Tag: Rihanna

  • 3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

    3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

    ಗತ್ತಿನಾದ್ಯಂತ ಅಭಿಮಾನಿಗಳನ್ನ ಹೊಂದಿರುವ ರಿಹಾನಾ (Rihanna) ಇದೀಗ ಮೂರನೇ ಮಗುವಿನ ತಾಯಿಯಾಗಿದ್ದಾರೆ. ದೀರ್ಘಕಾಲದ ಸಂಗಾತಿ ಹಾಗೂ ರ‍್ಯಾಪರ್ ಆಸ್ಯಾಪ್ ರಾಕಿ ಅವರೊಂದಿಗಿನ ಸಂಬಂಧದಲ್ಲಿ ಗ್ರ್ಯಾಮಿ ವಿಜೇತ ಸಿಂಗರ್ ರಿಹಾನಾಗೆ ಹೆಣ್ಣು ಮಗುವಿನ (Baby Girl) ಜನನವಾಗಿದೆ.

    ಮೊದಲೇ ಇಬ್ಬರು ಗಂಡು ಮಕ್ಕಳನ್ನ ಪಡೆದುಕೊಂಡಿರುವ ರಿಹಾನಾ ಈಗ ಹೆಣ್ಣು ಹುಟ್ಟಿದ್ದಕ್ಕೆ ಭಾರೀ ಖುಷಿಯಿಂದ ಸುದ್ದಿ ಹಂಚಿಕೊಂಡಿರುವ ರಿಹಾನಾ ಈಗ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಎಂದಿದ್ದಾರೆ. 37 ವರ್ಷದ ಗಾಯಕಿ ರಿಹಾನಾ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಸಂಗೀತಗಾರ್ತಿ ಎಂದು ಹೆಸರು ಪಡೆದುಕೊಂಡಿದ್ದಾರೆ.  ಇದನ್ನೂ ಓದಿ:  ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

    ಸೆಪ್ಟೆಂಬರ್ 13 ರಂದು ಮಗು ಜನಿಸಿರುವ ಬಗ್ಗೆ ಮಾಹಿತಿ ಕೊಟ್ಟು ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಪಿಂಕ್ ಕಲರ್ ಬಟ್ಟೆ ಧರಿಸಿದ ನವಜಾತ ಶಿಶುವನ್ನು ತೊಟ್ಟಿಲಲ್ಲಿ ಕೂರಿಸುವ ಒಂದು ಚಿತ್ರ ಮತ್ತು ಮಗುವಿನ ಪಿಂಕ್‌ಶೂಗಳ ಇನ್ನೊಂದು ಫೋಟೋ ಹಂಚಿಕೊಂಡಿದ್ದಾರೆ. ರಾಕಿ ಐರಿಶ್ ಮೇಯರ್ಸ್ ಎಂದು ತಮ್ಮ ಮಗಳಿಗೆ ಹೆಸರಿಟ್ಟಿರೋದನ್ನೂ ರಿಹಾನಾ ಬಹಿರಂಗಪಡಿಸಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳು ರಿಹಾನಾಗೆ ಶುಭ ಕೋರುತ್ತಿದ್ದಾರೆ, ಇದನ್ನೂ ಓದಿ:  ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

  • 74 ಕೋಟಿ ಪಡೆದು ಬೇಗ ನಿರ್ಗಮಿಸಿದ್ದೇಕೆ ಗಾಯಕಿ ರಿಯಾನಾ?

    74 ಕೋಟಿ ಪಡೆದು ಬೇಗ ನಿರ್ಗಮಿಸಿದ್ದೇಕೆ ಗಾಯಕಿ ರಿಯಾನಾ?

    ತ್ಯಂತ ಶ್ರೀಮಂತ ಕುಟುಂಬದ ಅನಂತ್ ಅಂಬಾನಿ (Ananth Ambani)  ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಗುಜರಾತಿನ ಜಾಮ್‌ನಗರದಲ್ಲಿ ನಡೆಯುತ್ತಿದೆ. ಈ ಪ್ರೀ-ವೆಡ್ಡಿಂಗ್‌ನ ಆಕರ್ಷಣೆ ಎಂದರೆ ಸುಪ್ರಸಿದ್ಧ ಗಾಯಕಿ ರಿಯಾನಾ ಅವರ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನೀಡುವುದಕ್ಕಾಗಿ ಅವರು ಬರೋಬ್ಬರಿ 4 ಗಾಡಿ ಲಗೇಜ್ ನೊಂದಿಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಆದರೆ ಸಂಭಾವನೆ ಸಿಗುತ್ತಿದ್ದಂತೆ ಒಂದು ಕ್ಷಣವೂ ನಿಲ್ಲದೇ ಭಾರತಕ್ಕೆ ರಿಯಾನಾ (Rihanna) ಗುಡ್ ಬೈ ಹೇಳಿದ್ದರು.

    ಅನಂತ್ ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಪ್ರೀ-ವೆಡ್ಡಿಂಗ್ ಕಾರ್ಯಕ್ರಮಕ್ಕೆ ರಿಯಾನಾ ಗಾಯನ ಅತಿಥಿಗಳಿಗೆ ಕಿಕ್ ಕೊಟ್ಟಿತ್ತು. ಅಷ್ಟರ ಮಟ್ಟಿಗೆ ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಗಾಯಕಿ ಮನರಂಜನೆ ನೀಡಿದ್ದರು. ಅದಕ್ಕೆ ಸರಿಯಾಗಿ 74 ಕೋಟಿ ರೂ. ಸಂಭಾವನೆ ಕೂಡ ಪಡೆದರು. ಬಳಿಕ ಭಾರತಕ್ಕೆ ಬೈ ಹೇಳಿ ಹೋಗಿದ್ದಾರೆ. ನಿರ್ಗಮನದ ಕಾರಣ ಕೂಡ ರಿಯಾನಾ ತಿಳಿಸಿದ್ದಾರೆ. ಇದನ್ನೂ ಓದಿ:ಬಾಲ್ಯದ ಕನಸು ನನಸಾಗಿದೆ ಎಂದು ಸಂಭ್ರಮಿಸಿದ ರಶ್ಮಿಕಾ ಮಂದಣ್ಣ

    ನಾನು ಭಾರತದಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ. ನನಗೆ ಕೇವಲ ಎರಡು ದಿನಗಳು ಮಾತ್ರ ಇದ್ದವು, ಆದರೆ ನಾನು ಹೊರಟ ಏಕೈಕ ಕಾರಣವೆಂದರೆ ನನ್ನ ಮಕ್ಕಳು ನನಗಾಗಿ ಕಾಯುತ್ತಿದ್ದರು. ನಾನು ಹಿಂದಿರುಗಲೇಬೇಕಿತ್ತು ಎಂದು ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಗಾಯಕಿ ಹೇಳಿದ್ದಾರೆ.

    ಅಂಬಾನಿ ಕುಟುಂಬಕ್ಕೆ ಧನ್ಯವಾದಗಳು. ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ದೇವರು ನಿಮ್ಮ ಒಕ್ಕೂಟವನ್ನು ಆಶೀರ್ವದಿಸುತ್ತಾನೆ. ನಾನು ನಿಮಗೆ ಶುಭ ಹಾರೈಸುತ್ತೇನೆ. ಅಭಿನಂದನೆಗಳು ಎಂದು ಅವರು ಶೀಘ್ರದಲ್ಲೇ ಮದುವೆಯಾಗಲಿರುವ ಜೋಡಿಗೆ ಗಾಯಕಿ ಶುಭಹಾರೈಸಿದ್ದರು.

    ಅನಂತ್- ರಾಧಿಕಾ ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ:ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ಜರುಗಲಿದೆ. ಅದಕ್ಕಾಗಿ ಗುಜರಾತ್‌ನ ಜಾಮ್‌ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳಿತ್ತು. ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

    ಶಾರುಖ್ ಖಾನ್ ಕುಟುಂಬ, ಸಲ್ಮಾನ್ ಖಾನ್, ಆಮೀರ್ ಖಾನ್, ದೀಪಿಕಾ ಪಡುಕೋಣೆ- ರಣ್‌ವೀರ್ ಸಿಂಗ್, ಆಲಿಯ ಭಟ್- ರಣ್‌ಬೀರ್, ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಭಾಗಿಯಾಗಿದ್ದರು.

    ಶ್ರದ್ಧಾ ಕಪೂರ್, ಅನನ್ಯಾ ಪಾಂಡೆ, ಬೋನಿ ಕಪೂರ್ ಕುಟುಂಬ, ಕರೀನಾ ಕಪೂರ್-ಸೈಫ್, ರಾಮ್ ಚರಣ್- ಉಪಸನಾ, ಮನೀಷ್ ಮಲ್ಹೋತ್ರಾ, ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ ಭಾಗಿಯಾಗಿದ್ದರು.

    ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸುಹಾನಾ ಖಾನ್, ರಿಯಾ ಕಪೂರ್ ಭಾಗಿಯಾಗಿದ್ದರು.

  • ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಕ್ಕೆ 4 ಗಾಡಿ ಲಗೇಜ್ ಜೊತೆ ಬಂದ ಗಾಯಕಿ

    ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಕ್ಕೆ 4 ಗಾಡಿ ಲಗೇಜ್ ಜೊತೆ ಬಂದ ಗಾಯಕಿ

    ತ್ಯಂತ ಶ್ರೀಮಂತ ಕುಟುಂಬದ ಅನಂತ್ ಅಂಬಾನಿ (Anant Ambani) ಪ್ರೀ-ವೆಡ್ಡಿಂಗ್ (Pre-Wedding) ಕಾರ್ಯಕ್ರಮ ಇಂದಿನಿಂದ ಗುಜರಾತಿನ ಜಾಮ್ ನಗರ್ ದಲ್ಲಿ ಇಂದಿನಿಂದ ನಡೆಯುತ್ತಿದೆ. ಈ ಪ್ರೀ-ವೆಡ್ಡಿಂಗ್ ನ ಆಕರ್ಷಣೆ ಎಂದರೆ ಸುಪ್ರಸಿದ್ಧ ಗಾಯಕಿ ರಿಯಾನಾ (Rihanna) ಅವರ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನೀಡುವುದಕ್ಕಾಗಿ ಅವರು ಬರೋಬ್ಬರಿ 4 ಗಾಡಿ ಲಗೇಜ್ ನೊಂದಿಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಆ ವಿಡಿಯೋ ವೈರಲ್ ಕೂಡ ಆಗಿದೆ.

    ಈ ಕಾರ್ಯಕ್ರಮ ನೀಡುವುದಕ್ಕಾಗಿ ರಿಯಾನಾ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಸುದ್ದಿ ಆಗಿತ್ತು. ಐವತ್ತು ಕೋಟಿಗೂ ಅಧಿಕ ಸಂಭಾವನೆಯಲ್ಲಿ ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೊಂದು ಹಣ ಪಡೆದಿದ್ದರಿಂದ ಕಾರ್ಯಕ್ರಮ ಯಾವ ರೀತಿಯಲ್ಲಿ ಅದ್ಧೂರಿಯಾಗಿ ಇರಬಹುದು ಎಂದು ಊಹಿಸಬಹುದು.

    ಅಂಬಾನಿ ಕುಟುಂಬ ಪ್ರೀ-ವೆಡ್ಡಿಂಗ್ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕುತ್ತಿದೆ.  ಕೇವಲ ಬಾಲಿವುಡ್ ಸೆಲೆಬ್ರಿಟಿಗಳ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಚಿತ್ರರಂಗದ ಗಣ್ಯರಿಗೆ, ಮಾಜಿ ಮುಖ್ಯಮಂತ್ರಿಗಳಿಗೆ, ನಾನಾ ಕ್ಷೇತ್ರಗಳ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯುತ್ತಿವೆ. ಅದಕ್ಕಾಗಿ ಗುಜರಾತ್‌ನ ಜಾಮ್ ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್‌ ಅವರ ಗಾಯನ ಇರಲಿದೆ.

    ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು  ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು. ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್‌ಬೀರ್ ಕಪೂರ್, ಆಲಿಯಾ ಭಟ್ (Aliaa Bhat), ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಅನೇಕರು ಭಾಗಿಯಾಗುತ್ತಿದ್ದಾರೆ.

     

    ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.

  • ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

    ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

    ಹಿರಿಯ ನಟ ಡಿಂಗ್ರಿ ನಾಗರಾಜ್ ಸುಪುತ್ರ ರಾಜವರ್ಧನ್ (Rajavardhan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹಿರಣ್ಯ’ (Hiranya) ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಜವರ್ಧನ್ ಗೆ ಜೋಡಿಯಾಗಿ ಯುವನಟಿ ರಿಹಾನಾ (Rihanna) ಬಣ್ಣ ಹಚ್ಚಿರುವ ಬಗ್ಗೆ ಮಾಹಿತಿಯಷ್ಟೇ ಬಿಟ್ಟುಕೊಟ್ಟಿದ್ದ ಸಿನಿಮಾ ತಂಡ ಇದೀಗ ನಾಯಕಿಯ ಪಾತ್ರ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

    ರಿಹಾನಾ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಅನಾವರಣ ಮಾಡಿದೆ. ಏನನ್ನೋ ಕಳೆದುಕೊಂಡಂತೆ ಭಾವುಕಳಾಗಿ ನಿಂತಿರುವ ಅಭಿನಯ ಪಾತ್ರ ಸಿನಿಮಾಗೆ ತಿರುವು ನೀಡಲಿದೆಯಂತೆ. ಅಂದಹಾಗೇ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಿಹಾನಾ  ಅವರನ್ನು ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಲಾಗಿದೆ. ಹಿರಣ್ಯದಲ್ಲಿ ಇವರದ್ದು ಪವರ್ ಫುಲ್ ಪಾತ್ರ. ಸಿನಿಮಾ ಪೂರ್ತಿ ಅಭಿನಯ ಎಮೋಷನ್ ಕ್ಯಾರಿ ಮಾಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ಅವ್ಯಕ್ತ.

    ಈಗಾಗಲೇ ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ಯಕ್ತ (Praveen Avyakta) ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ (Divya Suresh) ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

     

    ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.  ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

  • ಹಾಲಿವುಡ್ ಖ್ಯಾತ ಗಾಯಕಿಯನ್ನು ಭೇಟಿ ಮಾಡಿದ ‘ನಾಟು ನಾಟು’ ಗಾಯಕ

    ಹಾಲಿವುಡ್ ಖ್ಯಾತ ಗಾಯಕಿಯನ್ನು ಭೇಟಿ ಮಾಡಿದ ‘ನಾಟು ನಾಟು’ ಗಾಯಕ

    ಖ್ಯಾತ ಪಾಪ್ ಗಾಯಕಿ ರಿಹನ್ನಾ (Rihanna) ಭೇಟಿ ಮಾಡಿ, ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ ನಾಟು ನಾಟು ಗೀತೆಯ ಗಾಯಕ ಕಾಲಭೈರವ. ಆ ಕ್ಷಣವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆಸ್ಕರ್ (Oscar) ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ‘ನಾಟು ನಾಟು’ (Natu Natu) ಗೀತೆಯನ್ನು ಹಾಡಲು ಅಮೆರಿಕಾಗೆ ಹೋಗಿದ್ದರು ಕಾಲಭೈರವ (Kalabhairava). ಈ ಕಾರ್ಯಕ್ರಮದಲ್ಲಿ ರಿಹನ್ನಾ ಕೂಡ ಭಾಗಿಯಾಗಿದ್ದರು.

    ರಿಹನ್ನಾ ಇದೀಗ ತುಂಬು ಗರ್ಭಿಣಿ. ಆದರೂ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಗಾಯನಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇಂತಹ ಗಾಯಕಿಯ ಜೊತೆ ನಾನು ಫೋಟೋ ತೆಗೆಸಿಕೊಂಡಿದ್ದು ಎಂದೂ ಮರೆಯದ ಸನ್ನಿವೇಶ ಎಂದು ಕಾಲಭೈರವ ಬರೆದುಕೊಂಡಿದ್ದಾರೆ ಮತ್ತು ಅವರ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ರಿಹನ್ನಾ ಹಾಲಿವುಡ್ ಕಂಡ ಅತ್ಯಂತ ಪ್ರತಿಭಾನ್ವಿತ ಗಾಯಕಿ. ಸ್ಟೇ ಸೇರಿದಂತೆ ಸಾವಿರಾರು ಹಾಡುಗಳನ್ನು ಅವರು ಹಾಡಿದ್ದಾರೆ. ಜಗತ್ತಿನ ಹೆಸರಾಂತ ಗಾಯಕಿಯರ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ. ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಆ ಅಭಿಮಾನಿಗಳಲ್ಲಿ ಕಾಲಭೈರವ ಕೂಡ ಒಬ್ಬರಂತೆ. ಅವರ ಅನೇಕ ಹಾಡುಗಳನ್ನು ಕಾಲಭೈರವ ಕೇಳಿದ್ದಾರಂತೆ.

  • ಗಣೇಶ ಹಬ್ಬಕ್ಕಾಗಿ ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮಾಸ್ ಲುಕ್ ರಿಲೀಸ್

    ಗಣೇಶ ಹಬ್ಬಕ್ಕಾಗಿ ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮಾಸ್ ಲುಕ್ ರಿಲೀಸ್

    ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಪಕರಾದ ವಿಘ್ನೇಶ್ವರ್ ಯು ಮತ್ತು ವಿಜಯ್ ಗೌಡ ಬಿದರಹಳ್ಳಿ ಅತೀವ ಸಿನಿಮೋತ್ಸಾಹದಿಂದ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಹಿರಣ್ಯ ಸಿನಿಮಾದ ಹೊಸ ಪೋಸ್ಟರ್  ಗಣೇಶ್ ಚತುರ್ಥಿಗೆ ಬಿಡುಗಡೆಯಾಗಿದೆ. ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ಧಗಧಗಿಸಿದ್ದು, ಬಾಯಲ್ಲಿ ಸಿಗರೇಟ್ ಹಿಡಿದು, ಪಕ್ಕ ರಾ ಲುಕ್ ನಲ್ಲಿ ಮಿಂಚಿದ್ದಾರೆ.

    ಬಿಚ್ಚುಗತ್ತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜವರ್ಧನ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ತಮ್ಮದಾಗಿಸಿಕೊಂಡಿದ್ದರು. ಸದ್ಯ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜವರ್ಧನ್ ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಸದ್ಯ ಹಿರಣ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.  ಇನ್ನೂ ಸ್ಪೆಷಲ್ ರೋಲ್ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಟಿಸುತ್ತಿದ್ದಾರೆ. ಅಂದ ಹಾಗೇ ಹಿರಣ್ಯ ಸಿನಿಮಾದ ಟೈಟಲ್ ಡಾಲಿ ಧನಂಜಯ್ ಬಳಿ ಇತ್ತು. ಪ್ರೀತಿಯಿಂದ ಡಾಲಿ ಗೆಳೆಯ ರಾಜವರ್ಧನ್ ಗೆ ಬಿಟ್ಟು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಾವಸ್ಥೆಯಲ್ಲಿ ಗಾಯಕಿ ರಿಹಾನ್ನಾ ಬೋಲ್ಡ್ ಡ್ರೆಸ್ – ನೆಟ್ಟಿಗರು ಗರಂ

    ಗರ್ಭಾವಸ್ಥೆಯಲ್ಲಿ ಗಾಯಕಿ ರಿಹಾನ್ನಾ ಬೋಲ್ಡ್ ಡ್ರೆಸ್ – ನೆಟ್ಟಿಗರು ಗರಂ

    ಮುಂಬೈ: ವಿಶ್ವ-ಪ್ರಸಿದ್ಧ ಗಾಯಕಿ ರಿಹಾನ್ನಾ ತಾಯಿಯಾಗುತ್ತಿದ್ದು, ಬೋಲ್ಡ್ ಡ್ರೆಸ್ ಹಾಕಿಕೊಂಡು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ.

    ಅಸಪ್ ರಾಕಿ ಅವರ ಮಗುವಿಗೆ ರಿಹಾನ್ನಾ ತಾಯಿಯಾಗಲಿದ್ದಾರೆ. ರಿಹಾನ್ನಾ ಫ್ಯಾಶನ್ ಐಕಾನ್ ಎಂದು ಯಾವಾಗಲೂ ಕರೆಯಲಾಗುತ್ತದೆ. ಆದರೆ ಈಗ ಅವರು ತಮ್ಮ ಗರ್ಭಾವಸ್ಥೆಯಲ್ಲಿಯೂ ಸಹ ಫ್ಯಾಷನ್ ಮುಂದುವರಿಸಿದ್ದು, ಫುಲ್ ಬೋಲ್ಡ್ ಡ್ರೆಸ್ ಹಾಕಿಕೊಂಡಿರುವ ಇವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಪ್ರಸ್ತುತ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

    ಈ ಫೋಟೋದಲ್ಲಿ ರಿಹಾನ್ನಾ ಕಪ್ಪು ಬಣ್ಣದ ಫ್ರಂಟ್ ಓಪನ್ ಟಾಪ್ ಧರಿಸಿದ್ದಾರೆ. ರಿಹಾನ್ನಾ ತನ್ನ ಮಾದಕ ಲುಕ್ ನಲ್ಲಿ ಬೇಬಿ ಬಂಪ್ ತೋರಿಸುತ್ತಿದ್ದಾರೆ. ಈ ಫೊಟೋ ಇನ್ನೊಂದು ವಿಶೇಷ ಎಂದರೆ ರಿಹಾನ್ನಾ ತನ್ನ ಬೋಲ್ಡ್ ಲುಕ್ ಗೆ ಸಾಂಪ್ರದಾಯಿಕ ಟಚ್ ಕೊಟ್ಡಿರುವುದು. ಈ ಲುಕ್ ನಲ್ಲಿ ರಿಹಾನ್ನಾ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    ರಿಹಾನ್ನಾ ಈ ಡ್ರೆಸ್‍ನನ್ನು ಜೆಗ್ಗಿಂಗ್‍ನೊಂದಿಗೆ ಧರಿಸಿದ್ದಾರೆ. ಈ ಲುಕ್‍ನಲ್ಲಿ ಅವರು ಕನ್ನಡಕ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಏನೇ ಸಂದರ್ಭ ಬಂದರು ನಾನು ಸ್ಟೈಲಿಶ್ ಎಂದು ಈ ಮೂಲಕ ತೋರಿಸಿದ್ದಾರೆ. ಆದರೆ ಈ ಫೋಟೋ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ!

    ಕಳೆದ ಎರಡು ವರ್ಷಗಳಿಂದ ರಿಹಾನ್ನಾ, ಅಸಪ್ ರಾಕಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಕುರಿತು ಅವರು ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಹಿಂದೆ ರಿಹಾನ್ನಾ, ಹಸೀನ್ ಜಮೀಲ್ ಜೊತೆ ರಿಲೇಶನ್ ಶಿಪ್‍ನಲ್ಲಿ ಇದ್ದರು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡರು. ನಂತರ ರಿಹಾನ್ನಾ, ಅಸಾಪ್ ರಾಕಿ ಅವರೊಂದಿಗೆ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

  • ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಗ್ರೆಟಾ ಥನ್‍ಬರ್ಗ್ ವಿರುದ್ಧ ಕೇಸ್

    ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಗ್ರೆಟಾ ಥನ್‍ಬರ್ಗ್ ವಿರುದ್ಧ ಕೇಸ್

    ನವದೆಹಲಿ: ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪಿತೂರಿ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

    ರೈತ ಹೋರಾಟದ ಪರವಾಗಿ ಹಾಲಿವುಡ್ ಗಾಯಕಿ ರಿಹಾನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರೀಸ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಸೆಲೆಬ್ರಿಟಿಗಳು ದನಿ ಎತ್ತಿದ್ದಕ್ಕೆ ಸ್ವತಃ ಕೇಂದ್ರ ಸರ್ಕಾರ ತಿರುಗಿಬಿದ್ದಿತ್ತು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ನಡೀತಿದೆ. ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ತಿರುಗಿಬಿದ್ದಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈಗಲೂ ಪರ ವಿರೋಧ ಚರ್ಚೆ ಜೋರಾಗಿ ನಡೆದಿದೆ. ಇದೆಲ್ಲದ ಮಧ್ಯೆ ಇದೀಗ ಗ್ರೆಟಾ ಥನ್‍ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಸಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ? – ಪ್ರತಿಭಟನೆಯ ಟೂಲ್‌ ಕಿಟ್ ಬಹಿರಂಗ ಮಾಡಿದ‌ ಗ್ರೇಟಾ ಥನ್‌ಬರ್ಗ್

    ಈ ಕುರಿತು ಸಹ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಥನ್‍ಬರ್ಗ್, ಇದಕ್ಕೆಲ್ಲಾ ನಾನು ಹೆದರಲ್ಲ. ನಾನು ಈಗಲೂ ರೈತರ ಪರವೇ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ, ರೈತರ ಹೋರಾಟವನ್ನು ಸಿನಿಮಾ ನಟ, ನಟಿಯರು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್

    ಸ್ವದೇಶಿ ಸೆಲೆಬ್ರಿಟಿಗಳ ಸರಣಿ ಟ್ವೀಟ್ ಪ್ರಶ್ನಿಸಿದ ನಟಿ ತಾಪ್ಸಿ ಪನ್ನುಗೆ ನಟಿ ಕಂಗನಾ ರಣಾವತ್ ಟ್ವಿಟ್ಟರ್ ವೇದಿಕೆಯಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ, ಕಂಗನಾರ ನಿನ್ನೆಯ 2 ಟ್ವೀಟ್‍ಗಳನ್ನು ಅಳಿಸಿ ಟ್ವಿಟ್ಟರ್ ಶಾಕ್ ನೀಡಿದೆ. ದ್ವೇಷ ಹರಡುವ ಟ್ವೀಟ್‍ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.

    ಈ ಮಧ್ಯೆ ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ಅಮೆರಿಕ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ನೂತನ ಕೃಷಿ ಕಾಯ್ದೆಗಳಿಂದ ದೇಶದ ಮಾರುಕಟ್ಟೆ ಸಾಮಥ್ರ್ಯವನ್ನು ಹೆಚ್ಚಿಸಲಿವೆ. ಹೀಗಾಗಿ ಈ ಕಾಯ್ದೆಗಳಿಗೆ ನಮ್ಮ ಬೆಂಬಲವಿದೆ ಎಂದು ಬೈಡನ್ ಸರ್ಕಾರ ತಿಳಿಸಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆಗಳು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ದೇಶಗಳ ಮುಖ್ಯಲಕ್ಷಣ. ಏನೇ ಸಮಸ್ಯೆಗಳಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಅಮೆರಿಕದ ಸಂಸದರಾದ ಹೇಲಿ ಸ್ಟಿವನ್ಸ್, ಇಲ್ವಾನ್ ಓಮರ್ ಸೇರಿದಂತೆ ಹಲವರು ರೈತರ ಹೋರಾಟವನ್ನು ಹತ್ತಿಕ್ಕುತ್ತಿರುವ ರೀತಿಯನ್ನು ನೋಡಲಾಗ್ತಿಲ್ಲ. ಇದು ಸರಿಯಲ್ಲ ಎಂದು ಖಂಡಿಸಿದ್ದಾರೆ.

    ಈ ಮಧ್ಯೆ ಸೆಲೆಬ್ರಿಟಿಗಳ ಟ್ವೀಟ್ ವಾರ್ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಧ್ವನಿಸಿದೆ. ಯಾವುದೇ ಸೆಲೆಬ್ರಿಟಿಯ ಟ್ವೀಟ್‍ನಿಂದ ದೇಶದ ಪ್ರಜಾಪ್ರಭುತ್ವ ಬಲಹೀನಗೊಳ್ಳುವುದಿಲ್ಲ ಎಂದು ಆರ್‍ಜೆಡಿಯ ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ. ಕೇಳುವ ವ್ಯವಧಾನ ಇಲ್ಲದಿದ್ದರೆ ಅವರು ಸರ್ವಾಧಿಕಾರಿಯೇ? ಇದಾಗಬಾರದು. ಕೂಡಲೇ ರೈತರ ಮೊರೆ ಆಲಿಸಿ ಎಂದು ಭಾವೋದ್ವೇಗದಿಂದ ಮನೋಜ್ ಝಾ ಹೇಳಿದ್ದಾರೆ. ಈ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ, ಪಕ್ಷದ ವೈಖರಿಯನ್ನು ಸಮರ್ಥಿಸಿಕೊಂಡು, ರೈತರ ಅನುಕೂಲಕ್ಕಾಗಿಯೇ ಈ ಕಾಯ್ದೆ ತರಲಾಗಿದೆ. ಈ ಹಿಂದೆ ಇದೇ ಕಾಯ್ದೆಗಳನ್ನು ಬೆಂಬಲಿಸಿದ್ದವರು ಈಗ ದಾರಿ ಬದಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಇದಕ್ಕೆ ಸ್ಪಂದಿಸಿದ ದಿಗ್ವಿಜಯ್ ಸಿಂಗ್, ನೀವು ಯಾವುದೇ ಪಕ್ಷದಲ್ಲಿದ್ದರೂ, ನಮ್ಮ ಆಶೀರ್ವಾದ ನಿಮಗೆ ಇದ್ದೇ ಇರುತ್ತೆ ಎಂದು ಕಾಲೆಳೆದರು. ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು, ಗಣತಂತ್ರದಂದು ದೆಹಲಿಯಲ್ಲಿ ನಡೆದ ಘಟನೆ ಖಂಡನೀಯ. ಆದರೆ ಇದಕ್ಕೆ ರೈತರು ಜವಾಬ್ದಾರರಲ್ಲ. ರೈತರ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಾರದು. ರಸ್ತೆಯಲ್ಲಿ ಗೋಡೆ ನಿರ್ಮಿಸಿರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಅತ್ತ ಲೋಕಸಭೆಯ ಇಡೀ ದಿನದ ಕಲಾಪ ವಿಪಕ್ಷಗಳ ಗದ್ದಲಕ್ಕೆ ಬಲಿ ಆಗಿದೆ. ಈ ಮಧ್ಯೆ, ಚೌರಾಚೌರಿ ಹೋರಾಟಕ್ಕೆ ಶತಮಾನ ತುಂಬಿದ ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ರೈತರೇ ದೇಶದ ಬೆನ್ನೆಲುಬು ಎಂದಿದ್ದಾರೆ. ಚೌರಾಚೌರಿ ಹೋರಾಟದ ವೇಳೆ ಠಾಣೆಗೆ ಬೆಂಕಿ ಹಚ್ಚಿದ್ದು ಬಹುದೊಡ್ಡ ಸಂದೇಶ. ರೈತರು ಇದರಲ್ಲಿ ಮುಖ್ಯಪಾತ್ರ ವಹಿಸಿದ್ದರು ಎಂದು ಮೋದಿ ಹೇಳಿದ್ದಾರೆ.

  • ರೈತರ ಹೋರಾಟಕ್ಕೆ ಪಾಪ್ ಗಾಯಕಿ ಬೆಂಬಲ- ಅನ್ನದಾತರನ್ನ ಭಯೋತ್ಪಾದಕರೆಂದ ಕಂಗನಾ

    ರೈತರ ಹೋರಾಟಕ್ಕೆ ಪಾಪ್ ಗಾಯಕಿ ಬೆಂಬಲ- ಅನ್ನದಾತರನ್ನ ಭಯೋತ್ಪಾದಕರೆಂದ ಕಂಗನಾ

    – ಮಿಯಾ ಖಲೀಫಾ ಬೆಂಬಲ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಶ್ವದ ಗಮನ ಸೆಳೆದಿದೆ. ಈಗಾಗಲೇ ಕೆಲ ರಾಷ್ಟ್ರಗಳ ರಾಜಕೀಯ ಮುಖಂಡರು ತಮ್ಮ ಅಭಿಪ್ರಾಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಅಮೆರಿಕದ ಪಾಪ್ ಗಾಯಕಿ ರಿಹಾನಾ ಸಹ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ನೀಡಿದ್ದಾರೆ. ರಿಹಾನರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್, ಅವರು ಭಯೋತ್ಪಾದಕರೆಂದು ಎಂದು ಹೇಳಿದ್ದಾರೆ.

    ಪರಿಸರ ರಕ್ಷಣಾ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್, ರೈತರ ಆಂದೋಲನಕ್ಕೆ ವಿಶ್ವ ಬೆಂಬಲ ನೀಡಬೇಕು. ಕ್ಲೈಮೇಂಟ್ ಚೇಂಜ್ ಆ್ಯಕ್ಟಿವಿಸ್ಟ್ ಗ್ರೇಟ್ ಥನ್‍ಬರ್ಗ್ ಅವರಿಗೂ ಈ ಬಗ್ಗೆ ಚರ್ಚೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ನೀಡಿರುವ ಸನ್ಮಾನವನ್ನ ಕಂಗುಜಮ್ ತಿರಸ್ಕರಿಸಿದ್ದರು. ಇನ್ನು ರಿಹಾನಾ ಟ್ವೀಟ್ ಬಳಿಕ ಜಾಗತಿಕ ಮಟ್ಟದಲ್ಲಿ ಅನ್ನದಾತರ ಹೋರಾಟ ಸದ್ದು ಮಾಡುತ್ತಿದೆ.

    ರಿಹಾನಾರ ಸಮರ್ಥನೆಯ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರು ಅಲ್ಲ ಅವರು ಭಯೋತ್ಪಾದಕರು. ಆದ್ರೆ ಯಾರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇವರು ಭಾರತವನ್ನ ವಿಭಜಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ. ವಿಭಜನೆಯಾದ ಭಾರತವನ್ನ ಚೀನಾ ಅತಿಕ್ರಮಿಸಿಕೊಳ್ಳಲಿ ಎಂಬುವುದು ಇವರ ಉದ್ದೇಶ. ನೀವು ಮೂರ್ಖರಾಗಿಯೇ ಕುಳಿತುಕೊಳ್ಳಿ. ಆದ್ರೆ ನಾವು ರಾಷ್ಟ್ರವನ್ನ ಮಾರಾಟ ಮಾಡಲು ಬಿಡಲ್ಲ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

    https://twitter.com/KanganaTeam/status/1356640083546406913

    ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿರುವ ನಟಿ ಮಿಯಾ ಖಲೀಫಾ, ಪ್ರತಿಭಟನಾ ಸ್ಥಳದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸೋದು ಮಾನವ ಹಕ್ಕುಗಳ ಉಲ್ಲಂಘನೆ. ನಾನು ರೈತರ ಜೊತೆಯಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.