Tag: Riding

  • ವೀಡಿಯೋ: ಆಸ್ಟ್ರಿಚ್ ಹಕ್ಕಿಗಳ ಓಟದ ವೇಗಕ್ಕೆ ಸೈಕಲ್ ಸವಾರಿ ಮಾಡಿದ ಯುವರಾಜ!

    ವೀಡಿಯೋ: ಆಸ್ಟ್ರಿಚ್ ಹಕ್ಕಿಗಳ ಓಟದ ವೇಗಕ್ಕೆ ಸೈಕಲ್ ಸವಾರಿ ಮಾಡಿದ ಯುವರಾಜ!

    ಅಬುಧಾಬಿ: ಆಸ್ಟ್ರಿಚ್ ಓಟದೊಂದಿಗೆ ದುಬೈ ಯುವರಾಜ ಸೈಕಲ್ ರೇಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಾಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಕೆಲವೊಮದು ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಶೇರ್ ಮಾಡಿರುವ ವೀಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. 2 ಆಸ್ಟ್ರೀಚ್‍ಗಳ ಓಟದ ಮಧ್ಯದಲ್ಲಿ ಯುವರಾಜನ ಸೈಕಲ್ ಸವಾರಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವೈರಲ್ ವಿಡಿಯೋದಲ್ಲಿ ಏನಿದೆ?
    ಯುವರಾಜ ಸೈಕಲ್ ರೇಸ್‍ನಲ್ಲಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ವೇಗವಾಗಿ ಸಾಗುತ್ತಿರುವಾಗ ಒಂದು ಆಸ್ಟ್ರಿಚ್ ಓಡುತ್ತಾ ಇರುವುದನ್ನು ರಾಜಕುಮಾರ ಗಮನಿಸುತ್ತಾರೆ. ಆಸ್ಟ್ರಿಚ್ ಓಟದ ವೇಗಕ್ಕೆ ಸರಿಯಾಗಿ ತಾವು ಕೂಡ ಸೈಕಲ್ ಸವಾರಿ ಮಾಡುತ್ತಾರೆ. ಯುವರಾಜನನ್ನು ದಾಟಿ ಸಾಗುವ ಆಸ್ಟ್ರಿಚ್ ಜೊತೆಗಿನ ಸ್ಪರ್ಧೆ ತುಂಬಾ ಸಮಯದವರೆಗೆ ನಡೆಯುತ್ತದೆ. ಅಷ್ಟರಲ್ಲಿ ಇನ್ನೊಂದು ಆಸ್ಟ್ರಿಚ್ ಕೂಡ ಎಂಟ್ರಿ ಕೊಡುತ್ತದೆ. ಈ ಜೋಡಿ ಆಸ್ಟ್ರಿಚ್‍ಗಳ ಜೊತೆಗೆ ಅವುಗಳ ವೇಗಕ್ಕೆ ಸರಿಯಾಗಿ ಯುವರಾಜ ತಾನೂ ಕೂಡ ಸೈಕಲ್ ಓಡಿಸುತ್ತಾ ಖುಷಿಪಟ್ಟಿದ್ದಾರೆ.

    ಈ ವೀಡಿಯೋವನ್ನು ದುಬೈನ ಯುವರಾಜ ಶೇರ್ ಮಾಡಿಕೊಂಡಿದ್ದಾರೆ. ಆಸ್ಟ್ರಿಚ್‍ಗಳೊಂದಿಗೆ ನಡೆದಿರುವ ಸೈಕಲ್ ರೇಸ್ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

     

    View this post on Instagram

     

    A post shared by Fazza (@faz3)

  • ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ಮೈಸೂರು: ವೀಕೆಂಡ್‍ನಲ್ಲಿ ಸ್ನೇಹಿತರ ಜೊತೆ ಮಸ್ತಿ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮಗೆ ಇಷ್ಟವಾದ ಕುದುರೆ  ಏರಿ ಸವಾರಿ ಮಾಡಿದ್ದಾರೆ.

    ತಮ್ಮ ನಟನೆಯ ಕರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಸುಯೋಧನ ದರ್ಶನ್, ಮೈಸೂರಿನ ತಮ್ಮ ಫಾರ್ಮ್ ಹೌಸಿನಲ್ಲಿ ವೀಕೆಂಡ್ ಮಸ್ತಿ ಮಾಡುತ್ತಿದ್ದಾರೆ. ಗೆಳೆಯರ ಜೊತೆ ಕುದುರೆ ಏರಿ ರಸ್ತೆಯಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಅಗಿದೆ.

    ವಿಡಿಯೋದಲ್ಲಿ ದಾಸ, ತಮಗೆ ಇಷ್ಟವಾದ ಬಿಳಿ ಕುದುರೆಯನ್ನು ರೈಡ್ ಮಾಡುತ್ತಿದ್ದಾರೆ. ಕುದುರೆಯ ಹಿಂದಕ್ಕೆ ಇನ್ನೊಂದು ಕಪ್ಪು ಬಣ್ಣದ ಕುದುರೆಯನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ದರ್ಶನ್ ಅವರ ಜೊತೆ ಅವರ ಇನ್ನಿಬ್ಬರು ಸ್ನೇಹಿತರು ಕೂಡ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನು ರಸ್ತೆಯಲ್ಲಿ ನಿಂತ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮುಂಚೆಯಿಂದಲೂ ಪ್ರಾಣಿ ಪ್ರಿಯ ಆಗಿರುವ ದರ್ಶನ್ ಅವರಿಗೆ ಕುದುರೆ ಎಂದರೆ ಅಚ್ಚುಮೆಚ್ಚು. ಆ ಕಾರಣದಿಂದಲೇ ಅವರು ಮೈಸೂರಿನ ಟಿ ನರಸೀಪುರದ ಬಳಿ ಇರುವ ಅವರ ಫಾರ್ಮ್ ಹೌಸ್‍ನಲ್ಲಿ ಕುದುರೆಗಳು, ಹಸುಗಳು ಮತ್ತು ಕೋಳಿ ಸೇರಿದಂತೆ ವಿವಿಧ ರೀತಿಯ ಪಕ್ಷಿಗಳನ್ನು ಸಾಕಿದ್ದಾರೆ.

    ಇದರ ಜೊತೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನ ಪರಿಸರದ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದು, ಶೂಟಿಂಗ್‍ನಲ್ಲಿ ಬಿಡುವು ಸಿಕ್ಕ ಸಮಯದಲ್ಲಿ ಕಾಡಿನಲ್ಲಿ ಸಫಾರಿ ಹೋಗುವುದು, ಕಾಡಿನ ಫೋಟೋ ತೆಗೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ತಾವು ಸೆರೆ ಹಿಡಿದಿದ್ದ ಪ್ರಕೃತಿಯ ಅದ್ಭುತ ದೃಶ್ಯಗಳ ಫೋಟೋಗಳನ್ನು ಹರಾಜು ಹಾಕಿದ್ದರು. ಮಾರ್ಚ್ 3 ರಂದು ನಡೆದ ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳಿದ್ದರು.