Tag: Ring Road

  • ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು : ಸಚಿವ ಆರ್.ಅಶೋಕ್

    ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು : ಸಚಿವ ಆರ್.ಅಶೋಕ್

    ರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ಹೆಸರನ್ನು ಬೆಂಗಳೂರಿನ ರಿಂಗ್ ರಸ್ತೆಗೆ (Ring Road)  ಇಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R. Ashok) ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುನೀತ್ ಅವರಿಗೆ ಈಗಾಗಲೇ ಸರಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಸಾಮಾಜಿಕ ಕೆಲಸಗಳನ್ನು ಗುರುತಿಸಿ ಹೆಚ್ಚೆಚ್ಚು ಗೌರವವನ್ನು ನೀಡಲಾಗುತ್ತಿದೆ. ಈ ಸಲ ಬೆಂಗಳೂರಿನ ರಿಂಗ್ ರಸ್ತೆಗೆ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ’ ಎಂದರು.

    ಬೆಂಗಳೂರಿನ ಮೈಸೂರು ರಸ್ತೆಯಿಂದ ನಾಯಂಡಳ್ಳಿ ಜಂಕ್ಷನ್ ಬನ್ನೇರುಘಟ್ಟ ರಸ್ತೆವರೆಗೂ ಪುನೀತ್ ರಾಜ್ ಕುಮಾರ್ ರಸ್ತೆ ಅಂತ ನಾಮಕರಣ ಮಾಡುತ್ತಿದ್ದು, 12 ಕಿಲೋ ಮೀಟರ್ ರಸ್ತೆಯ ಡಬಲ್ ರೋಡ್ ಅದಾಗಿದೆ. ಅಷ್ಟು ಉದ್ದದ ರಸ್ತೆಗೆ ಈವರೆಗೂ ಯಾರ ಹೆಸರನ್ನೂ ಇಟ್ಟಿಲ್ಲ ಎನ್ನುವುದು ವಿಶೇಷ. ನಾಳೆ ಬೆಂಗಳೂರಿನ ಪದ್ಮನಾಭನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಸರಿನ ನಾಮಫಲಕ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) , ಶಿವರಾಜ್ ಕುಮಾರ್ (Shivraj Kumar)),  ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ಭಾಗಿಯಾಗಲಿದೆ. ಅಲ್ಲದೇ, ಸಿನಿಮಾ ರಂಗದ ಅನೇಕ ಗಣ್ಯರು ಉಪಸ್ಥಿತಿ ಇರಲಿದ್ದಾರೆ. ಉದ್ಘಾಟನೆಯ ನಂತರ ನಟಿ ರೂಪಿಕಾ ನೃತ್ಯ ಪ್ರದರ್ಶನ ಹಾಗೂ ಗುರು ಕಿರಣ್, ಸಾಧು ಕೋಕಿಲ, ರಘು ದೀಕ್ಷಿತ್ ಮತ್ತು ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮವಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಸೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ

    ಮೈಸೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ

    ಮೈಸೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಯೊಂದರ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿದೆ.

    ಮೈಸೂರಿನ ಹೊರವಲಯದಲ್ಲಿರುವ ಬೋಗಾದಿ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ರಿಂಗ್ ರಸ್ತೆಯಿಂದ ಅಮೃತಾನಂದಮಯಿ ವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿದೆ. ಇಡೀ ರಸ್ತೆ ಕುಸಿತವಾಗಿದೆ. ಇದನ್ನೂ ಓದಿ: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು: ಸಿದ್ದು ವಿರುದ್ಧ ಬೋಪಯ್ಯ ಕಿಡಿ

    RAIN

    ಬಡಾವಣೆಗೆ ಜಲ ದಿಗ್ಬಂಧನ: ನಗರದಲ್ಲಿ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಬೋಗಾದಿ ಕೆರೆ ತುಂಬಿ ಹರಿಯುತ್ತಿದ್ದು, ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಆನಂದ ನಗರವೂ ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದೆ. ಬಹುತೇಕ ನಿವಾಸಿಗಳು ನಿನ್ನೆಯಿಂದ ಮನೆಯೊಳಗೇ ಇದ್ದಾರೆ. ಮಳೆ ನೀರು ಮನೆಯ ಗೇಟ್‌ವರೆಗೂ ತುಂಬಿದ್ದು, ಇಂದೂ ಸಹ ಮಳೆಯಾದರೆ, ನೀರು ಮನೆಗಳಿಗೆ ನುಗ್ಗುವುದು ನಿಶ್ಚಿತವಾಗಿದೆ.

  • ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

    ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

    ಬೆಳಗಾವಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿಯಿಂದ ಕಿತ್ತೂರಿನವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಐದು ರಾಷ್ಟ್ರೀಯ ಹೆದ್ದಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ದೂರದೃಷ್ಟಿಯಿಂದ ದೇಶದಲ್ಲಿ ರಸ್ತೆ ಅಭಿವೃದ್ಧಿಗಳಾಗುತ್ತಿವೆ. ರಸ್ತೆ ಮೂಲಕ ನರೇಂದ್ರ ಮೋದಿ ಕಂಡಿರುವ ಕನಸನ್ನು ನನಸು ಮಾಡಲು ರಸ್ತೆ ಅಭಿವೃದ್ಧಿಗೆ ಚಾಲನೆ ಕೊಡಲಾಗುತ್ತಿದೆ. ಮೋದಿ ಅವರ ಕನಸನ್ನು ನಿತಿನ್ ಗಡ್ಕರಿ ಅವರು ಸಾಕಾರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿ ಕ್ರಾಂತಿಯನ್ನು ಮಾಡಿದ್ದಾರೆ. 20 ವರ್ಷಗಳ ಹಿಂದೆ ಈ ಕಾರ್ಯವನ್ನ ಮಾಡಿದ್ದರು. ಇಂದು ಇಡೀ ದೇಶದಲ್ಲಿ ನ್ಯಾಷನಲ್ ಹೈವೇ ಅಭಿವೃದ್ಧಿ ಮಾಡುತ್ತಿದ್ದಾರೆ. ರಸ್ತೆಗಳನ್ನ ರಸ್ತೆಗಳಾಗಿ ನೋಡಲಿಲ್ಲ. ಹಲವು ಉಪಯುಕ್ತ ಯೋಜನೆಗಳನ್ನ ರೂಪಿಸಲಾಗುತ್ತಿದೆ. ಬೆಳಗಾವಿಯಲ್ಲಿನ ನ್ಯಾಷನಲ್ ಹೈವೇ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡುತ್ತೇನೆ. ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು. ಬೆಳಗಾವಿಯಿಂದಲೇ ಈ ಯೋಜನೆ ಆರಂಭ ಮಾಡುತ್ತೇನೆ ಎಂದು ಸಿಎಂ ಘೋಷಣೆ ಮಾಡಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ಗಡ್ಕರಿಯವರು ರಿಂಗ್ ರೋಡ್ ಮಾಡಲು ಒತ್ತು ನೀಡಿದ್ದಾರೆ. ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡಬೇಕೆಂದು ಬಹಳ ವರ್ಷಗಳ ಯೋಜನೆಯಿದೆ. ಆದಷ್ಟು ಬೇಗ ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡುತ್ತೇನೆ. ಮಹಾರಾಷ್ಟ್ರ ಧಾರ್ಮಿಕ ಸ್ಥಳಗಳು, ಕರ್ನಾಟಕ ಧಾರ್ಮಿಕ ಸ್ಥಳಗಳಿಗೆ ಜೋಡಣೆ ಮಾಡುವ ಕನಸು ಗಡ್ಕರಿ ಕಂಡಿದ್ದಾರೆ. ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ. ರಸ್ತೆಗಳು ಅಭಿವೃದ್ಧಿಗೆ ಮಾದರಿ ಆಗಲಿ. ಇದು ರಾಷ್ಟ್ರೀಯ ಐಕ್ಯತೆಗೆ ಸಹಕಾರಿ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

  • ತುಮಕೂರು ರಿಂಗ್ ರೋಡ್ ನಿರ್ಮಾಣಕ್ಕೆ ಪರಮೇಶ್ವರ್ ಒಡೆತನದ ಕಾಲೇಜು ಅಡ್ಡಿ

    ತುಮಕೂರು ರಿಂಗ್ ರೋಡ್ ನಿರ್ಮಾಣಕ್ಕೆ ಪರಮೇಶ್ವರ್ ಒಡೆತನದ ಕಾಲೇಜು ಅಡ್ಡಿ

    – ಸಿದ್ದಾರ್ಥ ತಾಂತ್ರಿಕ ಕಾಲೇಜು ಜಾಗ ಬಿಡದಿದ್ದಕ್ಕೆ ಕಾಮಗಾರಿ ವಿಳಂಬ
    – 8 ತಿಂಗಳಿಂದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

    ತುಮಕೂರು: ನಗರದ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ತಾಂತ್ರಿಕ ಕಾಲೇಜು ಅಡ್ಡಿಯಾಗಿದೆ.

    ಕ್ಯಾತಸಂದ್ರದಿಂದ ಗುಬ್ಬಿ ಗೇಟ್‍ವರೆಗ ಚತುಷ್ಪಥ ರಿಂಗರೋಡ್ ನಿರ್ಮಾಣವಾಗುತ್ತಿದೆ. ಈಗಾಗಲೇ ರಸ್ತೆ ಕಾಮಗಾರಿ ಶೇಕಡ 70ರಷ್ಟು ಪೂರ್ಣಗೊಂಡಿದೆ. ಕಳೆದ 8 ತಿಂಗಳಿಂದ ಇನ್ನುಳಿದ ಶೇಕಡ 30ರಷ್ಟು ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ವಿಳಂಬವಾಗೋದಕ್ಕೆ ಪ್ರಮುಖ ಕಾರಣ ಸಿದ್ದಾರ್ಥ ತಾಂತ್ರಿಕ ಕಾಲೇಜು ಎನ್ನಲಾಗಿದೆ. ರಸ್ತೆ ಅಗಲೀಕರಣಕ್ಕೆ ಈ ಕಾಲೇಜಿನ ಸುಮಾರು 30 ಮೀಟರ್ ಜಾಗ ಬಿಟ್ಟುಕೊಡಬೇಕು. ಆದರೆ ಕಾಲೇಜು ಆಡಳಿತ ಮಂಡಳಿ ಇಲ್ಲಿತನಕ ಜಾಗ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

    ಮರಳೂರಿನಲ್ಲಿರುವ ಸಿದಾರ್ಥ ಕಾಲೇಜಿನ ಹಿಂಭಾಗದ 30 ಮೀಟರ್ ಜಾಗ ರಸ್ತೆ ಕಾಮಗಾರಿಗೆ ಬಿಟ್ಟುಕೊಡಬೇಕು. ಕಾಲೇಜು ಸುತ್ತ ಬೃಹತ್ ಕಾಂಪೌಂಡ್ ಇದ್ದು ಇದನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕಿತ್ತು. ಜಾಗ ಬಿಟ್ಟುಕೊಡುವಂತೆ ಹಲವಾರು ಬಾರಿ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ ಆಡಳಿತ ಮಂಡಳಿ ಮಾತ್ರ ಜಾಗ ಬಿಟ್ಟುಕೊಡುವ ಒಲವು ತೋರಿಲ್ಲ. ಆದ್ದರಿಂದ ಕಾಮಗಾರಿ ವಿಳಂಬವಾಗಿದೆ.

    ಈ ನಡುವೆ ಪಾಲಿಕೆ ಆಯುಕ್ತ ಭೂಬಾಲನ್ ಅವರು ಸ್ವತಃ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿದ್ದಾರೆ. ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪರಮೇಶ್ವರ್ ಕೂಡ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೂ ಇಲ್ಲಿತನ ತೆರವು ಕಾರ್ಯ ನಡೆದಿಲ್ಲ.

    2019 ಡಿಸೆಂಬರ್ ನಲ್ಲಿ ರಿಂಗ್ ರೋಡ್ ಕಾಮಗಾರಿ ಪೂರ್ಣವಾಗಬೇಕಿತ್ತು. ಸಿದ್ದಾರ್ಥ ಮೆಡಿಕಲ್ ಕಾಲೇಜು, ಶೆಟ್ಟಿಹಳ್ಳಿ ಬಳಿಯ ಕೆಲ ತೊಂದರೆಯಿಂದ ಹೊರವರ್ತುಲ ರಸ್ತೆ ಕಾಮಗಾರಿ ವಿಳಂಬವಾಗಿದೆ. ಪರಿಣಾಮ ಸಾರ್ವಜನಿಕರು ಧೂಳು, ಅಪಘಾತದಿಂದ ಕಿರಿಕಿರಿ ಅಭವಿಸುತಿದ್ದಾರೆ. ಬಡ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಆತುರ ತೋರುವ ಅಧಿಕಾರಿಗಳು ಪ್ರಭಾವಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.