನ್ನಡದಿಂದಲೇ ಪ್ರತಿನಿಧಿಸುತ್ತೇನೆ’ ಎಂದಿದ್ದರು. ಹಾಗಾಗಿ ಅವರು ತಮ್ಮ ಮಾತು ಇಷ್ಟುಬೇಗ ಮರೆತರಾ? ಎನ್ನುವ ಪ್ರಶ್ನೆ ಕೂಡ ಮಾಡಲಾಗಿತ್ತು. ಆದರೆ, ಅದು ಅಸಲಿ ಸುದ್ದಿ ಅಲ್ಲವೆಂದಿದ್ದಾರೆ ರಿಷಬ್.

    ಪಬ್ಲಿಕ್ ಟಿವಿ ಡಿಜಿಟಲ್ ರಿಷಬ್ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ‘ಇಂತಹ ಸುಳ್ಳುಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಹೊಂಬಾಳೆ ಫಿಲ್ಮ್ಸ್ ನವರು ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಿದ್ದರೆ ಅವರೇ ಹೇಳುತ್ತಾರೆ. ಅಧಿಕೃತ ಮಾಹಿತಿಗಳನ್ನು ಅವರು ಕಾಲ ಕಾಲಕ್ಕೆ ಕೊಡುತ್ತಲೇ ಬಂದಿದ್ದಾರೆ. ನನಗೆ ಈ ವಿಚಾರ ಗೊತ್ತಿಲ್ಲ. ಆದರೆ, ನಾನು ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಅನ್ನುವುದು ಶುದ್ಧ ಸುಳ್ಳು ಎಂದಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಎಂದು ಈಗಾಗಲೇ ಸ್ಪಷ್ಟ ಪಡಿಸಿರುವೆ. ಕನ್ನಡ ಸಿನಿಮಾ ಮಾಡಿಕೊಂಡೇ, ಅದೇ ಸಿನಿಮಾವನ್ನು ಇತರ ಭಾಷೆಗೆ ತಗೆದುಕೊಂಡು ಹೋಗುತ್ತೇನೆ. ಯಾವ ಸಿನಿಮಾ ಮಾಡುತ್ತಿದ್ದೇನೆ, ಅದರಲ್ಲಿ ಯಾರು ಇದ್ದಾರೆ ಎನ್ನುವುದನ್ನೇ ನಾನೇ ಮಾಹಿತಿಯನ್ನು ಕೊಡುತ್ತಾ ಬರುತ್ತೇನೆ. ಶಾರುಖ್ ಖಾನ್ ಜೊತೆಗಿನ ಸಿನಿಮಾ ಸುದ್ದಿ ಕೇವಲ ಗಾಸಿಪ್. ಅದು ಸುಳ್ಳು ಎಂದಿದ್ದಾರೆ ರಿಷಬ್ ಶೆಟ್ಟಿ.

    Live Tv
    [brid partner=56869869 player=32851 video=960834 autoplay=true]