ಡೆಹ್ರಾಡೂನ್: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ (Rishabh Pant) ಸಂಚರಿಸುತ್ತಿದ್ದ ಕಾರು ಅಪಘಾತಗೊಂಡು ರಕ್ತದ ಮಡುವಿನಲ್ಲಿ ಪಂತ್ ಕಾರಿನ ಗಾಜು ಹೊಡೆದು ಹೊರಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯ ಕೆಲ ವ್ಯಕ್ತಿಗಳು ಪಂತ್ ಕಾರಿನಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಬಗ್ಗೆ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಉತ್ತರಾಖಂಡದಿಂದ (Uttarakhand) ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‍ಪುರ ಝಾಲ್‍ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಪಂತ್ ತಲೆಯಲ್ಲಿ ರಕ್ತ ಸುರಿಯುತ್ತಿದ್ದರೆ, ಬೆನ್ನಿನಲ್ಲಿ ಬೆಂಕಿಯಿಂದ ಸುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

ಇತ್ತ ಪಂತ್ ನೋವಿನಿಂದ ನರಳುತ್ತಿದ್ದರೆ, ಅತ್ತ ಕಿಡಿಗೇಡಿಗಳು ಪಂತ್ ಕಾರಿನಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ರಿಷಭ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ (Mercedes-AMG GLE43 Coupe) ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿದ್ದೆಗೆ ಜಾರಿದಂತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಕಾರಿನ ಕಿಟಕಿ ಗಾಜನ್ನು ಒಡೆದು ಪಂತ್ ಹೊರಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ
https://twitter.com/_sillysoul/status/1608712913405235201
ಕೂಡಲೇ ಪಂತ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ, ಬೆನ್ನು ಹಾಗೂ ಕಾಲಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿದ್ದು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
























