Tag: Rise

  • ಹಾಲಿನ ದರ ಏರಿಸದೇ ಇದ್ದರೆ ಪಂಜಾಬ್ ರೈತರ ರೀತಿ ಹೋರಾಟ: ಜಿ.ಆರ್. ಭಾಸ್ಕರ್

    ಹಾಲಿನ ದರ ಏರಿಸದೇ ಇದ್ದರೆ ಪಂಜಾಬ್ ರೈತರ ರೀತಿ ಹೋರಾಟ: ಜಿ.ಆರ್. ಭಾಸ್ಕರ್

    ನೆಲಮಂಗಲ: ಹಾಲಿನ ದರ ಏರಿಕೆಗೆ ಪಟ್ಟು ಇಲ್ಲದಿದ್ದಲ್ಲಿ ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರಲ್ಲೆ ಇದೇ ಎಂದು ಬಮೂಲ್ ಶಿಬಿರದ ನಿದೇರ್ಶಕ ಜಿ.ಆರ್. ಭಾಸ್ಕರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಕುರಿತು ಕಾಸರಘಟ್ಟದಲ್ಲಿ 183ನೇ ತಾಲೂಕಿನ ನೂತನ ಸಂಘಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಅವಲಂಬಿಸಿರುವ ರೈತಾಪಿ ವರ್ಗದವರ ದೈನಂದಿನ ಜೀವನ ಇಂದು ಬಹಳ ಕಷ್ಟವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳವಾಗಿಲ್ಲ. ಇಂದು ಬೇರೆ-ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಮೂರು ವರ್ಷಗಳಿಂದ ದರ ಏರಿಕೆಯಾಗಿಲ್ಲ. ಸರ್ಕಾರ ಕೂಡಲೇ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

    ಹಾಲು ಉತ್ಪಾದಕರಿಗೆ ಯಾವುದೇ ಲಾಭಾಂಶ ಉಳಿಯುತ್ತಿಲ್ಲ. ಕಳೆದ ವರ್ಷ 56 ಕೋಟಿ ನಷ್ಟ ಸರಿದೂಗಿಸಿದ್ದೇವೆ. ಕೂಡಲೇ ದರ ಏರಿಕೆ ಮಾಡದಿದ್ದರೆ. ನಮ್ಮ ರಾಜ್ಯದ ರೈತರು ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರದಲ್ಲೇ ಇದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,033 ಪಾಸಿಟಿವ್, 43 ಸಾವು

  • ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧದ ಘೋಷಣೆ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಚಿನ್ನ, ಬೆಳ್ಳಿಯ ಬೆಲೆಗಳು ಗಗನಕ್ಕೆ ಏರಿವೆ.

    2,000ಕ್ಕೂ ಅಧಿಕ ಪಾಯಿಂಟ್ಸ್ ಸೆನ್ಸೆಕ್ಸ್ ಕುಸಿತ ಕಂಡರೆ ನಿಫ್ಟಿ 600 ಪಾಯಿಂಟ್ಸ್ ಕುಸಿದಿದೆ. ಯುದ್ಧ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು, ಪ್ರತಿ ಬ್ಯಾರಲ್ ಬೆಲೆ 100 ಡಾಲರ್ ಮೀರಿದೆ. ಈ ಹಿಂದೆ ಪ್ರತಿ ಬ್ಯಾರಲ್ ಬೆಲೆಯೂ 60-70 ಡಾಲರ್ ಆಸುಪಾಲಿನಲ್ಲಿತ್ತು. ನವೆಂಬರ್ 4ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯವಾಗಿದೆ.

    ಚಿನ್ನದ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು 24 ಕ್ಯಾರೆಟ್‍ನ 10 ಗ್ರಾಂ ಚಿನ್ನಕ್ಕೆ 5,320ರೂ. ಹಾಗೂ 22 ಕ್ಯಾರೆಟ್‍ನ 10 ಗ್ರಾಂ ಬಂಗಾರಕ್ಕೆ 4,750 ರೂಪಾಯಿಯಾಗಿದೆ. ನಿನ್ನೆಗಿಂತ ಇಂದು ಒಂದು ಗ್ರಾಂಗೆ 150 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನಕ್ಕೆ 1,500 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

    ಜೊತೆಗೆ ಒಂದು ಕೆಜಿ ಬೆಳ್ಳಿಗೆ 68,400 ರೂಪಾಯಿ ಹೆಚ್ಚಳವಾಗಿದೆ. ನಿನ್ನೆಗಿಂತ ಇಂದು ಬೆಳ್ಳಿ ಬೆಲೆಯಲ್ಲಿ 2,200 ರೂ ಏರಿಕೆಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧದಿಂದಾಗಿ ಚಿನ್ನ ಹಾಗೂ ಬೆಳ್ಳಿ ಏರಿಕೆಯಾಗಿದೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

    ಯುದ್ಧದ ಭೀತಿಯಿಂದಾಗಿ ಈಗಾಗಲೇ ಉಕ್ರೇನ್‍ನಿಂದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳು ವಾಪಸ್ಸಾಗಿದ್ದಾರೆ. ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಭಾರತೀಯ ಪ್ರಜೆಗಳು ದೆಹಲಿಯ ಅಂತರಾಷ್ಟ್ರೀಯ ವಿಮಾನಯಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

  • 100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ

    100 ಡಾಲರ್ ಗಡಿಯಲ್ಲಿ ಕಚ್ಚಾ ತೈಲ – ಭಾರೀ ಬೆಲೆ ಏರಿಕೆ ಸಾಧ್ಯತೆ

    ನವದೆಹಲಿ: ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್‍ಗೆ ಪತ್ರ ಕಳುಹಿಸಿದ ಬಳಿಕ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್(7,459 ರೂ.) ಹತ್ತಿರ ಬಂದಿದೆ. ಭಾರತದಲ್ಲಿ ಸದ್ಯ ತೈಲಬೆಲೆ ಏರಿಕೆಯಾಗಿಲ್ಲವಾದರೂ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ.

    ಏಪ್ರಿಲ್‍ನಲ್ಲಿ ಮಾರಾಟವಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.18 ರಷ್ಟು ಏರಿಕೆಯಾಗಿದ್ದು ಬೆಲೆ 99.38 ಡಾಲರ್(7,415 ರೂ.)ಗೆ ತಲುಪಿದೆ. ಈಗ ಪಂಚರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ಏರಿಕೆ ಕಂಡಿಲ್ಲ. ಪಂಚರಾಜ್ಯ ಚುನಾವಣೆ ಅಂತ್ಯವಾದ ಬಳಿಕ ತೈಲಬೆಲೆ ಭಾರತದಲ್ಲೂ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಕಹಿ ಸುದ್ದಿ

    ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕಚ್ಚಾತೈಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. 2014ರ ಬಳಿಕ ಇಲ್ಲಿಯವರೆಗೆ ತೈಲ ಬೆಲೆ 100ರ ಗಡಿ ದಾಟಿಲ್ಲ. ಈಗ ಯುದ್ಧ ಭೀತಿ ನಿರ್ಮಾಣಗೊಂಡಿದ್ದು ಭಾರತದಲ್ಲೂ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

  • ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಬೆಂಗಳೂರು: ದಿನೇ ದಿನೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಫೆಬ್ರವರಿಯಲ್ಲಿ 6 ಬಾರಿ ಏರಿಕೆಯಾಗಿರುವ ಪೆಟ್ರೋಲ್- ಡೀಸೆಲ್ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

    ಸದ್ಯ 4 ದಿನಗಳಿಂದ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, 4 ದಿನಗಳಿಂದ 1.43 ಪೈಸೆ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.09 ರೂ. ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83.09 ರೂ.ಗೆ ಹೆಚ್ಚಳವಾಗಿದೆ.

    ನಿತ್ಯ ಬೆಲೆ ಏರಿಕೆ ಕಿರಿಕಿರಿ ಉಂಟು ಮಾಡುತ್ತಿದ್ದು ಬಂಕ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಕ್ ಸಮರಕ್ಕೆ ಕಾರಣವಾಗುತ್ತಿದೆ.

    ಪೆಟ್ರೋಲಿಯಂ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ತೈಲಗಳ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗುತ್ತಾ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ 300 ದಿನಗಳ ಪೈಕಿ 60 ದಿನಗಳ ಕಾಲ ಬೆಲೆ ಏರಿಕೆಯಾಗಿದೆ. ಹತ್ತಿರ ಹತ್ತಿರ 250 ದಿನಗಳ ಕಾಲ ನಾವು ಬೆಲೆಯನ್ನು ಏರಿಕೆ ಮಾಡಿಲ್ಲ, ಇಳಿಕೆಯೂ ಮಾಡಿಲ್ಲ ಎಂದು ಉತ್ತರಿಸಿದ್ದರು.

    ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಮೂಲಕ ಸರ್ಕಾರಕ್ಕೆ ಸಂಪನ್ಮೂಲ ಬರುತ್ತದೆ. ಸಂಗ್ರಹಗೊಂಡ ತೆರಿಗೆಯನ್ನು ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹದಲ್ಲಿ ಬಹಳ ಜಾಗರೂಕವಾಗಿದೆ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿವೃದ್ಧಿ ಬದ್ಧತೆ ಇದೆ. ಈ ಕಾರಣಕ್ಕೆ ಈ ಮಾರ್ಗದಿಂದ ಕೆಲವು ಸಂಪನ್ಮೂಲಗಳು ಬೇಕಾಗುತ್ತದೆ. ಪೆಟ್ರೋಲಿಯಂ ಮೇಲಿನ ತೆರಿಗೆ ಪೈಕಿ ಗಣನೀಯ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ ಎಂದು ಹೇಳಿದ್ದರು.

  • ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಧಾರವಾಡ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದ್ದು ಇದನ್ನು ಖಂಡಿಸಿ ಧಾರವಾಡದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ವಿವೇಕಾನಂದ ವೃತ್ತದಲ್ಲಿ ಧಾರವಾಡ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ತಲೆ ಮೇಲೆ ಕಟ್ಟಿಗೆ ಹೊರೆ ಹೊತ್ತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಲಿಂಡರ್ ಸಿಗಲ್ಲ, ಕಟ್ಟಿಗೆ ಖರೀದಿ ಮಾಡಿಕೊಂಡು ಇಟ್ಟುಕೊಳ್ಳಿ, ಸಿಲಿಂಡರ್ ಬೆಲೆ ಕೂಡಾ ಸಾಕಷ್ಟು ಏರಿಕೆಯಾಗಿದೆ ಎಂದು ಜನರಿಗೆ ಕಟ್ಟಿಗೆ ಕೊಟ್ಟು ಕಳಿಸಿದ್ದಾರೆ.

  • ಅಕಾಲಿಕ ಮಳೆ – ಮತ್ತೆ ದುಬಾರಿಯಾದ ಈರುಳ್ಳಿ

    ಅಕಾಲಿಕ ಮಳೆ – ಮತ್ತೆ ದುಬಾರಿಯಾದ ಈರುಳ್ಳಿ

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ.

    ಕೆಜಿಗೆ 20 ರಿಂದ 25 ರೂಪಾಯಿ ಇದ್ದ ಈರುಳ್ಳಿ ಈಗ 80, 90, 100 ರೂಪಾಯಿಗೆ ಏರಿಕೆಯಾಗಿದೆ. ಯಶವಂತಪುರ ಮಂಡಿಯಲ್ಲಿಯೇ ಫೈನ್ ಈರುಳ್ಳಿ ಕೆಜಿಗೆ 80 ರೂಪಾಯಿಯಾಗಿದೆ. ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

    ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿದೆ. ಜೊತೆಗೆ ಬೆಳೆದ ಈರುಳ್ಳಿ ಭೂಮಿಯಲ್ಲೇ ಕೊಳೆತು ಹೋಗಿದೆ. ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆಮದು ಆಗುತ್ತಿದ್ದ ಈರುಳ್ಳಿ ಸಹ ಬರುತ್ತಿಲ್ಲ. ಈ ಪರಿಣಾಮ ಈರುಳ್ಳಿ ಪೂರೈಕೆ ಕಡಿಮೆಯಾದೆ. ಪ್ರತಿದಿನ ಒಂದು ಸಾವಿರ ಲಾರಿ ಲೋಡ್ ಬರುತ್ತಿದ್ದ ಜಾಗದಲ್ಲಿ ದಿನಕ್ಕೆ 150 ಲಾರಿ ಮಾತ್ರ ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

  • ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಭರ್ಜರಿಯಾಗಿ ಸಜ್ಜುಗೊಂಡಿದೆ. ನೀವೇನಾದರೂ ಹಬ್ಬವನ್ನು ಇನ್ನಷ್ಟು ಜೋಶ್ ಆಗಿ ಆಚರಿಸಬೇಕು ಅನ್ಕೊಂಡಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ.

    ಹಬ್ಬ ಜೋರಾಗಿ ಮಾಡೋಣವೆಂದು ಸಾಮಾನು ಖರೀದಿಸಲು ಮಾರುಕಟ್ಟೆಗೆ ಹೋದರೆ ನಿಮಗೆ ಶಾಕ್ ಆಗುತ್ತದೆ. ಯಾಕಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಮಧ್ಯೆಯೇ ಗಾಂಧಿಬಜಾರ್, ಮಲ್ಲೇಶ್ವರಂ, ಯಶವಂತಪುರ ಹಾಗೂ ಕೆ.ಆರ್.ಮಾರ್ಕೆಟ್‍ನಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿದೆ.

    ಹಬ್ಬದ ವಸ್ತುಗಳ ದರ:
    ಕೊಬ್ಬರಿ ಕೆ.ಜಿಗೆ ಬರೋಬ್ಬರಿ 500 ರೂ. ಆಗಿದೆ. ಇತ್ತ ಸಕ್ಕರೆ ಅಚ್ಚು ಕೂಡ 200 ರೂ. ಆಗಿದೆ. ಹಬ್ಬ ಅಂದರೆ ಎಳ್ಳು-ಬೆಲ್ಲ ಮಾಡಬೇಕು. ಆದರೆ ಮಿಕ್ಸೆಡ್ ಎಳ್ಳು ಕೆ.ಜಿಗೆ 240 ರೂ. ಏರಿಕೆ ಆಗಿದೆ. ಬರಿ ಎಳ್ಳುಗೆ 360 ರೂ., ಬೆಲ್ಲ ನೋಡುವುದಾದರೆ 140 ರೂ. ಹಾಗೂ ಜೋಡಿ ಕಬ್ಬು 150 ರಿಂದ 200 ರೂ. ದುಬಾರಿಯಾಗಿದೆ.

    ಹೂವುಗಳ ದರ:
    ಪ್ರತಿ ಹಬ್ಬಕ್ಕೂ ಮೆರುಗು ಕೊಡುವುದೇ ಹೂ, ಆದರೆ ಮಾರುಕಟ್ಟೆಯಲ್ಲಿ ಹೂಗಳ ದರ ಆಕಾಶದಷ್ಟು ಏರಿಕೆ ಆಗಿದೆ. ಒಂದು ಕೆ.ಜಿ ಗುಲಾಬಿಗೆ 350 ರೂ., ಮಲ್ಲಿಗೆ 320 ರೂ., ಸೇವಂತಿ 330 ರೂ. ಹಾಗೂ ಸುಗಂಧರಾಜ 300 ರೂ. ಆಗಿದೆ.

    ಹಣ್ಣುಗಳ ರೇಟ್:
    ಹಬ್ಬಕ್ಕೆ ಹಣ್ಣುಗಳು ಬೇಕೆಬೇಕು. ಆದರೆ ಕೆ.ಜಿ ಬಾಳೆಹಣ್ಣಿಗೆ 100 ರೂ., ದ್ರಾಕ್ಷಿ 250 ರೂ., ದಾಳಿಂಬೆ 220 ರೂ. ಮತ್ತು ಸೇಬು 200 ರೂ. ದುಬಾರಿ ಆಗಿದೆ.

    ಪ್ರತಿ ವರ್ಷವೂ ನಾವು ಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತೇವೆ. ಹಬ್ಬಕ್ಕಾಗಿ ಬೇಕಾದ ಹಣ್ಣು, ಹೂ, ವಸ್ತುಗಳು ಎಲ್ಲವನ್ನು ಖರೀದಿಸಬೇಕು. ಇದ್ಯಾವುದೂ ಇಲ್ಲದೆ ಹಬ್ಬ ಮಾಡುವುದೇ ಕಷ್ಟವಾಗುತ್ತದೆ. ಇದು ವರ್ಷದಲ್ಲಿ ಮೊದಲ ಹಬ್ಬವಾಗಿದ್ದು, ಈ ಹಬ್ಬವನ್ನು ಸಂತೋಷದಿಂದ ಬರ ಮಾಡಿಕೊಳ್ಳೋಣ ಎಂದರೆ ಹಬ್ಬದ ವಸ್ತುಗಳೇ ಇಷ್ಟು ದುಬಾರಿಯಾದರೆ ನಾವು ಹಬ್ಬ ಮಾಡುವುದು ಹೇಗೆ ಎಂದು ಕಂಗಾಲಾಗಿರುವುದಾಗಿ ಗೃಹಿಣಿಯರು ಹೇಳುತ್ತಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಣ ದರ ಏರಿಕೆಗೆ ಸಿಎಂ ತಡೆ- ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಿತ್ತು?

    ಪ್ರಯಾಣ ದರ ಏರಿಕೆಗೆ ಸಿಎಂ ತಡೆ- ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಿತ್ತು?

    ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ತಡೆಹಿಡಿಯುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.

    ಬೆಳಗ್ಗೆಯಷ್ಟೇ ಪೆಟ್ರೋಲ್ ದರ ಇಳಿಸಿ ಸಿಹಿ ಸುದ್ದಿ ನೀಡಿದ್ದ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಾತ್ರಿ ವೇಳೆಗೆ ಶೇ.18 ರಷ್ಟು ಪ್ರಯಾಣ ದರ ಏರಿಕೆ ಮಾಡಿತ್ತು. ಈ ಆದೇಶ ಪ್ರಕಟಗೊಂಡ ಕೂಡಲೇ ಸಿಎಂ ಯಾವುದೇ ನಿಗಮ ಪ್ರಯಾಣ ದರವನ್ನು ಸದ್ಯಕ್ಕೆ ಏರಿಕೆ ಮಾಡಬಾರದು ಎಂದು ಸೂಚಿಸಿದ್ದಾರೆ.

    ಬಿಎಂಟಿಸಿ ಅಂದಾಜು ಪರಿಷೃತ ದರ
    ಸ್ಟೇಜ್ 1 ರಿಂದ 2 :
    ಹಳೆಯ ದರ    ಹೊಸ ದರ
    5 ರೂಪಾಯಿ   6 ರೂಪಾಯಿ

    ಸ್ಟೇಜ್ 3 ರಿಂದ 5:
    ಹಳೆಯ ದರ     ಹೊಸ ದರ
    10 ರೂಪಾಯಿ   14 ರೂಪಾಯಿ

    ಸ್ಟೇಜ್ 6 ರಿಂದ 9:
    ಹಳೆಯ ದರ      ಹೊಸ ದರ
    15 ರೂಪಾಯಿ    18 ರೂಪಾಯಿ

    ಸ್ಟೇಜ್ 10 ರಿಂದ 13:
    ಹಳೆಯ ದರ        ಹೊಸ ದರ
    17 ರೂಪಾಯಿ     20 ರೂಪಾಯಿ

    ಸ್ಟೇಜ್ 14 ರಿಂದ 15:
    ಹಳೆಯ ದರ         ಹೊಸ ದರ
    19 ರೂಪಾಯಿ      23 ರೂಪಾಯಿ

    ಸ್ಟೇಜ್ 16 ರಿಂದ 19:
    ಹಳೆಯ ದರ       ಹೊಸ ದರ
    20 ರೂಪಾಯಿ     24 ರೂಪಾಯಿ

    ಸ್ಟೇಜ್ 20 ರಿಂದ 23:
    ಹಳೆಯ ದರ       ಹೊಸ ದರ
    22 ರೂಪಾಯಿ    26 ರೂಪಾಯಿ

    ಸ್ಟೇಜ್ 24 ರಿಂದ 25:
    ಹಳೆಯ ದರ       ಹೊಸ ದರ
    23 ರೂಪಾಯಿ    27 ರೂಪಾಯಿ

    ಸ್ಟೇಜ್ 26 ರಿಂದ 28:
    ಹಳೆಯ ದರ       ಹೊಸ ದರ
    24 ರೂಪಾಯಿ    29 ರೂಪಾಯಿ

    ಸ್ಟೇಜ್ 29 ರಿಂದ 39:
    ಹಳೆಯ ದರ          ಹೊಸ ದರ
    25 ರೂಪಾಯಿ      30 ರೂಪಾಯಿ

    ಸ್ಟೇಜ್ 40 ರಿಂದ 41:
    ಹಳೆಯ ದರ        ಹೊಸ ದರ
    26 ರೂಪಾಯಿ    31 ರೂಪಾಯಿ

    ಸ್ಟೇಜ್ 42 :
    ಹಳೆಯ ದರ       ಹೊಸ ದರ
    27 ರೂಪಾಯಿ    32 ರೂಪಾಯಿ

    ಕೆಎಸ್‍ಆರ್ ಟಿಸಿ ಬಸ್ ಪ್ರಮುಖ ನಗರಗಳ ಬಸ್ ದರ:

  • ತೈಲ ಬೆಲೆ ಮತ್ತೆ ಏರಿಕೆ: ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್‌ನಲ್ಲಿ  ಯಾರ ಪಾಲು ಎಷ್ಟು?

    ತೈಲ ಬೆಲೆ ಮತ್ತೆ ಏರಿಕೆ: ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್‌ನಲ್ಲಿ ಯಾರ ಪಾಲು ಎಷ್ಟು?

    ಬೆಂಗಳೂರು: ಈ ತಿಂಗಳಲ್ಲಿ ಸತತ 12ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಂತೂ 80 ರೂಪಾಯಿ ದಾಟುವ ಮೂಲಕ ಸಾರ್ವತ್ರಿಕ ದಾಖಲೆ ಸೃಷ್ಠಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದರಿಂದ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇನ್ನು, ತೈಲ ಬೆಲೆ ಏರಿಕೆಯಾಗಿರೋದ್ರಿಂದ ತೈಲ ಉತ್ಪನ್ನಗಳ ಮೇಲೆ ಹಾಕಿರುವ ಸೆಸ್ ಇಳಿಕೆಬೇಕೆಂದು ರಾಜ್ಯ ಸರ್ಕಾರವನ್ನು ವಾಹನ ಸವಾರರು ಒತ್ತಾಯಿಸಿದ್ದಾರೆ.

    ಪೆಟ್ರೋಲ್ ದರ ಎಲ್ಲಿ ಎಷ್ಟು?
    ದೆಹಲಿಯಲ್ಲಿ 78.05 ರೂ, ಮುಂಬೈ 85.38 ರೂ. ಚೆನ್ನೈ 80.99 ರೂ, ಕೋಲ್ಕತ್ತಾ 80.89 ರೂ., ಬೆಂಗಳೂರು 80.76

    ಡೀಸೆಲ್ ದರ ಎಲ್ಲಿ ಎಷ್ಟು?
    ದೆಹಲಿಯಲ್ಲಿ 69.61 ರೂ., ಮುಂಬೈ 73.79 ರೂ., ಚೆನ್ನೈ 75.43 ರೂ., ಕೋಲ್ಕತ್ತಾ 72.35 ರೂ., ಬೆಂಗಳೂರು 71.98 ರೂ.

    ಕರ್ನಾಟಕದಲ್ಲಿ ಹೇಗಿದೆ ಪೆಟ್ರೋಲ್ ತೆರಿಗೆ?
    * ಮೂಲದರ- 58.55 ರೂ. (ಲೀಟರ್‌ಗೆ) ( ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
    * ಕರ್ನಾಟಕದಲ್ಲಿ ತೆರಿಗೆ- 22.21 ರೂ. (ಲೀಟರ್‌ಗೆ)
    * ಶೇ.32ರಷ್ಟು ಸೆಸ್ ಅಂದರೆ 18.74 ರೂಪಾಯಿ ಆಗುತ್ತೆ
    * ಎಲ್‍ಎಫ್‍ಆರ್ – 47 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
    * ಡೀಲರ್‍ಗಳಿಗೆ ಕಮಿಷನ್- 3.00 ರೂ.
    * ತೆರಿಗೆ ನಂತರ- 80.76 ರೂ.

    ಕರ್ನಾಟಕದಲ್ಲಿ ಹೇಗಿದೆ ಡೀಸೆಲ್ ತೆರಿಗೆ?
    * ಮೂಲದರ – 57.59 ರೂ. (ಲೀಟರ್‌ಗೆ) (ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
    * ಕರ್ನಾಟಕದಲ್ಲಿ ತೆರಿಗೆ- 14.39 ರೂ. (ಲೀಟರ್‌ಗೆ)
    * ಶೇ.21ರಷ್ಟು ಸೆಸ್ ಅಂದರೆ 12 ರೂಪಾಯಿ ಆಗುತ್ತೆ
    * ಎಲ್‍ಎಫ್‍ಆರ್ – 37 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
    * ಡೀಲರ್‍ಗಳಿಗೆ ಕಮಿಷನ್- 2.00 ರೂ (ಲೀಟರ್‌ಗೆ)
    * ತೆರಿಗೆ ನಂತರ- 71.98 ರೂ. (ಲೀಟರ್‌ಗೆ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿಢೀರ್ ಏರಿಕೆಯಾದ ಮೃಗಾಲಯದ ಟಿಕೆಟ್ ದರ – ಯಾವುದಕ್ಕೆ ಎಷ್ಟೆಷ್ಟು?

    ದಿಢೀರ್ ಏರಿಕೆಯಾದ ಮೃಗಾಲಯದ ಟಿಕೆಟ್ ದರ – ಯಾವುದಕ್ಕೆ ಎಷ್ಟೆಷ್ಟು?

    ಮೈಸೂರು: ನಗರದ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಮೃಗಾಲಯ ಪ್ರಾಧಿಕಾರ ದರದ ಹೊರೆ ಭಾಗ್ಯ ವಿಧಿಸಿದೆ. ಮೃಗಾಲಯದ ಎಲ್ಲಾ ವಿಭಾಗಗಳ ದರಗಳು ದಿಢೀರ್ ಏರಿಕೆಯಾಗಿದೆ.

    ಪ್ರವೇಶ ಶುಲ್ಕದಿಂದ ಹಿಡಿದು ಪಾರ್ಕಿಂಗ್ ಶುಲ್ಕದವರೆಗು ಎಲ್ಲಾ ದರಗಳ ಏರಿಕೆಯಾಗಿವೆ. ಹೊಸ ದರದಿಂದ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊರೆಯಾಗಿದೆ. ಮೃಗಾಲಯದ ಹೊಸ ಮತ್ತು ಹಳೆ ದರದ ವಿವರ ಇಂತಿದೆ.

    * ವಯಸ್ಕರು, ಹಳೆ ದರ 50ರೂ. ಹೊಸ ದರ 60ರೂ. 10ರೂ. ಹೆಚ್ಚಳವಾಗಿದೆ.
    * ಮಕ್ಕಳು, ಹಳೆ ದರ 20ರೂ. ಹೊಸ ದರ 30ರೂ. 10ರೂ. ಅಧಿಕವಾಗಿದೆ.
    * ವಾರಂತ್ಯದಲ್ಲಿ ವಯಸ್ಕರು, ಹಳೆ ದರ 70ರೂ. ಹೊಸ ದರ 80ರೂ. 10ರೂ. ಹೆಚ್ಚಾಗಿದೆ.
    * ವಾರಂತ್ಯದಲ್ಲಿ ಮಕ್ಕಳು, ಹಳೆ ದರ 30ರೂ. ಹೊಸ ದರ 40ರೂ. 10ರೂ. ಅಧಿಕವಾಗಿದೆ.

    ಪಾರ್ಕಿಂಗ್

    * ಬಸ್- ಹಳೆ ದರ 70ರೂ. ಹೊಸ ದರ 100ರೂ. ಹೆಚ್ಚಳ 30ರೂ.
    * ಕಾರು – ಹಳೆ ದರ 30ರೂ. ಹೊಸ ದರ 50ರೂ. ಹೆಚ್ಚಳ 20ರೂ.
    * ಟೆಂಪೋ- ಟಿಟಿ – ಹಳೆ ದರ 50ರೂ. ಹೊಸ ದರ 80ರೂ. ಹೆಚ್ಚಳ 30ರೂ.
    * ಸ್ಕೂಟರ್ – ಹಳೆ ದರ 10ರೂ.  ಹೊಸ ದರ 20ರೂ.  ಹೆಚ್ಚಳ 10ರೂ.
    * ಕ್ಯಾಮಾರ ಸ್ಟೀಲ್ – ಹಳೆ ದರ20ರೂ.  ಹೊಸ ದರ 100ರೂ.  ಹೆಚ್ಚಳ 80ರೂ.
    * ಕ್ಯಾಮಾರ ವಿಡಿಯೋ – ಹಳೆ ದರ 150ರೂ. ಹೊಸ ದರ 200ರೂ. ಹೆಚ್ಚಳ 50ರೂ.
    * ಬ್ಯಾಟರಿ ಚಾಲಿತ ವಾಹನ ಒಬ್ಬರಿಗೆ – ಹಳೆ ದರ 150ರೂ. ಹೊಸ ದರ 180ರೂ. ಹೆಚ್ಚಳ ವಾರಂತ್ಯದಲ್ಲಿ 30ರೂ.
    * ಬ್ಯಾಟರಿ ಚಾಲಿತ ವಾಹನ ಮಕ್ಕಳಿಗೆ – ಹಳೆ ದರ 75ರೂ. ಹೊಸ ದರ 90ರೂ. ಹೆಚ್ಚಳ 15ರೂ.
    * ವಾರಂತ್ಯದಲ್ಲಿ 100ರೂ, ಲಗೇಜ್ – ಹಳೆ ದರ 5ರೂ. ಹೊಸ ದರ 10ರೂ. ಹೆಚ್ಚಳ 5ರೂ.