Tag: richa chadha

  • ಹೊಟ್ಟೆ ಮೇಲೆ ರೇಖಾ ಚಿತ್ರ ಬಿಡಿಸಿಕೊಂಡ ಗರ್ಭಿಣಿ ರಿಚಾ ಚಡ್ಡಾ!

    ಹೊಟ್ಟೆ ಮೇಲೆ ರೇಖಾ ಚಿತ್ರ ಬಿಡಿಸಿಕೊಂಡ ಗರ್ಭಿಣಿ ರಿಚಾ ಚಡ್ಡಾ!

    ನ್ನ ಬೋಲ್ಡ್ ಅವತಾರದಿಂದ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ನಟಿ ರಿಚಾ ಚಡ್ಡಾ. ಇತ್ತೀಚೆಗಷ್ಟೇ ‘ಹೀರಾಮಂಡಿ’ (Hiramandi) ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಟಿ. ಇದೀಗ ರಿಚಾ ಚಡ್ಡಾ (Richa Chadha) ತಾನು ಮಗುವಿಗೆ ಜನ್ಮ ನೀಡೋದ್ದಕ್ಕೂ ಮುನ್ನ ತೆಗೆಸಿಕೊಂಡ ವಿಭಿನ್ನ ಬೇಬಿ ಬಂಪ್ (Baby Bump) ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

    ಇತ್ತೀಚೆಗೆ ಗರ್ಭಿಣಿ ನಟಿಯರು ತಮ್ಮದೇ ಆದ ಥೀಮ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಕೆಲ ನಟಿಯರು ಇನ್ನೂ ಮುಂದಕ್ಕೆ ಹೋಗಿ ಕ್ರಿಯೇಟಿವ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ಇದೀಗ ರಿಚಾ ಚಡ್ಡಾ ಇಂಥದ್ದೇ ಒಂದು ವಿಭಿನ್ನ ಪ್ರಯೋಗ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಹುಟ್ಟಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ದಾಗ ರಿಚಾ ಚಡ್ಡಾ ಹೊಟ್ಟೆ ಮೇಲೆ ಚಿತ್ತಾರ ಬಿಡಿಸಿಕೊಂಡು ಬೇಬಿ ಬಂಪ್ ಪ್ರದರ್ಶಿಸಿದ್ದಾರೆ.

     

    View this post on Instagram

     

    A post shared by Richa Chadha (@therichachadha)

    ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಿಚಾ ಚಡ್ಡಾ 9 ತಿಂಗಳ ಗರ್ಭಿಣಿಯಾಗಿದ್ದಾಗ ತಮ್ಮ ಎದೆಯಿಂದ ಹೊಟ್ಟೆಯವರೆಗೆ ವಿಭಿನ್ನ ಚಿತ್ರ ಬಿಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಿಚಾ ಚಡ್ಡಾ ತಾವು ಬಿಡಿಸಿಕೊಂಡ ಚಿತ್ರದ ವಿಶೇಷತೆಗಳನ್ನ ಹೇಳಿಕೊಂಡಿದ್ದಾರೆ. ಈ ರೇಖಾ ಚಿತ್ರವು ದೈವಿಕ ಸ್ತ್ರೀಲಿಂಗದ ಸಂಕೇತದ ಥೀಮ್‌ನಿಂದ ಚಿತ್ರಿಸಲಾಗಿದೆ ಎಂದಿದ್ದಾರೆ. ಜೊತೆಗೆ ತನ್ನ ಎಳೆ ಮಗುವಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಹ್ಯಾಪಿ ಡಾಟರ್ಸ್‌ ಡೇ ಮಗಳೇ ಒಂದಿನ ನಾವಿಬ್ಬರೂ ಒಟ್ಟಿಗೆ ಕುಳಿತು ಈ ಚಿತ್ರವನ್ನ ನೋಡುತ್ತೇವೆ ಎಂದು ಗೊತ್ತಿತ್ತು. ಆಗ ನೀನು ಹೊಟ್ಟೆಯೊಳಗೆ ಪೋಸ್ ನೀಡುತ್ತಿದ್ದರೆ ನಾನು ಹೊರಗಿನಿಂದ ಪ್ರಜ್ವಲಿಸುತ್ತಿದ್ದೆ, ಇದನ್ನು ಹೊರಗಿನವರು ನೋಡಬಹುದು ಆದರೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿ ಕಾಮೆಂಟ್ಸ್ ಆಫ್ ಮಾಡಿದ್ದಾರೆ.

    ಅಂದಹಾಗೆ, ರಿಚಾ ಚಡ್ಡಾ 2022ರಲ್ಲಿ ಅಲಿ ಫಜಲ್ ಎಂಬುವರನ್ನ ಮದುವೆಯಾಗಿದರು. ತನ್ನ ನೇರಮಾತು, ಬೋಲ್ಡ್ ಅಭಿನಯದಿಂದ ರಿಚಾ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಇದೀಗ ವಿಭಿನ್ನವಾಗಿ ಬೇಬಿ ಬಂಪ್ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

  • `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    ಹೈದರಾಬಾದ್: `ಗಾಲ್ವಾನ್ ಸೇಸ್ ಹಾಯ್’ ಎಂದು ಟ್ವೀಟ್ (Galwan Tweet) ಮಾಡುವ ಮೂಲಕ ವಿವಾದ ಸೃಷ್ಟಿಸಿದ ರಿಚಾ ಚಡ್ಡಾ (Richa Chadha) ಅವರಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಬೆಂಬಲ ಸೂಚಿಸಿದ್ದಾರೆ.

    ರಿಚಾ ಹೇಳಿಕೆಗೆ ನಟ ಅಕ್ಷಯ ಕುಮಾರ್ (Akshay Kumar) ಆಕ್ರೋಶ ವ್ಯಕ್ತಪಡಿಸಿದಕ್ಕೆ ಪ್ರಕಾಶ್ ರಾಜ್ ಅವರು ಪ್ರತಿಕ್ರಿಯೆ ನೀಡಿದ್ದು, `ಅಕ್ಷಯ ಕುಮಾರ್… ನಿಮ್ಮಿಂದ ಇದನ್ನು ಅಪೇಕ್ಷಿಸಿರಲಿಲ್ಲ. ರಿಚಾ ಚಡ್ಡಾ ಹೇಳಿದ್ದು ದೇಶಕ್ಕೆ ನಿಮಗಿಂತ ಹೆಚ್ಚು ನಿಮಗಿಂತ ಹೆಚ್ಚು ಪ್ರಸ್ತುತ ಸರ್’ ಎನ್ನುವ ಮೂಲಕ ಕೆನಡಾ ಪ್ರಜೆ ಆಗಿರುವ ಅಕ್ಷಯ್ ಕಾಲೆಳೆದಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಮತ್ತೊಂದು ಕಡೆ `ನಾವು ನಿಮ್ಮೊಂದಿಗಿದ್ದೇವೆ ರಿಚಾ ಚಡ್ಡಾ (Richa Chadha), ನೀವು ಹೇಳಲು ಬಯಸಿದ್ದು ನಮಗೆ ಅರ್ಥವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಖತ್ ಟೇಸ್ಟಿಯಾದ ಚಿಕನ್ ಗೀ ರೋಸ್ಟ್ ಮಾಡಿ ನೋಡಿದ್ದೀರಾ?

    `ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ’ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಧ್ಯಪ್ರದೇಶದ ಗೃಹ ಸಚಿವರು ರಿಚಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ನಿಮ್ಮ ವಿರುದ್ಧ ದೂರುಗಳು ಕೇಳಿಬಂದಿದೆ. ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಶನಿವಾರ ಹೇಳಿದ್ದಾರೆ. ಈ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಬೆಂಬಲ ಚಡ್ಡಾ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಭೋಪಾಲ್: `ಗಾಲ್ವಾನ್ ಹಾಯ್’ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ (Indian Army) ಅಪಮಾನ ಮಾಡಿದ್ದಾರೆಂದು ಟೀಕೆಗೆ ಗುರಿಯಾಗಿರುವ ನಟಿ ರಿಚಾ ಚಡ್ಡಾಗೆ (Richa Chadha) ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಚಳಿ ಬಿಡಿಸಿದ್ದಾರೆ. ಅಲ್ಲದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ಇರೋದನ್ನ ಅರ್ಥ ಮಾಡಿಕೊಳ್ಳಬೇಕು. ಇದು ಸೇನೆಯೇ ಹೊರತು ಸಿನಿಮಾವಲ್ಲ ಎಂದು ನಟಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (General Dwivedi) ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಿಶ್ರಾ ಅವರು ರಿಚಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಚಡ್ಡಾ ಹೇಳಿಕೆಯಿಂದ ಹಲವು ದೇಶಭಕ್ತರಿಗೆ ನೋವಾಗಿದೆ. ನಿಮ್ಮ ವಿರುದ್ಧ ದೂರುಗಳು ಕೇಳಿಬಂದಿದೆ. ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ರಿಚಾ ಜೀ ಅದು ಸಿನಿಮಾ (Cinema) ಅಲ್ಲ, ಸೈನ್ಯ. ಕೆಲವೊಮ್ಮೆ ಮೈನಸ್ 30 ರಿಂದ 45 ಡಿಗ್ರಿ ಸೆಲ್ಸಿಯಸ್ ಇರುತ್ತೆ. ಇನ್ನೂಮ್ಮೆ 45 ಡಿಗ್ರಿ ತಾಪಮಾನ ಇರುತ್ತೆ, ನಿಮಗೆ ಸಾಮರ್ಥ್ಯವಿದ್ದರೆ ಅಲ್ಲಿ ಉಳಿಯಲು ಪ್ರಯತ್ನಿಸಿ. ಆಗ ನಿಮಗೆ ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ತಿಳಿಯುತ್ತದೆ. ಸೈನಿಕರ ಶ್ರಮ ಮತ್ತು ತ್ಯಾಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಚಾ ಚಡ್ಡಾ (Richa chadha) ಮತ್ತು ಅಲಿ ಫಜಲ್ (Ali Fazal), ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತೆರೆಮರೆಯಲ್ಲಿ ಮದುವೆಗಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಜೋಡಿ ಮದುವೆ ಆಗುವುದಾಗಿ ಅಧಿಕೃತವಾಗಿ ಹೇಳಿದ್ದರು. ಆದರೆ ಕೊರೊನಾ ಎಂಬ ಮಹಾಮಾರಿಯಿಂದ ಮದುವೆ ಕೂಡ ಮುಂದೂಡಲಾಗಿತ್ತು. ಇದೀಗ ಸೂಕ್ತ ಸಮಯ ಎಂದೆನಿಸಿ, ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ ಅಂತ್ಯದಲ್ಲಿ ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದನ್ನೂ ಓದಿ:ತನ್ನ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಪಾಪರಾಜಿಗಳ ಮೇಲೆ ಉರ್ಫಿ ಖಡಕ್‌ ಕ್ಲಾಸ್

    ಇಬ್ಬರು ಕಲಾವಿದರಾಗಿರುವ ಕಾರಣ, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರೆ. ಸದ್ಯ ಮದುವೆಯ ತಯಾರಿಯಲ್ಲಿ ರಿಚಾ ಮತ್ತು ಅಲಿ ಫಜಲ್ ಬ್ಯುಸಿಯಾಗಿದ್ದಾರೆ. 5 ದಿನಗಳು ಮದುವೆಯ ಶಾಸ್ತ್ರಗಳು ನಡೆಯಲಿದೆ. ಮದುವೆ ಸಮಾರಂಭ, ಎರಡು ಅದ್ದೂರಿ ಆರತಕ್ಷತೆ, ಸಂಗೀತ, ಮತ್ತು ಮಹೆಂದಿ ಕಾರ್ಯಕ್ರಮ ಮುಂಬೈನಲ್ಲಿ ಜರುಗಲಿದೆ.

    Live Tv
    [brid partner=56869869 player=32851 video=960834 autoplay=true]