Tag: Rishabh Pant

  • ಟೀಂ ಇಂಡಿಯಾಕ್ಕೆ ಗುಡ್‌ನ್ಯೂಸ್ – ಮತ್ತೆ ಬ್ಯಾಟ್ ಹಿಡಿದು ಕ್ರೀಸ್‌ಗಿಳಿದ ರಿಷಬ್ ಪಂತ್

    ಟೀಂ ಇಂಡಿಯಾಕ್ಕೆ ಗುಡ್‌ನ್ಯೂಸ್ – ಮತ್ತೆ ಬ್ಯಾಟ್ ಹಿಡಿದು ಕ್ರೀಸ್‌ಗಿಳಿದ ರಿಷಬ್ ಪಂತ್

    ಕೋಲ್ಕತ್ತಾ: ಭೀಕರ ರಸ್ತೆ ಅಪಘಾತಕ್ಕೀಡಾಗಿ 11 ತಿಂಗಳ ಕಾಲ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ.

    ರಸ್ತೆ ಅಪಘಾತದ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದ ರಿಷಬ್ ಪಂತ್ ಗುರುವಾರ (ನ.9) ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ (Rishabh Pant Practice) ನಡೆಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ 

    ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕಾಲಿಗೆ ಯಾವುದೇ ಪ್ಯಾಡ್‌ಗಳನ್ನ ಧರಿಸದೇ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು, 2024ರ ಐಪಿಎಲ್‌ ಟೂರ್ನಿಯಲ್ಲಿ ಕಣಕ್ಕಿಳಿಯುವ ಸೂಚನೆ ಕೊಟ್ಟಿದ್ದಾರೆ.  ಬಳಿಕ ಮೈದಾನದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ರಿಷಬ್ ನಿಮ್ಮ ಫ್ಯೂಚರ್ ಇನ್ನಷ್ಟು ಬ್ರೈಟ್‌ ಆಗಲಿ, ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ನಿಮ್ಮ ಬರುವಿಕೆಯನ್ನು ಎದುರು ನೋಡುತ್ತೇವೆ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಶುಭಕೋರಿದ್ದಾರೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ನಿರ್ದೇಶಕ ಸೌರವ್ ಗಂಗೂಲಿ ಸಹ ಉಪಸ್ಥಿತರಿದ್ದರು. ಇದನ್ನೂ ಓದಿ: ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಬ್ ಪಂತ್

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಬ್ ಪಂತ್

    ತಿರುಪತಿ: ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ (Rishabh Pant) ಮತ್ತು ಅಕ್ಷರ್ ಪಟೇಲ್ (Axar Patel) ಇಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ (Tirupati Balaji Temple) ಆಶೀರ್ವಾದ ಪಡೆದಿದ್ದಾರೆ.

    ಈ ಬಗ್ಗೆ ರಿಷಬ್, ದೇವಾಲಯದ ಶಕ್ತಿಯನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ದೇವಸ್ಥಾನದಿಂದ ಹೊರಬರಲು ಮನಸ್ಸಾಗಲಿಲ್ಲ. ನಂಬಲಾಗದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‍ನಿಂದ ದೂರ ಉಳಿದಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಕ್ರಿಕೆಟ್‍ಗೆ ಮರಳುವ ನಿರೀಕ್ಷೆ ಇದೆ.

    ವಿಶ್ವಕಪ್‍ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ಪಂದ್ಯಗಳಿಂದ ವಂಚಿತರಾದರು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಆಯ್ಕೆಯಾದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಕ್ಷರ್ ಪಟೇಲ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಇನ್ನಿಂಗ್ಸ್‌ಗಳಿಂದ 50 ವಿಕೆಟ್ ಪಡೆದಿದ್ದಾರೆ. 54 ಏಕದಿನ ಪಂದ್ಯಗಳನ್ನು ಆಡಿ 59 ವಿಕೆಟ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.

    ರಿಷಬ್ ಪಂತ್ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಿಂದ 2,271 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳು ಹಾಗೂ 5 ಶತಕಗಳು ಸೇರಿವೆ. 30 ಏಕದಿನ ಪಂದ್ಯಗಳಿಂದ 865 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧ ಶತಕಗಳು ಸೇರಿವೆ. 66 ಟಿ20 ಪಂದ್ಯಗಳಿಂದ 987 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳಿವೆ. ಇದನ್ನೂ ಓದಿ: World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ

    ಇಂದಿನಿಂದ ವಿಶ್ವಕಪ್ ಫೈಟ್ – ಪಂದ್ಯಗಳಿಂದ ಔಟಾದವರ ಪಟ್ಟಿ ಇಲ್ಲಿದೆ

    ನವದೆಹಲಿ: ವಿಶ್ವಕಪ್ 2023 (ಅಹಮದಾಬಾದ್‍ನ) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭಗೊಳ್ಳಲಿದೆ. ಪ್ರಸ್ತುತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿಯ ವಿಶ್ವಕಪ್ ಆಯ್ಕೆ ಸಮಯದಲ್ಲಿ ಫಿಟ್ ಆಗಿರದೆ ಪಂದ್ಯಗಳಿಂದ ವಂಚಿತರಾಗಿರುವ ಪಟ್ಟಿ ಇಲ್ಲಿದೆ.

    ರಿಷಭ್ ಪಂತ್ (ಭಾರತ): ಕಳೆದ ವರ್ಷ ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ (Rishabh Pant) ಅವರು ಕ್ರಿಕೆಟ್‍ನಲ್ಲಿ (Cricket) ಪಾಲ್ಗೊಂಡಿಲ್ಲ. ಅವರು ಕ್ರಿಕೆಟ್‍ಗೆ ಮರಳಲು ಭಾರಿ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ: ಪತ್ನಿಗೆ ಡಿವೋರ್ಸ್ ಕೊಟ್ಟ ಶಿಖರ್ ಧವನ್

    ಮೈಕೆಲ್ ಬ್ರೇಸ್‍ವೆಲ್ (ನ್ಯೂಜಿಲೆಂಡ್): ಇಂಗ್ಲೆಂಡ್‍ನ ದೇಶೀಯ ಟಿ20 ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ಆಲ್‍ರೌಂಡರ್ ಗಾಯಗೊಂಡು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ವೋರ್ಸೆಸ್ಟರ್‍ಶೈರ್‌ಗಾಗಿ ಆಡುವಾಗ ಅವರು ಗಾಯಗೊಂಡರು. ಅವರು ಗುಣಮುಖರಾಗಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ವರದಿಯಾಗಿದೆ.

    ನಸೀಮ್ ಷಾ (ಪಾಕಿಸ್ತಾನ): ವಿಶ್ವದ ಅತ್ಯಂತ ಭರವಸೆಯ ವೇಗಿಗಳಲ್ಲಿ ಒಬ್ಬರಾದ ನಸೀಮ್ ಷಾ ಅವರು ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ವಿಶ್ವಕಪ್‍ನಿಂದ ವಂಚಿತರಾದರು. ಭಾರತ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಸೆಣಸಾಟದಲ್ಲಿ ಅವರು ಗಾಯಗೊಂಡರು. ಅವರು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ.

    ಆಶ್ಟನ್ ಅಗರ್ (ಆಸ್ಟ್ರೇಲಿಯಾ): ಗಾಯದಿಂದಾಗಿ ಆಶ್ಟನ್ ಅಗರ್ ಅವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಅವರು ಏಕದಿನ ಪಂದ್ಯದ ವೇಳೆ ಭಾರತದ ವಿರುದ್ಧ ಆಡಿದ್ದರು. ಬಳಿಕ ಗಾಯದ ಸಮಸ್ಯೆ ಮರಳಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ.

    ಎಬಾಡೋಟ್ ಹೊಸೈನ್ (ಬಾಂಗ್ಲಾದೇಶ): ಮೊಣಕಾಲು ಗಾಯಗೊಂಡಿದ್ದು ಇವರು ವಿಶ್ವಕಪ್‍ನಿಂದ ಹೊರಗುಳಿದಿದ್ದಾರೆ. ಗಾಯ ತೀವ್ರವಾಗಿದ್ದು ದೀರ್ಘಕಾಲದವರೆಗೆ ಇವರು ಆಡುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.

    ಅನ್ರಿಚ್ ನಾಟ್ರ್ಜೆ (ದಕ್ಷಿಣ ಆಫ್ರಿಕಾ): ಎಕ್ಸ್‍ಪ್ರೆಸ್ ವೇಗಿ ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತ ಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಬೆನ್ನಿನ ಗಾಯಕ್ಕೆ ಒಳಗಾದರು. ಇವರ ಬದಲಿಗೆ ಲಿಝಾರ್ಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

    ಹಸರಂಗಾ (ಶ್ರೀಲಂಕಾ): ಶ್ರೀಲಂಕಾ ತಂಡದ ಸೂಪರ್‍ಸ್ಟಾರ್ ಹಸರಂಗಾ ಅವರು ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಮಂಡಿಯ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್‍ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅವರು ಏಷ್ಯಾ ಕಪ್ 2023ರಲ್ಲೂ ಕಾಣಿಸಿಕೊಂಡಿರಲಿಲ್ಲ.

    ಅಕ್ಷರ್ ಪಟೇಲ್ (ಭಾರತ): ಒಮ್ಮೆ ವಿಶ್ವಕಪ್‍ಗಾಗಿ ಭಾರತದ 15 ಜನರ ತಂಡದ ಭಾಗವಾಗಿದ್ದ ಅಕ್ಷರ್ 2023ರ ಏಷ್ಯಾ ಕಪ್ ವೇಳೆ ಗಾಯಗೊಂಡಿದ್ದರು. ಅವರು ಈವರೆಗೂ ಚೇತರಿಸಿಕೊಂಡಿಲ್ಲ. ಅವರ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ.

    ಸಿಸಂಡಾ ಮಗಾಲಾ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವೇಗದ ಆಟಗಾರ ಬಲ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸ್ಥಾನವನ್ನು ಆಂಡಿಲ್ ಫೆಹ್ಲುಕ್ವಾಯೊ ಅವರು ತುಂಬಿದ್ದಾರೆ.

    ದುಷ್ಮಂತ ಚಮೀರಾ (ಶ್ರೀಲಂಕಾ): ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಆಡುತ್ತಿರುವಾಗ ಚಮೀರಾ ಗಾಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿಲ್ಲ. ಇದನ್ನೂ ಓದಿ: ‌ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ

    ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ

    ಬೆಂಗಳೂರು: ತೀವ್ರ ಕಾರು ಅಪಘಾತದಿಂದ ಡಿಸೆಂಬರ್ 2022 ರಿಂದ ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾ (Team India) ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ (Rishabh Pant) ಬಳ್ಳಾರಿಯಲ್ಲಿ (Ballari) ಬ್ಯಾಟ್ ಹಿಡಿದಿದ್ದಾರೆ.

    ಅಭಿಮಾನಿಯೊಬ್ಬರು ಪಂತ್ ಅವರ ಅಭ್ಯಾಸದ ವೇಳೆ ಬ್ಯಾಟಿಂಗ್ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಜು.21 ರಿಂದಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಪಂತ್ ಬಳ್ಳಾರಿಯಲ್ಲಿ ಕ್ರಿಕೆಟ್ ಆಡಿದ್ದಾರೆ.

    ವೀಡಿಯೋದಲ್ಲಿ ಪಂತ್ ಬ್ಯಾಟ್ ಹಿಡಿದು ಕ್ರೀಸ್‍ಗೆ ಆಗಮಿಸಿದಾಗ ಸೇರಿದ್ದ ಅಭಿಮಾನಿಗಳು ಹರ್ಷೋದ್ಗಾರಗಳಿಂದ ಸಂಭ್ರಮಿಸಿದ್ದಾರೆ. ಆಟದ ವೇಳೆ ಅವರ ಬ್ಯಾಟಿಂಗ್ ಶೈಲಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯ ವಿಜಯನಗರದಲ್ಲಿರುವ ಜಿಂದಾಲ್ ಘಟಕದಲ್ಲಿ ಪಂತ್ ಬ್ಯಾಟ್ ಬೀಸಿದ್ದಾರೆ. ಪಂತ್ ಜೆಎಸ್‍ಡಬ್ಲ್ಯೂ ಸ್ಪೋಟ್ರ್ಸ್ ರಾಯಭಾರಿಯಾಗಿದ್ದಾರೆ. ಜಾಹೀರಾತು ಕಾರಣಕ್ಕೆ ಪಂತ್ ಬಳ್ಳಾರಿಗೆ ಬಂದಿದ್ದಾರೆ ಎನ್ನಲಾಗಿದೆ.

    ಪಂತ್ ಈ ವರ್ಷದ ಆರಂಭದಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಅವರು ವ್ಯಾಯಾಮ ಮತ್ತು ಓಟದ ಅಭ್ಯಾಸದಲ್ಲಿ ತೊಡಗಿದ್ದಾರೆ.

    ಪಂತ್ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಭರತ್ ಮತ್ತು ಇಶಾನ್ ಕಿಶನ್ ತುಂಬಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಪಂತ್ ಅವರ ಅನುಪಸ್ಥಿತಿಯು ಟೀಂ ಇಂಡಿಯಾಕ್ಕೆ ಬಹಳಷ್ಟು ನಷ್ಟ ಉಂಟು ಮಾಡಿದೆ. ಈ ಬಾರಿಯ ವಿಶ್ವಕಪ್‍ನಲ್ಲಿ ರಾಹುಲ್ ಮೊದಲ ಆಯ್ಕೆಯ ವಿಕೆಟ್‍ಕೀಪರ್-ಬ್ಯಾಟ್ಸ್‍ಮನ್‍ನ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಪಂತ್ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಅವರ ಸಾಮಥ್ರ್ಯಗಳು ಮತ್ತು ಅನುಭವವು ಭರವಸೆಯನ್ನು ಒದಗಿಸಿದರೆ, ಎರಡನೇ ಆಯ್ಕೆ ಕೀಪರ್ ಆಗಿ ಇಶಾನ್ ಕಿಶನ್ ತಂಡದ ಭರವಸೆಯಾಗಿದ್ದಾರೆ.

    ಇಶಾನ್ ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ಮುಂಬೈ/ವಾಷಿಂಗ್ಟನ್‌: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗರು (Cricketer) ಇತ್ತೀಚೆಗಷ್ಟೇ ಅನಾವರಣಗೊಂಡ ʻಥ್ರೆಡ್ಸ್‌ʼ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಷನ್‌ ʻಥ್ರೆಡ್ಸ್‌ʼ (Threads App) ಬಳಕೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

     

    Post by @rishabpant
    View on Threads

     

    ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ, ಟ್ವಿಟ್ಟರ್‌ಗೆ ಪ್ರಬಲ ಪೈಪೋಟಿ ನೀಡಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಸ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್ ‘ಥ್ರೆಡ್ಸ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಲಾಗಿನ್‌ ಆಗುತ್ತಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್

    ಥ್ರೆಡ್ಸ್ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಇದನ್ನು ಬಿಡುಗಡೆ ಮಾಡಿದ 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್‌ ಆಟಗಾರರ ಟ್ವಿಟ್ಟರ್‌ ಬದಲಿಗೆ ಥ್ರೆಡ್ಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಟೀಂ ಇಂಡಿಯಾ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌, ಟ್ವಿಟ್ಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌ಗೆ (Elon Musk) ಟಾಂಗ್‌ ಕೊಟ್ಟಿದ್ದಾರೆ.

    ಥ್ರೆಡ್ಸ್‌ಗೆ ಲಾಗಿನ್‌ ಆಗಿರುವ ಅಶ್ವಿನ್‌ ಎಲಾನ್‌ ಮಸ್ಕ್‌ ಸೇರಿಕೊಂಡಿದ್ದಾರಾ..? ಅವರಿನ್ನು ಸೇರಿಕೊಂಡಿಲ್ಲದಿದ್ದರೆ ಬೇಗನೆ ಸೇರುವುದು ಒಳ್ಳೆಯದು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    ಮತ್ತೊಂದೆಡೆ ಭೀಕರ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್‌ ಸಹ ʻಥ್ರೆಡ್ಸ್‌ʼ ಬಳಕೆದಾರರ ಸಮೂಹಕ್ಕೆ ಸೇರಿಕೊಂಡು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಥ್ರೆಡ್ಸ್‌ ಸೇರಿರುವ ಎಲ್ಲರಿಗೂ ಸ್ವಾಗತ. ಪ್ರತಿಯೊಬ್ಬರು ಸಾಧ್ಯವಾದಷ್ಟು ಬೆಂಬಲಿಗರನ್ನು ಗಳಿಸಿ. ನಾವು ಇದನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಪ್ರಯತ್ನಿಸೋಣ ಎಂದು ಥ್ರೆಡ್ಸ್‌ ಪೋಸ್ಟ್‌ ಮೂಲಕ ಕರೆ ಕೊಟ್ಟಿದ್ದಾರೆ.

    ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ?
    ಥ್ರೆಡ್ಸ್‌ ಖಾತೆ ತೆರೆಯಬೇಕಾದರೆ ಇನ್ಸ್ಟಾಗ್ರಾಮ್‌ (Instagram) ಖಾತೆ ಬೇಕಾಗುತ್ತದೆ. ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಿದ ಕೂಡಲೇ ಇನ್‌ಸ್ಟಾದಿಂದ ಬಯೋ ಸೇರಿದಂತೆ ಫಾಲೋವರ್ಸ್‌ಗಳನ್ನು Import ಮಾಡಬೇಕಾ ಅಂತಾ ಕೇಳುತ್ತದೆ. ಬಳಕೆದಾರರು ಅನುಮತಿ ನೀಡಿದರೆ ಇನ್‌ಸ್ಟಾ ಬಯೋ ನಿಮ್ಮ ಪ್ರೊಫೈಲಿನಲ್ಲಿ ಬಂದಿರುತ್ತದೆ. ಇನ್‌ಸ್ಟಾ ಸ್ನೇಹಿತರ ಪೈಕಿ ಯಾರು ಥ್ರೆಡ್ಸ್‌ಗೆ ಜಾಯಿನ್‌ ಆಗಿದ್ದಾರೋ ಅವರನ್ನು ಇಲ್ಲಿ ಫಾಲೋ ಮಾಡಬಹುದು.

    ಥ್ರೆಡ್ಸ್‌ನಲ್ಲಿ ಎಲ್ಲಾ ಬಳಕೆದಾರರು 5 ನಿಮಿಷ ಉದ್ಧದ ವೀಡಿಯೋಗಳನ್ನು ಪೋಸ್ಟ್‌ ಮಾಡಬಹುದು. ನೀಲಿ ಬ್ಯಾಡ್ಜ್‌ ಇಲ್ಲದ ಟ್ವಿಟ್ಟರ್‌ ಬಳಕೆದಾರರು ಗರಿಷ್ಠ 2 ನಿಮಿಷ 20 ಸೆಕೆಂಡ್‌ ಉದ್ದದ ವೀಡಿಯೋ ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ.

    ಡ್ಸ್‌ನಲ್ಲಿ ಗರಿಷ್ಠ 500 ಪದಗಳನ್ನು ಬಳಸಿ ಪೋಸ್ಟ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿ 280 ಪದಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ. ಇನ್‌ಸ್ಟಾದಲ್ಲಿರುವ ಅಧಿಕೃತ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಇರುವಂತೆ ಇಲ್ಲೂ ಅದೇ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಅಟೋಮ್ಯಾಟಿಕ್‌ ಆಗಿ ಬಂದಿರುತ್ತದೆ. ಟ್ವಿಟ್ಟರ್‌ನಲ್ಲಿ ನೀಲಿ ಟಿಕ್‌ ಮಾರ್ಕ್‌ ಬೇಕಾದರೆ ದುಡ್ಡು ಪಾವತಿಸಬೇಕಾಗುತ್ತದೆ.

    ಸದ್ಯಕ್ಕೆ ಥ್ರೆಡ್ಸ್‌ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗುವುದಿಲ್ಲ. ಇನ್‌ಸ್ಟಾದಲ್ಲಿ ಯಾವೆಲ್ಲ ವಿಷಯಗಳಿಗೆ ಸೆನ್ಸರ್‌ ಮಾಡಲಾಗುತ್ತದೋ ಆ ಎಲ್ಲಾ ವಿಷಯಗಳನ್ನು ಇಲ್ಲೂ ಸೆನ್ಸರ್‌ ಮಾಡಲಾಗುತ್ತದೆ.

    ಥ್ರೆಡ್ಸ್‌ಗೆ ಒಮ್ಮೆ ಸೇರ್ಪಡೆಯಾದರೆ ಆ ಖಾತೆಯನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಖಾತೆ ಡಿಲೀಟ್‌ ಮಾಡಬೇಕಾದರೆ ಇನ್‌ಸ್ಟಾ ಖಾತೆಯನ್ನೇ ಡಿಲೀಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಥ್ರೆಡ್ಸ್‌ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಆದರೆ ಇನ್‌ಸ್ಟಾದ ಖಾತೆ ಡಿಲೀಟ್‌ ಮಾಡಿದರೆ ಮಾತ್ರ ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ ಎಂದು ಪ್ರೈವೆಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ.

    ಟ್ವಿಟ್ಟರ್‌ನಲ್ಲಿ ಬಳಕೆದಾರರು ಬೇರೆ ಟ್ವೀಟ್‌ ಲೈಕ್‌ ಮಾಡಿದರೆ ಅದು ಪ್ರತ್ಯೇಕ ಟ್ಯಾಬ್‌ನಲ್ಲಿ ಕಾಣುತ್ತದೆ. ಆದರೆ ಥ್ರೆಡ್ಸ್‌ನಲ್ಲಿ ಲೈಕ್‌ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಪ್ರೊಫೈಲ್‌ ಫೋಟೋದ ಮೇಲ್ಭಾಗದಲ್ಲಿ ಇನ್‌ಸ್ಟಾಖಾತೆ ಕಾಣುತ್ತದೆ. ಇನ್‌ಸ್ಟಾ ಪ್ರೊಫೈಲ್‌ ಫೋಟೋದ ಕೆಳಭಾಗದಲ್ಲಿ ಥ್ರೆಡ್ಸ್‌ ಲಿಂಕ್‌ ಕಾಣುತ್ತದೆ. ಜೊತೆಗೆ ಥ್ರೆಡ್ಸ್‌ನಲ್ಲಿ ಫಾಲೋವರ್ಸ್‌ಗಳೊಂದಿಗೆ ಚಾಟ್‌ ಮಾಡುವ ಆಯ್ಕೆ ಇಲ್ಲ. ಬಳಕೆದಾರರ ಪ್ರೋಫೈಲ್‌ಗೆ ಹೋದ್ರೆ ಅದರಲ್ಲಿ ಇನ್ಸ್ಟಾಗ್ರಾಮ್‌ ಖಾತೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ನೇರವಾಗಿ ಇನ್ಸ್ಟಾ ತೆರೆದುಕೊಳ್ಳುತ್ತದೆ. ಅಲ್ಲೇ ಚಾಟ್‌ ಆಯ್ಕೆಯನ್ನು ಬಳಸಬೇಕಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    – ಲಕ್ನೋ ವಿರುದ್ಧ 5 ವಿಕೆಟ್ ಕಿತ್ತ ಆಕಾಶ್

    ಬೆಂಗಳೂರು: ಬಾಲ್ಯದಲ್ಲೇ ಲೆದರ್ ಬಾಲ್‍ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದರೆ ಮಾತ್ರ ಆತ ಮುಂದೆ ಸ್ಟಾರ್ ಆಟಗಾರನಾಗುತ್ತಾನೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಈ ನಂಬಿಕೆ ಸುಳ್ಳು, ಮನಸ್ಸಿದ್ದರೆ ಯಾವ ವಯಸ್ಸಿನಲ್ಲೂ ಅಭ್ಯಾಸ ಮಾಡಿದರೆ ಉತ್ತಮ ಆಟಗಾರನಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಕಾಶ್.

    ಕೆಲವು ವರ್ಷಗಳ ಹಿಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಉತ್ತರಾಖಂಡ್ ಮೂಲದ ಯುವ ಎಂಜಿನಿಯರ್ ಆಕಾಶ್ ಮಧ್ವಾಲ್ (Akash Madhwal) ಈಗ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    2019ರಲ್ಲಿ ಮೊದಲ ಬಾರಿ ರೆಡ್ ಬಾಲ್ ಕ್ರಿಕೆಟ್ ಟ್ರಯಲ್ಸ್‍ನಲ್ಲಿ ಪಾಲ್ಗೊಂಡಿದ್ದ ಆಕಾಶ್, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್ ತಂಡದ ಅಂದಿನ ಕೋಚ್ ವಸೀಮ್ ಜಾಫರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. 24ನೇ ವಯಸ್ಸಿನವರೆಗೂ ಲೆದರ್ ಬಾಲ್ ಆಡಿರದ ಆಕಾಶ್, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎದುರು 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು.

    ಈ ಮೂಲಕ 16ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಅಸಾಧಾರಣ ಬೌಲಿಂಗ್ ಪ್ರದರ್ಶನದ ಬಲದಿಂದ ಮುಂಬೈ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಎಲ್‍ಎಸ್‍ಜಿ ಎದುರು 81 ರನ್‍ಗಳ ಜಯ ದಾಖಲಿಸಿದೆ.

    ಕೋಚ್ ಹೇಳೋದು ಏನು?
    ವಿಶಿಷ್ಟ ಬೌಲಿಂಗ್ ಶೈಲಿಯ ಆಕಾಶ್ ಅವರಲ್ಲಿ ವಿಶೇಷ ಸಾಮಥ್ರ್ಯವಿದೆ. ಹೀಗಾಗಿ 2019ರ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯಕ್ಕೆ ಅವರನ್ನು ಅಂದಿನ ಕೋಚ್ ವಸೀಮ್ ಜಾಫರ್ ನೇರವಾಗಿ ಆಯ್ಕೆ ಮಾಡಿದ್ದರು. ಟೂರ್ನಿಯಲ್ಲಿ ಅವರು ರನ್ ನೀಡಿದರೂ ಬೌಲಿಂಗ್ ಮಾಡಿಸಿದ್ದೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಅವರ ಬೌಲಿಂಗ್ ಸುಧಾರಣೆಗೊಳ್ಳುತ್ತದೆ ಎಂದಿದ್ದೆ ಎಂದು ಮುಖ್ಯ ಕೋಚ್ ಮನೀಶ್ ಜಾ ಹೇಳಿದ್ದಾರೆ.

    ಆಕಾಶ್ ಟೆನಿಸ್ ಬಾಲ್ ಆಟಗಾರ ಹೀಗಾಗಿ ಅವರ ಬೌಲಿಂಗ್‍ನಲ್ಲಿ ವೇಗವಿತ್ತಾದರೂ ನೇರ ಮತ್ತು ನಿಖರತೆ ಇರಲಿಲ್ಲ. ಈ ನಡುವೆ ತಮ್ಮ ಬೌಲಿಂಗ್‍ನಲ್ಲಿ ಹಲವು ಪ್ರಯೋಗ ಕೂಡ ಮಾಡುತ್ತಿದ್ದರು. ಉತ್ತಮ ಸಾಮಥ್ರ್ಯ ಇರುವಾಗ ಸ್ಲೋ ಬಾಲ್ ಪ್ರಯತ್ನ ಯಾಕೆ ಎಂದಿದ್ದೆ. ಈಗ ಉತ್ತಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

    ಟೀಮ್ ಇಂಡಿಯಾ ವಿಕೆಟ್‍ಕೀಪರ್ ರಿಷಭ್ ಪಂತ್ (Rishabh Pant) ಅವರ ಉತ್ತರಾಖಂಡ್ ನಿವಾಸದ ಎದುರು ಮನೆಯಲ್ಲೇ ಆಕಾಶ್ ಮಧ್ವಾಲ್ ಕೂಡ ಇದ್ದಾರೆ. ಆಕಾಶ್ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 2013ರಲ್ಲಿ ವೀರ ಮರಣ ಹೊಂದಿದ್ದಾರೆ. ಓದಿನಲ್ಲಿ ಬಹಳ ಚುರುಕಿದ್ದ ಆಕಾಶ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಕ್ರಿಕೆಟ್‍ನ್ನು ಕೇವಲ ಹವ್ಯಾಸವನ್ನಾಗಿ ತೆಗೆದುಕೊಂಡಿದ್ದ ಆಕಾಶ್ ಇಂದು ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

  • IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 16 ನೇ ಆವೃತ್ತಿ ಮಾ.31 ರಂದು ಪ್ರಾರಂಭವಾಗಲಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಲಿರುವ 5 ಆಟಗಾರ ಪಟ್ಟಿ ಇಲ್ಲಿದೆ.

    ಜಸ್ಪ್ರೀತ್ ಬುಮ್ರಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಬುಮ್ರಾ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ರಿಷಬ್ ಪಂತ್: ಕಾರು ಅಪಘಾತದಿಂದ ಪಂತ್, ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

    ಜಾನಿ ಬೈರ್‍ಸ್ಟೋವ್: ಐಪಿಎಲ್ ಅತ್ಯಂತ ಪ್ರಭಾವಶಾಲಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಬೈರ್‍ಸ್ಟೋವ್ (Jonny Bairstow), ಕಾಲು ಮುರಿತದಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರ ಬದಲಿಗೆ ಮ್ಯಾಟ್ ಶಾರ್ಟ್ ಅವರನ್ನು ಆಯ್ಕೆಮಾಡಿಕೊಂಡಿದೆ.

    KKR

    ಕೈಲ್ ಜೆಮಿಸನ್: ಬೆನ್ನಿನ ಗಾಯದಿಂದ ಶಸ್ತ್ರಚಿಕಿತ್ಸೆಗೊಳಗಾದ ಜೆಮಿಸನ್ (Kyle Jamieson) ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಸಿಎಸ್‍ಕೆ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

    ಶ್ರೇಯಸ್ ಅಯ್ಯರ್: ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೊರಗುಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‍ನ ಇವರ ಸ್ಥಾನವನ್ನು ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ತುಂಬಲಿದ್ದಾರೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

  • ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ನವದೆಹಲಿ: ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಹೃದಯ ಮತ್ತು ಆತ್ಮವಿದ್ದಂತೆ ಎಂದು ಕೋಚ್ ರಿಕ್ಕಿ ಪಾಂಟಿಂಗ್ (Ricky Ponting) ಹೇಳಿದ್ದಾರೆ.

    ಪಂತ್ ಅವರನ್ನು ನೆನಪಿಸಿಕೊಂಡ ಪಾಂಟಿಂಗ್, ಪ್ರತಿ ಪಂದ್ಯದಲ್ಲಿಯೂ ಡಗೌಟ್‍ನಲ್ಲಿ ನನ್ನ ಬಳಿಯೇ ಪಂತ್ ಕುಳಿತುಕೊಳ್ಳುತ್ತಿದ್ದರು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಅವರನ್ನು ಸಾಧ್ಯವಾದಷ್ಟು ರೀತಿಯಲ್ಲಿ ತಂಡದ ಭಾಗವಾಗಿ ಮಾಡಲು ಬಯಸುತ್ತೇವೆ. ನಾವು ಅವರ ಸಂಖ್ಯೆಯನ್ನು ಜೆರ್ಸಿ ಅಥವಾ ಕ್ಯಾಪ್‍ಗಳ ಮೇಲೆ ಇರಲಿದೆ. ಅವರ ಅನುಪಸ್ಥಿತಿಯಲ್ಲಿಯೂ ಅವರು ನಮ್ಮ ನಾಯಕರಾಗಿತ್ತಾರೆ ಎಂದಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಿಲ್ಲ. ಪಂತ್ ಗೈರಿನಲ್ಲಿ ತಂಡವನ್ನು ಡೆವಿಡ್ ವಾರ್ನರ್ (David Warner) ಮುನ್ನಡೆಸಲಿದ್ದಾರೆ. ಆದರೆ ವಾರ್ನರ್ ನಾಯಕತ್ವ ವಿಚಾರ ಇನ್ನೂ ಅಂತಿಮಗೊಳಿಸಿಲ್ಲ

    ಕಳೆದ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ, ಐದನೇ ಸ್ಥಾನವನ್ನು ಪಡೆದಿತ್ತು. ಏ.1ರಂದು ಲಕ್ನೋದಲ್ಲಿ ನಡೆಯಲಿರುವ ಆರಂಭಿಕ ಐಪಿಎಲ್ (IPL) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants) ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

     

     

  • ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಪಂತ್‌ ಭೇಟಿಯಾದ ಯುವರಾಜ್‌ ಸಿಂಗ್‌

    ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಪಂತ್‌ ಭೇಟಿಯಾದ ಯುವರಾಜ್‌ ಸಿಂಗ್‌

    ಮುಂಬೈ: ಟೀಂ ಇಂಡಿಯಾ (Team India) ಸ್ಟಾರ್‌ ಕ್ರಿಕೆಟಿಗ ರಿಷಭ್‌ ಪಂತ್‌ (Rishabh Pant) ಭೀಕರ ಕಾರು ಅಪಘಾತದಲ್ಲಿ (Car Accident) ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ‌ ವಿವಿಧ ರೀತಿಯ ಆರೋಗ್ಯ ತರಬೇತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ವರ್ಷಾಂತ್ಯದ ವೇಳೆಗೆ ಪಂತ್‌ ಸಂಪೂರ್ಣ ಗುಣಮುಖರಾಗಿ ಫಿಟ್‌ನೆಸ್ ಸಾಬೀತುಪಡಿಸಿದರೆ ಐಸಿಸಿ ಏಕದಿನ ವಿಶ್ವಕಪ್‌ಗೆ (ICC ODI WorldCup) ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

    ಈ ನಡುವೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌‌ (Yuvraj Singh) ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಪಂತ್‌ ಅವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರ ಜೊತೆಗಿನ ಫೋಟೋವನ್ನ ತಮ್ಮ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್

    ಯುವರಾಜ್ ಸಿಂಗ್ ಅವರು ಫೋಟೋಗೆ ಶೀರ್ಷಿಕೆಯೊಂದನ್ನ ನೀಡಿದ್ದು, ʻಮಗುವಿನ ಹೆಜ್ಜೆ ಹಾಕುತ್ತಿದ್ದಾನೆ. ಈ ಚಾಂಪಿಯನ್ ಮತ್ತೆ ಪುಟಿದೇಳಲಿದ್ದಾನೆ. ಅವನು ಧನಾತ್ಮಕವಾಗಿದ್ದಾನೆ, ಮುಖದಲ್ಲಿ ನಗು ಮೂಡಿದೆ. ಈತ ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ. ನಿಮಗೆ ಹೆಚ್ಚಿನ ಶಕ್ತಿ ಲಭಿಸಲಿʼ ಎಂದು ಬರೆದುಕೊಂಡಿದ್ದಾರೆ. ರಿಷಭ್‌ ಪಂತ್‌ ಇದರಿಂದ ಮತ್ತಷ್ಟು ಉತ್ಸಾಹಗೊಂಡಿದ್ದು, ಯುವಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೂಜಾರ ಸ್ಪಿನ್ ಬೌಲಿಂಗ್‌ಗೆ ಶಾಕ್ – ನಾನಿನ್ನು ಕೆಲಸ ಬಿಟ್ಟುಬಿಡಲಾ ಎಂದ ಅಶ್ವಿನ್

    Rishabh Pant 3

    ಯುವರಾಜ್ ಸಿಂಗ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವಾಗಲೇ ಕ್ಯಾನ್ಸರ್‌ಗೆ ತುತ್ತಾಗಿ ವೃತ್ತಿಜೀವನದ ಅತ್ಯಮೂಲ್ಯ ಸಮಯ ಕಳೆದುಕೊಂಡರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಶೀಘ್ರವೇ ಪುನರಾಗಮನ ಮಾಡಿ 2018ರವರೆಗೆ ಭಾರತ ತಂಡಕ್ಕಾಗಿ ಆಡಿದರು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಐಪಿಎಲ್ ಪ್ರಶಸ್ತಿ ಗೆದ್ದಾಗ ಯುವರಾಜ್‌ ಸಿಂಗ್‌ ಸಹ ತಂಡದಲ್ಲಿದ್ದರು.

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

  • ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್

    ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್

    – ರಿಷಭ್ ಪಂತ್ ಆರೋಗ್ಯದಲ್ಲಿ ಚೇತರಿಕೆ

    ಮುಂಬೈ: ಟೀಂ ಇಂಡಿಯಾ‌ (Team India) ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಅವರ ಆರೋಗ್ಯದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಗಾಯದ ಸಮಸ್ಯೆಯಿಂದ ಹಂತ-ಹಂತವಾಗಿ ಚೇತರಿಸಿಕೊಳ್ಳುತ್ತಿರುವ ಪಂತ್ ತಮ್ಮ ಆರೋಗ್ಯ ಚೇತರಿಕೆ ಬಗ್ಗೆ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Rishabh Pant (@rishabpant)

    ರಿಷಭ್ ಪಂತ್‌ಗೆ ಸ್ವಿಮ್ಮಿಂಗ್ ಪೂಲ್ ಸೆಷನ್ ಆರಂಭಿಸಲಾಗಿದೆ. ಪಂತ್ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ಸ್ಟಿಕ್ ಹಿಡಿದು ವಾಕಿಂಗ್ ಮಾಡುರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ `ಸಣ್ಣ ವಿಷಯಗಳು ಹಾಗೂ ದೊಡ್ಡ ವಿಷಯಗಳ ನಡುವೆ ಎಲ್ಲದಕ್ಕೂ ಕೃತಜ್ಞನಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    Rishabh Pant 3

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

    ರಿಷಭ್ ಪಂತ್ ಗಾಯದ ಸಮಸ್ಯೆಯಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ಈ ಬಾರಿ ಐಪಿಎಲ್‌ನಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಗೈರಾಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.