Tag: Richa Dubey

  • ಪೊಲೀಸರ ಹತ್ಯೆಗೈದಿದ್ದಕ್ಕೆ ನಾನೇ ಆತನನ್ನು ಗುಂಡಿಕ್ಕಿ ಕೊಲ್ಲಬೇಕು ಅಂದ್ಕೊಂಡಿದ್ದೆ- ವಿಕಾಸ್ ದುಬೆ ಪತ್ನಿ

    ಪೊಲೀಸರ ಹತ್ಯೆಗೈದಿದ್ದಕ್ಕೆ ನಾನೇ ಆತನನ್ನು ಗುಂಡಿಕ್ಕಿ ಕೊಲ್ಲಬೇಕು ಅಂದ್ಕೊಂಡಿದ್ದೆ- ವಿಕಾಸ್ ದುಬೆ ಪತ್ನಿ

    – 1 ವಾರ ಶಿಥಿಲಗೊಂಡ ಕಟ್ಟಡದಲ್ಲಿ ಜೀವನ ನಡೆಸಿದ್ದೇನೆ
    – ದುಬೆಗೆ ಒಂದು ವಿಚಿತ್ರ ಖಾಯಿಲೆ ಇತ್ತು

    ಲಕ್ನೋ: ಪೊಲೀಸರನ್ನು ಅಮಾನುಷವಾಗಿ ಕೊಂದಿದ್ದಕ್ಕೆ ನಾನೇ ನನ್ನ ಪತಿ ವಿಕಾಸ್ ದುಬೆಯನ್ನು ಕೊಲ್ಲಬೇಕು ಎಂದುಕೊಂಡಿದ್ದೆ ಎಂದು ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಪತ್ನಿ ರಿಚಾ ದುಬೆ ಹೇಳಿದ್ದಾರೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ಬಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ದುಬೆ ಮತ್ತು ಅವನ ಸಹಚರರು ಗುಂಡಿನ ಮಳೆ ಸುರಿಸಿದ್ದರು. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ಈಗ ಈ ವಿಚಾರದ ಬಗ್ಗೆ ಮೊದಲ ಬಾರಿ ಮಾಧ್ಯಮಗಳ ಜೊತೆ ಮಾತನಾಡಿರುವ ವಿಕಾಸ್ ದುಬೆ ಪತ್ನಿ ರಿಚಾ, ಆತ ಮಾಡಿದಕ್ಕೆ ಕ್ಷಮೆಯೇ ಇಲ್ಲ. ಎಂಟು ಮಂದಿ ಅಮಾಯಕ ಪೊಲೀಸರ ಜೀವನ ಮತ್ತು ಕುಟುಂಬವನ್ನು ನಾಶ ಮಾಡಿದ್ದಾನೆ. ನಮಗೆ ಸಮಾಜದ ಮುಂದೆ ಮುಖ ತೋರಿಸದ ರೀತಿ ಮಾಡಿ ಹೋಗಿದ್ದಾನೆ. ಈ ಎಲ್ಲವನ್ನು ನೋಡುತ್ತಿದ್ದರೆ, ನಾನೇ ಆತನನ್ನು ಶೂಟ್ ಮಾಡಿ ಕೊಂದು ಬೇಡಬೇಕು ಎಂದು ಕೊಂಡಿದ್ದೆ ಎಂದು ಹೇಳಿದ್ದಾರೆ.

    ಅಂದು ಘಟನೆ ನಡೆದ ಜುಲೈ 2ರ ರಾತ್ರಿ ಸುಮಾರು 2 ಗಂಟೆಗೆ ನನಗೆ ಫೋನ್ ಮಾಡಿದ ದುಬೆ ನೀನು ಬಿಕ್ರು ಗ್ರಾಮವನ್ನು ಬಿಟ್ಟು ಓಡಿಹೋಗು ಎಂದು ಹೇಳಿದ್ದರು. ನಮ್ಮ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ನೀನು ಮಕ್ಕಳನ್ನು ಕರೆದುಕೊಂಡು ಇಲ್ಲಿಂದ ಹೋಗು ಎಂದು ತಿಳಿಸಿದರು. ನಾನು ಆಗ ಈ ಎಲ್ಲ ವಿಚಾರಗಳಿಂದ ನನಗೆ ಬೇಸರವಾಗಿದೆ ಎಂದು ಹೇಳಿದೆ. ಆತ ನನ್ನ ಮಾತನನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನನಗೆ ಬೈದು ಕರೆಯನ್ನು ಕಟ್ ಮಾಡಿದ ಎಂದು ರಿಚಾ ತಿಳಿಸಿದ್ದಾರೆ.

    ನನಗೆ ಆತ ಮಾಡುವ ವ್ಯವಹಾರದ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಜೊತೆಗೆ ಆತ ಯಾರ ಸಂಪರ್ಕದಲ್ಲಿ ಇದ್ದ ಎಂಬುದು ನನಗೆ ತಿಳಿದಿಲ್ಲ. ಆತ ಹೇಳಿದಾಗ ಮಾತ್ರ ನಾನು ಮಕ್ಕಳನ್ನು ಕರೆದುಕೊಂಡು ಬಿಕ್ರು ಗ್ರಾಮಕ್ಕೆ ಅವನನ್ನು ನೋಡಲು ಬರುತ್ತಿದ್ದೆ. ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಮಗನೊಂದಿಗೆ ಒಂದು ವಾರಗಳ ಕಾಲ ಶಿಥಿಲಗೊಂಡ ಕಟ್ಟದ ಒಳಗೆ ಜೀವನ ಮಾಡಿದ್ದೇನೆ. ಆಗ ನನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸಿದ್ದೆ. ನನಗೆ ಗೊತ್ತಿತ್ತು ನನ್ನ ಕುಟುಂಬವಾಗಲಿ ನನ್ನ ಅತ್ತೆಯಾಗಲಿ ನನ್ನ ಬೆಂಬಲಕ್ಕೆ ಬರುವುದಿಲ್ಲವೆಂದು ಎಂದು ರಿಚಾ ಹೇಳಿದ್ದಾಳೆ.

    ಇದೇ ವೇಳೆ ವಿಕಾಸ್ ದುಬೆಗೆ ಇದ್ದ ಒಂದು ವಿಚಿತ್ರ ಖಾಯಿಲೆಯ ಬಗ್ಗೆ ಹೇಳಿರುವ ರಿಚಾ, ಕಳೆದ ಕೆಲ ವರ್ಷಗಳ ಹಿಂದೆ ಆತ ಹೋಗುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಆಗ ಆತನ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಅವನ ಮೆದುಳಿನಲ್ಲಿ ಗಾಳಿ ಗುಳ್ಳೆಗಳು ಆಗಿದ್ದವು. ಇದರಿಂದ ಆತನಿಗೆ ತನ್ನ ಕೋಪವನ್ನು ನಿಯಂತ್ರಣ ಮಾಡಲು ಆಗುತ್ತಿರಲಿಲ್ಲ. ಕಳೆದ ಮೂರು ನಾಲ್ಕು ತಿಂಗಳಿನಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದ. ಆದ್ದರಿಂದ ಹೀಗೆ ಆಗಿದೆ ಎಂದು ರಿಚಾ ಹೇಳಿದ್ದಾರೆ.

    ದುಬೆ ಎನ್‍ಕೌಂಟರ್:
    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.