Tag: richur

  • ಮೂಗಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದವಳು ದುರ್ಮರಣ

    ಮೂಗಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದವಳು ದುರ್ಮರಣ

    ರಾಯಚೂರು: ಮೂಗು (Nose) ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹುಡುಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವತಿಯನ್ನು ರಾಯಚೂರು ನಗರದ ರಾಜೇಶ್ವರಿ (18) ಎಂದು ಗುರುತಿಸಲಾಗಿದೆ. ಸದ್ಯ ಹುಡುಗಿ ಕುಟುಂಬಸ್ಥರು ರಾಯಚೂರು ನಗರದ ರಿಮ್ಸ್ ಆಸ್ಪತ್ರೆ (Rims Hospital Raichur) ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪಿರುವುದಾಗಿ ಆರೋಪ ಮಾಡುತ್ತಿದ್ದಾರೆ.

    ರಿಮ್ಸ್ ಆಸ್ಪತ್ರೆ ಮುಂದೆ ಮೃತಳ ಕುಟುಂಬಸ್ಥರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಪತ್ರೆ ಮುಂದೆ ರಾಜೇಶ್ವರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    ರಾಜೇಶ್ವರಿ ರಿಮ್ಸ್ ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದು, ಜನವರಿ 10ಕ್ಕೆ ನರ್ಸಿಂಗ್ ಅಡ್ಮಿಷನ್ ಮಾಡಿಸಬೇಕಿದ್ದಳು. ಈ ಮಧ್ಯೆ ಮೂಗು ನೋವು ಕಾಣಿಸಿಕೊಂಡಿದ್ದರಿಂದ ರಿಮ್ಸ್ ನಲ್ಲಿ ಸೀಟ್ ಸಿಕ್ಕಿದ್ದಕ್ಕೆ ಇದೇ ಆಸ್ಪತ್ರೆಗೆ ದಾಖಲಾಗಿದ್ದಳು. ನಾಲ್ಕು ದಿನ ದಾಖಲು ಮಾಡಿಕೊಂಡ ವೈದ್ಯರು ಆಪರೇಷನ್ ಮಾಡಿದ್ದರು. ಆದರೆ ಇದೀಗ ಹುಡುಗಿ ಮೃತಪಟ್ಟಿದ್ದಾಳೆ.

    ಸದ್ಯ ರಾಜೇಶ್ವರಿ ಕುಟುಂಬಸ್ಥರು ವೈದ್ಯ ಡಾ.ರಾಜಶೇಖರ್ ಪಾಟೀಲ್ ಮೇಲೆ ನೇರ ಆರೋಪ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]