Tag: Ride

  • ಕೆ.ಆರ್.ಪುರಂ ಸರ್ವೆ ಸೂಪರ್‌ವೈಸರ್ 5 ಲಿಕ್ಕರ್ ಲೈಸೆನ್ಸ್‌ಗಳ ಒಡೆಯ!

    ಕೆ.ಆರ್.ಪುರಂ ಸರ್ವೆ ಸೂಪರ್‌ವೈಸರ್ 5 ಲಿಕ್ಕರ್ ಲೈಸೆನ್ಸ್‌ಗಳ ಒಡೆಯ!

    ಬೆಂಗಳೂರು: ಕೆ.ಆರ್.ಪುರಂ (K.R.Puram) ಸರ್ವೆ ಸೂಪರ್‌ವೈಸರ್ ಕೆ.ಟಿ ಶ್ರೀನಿವಾಸ್‌ಗೆ ಸೇರಿದ 14 ಕಡೆಗಳಲ್ಲಿ ಲೋಕಾಯುಕ್ತ (Lokayukta) ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ (Ride) ನಡೆಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.

    ತುಮಕೂರು (Tumakuru) ಹಾಗು ಬೆಂಗಳೂರಿನ (Bengaluru) 14 ಕಡೆ ಲೋಕಾ ದಾಳಿ ನಡೆದಿದ್ದು, 5 ಲಿಕ್ಕರ್ ಲೈಸೆನ್ಸ್‌ಗಳನ್ನು (Liquor License) ಹೆಂಡತಿ ಹಾಗೂ ಸಹೋದರಿಯ ಹೆಸರಿನಲ್ಲಿ ಹೊಂದಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿದೆ. ಕೆ.ಟಿ ಶ್ರೀನಿವಾಸ್‌ಗೆ ಸೇರಿದ ಎಷ್ಟೆಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?

    ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ?
    * ಅಂದ್ರಳ್ಳಿಯಲ್ಲಿ 2.70 ಲಕ್ಷ ರೂ. ಮೌಲ್ಯದ ನಿವೇಶನ.
    * ಬೆಂಗಳೂರಿನ ಹೆಣ್ಣೂರು ಗ್ರಾಮದಲ್ಲಿ ಸಹೋದರಿ ಕೆ.ಟಿ ಪುಷ್ಪಲತಾ ಹೆಸರಿನಲ್ಲಿ 83.45 ಲಕ್ಷ ರೂ. ಮೌಲ್ಯದ ನಿವೇಶನ.
    * 60 ಲಕ್ಷ ರೂ. ಮೌಲ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ.
    * ರಾಯಪುರ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಮೌಲ್ಯದ 5 ಗುಂಟೆ ಜಮೀನು.
    * ಪತ್ನಿ ಹಾಗೂ ಸಹೋದರಿಯ ಹೆಸರಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಉದ್ಯಮ
    * ತುಮಕೂರಿನ ಬಾಣಾವರದಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
    * ಸಹೋದರಿ ಹೆಸರಿನಲ್ಲಿ ತುಮಕೂರಿನ ನಂಜೇಗೌಡನ ಪಾಳ್ಯದಲ್ಲಿ 20 ಲಕ್ಷ ರೂ. ಮೌಲ್ಯದ ಬಾರ್.
    * ಸಹೋದರ ಕೆ.ಟಿ ವೆಂಕಟೇಗೌಡ ಹೆಸರಲ್ಲಿ ತುಮಕೂರಿನ ಭೈರಸಂದ್ರದಲ್ಲಿ 25 ಲಕ್ಷ ರೂ. ಮೌಲ್ಯದ ಬಾರ್ ಅಂಡ್ ರೆಸ್ಟೊರೆಂಟ್.
    * ಪತ್ನಿ ರಾಜೇಶ್ವರಿ ಹೆಸರಲ್ಲಿ ಮತ್ತೊಂದು 40 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
    * 10 ಲಕ್ಷ ರೂ. ಮೌಲ್ಯದ ಎಸ್ ಕ್ರಾಸ್ ಕಾರು.
    * ಕೊತ್ತನೂರಿನಲ್ಲಿ 10 ಲಕ್ಷ ರೂ. ಮೌಲ್ಯದ ನಿವೇಶನ.

    ಒಟ್ಟು ಅಂದಾಜು 3.53 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

    ಯಾದಗಿರಿ: ಕಲಬೆರಕೆ (Adulteration) ಹಾಲು ಸರಬರಾಜು ಶಂಕೆ ವ್ಯಕ್ತಪಡಿಸಿ ಹಾಲು ಮಾರಾಟ ಮಳಿಗೆ ಹಾಗೂ ಹಾಲು ಸರಬರಾಜು ವಾಹನಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು ದಾಳಿ (Ride) ನಡೆಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ರಂಜಾನ್ (Ramzan) ಹಬ್ಬ ಹಿನ್ನೆಲೆ ಕಲಬೆರಕೆ ಹಾಲು (Milk) ಸರಬರಾಜು ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದ್ದಾರೆ. ಯಾದಗಿರಿ ನಗರದ ರೈಲ್ವೆ ನಿಲ್ದಾಣದ ರಸ್ತೆ, ಚಿತ್ತಾಪುರ ರಸ್ತೆ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಎಂಬವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಿವಿಧ ಬ್ರ್ಯಾಂಡ್‌ನ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು 

    ಸಂಗ್ರಹಿಸಿದ ಹಾಲನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ (Laboratory) ಕಳುಹಿಸಲಿದ್ದು, ಕಲಬೆರಕೆ ಎಂದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್‌ – ಬಂಡಾಯ ಶಮನಕ್ಕೆ ಶಾ ಮದ್ದು

  • ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ  ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

    ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

    ಉಡುಪಿ: ಮಹಾಮಾರಿ ಕೊರೊನಾ ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸ್ಥಬ್ದ ಮಾಡಿದೆ. ಮಲ್ಪೆ ಬೀಚ್ ಪ್ರವಾಸಿಗರು ಇಲ್ಲದೆ ಬಿಕೋ ಅನ್ನುತ್ತಿದೆ. ಸಂಕಷ್ಟದ ಕಾಲದಲ್ಲಿ ರಾಜಸ್ಥಾನದಿಂದ ಉಡುಪಿಗೆ ಬಂದ ಯುವಕನೊಬ್ಬ ಡೋರ್ ಟು ಡೋರ್ ಒಂಟೆ ತಂದು ಜೀವನ ನಡೆಸುತ್ತಿದ್ದಾನೆ.

    ಕೊರೊನಾ ಕಾಲದಲ್ಲಿ ಸರಕಾರ ಬಡ ಮತ್ತು ಶ್ರಮಿಕ ವರ್ಗಕ್ಕೆ ಪ್ರೋತ್ಸಾಹಧನ ನೀಡಿದೆ. ಪ್ರವಾಸಿಗರನ್ನು ನಂಬಿ ರಾಜಸ್ಥಾನದಿಂದ ಒಂಟೆ ಖರೀದಿಸಿ ಉಡುಪಿಗೆ ಬಂದು ಜೀವನ ಸಾಗಿಸುತ್ತಿದ್ದ ಸುಂದರ್ ಲಾಲ್ ಈ ಸಂದರ್ಭದಲ್ಲಿ ಹೊಸ ಪ್ಲಾನ್ ಮಾಡಿದ್ದಾನೆ. ಪ್ರವಾಸಿ ತಾಣಕ್ಕೆ ಜನ ಬಾರದ ಕಾರಣ ಒಂಟೆ ಸಾಕುವುದು ತನ್ನ ಜೀವನದ ಸಾಗಿಸುವುದು ಬಹಳ ಕಷ್ಟವಾಗಿತ್ತು. ಇದನ್ನೂ ಓದಿ: ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

     

    ಒಂಟೆಯ ಜೊತೆ ಯುವಕ ದಿನಕ್ಕೊಂದು ರೆಸಿಡೆನ್ಸಿಯಲ್ ಏರಿಯಾಕ್ಕೆ ಬರುತ್ತಾನೆ. ಮಕ್ಕಳನ್ನು ಮನೆಯ ಮುಂದಿನ ರಸ್ತೆಯಲ್ಲೇ ಒಂಟೆಯ ಮೇಲೆ ಕೂರಿಸಿ ಒಂದು ಸುತ್ತು ಹೊಡೆಸುತ್ತಾನೆ. ಹತ್ತಿಪ್ಪತ್ತು ರೂಪಾಯಿಗೆ ಒಂದು ಸುತ್ತು ಒಂಟೆ ಸವಾರಿ ಮಾಡಿಸುತ್ತಾನೆ. ಸರಕಾರದ ಸಹಾಯ ಸಿಗದ, ಪ್ರವಾಸೋದ್ಯಮ ಆರಂಭವಾಗಿದ್ದರಿಂದ ಈ ರೀತಿ ಜೀವನ ಮಾಡುತ್ತಿದ್ದಾನೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಪರ ಆಡಲು ಐವರು ಆಟಗಾರರಿಗೆ ಕರೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಂದರ್ ಲಾಲ್, ಪ್ರವಾಸಿಗರು ಉಡುಪಿಗೆ ಬರುವ ಸೀಸನ್‍ನಲ್ಲಿ ಕೊರೊನಾ ಲಾಕ್‍ಡೌನ್ ಆಗಿದೆ. ಹೋದ ವರ್ಷ ಕೂಡ ಇದೇ ರೀತಿಯ ಸಂಕಷ್ಟ ಇತ್ತು. ಒಂಟೆಯನ್ನು ಸಾಕುವುದು, ನಾನು ಜೀವನವನ್ನು ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ದಿನದ ಖರ್ಚನ್ನು ನಾನು ದುಡಿಯಲೇಬೇಕು. ಬಹಳಷ್ಟು ಜಾಗ್ರತೆವಹಿಸಿ ಒಂಟೆ ಸವಾರಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

  • 2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    2 ಜಿಲ್ಲೆಯಲ್ಲಿ 11 ಸೈಟ್ ಹೊಂದಿದ್ದ ಎಇಇ ಎಸಿಬಿ ಬಲೆಗೆ

    ಗದಗ: ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿರುವ ಘಟನೆ ಗದಗನಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ನೀರು ಸರಬರಾಜು ಮಂಡಳಿಯ ಎಇಇ ಹನುಮಂತ ಪ್ರಭಣ್ಣವರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ರಾಜೀವ್ ಗಾಂಧಿ ನಗರದಲ್ಲಿ ಇರುವ ಮನೆ ಮೇಲೆ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಭ್ರಷ್ಟಾಚಾರ ದೂರಿನ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಎಇಇ ಹನುಮಂತ ಮನೆ ಮೇಲಿನ ದಾಳಿ ವೇಳೆ ಸುಮಾರು ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಇವರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 11 ಸೈಟ್‍ಗಳು ಇರುವುದು ಅಧಿಕಾರಿಗಳ ದಾಳಿ ವೇಳೆ ಗೊತ್ತಾಗಿದೆ. ಕಡತಗಳ ಪರಿಶೀಲನೆ ಮುಂದುವರಿದಿದ್ದು, ಎಇಇ ಹನಮಪ್ಪ ಮತ್ತು ಮನೆಯವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

  • ಯುವಕರ ಜಾಲಿ ರೈಡ್- ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಪಿಎಸ್‍ಐ ವಾರ್ನಿಂಗ್

    ಯುವಕರ ಜಾಲಿ ರೈಡ್- ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಪಿಎಸ್‍ಐ ವಾರ್ನಿಂಗ್

    – 80 ಬೈಕ್‍ಗಳಿಗೆ ದಂಡ ಸಹಿತ ವಾರ್ನ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದರೂ ಯುವಕರು ಬೆಳ್ಳಂಬೆಳಗ್ಗೆ ಜಾಲಿ ರೈಡ್ ಮಾಡಿದ್ದು, ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿ ಯುವಕರಿಗೆ ವಾರ್ನಿಂಗ್ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಬಳಿ ಈ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿದ ಪೊಲೀಸರು ರೇಸ್ ಮಾಡುತ್ತಿದ್ದ ಬೈಕ್ ಸವಾರರಿಗೆ ಫೈನ್ ಹಾಕಿ ವಾರ್ನಿಂಗ್ ನೀಡಿದ್ದಾರೆ.

    ಯುವಕರು ಕುಣಿಗಲ್ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಶಾರಾಮಿ ಬೈಕ್‍ಗಳಲ್ಲಿ ಜಾಲಿ ರೈಡ್ ಮಾಡುತ್ತಿದ್ದರು. ಕುದೂರು ಪಿಎಸ್‍ಐ ಮಂಜುನಾಥ್ ಸಿನಿಮೀಯ ರೀತಿಯಲ್ಲಿ ಬೈಕ್ ಚೇಸಿಂಗ್ ಮಾಡಿ ಸವಾರರನ್ನು ಅಡ್ಡಹಾಕಿ ಜಾಲಿ ರೈಡ್‍ಗೆ ಬ್ರೇಕ್ ಹಾಕಿದ್ದಾರೆ.

    ವೀಕೆಂಡ್ ಎಂದು ಅನಗತ್ಯ ರೇಸ್ ಬಂದವರಿಗೆ ಪಿಎಸ್‍ಐ ಮಂಜುನಾಥ್ ಸಖತ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಸುಮಾರು 80 ಬೈಕ್‍ಗಳಿಗೆ ದಂಡ ಸಹಿತ ವಾರ್ನಿಂಗ್ ನೀಡಿದ್ದಾರೆ. ಈ ಜಾಲಿ ರೈಡ್‍ಗೆ ಬ್ರೇಕ್ ಹಾಕುವಲ್ಲಿ ಕುದೂರು ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ಯಶಸ್ವಿಯಾಗಿದೆ.

  • ಬಳ್ಳಾರಿಯಲ್ಲಿ ಮರಳು ದಂಧೆಕೋರರ ಮೇಲೆ ರೇಡ್ – ಒಂದೂವರೆ ಕೋಟಿ ರೂ. ಸೀಜ್

    ಬಳ್ಳಾರಿಯಲ್ಲಿ ಮರಳು ದಂಧೆಕೋರರ ಮೇಲೆ ರೇಡ್ – ಒಂದೂವರೆ ಕೋಟಿ ರೂ. ಸೀಜ್

    – ಆರೋಪಿಗಳ ಬಂಧನ

    ಬಳ್ಳಾರಿ: ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಮರಳು ದಂಧೆಯ ಗುತ್ತಿಗೆ ಪಡೆಯಲು ರಿಂಗ್ ಮಾಡಿಕೊಳ್ಳುತ್ತಿದ್ದ ಗುತ್ತಿಗೆದಾರರ ಮೇಲೆ ಪೊಲೀಸರು, ಐಟಿ, ಕಂದಾಯ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

    ಬಳ್ಳಾರಿ ಹೊರವಲಯದಲ್ಲಿರುವ ಎಂಎಲ್ ಸಿ ಅಲ್ಲವೀರಭದ್ರಪ್ಪ ಒಡೆತನದ ಅಲ್ಲಭವನದಲ್ಲಿ ಭಾನುವಾರ ಸಂಜೆ ಮರಳು ದಂಧೆಕೋರರು, ಗುತ್ತಿಗೆದಾರರು ರಿಂಗಿಂಗ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಹಲವು ಗುತ್ತಿಗೆದಾರರನ್ನ ವಶಕ್ಕೆ ಪಡೆಯುವುದಲ್ಲದೇ ಅಪಾರ ಪ್ರಮಾಣದ ಹಣವನ್ನು ಸಹ ಜಪ್ತಿ ಮಾಡಿದ್ದಾರೆ.

    ದಾಳಿಯ ವೇಳೆ ಗುತ್ತಿಗೆದಾರರ ಬಳಿ ಸುಮಾರು ಒಂದೂವರೆ ಕೋಟಿ ರೂಪಾಯಿ ಹಣವಿತ್ತೆಂತು ಮೂಲಗಳು ಖಚಿತಪಡಿಸಿವೆ. ಪೊಲೀಸರು, ಐಟಿ, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಪರಾರಿಯಾಗಲು ಯತ್ನಿಸಿದ ಗುತ್ತಿಗೆದಾರರನ್ನ ವಶಕ್ಕೆ ಪಡೆಯಲು ಎಸ್ ಸಿ ಅರುಣ ರಂಗರಾಜನ್ ಗಾಳಿಯಲ್ಲಿ ಗುಂಡು ಹಾರಿಸಿ ಹಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ವಿಚಾರಣೆ ತಡರಾತ್ರಿಯವರೆಗೂ ಮುಂದುವರಿದಿದ್ದು ದಾಳಿ ಹಾಗೂ ವಶಕ್ಕೆ ಪಡೆದ ಹಣದ ಬಗ್ಗೆ ಎಸ್ ಪಿ ಅರುಣ ರಂಗರಾಜನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಬಹಿರಂಗಪಡಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುದುರೆಮನೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 3 ಲಕ್ಷ ರೂಪಾಯಿ ನಗದು ಹಾಗು 40ಕ್ಕೂ ಹೆಚ್ಚಿನ ಬೈಕುಗಳ ಭರ್ಜರಿ ಬೇಟೆಯಾಡಿದ್ದಾರೆ.

    ಗುರುವಾರ ಬೆಳ್ಳಂಬೆಳಗ್ಗೆ ಡಿಸಿಪಿ ಸೀಮಾ ಲಾಟಕರ ಹಾಗೂ ಇಬ್ಬರು ಪಿಎಸ್‍ಐ ಸೇರಿದಂತೆ 15 ಮಂದಿಯಿಂದ ಕುದುರೆಮನೆ ಗ್ರಾಮದ ತೋಟದ ಮನೆಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 40 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಿಗೆ ಬಳಸುತ್ತಿದ್ದ 3 ಲಕ್ಷ ರೂಪಾಯಿ ಹಾಗೂ 40ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ದಾಳಿ ವೇಳೆ ದಂಧೆಕೋರರು ಕ್ರೈಂ ವಿಭಾಗದ ಪಿಎಸ್‍ಐ ರಮೇಶ್ ಹೂಗಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದಾರೆ. ದಂಧೆಕೋರರು ತೋಟದ ಮನೆಯಲ್ಲಿ ತಾತ್ಕಾಲಿಕ ಶೆಡ್ಡಿನ ಮನೆಯನ್ನು ನಿರ್ಮಿಸಿಕೊಂಡು, ಹಲವು ದಿನಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಮಟ್ಕಾ ದಂಧೆಯ 40 ಮಂದಿಯನ್ನು ಬಂಧಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆಂದು ಡಿಸಿಪಿ ಸೀಮಾ ಲಾಟಕರ್ ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ವಿಡಿಯೋ: ಬೈಕಿನಲ್ಲೇ 76 ದಿನ, 21 ದೇಶ, 23 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಕನ್ನಡಿಗರು!

    ಕಲಬುರಗಿ: ಸಾಮಾನ್ಯವಾಗಿ ಬೈಕ್ ರೈಡಿಂಗ್ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಬೈಕ್ ನಲ್ಲೆ ಲಾಂಗ್ ಡ್ರೈವ್ ಹೋಗಬೇಕು ಅಂತಾ ಸುಮಾರು ಜನ ಅಂದುಕೊಳ್ಳತ್ತಾರೆ. ಅದರಲ್ಲಿ ಕೆಲವರು ಬೈಕ್ ನಲ್ಲಿ ಇಡಿ ದೇಶವನ್ನೆ ಸುತ್ತಾಡುತ್ತಾರೆ. ಆದರೆ ಸ್ನೇಹಿತರಿಬ್ಬರು ಬೈಕಿನಲ್ಲೇ ಬರೊಬ್ಬರಿ 76 ದಿನಗಳಲ್ಲಿ 21 ದೇಶವನ್ನ ಸುತ್ತಾಡಿ ಬಂದಿದ್ದಾರೆ.

    ಬೈಕ್ ರೈಡಿಂಗ್ ನಲ್ಲಿ ಭಾರತ ಸುತ್ತಾಡಿರೋದನ್ನ ನೋಡಿದ್ದೇವೆ. ಆದರೆ ಇಬ್ಬರು ಸ್ನೇಹಿತರು ವಿದೇಶಗಳಿಗೂ ಬೈಕಿನಲ್ಲೇ ತೆರಳಿ ಸುತ್ತಾಡಿ ಬಂದಿದ್ದಾರೆ. ಕಲಬುರಗಿಯ ಮಂಜುನಾಥ್ ಚಿಕ್ಕಯ್ಯ ಮತ್ತು ರಿಚರ್ಡ್ ಎಂಬವರು ಬೈಕಿನಲ್ಲೇ 76 ದಿನಗಳಲ್ಲಿ 21 ದೇಶವನ್ನು ಸುತ್ತಾಡಿದ್ದಾರೆ.

    ಭೂತಾನ್, ಮೈನ್ಮಾರ್, ಥೈಲ್ಯಾಂಡ್, ಲೋಯಸ್, ಚೀನಾ, ಕಿರ್ಗಿಸ್ಥಾನ್, ಉಜ್ಬೇಕಿಸ್ಥಾನ್, ಕಝಾಕ್‍ಸ್ಥಾನ್, ರಷ್ಯಾ, ಎಸ್ಟೋನಿಯಾ, ಲಿಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಇಟಲಿ, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಬೆಲ್ಜಿಯಂ, ನೆದರ್ ಲ್ಯಾಂಡ್ ಹಾಗೂ ಇಂಗ್ಲೆಂಡ್ ದೇಶಗಳನ್ನು ಸುತ್ತಿ ಬಂದಿದ್ದಾರೆ.

     

    ಮಂಜುನಾಥ್ ಕೆಲಸದಲ್ಲಿ ಪ್ರತಿನಿತ್ಯ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಕೆಲಸ ಮಧ್ಯೆ ಬಿಡುವು ಮಾಡಿಕೊಂಡು ಬೇರೆ ಏನಾದರೂ ಮಾಡಬೇಕು ಅಂತಾ ಡಿಸೈಡ್ ಮಾಡಿ ಈ ಹಿಂದೆ ಕನ್ಯಾಕುಮಾರಿಗೆ ಬೈಕಿನಲ್ಲೇ ಪ್ರಯಾಣ ಮಾಡಿದ್ದರಂತೆ. ಆಗ ದಂಪತಿಗಳಿಬ್ಬರು ಬೈಕಿನಲ್ಲೇ ದೇಶ ಸುತ್ತಾಡ್ತಿರೋದನ್ನು ಕಂಡು ಅವರಿಂದ ಪ್ರೇರಣೆಗೊಂಡು ಬೈಕಿನಲ್ಲೇ ವಿದೇಶ ಸುತ್ತಾಡೋಕ್ಕೆ ಪ್ಲ್ಯಾನ್ ಮಾಡಿದ್ದರಂತೆ.

    ಅದರಂತೆ ಮಂಜುನಾಥ್ ಮತ್ತು ಸ್ನೇಹಿತ ರಿಚರ್ಡ್ ಇಬ್ಬರು ಕೂಡ ಎರಡು ವರ್ಷಗಳಿಂದ ಯಾವ್ಯಾವ ದೇಶಕ್ಕೆ ಹೋಗಬೇಕು ಮತ್ತೆ ಹೇಗೆ ಹೋಗಬೇಕು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ವಿದೇಶದಲ್ಲಿ ಸ್ಥಳೀಯ ಬೈಕ್ ವರ್ಕೌಟ್ ಆಗೋದಿಲ್ಲ ಅನ್ನೋ ಮಾಹಿತಿ ಮೇರೆಗೆ ಅಮೆರಿಕಾದ ಎರಡು ಬೈಕ್ ಖರೀದಿಸಿ ಕಳೆದ ಎರಡು ತಿಂಗಳ ಹಿಂದೆ ಕಲಬುರಗಿಯಿಂದ ಪ್ರಯಾಣ ಆರಂಭಿಸಿ ಅಮೆರಿಕದವರೆಗೂ ಬೈಕಿನಲ್ಲೇ ಸುತ್ತಾಡಿಕೊಂಡು ಬಂದಿದ್ದಾರೆ.

     

    ಮೊದ ಮೊದಲು ಮಂಜುನಾಥ್ ಕೆಲಸದ ಒತ್ತಡದಿಂದ ಹೊರ ಬರಲು ಬೈಕ್ ಸವಾರಿ ಮಾಡೋದನ್ನ ಆರಂಭಿಸಿದ್ದರಂತೆ. ಬಳಿಕ ವಾರಗಟ್ಟಲೆ ನಂತ್ರ ತಿಂಗಳುಗಟ್ಟಲೆ ಕೆಲಸ ನಿಮಿತ್ತ ಬೈಕಿನಲ್ಲಿ ಹೊರ ಹೋಗಿ ಬರುತ್ತಿದ್ದರಂತೆ. ಅಷ್ಟೇ ಅಲ್ಲದೇ ಮಂಜುನಾಥ್ ಬೈಕಿನಲ್ಲಿ ವಿದೇಶ ಪ್ರಯಾಣ ಮಾಡೋ ಇಚ್ಚೆ ಪತ್ನಿ ಬಳಿ ಹೇಳಿದ್ದಾಗ ಪತ್ನಿ ರೇಖಾ ಅದಕ್ಕೆ ನಿರಾಕರಿಸಿದ್ದರಂತೆ. ಆದರೆ ಮಂಜುನಾಥ್ ಅವರ ಪತ್ನಿಗೆ ಒಪ್ಪಿಸಿದ್ದ ಬಳಿಕ ಸ್ನೇಹಿತ ರಿಚರ್ಡ್ ಜೊತೆ ಅವರ ಬೈಕ್ ಮೇಲಿನ ಲಾಂಗ್ ಜರ್ನಿ ಆರಂಭಿಸಿದ್ದರು. ಬೈಕಿನಲ್ಲಿ 21 ದೇಶ ಸುತ್ತಿದ್ದಕ್ಕೆ ರಿಚರ್ಡ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

    ಮಂಜುನಾಥ್ ವಿದೇಶ ಪ್ರಯಾಣದಲ್ಲಿ ಹಲವಾರು ತೊಂದರೆ ತಾಪತ್ರಯಗಳನ್ನು ಅನುಭವಿಸಿರೋದು ನೆನಪಿಸಿಕೊಂಡಿದ್ದಾರೆ. ತೊಂದರೆ ತಾಪತ್ರಯಗಳ ಮಧ್ಯೆ ವಿದೇಶ ಪ್ರಯಾಣದ ಅನುಭವ ಸಖತ್ತಾಗಿತ್ತು ಅಂತಾರೆ. ಚೀನಾದಲ್ಲಿಯು ಕೂಡ ಭಾರತಿಯರನ್ನು ಕಂಡರೆ ಒಳ್ಳೆ ಗೌರವ ಕೊಟ್ಟು ಸ್ಪಂದಿಸಿರೋ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶದಲ್ಲಿ ಹೇಳಿ ವಿದೇಶಿ ಸಂಸ್ಕೃತಿಗಳನ್ನು ನೋಡಿದರೆ ನಮ್ಮೂರೆ ನಮಗೆ ಚೆಂದ ಅನ್ನೋ ಹಾಗೆ ಇಂಡಿಯಾ ಇಸ್ ಗ್ರೆಟ್ ಎಂದು ಮಂಜುನಾಥ್ ಮತ್ತು ಆತನ ಸ್ನೇಹಿತ ರಿಚರ್ಡ್ ಹೇಳಿದ್ದಾರೆ.

    https://www.youtube.com/watch?v=Bcr-mU8vwJs&feature=youtu.be

  • ಕಲಬುರಗಿಯ ಆರೋಗ್ಯಶಿಕ್ಷಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಕಲಬುರಗಿಯ ಆರೋಗ್ಯಶಿಕ್ಷಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಜಿಲ್ಲೆಯ ಆರೋಗ್ಯಶಿಕ್ಷಣಾಧಿಕಾರಿ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.

    ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ದೇವೆಂದ್ರಪ್ಪಾ ಬಿರಾದರ್ ರವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಈ ದಾಳಿ ನಡೆದಿದೆ. ಏಕಕಾಲದಲ್ಲಿ ದೇವೆಂದ್ರಪ್ಪಾರವರ ರಾಮ ಮಂದಿರ ಬಳಿಯಿರುವ ಮನೆ ಮತ್ತು ಕಾಂಪ್ಲೆಕ್ಸ್ ನಲ್ಲಿ ಅಧಿಕಾರಿಗಳು ಕಡತ ಪರಿಶೀಲನೆ ಮಾಡುತ್ತಿದ್ದಾರೆ.

    ದೇವೆಂದ್ರಪ್ಪರವರು ಈ ಹಿಂದೆ ಹಲವು ಶಾಸಕರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ

    ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ

    ಬೆಂಗಳೂರು: ಕಿಚ್ಚ ಸುದೀಪ್‍ಗೆ ಬೈಕ್ ಹಾಗೂ ಕಾರುಗಳೆಂದರೆ ಸಿಕ್ಕಾಪಟ್ಟೆ ಕ್ರೇಜ್. ಈಗಾಗಲೇ ಸಾಕಷ್ಟು ಐಷರಾಮಿ ಬೈಕ್ ಹಾಗೂ ಕಾರುಗಳನ್ನು ಹೊಂದಿದ್ದು, ಈಗ ಬಿಎಂಡಬ್ಲ್ಯೂ ಆರ್ 1200 ಬೈಕನ್ನು ಖರೀದಿಸಿದ್ದಾರೆ.

    ಕಿಚ್ಚ ಸುದೀಪ್ ಸಾಕಷ್ಟು ಬೈಕ್ ಕಲೆಕ್ಷನ್‍ಗಳಿದ್ದು, ಅದರಲ್ಲಿ ಈ ಬಿಎಂಡಬ್ಲ್ಯೂ ಆರ್ 1200 ಕೂಡ ಸೇರಿದೆ. ಸುದೀಪ್ ತಮ್ಮ ಹೊಸ ಬೈಕಿನಲ್ಲಿ ಮಂಗಳವಾರ ರಾತ್ರಿ ರೈಡ್‍ಗೆ ಹೋಗಿದ್ದಾರೆ. ಅವರಿಗೆ ಜೊತೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆ.

    ಸುದೀಪ್ ಮಂಗಳವಾರ ರಾತ್ರಿ ತಾವೇ ಸ್ವತಃ ಶೋ ರೂಮಿಗೆ ಭೇಟಿ ನೀಡಿ ಹೊಸ ಬೈಕ್ ತೆಗೆದುಕೊಂಡು ಬಂದಿದ್ದಾರೆ. ಬೈಕ್ ಖರೀದಿಸಿದ ಖುಷಿಯಲ್ಲಿ ಸಿಲಿಕಾನ್ ಸಿಟಿ ರೌಂಡ್ ಹೊಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಬೈಕ್ ರೈಡ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.