Tag: revolver

  • ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್

    ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್

    ಮಡಿಕೇರಿ: ನಿವೃತ ಎಸ್ಪಿ ಪುತ್ರನೊಬ್ಬ ವರ್ತಕನ ಮೇಲೆ ರಿವಾಲ್ವಾರ್‌ನಿಂದ (Revolver) ಮೂರು ಸುತ್ತು ಗುಂಡು ಹಾರಿಸಿದ ಘಟನೆ ವಿರಾಜಪೇಟೆ (Virajpet) ತಾಲ್ಲೂಕಿನ ಅಮ್ಮತಿ (Ammathi) ಗ್ರಾಮದಲ್ಲಿ ನಡೆದಿದೆ.

    ರಂಜನ್ ಚಿಣ್ಣಪ್ಪ ಎಂಬಾತ ಗುಂಡು ಹಾರಿಸಿದ ವ್ಯಕ್ತಿ. ಸಿದ್ದಾಪುರ (Siddapur) ರಸ್ತೆಯ ವರ್ತಕ ಕೆ.ಬೋಪಣ್ಣ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದು, ಕೂದಲಳೆಯ ಅಂತರದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ಕುಟುಂಬಕ್ಕೂ ತಟ್ಟಿದ ಚುನಾವಣೆ ಬಿಸಿ – ಹೆಲಿಕಾಪ್ಟರ್ ತಪಾಸಣೆ ವೇಳೆ ಮಾತಿನ ಚಕಮಕಿ

    ರಂಜನ್‍ಗೆ ಸೇರಿದ ಮನೆಯ ಮುಂಭಾಗದ ಅಂಗಡಿ ಮಳಿಗೆಯಲ್ಲಿ ಬೊಪಣ್ಣ ಮತ್ತು ಆತನ ಪಾಲುದಾರರು ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಅಂಗಡಿ ಮಳಿಗೆಯನ್ನು ಖಾಲಿ ಮಾಡುವಂತೆ ಈ ಹಿಂದೆ ರಂಜನ್ ಸೂಚಿಸಿದ್ದ. ಇದಕ್ಕೆ ಬೋಪಣ್ಣ ಕಾಲಾವಕಾಶವನ್ನು ಕೇಳಿದ್ದರು ಎನ್ನಲಾಗಿದೆ. ಮತ್ತೆ ಪುನಃ ರಂಜನ್ ಬೊಪಣ್ಣರವರ ಅಂಗಡಿಗೆ ತೆರಳಿ ಖಾಲಿ ಮಾಡುವಂತೆ ಕೇಳಿಕೊಂಡಾಗ ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಈ ವೇಳೆ ರಂಜನ್ ತನ್ನ ಬಳಿ ಇದ್ದ ರಿವಾಲ್ವಾರ್ ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ.

    ಬಳಿಕ ರಂಜನ್ ಮೇಲೆ ಕೂಡ ಹಲ್ಲೆ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ

  • ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

    ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

    ಲಕ್ನೋ: ಮದುವೆಯ ಸಂಭ್ರಮದಲ್ಲಿದ್ದ ವಧುವೊಬ್ಬಳು (Bride) ವೇದಿಕೆಯ ಮೇಲೆ ರಿವಾಲ್ವರ್‌ನಿಂದ 4 ಬಾರಿ ಗುಂಡು ಹಾರಿಸಿದ್ದಾಳೆ. ಇದೀಗ ಈ ಸಂಭ್ರಮವೇ ಆಕೆಯ ಪಾಲಿಗೆ ಕುತ್ತು ತಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ನಡೆದಿದೆ.

    ಉತ್ತರ ಪ್ರದೇಶದ (Uttar Pradesh) ಹತ್ರಾಸ್ (Hathras) ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವಧು, ವರ (Groom) ಪರಸ್ಪರ ಹಾರ ಹಾಕಿಕೊಂಡು ಸಂಬಂಧಿಕರಿಂದ ಆಶೀರ್ವಾದ ಪಡೆದಿದ್ದಾರೆ. ಅದಾದ ಬಳಿಕ ಅವರಿಬ್ಬರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ವಧುವಿಗೆ ರಿವಾಲ್ವರ್ ಅನ್ನು ನೀಡಿದ್ದಾನೆ. ಆ ರಿವಾಲ್ವರನ್ನು ತೆಗೆದುಕೊಂಡ ವಧು 5 ಸೆಕೆಂಡುಗಳಲ್ಲಿ ನಾಲ್ಕು ಗುಂಡು ಹಾರಿಸಿ ಸಂಭ್ರಮಿಸಿದ್ದಾಳೆ. ಈ ವೀಡಿಯೋವನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಹತ್ತಿ ವಧುವಿನ ಬಳಿ ನಿಂತಿದ್ದಾನೆ. ಸ್ವಲ್ಪ ಸಮಯದ ನಂತರ ಆತ ತನ್ನ ಬಳಿಯಿದ್ದ ಲೋಡ್ ಮಾಡಿದ ರಿವಾಲ್ವರ್ (Revolver) ಹೊರತೆಗೆದು ವಧುವಿನ ಕೈಗೆ ಕೊಟ್ಟಿದ್ದಾನೆ. ನಂತರ ವರನ ಜೊತೆಗೆ ವೇದಿಕೆಯ ಮೇಲೆ ಕುಳಿತಿದ್ದ ವಧು ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸುತ್ತಾಳೆ. ಈ ವೇಳೆ ಗನ್‍ನಿಂದ ನಿರಂತರವಾಗಿ 4 ಬಾರಿ ಗುಂಡನ್ನು ಹಾರಿಸುತ್ತಾಳೆ. ಇದಾದ ಬಳಿಕ ವಧು ಆ ವ್ಯಕ್ತಿಗೆ ಗನ್‍ನನ್ನು ವಾಪಸ್ ನೀಡುತ್ತಾಳೆ. ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ

    ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ವಧು ನಾಪತ್ತೆ ಆಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಎಎಸ್‍ಪಿ ಮಾತನಾಡಿ, ವೀಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು. ರಿವಾಲ್ವರ್ ಹಿಡಿದಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

  • ಸುಳ್ಳು ದಾಳಿ ಸೃಷ್ಟಿಸಿದ ಶಿವಸೇನಾ ನಾಯಕನ ಬಂಧನ

    ಸುಳ್ಳು ದಾಳಿ ಸೃಷ್ಟಿಸಿದ ಶಿವಸೇನಾ ನಾಯಕನ ಬಂಧನ

    ಮುಂಬೈ: ರಿವಾಲ್ವರ್ ಪಡೆಯಲು ಐದು ತಿಂಗಳ ಹಿಂದೆ ಸುಳ್ಳು ದಾಳಿಯನ್ನು ಸೃಷ್ಟಿಸಿದ ಆರೋಪದ ಮೇಲೆ ಶಿವಸೇನಾ ನಾಯಕನನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಶಿವಸೇನಾ ನಾಯಕ ಬಾಲಾ ಅಲಿಯಾಸ್ ರಾಜೇಶ್ ಗುಡೆ ಆರೋಪಿ. ಇವರು ಶಿವ ಸೇನೆಯ ಪಾಲ್ಘರ್ ಜಿಲ್ಲಾ ಘಟಕದ ಸದಸ್ಯರಾಗಿದ್ದಾರೆ. ರಾಜೇಶ್ ಗುಡೆ ರಿವಾಲ್ವರ್‌ಗೆ ಪರವಾನಗಿ ಪಡೆಯಲು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಡೆದಿದ್ದೇನು?: ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಕಾರಿಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ. ತಮಗೆ ಭದ್ರತೆ ಬೇಕು. ಇದರಿಂದಾಗಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ನೀಡಿ ಎಂದು ರಾಜೇಶ್ ಗುಡೆ ಅವರು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

    ಪೊಲೀಸರು ಈ ಪ್ರಕರಣವನ್ನು ಕೈಗೆತ್ತುಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ಪಡೆಯಲು ಕಾರಿಗೆ ಗುಂಡು ಹಾರಿಸಿದ ಘಟನೆಯನ್ನು ಸೃಷ್ಟಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ಗುಡೆ ಜೊತೆಗೆ ಅಪರಾಧದಲ್ಲಿ ಭಾಗಿಯಾಗಿದ್ದ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ರಿವಾಲ್ವರ್‌ನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

  • ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಹಾವೇರಿ: ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇಂದು ಜಿಲ್ಲೆ ರಾಣೇಬೆನ್ನೂರಿನ ಜೆಎಂಎಫ್‍ಸಿ ಕೋರ್ಟಿಗೆ ಹಾಜರಾಗಿದ್ದರು.

    2019ರ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿ ಮಾಡಿದ್ದ ಸಂದರ್ಭದಲ್ಲಿ ಪರವಾನಗಿ ನವೀಕರಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ಮಾಜಿ ಸಚಿವರ ಕಾರು ಮತ್ತು ರಿವಾಲ್ವರ್ ಅನ್ನು ಸೀಜ್ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಅಧಿಕಾರಿಗಳು ಮಾಕನೂರು ಚೆಕ್‍ಪೋಸ್ಟ್ ನಲ್ಲಿ ಬಳಿ ರಿವಾಲ್ವರ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದರು.

    ಪ್ರಕರಣ ಸಂಬಂಧ ಇಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಸಂಬಂಧಿಸಿದ ದಾಖಲೆಗಳನ್ನು ಖುದ್ದು ಕೋರ್ಟಿಗೆ ಹಾಜರು ಪಡಿಸಿದ್ದರು. ಅಲ್ಲದೇ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರಿಂದ ನ್ಯಾಯ ಸಿಕ್ಕಿದೆ. ಅಂದಿನ ದಿನ ಕಾರು ಚಾಲಕ ರಿವಾಲ್ವರ್ ಗೆ  ಸಂಬಂಧಿಸಿದ ದಾಖಲೆ ಬಿಟ್ಟು ಬಂದಿದ್ದು ತೊಂದರೆಯಾಗಿತ್ತು. ಈಗ ನ್ಯಾಯ ಸಿಕ್ಕಿದೆ ಎಂದು ಅಸ್ನೋಟಿಕರ್ ಪ್ರತಿಕ್ರಿಯೆ ನೀಡಿದರು.

  • ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಶಾ ಭೇಟಿ ವೇಳೆ ಉತ್ತರಾಧಿ ಮಠದಲ್ಲಿ ವ್ಯಕ್ತಿ ಬಳಿ ರಿವಾಲ್ವರ್ ಪತ್ತೆ!

    ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವೇಳೆ ವ್ಯಕ್ತಿಯೊಬ್ಬರ ಬಳಿ ರಿವಾಲ್ವರ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾದ ಘಟನೆ ಉತ್ತರಾಧಿ ಮಠದಲ್ಲಿ ನಡೆದಿದೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿರುವ ಉತ್ತರಾಧಿ ಮಠಕ್ಕೆ ಅಮಿತ್ ಶಾ ಇಂದು ಬೆಳಗ್ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ರಿವಾಲ್ವರ್ ಇಟ್ಟುಕೊಂಡು ವ್ಯಕ್ತಿಯೊಬ್ಬರು ಮಠ ಪ್ರವೇಶಿಸಿದ್ದರು.

    ರಿವಾಲ್ವರ್ ಪತ್ತೆಯಾದ ತಕ್ಷಣ ಎನ್‍ಎಸ್‍ಜಿ ಮತ್ತು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ರಿವಾಲ್ವರ್ ಇಟ್ಟುಕೊಂಡ ವ್ಯಕ್ತಿ ಸೇಡಂ ಪಟ್ಟಣದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ತುರಾಬ್ ಉಲ್ ಹಕ್(61) ಎನ್ನುವುದು ಗೊತ್ತಾಗಿದೆ.

    ವಿಚಾರಣೆ ವೇಳೆ ತನ್ನ ಬಳಿ ರಿವಾಲ್ವರ್ ಗೆ ಲೈಸೆನ್ಸ್ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತುರಾಬ್ ಉಲ್ ಹಕ್ ಅವರ ಮನೆಗೆ ತೆರಳಿ ಲೈಸೆನ್ಸ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಎಲ್ಲ ವಿಚಾರಣೆಯ ಪೊಲೀಸರು ಎಚ್ಚರಿಕೆ ನೀಡಿ ತುರಾಬ್ ಉಲ್ ಹಕ್ ಅವರನ್ನು ಬಿಡುಗಡೆ ಮಾಡಿದ್ದಾರೆ.

     

  • ಗೌರಿ ಹತ್ಯೆ ಮಾಡಿದ್ದ ರಿವಾಲ್ವರ್ ಟಿವಿಯೊಳಗಿಟ್ಟು ಆರಾಮಾಗಿದ್ದ ಸುಪಾರಿ ಕಿಲ್ಲರ್!

    ಗೌರಿ ಹತ್ಯೆ ಮಾಡಿದ್ದ ರಿವಾಲ್ವರ್ ಟಿವಿಯೊಳಗಿಟ್ಟು ಆರಾಮಾಗಿದ್ದ ಸುಪಾರಿ ಕಿಲ್ಲರ್!

    – ವಿಚಾರಣೆ ನಡೆಸಿದಷ್ಟೂ ಹೊರ ಬೀಳುತ್ತಿದೆ ರೋಚಕ ಮಾಹಿತಿ

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (ಎಸ್‍ಐಟಿ) ಮಹತ್ವದ ಪ್ರಗತಿ ಸಾಧಿಸಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರದ ಜೈಲಿನಲ್ಲಿದ್ದ ಕೈದಿ ನೀಡಿದ್ದ ಸುಳಿವು ಆಧರಿಸಿ ಸುಪಾರಿ ಕಿಲ್ಲರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಯಲಹಂಕದ ಮನೆಯಲ್ಲಿ ಮೂರು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

    ಆರಂಭದಲ್ಲಿ ಈತ ನನಗೆ ಈ ಪ್ರಕರಣದ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದನಾದ್ರೂ ಎಸ್‍.ಐ.ಟಿ ಈ ಮನೆಯಲ್ಲಿ ತೀವ್ರ ಪರಿಶೋಧನೆ ನಡೆಸಿದೆ. ಈ ವೇಳೆ ಮನೆಯಲ್ಲಿದ್ದ ಖಾಲಿ ಟಿವಿಯ ಒಳಗಡೆ 3 ರಿವಾಲ್ವರ್ ಸಿಕ್ಕಿದೆ ಎಂದು ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಸದ್ಯ ಸುಪಾರಿ ಕಿಲ್ಲರ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಆತನಿಂದ ವಶಕ್ಕೆ ಪಡೆದ ರಿವಾಲ್ವರ್ ತಪಾಸಣೆ ಮಾಡ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಂಟ್ರಿ ಮೇಡ್ ರಿವಾಲ್ವರ್ ರವಾನೆ ಮಾಡಲಾಗಿದೆ. ಸುಪಾರಿ ಕಿಲ್ಲರ್ ವಶಕ್ಕೆ ಪಡೆದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಈತ ಇನ್ನಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿಯನ್ನೂ ಈತ ನೀಡಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ. ಇನ್ನೊಂದೆರಡು ದಿನಗಳಲ್ಲಿ ಗೌರಿ ಹತ್ಯೆಗೆ ಭಯಾನಕ ಹಾಗೂ ರೋಚಕ ಕ್ಲೈಮ್ಯಾಕ್ಸ್ ಸಿಗಲಿದೆ ಎನ್ನುವುದಂತೂ ಸುಳ್ಳಲ್ಲ.

  • ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

    ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

    ಬೆಂಗಳೂರು: ವಯೋವೃದ್ಧರೊಬ್ಬರು ಹೊಟ್ಟೆ ಹೊರೆಯೋದಕ್ಕೆ ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಅವರಿಗೆ ಇನ್ನಿಲ್ಲದ ಕಾಯಿಲೆಗಳು ಬಂದು ಬಡಪಾಯಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಆರೋಗ್ಯ ಸರಿ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

    ಯಲಹಂಕ ನ್ಯೂಟೌನ್‍ನಲ್ಲಿರುವ ಉದ್ಯಮಿ ಸತೀಶ್ ಮನೆಯಲ್ಲಿ ಸೋಮವಾರದಂದು ರಿವಾಲ್ವರ್ ಮತ್ತು ಚಿನ್ನಾಭರಣ ಕಳುವಾಗಿದ್ವು. ನಕಲಿ ಕೀ ಬಳಸಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದ ಕಳ್ಳ ಎಲ್ಲವನ್ನು ಎತ್ತಿಕೊಂಡು ಹೋಗಿದ್ದ. ಆದ್ರೆ ಕಳ್ಳ ಯಾರು? ಯಾಕಾಗಿ ಕಳ್ಳತನ ಮಾಡಿದ್ದಾನೆ ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿತ್ತು.

    ಮಂಗಳವಾರದಂದು ಪೊಲೀಸರು ಕಳ್ಳನನ್ನು ಬಂಧಿಸಿದಾಗ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಪೊಲೀಸರು ಅರೆಸ್ಟ್ ಮಾಡಿದ್ದು ಸತೀಶ್ ಮನೆಯಲ್ಲಿಯೇ ಕೆಲಸ ಮಾಡ್ತಿದ್ದ 63ರ ವಯೋವೃದ್ಧ ಪ್ರಸನ್ನ ಅಯ್ಯಂಗಾರ್ ಅವರನ್ನ.

    ವಯಸ್ಸಾದ ಪ್ರಸನ್ನ ಅಯ್ಯಂಗಾರ್ ಅವರನ್ನ ವಿಚಾರಣೆ ಮಾಡಿದಾಗ ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. ಪ್ರಸನ್ನ ಅವರಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿತ್ತು. ಆದ್ರೆ ಆಪರೇಷನ್ ಮಾಡಿಸಿಕೊಳ್ಳಲು ಹಣ ಇರಲಿಲ್ಲ. ಹೀಗಾಗಿ ಆಪರೇಷನ್ ಮಾಡಿಸ್ಕೊಳ್ಳೋ ಸಲುವಾಗಿ ಚಿನ್ನಾಭರಣ ಕದ್ದಿದ್ದರು. ಒಂದು ವೇಳೆ ಆಪರೇಷನ್ ಫೇಲ್ ಆದ್ರೆ ಶೂಟ್ ಮಾಡಿಕೊಳ್ಳೋಕೆ ರಿವಾಲ್ವರ್ ಕದ್ದಿದ್ದರು.

    ಇಳಿವಯಸ್ಸಿನಲ್ಲಿ ಬದುಕುವ ಆಸೆ ಇಟ್ಟುಕೊಂಡು ಕಳ್ಳತನ ಮಾಡಿದ್ದ ವಯೋವೃದ್ಧ ಪ್ರಸನ್ನ ಈಗ ಜೈಲು ಪಾಲಾಗಿದ್ದಾರೆ. ಅತ್ತ ಆಪರೇಷನ್ ಇಲ್ಲ ಇತ್ತ ಬದುಕುವ ಆಸೆಯೂ ಇಲ್ಲದಂತಾಗಿದೆ ಪ್ರಸನ್ನ ಅವರ ಬದುಕು.

  • ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

    ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

    ಹಾವೇರಿ: ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಾಪರಸ್ಥರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ದೊಡ್ಡಕೊಟ್ರೇಶ ಸೊಪ್ಪಿನಬಾವಿಮಠ (48) ಎಂದು ಗುರುತಿಸಲಾಗಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ತನ್ನ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ದೊಡ್ಡಕೊಟ್ರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಣೇಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.