Tag: rifle

  • ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಚೆನ್ನೈ: ಸನ್ಯಾಸಿಯೋರ್ವ ರೈಫಲ್ (Rifle)ಹಿಡಿದು ಬ್ಯಾಂಕ್‍ಗೆ ನುಗ್ಗಿ ಸಾಲ ಕೇಳಿದ್ದಾನೆ. ಈ ವೇಳೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಘಟನೆ ತಮಿಳುನಾಡಿನ (Tamil Nadu) ತಿರುವಾರೂರಿನಲ್ಲಿ (Thiruvarur) ನಡೆದಿದೆ.

    ಸನ್ಯಾಸಿಯನ್ನು (Moke) ತಿರುಮಲೈ ಸಾಮಿ ಎಂದು ಗುರುತಿಸಲಾಗಿದ್ದು, ಈತ ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಲು ಖಾಸಗಿ ವಲಯದ ಬ್ಯಾಂಕ್ (Bank) ಮೊರೆ ಹೋಗಿದ್ದನು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆ ನೀಡುವಂತೆ ಕೇಳಿದ್ದು, ಇದಕ್ಕೆ ತಿರುಮಲೈ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸಾಲದ (Loan) ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸುವಾಗ ಬ್ಯಾಂಕ್‍ಗೆ ಯಾಕೆ ತನ್ನ ಆಸ್ತಿ, ಜಮೀನಿನ ದಾಖಲೆಗಳನ್ನು ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿತ- ನಾಲ್ವರು ಸಾವು, 9 ಮಂದಿಗೆ ಗಾಯ

    ಕೊನೆಗೆ ಬ್ಯಾಂಕ್ ಅಧಿಕಾರಿಗಳು ತಿರುಮಲೈ ಸಾಮಿ (Thirumalai Samy) ಸಲ್ಲಿಸಿದ್ದ ಸಾಲದ ಅರ್ಜಿಯನ್ನು ತಿರಸ್ಕರಿಸಿದರು. ನಂತರ ಮನೆಗೆ ಹೋಗಿ ಸಾಮಿ ತನ್ನ ರೈಫಲ್ ತೆಗೆದುಕೊಂಡು ಬ್ಯಾಂಕಿಗೆ ಹಿಂತಿರುಗಿದನು. ಬಳಿಕ ಕುರ್ಚಿ ಮೇಲೆ ಕುಳಿತುಕೊಂಡು ಧೂಮಪಾನ ಮಾಡಲು ಆರಂಭಿಸಿದಲ್ಲದೇ ಬ್ಯಾಂಕ್ ಸಿಬ್ಬಂದಿಗೆ ಬೆದರಿಕೆಯೊಡ್ಡಿದ್ದಾನೆ. ಜೊತೆಗೆ ಫೇಸ್‍ಬುಕ್‍ನಲ್ಲಿ ಲೈವ್‌ (Facebook Live) ಬಂದು ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    ಅವರು ಕುಳಿತು ಧೂಮಪಾನ ಮಾಡಲು ಪ್ರಾರಂಭಿಸಿದರು ಮತ್ತು ಬ್ಯಾಂಕ್ ಉದ್ಯೋಗಿಗಳಿಗೆ ಬೆದರಿಕೆ ಹಾಕಿದರು. ಅವರ ಫೇಸ್‍ಬುಕ್ ಪುಟದಲ್ಲಿ ಅವರ ಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡುವಾಗ, ಅವರು ಸಾಲವನ್ನು ನಿರಾಕರಿಸಿದ್ದಕ್ಕಾಗಿ ಬ್ಯಾಂಕ್ ಅನ್ನು ಲೂಟಿ ಮಾಡುವುದಾಗಿ ಹೇಳುವುದನ್ನು ಕೇಳಬಹುದು. ಬಳಿಕ ಈ ಬಗ್ಗೆ ಮಾಹಿತಿ ದೊರೆತ ಪೊಲೀಸರು ಬ್ಯಾಂಕ್‍ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾರ್ಖಂಡ್ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ – 2 ಎಕೆ-47 ರೈಫಲ್‌ಗಳು ವಶ

    ಜಾರ್ಖಂಡ್ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ – 2 ಎಕೆ-47 ರೈಫಲ್‌ಗಳು ವಶ

    ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಎನ್ನಲಾದ ಪ್ರೇಮ್ ಪ್ರಕಾಶ್ ಅವರ ನಿವಾಸದಲ್ಲಿ ಬುಧವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, 2 ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ.

    100 ಕೋಟಿ ಗಣಿ ಹಗರಣದ ತನಿಖೆಯ ಭಾಗವಾಗಿ ನಡೆಸಿದ ದಾಳಿ ವೇಳೆ ಜಾರಿ ನಿರ್ದೇಶನಾಲಯ ಪ್ರಕಾಶ್ ಅವರ ರಾಂಚಿಯಲ್ಲಿರುವ ಮನೆಯಿಂದ 2 ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ. ಆದರೆ ಹಗರಣದ ಬಗ್ಗೆ ಪ್ರಕಾಶ್ ಅಥವಾ ಸೊರೇನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಬಿಹಾರ ಸ್ಪೀಕರ್‌ ಸ್ಥಾನಕ್ಕೆ ವಿಜಯ್‌ ಕುಮಾರ್‌ ಸಿನ್ಹಾ ರಾಜೀನಾಮೆ

    ದಾಳಿ ವೇಳೆ ಕಪಾಟಿನೊಳಗಡೆ ರೈಫಲ್‌ಗಳು ಕಂಡುಬಂದಿದ್ದು, ಅವು ಕಾನೂನು ಬಾಹಿರವಾಗಿ ಇಟ್ಟುಕೊಳ್ಳಲಾಗಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಇಡಿ ಅದನ್ನು ವಶಪಡಿಸಿಕೊಂಡಿದೆ. ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ 20 ಸ್ಥಳಗಳಲ್ಲಿ ದಾಳಿ ನಡೆಸಿರುವುದಾಗಿ ಇಡಿ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • 4.75 ಲಕ್ಷ ಮೌಲ್ಯದ ರೈಫಲ್ ಎಗರಿಸಿದ್ದ ಕಳ್ಳ ಅಂದರ್

    4.75 ಲಕ್ಷ ಮೌಲ್ಯದ ರೈಫಲ್ ಎಗರಿಸಿದ್ದ ಕಳ್ಳ ಅಂದರ್

    ಶಿವಮೊಗ್ಗ: ಶೂಟಿಂಗ್ ಸ್ಪರ್ಧೆಯಲ್ಲಿ ಬಳಸುವ ರೈಫಲ್ ಕಳವು ಮಾಡಿದ್ದ ಆರೋಪಿಯನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚನ್ನಗಿರಿ ತಾಲೂಕಿನ ಕೊರಟಿಕೆರೆ ಗ್ರಾಮದ ನಿವಾಸಿ ನಾಗರಾಜ್(35) ಬಂಧಿತ ಆರೋಪಿ. ಈತ ಭದ್ರಾವತಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿನ ತೋಟದ ಮನೆಯ ಬಾಗಿಲನ್ನು ಮುರಿದು ಅಂದಾಜು 4.75 ಲಕ್ಷ ಮೌಲ್ಯದ ರೈಫಲ್ ಕಳವು ಮಾಡಿದ್ದನು. ಈ ಬಗ್ಗೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆಗೆ ಭದ್ರಾವತಿ ಗ್ರಾಮಾಂತರ ಠಾಣೆಯ ಸಿಪಿಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಭೇಧಿಸಿ ಆರೋಪಿಯನ್ನು ರೈಫಲ್ ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಬೇಟೆಗೆ ಅಕ್ರಮ ಬಂದೂಕುಗಳ ಬಳಕೆ- ಇಬ್ಬರ ಬಂಧನ

    ಬೇಟೆಗೆ ಅಕ್ರಮ ಬಂದೂಕುಗಳ ಬಳಕೆ- ಇಬ್ಬರ ಬಂಧನ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ನಾಡ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಮಸ್ಕಿ ತಾಲೂಕಿನ ದ್ಯಾಮಣ್ಣ ಮತ್ತು ಬಳ್ಳಾರಿಯ ಕಂಪ್ಲಿಯ ಈರಣ್ಣ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗಬ್ಬೂರು ಠಾಣೆ ಪೊಲೀಸರು ಕೆಬಿಜೆಎನ್ ಎಲ್ ಕಾಲುವೆ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ. ಕಾಡು ಪ್ರಾಣಿಗಳನ್ನ ಬೇಟೆಯಾಡಲು ಬಂದೂಕುಗಳನ್ನ ಬಳಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅಕ್ರಮ ನಾಡ ಬಂದೂಕುಗಳನ್ನ ತಾವೇ ತಯಾರಿಸಿಕೊಂಡು ಬಳಸುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ.

    ಆರೋಪಿಗಳಿಂದ ಎರಡು ನಾಡ ಬಂದೂಕು, ಮದ್ದಿನ ಪುಡಿ, ಚರಿ, ಬಂದೂಕಿಗೆ ಬಳಸುವ ನಳಿಕೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವುದೇ ಅಧಿಕೃತ ಪರವಾನಿಗೆಯನ್ನ ಹೊಂದಿರದೆ ಬಂದೂಕು ಬಳಸುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

  • ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

    ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

    ಪಾಟ್ನಾ: ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರ ಬುಧವಾರದಂದು ಬಾಲುವಾ ಬಜಾರ್ ಪ್ರದೇಶದಲ್ಲಿ ನೆರವೇರಿದೆ. ಆದರೆ ಈ ವೇಳೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸರು 21 ಗುಂಡುಗಳನ್ನು ಹಾರಿಸುವಲ್ಲಿ ವಿಫಲವಾಗಿದ್ದಾರೆ.

    ಸಂಪ್ರದಾಯದ ಪ್ರಕಾರ, ಸರ್ಕಾರದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸುತ್ತಾರೆ. ಹಾಗೆಯೇ ಬಿಹಾರದ ಮಾಜಿ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು.

    ಆದರೆ ಕೊನೆ ಕ್ಷಣದಲ್ಲಿ ಗುಂಡನ್ನು ಹಾರಿಸಿದಾಗ ಯಾವ ರೈಫಲ್‍ನಿಂದ ಕೂಡ ಗುಂಡು ಹಾರಲೇ ಇಲ್ಲ. ಪೊಲೀಸ್ ಪೇದೆಗಳು, ಹಿರಿಯ ಅಧಿಕಾರಿಗಳು ಗುಂಡನ್ನು ಹಾರಿಸಲು ಪ್ರಯತ್ನಿಸಿದರೂ ರೈಫಲ್‍ನಿಂದ ಒಂದೇ ಒಂದು ಗುಂಡು ಕೂಡ ಹಾರಲಿಲ್ಲ.

    ಈ ವೇಳೆ ಸ್ಥಳದಲ್ಲಿ ಬಿಹಾರ ಸಿಎಂ ನಿತಿಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಂತಹ ಸಂದರ್ಭದಲ್ಲಿ ರೈಫಲ್ ಕೈಕೊಟ್ಟ ಕಾರಣಕ್ಕೆ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ. ಸರಿಯಾಗಿ ರೈಫಲ್‍ಗಳನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ಈ ಅವಮಾನವಾಗಿದೆ ಎಂದು ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಬಗ್ಗೆ ಎಸ್‍ಪಿ ಮೃತ್ಯುಂಜಯ ಚೌಧರಿ ಪ್ರತಿಕ್ರಿಯಿಸಿ, ನಾವು ಈ ಬಗ್ಗೆ ತನಿಖೆ ಆರಂಭಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನ ಭೇಟಿ ನೀಡಿದ್ದ ಸೌದಿ ಯುವರಾಜ್ ಮೊಹ್ಮದ್ ಬಿನ್ ಸುಲ್ತಾನ್ ಅವರಿಗೆ ಪಾಕಿಸ್ತಾನ ಚಿನ್ನ ಲೇಪಿತ ರೈಫಲನ್ನು ಉಡುಗೊರೆಯಾಗಿ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಮೇಲೆ ಮೊದಲ ಬಾರಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸುತ್ತಿದ್ದು, ಇದೇ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಸೌದಿ ಯುವರಾಜ್ 20 ಶತಕೋಟಿ ಡಾಲರ್ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದರು.

    ಇದೇ ವೇಳೆ ಪಾಕಿಸ್ತಾನ ಸೆನೆಟ್ ಮೊಹ್ಮದ್ ಬಿನ್ ಸುಲ್ತಾನ್ ರನ್ನು ಭೇಟಿ ಮಾಡಿದ ವೇಳೆ ಈ ಕೊಡುಗೆಯನ್ನು ನೀಡಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಭಾರತ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ವಸ್ತುಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಹೆಚ್ಚಳ ಮಾಡಿತ್ತು. ಆ ಬಳಿಕ ವಿಶ್ವದ 40 ರಾಷ್ಟ್ರಗಳು ಭಾರತ ಪರ ಹೇಳಿಕೆ ನೀಡಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಡ ಹಾಕಿದೆ.

    ಪಾಕಿಸ್ತಾನದ ಬಳಿಕ ಭಾರತಕ್ಕೆ ಭೇಟಿ ನೀಡಿದ್ದ ಸೌದಿ ಯುವರಾಜ ಭಾರತದೊಂದಿಗೆ 100 ಶತಕೋಟಿ ಡಾಲರ್ ಹೂಡಿಕೆ ಹಾಗೂ ಸೌದಿ ರಾಷ್ಟ್ರದಲ್ಲಿ ವಿವಿಧ ಕಾರಣಗಳಿಂದ ಶಿಕ್ಷೆ ಅನುಭವಿಸುತ್ತಿರುವ 2 ಸಾವಿರ ಮಂದಿಯನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇತ್ತ ಸೌದಿ ರಾಜಕುಮಾರನನ್ನು ಪ್ರಧಾನಿ ಮೋದಿ ಅವರು ಸ್ವಾಗತ ಕೋರಿರುವ ಕುರಿತು ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷವೂ ಕೂಡ ಮೋದಿ ಅವರು ಸೌದಿ ರಾಜಕುಮಾರರನ್ನು ಅಪ್ಪಿ ಸ್ವಾಗತಿಸಿರುವುದನ್ನು ಟೀಕಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಸ್‍ಪಿ ನಿವಾಸದ ಎದುರೇ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

    ಎಸ್‍ಪಿ ನಿವಾಸದ ಎದುರೇ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

    ಬಾಗಲಕೋಟೆ: ಜಿಲ್ಲೆಯ ಎಸ್‍ಪಿ ನಿವಾಸಕ್ಕೆ ಭದ್ರತಾ ಸಿಬ್ಬಂದಿ ಆಗಿದ್ದ ಪೊಲೀಸ್ ಪೇದೆಯೊಬ್ಬರು ಅವರ ಮನೆ ಎದುರೇ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಜುನಾಥ್ ಹರಿಜನ(28) ಆತ್ಮಹತ್ಯೆಗೆ ಶರಣಾದ ಪೇದೆ. ಮಂಜುನಾಥ್ ಅವರು ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ನಿವಾಸಿ. ಕಳೆದ ಒಂದೂವರೆ ವರ್ಷದಿಂದ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆಯ ಎಸ್‍ಪಿ ಸಿ.ಬಿ ರಿಷ್ಯಂತ್ ನಿವಾಸಕ್ಕೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಎಸ್‍ಪಿ ಮನೆ ಎದುರೇ ಕರ್ತವ್ಯಕ್ಕೆಂದು ನೀಡಲಾಗಿದ್ದ ರೈಫಲ್ 303ಯಿಂದ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಜುನಾಥ್ ಹರಿಜನ ಅವರು 2012 ರಂದು ಪೊಲೀಸ್ ಇಲಾಖೆಗೆ ಪೇದೆಯಾಗಿ ನೇಮಕವಾಗಿದ್ದರು. ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪೇದೆ ಆತ್ಮಹತ್ಯೆ ಹಿನ್ನೆಲೆ ಪೊಲೀಸರು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶಿಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

    ಕುಮಾರಸ್ವಾಮಿ ಲೇಔಟ್ ಠಾಣೆಯ ನಾಲ್ವರು ಪೇದೆಗಳ ಅಮಾನತು!

    ಬೆಂಗಳೂರು: ನಗರದಲ್ಲಿ ರೈಫಲ್ ಕಳ್ಳತನ ಮಾಡಿದ್ದ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ.

    ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜ್ ಬೆಳಗಾವಿ ಅಮಾನತಾದ ಪೊಲೀಸ್ ಪೇದೆಗಳಾಗಿದ್ದಾರೆ. ಇವರೆಲ್ಲರೂ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರಾಗಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಚುನಾವಣೆ ವೇಳೆ ಸಾರ್ವಜನಿಕರು ರೈಫಲ್ ಗಳನ್ನು ಠಾಣೆಗೆ ಸರೆಂಡರ್ ಮಾಡಿದ್ದರು. ಇದರಲ್ಲಿ ಪೊಲೀಸ್ ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್ ಕದ್ದಿದ್ದರು. ರೈಫಲ್ ಗಳು ಕುಮಾರಸ್ವಾಮಿ ಲೇಔಟ್ ಠಾಣೆ ಪಿಎಸ್‍ಐ ಸುಮಾ ಉಸ್ತುವಾರಿಯಲ್ಲಿದ್ದವು. ಪೇದೆಗಳು ಪಿಎಸ್‍ಐ ಸುಮಾ ಇಲ್ಲದಿದ್ದಾಗ ಸ್ಟೇಷನ್ ನಿಂದಲೇ ಕಳ್ಳತನ ಮಾಡಿದ್ದರು. ತಾವು ಕಳ್ಳತನ ಮಾಡಿ ಇನ್ಸ್ ಪೆಕ್ಟರ್ ಹಾಗೂ ಪಿಎಸ್ ಐ ಮೇಲೆ ಆರೋಪ ಬರಲಿ ಎಂದು ಕದ್ದು ಮುಚ್ಚಿಟ್ಟಿದ್ದರು.

    ವಿಚಾರಣೆ ಮಾಡುವ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಪೇದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಪೇದೆಗಳ ಬಣ್ಣ ಬಯಲಾಗಿದೆ. ಆನಂತರ ತಾವೇ ರೈಫಲ್ ಕದ್ದಿರುವುದಾಗಿ ನಾಲ್ವರು ಪೇದೆಗಳು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

  • ಬೆಂಗ್ಳೂರಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಬಂದೂಕು ಕಸಿದು ದುಷ್ಕರ್ಮಿಗಳು ಪರಾರಿ

    ಬೆಂಗ್ಳೂರಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಬಂದೂಕು ಕಸಿದು ದುಷ್ಕರ್ಮಿಗಳು ಪರಾರಿ

    ಬೆಂಗಳೂರು: ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಬಂದೂಕು ಕಸಿದು ಪರಾರಿಯಾಗಿರುವ ಘಟನೆ ನಗರದ ಕೋಡಿಗೆಹಳ್ಳಿಯ ಟಾಟಾ ನಗರದಲ್ಲಿ ನಡೆದಿದೆ.

    ಕೋಡಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆಗಳಾದ ಪರಮೇಶ್ ಹಾಗೂ ಸಿದ್ದಪ್ಪ ಮೇಲೆ ತಡರಾತ್ರಿ ಹಲ್ಲೆ ನಡೆದಿದೆ. ಡ್ಯಾಗರ್ ಹಾಗೂ ಕಬ್ಬಿಣದ ರಾಡಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಪರಮೇಶ್ ಅವರ ಕೈಗೆ ಗಾಯವಾಗಿದೆ.

    5-6 ದುಷ್ಕರ್ಮಿಗಳು ಅನುಮಾನಾಸ್ಪದವಾಗಿ ನಡೆದುಕೊಂಡು ಹೋಗ್ತಾ ಇದ್ರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿಗಳು ಫಾಲೋ ಮಾಡಿಕೊಂಡು ಹೋಗಿದ್ದಾರೆ. ಪೊಲೀಸರನ್ನ ನೋಡಿ ದುಷ್ಕರ್ಮಿಗಳು ರಸ್ತೆ ಬದಿ ಅಡಗಿಕೊಂಡಿದ್ದಾರೆ. ಪೇದೆಗಳು ನೋಡಲು ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದಾಗ ಬಂದೂಕು ಕೆಳಗೆ ಬಿದ್ದಿದ್ದು, ತಕ್ಷಣ ಬಂದೂಕು ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಈಶ್ಯಾನ ವಿಭಾಗದ ಡಿಸಿಪಿ ಎಸ್. ಗಿರೀಶ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಪರಿಚಿತರು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಬ್ಬರು ಪೇದೆಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾಲ್ವರು ಅನುಮಾಸ್ಪಾದಾವಾಗಿ ಓಡಾಡುತ್ತಿದ್ರು. ಪ್ರಶ್ನೆ ಮಾಡಿದಾಗ ಜಟಾಪಟಿ ನಡೆದಿದೆ. ಪೇದೆ ಹಿಂಬದಿಯಲ್ಲಿ ರೈಫಲ್ ಹಾಕಿಕೊಂಡಿದ್ದಾರೆ. ಪರಮೇಶ್ 303 ರೈಫಲ್ ಗಲಾಟೆ ವೇಳೆ ಕೆಳಗೆ ಬಿದ್ದಿದೆ. ಅದನ್ನು ಅಲ್ಲೇ ಬಿಟ್ರೆ ನಮ್ಮನ್ನು ಶೂಟ್ ಮಾಡುತ್ತಾರೆಂಬ ಭಯದಿಂದ ದುಷ್ಕರ್ಮಿಗಳು ಅದನ್ನು ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ರು.

    ತಡರಾತ್ರಿ 1 ಗಂಟೆಗೆ ಸಾರ್ವಜನಿಕರು ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ನಮ್ಮ ಸಿಬ್ಬಂದಿ ಹೋಗಿದ್ದರು. ನಾಲ್ವರು ಕಳ್ಳತನ ಮಾಡಲು ಬಂದಿರುವುದಾಗಿದೆ ಮಾಹಿತಿ ಬಂದಿತ್ತು. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡಲಾಗುತ್ತದೆ. ರೈಫಲ್ ಕೂಡ ಆದಷ್ಟು ಬೇಗ ರಿಕವರಿ ಮಾಡುತ್ತೇವೆ ಎಂದು ಗಿರೀಶ್ ತಿಳಿಸಿದ್ರು.

    ಘಟನೆ ಬಗ್ಗೆ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಬೆಂಗ್ಳೂರಲ್ಲಿ ಪೊಲೀಸರ ಮೇಲೆಯೇ ರೌಡಿ ಹಲ್ಲೆ: ಲಾಂಗು-ಮಚ್ಚೇಟಿನಿಂದ ಪೇದೆಗೆ ಗಂಭೀರ ಗಾಯ

  • ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಶ್ರೀನಗರ: ಶಸ್ತ್ರಾಸ್ತ್ರ ಸಮೇತ ಸೇನಾ ಶಿಬಿರದಿಂದ ಓರ್ವ ಸೈನಿಕ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಗಂಟ್‍ಮುಲ್ಲಾ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ತಡರಾತ್ರಿ ಎಕೆ-47 ರೈಫಲ್ ಹಾಗೂ 3 ಮ್ಯಾಗ್ಜಿನ್‍ಗಳೊಂದಿಗೆ ಯೋಧ ಜಹೂರ್ ಅಹಮದ್ ಠಾಕೂರ್ ಪಾರಾರಿಯಾಗಿದ್ದು, ಯೋಧನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪುಲ್ವಾಮಾ ಮೂಲದವರಾದ ತಾಕೂರ್ ಎಕೆ-47 ರೈಫಲ್‍ನೊಂದಿಗೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಠಾಕೂರ್ ಅವರು ಪ್ರಾದೇಶಿಕ ಸೈನ್ಯದ 173 ಬೆಟಾಲಿಯನ್‍ನಲ್ಲಿ ಎಂಜಿನಿಯರಿಂಗ್ ವಿಭಾದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.