Tag: Right Hand

  • ‘ರೈಟ್ ಹ್ಯಾಂಡ್‍ನಲ್ಲಿ 6 ಬಾಲಿಗೆ 6 ಸಿಕ್ಸರ್ ಸಿಡಿಸಿದ ಯುವಿ’ – ಅಭಿಮಾನಿಯ ವಿಡಿಯೋ ಕಮಾಲ್

    ‘ರೈಟ್ ಹ್ಯಾಂಡ್‍ನಲ್ಲಿ 6 ಬಾಲಿಗೆ 6 ಸಿಕ್ಸರ್ ಸಿಡಿಸಿದ ಯುವಿ’ – ಅಭಿಮಾನಿಯ ವಿಡಿಯೋ ಕಮಾಲ್

    ನವದೆಹಲಿ: ಯುವರಾಜ್ ಸಿಂಗ್ ಅಪ್ಪಟ ಎಡಗೈ ಆಟಗಾರ ಎಂದು ಎಲ್ಲರಿಗೂ ಗೊತ್ತು. ಅಭಿಮಾನಿಯೋರ್ವ ಅವರನ್ನು ರೈಟ್ ಹ್ಯಾಂಡ್‍ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸುವಂತೆ ಮಾಡಿ ಕಮಾಲ್ ಮಾಡಿದ್ದಾನೆ.

    2007ರ ಟಿ-20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಅವರು ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಮಾಡಿದ್ದನ್ನು ಯಾವ ಕ್ರಿಕೆಟ್ ಪ್ರೇಮಿಯು ಮರೆಯುವುದಿಲ್ಲ. ಆದರೆ ಅಂದು ಯುವರಾಜ್ ಸಿಂಗ್ ಅವರು ಎಡಗೈನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ಅಭಿಮಾನಿಯೋರ್ವ ತಂತ್ರಜ್ಞಾನ ಬಳಸಿ ಅವರು ರೈಟ್ ಹ್ಯಾಂಡಿನಲ್ಲಿ ಬ್ಯಾಟ್ ಬೀಸುವಂತೆ ಮಾಡಿದ್ದಾನೆ.

    ಯುವರಾಜ್ ಸಿಂಗ್ ಅವರು ಎಡಗೈನಲ್ಲಿ ಹೊಡೆದಿದ್ದ ಅದೇ ಹೊಡೆತಗಳನ್ನು ಅಭಿಮಾನಿಯೋರ್ವ ಬಲಗೈಯಲ್ಲಿ ಹೊಡೆಯುವಂತೆ ಮಾರ್ಪಾಡು ಮಾಡಿದ್ದಾನೆ. ಈ ವಿಡಿಯೋದಲ್ಲಿ ಕೂಡ ಯುವಿಯವರು ಎಡಗೈನಲ್ಲಿ ಹೊಡೆದ ಜಾಗಕ್ಕೆ ಸೇಮ್ ಬಲಗೈನಲ್ಲೂ ವಿರುದ್ಧ ದಿಕ್ಕಿಗೆ ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಈ ವಿಡಿಯೋದ ಇನ್ನೊಂದು ವಿಶೇಷವೆಂದರೆ ಸ್ಟುವರ್ಟ್ ಬ್ರಾಡ್ ಅವರು ಎಡಗೈನಲ್ಲಿ ಬೌಲಿಂಗ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಹುಟ್ಟು ಹಾಕಿದೆ.

    2007ರ ಟಿ-20 ವಿಶ್ವಕಪ್‍ನಲ್ಲಿ ಅಂದು ಯುವಿಯವರು ವಿಶ್ವ ದಾಖಲೆ ಮಾಡಿದ್ದರು. ಸೆಪ್ಟೆಂಬರ್ 10ರಂದು ನಡೆದಿದ್ದ ಈ ಪಂದ್ಯದ ಇನ್ನಿಂಗ್ಸ್ ನ 17 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್‍ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದ್ದಿದ್ದ ಯುವಿ, ಬ್ಯಾಟ್ ತೋರಿಸಿ ಮುನ್ನುಗ್ಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 18ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಟಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಈ ಹಿಂದೆ ಹೇಳಿದ್ದರು.