Tag: Richa Chadda

  • ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದ ರಿಚಾ ಚಡ್ಡಾ (Richa Chadda) ಅವರ ಬೇಬಿ ಬಂಪ್ (Baby Bump) ಗೆ ಮುತ್ತಿಕ್ಕುವ ಮೂಲಕ ಟ್ರೋಲ್ ಆಗಿದ್ದಾರೆ ಹಿರಿಯ ನಟಿ ರೇಖಾ ಚಡ್ಡಾ. ರಿಚಾ ನಟನೆಯ ಹೀರಾಮಂಡಿ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ರೇಖಾ (Rekha) ಅವರು, ರಿಚಾ ನಟನೆ ಕಂಡು ತಬ್ಬಿಕೊಂಡರು. ನಂತರ ರಿಚಾರ ಬೇಬಿ ಬಂಪ್ ಗೆ ಕಿಸ್ ಮಾಡಿದ್ದಾರೆ.

    ಈ ಹಿಂದೆ ರಿಚಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಾಯಿಯ ಮಹತ್ವವನ್ನೂ ತಿಳಿಸಿದ್ದರು.

    ‘1 + 1= 3’ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಮತ್ತು ಅಲಿ ಫಜಲ್ ದಂಪತಿ ಪೋಷಕರಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ‘ಒಂದು ಚಿಕ್ಕ ಹಾರ್ಟ್‌ಬೀಟ್  ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ’ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್ ಹಂಚಿಕೊಂಡಿದ್ದರು. ರಿಚಾ ದಂಪತಿಗೆ ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ ಸೇರಿದಂತೆ ಅನೇಕರು ಶುಭಹಾರೈಸಿದ್ದರು.

     

    ಸೆಪ್ಟೆಂಬರ್ 23ರಂದು ರಿಚಾ ಮತ್ತು ಅಲಿ ಫಜಲ್ (Ali Fazal) ಅದ್ಧೂರಿಯಾಗಿ ಮದುವೆಯಾದರು. ಬಳಿಕ ಮುಂಬೈ, ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದರು. ಅಂದಹಾಗೆ, ಸಿನಿಮಾ ಸೆಟ್‌ವೊಂದರಲ್ಲಿ ರಿಚಾ ಮತ್ತು ಅಲಿ ಅವರಿಗೆ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 10 ವರ್ಷಗಳ ಡೇಟಿಂಗ್ ನಂತರ 2022ರಲ್ಲಿ ಈ ಜೋಡಿ ಮದುವೆಯಾದರು.

  • ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಬಾಲಿವುಡ್ ನಟಿ ರಿಚಾ ಚಡ್ಡಾ ‘ಓಯೆ ಲಕ್ಕಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ಬಿ’ಟೌನ್‌ನಲ್ಲಿ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಈ ನಟಿ ಹಾಟ್ ಫೊಟೋಶೂಟ್ ಮಾಡಿಸಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

    ಹಾಸ್ಯ ಪ್ರಧಾನ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಈ ನಟಿ ತಮ್ಮ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಈ ನಟಿ ತೂಕ ಕಡಿಮೆ ಮಾಡಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದು, ಈಗ ಮತ್ತೆ ಹಾಟ್ ಫೋಟೋಶೂಟ್ ಮಾಡಿಸುವ ಮೂಲಕ ವೈರಲ್ ಆಗಿದ್ದಾರೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?

     

    View this post on Instagram

     

    A post shared by Richa Chadha (@therichachadha)

    ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ರಿಚಾ, ಕಪ್ಪು ಬಣ್ಣದ ಟ್ರೆಂಡಿಂಗ್ ಗೌ‌ನ್‌ನಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ. ಫೋಟೋ ಶೇರ್ ಮಾಡಿದ ರಿಚಾ, ನಾನು ಫೋಟೋಶೂಟ್ ಮಾಡುವುದನ್ನು ಇಷ್ಟಪಡುತ್ತೇನೆ. ಫೋಟೋಗ್ರಫಿ ನನ್ನ ಸ್ನೇಹ. ಈ ಶೂಟ್ ಮಾಡುವಾಗ ನಾನು ಪಾತ್ರವನ್ನು ಮಾಡುತ್ತಿದ್ದೇನೆ ಅನಿಸಿತ್ತು. ಈ ಶೂಟ್ ನಾನು ಮಾಡಿರುವ ಪಾತ್ರಗಳಿಗಿಂತ ಭಿನ್ನವಾಗಿದೆ. ಇದು ಇನ್ನೂ ಆಸಕ್ತಿದಾಯಕವಾಗಿದೆ. ಈ ಫೋಟೋನಲ್ಲಿ ಭಿನ್ನವಾಗಿ ಕಾಣಿಸುತ್ತಿದ್ದೇನೆ. ಅದನ್ನು ಪೋಸ್ಟ್ ಮಾಡುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಫೋಟೋ ಜೊತೆಗೆ ಈ ನಟಿ, ಆರೋಗ್ಯಕರ ತೂಕ ಕಡಿಮೆ ಎಂದರೆ ನೀವು ಸ್ನಾಯುಗಳನ್ನು ಕಳೆದುಕೊಳ್ಳುವುದಿಲ್ಲ. ನನ್ನ ವಿಷಯದಲ್ಲಿ ಗ್ಲುಟಿಯಸ್ ಮ್ಯಾಕ್ಸಿಮಸ್ ಹಾಗೇ ಇದೆ ಎಂದು ಬರೆದು ತನಗೆ ಟ್ರ್ಯಾನ್ ಮಾಡಿದ ಕೋಚರ್‌ಗಳನ್ನು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ 

    ಪ್ರಸ್ತುತ ಈ ನಟಿ ಮುಂಬೈನಲ್ಲಿ ‘ಫುಕ್ರೆ 3’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ರಿಚಾ ಅವರು ಕೊನೆಯದಾಗಿ ಬಾರಿ ‘ಭೋಲಿ ಪಂಜಾಬನ್’ ಸಿನಿಮಾ ಮೂಲಕ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಿಚಾ ಅಭಿನಯ ಭಿನ್ನವಾಗಿದ್ದು, ಧೈರ್ಯಶಾಲಿ ದರೋಡೆಕೋರಳ ಪಾತ್ರದಲ್ಲಿ ಅಭಿನಯಿಸಿ ಬಿ’ಟೌನ್ನಲ್ಲಿ ಸುದ್ದಿಯಾಗಿದ್ದರು.

  • ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ

    ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ

    ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಟವಾಡುವ ಶೈಲಿಗೆ ಹಲವು ಹುಡುಗಿಯರು ಬೌಲ್ಡ್ ಆಗಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಕೂಡ ತಮ್ಮ ಮೊದಲ ಲವ್ ದ್ರಾವಿಡ್ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ‘ದಿ ವಾಲ್’ ಎಂದು ಗುರುತಿಸಿಕೊಂಡಿರುವ ದ್ರಾವಿಡ್ 90ರ ದಶಕದಲ್ಲಿ ಅವರು ಅನೇಕ ದೇಸಿ ಹುಡುಗಿಯರ ಹೃದಯವನ್ನು ಕದ್ದಿದ್ದರು. ಚಡ್ಡಾ ಅವರು ತಮ್ಮ ಮುಂಬರುವ ಕ್ರಿಕೆಟ್ ಗೆ ಸಂಬಂಧಿಸಿದ ‘ಇನ್ಸೈಡ್ ಎಡ್ಜ್’ ಸಿನಿಮಾದ ಪ್ರಮೋಷನ್ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಹುಲ್ ದ್ರಾವಿಡ್ ತನ್ನ ಮೊದಲ ಪ್ರೀತಿ ಎಂದು ಬಹಿರಂಗಪಡಿಸಿದ್ದಾರೆ. ತಾನು ಎಂದಿಗೂ ಕ್ರಿಕೆಟ್‍ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ಆದರೆ ಟೆಲಿವಿಷನ್‍ನಲ್ಲಿ ಕ್ರಿಕೆಟ್ ಪಂದ್ಯವನ್ನು ಪ್ರಸಾರ ಮಾಡಿದಾಗ ನಾನು ಟಿವಿ ಅಂಟಿಕೊಂಡು ಕುಳಿತುಕೊಳ್ಳುತ್ತಿದ್ದೆ. ಅದಕ್ಕೆ ಕಾರಣ ರಾಹುಲ್ ದ್ರಾವಿಡ್ ಎಂದು ಹೇಳಿಕೊಂಡರು. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ

    ನಾನು ಚಿಕ್ಕ ವಯಸ್ಸಿನಿಂದ ಕ್ರಿಕೆಟ್‍ನ ದೊಡ್ಡ ಅಭಿಮಾನಿಯಾಗಿರಲಿಲ್ಲ. ನನ್ನ ಸಹೋದರ ಕ್ರಿಕೆಟ್ ಆಡುತ್ತಿದ್ದರು. ನಾನು ಟಿವಿಯಲ್ಲಿ ಕ್ರಿಕೆಟ್ ಅನ್ನು ನೋಡುತ್ತಿದ್ದೆ. ಆದರೆ ದ್ರಾವಿಡ್ ಅವರ ಆಟವನ್ನು ಇಷ್ಟಪಟ್ಟು ನೋಡುತ್ತಿದ್ದೆ. ಅದಕ್ಕೆ ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ (ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್) ಎಂದು ಹೇಳಿದ್ದಾರೆ.

    ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿಯು ಅಂತ್ಯಗೊಂಡಿದೆ. ಈಗ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ದ್ರಾವಿಡ್ ಕೋಚ್ ಆಗಿರುವ ಹಿನ್ನೆಲೆಯಲ್ಲಿ ನಾನು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ರಿಚಾ ಚಡ್ಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು