Tag: rickshaw puller

  • ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ನವದೆಹಲಿ: ಚಪಾತಿ ನೀಡಲು ನಿರಾಕರಿಸಿದಕ್ಕೆ ರಿಕ್ಷಾ ಚಾಲಕನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಮುನ್ನಾ(40) ಮೃತವ್ಯಕ್ತಿಯಾಗಿದ್ದು, ಆರೋಪಿಯನ್ನು ಚಿಂದಿ ಆಯುವ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 26ರ ಮಂಗಳವಾರ, ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಸ್ಥಳೀಯರು ವ್ಯಕ್ತಿಯನ್ನು ಆಟೋದಲ್ಲಿ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ.  ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ರಾತ್ರಿ 10 ಗಂಟೆ ಸುಮಾರಿಗೆ ವಿಷ್ಣು ಮಂದಿರ ಮಾರ್ಗದಲ್ಲಿ ಮುನ್ನಾ ಕುಳಿತಿದ್ದ. ಈ ವೇಳೆ ಹೋಟೆಲ್‍ನಿಂದ ತಂದಿದ್ದ ಚಪಾತಿಯನ್ನು ಮುನ್ನ ತಿನ್ನತೊಡಗಿದ. ನಂತರ ಅಲ್ಲಿಗೆ ಬಂದ ಕುಡುಕನೋರ್ವ ಚಪಾತಿ ತನಗೂ ನೀಡುವಂತೆ ಕೇಳಿದಾಗ ಮುನ್ನಾ ಚಪಾತಿ ಕೊಟ್ಟಿದ್ದಾನೆ. ನಂತರ ಆರೋಪಿ ಮತ್ತೊಂದು ಚಪಾತಿ ನೀಡುವಂತೆ ಕೇಳಿದ್ದಾನೆ. ಆಗ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಹರಿತವಾದ ಚಾಕುವನ್ನು ಹೊರತಂದು ಮುನ್ನಾನನ್ನು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದರು.

    ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು, ಕೊನೆಗೆ ರಸ್ತೆ ಬದಿಯ ಪಾರ್ಕ್ ಒಂದರಲ್ಲಿ ತಂಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜನರ ಕಣ್ಣೀರು ಒರೆಸುವುದು ಬಿಟ್ಟು ಗೃಹ ಸಚಿವರೇ ಕಣ್ಣೀರು ಹಾಕ್ತಿದ್ದಾರೆ – ರಾಜೀನಾಮೆ ಕೊಟ್ಟು ಹೊರಡಲಿ: ಶ್ರೀನಿವಾಸ್ ಬಿ.ವಿ

    Live Tv
    [brid partner=56869869 player=32851 video=960834 autoplay=true]

  • ಬಡ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!

    ಬಡ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!

    ಮಥುರಾ: ಉತ್ತರ ಪ್ರದೇಶದ ಬಡ ಸೈಕಲ್ ರಿಕ್ಷಾ ಚಾಲಕರೊಬ್ಬರಿಗೆ ಬರೋಬ್ಬರಿ 3 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿ ನೀಡಿರುವ ಅಚ್ಚರಿದಾಯಕ ಘಟನೆ ನಡೆದಿದೆ. ಈ ವಿಚಾರವಾಗಿ ಸೈಕಲ್ ರಿಕ್ಷಾ ಚಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಹೆಸರಿನ ಸೈಕಲ್ ರಿಕ್ಷಾ ಚಾಲಕ ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ದಂಪತಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈ ಕುರಿತು ಪ್ರತಾಪ್ ಸಿಂಗ್ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, `ಬ್ಯಾಂಕ್‍ನವರು ಐ.ಟಿ ರಿಟರ್ನ್ ದಾಖಲೆ ಕೇಳಿದ್ದರಿಂದ ಜನ್ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದ್ದೆ. ನಂತರ ಸಂಜಯ್ ಸಿಂಗ್ ಎಂಬವರು ಪಾನ್‍ಕಾರ್ಡ್‍ವೊಂದರ ನಕಲು ಪ್ರತಿಯನ್ನು ನೀಡಿದ್ದರು. ನಾನು ಅನಕ್ಷರಸ್ಥನಾದ್ದರಿಂದ ಮೂಲ ಪಾನ್‍ಕಾರ್ಡ್ ಹಾಗೂ ನನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯಲಿಲ್ಲ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಆದರೆ 3,47,54,896 ರೂ. ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ಆ ಬಗ್ಗೆ ವಿಚಾರಿಸಿದಾಗ ಯಾರೋ ನಿಮ್ಮನ್ನು ಯಾಮಾರಿಸಿ ಜಿಎಸ್‍ಟಿ ಸಂಖ್ಯೆ ಪಡೆದಿದ್ದಾರೆ. 2018-2019ರಲ್ಲಿ ಅವರ ವಹಿವಾಟು 43,44,36,201 ರೂ. ಆಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರಲ್ಲದೆ, ಎಫ್‍ಐಆರ್ ದಾಖಲಿಸುವಂತೆ ಸಲಹೆ ನೀಡಿದರು ಎಂದು ರಿಕ್ಷಾ ಚಾಲಕ ತನಗಾದ ವಂಚನೆ ಕುರಿತು ಹೇಳಿಕೊಂಡಿದ್ದಾರೆ.

    ದೂರು ಕುರಿತು ಪ್ರತಿಕ್ರಿಯಿಸಿರುವ ಠಾಣೆ ಅಧಿಕಾರಿ (ಎಸ್‍ಎಚ್‍ಒ) ಅಂಜು ಕುಮಾರ್, ಸದ್ಯ ಪ್ರತಾಪ್ ಸಿಂಗ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿಲ್ಲ. ಸಮಸ್ಯೆ ಕುರಿತು ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.