Tag: Ricky Kej

  • ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ

    ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ

    ಬೆಂಗಳೂರು: ರಿಕ್ಕಿ ಕೇಜ್ ಮತ್ತು ಅಮೆರಿಕದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದೆ.

    ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದ ಡಿವೈನ್ ಟೈಡ್ಸ್ ಆಲ್ಬಂ ಎಂಟು ಹಾಡುಗಳನ್ನು ಒಳಗೊಂಡಿದ್ದು, ಇದನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ನಿರ್ಮಾಣ ಮಾಡಿತ್ತು ಮತ್ತು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಸಂಯೋಜಿಸಿದ್ದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ ಗ್ರಾಮಿ ಅವಾಡ್ರ್ಸ್ ಆಗಿದ್ದು, ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ಸಂತಸದಲ್ಲಿದ್ದರೆ, ರಿಕ್ಕಿ ಅವರು ಎರಡನೇ ಬಾರಿಗೆ ಗ್ರಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು. ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

  • ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಹೊಸ ಸಾಧನೆಯನ್ನು ಮಾಡಿದ್ದಾರೆ.

    ರಿಕ್ಕಿ ಕೇಜ್ ಮತ್ತು ಅಮೆರಿಕಾದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಉತ್ತಮ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದನ್ನೂ ಓದಿ: Adheera is back in action – ಕೆಜಿಎಫ್ 2ಗೆ ವಾಯ್ಸ್ ಕೊಟ್ಟ ಸಂಜಯ್ ದತ್

    ಎಂಟು ಹಾಡುಗಳನ್ನು ಒಳಗೊಂಡಿರುವ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ಹೊರತಂದಿದೆ. 2022ರ ಜನವರಿ 31ರಂದು ಪ್ರಶಸ್ತಿ ಘೋಷಣೆಯಾಗಲಿದೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು.