Tag: rider

  • ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ವಿಜಯನಗರ: ಬೈಕ್‌ಗೆ (Bike) ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ (Rider) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯನಗರದ (Vijayanagara) ಹಗರಿಬೊಮ್ಮನಹಳ್ಳಿಯ ಮಾಲ್ವಿ ಗ್ರಾಮದ ಬಳಿ ನಡೆದಿದೆ.

    ಶಿವಕುಮಾರ್ (36) ಮೃತ ದುರ್ದೈವಿ. ಹಿಂಬದಿಯಿಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಸೋಮವಾರ ತಡರಾತ್ರಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್

  • ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ

    ಬೈಕರ್ ಗುಂಪಿನೊಂದಿಗೆ ಮಾತಿನ ಚಕಮಕಿ – ಸವಾರನಿಗೆ ಬೇಕೆಂದು ಸ್ಕಾರ್ಪಿಯೋ ಡಿಕ್ಕಿ

    ನವದೆಹಲಿ: ಬೈಕರ್ ಗುಂಪಿನೊಂದಿಗೆ ತೀವ್ರ ಮಾತಿನ ಚಕಮಕಿ ನಡೆದ ಹಿನ್ನೆಲೆ ಉದ್ದೇಶಪೂರ್ವಕವಾಗಿಯೇ ಸ್ಕಾರ್ಪಿಯೋ ಡ್ರೈವರ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ದೆಹಲಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ರೈಡ್ ಮಾಡುತ್ತಿದ್ದ ಗುಂಪಿನೊಂದಿಗೆ ಸ್ಕಾರ್ಪಿಯೋ ಡ್ರೈವರ್ ಮಾತಿಗೆ ಮಾತು ಬೆಳೆಸಿ ಜಗಳವಾಡಲು ಮುಂದಾಗಿದ್ದಾನೆ. ಇದು ಅತಿರೇಕಕ್ಕೆ ಹೋಗಿದ್ದು, ಆಕ್ರೋಶಗೊಂಡ ಡ್ರೈವರ್ ಬೇಕೆಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ಸಂಪೂರ್ಣ ವೀಡಿಯೋವನ್ನು ಬೈಕ್ ಗುಂಪಿನ ಸವಾರರೊಬ್ಬರು ಫೋನ್‍ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು

    ಬೈಕರ್ ಅನುರಾಗ್ ಐ ಅಯ್ಯರ್ ಟ್ವೀಟ್‍ನಲ್ಲಿ, ಸ್ಕಾರ್ಪಿಯೋ ಕಾರ್ ಡ್ರೈವರ್ ನಮ್ಮ ಕೆಲವು ಸವಾರರನ್ನು ಕೊಲ್ಲುವುದಾಗಿ ಬೆಂದರಿಕೆ ಹಾಕಿದ್ದಾನೆ. ಅಲ್ಲದೇ ನಮ್ಮ ಸ್ನೇಹಿತನಿಗೆ ಬೇಕೆಂದು ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಿಂದ ಯಾರಿಗೂ ತೀವ್ರವಾಗಿ ಗಾಯವಾಗಿಲ್ಲ ಎಂದು ಬರೆದು ವೀಡಿಯೋ ಟ್ವೀಟ್ ಮಾಡಿದ್ದಾರೆ.

    ಅನುರಾಗ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಿಎಂ ನರೇಂದ್ರ ಮೋದಿ ಮತ್ತು ದೆಹಲಿಯ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅವರಿಗೆ ವೀಡಿಯೋ ಟ್ಯಾಗ್ ಮಾಡಿದ್ದು, ಇದಕ್ಕಾಗಿ ನಾವು ಮತ ಹಾಕುವುದಿಲ್ಲ ಮತ್ತು ತೆರಿಗೆ ಪಾವತಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ, ದೆಹಲಿ ಪೊಲೀಸರು ವಿಷಯದ ಬಗ್ಗೆ ಗಮನ ಹರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ

    ಗಾಯಗೊಂಡ ಬೈಕ್ ಸವಾರನ ಸ್ನೇಹಿತ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ನನ್ನ 8 ರಿಂದ 10 ಸ್ನೇಹಿತರೊಂದಿಗೆ ಗುರುಗ್ರಾಮ್‍ನಿಂದ ದೆಹಲಿಗೆ ಹಿಂದಿರುಗುತ್ತಿದ್ದೆ. ಕಾರ್ ಡ್ರೈವರ್ ನಮ್ಮ ಬಳಿ ಬಂದು ರಾಶ್ ಡ್ರೈವಿಂಗ್ ಪ್ರಾರಂಭಿಸಿದನು. ಆತ ನನ್ನ ಸ್ನೇಹಿತನಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಹಿನ್ನೆಲೆ ನನ್ನ ಸ್ನೇಹಿತರು ಸ್ವಲ್ಪ ನಿಧಾನವಾಗಿ ರೈಡ್ ಮಾಡುತ್ತಿದ್ದೆವು. ಅವನೇ ವೇಗವಾಗಿ ಮುಂದೆ ಬಂದು ನನ್ನ ಸ್ನೇಹಿತನಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.

  • ಕನ್ನಡ ಸಿನಿಮಾಗಳನ್ನು ಕಿಲ್ ಮಾಡಲು ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ: ನಿಖಿಲ್

    ಕನ್ನಡ ಸಿನಿಮಾಗಳನ್ನು ಕಿಲ್ ಮಾಡಲು ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ: ನಿಖಿಲ್

    ಹಾಸನ: ರೈಡರ್ ಚಿತ್ರ ಬಿಡುಗಡೆಯಾದ 9 ಗಂಟೆಯಲ್ಲಿ 25 ಲಕ್ಷ ಜನ ವೆಬ್ ಸೈಟ್‍ಗಳಲ್ಲಿ ಪೈರಸಿ ಚಿತ್ರ ವೀಕ್ಷಿಸಿದ್ದಾರೆ. ಪೈರಸಿಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದರೂ ಒಂದಿಷ್ಟು ಜನ ಕನ್ನಡ ಸಿನಿಮಾಗಳನ್ನು ಹಾಳು ಮಾಡಲು, ಉದ್ದೇಶಪೂರ್ವಕವಾಗಿ ಪೈರಸಿ ಮಾಡಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಎಲ್ಲರೂ ಕಷ್ಟಪಟ್ಟು ಉತ್ತಮ ಕಥೆ ಆಯ್ಕೆ ಮಾಡಿ ಹೈಕ್ವಾಲಿಟಿ ಸಿನಿಮಾ ಮಾಡಿರುತ್ತೇವೆ. ಅದನ್ನು ಮೊಬೈಲ್‍ನಲ್ಲಿ ನೋಡುವುದು ಅಷ್ಟು ಚೆನ್ನಾಗಿ ಇರುವುದಿಲ್ಲ ಎಂದು ನಿಖಿಲ್ ಹೇಳಿದರು.

    ಇದೇ ವೇಳೆ ಡಿಸೆಂಬರ್ 31ರ ರಾಜ್ಯ ಬಂದ್ ಕರೆಯ ಹಿನ್ನೆಲೆಯಲ್ಲಿ ಮಾತನಾಡಿದ ನಿಖಿಲ್, ಎರಡು ವರ್ಷಗಳ ಕೊರೊನಾ ಸಂಕಷ್ಟದ ನಂತರ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಬಂದ್ ಮಾಡುವುದರಿಂದ ಕನ್ನಡ ಚಿತ್ರಗಳಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂದರು. ಇದನ್ನೂ ಓದಿ: ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಬಂದ್ ಸೀಮಿತವಾಗಬಾರದು. ಅಂತಹ ಬಂದ್ ನಮಗೆ ಅವಶ್ಯಕತೆ ಇಲ್ಲ. ಬಂದ್‍ಗೆ ಕರೆ ಕೊಟ್ಟಿರುವವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ಮನವಿ ಮಾಡಿದರು.

    ಇದೇ ಸಮಯದಲ್ಲಿ ತಂದೆ ಹೆಚ್‍ಡಿ ಕುಮಾರಸ್ವಾಮಿ, ನಿಖಿಲ್ ಸಿನಿಮಾದಲ್ಲಿ ಮುಂದುವರಿಯಲಿ ಎಂಬ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್, ಅವರ ಮಾತಿನ ಉದ್ದೇಶ ಅದಲ್ಲ. ನನ್ನನ್ನು ಒಬ್ಬ ಕಲಾವಿದನಾಗಿ ಜನರು ಗುರುತಿಸುತ್ತಿದ್ದಾರೆ. ಅದು ನನಗೆ ಹೆಮ್ಮೆ ಇದೆ. ಇದರ ಹಿನ್ನೆಲೆಯಲ್ಲಿ ನನ್ನ ತಂದೆ ಸಿನಿಮಾ ಮಾಡಬೇಕು, ಬಿಡಬಾರದು ಎಂದು ಕಿವಿಮಾತು ಹೇಳಿದ್ದಾರೆ. ನನ್ನ ವೃತ್ತಿ ಸಿನಿಮಾ. ರಾಜಕೀಯದ ವಿಚಾರ ಬಂದಾಗ ಅದರ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ

  • ಮೊಮ್ಮಗನ ಸಿನಿಮಾವನ್ನು ಹಾಡಿಹೊಗಳಿದ ಎಚ್‌.ಡಿ.ದೇವೇಗೌಡ

    ಮೊಮ್ಮಗನ ಸಿನಿಮಾವನ್ನು ಹಾಡಿಹೊಗಳಿದ ಎಚ್‌.ಡಿ.ದೇವೇಗೌಡ

    ಹಾಸನ: ನಿಖಿಲ್‌ ಕುಮಾರಸ್ವಾಮಿ ಅಭಿನಯದ ʼರೈಡರ್‌ʼ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಮೊಮ್ಮಗ ನಟಿಸಿರುವ ಸಿನಿಮಾವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಹಾಡಿಹೊಗಳಿದ್ದಾರೆ.

    ಸಿನಿಮಾ ನೋಡಿದ ನಂತರ ಆ ಬಗ್ಗೆ ಮಾತನಾಡಿದ ಅವರು, ನಿಖಿಲ್ ಫಿಲಂ ಫೀಲ್ಡ್‌ನಲ್ಲಿ ಇದ್ದಾನೆ. ಈ ಕ್ಷೇತ್ರಕ್ಕೆ ಆತ ಹೊಸಬನಲ್ಲ. ಜಾಗ್ವಾರ್ ಸಿನಿಮಾದಿಂದ ಹಿಡಿದು ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾನೆ. ಕಥೆ ತುಂಬಾ ಚೆನ್ನಾಗಿದೆ. ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ಮಾರಲ್ ಬ್ಯಾಕ್‌ಗ್ರೌಂಡ್ ಇದೆ. ಯಾರೋ ಒಬ್ಬಳು ಹೆಣ್ಣುಮಗಳು ಚೆನ್ನಾಗಿ ಅಭಿನಯಿಸಿದ್ದಾಳೆ. ಇಡೀ ರಾಜ್ಯದಲ್ಲಿ ನೂರು ಸಿನಿಮಾ ಮಂದಿರಗಳಲ್ಲಿ ನಾಲ್ಕು ಶೋ, ಮೂರು ಶೋ ಆಗುತ್ತಿದೆ. ಈ ಸಿನಿಮಾಗೆ ನಾನು ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ, ಈಗಾಗಲೇ ಜನ ಕೊಟ್ಟಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ ಎನ್ನಲು ಆ ಸರ್ಟಿಫಿಕೇಟ್‌ ಒಂದು ಸಾಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ರೈಡರ್‌ ಸಿನಿಮಾ ಇದೇ ಡಿ.24ರಂದು ರಾಜ್ಯಾದ್ಯಂತ ತೆರೆ ಕಂಡಿದೆ. ವಿಜಯ್‌ ಕುಮಾರ್‌ ಕೊಂಡ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ರಿಲೀಸ್ ಆಗಿ 2ದಿನಕ್ಕೆ ರೈಡರ್ ಸಿನಿಮಾಗೆ ಪೈರಸಿ ಕಾಟ

  • ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

    ಬೆಂಗಳೂರು: ರೈಡರ್‌ ಸಿನಿಮಾ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನಿಖಿಲ್‌ ಕುಮಾರಸ್ವಾಮಿ ಅಭಿನಯದ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ತಮಿಳು ಬ್ಲಾಸ್ಟರ್ಸ್‍ನಿಂದ ಪೈರಸಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ:   ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ


    ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದ ಲಹರಿ ವೇಲು, ಪೈರಸಿ ಒಂದು ದೊಡ್ಡ ಪಿಡಗು. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ. ಆದರೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರವನ್ನು ನಮ್ಮ ಚಿತ್ರದಲ್ಲಿ ನಟಿಸಿರುವ ಪ್ರಥಮ್ ತಿಳಿಸಿದರು. ಪೈರಸಿ ಪಿಡುಗು ಅಂತ್ಯ ಕಾಣಬೇಕು. ಕರ್ನಾಟಕದಲ್ಲಿ ಹಿಟ್ ಆಗುವ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ?

  • ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

    ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

    ಚಿಕ್ಕಬಳ್ಳಾಪುರ: ನಾನು ಜೀವನದಲ್ಲಿ ಏನನ್ನೂ ಪ್ಲಾನ್ ಮಾಡಿದವನಲ್ಲ. ಆದ್ರೆ ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ ಎಂದು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.

    ‘ರೈಡರ್’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಬಾಲಾಜಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಿಖಿಲ್ ಅವರು, ಕೆಲಕಾಲ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆ ‘ರೈಡರ್’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಡು, ನುಡಿ ವಿಚಾರಕ್ಕೆ ಬಂದ್ರೆ ನಾನು ಜೊತೆಯಾಗಿರುತ್ತೇನೆ: ನಿಖಿಲ್ ಕುಮಾರಸ್ವಾಮಿ

    ಕುಟುಂಬಸ್ಥರ ಜೊತೆ ಇಂದು ಸಂಜೆ ಒರಾಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಲಿದ್ದೇನೆ. ತಂದೆ-ತಾಯಿ, ತಾತ-ಅಜ್ಜಿ ಸಂಜೆ ಸಿನಿಮಾ ನೋಡಲು ಬರ್ತಿದ್ದಾರೆ ಎಂದರು. ಇದೇ ವೇಳೆ ಎಂಇಎಸ್ ಪುಂಡಾಟಿಕೆ ಕುರಿತು ಮಾತನಾಡಿದ್ದು, ಎಂಇಎಸ್ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಈ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುಬೇಕು ಎಂದು ಆಗ್ರಹಿಸಿದರು.

    ಜವಾಬ್ದಾರಿಯುತ ನಾಗರೀಕನಾಗಿ ಬಂದ್ ಕೇವಲ ಮಾಧ್ಯಮಗಳ ಗಮನ ಸೆಳೆಯುವ ಕೆಲಸ ಆಗಬಾರದು. ಉಪಯೋಗ ಅಗೋದಿದ್ರೆ ಬಂದ್ ಮುಂದುವರೆಸಲಿ. ಶುಕ್ರವಾರ ಬಹಳ ಸಿನಿಮಾಗಳು ರಿಲೀಸ್ ಆಗಲಿವೆ. ಬಂದ್ ಆದ್ರೆ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ಜನಕ್ಕೆ ಒಳ್ಳೆಯದಾಗುತ್ತೆ ಅನ್ನೋದಾದ್ರೆ ಬಂದ್ ಮಾಡಿ ಎಂದು ಮನವಿ ಮಾಡಿದರು.

    ನಾನು ಸಿನಿಮಾರಂಗದಲ್ಲಿ ಉತ್ತಮ ಯಶಸ್ವಿ ನಟನಾಗಬೇಕು. ನಾನು ಪ್ಲಾನ್ ಮಾಡಿಕೊಂಡು ಜೀವನ ಮಾಡಿಲ್ಲ. ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗಬೇಕು ಎಂಬ ಪ್ಲಾನ್ ಇದೆ. ಮುಂದಿನ ಚುನಾವಣೆ ಬಗ್ಗೆ ರಾಜಕೀಯ ವೇದಿಕೆಗಳಲ್ಲಿ ಚರ್ಚೆ ಮಾಡ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. 2023ರ ಚುನಾವಣೆಯಲ್ಲಿ ನಮ್ಮ ಗುರಿ ನಮ್ಮ ಉದ್ದೇಶ ಬೇರೆ. ನಾನು ಎಂಎಲ್‍ಎ ಆಗೋದು ಎಂಪಿ ಆಗೋದು ಮುಂದಿನ ದಿನಗಳಲ್ಲಿ ಪ್ರಸ್ತಾಪ ಮಾಡ್ತೇನೆ. ಅಂತಹ ಸಂದರ್ಭ ಬಂದ್ರೆ ಜನ ಆ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

    ಚಿತ್ರಮಂದಿರದಲ್ಲಿ ನಿಖಿಲ್ ಅಭಿಮಾನಿಗಳ ಜೊತೆ ಕಾಲಕಳೆಯಬೇಕಾದರೆ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಂಡು ಮುತ್ತು ನೀಡಿ, ಕೈ ಕುಲುಕಿ ವಿಶ್ ಮಾಡಿದರು.

  • ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಪ್ರೀತಿಯ ಪತ್ನಿ ರೇವತಿ ಜೊತೆಗೆ ರೋಮ್ಯಾಂಟಿಕ್ ಆಗಿ ನೃತ್ಯ ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಜಾಗ್ವಾರ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಿಖಿಲ್ ಸದ್ಯ ಕನ್ನಡದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ತಮ್ಮ ಅಭಿನಯ, ಡ್ಯಾನ್ಸ್, ಸ್ಟೈಲ್ ಮೂಲಕ ಮೊದಲ ಸಿನಿಮಾದಲ್ಲಿಯೇ ಅಭಿಮಾನಿಗಳ ಮನ ಕದ್ದಿದ್ದ ನಿಖಿಲ್ ರಾಜಕೀಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

    ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರೂ ನಿಖಿಲ್ ಈ ಮಧ್ಯೆ ಪತ್ನಿಗೂ ಸಹ ಅಷ್ಟೇ ಟೈಮ್ ನೀಡುತ್ತಾರೆ. ಆಗಾಗ ಪತ್ನಿ ಜೊತೆಗೆ ಕಾಲ ಕಳೆಯುತ್ತಿರುವ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ನಿಖಿಲ್ ಇದೀಗ ಪತ್ನಿ ಜೊತೆಗೆ ತಾವು ಅಭಿನಯಿಸಿರುವ ಬಹುನಿರೀಕ್ಷಿತ ರೈಡರ್ ಸಿನಿಮಾದ ಮೆಲೊಂಡಿ ಹಾಡೊಂದಕ್ಕೆ ಸೂಪರ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಚಿಕೊಂಡಿದ್ದಾರೆ. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಅಲ್ಲು ಅರ್ಜುನ್

    ವೀಡಿಯೋದಲ್ಲಿ ನಿಖಿಲ್ ಹಾಗೂ ರೇವತಿ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಸ್ಟೈಲಿಶ್ ಡ್ರೆಸ್ ತೊಟ್ಟು ರೈಡರ್ ಸಿನಿಮಾದ ನಿನ್ನಲ್ಲೇ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವೀಡಿಯೋ ನೋಡಿ ನಿಖಿಲ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    ಕೆಲವು ತಿಂಗಳ ಹಿಂದೆಯಷ್ಟೇ ನಿಖಿಲ್ ಹಾಗೂ ರೇವತಿಗೆ ಗಂಡು ಮಗು ಜನಿಸಿದ್ದು, ಮಗನ ಫೋಟೋವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಿಖಿಲ್ ಸಂತಸ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಕನ್ನಡದಲ್ಲಿ ನನಗೆ ಡಬ್ಬಿಂಗ್ ಮಾಡಲು ಆಗಲಿಲ್ಲ: ರಶ್ಮಿಕಾ ಮಂದಣ್ಣ

    ಜಾಗ್ವರ್ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ರೈಡರ್ ಸಿನಿಮಾಕ್ಕೆ ಬಣ್ಣಹಚ್ಚಿದ್ದು, ಈಗಾಗಲೇ ಈ ಸಿನಿಮಾದ ಹಾಡುಗಳು ಭಾರೀ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 24ರಂದು ರೈಡರ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ನಿಖಿಲ್ ರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲಿಯೇ ಸಾವು

    ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲಿಯೇ ಸಾವು

    ತುಮಕೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಎಚ್.ಬೈರಾಪುರ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಶ್ರೀಧರ್ (25) ಎಂದು ಗುರುತಿಸಲಾಗಿದೆ. ತಿಪಟೂರಿನ ಹುಚ್ಚನಟ್ಟಿ ಚಿಪ್ಪು ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಧರ್, ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಬೈಕಿನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಎಚ್.ಬೈರಾಪುರ ಗೇಟ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

    ಘಟನೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಶ್ರೀಧರ್, ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಅದೇ ಗ್ರಾಮದ ನಿವಾಸಿ ಮಂಜುನಾಥ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊನ್ನವಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ:ತಂದೆಯಿಂದಲೇ ಮಗನ ಬರ್ಬರ ಹತ್ಯೆ!

  • ಲಡಾಖ್‍ನಲ್ಲಿ ರೈಡರ್ ನಿಖಿಲ್ ಕುಮಾರಸ್ವಾಮಿ

    ಲಡಾಖ್‍ನಲ್ಲಿ ರೈಡರ್ ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ರೈಡರ್ ಚಿತ್ರಿಕರಣದ ನಿಮಿತ್ತ ಲಡಾಖ್‍ನಲ್ಲಿಇದ್ದಾರೆ. ಈ ವೇಳೆ ಕಳೆದ ಕೆಲವು ಸುಂದರ ಕ್ಷಣಗಳನ್ನು ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಉದ್ಯೋಗಗಳು ನಮ್ಮ ಪಾಕೆಟ್‍ಗಳನ್ನು ತುಂಬುತ್ತವೆ. ಆದರೆ ಸಾಹಸವು ನಮ್ಮ ಆತ್ಮವನ್ನು ತುಂಬುತ್ತದೆ. ಅದೃಷ್ಟವಂತರಿಗೆ ಅವರ ಉದ್ಯೋಗಗಳು ಸಾಕಷ್ಟು ಸಾಹಸಮಯವಾಗಿರುತ್ತದೆ ಎಂದು ಬರೆದುಕೊಂಡು ಲಡಾಖ್‍ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.

    ರೈಡರ್ ಚಿತ್ರದ ಶೂಟಿಂಗ್ ನಿಮಿತ್ತ ನಿಖಿಲ್ ಚಿತ್ರ ತಂಡದ ಜೊತೆಗೆ ಲಡಾಖ್‍ನಲ್ಲಿ ಬೀಡುಬಿಟ್ಟಿದ್ದಾರೆ. ಶೂಟಿಂಗ್ ಬ್ರೇಕ್ ವೇಳೆ ಲಡಾಖ್‍ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ. ಲಡಾಖ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಫೋಟೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಟಾಲಿವುಡ್ ಡೈರೆಕ್ಟರ್ ವಿಜಯ್ ಕುಮಾರ್ ನಿರ್ದೇಶನದಲ್ಲಿ ರೈಡರ್ ಚಿತ್ರ ಮೂಡಿಬರುತ್ತಿದೆ. ಮುಖ್ಯ ಪಾತ್ರದಲ್ಲಿ ನಿಖಿಲ್ ಕುಮಾಸ್ವಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರ ತಂಡ ಲಡಾಖ್‍ನಲ್ಲಿ ಸಿನಿಮಾ ಹಾಡನ್ನು ಶೂಟ್ ಮಾಡುತ್ತಿದೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿಯೂ ನಿಖಿಲ್ ನಿರ್ಮಾಪಕರಿಗೆ ಯವುದೇ ತೊಂದರೆಯಾಗಬಾರದು ಎಂದು ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ.

  • ನಿಖಿಲ್ ಹುಟ್ಟುಹಬ್ಬ – 100 ಕೆಜಿ ಕೇಕ್ ಕತ್ತರಿಸಿ ಆಚರಿಸಿದ ಅಭಿಮಾನಿಗಳು

    ನಿಖಿಲ್ ಹುಟ್ಟುಹಬ್ಬ – 100 ಕೆಜಿ ಕೇಕ್ ಕತ್ತರಿಸಿ ಆಚರಿಸಿದ ಅಭಿಮಾನಿಗಳು

    – ರೈಡರ್ ಚಿತ್ರದ ಟೀಸರ್ ರಿಲೀಸ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ಅವರಿಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇದೀಗ ನಟನಿಗೆ ಗಣ್ಯರು ಸೇರಿದಂತೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

    ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ 100 ಕೆಜಿಯ ಕೇಕ್ ಕತ್ತರಿಸಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ನಿಖಿಲ್ ರಿಂದ ಕೇಕ್ ಕಟ್ ಮಾಡಿಸಿ ಸಾವಿರಾರು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಅಲ್ಲದೆ ನಿಖಿಲ್ ಸೈನ್ಯ ಸಮಿತಿಯಿಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.

    ಯುವರಾಜನ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಉಡುಗೊರೆಯಾಗಿ ರೈಡರ್ ಚಿತ್ರತಂಡ ಇಂದು ಸಿನಿಮಾದ ಟೀಸರ್ ರಿಲೀಸ್ ಮಾಡಿದೆ. ಸೀತಾರಾಮ ಕಲ್ಯಾಣ ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಅನೌನ್ಸ್ ಆಗಿ ಬಹಳ ಸಮಯವಾಯಿತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಸಿನಿಮಾ ಕುರಿತಾದ ಅಪ್ಡೇಟ್ ಸಿಕ್ಕಿರಲಿಲ್ಲ. ಆ ಬಳಿಕ ಸಿನಿಮಾದ ಟೈಟಲ್ ಟೀಸರ್ ನೋಡಿದಾಗಲೇ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ಸ್ಪಷ್ಟವಾಗಿತ್ತು. ಈಗ ಟೀಸರ್ ನೋಡಿದ ಮೇಲಂತೂ ಸಿನಿಮಾದ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.