Tag: Revenue Minister

  • ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್

    ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್

    ಬೆಂಗಳೂರು: ಕೇಂದ್ರ ಸರ್ಕಾರ (Central Government) ರಾಜ್ಯದ ಗ್ರಾಮಗಳ ಜನ ವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸುವ ಉದ್ದೇಶದಿಂದ ಸ್ವಮಿತ್ವ ಯೋಜನೆ ಜಾರಿಗೊಳಿಸಿದ್ದು, ಅದರಂತೆ ಗ್ರಾಮ ಠಾಣಾಗಳ ಸರ್ವೆ ಕಾರ್ಯ ನಡೆಸಿ ಪಿ.ಆರ್.ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ (BJP) ಸದಸ್ಯ ವೈ.ಎಂ ಸತೀಶ್ ಪರ ಡಿಎಸ್ ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಗ್ರಾಮಠಾಣಾ ಪ್ರದೇಶ ಗುರುತಿಸುವುದು ಬಹಳ ವಿಶಿಷ್ಟ. ಮೊದಲು ಬ್ರಿಟಿಷರ ಕಾಲದಲ್ಲಿ ಹಳೆ ಮೈಸೂರಿನಲ್ಲಿ, ಮುಂಬೈ (Mumbai) ಪ್ರಾಂತ್ಯದಲ್ಲಿ, ಮದರಾಸು ಪ್ರಾಂತ್ಯದಲ್ಲಿ, ಹೈದರಾಬಾದ್ (Hyderabad) ಪ್ರಾಂತ್ಯ, ಕೊಡಗು ಪ್ರಾಂತ್ಯದಲ್ಲಿ ಸರ್ವೆ ನಡೆದು ಶತಮಾನದ ಹಿಂದ ಮತ್ತೆ ರೀ ಸರ್ವೆ ಮಾಡಲಾಗಿದೆ. ಈಗ ಶತಮಾನದ ನಂತರ ನಾವು ಗ್ರಾಮಠಾಣಾ ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದರು.

    ಕೇಂದ್ರದ ಸ್ವಮಿತ್ವ ಯೋಜನೆಯಡಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. 10 ಮನೆ ಇದ್ದರು ಗ್ರಾಮಠಾಣಾ ಮಾಡಲು ಆದೇಶಿಸಲಾಗಿದೆ. 3,191 ಗ್ರಾಮಗಳಲ್ಲಿ ಡ್ರೋಣ್ ಸರ್ವೆ ಮಾಡಲಾಗಿದೆ. ಇದರಲ್ಲಿ 2,467 ಗ್ರಾಮಗಳ 8.02 ಲಕ್ಷ ಕರಡು ಪಿ.ಆರ್ ಕಾರ್ಡ್ ವಿತರಿಸಲಾಗಿದೆ ಎಂದರು. ಇದನ್ನೂ ಓದಿ: ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ನೂರು ವರ್ಷದ ನಂತರ ಈಗ ಮತ್ತೆ ಸರ್ವೆ ಮಾಡಲಾಗುತ್ತಿದೆ. ಡ್ರೋಣ್ ಸರ್ವೆ ನಿಖರವಾಗಿ ದಾಖಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಭಾಗದಲ್ಲಿಯೂ ಸರ್ವೆ ಕಾರ್ಯ ಮುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯುತ್‌ ಬಿಲ್‌ ಪಾವತಿಸದವರ ಪಟ್ಟಿ ಪ್ರಕಟ – ಮಧ್ಯಪ್ರದೇಶ ಕಂದಾಯ ಸಚಿವರೇ ನಂ.1

    ವಿದ್ಯುತ್‌ ಬಿಲ್‌ ಪಾವತಿಸದವರ ಪಟ್ಟಿ ಪ್ರಕಟ – ಮಧ್ಯಪ್ರದೇಶ ಕಂದಾಯ ಸಚಿವರೇ ನಂ.1

    ಭೋಪಾಲ್: ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ವಿದ್ಯುಚ್ಛಕ್ತಿ ಇಲಾಖೆ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಮಧ್ಯಪ್ರದೇಶದ ಕಂದಾಯ ಮತ್ತು ಸಾರಿಗೆ ಸಚಿವ ಗೋವಿಂದ್‌ ಸಿಂಗ್‌ ರಜಪೂತ್‌ ಅವರ ಹೆಸರೇ ಮೊದಲ ಸ್ಥಾನದಲ್ಲಿರುವುದು ಬೆಳಕಿಗೆ ಬಂದಿದೆ.

    ಪಟ್ಟಿಯಲ್ಲಿ ರಜಪೂತ್‌ ಅವರ ಸಹೋದರ ಗುಲಾಬ್‌ ಸಿಂಗ್‌ ರಜಪೂತ್‌ ಹೆಸರು ಕೂಡ ಇದೆ. ಅಷ್ಟೇ ಅಲ್ಲ ಕಲೆಕ್ಟರ್‌ ಬಂಗಲೆ, ಎಸ್‌ಪಿ ಕಚೇರಿ, ವೈದ್ಯರು, ನಟರು, ಸಾಮಾಜಿಕ ಕಾರ್ಯಕರ್ತರ ಹೆಸರುಗಳು ಪಟ್ಟಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ

    34,667 ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗುಲಾಬ್‌ ಸಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಕಲೆಕ್ಟರ್‌ ಬಂಗಲೆ-11,445 ರೂ., ಎಸ್‌ಪಿ ಕಚೇರಿ-23,428 ರೂ., ಎಸ್‌ಎಎಫ್‌ 16 ಬೆಟಾಲಿಯನ್‌ ಕಚೇರಿಯಿಂದ 18,650 ರೂ. ವಿದ್ಯುತ್‌ ಬಿಲ್‌ ಬಾಕಿ ಪಾವತಿಯಾಗಬೇಕಿದೆ.

    ಬಿಲ್‌ ಪಾವತಿಸುವಂತೆ ಸುಸ್ತಿದಾರರಿಗೆ ಇಲಾಖೆ ಈಗಾಗಲೇ ಎಸ್‌ಎಂಎಸ್‌ ಕಳುಹಿಸಿದೆ. ಬಾಕಿ ಇರುವ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

    ವಿದ್ಯುತ್‌ ಬಿಲ್‌ ವಸೂಲಾತಿ ಕುರಿತು ಇಲಾಖೆಯ ಎಂಜಿನಿಯರ್‌ ಎಸ್‌.ಕೆ.ಸಿನ್ಹಾ ಮಾತನಾಡಿ, ಸಾಗರನಗರ ವಿಭಾಗದಲ್ಲಿ 91 ಸಾವಿರ ಗ್ರಾಹಕರಿದ್ದು, ಅವರ ಪೈಕಿ 67 ಸಾವಿರ ಮಂದಿ ಬಿಲ್‌ ಪಾವತಿಸಿದ್ದಾರೆ. ಉಳಿದವರಿಗೆ ಬಿಲ್‌ ಪಾವತಿಸುವಂತೆ ಎಸ್‌ಎಂಎಸ್‌ ಕಳುಹಿಸಲಾಗಿದೆ. ಕರೆ ಮಾಡಿ ಕೂಡ ತಿಳಿಸಲಾಗುವುದು. ಒಂದು ವೇಳೆ ಪಾವತಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಸಚಿವರಿಂದ್ಲೇ ನೈಟ್ ಕರ್ಫ್ಯೂ ಉಲ್ಲಂಘನೆ- ಬರ್ತ್‍ಡೇ ಪಾರ್ಟಿ ಆಯೋಜಿಸಿದ ಆರ್. ಅಶೋಕ್

    ಸಚಿವರಿಂದ್ಲೇ ನೈಟ್ ಕರ್ಫ್ಯೂ ಉಲ್ಲಂಘನೆ- ಬರ್ತ್‍ಡೇ ಪಾರ್ಟಿ ಆಯೋಜಿಸಿದ ಆರ್. ಅಶೋಕ್

    ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಹುಟ್ಟುಹಬ್ಬ ಬುಧವಾರವಿದ್ದು, ಈ ಹಿನ್ನೆಲೆಯಲ್ಲಿ ಸಚಿವರೇ ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಿದ್ದಾರೆ.

    ಹೌದು. ಚಿಕ್ಕಮಗಳೂರಿನ ಕೈಮರ ಸಮೀಪ ಇರುವ ಖಾಸಗಿ ಹೋಟೆಲಿನಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದಾರೆ. ನೈಟ್ ಪಾರ್ಟಿಯಿಂದ ಸೋಂಕು ಹೆಚ್ಚುತ್ತೆ ಅಂದವರೇ ಪಾರ್ಟಿ ಮಾಡಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ಆರ್.ಅಶೋಕ್ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಪಾರ್ಟಿಯಲ್ಲಿ ಶೆಟ್ಟರ್, ಸಿ.ಟಿ.ರವಿ, ಸತೀಶ್ ರೆಡ್ಡಿ ಸೇರಿ ಹಲವರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

    ಒಟ್ಟಿನಲ್ಲಿ ನೈಟ್ ಕರ್ಫ್ಯೂ ಇದ್ದರೂ ಡಿನ್ನರ್‍ಗೆ ಒಂದೆಡೆ ಸೇರಬೇಕಾ..?, ಜನಸಾಮಾನ್ಯರಿಗೊಂದು ನ್ಯಾಯ..? ರಾಜಕಾರಣಿಗಳಿಗೊಂದು ನ್ಯಾಯನಾ..?, ರೂಲ್ಸ್ ಮಾಡುವವರಿಂದಲೇ ರೂಲ್ಸ್ ಬ್ರೇಕ್ ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

  • ನೋ ಲಾಕ್‍ಡೌನ್- ಜೀವ, ಜೀವನ ಎರಡೂ ಮುಖ್ಯ: ಆರ್.ಅಶೋಕ್

    ನೋ ಲಾಕ್‍ಡೌನ್- ಜೀವ, ಜೀವನ ಎರಡೂ ಮುಖ್ಯ: ಆರ್.ಅಶೋಕ್

    ಬೆಂಗಳೂರು: ರಾಜ್ಯ ಹಾಗೂ ಬೆಂಗಳೂರಿನಲ್ಲಿ ಯಾವುದೇ ಲಾಕ್‍ಡೌನ್ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

    ಎಲ್ಲಾ ಪಕ್ಷಗಳ ಶಾಸಕರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಶಾಸಕರು ಕೊಟ್ಟಿದ್ದಾರೆ. ಅದನ್ನು ಜಾರಿಗೆ ತರುತ್ತೇವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಸೋಂಕು ಕಡಿಮೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಮೀಸಲು ಇಡಲು ಸೂಚನೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಇಲ್ಲದವರ ಕ್ವಾರಂಟೈನ್ ಮಾಡಲು ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

    ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿ ಬಳಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಶಾಸಕರಿಗೆ ಸೂಚಿಸಿದ್ದೇವೆ. ಒಂದು ವೇಳೆ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಗಮನಕ್ಕೆ ತರಲು ತಿಳಿಸಿದ್ದೇವೆ. ಬೆಡ್ ಅಲಾಟ್ಮೆಂಟ್ ಬಗ್ಗೆ ಉಸ್ತುವಾರಿಗೆ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ನೇಮಿಸಿದ್ದೇವೆ ಎಂದು ತಿಳಿಸಿದರು.

    ಲಾಕ್ ಡೌನ್ ಇಲ್ಲ, ನೋ ಲಾಕ್ ಡೌನ್. ಲಾಕ್ ಡೌನ್ ಚರ್ಚೆಗೆ ಅಂತ್ಯ ಹಾಡಿ ಆರ್ಥಿಕ ಚೇತರಿಕೆ ಜತೆಗೆ ಕೋವಿಡ್ ನಿಯಂತ್ರಣ ಆಗಲಿದೆ. ಜೀವ, ಜೀವನ ಎರಡೂ ಮುಖ್ಯವಾಗಿದೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು ಎಂದು ಹೇಳಿದರು.

    ಕಾರ್ಪೊರೇಷನ್‍ನ ಪ್ರತಿ ವಾರ್ಡ್ ಗೆ 25 ಲಕ್ಷ ರೂ. ಮೀಸಲಿಡಲಾಗುತ್ತದೆ. ಅಲ್ಲಿನ ಜನರ ಆರೋಗ್ಯಕ್ಕಾಗಿ ಹಣವನ್ನು ಬಳಸಲಾಗುತ್ತದೆ. ಬೆಂಗಳೂರಿನಲ್ಲಿ ಹೆಚ್ಚಿನ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೆಂಗಳೂರಿನ ಶೇ.80ರಷ್ಟು ಜನರು ಬಡವರು ಲಾಕ್‍ಡೌನ್ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳುವಂತೆ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಸಲಹೆ ನೀಡಿದ್ದಾರೆ. ಅದರಂತೆ ಲಾಕ್‍ಡೌನ್ ವಿಚಾರವನ್ನು ಸರ್ಕಾರ ಕೈಬಿಟ್ಟಿದೆ ಎಂದರು.

  • ನನಗೂ ಸಿಎಂ ಆಗಲು ಅರ್ಹತೆ ಇರಬಹುದು, ಆದ್ರೆ ಅವಕಾಶ ಸಿಕ್ಕಿಲ್ಲ: ದೇಶಪಾಂಡೆ

    ನನಗೂ ಸಿಎಂ ಆಗಲು ಅರ್ಹತೆ ಇರಬಹುದು, ಆದ್ರೆ ಅವಕಾಶ ಸಿಕ್ಕಿಲ್ಲ: ದೇಶಪಾಂಡೆ

    ನವದೆಹಲಿ: ನನಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇರಬಹುದು, ಆದರೆ ಅವಕಾಶ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಎಂದಿಗೂ ಬೇಸರ ಪಟ್ಟುಕೊಂಡಿಲ್ಲವೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇಜವಾಬ್ದಾರಿ ಹೇಳಿಕೆ ನೀಡುವಂತಹ ವ್ಯಕ್ತಿಯಲ್ಲ. ಅವರ ಹೇಳಿಕೆಯಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಯಾಗುತ್ತಿದೆ. ನನ್ನ ಅನುಭವದಲ್ಲಿ ಸಾಕಷ್ಟು ರಾಜಕೀಯ ಏರುಪೇರುಗಳನ್ನು ಕಂಡಿದ್ದೇನೆ. ಆದರೆ ಈ ಥರದ ವಾತಾವರಣ ಕಂಡಿಲ್ಲ. ಸಿದ್ದರಾಮಯ್ಯನವರು ತಮ್ಮ ಹೇಳಿಕೆಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಕ್ಕೆ ಅವರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಸಿಎಂ ಆಗ್ತೀನಿ ಅಂತ ಹೇಳಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

    ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನನ್ನು ಸಹ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳುತ್ತಾರೆ. ಅವರಿಗೆ ಗೊತ್ತಿರಬಹುದು ನನಗೂ ಸಿಎಂ ಆಗುವ ಅರ್ಹತೆಯಿದೆ ಎಂದು ಹೀಗಾಗಿ ಅವರು ಆ ರೀತಿ ಹೇಳಿದ್ದಾರೆ. ನನಗೂ ಸಿಎಂ ಆಗುವ ಆರ್ಹತೆ ಇರಬಹುದು, ಆದರೆ ಅವಕಾಶಗಳು ಸಿಕ್ಕಿಲ್ಲ. ಅವಕಾಶ ಸಿಕ್ಕಿಲ್ಲವೆಂದು ನಾನೆಂದೂ ಬೇಸರಪಟ್ಟುಕೊಂಡವನಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಸಚಿವ ದೇಶಪಾಂಡೆ

    ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಸಚಿವ ದೇಶಪಾಂಡೆ

    -ನಾನೂ ಉತ್ತರ ಕರ್ನಾಟಕದವನೇ

    ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ, ನಾನೂ ಕೂಡ ಉತ್ತರ ಕರ್ನಾಟಕದವನೇ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

    ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ್ದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ವಿರೋಧ ಪಕ್ಷದವರು ಆ ರೀತಿ ಮಾತನಾಡುತ್ತಿರುವುದು ತಪ್ಪಲ್ಲ. ಸಮ್ಮಿಶ್ರ ಸರ್ಕಾರಕ್ಕೆ ನಾಡಿನ ಜನ ಬೆಂಬಲ ಕೊಡುತ್ತಾರೆ. ಯಾವುದೇ ಚುನಾವಣೆಯಾಗಲಿ, ಮತದಾರರೇ ದೇವರು. ಅವರ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗೋದು ಧರ್ಮ. ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ, ನಾನೂ ಕೂಡ ಉತ್ತರ ಕರ್ನಾಟಕದವನೇ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದರು.

    ಸುದ್ದಿಗಾರರು ಕೊಡಗು ಸಂತ್ರಸ್ತರಿಗೆ ಸಚಿವ ರೇವಣ್ಣ ಬಿಸ್ಕತ್ ಎಸೆದ ವಿಚಾರ ಪ್ರಸ್ತಾಪಿಸಿದಾಗ, ಅವರು ಮಾಡಿದ ರೀತಿ ಸರಿಯಲ್ಲ, ಆದರೆ ಅವರು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಪರಿಹಾರ ಕೇಂದ್ರದಲ್ಲಿ ಸಾಕಷ್ಟು ಸಂತ್ರಸ್ತರಿದ್ದರಿಂದ ಗೊಂದಲವುಂಟಾಗಿದೆ. ಎಲ್ಲರಿಗೂ ಬಿಸ್ಕೆಟ್ ನೀಡುವ ಅವಸರದಲ್ಲಿ ರೇವಣ್ಣ ಹಾಗೆ ಮಾಡಿದ್ದಾರೆ ಅಷ್ಟೇ ಎಂದು ತಿಳಿಸಿದರು.

    ಈ ವೇಳೆ ಕೃಷ್ಣಾ ಮೇಲ್ದಂಡೆ ಕಾಮಾಗಾರಿ ವಿಳಂಬದ ಬಗ್ಗೆ ಪರಿಸೀಲನೆ ನಡೆದಿದೆ, ಈ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್ ಜೊತೆ ಮಾತನಾಡೋದಾಗಿ ಹೇಳಿ, ಕಾಂಗ್ರೆಸ್ಸಿನ 9 ಶಾಸಕರುಗಳು ಬಿಜೆಪಿಗೆ ಬರುತ್ತಾರೆಂಬ ಬಿ.ವೈ. ರಾಘವೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಘವೇಂದ್ರರವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತಮ್ಮ 82 ಶಾಸಕರು ಎಲ್ಲಿದ್ದಾರೆಂದು ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ಕೋಲಾರ: ಮಳೆ ಸಂತ್ರಸ್ತರಿಗೆ ಬಿಸ್ಕೆಟ್ ಕೊಡುವ ರೀತಿ ತಪ್ಪು, ಆದರೆ ಉದ್ದೇಶ ಪೂರ್ವಕವಾಗಿ ನಿರಾಶ್ರಿತರಿಗೆ ಅವಮಾನ ಮಾಡಬೇಕೆಂದು ಹಾಗೆ ಸಚಿವ ರೇವಣ್ಣ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ವಿಚಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಸ್ಕೆಟ್ ಎಸೆದಿರುವುದು ತಪ್ಪು, ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ವಿತರಣೆ ಮಾಡುವಾಗ ಸರಿಯಾಗಿ ವಿತರಣೆ ಮಾಡಬೇಕಿತ್ತು. ಆದರೆ ಸಂತ್ರಸ್ತರಿಗೆ ಅವಮಾನಮಾಡಬೇಕೆಂದು ಹಾಗೆ ಮಾಡಿಲ್ಲ ಎಂದು ರೇವಣ್ಣನವರ ಪರ ಬ್ಯಾಟ್ ಬೀಸಿದ್ದಾರೆ.

    ಈಗಾಗಲೇ ಸಿಎಂ ಕುಮಾರಸ್ವಾಮಿಗಳು ಈ ವಿಚಾರಕ್ಕೆ ಸ್ಪಷ್ಟನೆ ನೀಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಈ ವೇಳೇ ಕಂದಾಯ ಅದಾಲತ್ 6 ತಿಂಗಳುಗಳ ಕಾಲ ವಿಸ್ತರಣೆ ಮಾಡಿದ್ದು, ರಾಜ್ಯದ 30 ಸಾವಿರ ಹಳ್ಳಿಗಳಲ್ಲಿ 10 ಸಾವಿರ ಹಳ್ಳಿಗಳು ಪೋಡಿ ಮುಕ್ತವಾಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv