Tag: Rhea Chakraborty

  • ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

    ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

    ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ಮೊದಲ ಬಾರಿಗೆ ಮದುವೆ ಲೈಫ್ (Wedding Life) ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಮಾಡಲು ಕೋರ್ಟ್ ಅನುಮತಿ ಬೇಕಿಲ್ಲ ಎಂದು ರಿಯಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಓಪನ್ ಆಗಿ ಮದುವೆ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

    Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ರಿಯಾ ಲವ್, ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ವಯಸ್ಸಿಗೆ ಮದುವೆ ಆಗಬೇಕು ಅಂತ ಹೇಳಲು ಆಗಲ್ಲ. ಮದುವೆಗೆ ಒಬ್ಬೊಬ್ಬರಿಗೆ ಒಂದೊಂದು ವಯಸ್ಸು ಸೂಕ್ತ ಎನಿಸಿಸುತ್ತದೆ. ಮದುವೆ ವಿಷಯದಲ್ಲಿ ಹೆಣ್ಣು ಏನು ಎದುರಿಸುತ್ತಾಳೋ ಅದನ್ನು ಪುರುಷ ಎದುರಿಸಲಾರ. ಮದುವೆ ಎಂದಾಗ ಒಂದಷ್ಟು ಒತ್ತಡ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಬ್ಯಾಚುಲರ್ ಪಾರ್ಟಿ ಸಂಭ್ರಮದಲ್ಲಿ ‘ಪೆಟ್ಟಾ’ ನಟಿ ಮೇಘಾ ಆಕಾಶ್

    ಎಲ್ಲ ವಯಸ್ಸಿನಲ್ಲಿಯೂ ಮಗು ಮಾಡಿಕೊಳ್ಳಲಾಗೋದಿಲ್ಲ. ಮಗು ಮಾಡಿಕೊಳ್ಳಲು ಅಂಡಾಣು ಸಂಗ್ರಹ ಕೂಡ ಆಯ್ಕೆ ಮಾಡಿಕೊಳ್ಳಬಹುದು. ನನ್ನ ಅನೇಕ ಸ್ನೇಹಿತರು 20 ಮತ್ತು 30ನೇ ವಯಸ್ಸಿಗೆ ಮದುವೆಯಾಗಿದ್ದಾರೆ. ಅವರು 40ನೇ ವಯಸ್ಸಿಗೆ ಮಗು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು 20ನೇ ವಯಸ್ಸಿಗೆ ಮಕ್ಕಳನ್ನು ಮಾಡಿಕೊಂಡಿದ್ದಾರೆ. ಆದರೆ ತಡವಾಗಿ ಮದುವೆ ಆಗುತ್ತಿರೋದು ಹೆಚ್ಚಾಗ್ತಿದೆ ಎಂದು ರಿಯಾ ಹೇಳಿದ್ದಾರೆ.

    32ನೇ ವಯಸ್ಸಿನಲ್ಲಿರುವ ನಾನು 40ನೇ ವಯಸ್ಸಿಗೆ ಮದುವೆ ಆಗೋದಕ್ಕೆ ಬಯಸುವೆ. ನಾನು ಇನ್ನೂ ಮದುವೆ ಆಗೋಕೆ ರೆಡಿ ಇಲ್ಲ. ನನಗೆ ವೃತ್ತಿ ಜೀವನದ ಕಡೆಗೆ ಗಮನ ಕೊಡಬೇಕಿದೆ. ಮದುವೆ ವಿಚಾರದಲ್ಲಿ ಕಾನೂನು ಮಧ್ಯೆ ಬರೋದು ನನಗೆ ಇಷ್ಟ ಇಲ್ಲ. ನಾನು ಪಾಸ್‌ಪೋರ್ಟ್ ಪಡೆದುಕೊಳ್ಳಲು ಕೋರ್ಟ್‌ಗೆ ಹೋಗುತ್ತೇನೆ. ಆದರೆ ಒಬ್ಬರನ್ನು ಪ್ರೀತಿ ಮಾಡಲು ಅನುಮತಿ ಕೊಡಿ ಅಂತ ಕೋರ್ಟ್ ಬಳಿ ಕೇಳೋದಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.

  • ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಬೆಂಗಳೂರು ಮೂಲದ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೆಸರಿನ ಜೊತೆ ಬಾಲಿವುಡ್ ನಟಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಖ್ಯಾತ ನಟ ದಿ.ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ (Rhea Chakraborty) ಜೊತೆ ನಿಖಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಧಿಕೃತವಾಗಿ ಈ ಕುರಿತು ಇಬ್ಬರೂ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿದ್ದರೂ, ಅದು ನಿಜ ಎಂದು ಹೇಳಲಾಗುತ್ತಿದೆ.

    ಮಾನುಷಿ ಚಿಲ್ಲರ್ ಜೊತೆ ಬ್ರೇಕ್ ಅಪ್?

    ನಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಬಿಟೌನ್‌ನಲ್ಲಿ ಈ ಹಿಂದೆ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡಿತ್ತು. ಇದೇ  Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು.

    ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬಂದವು. ಇದರ ಮಧ್ಯೆ ಮಾನುಷಿ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.

    ಅದಕ್ಕೆ ಪೂರಕ ಎನ್ನುವಂತೆ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ನೋಡಿದರೆ ಮತ್ತೋರ್ವ ಹುಡುಗಿಯ ಹೆಸರು ಕಾಮತ್ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ.

     

    ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಶಾಂತ್ ಸಾವಿನ ಬಳಿಕ ನನಗೆ ‘ಗೋಲ್ಡ್ ಡಿಗ್ಗರ್’ ಎಂದರು : ಕಣ್ಣೀರಿಟ್ಟ ರಿಯಾ

    ಸುಶಾಂತ್ ಸಾವಿನ ಬಳಿಕ ನನಗೆ ‘ಗೋಲ್ಡ್ ಡಿಗ್ಗರ್’ ಎಂದರು : ಕಣ್ಣೀರಿಟ್ಟ ರಿಯಾ

    ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ (Rhea Chakraborty) ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಸುಶಾಂತ್ ಸಿಂಗ್ ನನ್ನು ಪ್ರೀತಿಸುತ್ತಿದ್ದರು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರು ಪಡಬಾರದ ಕಷ್ಟ ಪಟ್ಟರಂತೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಹಲವಾರು ವಿಚಾರಗಳನ್ನು ರಿಯಾ ಹಂಚಿಕೊಂಡಿದ್ದಾರೆ.

    ಮೂರು ವರ್ಷಗಳ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ತಮ್ಮದೇ ಅಪಾರ್ಟ್ ಮೆಂಟ್ ವೊಂದರಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಈ ಸಾವಿಗೆ ಪ್ರೇಮದ ವೈಫಲ್ಯವೇ ಕಾರಣ ಎಂದು ಹೇಳಲಾಗಿತ್ತು. ಸುಶಾಂತ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದ ರಿಯಾ ಕೈಕೊಟ್ಟು ಓಡಿ ಹೋದರು. ಈ ಸಂಕಟವನ್ನು ತಾಳಲಾರದೇ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಸುಶಾಂತ್ ಸಾವಿಗೆ ರಿಯಾ ಕಾರಣ ಎಂದು ಆರೋಪಿಸಲಾಯಿತು. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಸ್ವತಃ ಸುಶಾಂತ್ ಪೋಷಕರು ರಿಯಾ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಜೈಲಿಗೂ ಹೋಗಿ ಬರಬೇಕಾಯಿತು. ಇವೆಲ್ಲವನ್ನೂ ರಿಯಾ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರು. ಸುಶಾಂತ್ ಸಾವಿಗೆ ನಾನೇ ಕಾರಣ ಎಂದರು. ನಾನು ಏನು ಎನ್ನುವುದು ನನಗೆ ಮತ್ತು ಸುಶಾಂತ್ ಗೆ ಮಾತ್ರ ಗೊತ್ತು. ಈಗಲೂ ಸುಶಾಂತ್ ನನ್ನೊಂದಿಗೆ ಇದ್ದಾರೆ’ ಎಂದು ಭಾವುಕರಾಗಿ ಮಾತನಾಡಿದರು.

    ಸುಶಾಂತ್ ಸತ್ತ ಬಳಿಕ ಅವರನ್ನು ಗೋಲ್ಡನ್ ಡಿಗ್ಗರ್ (Golden Digger) ಎಂದು ಮೂದಲಿಸಿದರಂತೆ. ಗೋಲ್ಡನ್ ಡಿಗ್ಗರ್ ಅಂದರೆ ದುಡ್ಡಿಗಾಗಿ ದೇಹ ಹಂಚಿಕೊಳ್ಳುವವಳು ಎಂದರ್ಥ. ಹಣಕ್ಕಾಗಿ ಯಾರು ಪ್ರೇಮದ ನಾಟಕವನ್ನು ಮಾಡುತ್ತಾರೋ ಅವರನ್ನು ಗೋಲ್ಡನ್ ಡಿಗ್ಗರ್ ಎಂದು ಕರೆಯುತ್ತಾರೆ. ಆದರೆ, ರಿಯಾ ಅಂಥವಳು ಅಲ್ಲ ಎಂದು ಹೇಳಿಕೊಂಡಿದ್ದಾರೆ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್

    ಬಂಟಿ ಸಜ್ದೇಹ್ ಜೊತೆ ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಡೇಟಿಂಗ್

    ಬಾಲಿವುಡ್ (Bollywood) ನಟಿ ರಿಯಾ ಚಕ್ರವರ್ತಿ  (Rhea Chakraborty) ಮತ್ತೆ ಸುದ್ದಿಯಲ್ಲಿದ್ದಾರೆ. ಸುಶಾಂತ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಎರಡೂವರೆ ವರ್ಷದ ನಂತರ ಇದೀಗ ತಮ್ಮ ಪ್ರೀತಿಯನ್ನ ಕಂಡುಕೊಂಡಿದ್ದಾರೆ. ಉದ್ಯಮಿ ಬಂಟಿ ಸಜ್ದೇಹ್ (Bunty Sajdeh) ಜೊತೆ ಡೇಟಿಂಗ್ ಮಾಡ್ತಿದ್ದಾರೆ.

    ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಶಾಂತ್ ಸಾವಿನ ನಂತರ ರಿಯಾ ಅವರನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಈಗ ಎರಡೂವರೆ ವರ್ಷಗಳ ನಂತರ ಮತ್ತೆ ನಟಿ ಎಂಗೇಜ್ ಆಗಿದ್ದಾರೆ. ಫ್ಯಾಷನ್ ಡಿಸೈನರ್ ಸೀಮಾ ಸಹೋದರ ಬಂಟಿ ಸಜ್ದೇಹ್ ಜೊತೆ ರಿಯಾ ಎಂಗೇಜ್ ಆಗಿದ್ದಾರೆ.

    ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಎಂಡಿ ಬಂಟಿ ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದು, ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಟಿ ರಿಯಾ ವೈಯಕ್ತಿಕ ಜೀವನ ಮತ್ತು ಸಿನಿಮಾ ಕೆರಿಯರ್‌ ಎರಡರಲ್ಲೂ ಸೋತಿರುವ ಸಮಯದಲ್ಲಿ ಬಂಟಿ ಜೊತೆಯಾಗಿ ನಿಂತು ಸಾಥ್ ನೀಡಿದ್ದರು. ಇದನ್ನೂ ಓದಿ: ಮುನಿಸು ಮರೆತು ಮಗನಿಗಾಗಿ ಮತ್ತೆ ಒಂದಾದ ಅರ್ಬಾಜ್- ಮಲೈಕಾ ಅರೋರಾ

     

    View this post on Instagram

     

    A post shared by Bunty Sajdeh (@buntysajdeh)

    ಸದ್ಯ ಬಿಟೌನ್ ಬಂಟಿ ಮತ್ತು ರಿಯಾ ಡೇಟಿಂಗ್ ಮ್ಯಾಟರ್ ಭಾರಿ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ, ಸದ್ಯದಲ್ಲೇ ಅಧಿಕೃತವಾಗಿ ಹೇಳುವ ಯೋಚನೆ ಇದ್ಯಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

    ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಎನ್.ಸಿ.ಬಿ ಅವರು ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಈ ಕೇಸ್ ಗೆ ಮತ್ತೊಂದು ತಿರುವು ಸಿಕ್ಕಿದೆ. ಎನ್.ಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆ ರಿಯಾ ಚಕ್ರವರ್ತಿ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಈ ಕೇಸ್ ಕುರಿತು ಮಾತನಾಡಿರುವ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್, ಅದೊಂದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಮತ್ತೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಇವರು ಅದನ್ನು ಕೊಲೆ ಎಂದೇ ಹೇಳಿಕೊಂಡು ಬಂದಿದ್ದಾರೆ. ತಾವು ಕ್ರಿಮಿನಲ್ ಲಾಯರ್ ಕೂಡ ಆಗಿರುವುದರಿಂದ ಅನೇಕ ಆತ್ಮಹತ್ಯೆ ಕೇಸುಗಳನ್ನು ತಾವು ನೋಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಆತ್ಮಹತ್ಯೆ ಕೇಸ್ ಗೂ ಮತ್ತು ಕೊಲೆ ಕೇಸ್ ನಡುವಿನ ವ್ಯತ್ಯಾಸದ ಕುರಿತೂ ಅವರು ಮಾತನಾಡಿದ್ದಾರೆ.ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಆ ಅಪಾರ್ಟ್ ಮೆಂಟ್ ಗೆ ಹೋಗಿದ್ದ ಸಹೋದರಿ ಅನುಮಾನಾಸ್ಪದ ರೀತಿಯಲ್ಲಿದ್ದ ಮೃತದೇಹದ ಕುರಿತೂ ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ನಾಲಿಗೆ ಹೊರಚಾಚಿರುತ್ತದೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ಆದರೆ, ನನ್ನ ಸಹೋದರನಲ್ಲಿ ಅದ್ಯಾವುದೂ ಕಾಣಲಿಲ್ಲ. ಅವನು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ ಎಂದು ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇನ್ನೂ ತಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ – ನಟಿ ರಿಯಾ ಚಕ್ರವರ್ತಿ ವಿರುದ್ಧ ಎನ್‍ಸಿಬಿ ಚಾರ್ಜ್‍ಶೀಟ್

    ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ – ನಟಿ ರಿಯಾ ಚಕ್ರವರ್ತಿ ವಿರುದ್ಧ ಎನ್‍ಸಿಬಿ ಚಾರ್ಜ್‍ಶೀಟ್

    ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಇಂದು ಮುಂಬೈನ ವಿಶೇಷ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಗೆಳತಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳ ಸೇವನೆಗೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಿದೆ.

    ಪ್ರಕರಣ ಸುದೀರ್ಘ ತನಿಖೆಯ ಬಳಿಕ ಈಗ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಚಾರ್ಜ್‍ಶೀಟ್‍ನಲ್ಲಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಸೇರಿದಂತೆ ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಅದನ್ನು ನಟ ಸುಶಾಂತ್ ಸಿಂಗ್‍ಗೆ ನೀಡಿದ್ದಾಳೆ ಎಂದು ಎನ್‍ಸಿಬಿ ಉಲ್ಲೇಖಿಸಿದೆ.  ಇದನ್ನೂ ಓದಿ: ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್

    ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನು ಎನ್‍ಸಿಬಿ ಹೊರಿಸಿದ್ದು, ಎಲ್ಲಾ ಆರೋಪಿಗಳು ಮಾರ್ಚ್ 2020 ರಿಂದ ಡಿಸೆಂಬರ್ 2020 ರವರೆಗೆ ಪರಸ್ಪರ ಸಂಚು ರೂಪಿಸಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ್ದಾರೆ. ಅಲ್ಲದೇ ಹಲವು ಬಾಲಿವುಡ್ ನಟರಿಗೆ ಮತ್ತು ಮುಂಬೈನ ಹೈ ಪ್ರೊಪೈಲ್‌ ಜನರಿಗೆ ಇವರು ಡ್ರಗ್ ಮಾರಾಟ ಮಾಡಿದ್ದಾರೆ ಎಂದು ಎನ್‍ಸಿಬಿ ತಿಳಿಸಿದೆ. ಇದನ್ನೂ ಓದಿ: ಸಹೋದರರಿಂದ 5 ಸುತ್ತು ಗುಂಡಿನ ದಾಳಿ- ಪಾರಾದ ಚಿತ್ರನಟ ಶಿವರಂಜನ್ ಹೇಳಿದ್ದೇನು?

    ಆರೋಪಿಗಳು ಮುಂಬೈನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆಗೆ ಹಣ ನೀಡಿದ್ದು ಮಾತ್ರವಲ್ಲದೇ ಗಾಂಜಾ, ಚರಸ್, ಕೊಕೇನ್‍ನಂತಹ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ. ಅಕ್ರಮ ಸಾಗಾಣಿಕೆಗೆ ಹಣಕಾಸು ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಈ ಎಲ್ಲಾ ಆರೋಪಿಗಳ ವಿರುದ್ಧ ಸೆಕ್ಷನ್ 27 ಮತ್ತು 27ಎ, ಸೆಕ್ಷನ್ 28 ಮತ್ತು ಸೆಕ್ಷನ್ 29ರ ಅಡಿಯಲ್ಲಿ ಪ್ರಕರಣ ಅಡಿಯಲ್ಲಿ ಶಿಕ್ಷೆಗೆ ಮನವಿ ಮಾಡಿದೆ. ಜುಲೈ 27 ರಂದು ಈ ಪ್ರಕರಣ ವಿಚಾರಣೆಯನ್ನು ನಿಗದಿಯಾಗಿದ್ದು ವಿಶೇಷ ನ್ಯಾಯಾಧೀಶ ವಿ.ಜಿ.ರಘುವಂಶಿ ಅವರು ವಿಚಾರಣೆ ನಡೆಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಶಾಂತ್ ಹುಟ್ಟುಹಬ್ಬಕ್ಕೆ ಮಿಸ್ ಯೂ ಸೋ ಮಚ್ ಎಂದ ರಿಯಾ ಚಕ್ರವರ್ತಿ

    ಸುಶಾಂತ್ ಹುಟ್ಟುಹಬ್ಬಕ್ಕೆ ಮಿಸ್ ಯೂ ಸೋ ಮಚ್ ಎಂದ ರಿಯಾ ಚಕ್ರವರ್ತಿ

    ನವದೆಹಲಿ: ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಅವರ ಕುಟುಂಬದವರು ಇಂದು ಅವರನ್ನು ನೆನಪಿಸಿಕೊಂಡಿದ್ದಾರೆ.

    ಕೆಲವು ವರ್ಷಗಳಿಂದ ಸುಶಾಂತ್‌ರೊಂದಿಗೆ ಡೇಟಿಂಗ್ ನಡೆಸುತ್ತಿದ್ದ ನಟಿ ರಿಯಾ ಚಕ್ರವರ್ತಿ ಇನ್ಸ್ಟಗ್ರಾಮ್‌ನಲ್ಲಿ ಸುಶಾಂತ್‌ರೊಂದಿಗಿನ ಹಳೆಯ ವೀಡಿಯೋವೊಂದನ್ನು ಹಂಚಿಕೊಂಡಿರುವುದರೊಂದಿಗೆ ಮಿಸ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

     

    View this post on Instagram

     

    A post shared by Rhea Chakraborty (@rhea_chakraborty)

    ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14ರಂದು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಾದ ಬಳಿಕ ರಿಯಾ ಹಾಗೂ ಆಕೆಯ ಕುಟುಂಬದವರನ್ನು ಸುಶಾಂತ್‌ನ ಸಾವಿನ ಬಗ್ಗೆ ತನಿಖೆಗೆ ಒಳಪಡಿಸಲಾಗಿತ್ತು. ಇದರೊಂದಿಗೆ ರಿಯಾ ಹಾಗೂ ಆಕೆಯ ಸಹೋದರ ಶೋಕ್‌ನನ್ನು ಡ್ರಗ್ಸ್ ಪ್ರಕರಣದಲ್ಲೂ ಬಂಧಿಸಲಾಗಿತ್ತು. ಇದನ್ನೂ ಓದಿ: ಅಪ್ಪುವಿನ ಪುಟಾಣಿ ಅಭಿಮಾನಿಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಶಿವಣ್ಣನ ಭೇಟಿಗೆ ಹಾತೊರೆಯುತ್ತಿರುವ ಮಕ್ಕಳು

  • ನಿನಗಾಗಿ ಕಾಯುತ್ತಿರುವೆ, ವಾಪಸ್ ಬಾ ಗೆಳೆಯ – ರಿಯಾ ಚಕ್ರವರ್ತಿ

    ನಿನಗಾಗಿ ಕಾಯುತ್ತಿರುವೆ, ವಾಪಸ್ ಬಾ ಗೆಳೆಯ – ರಿಯಾ ಚಕ್ರವರ್ತಿ

    ಮುಂಬೈ: ನಿನಗಾರಿ ಕಾಯುತ್ತಿರುವೆ, ವಾಪಸ್ ಬಾ ಗೆಳೆಯ ಎಂದು ನಟಿ ರಿಯಾ ಚಕ್ರವರ್ತಿ ಸೋಶಿಯಲ್ ಮೀಡಿಯಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ಕೆಲವು ಸಾಲುಗಳನ್ನು ಬರೆದುಕೊ0ಡಿದ್ದಾರೆ.

    ನೀನು ನನ್ನೊಂದಿಗೆ ಇಲ್ಲ ಎಂದು ಒಂದು ಕ್ಷಣವೂ ಯೋಚಿಸಲು ಆಗುತ್ತಿಲ್ಲ. ಸಮಯದೊಂದಿಗೆ ಎಲ್ಲವೂ ಸರಿ ಆಗುತ್ತೆ ಅಂತ ಹೇಳ್ತಾರೆ. ಆದ್ರೆ ನನ್ನ ಸಮಯ ಮತ್ತು ಎಲ್ಲವೂ ನೀನೇ ಆಗಿದ್ದೆ. ನೀನು ನನ್ನ ಗಾರ್ಡಿಯನ್ ಆಗಿರೋದು ನನಗೆ ಗೊತ್ತು. ಚಂದ್ರನಲ್ಲಿರುವ ನೀನು ಅಲ್ಲಿ ಟೆಲಿಸ್ಕೋಪ್ ನಿಂದ ನೋಡಿ ನನ್ನನ್ನು ರಕ್ಷಿಸುತ್ತಿದ್ದೀಯಾ ಅಲ್ವಾ ಎಂದು ಭಾವನಾತ್ಮಕ ಸಾಲುಗಳ ಜೊತೆ ಗೆಳೆಯನನ್ನು ಸ್ಮರಿಸಿಕೊಂಡಿದ್ದಾರೆ.

    ನಾನು ಪ್ರತಿದಿನ ನಿನಗಾಗಿ ಕಾಯುತ್ತಿರುತ್ತೇನೆ. ನೀನು ಬಂದು ನನ್ನನ್ನು ಪಿಕ್ ಮಾಡುತ್ತೀಯಾ ಅಂತ ನಿರೀಕ್ಷೆಯಲ್ಲಿರುತ್ತೇನೆ. ಪ್ರತಿ ದಿನ ನಿನಗಾಗಿ ಹುಡುಕಾಟ ನಡೆಸಿ, ಕೊನೆಗೆ ಸೋತು ಕುಸಿಯುತ್ತೇನೆ. ವಾಪಸ್ ಬಾ ಗೆಳೆಯ. ನೀನು ಇಲ್ಲ ಅಂತ ತಿಳಿದಾಗ ನಿನ್ನ ಮುಖ ಕಣ್ಮುಂದೆ ಬಂದು, ಬೇಬೋ ನೀನು ಮಾಡಬಲ್ಲೆ ಅಂತ ಹೇಳುತ್ತಿದ್ದ ಆ ಮಾತುಗಳು ನೆನಪು ಬರುತ್ತವೆ. ನಿನ್ನ ಬಗ್ಗೆ ಯೋಚನೆ ಮಾಡ್ತಿದ್ರೆ ನನ್ನ ಇಡೀ ಭಾವನೆಗಳು ಹೊರ ಬರುತ್ತವೆ. ಭಾರವಾದ ಮನಸ್ಸಿನಿಂದ ಈ ಸಾಲುಗಳನ್ನ ಬರೆಯುತ್ತಿದ್ದೇನೆ. ನನ್ನ ಜೊತೆಯಲ್ಲಿ ನೀನಿದ್ದಿಯಾ ಅಂತ ಅನ್ನೋ ಭಾವನೆ ಇದೆ ಎಂದು ಬರೆದು ಸುಶಾಂತ್ ಜೊತೆಗಿನ ಕ್ಯೂಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಹೇಗಿತ್ತು?

     

    View this post on Instagram

     

    A post shared by Rhea Chakraborty (@rhea_chakraborty)

    ಜೂನ್ 14, 2020ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿತ್ತು. ನಂತರ ಇದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಜೈಲು ವಾಸ ಅನುಭವಿಸಿದ್ದಾರೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ವಿಷಯ ಮುನ್ನಲೆಗೆ ಬಂದಿತ್ತು. ಇದನ್ನೂ ಓದಿ: ಕಳೆದ ವರ್ಷ ಈ ದಿನ ಸುಶಾಂತ್, ಈ ವರ್ಷ ಸಂಚಾರಿ ವಿಜಯ್ – ಪ್ರತಿಭಾನ್ವಿತ ನಟರಿಗೆ ಅಭಿಮಾನಿಗಳ ಕಂಬನಿ

  • ಕೊರೊನ ಸಂಕಷ್ಟದಲ್ಲಿ ಸಿಲುಕಿದವರ ಸಹಾಯಕ್ಕೆ ಬಂದ ರಿಯಾ

    ಕೊರೊನ ಸಂಕಷ್ಟದಲ್ಲಿ ಸಿಲುಕಿದವರ ಸಹಾಯಕ್ಕೆ ಬಂದ ರಿಯಾ

    ಮುಂಬೈ: ಕೊರೊನಾ ಸಂಕಷ್ಟದಲ್ಲಿರೋ ಜನರ ಸಹಾಯಕ್ಕೆ ನಟಿ ರಿಯಾ ಚಕ್ರವರ್ತಿ ಮುಂದಾಗಿದ್ದಾರೆ. ಸಹಾಯ ಬೇಕಾದವರು ತಮ್ಮನ್ನ ಸಂಪರ್ಕಿಸಬಹುದು ಎಂದು ರಿಯಾ ಪೋಸ್ಟ್ ಮಾಡಿಕೊಂಡಿದ್ದಾರೆ. ಮತ್ತೊಂದು ಪೋಸ್ಟದ್ ನಮಲ್ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿರುವ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.

    ಈ ಕಠಿಣ ಸಮಯದಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು. ಸಹಾಯದ ನಿರೀಕ್ಷೆಯಲ್ಲಿರೋರಿಗೆ ನಮ್ಮಿಂದಾದ ನೆರವು ಸಿಗುವಂತಾಗಬೇಕು. ನಿಮ್ಮ ನೆರವು ಚಿಕ್ಕದಿರಲಿ, ದೊಡ್ಡದಿರಲಿ ಅದು ಸಹಾಯ. ನೆರವಿನ ನಿರೀಕ್ಷೆಯಲ್ಲಿರೋರು ನೇರವಾಗಿ ನನಗೆ ಸಂದೇಶ ಕಳುಹಿಸಬಹುದು. ನಿಮ್ಮ ಸಹಾಯಕ್ಕೆ ನನ್ನ ಕಡೆಯಿಂದ ಪ್ರಯತ್ನಿಸುತ್ತೆನೆ. ಆರೋಗ್ಯದ ಬಗ್ಗೆ ಗಮನ ಇರಲಿ, ದಯೆಯ ಭಾವನೆ ಇರಲಿ. ನಿಮ್ಮ ಪ್ರೀತಿಯೇ ನಮ್ಮ ಮನೋಬಲ ಎಂದು ರಿಯಾ ಬರೆದುಕೊಡಿದ್ದಾರೆ.

    ಮತ್ತೊಂದು ಪೋಸ್ಟ್ ನಲ್ಲಿ ಆಕ್ಸಿಜನ್ ಪೂರೈಕೆಯ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಪುಣೆಯ ಸತಾರಾ ಮತ್ತು ಮುಂಬೈ ಬೆಲ್ಟ್ ಆಸ್ಪತ್ರೆಗಳಿಗೆ ಇನ್ ಹೌಸ್ ಆಕ್ಸಿಜನ್ ಪ್ಲಾಂಟ್ ಎಂಟಿಸಿ ಗ್ರೂಪ್ ನಿಂದ ಆಕ್ಸಿಜನ್ ಪೂರೈಕೆಯ ವಿಷಯವನ್ನ ತಿಳಿಸಿದ್ದಾರೆ. ಎಂಟಿಸಿ ಗ್ರೂಪ್ ಸಹಾಯಕ್ಕೆ ರಿಯಾ ಧನ್ಯವಾದ ಸಲ್ಲಿಸಿದ್ದಾರೆ.

  • ಮತ್ತೊಂದು ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ

    ಮತ್ತೊಂದು ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ

    ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹೊಸ ಸಂಕಷ್ಟಲ್ಲಿ ಸಿಲುಕಿದ್ದು, ಮನೆ ಖಾಲಿ ಮಾಡುವಂತೆ ನೆರೆಹೊರೆಯವರು ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ. ರಿಯಾ ಪೋಷರು ಹೊಸ ಫ್ಲ್ಯಾಟ್ ಹುಡುಕಾಟದಲ್ಲಿದ್ದಾರೆ. ಇತ್ತ ರಿಯಾ ಸಹ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಹೊಸ ಮನೆ ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.

    ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಮತ್ತು ತಾಯಿ ಸಂಧ್ಯಾ ಚಕ್ರವರ್ತಿ ಮನೆ ಹುಡುಕುತ್ತಿರುವ ವೀಡಿಯೋ ವೈರಲ್ ಆಗಿದೆ. ಸದ್ಯ ರಿಯಾ ಚಕ್ರವರ್ತಿ ಸಂತಾಕ್ರೂಸ್ ನಲ್ಲಿಯ ಸೊಸೈಟಿಯೊಂದರಲ್ಲಿ ವಾಸವಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.

    ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಹೆಸರು ಕೇಳಿ ಬಂದಿತ್ತು. ಸೆಪ್ಟೆಂಬರ್ 8ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ಚಕ್ರವರ್ತಿಯನ್ನ ಬಂಧಿಸಿತ್ತು. ಒಂದು ತಿಂಗಳ ಬಳಿಕ ಜಾಮೀನು ಪಡೆದು ರಿಯಾ ಜೈಲಿನಿಂದ ಹೊರ ಬಂದಿದ್ದಾರೆ. ಜೂನ್ ನಿಂದ ಮಾಧ್ಯಮಗಳು, ಪೊಲೀಸರು ಪ್ರತಿದಿನ ಸೊಸೈಟಿ ಮುಂದೆ ಜಮಾಯಿಸಿದ್ದರಿಂದ ಇತರ ನಿವಾಸಿಗಳಿಗೆ ತೊಂದರೆ ಆಗಿತ್ತು. ಹಾಗಾಗಿ ಸೊಸೈಟಿ ನಿವಾಸಿಗಳು ರಿಯಾ ಕುಟುಂಬಕ್ಕೆ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

    ಆಗಸ್ಟ್ ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದ ರಿಯಾ ಚಕ್ರವರ್ತಿ ತಮ್ಮ ನಿವಾಸದ ಮುಂಭಾಗದಲ್ಲಿ ಜನ ಸೇರಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಪೊಲೀಸ್ ರಕ್ಷಣೆ ಕೇಳಿದ್ದರು. ಜೈಲಿನಿಂದ ಹೊರ ಬಂದರು ಕೆಲವರು ಕ್ಯಾಮೆರಾ ಹಿಡಿದು ಹಿಂಬಾಲಿಸುತ್ತಿದ್ದಾರೆ.