Tag: Rishabh Pant

  • RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    ಮುಂಬೈ: ಭೀಕರ ಕಾರು ಅಪಘಾತದಿಂದ ಗಾಯಗೊಂಡಿದ್ದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಷಬ್ (Rishabh Pant) ಪಂತ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಸೇರಿದಂತೆ ಹಲವು ಸ್ಟಾರ್ ಆಟಗಾರರು 2023ರ 16ನೇ ಆವೃತ್ತಿ ಐಪಿಎಲ್‌ನಿಂದ (IPL 2023) ಹೊರಗುಳಿದಿದ್ದಾರೆ. ಇದರಿಂದ ನೆಚ್ಚಿನ ತಂಡದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

    Rishabh Pant 3

    ಯಾರೆಲ್ಲಾ ಐಪಿಎಲ್‌ನಿಂದ ಮಿಸ್ಸಿಂಗ್?:
    ರಿಷಬ್ ಪಂತ್: 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಬ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಗೈರಾಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಗ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಜಸ್‌ಪ್ರೀತ್‌ ಬುಮ್ರಾ:
    ಬೆನ್ನು ನೋವಿನ ಸಮಸ್ಯೆಯಿಂದ ಈಗಷ್ಟೇ ಗುಣಮುಖರಾಗುತ್ತಿರುವ ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಮುಂಬರುವ 2023ರ ಐಪಿಎಲ್ ಟೂರ್ನಿ ಹಾಗೂ 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಿಂದ ಬಹುತೇಕ ಹೊರ ಬಿದ್ದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಗಾಯಕ್ಕೆ ತುತ್ತಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರು ನಿಗದಿತ ಸಮಯಕ್ಕೆ ಗುಣಮಖರಾಗುವಲ್ಲಿ ವಿಫಲರಾದರು. ಫೆಬ್ರವರಿ 16ರಂದು ಬುಮ್ರಾ ತಮ್ಮ ಫಿಟ್ನೆಸ್ ಸಾಬೀತುಪಡಿಸುವಲ್ಲಿ ವಿಫಲರಾದರು. ಆದ್ದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಿಂದಲೂ ಅವರು ಹೊರಗುಳಿಯಲಿದ್ದಾರೆ. ಜೊತೆಗೆ ಕಳೆದ ಹಲವು ವರ್ಷಗಳಿಂದ ಮುಂಬೈ ಫ್ರಾಂಚೈಸಿ ಜಸ್‌ಪ್ರೀತ್‌ ಬುಮ್ರಾ ಅವರ ಮೇಲೆ ಸಾಕಷ್ಟು ಅವಲಂಬಿಸಿದ್ದು, ಫ್ರಾಂಚೈಸಿಗೂ ಅಲಭ್ಯತೆಯ ಆತಂಕ ಎದುರಾಗಿದೆ.

    ಪ್ಯಾಟ್ ಕಮ್ಮಿನ್ಸ್:
    ಕೋಲ್ಕತ್ತಾ ನೈಟ್‌ರೈಡರ್ಸ್ (KKR) ಪ್ರಮುಖ ಆಟಗಾರನಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಸಹ 16ನೇ ಐಪಿಎಲ್ ಆವೃತ್ತಿಯಿಂದ ಹೊರಗುಳಿಯುತ್ತಿದ್ದಾರೆ. ತಮ್ಮ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಅವರು ಸಿಡ್ನಿಗೆ ಮರಳಿದ್ದಾರೆ. ಇದನ್ನೂ ಓದಿ: ಬೆತ್‌ ಮೂನಿ ಭರ್ಜರಿ ಫಿಫ್ಟಿ – ಆಸ್ಟ್ರೇಲಿಯಾಗೆ 6ನೇ ಬಾರಿಗೆ ವಿಶ್ವಕಪ್‌ ಚಾಂಪಿಯನ್‌ ಕಿರೀಟ

    ಮಿಚೆಲ್ ಸ್ಟಾರ್ಕ್, ಸ್ಟೀವನ್ ಸ್ಮಿತ್:
    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಸ್ಟ್ರೇಲಿಯಾದ (Australia) ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ 2023ರ ಐಪಿಎಲ್ ಹರಾಜಿಗೆ ನೋಂದಣಿ ಮಾಡಿಕೊಳ್ಳದ ಕಾರಣ ಅವರು ಈ ಬಾರಿ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ಕೈಬೆರಳು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್ಕ್ ಭಾರತದ ವಿರುದ್ಧ 3 ಮತ್ತು 4ನೇ ಟೆಸ್ಟ್ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ. ಆದ್ರೆ ಸ್ಟೀವನ್ ಸ್ಮಿತ್ ತಾವೇ ಈ ಬಾರಿ ಟಿ20 ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಲೆಕ್ಸ್ ಹೇಲ್ಸ್:
    ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ವೈಯಕ್ತಿಕ ಕೆಲಸದ ಒತ್ತಡಗಳಿಂದ 16ನೇ ಆವೃತ್ತಿ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೇಲ್ಸ್ 2022ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಕಾರಣವಾಗಿದ್ದರು. ಇದನ್ನೂ ಓದಿ: ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

  • ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

    ಭೋಪಾಲ್: ಭೀಕರ ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರ ಗುಣಮುಖರಾಗುವಂತೆ ಟೀಂ ಇಂಡಿಯಾ (Team India) ಆಟಗಾರರು ಸೋಮವಾರ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದಲ್ಲಿ (Ujjain Mahakaleswar Temple) ಪ್ರಾರ್ಥನೆ ಸಲ್ಲಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ ಜನವರಿ 24ರಂದು ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleswar Temple) ಭೇಟಿ ನೀಡಿ ಟೀಂ ಇಂಡಿಯಾ ಆಟಗಾರರು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್ ಯಾದವ್, ಸ್ಪಿನ್ ಬೌಲರ್ ಕುಲ್‌ದೀಪ್ ಯಾವದ್ ಹಾಗೂ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಸೋಮವಾರ ಬೆಳಗ್ಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ `ರಿಷಬ್ ಪಂತ್’ ಆದಷ್ಟು ಬೇಗ ಗುಣಮುಖರಾಗಿ ಟೀಂ ಇಂಡಿಯಾಕ್ಕೆ ಮರಳುವಂತೆ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಸಾಂಪ್ರದಾಯಿಕ ಧೋತಿ, ಅಂಗವಸ್ತ್ರ ಉಡುಗೆ ತೊಟ್ಟು ಮುಂಜಾನೆ ನಡೆದ ಶಿವನ `ಭಸ್ಮ ಆರತಿ’ಯಲ್ಲೂ (Bhasma Aarti) ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಬಳಿಕ ಹಾಕಿಯಲ್ಲೂ ಭಾರತಕ್ಕೆ ಕಂಟಕವಾದ ನ್ಯೂಜಿಲೆಂಡ್ – ಮರೆಯಲಾಗದ ಆ 3 ಸೋಲು

    ಈ ಕುರಿತು ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, `ರಿಷಬ್ ಪಂತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸಿದ್ದೇವೆ. ಅವರ ಪುನರಾಗಮನ ನಮಗೆ ಬಹಳ ಮುಖ್ಯ. ನಾವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದಿದ್ದೇವೆ. ಅವರ ವಿರುದ್ಧದ ಅಂತಿಮ ಪಂದ್ಯ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ರಿಷಬ್‌ಗೆ ಏನಾಗಿತ್ತು?: 2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಮುಂಬೈ: ಭೀಕರ ಕಾರು ಅಪಘಾತದಿಂದ (Car Accident) ಗಂಭೀರ ಗಾಯಗೊಂಡಿದ್ದ ಟೀಂ ಇಂಡಿಯಾ (Team India) ಕ್ರಿಕೆಟಿಗ ರಿಷಬ್ ಪಂತ್‌ಗೆ (Rishabh Pant) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

    ಮಂಗಳವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಅಪಘಾತದ ನಂತರ ತಮಗೆ ಸಹಾಯ ಮಾಡಿದ ಇಬ್ಬರು ಯುವಕರನ್ನ ಸ್ಮರಿಸಿದ್ದಾರೆ. ರಜತ್ ಕುಮಾರ್ ಮತ್ತು ನಿಶು ಕುಮಾರ್ ಚಿತ್ರವನ್ನ ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಪಂತ್ ಭಾವುಕ ಸಂದೇಶ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    `ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನೀಗ ಚೇತರಿಕೆಯ ಹಾದಿಯಲ್ಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ಉತ್ಸಾಹ ಹೆಚ್ಚಿದೆ. ನಾನು ಪ್ರತಿದಿನ ಚೇತರಿಸಿಕೊಳ್ಳುತ್ತಿದ್ದೇನೆ. ಮುಂದಿನ ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಈ ಕಷ್ಟದ ಸಮಯದಲ್ಲಿ ಸಿಕ್ಕ ನಿಮ್ಮ ಪ್ರೀತಿಯ ಮಾತುಗಳು, ಬೆಂಬಲಕ್ಕಾಗಿ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಹ ಆಟಗಾರನ ಗೆಳತಿಯೊಂದಿಗೆ ಪಾಕ್ ನಾಯಕ ಚಾಟಿಂಗ್ – ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್?

    `ನಾನು ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದೇ ಇರಬಹುದು. ಆದರೆ ನಾನು ಈ ಇಬ್ಬರು ವೀರರನ್ನು ಸ್ಮರಿಸಬೇಕು. ನನ್ನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದವರು ಇವರು. ಇವರಿಗೆ ನಾನು ಶಾಶ್ವತವಾಗಿ ಕೃತಜ್ಞನಾಗಿರುತ್ತೇನೆ. ಅಲ್ಲದೇ ನನ್ನ ಅಭಿಮಾನಿಗಳು, ನನ್ನ ತಂಡ ಸಹಪಾಠಿಗಳು ಚಿಕಿತ್ಸೆ ನೀಡಿದ ವೈದ್ಯರು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಿಮ್ಮೆಲ್ಲರನ್ನೂ ನಾನು ಮತ್ತೆ ಮೈದಾನದಲ್ಲಿ ನೋಡಲು ಎದುರುನೋಡುತ್ತಿದ್ದೇನೆ ಎಂದು ಭಾವುಕ ನುಡಿಗಳನ್ನ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

    ರಿಷಬ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಜುಗೆ ಬಲಗೈ ಶಾಪ – ಪಂತ್‌ಗೆ ಎಡಗೈ ವರ

    ಸಂಜುಗೆ ಬಲಗೈ ಶಾಪ – ಪಂತ್‌ಗೆ ಎಡಗೈ ವರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಂತ್ ಮುಂಬೈಗೆ ಏರ್‌ಲಿಫ್ಟ್‌

    ಪಂತ್ ಮುಂಬೈಗೆ ಏರ್‌ಲಿಫ್ಟ್‌

    ಡೆಹ್ರಾಡೂನ್: ಕಾರು ಅಪಘಾತದಲ್ಲಿ (Accident) ಗಾಯಗೊಂಡಿದ್ದ ಟೀಂ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್‍ರನ್ನು (Rishabh Pant) ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ (Mumbai) ಏರ್‌ಲಿಫ್ಟ್‌ ಮಾಡಲಾಗಿದೆ.

    ಡಿ.30 ರಂದು ಮುಂಜಾನೆ ಉತ್ತರಾಖಂಡದಿಂದ ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮಲ್‍ಪುರ ಝಾರ್‌ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಒಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಕೂಡಲೇ ಪಂತ್‍ರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದ ಪಂತ್ ಈವರೆಗೆ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್‌ ಮಾಡಲಾಗಿದೆ. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪಂತ್‌ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಚಾಮುಂಡಿ ತಾಯಿ ದರ್ಶನ ಪಡೆದ ಕೆ.ಎಲ್ ರಾಹುಲ್

    ಅಪಘಾತದ ಬಳಿಕ ರಿಷಭ್ ಅವರ ಹಣೆಗೆ ಎರಡು ಸ್ಟಿಚ್ ಹಾಕಲಾಗಿತ್ತು. ಅವರ ಬಲ ಮೊಣಕಾಲು, ಬಲ ಮಣಿಕಟ್ಟು, ಪಾದ, ಪಾದದ ಬೆರಳು, ಬೆನ್ನಿಗೆ ಗಾಯವಾಗಿತ್ತು. ಇದೀಗ ಕಾಲಿನ ಗಾಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿರುವ ಕಾರಣ ಪಂತ್‍ರನ್ನು ಮುಂಬೈಗೆ ಏರ್‌ಲಿಫ್ಟ್‌ ಮಾಡಿಸಿ ಚಿಕಿತ್ಸೆ ಕೊಡಿಸಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ

    https://twitter.com/rishabpantclub/status/1610568647050952704

    ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪಂತ್ ಮುಂದಿನ 6 ತಿಂಗಳು ಕ್ರಿಕೆಟ್‍ನಿಂದ ದೂರ ಉಳಿಯಬೇಕಾಗಿದ್ದು, ಈ ಬಾರಿಯ ಐಪಿಎಲ್‍ನಲ್ಲೂ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ವೈಡ್ ಕೊಡದ ಅಂಪೈರ್‌ಗೆ ನಿಂದಿಸಿದ ದೀಪಕ್ ಹೂಡಾ

    Live Tv
    [brid partner=56869869 player=32851 video=960834 autoplay=true]

  • ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಮುಂಬೈ: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಕಾರು ಅಪಘಾತಗೊಂಡು (Car Accident) ಗಾಯಗೊಂಡಿರುವ ಹಿನ್ನೆಲೆ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ (Test) ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಸ್ಥಾನ ತುಂಬಲು ಮೂವರು ಆಟಗಾರರ ನಡುವೆ ಪೈಪೋಟಿ ಕಂಡುಬಂದಿದೆ.

    ಪಂತ್ ಕಾರು ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಮುಂದಿನ 6 ತಿಂಗಳು ಸಂಪೂರ್ಣ ವಿಶ್ರಾಂತಿ ಬೇಕಾಗಬಹುದೆಂದು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಪಂತ್ ಟೀಂ ಇಂಡಿಯಾದಿಂದ ಸದ್ಯ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಆಡಲು ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಮುಕ್ತ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ

    ಹಾಗಾಗಿ ಈಗಾಗಲೇ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿದ್ದ ಕೆ.ಭರತ್ (K Bharat) ಮತ್ತು ಏಕದಿನ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿ ಮಿಂಚಿರುವ ಇಶಾನ್ ಕಿಶನ್ (Ishan Kishan) ನಡುವೆ ಪೈಪೋಟಿ ಇದೆ. ಈ ನಡುವೆ ಅಚ್ಚರಿಯ ಹೆಸರೊಂದು ಇವರೊಂದಿಗೆ ಕಾಣಿಸಿಕೊಂಡಿದೆ. ಇದೀಗ ರೇಸ್‍ನಲ್ಲಿ ಉಪೇಂದ್ರ ಯಾದವ್ (Upendra Yadav) ಸೇರಿಕೊಂಡಿದ್ದಾರೆ.

    ಉಪೇಂದ್ರ ಯಾದವ್ ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಈಗಾಗಲೇ ಇಂಡಿಯಾ ಎ ತಂಡದ ಪರ ಆಡಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್‍ನಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ ಹಾಗಾಗಿ ಪಂತ್ ಸ್ಥಾನ ತುಂಬಲು ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ಇದೀಗ ಸದ್ಯ ಕೆ.ಭರತ್ ಟೆಸ್ಟ್‌ನಲ್ಲಿ ಮೊದಲ ಆಯ್ಕೆಯ ಕೀಪರ್ ಆದರೆ, ಇಶಾನ್ ಕಿಶನ್ ಜೊತೆ ಸಂಜು ಸ್ಯಾಮ್ಸನ್ ಕೂಡ ರೇಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ತವರಿನಲ್ಲಿ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿ ಆಡಲಿದೆ. ಈ ವೇಳೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಆಗಿ ಬಿಸಿಸಿಐ (BCCI) ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ

    ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ

    ಡೆಹ್ರಾಡೂನ್: ಕಾರು ಅಪಘಾತದಲ್ಲಿ (Car Accident) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್‍ರನ್ನು (Rishabh Pant) ನೋಡಲು ಯಾರು ಆಸ್ಪತ್ರೆಗೆ ತೆರಳಬೇಡಿ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (DDCA) ನಿರ್ದೇಶಕ ಶಾಮ್ ಶರ್ಮಾ ಮನವಿ ಮಾಡಿಕೊಂಡಿದ್ದಾರೆ.

    ಗಂಭೀರ ಗಾಯಗೊಂಡಿದ್ದ ಪಂತ್ ಇದೀಗ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪಂತ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಪಂತ್‍ರನ್ನು ನೋಡಲು ಸಾಕಷ್ಟು ಗಣ್ಯರು ಆಸ್ಪತ್ರೆಯತ್ತ ಬರುತ್ತಿದ್ದಾರೆ. ಯಾರು ಕೂಡ ಪಂತ್‍ರನ್ನು ನೋಡಲು ಆಸ್ಪತ್ರೆಗೆ ತೆರಳಬೇಡಿ ಇದರಿಂದ ಅವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಯಾರು ಭೇಟಿಗೆ ಪ್ರಯತ್ನಿಸಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾರನ್ನು ಭೇಟಿಯಾದ ಪಾಂಡ್ಯ ಬ್ರದರ್ಸ್

    ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆದಿದೆ. ಈ ಬಗ್ಗೆ ಪಂತ್ ಜೊತೆ ನಾನು ಮಾತನಾಡಿದ್ದೇನೆ. ಸದ್ಯ ಪಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬಿಸಿಸಿ ವೈದ್ಯರ ತಂಡ, ಜಯ್‌ ಶಾ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆಯ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ಪಂತ್‍ಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಕೂಡ ಇದೆ. ಇದಕ್ಕಾಗಿ ಏರ್‌ಲಿಫ್ಟ್‌ ಮಾಡುವ ಬಗ್ಗೆ ಈಗಾಗಲೇ ಮಾಹಿತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಉತ್ತರಾಖಂಡದಿಂದ ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮಲ್‍ಪುರ ಝಾರ್‌ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಕೂಡಲೇ ಪಂತ್‍ರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ಡೆಹ್ರಾಡೂನ್: ಅತ್ಯಂತ ಭೀಕರ ರಸ್ತೆ ಅಪಘಾತದಲ್ಲಿ (Road Accident) ಟೀಂ ಇಂಡಿಯಾ (Team India) ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪಂತ್ ಅವರ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್‌ (Bus Driver) ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಅವರನ್ನು ಘಟನಾ ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಅದರಲ್ಲೂ ಪಂತ್‌ಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ನ ಡ್ರೈವರ್‌ ಸುಶೀಲ್ ಕುಮಾರ್ ( ಸಹಾಯಕ್ಕೆ ಮೊದಲಿಗರಾಗಿ ಧಾವಿಸಿದ್ದಾರೆ ಎಂಬುದು ಗೊತ್ತಾಗಿದೆ. ಬಳಿಕ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್‌ ಸುಶೀಲ್ ಕುಮಾರ್ (Sushil Kumar) ಹಾಗೂ ಕಂಡಕ್ಟರ್ ಪರಮ್ ಜೀತ್‌ನನ್ನು (Paramjit) ಹರಿಯಾಣ ಸಾರಿಗೆ ಇಲಾಖೆ  ಉನ್ನತಾಧಿಕಾರಿಗಳು ಅಭಿನಂದಿಸಿದ್ದಾರೆ. ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಅಪಘಾತಕ್ಕೀಡಾಗಿದ್ದ ವ್ಯಕ್ತಿ ಯಾರೆಂದು ತಿಳಿಯುವ ಮೊದಲೇ ಸಹಾಯಕ್ಕೆ ಧಾವಿಸಿದ್ದ ಸುಶೀಲ್ ಕುಮಾರ್ ಹೇಳಿರುವ ಪ್ರಕಾರ, ರಿಷಭ್ ಅವರ ಕಾರಲ್ಲಿದ್ದ ವಸ್ತುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸುಶೀಲ್ ಕುಮಾರ್ ಅವೆಲ್ಲವನ್ನೂ ಸಂಗ್ರಹಿಸಿ ಪಂತ್‌ಗೆ ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ಪ್ರಾಥಮಿಕ ವರದಿಯ ಪ್ರಕಾರ, ಸ್ಥಳೀಯರು ಪಂತ್ ಅವರ ಸಾಮಗ್ರಿಗಳನ್ನು ಲೂಟಿ ಮಾಡಿದ್ದರು ಎಂಬುದು ವಾಸ್ತವಕ್ಕೆ ದೂರದ ಸಂಗತಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆದರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು ಕೂಡ, ಯಾರೊಬ್ಬರೂ ಏನನ್ನೂ ಲೂಟಿ ಮಾಡಿಲ್ಲ ಎಂಬ ಸಂಗತಿಯನ್ನು ಖಾತ್ರಿ ಪಡಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಮೈ ಜುಮ್ಮೆನ್ನಿಸುವಂತಿತ್ತು ಆ ರೋಚಕ ಕ್ಷಣ?: ರಿಷಭ್ ಪಂತ್ ಅವರನ್ನು ನೋಡಿದಾಗ ಮುಖವೆಲ್ಲಾ ರಕ್ತದ ಮಡುವಿನಲ್ಲಿತ್ತು. ಬಟ್ಟೆ ಚಿಂದಿಯಾಗಿ ಅವರ ಬೆನ್ನೆಲ್ಲಾ ತರಚಿದ ಗಾಯಗಳಾಗಿತ್ತು. ಅತೀವ ನೋವಿನಿಂದ ಬಳಲಿದ್ದ ಅವರು ಕುಂಟುತ್ತಿದ್ದರು, ಎಂದು ಸುಶೀಲ್ ಕುಮಾರ್ ಸಂದರ್ಶನದಲ್ಲಿ ಘಟನೆಯ ವಿವರಗಳನ್ನು ತೆರೆದಿಟ್ಟಿದ್ದಾರೆ. ನಾವು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ಬರಲಿಲ್ಲ. ರಾಷ್ಟ್ರೀಯ ಹೈದಾರಿ ಸಹಾಯವಾಣಿಗೆ ಕರೆ ಮಾಡಿದೆವು. ಯಾವ ಅಧಿಕಾರಿಗಳಿಂದಲೂ ಸ್ಪಂದನೆ ಸಿಗಲಿಲ್ಲ. ಬಳಿಕ ನಾನು ಪೊಲೀಸ್‌ಗೆ ಮಾಹಿತಿ ನೀಡಿದೆ. ಬಸ್ ಕಂಡಕ್ಟರ್ ಅಂಬುಲೆನ್ಸ್ಗೆ ಕರೆ ಮಾಡಿದರು. ಅವರ ಸ್ಥಿತಿ ಬಗ್ಗೆ ನಾವು ಕೇಳುತ್ತಲೇ ಇದ್ದೆವು. ನೀರು ಕೂಡ ಕೊಟ್ಟೆವು. ಕೊಂಚ ಸುಧಾರಿಸಿದ ಬಳಿಕ ಅವರೇ `ನಾನು ರಿಷಭ್ ಪಂತ್’ ಎಂದು ಹೇಳಿಕೊಂಡರು ಎಂದು ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.

    ನಾವು ರಕ್ಷಣೆಗೆ ಧಾವಿಸಿದಾಗ ರಿಷಭ್ ಪಂತ್ ನಮಗೆ ಅವರ ತಾಯಿಯ ನಂಬರ್ ಕೊಟ್ಟರು. ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಬಂದಿತು. 15 ನಿಮಿಷಗಳ ನಂತರ ಅಂಬುಲೆನ್ಸ್ ಬಂದಿತ್ತು. ರಸ್ತೆಯಲ್ಲಿ ಬಿದ್ದಿದ್ದ ಅವರ ಹಣವನ್ನು ಒಗ್ಗೂಡಿಸಿಕೊಟ್ಟೆವು. ಕಾರಿನಲ್ಲಿ ಬೇರೆ ಯಾರಾದ್ರೂ ಇದ್ದಾರೆಯೇ ಎಂದೆಲ್ಲಾ ವಿಚಾರಿಸಿದೆವು. ಕಾರಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಅವರು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ನವದೆಹಲಿ: ತಾಯಿ ಹೀರಾಬೆನ್ ಮೋದಿ (Hiraben Modi) ವಿಧಿವಶರಾದ ನೋವಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾರು ಅಪಘಾತದಲ್ಲಿ (Car Accident) ಗಾಯಗೊಂಡು ಆಸ್ಪತ್ರೆ ಸೇರಿರುವ ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ ರಿಷಭ್‌ ಪಂತ್ (Rishabh Pant) ಆರೋಗ್ಯ ಚೇತರಿಕೆಗಾಗಿ ಹಾರೈಸಿದ್ದಾರೆ.

    ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ವಯೋಸಹಜ ಕಾಯಿಲೆಯಿಂದ ಇಂದು ಮೃತಪಟ್ಟಿದ್ದರು. ಆ ಬಳಿಕ ತಾಯಿಯ ಅಂತಿಮ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡ ಮೋದಿ ಆ ನೋವಿನ ನಡುವೆಯೇ ಖ್ಯಾತ ಕ್ರಿಕೆಟಿಗ ಪಂತ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವುದನ್ನು ಅರಿತು ಪಂತ್‍ಗೆ ಅಪಘಾತವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ, ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಮೋದಿ ಪಂತ್‍ಗೆ ಹಾರೈಕೆ ಜೊತೆ ಆನಾರೋಗ್ಯದಿಂದ ಮೃತಪಟ್ಟ ಫುಟ್‍ಬಾಲ್ ದಿಗ್ಗಜ ಪೀಲೆ (Pele) ಸಾವಿಗೆ ಕಂಬನಿ ಮಿಡಿದಿದ್ದಾರೆ. ಪೀಲೆ ಒಬ್ಬ ವಿಶ್ವ ಫುಟ್‍ಬಾಲ್ ಸ್ಟಾರ್. ಅವರ ಸಾವು ತುಂಬಾ ನಷ್ಟವುಂಟುಮಾಡಿದೆ. ಅವರ ಆಟ, ಯಶಸ್ಸು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಟ್ವೀಟ್ ಮಾಡಿದ್ದಾರೆ.

    ಪಂತ್ ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‍ಪುರ ಝಾಲ್‍ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿರುವ ಸಾಧ್ಯತೆ ಕಂಡುಬರುತ್ತಿದ್ದು, ಸದ್ಯ ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಪಂತ್ ಅಪಘಾತ ಸುದ್ದಿ ಕೇಳಿ ವಿಶ್ವ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಆಘಾತಗೊಂಡಿದ್ದು, ಪಂತ್ ಆರೋಗ್ಯ ಸುಧಾರಿಸಲಿ ಆದಷ್ಟು ಬೇಗ ಮತ್ತೆ ಮೈದಾನದಲ್ಲಿ ಕಾಣುವಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಮುಂಬೈ: ರಿಷಭ್ ಪಂತ್ (Rishabh Pant) ಹಣೆಗೆ ಎರಡು ಸ್ಟಿಚ್ ಹಾಕಲಾಗಿದೆ. ಅವರ ಬಲ ಮೊಣಕಾಲಿನ ಬಳಿ ಹರಿದ ಗಾಯಗಳಾಗಿದ್ದು, ಮೂಳೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ. ಬೆನ್ನಿನಲ್ಲೂ ಉಚ್ಚಿದಂತಿರುವ ಸುಟ್ಟಗಾಯದಂತಿದ್ದು, ರಿಷಭ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಭಾರತೀಯ ನಿಯಂತ್ರಣ ಮಂಡಳಿ (BCCI) ಪಂತ್ ಆರೋಗ್ಯದ ಕುರಿತು ಮಾಧ್ಯಮ ವರದಿ ಬಿಡುಗಡೆಗೊಳಿಸಿದೆ.

    ಉತ್ತರಾಖಂಡದಿಂದ (Uttarakhand) ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‍ಪುರ ಝಾಲ್‍ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಕೂಡಲೇ ಪಂತ್‍ರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರು. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

    ಬಿಸಿಸಿಐ ಮಾಧ್ಯಮ ವರದಿ:
    ಉತ್ತರಾಖಂಡದ ರೂರ್ಕಿ ಬಳಿ ಶುಕ್ರವಾರ ಮುಂಜಾನೆ ಭಾರತದ ವಿಕೆಟ್ ಕೀಪರ್ ರಿಷಭ್‌ ಪಂತ್ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಗಾಯಗೊಂಡ ಪಂತ್‌ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಥರ್ಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

    ರಿಷಭ್ ಅವರ ಹಣೆಗೆ ಎರಡು ಸ್ಟಿಚ್ ಹಾಕಲಾಗಿದೆ. ಅವರ ಬಲ ಮೊಣಕಾಲಿನ ಬಳಿ ಹರಿದ ಗಾಯಗಳಾಗಿದೆ. ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ. ಬೆನ್ನಿಗೂ ಉಚ್ಚಿದಂತಿರುವ ಸುಟ್ಟಗಾಯದಂತಿದೆ. ರಿಷಭ್‍ನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಈಗ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಮುಂದಿನ ಚಿಕಿತ್ಸೆಗಾಗಿ MRI ಸ್ಕ್ಯಾನ್‍ಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಬಿಸಿಸಿಐ, ರಿಷಭ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವೈದ್ಯಕೀಯ ತಂಡವು ಪ್ರಸ್ತುತ ರಿಷಭ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದೇವೆ. ರಿಷಭ್‍ಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಸಹಕರಿಸುತ್ತೇವೆ. ಈ ಆಘಾತದಿಂದ ಹೊರಬರಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]