Tag: Richard Gere

  • ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ರೋಬ್ಬರಿ 16 ವರ್ಷಗಳ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ನಿರಾಳದ ನಿಟ್ಟುಸಿರಿಟ್ಟಿದ್ದಾರೆ. ಕಿಸ್ಸಿಂಗ್ (Kissing) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಅರ್ಜಿ ವಜಾ ಮಾಡಿದ್ದು, ಶಿಲ್ಪಾಗೆ ರಿಲೀಫ್ ಸಿಕ್ಕಿದೆ. ಈ ಮೂಲಕ 2007ರಲ್ಲಿ ನಡೆದ ಘಟನೆ ತಾರ್ಕಿಕ ಅಂತ್ಯಕಂಡಿದೆ.

    ರಾಜಸ್ಥಾನದಲ್ಲಿ (Rajasthan) 2007ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ (Richard Gere)  ಬಹಿರಂಗವಾಗಿಯೇ ವೇದಿಕೆಯ ಮೇಲೆ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಗದ್ದಲ ಸೃಷ್ಟಿ ಮಾಡಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಶ್ಲೀಲತೆ ಮೆರೆದಿದ್ದಾರೆ ಎನ್ನುವ ಕಾರಣಕ್ಕಾಗಿ ಶಿಲ್ಪಾ ಶೆಟ್ಟಿ ಮೇಲೆ ದೂರು (Case) ದಾಖಲಾಗಿತ್ತು. ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ

    ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಡುವ ದೃಶ್ಯ ಮತ್ತು ಫೋಟೋಗಳು ಕೋಲಾಹಲ ಸೃಷ್ಟಿಯಾಗಿದ್ದರಿಂದ ರಾಜಸ್ಥಾನದಲ್ಲಿ ಎರಡು ಹಾಗೂ ಗಜಿಯಾಬಾದ್ ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಮುಂಬೈ ಕೋರ್ಟಿಗೆ ವರ್ಗಾಯಿಸಲು 2017ರಲ್ಲಿ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಈ ಎಲ್ಲ ಪ್ರಕರಣಗಳನ್ನು ಕೈ ಬಿಡುವಂತೆ ಶಿಲ್ಪಾ ಶೆಟ್ಟಿ ಮನವಿ ಮಾಡಿಕೊಂಡಿದ್ದರು.

    ಕಳೆದ ವರ್ಷವಷ್ಟೇ  ಈ ಪ್ರಕರಣವನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ಅವರು  ರದ್ದು ಮಾಡಿದ್ದರು. ಇದನ್ನು ಸೆಷನ್ ಕೋರ್ಟ್ ನಲ್ಲಿ ಮತ್ತೆ ಪ್ರಶ್ನೆ ಮಾಡಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

  • ನಟಿ ಶಿಲ್ಪಾ ಶೆಟ್ಟಿಗೆ ನಟ ರಿಚರ್ಡ್ ಗೇರ್ ಮುತ್ತಿಟ್ಟ ಪ್ರಕರಣ : 15 ವರ್ಷವಾದರೂ ಇನ್ನೂ ಜೀವಂತ

    ನಟಿ ಶಿಲ್ಪಾ ಶೆಟ್ಟಿಗೆ ನಟ ರಿಚರ್ಡ್ ಗೇರ್ ಮುತ್ತಿಟ್ಟ ಪ್ರಕರಣ : 15 ವರ್ಷವಾದರೂ ಇನ್ನೂ ಜೀವಂತ

    ಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯ ಮೇಲೆ ಹಾಲಿವುಡ್ ನಟ ರಿಚರ್ಡ್ ಗೇರ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಒತ್ತಾಯದಿಂದ ಮುತ್ತಿಟ್ಟ ಪ್ರಕರಣ, 15 ವರ್ಷ ಕಳೆದರೂ ಇನ್ನೂ ಜೀವಂತವಾಗಿದೆ. ಈಗಾಗಲೇ ಈ ಪ್ರಕರಣ ಖುಲಾಸೆಗೊಂಡಿದ್ದರೂ, ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದಾರೆ ರಾಜಸ್ಥಾನದ ಅಲ್ವಾರ್ ಪೊಲೀಸರು.  ಹಾಗಾಗಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

    2007ರಲ್ಲಿ ರಾಜಸ್ಥಾನದ ಚಾರಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಒತ್ತಾಯ ಮಾಡಿ ಶಿಲ್ಪಾ ಶೆಟ್ಟಿಗೆ ಕಿಸ್ ಮಾಡಿದ್ದರು ರಿಚರ್ಡ್ ಗೇರ್. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸಾರ್ವಜನಿಕ ವೇದಿಕೆಯ ಮೇಲೆ ಹೀಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ದೂರು ಸಲ್ಲಿಕೆಯಾಗಿತ್ತು. ಶಿಲ್ಪಾ ಶೆಟ್ಟಿ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲವೆಂದು ಕೋರ್ಟ್ ಮೊರೆ ಹೋಗಿದ್ದರು. ಕಳೆದ ಜನವರಿಯಲ್ಲಿ ಮುಂಬೈನ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಶಿಲ್ಪಾ ಶೆಟ್ಟಿಯನ್ನು ಆರೋಪದಿಂದ ಮುಕ್ತಗೊಳಿಸಿತ್ತು. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನದ ಅಲ್ವಾರ್ ಪೊಲೀಸರು ಏಪ್ರಿಲ್ ನಲ್ಲಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಶಿಲ್ಪಾ ಶೆಟ್ಟಿ ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ತಾವು ಸಾರ್ವಜನಿಕ ವ್ಯಕ್ತಿಯಾಗಿ ಹೇಗೆ ವರ್ತಿಸಬೇಕು ಎಂಬ ಅರಿವಿದೆ. ಹಾಗಾಗಿ  ಮೇಲ್ಮನವಿ ವಜಾ ಗೊಳಿಸಿ ಎಂದು ತಮ್ಮ ವಕೀಲರ ಮೂಲಕ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]