Tag: Revenue Inspector

  • ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು ಆರೋಪ – ಕಂದಾಯ ನಿರೀಕ್ಷಕ, ಗ್ರಾಮಾಡಳಿತ ಅಧಿಕಾರಿ ಸಸ್ಪೆಂಡ್

    ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು ಆರೋಪ – ಕಂದಾಯ ನಿರೀಕ್ಷಕ, ಗ್ರಾಮಾಡಳಿತ ಅಧಿಕಾರಿ ಸಸ್ಪೆಂಡ್

    ಯಾದಗಿರಿ: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಕಂದಾಯ ನಿರೀಕ್ಷಕ ಮತ್ತು ಗ್ರಾಮಾಡಳಿತ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

    ಯಾದಗಿರಿ (Yadagiri) ಜಿಲ್ಲೆಯ ಶಹಾಪುರ (Shahapura) ತಾಲೂಕಿನ ದೋರನಹಳ್ಳಿಯ ಕಂದಾಯ ನಿರೀಕ್ಷಕ ಮಹೇಂದ್ರಸ್ವಾಮಿ ಹಾಗೂ ಗ್ರಾಮಾಡಳಿತ ಅಧಿಕಾರಿ ದೇವಿಂದ್ರಪ್ಪ ಅವರನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಮಟ್ಟಣ್ಣನವರ್ ಬಿಜೆಪಿ ಅಭ್ಯರ್ಥಿ ಆಗಿದ್ದವರು, ತಿಮರೋಡಿ RSSನವ್ರು, ಬಿಜೆಪಿ ಹೋರಾಟ ಯಾರ ವಿರುದ್ಧ – ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಅಕ್ರಮ ಗಣಿಗಾರಿಕೆಯಲ್ಲಿ ಇಬ್ಬರು ಅಧಿಕಾರಿಗಳು ಶಾಮೀಲಾಗಿರುವ ಆಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

  • ಭಕ್ತರು ದೇವರ ಹುಂಡಿಗೆ ಹಾಕಿದ್ದ ಹಣ ಪತ್ನಿ ಖಾತೆಗೆ – ಮುಜರಾಯಿ ಇಲಾಖೆಯ 60 ಲಕ್ಷಕ್ಕೆ ಕನ್ನ

    ಭಕ್ತರು ದೇವರ ಹುಂಡಿಗೆ ಹಾಕಿದ್ದ ಹಣ ಪತ್ನಿ ಖಾತೆಗೆ – ಮುಜರಾಯಿ ಇಲಾಖೆಯ 60 ಲಕ್ಷಕ್ಕೆ ಕನ್ನ

    – ಸರ್ಕಾರಿ ದುಡ್ಡಲ್ಲಿ ಮೋಜು ಮಸ್ತಿ ಮಾಡಿ ಜೈಲುಪಾಲು

    ಚಿಕ್ಕಬಳ್ಳಾಪುರ: ಭಕ್ತರು ದೇವರ ಹುಂಡಿಗೆ ಹಾಕಿದ್ದ ಮುಜರಾಯಿ ಇಲಾಖೆಯ (Muzrai Department) ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸರ್ಕಾರಿ ಅಧಿಕಾರಿಯೋರ್ವ ಹೆಂಡತಿ ಖಾತೆಗೆ ಹಾಕಿಕೊಂಡು ಮೋಜು ಮಸ್ತಿ ಮಾಡಿ, ಮನೆ ಸಹ ಕಟ್ಟಿಸಿಕೊಂಡ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.


    ಹೌದು, ಮುಜರಾಯಿ ಖಾತೆಯಲ್ಲಿನ ಹಣವನ್ನು ಹೆಂಡತಿ ಸೇರಿ ಇತರರ ಖಾತೆಗಳಿಗೆ ಹಾಕಿಕೊಂಡು ಮೋಜು, ಮಸ್ತಿ ಮಾಡಿದ್ದಾನೆ. ಹೇಮಂತ್ ಕುಮಾರ್, ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ರೆವೆನ್ಯೂ ಇನ್ಸ್ಪೆಕ್ಟರ್ ಆಗಿದ್ದ. ಸಾಸಲು ಹೋಬಳಿಗೆ ಬರುವ ಮೊದಲು ಮುಜರಾಯಿ ಇಲಾಖೆಯಲ್ಲಿ ಹೇಮಂತ್ ಕುಮಾರ್ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಇಲಾಖೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡಿದ್ದ. 2023ರಿಂದ ಇಲ್ಲಿಯವರೆಗೆ ಇಬ್ಬರು ತಹಶೀಲ್ದಾರ್, ಓರ್ವ ಕೇಸ್ ವರ್ಕರ್ ಸಹಿ ಮತ್ತು ಸೀಲ್ ನಕಲಿ ಮಾಡಿ ಸುಮಾರು 60 ಲಕ್ಷ ರೂ. ಹಣವನ್ನ ಸ್ವಂತ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.ಇದನ್ನೂ ಓದಿ: ದಿನ ಭವಿಷ್ಯ 20-02-2025

    ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾಗಿದ್ದರೂ ಮುಜರಾಯಿ ಇಲಾಖೆಯ ಚೆಕ್ ಬುಕ್‌ಗಳನ್ನು ಇಲಾಖೆಗೆ ನೀಡದೇ ತನ್ನ ಬಳಿಯೇ ಉಳಿಸಿಕೊಂಡಿದ್ದ. ಅಧಿಕಾರಿಗಳು ಕೇಳಿದಾಗ ಅವರಿಗೆ ಕೊಟ್ಟಿದ್ದೇನೆ, ಇವರಿಗೆ ಕೊಟ್ಟಿದ್ದೇನೆ ಎಂದು ಮರೆಮಾಚಿ, ಹಣ ಡ್ರಾ ಮಾಡಿಕೊಂಡಿದ್ದಾನೆ. ಹಂತ-ಹಂತವಾಗಿ ಎರಡು ಮೂರು ವರ್ಷದಿಂದ ಬರೋಬ್ಬರಿ 60 ಲಕ್ಷಕ್ಕೂ ಹೆಚ್ಚು ಹಣವನ್ನು ಹೆಂಡತಿ ಸೇರಿ ಇತರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

    ತಹಶೀಲ್ದಾರ್ ಇಲಾಖೆ ಖಾತೆಯಲ್ಲಿನ ಹಣ ತಾಳೆ ಮಾಡುವಾಗ ಅನುಮಾನ ಬಂದು ಪರಿಶೀಲನೆ ನಡೆಸಿ, ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ವೇಳೆ ಆ ಹಣದಲ್ಲಿ ಮನೆಯನ್ನ ಕಟ್ಟಿಕೊಂಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.

    ಸದ್ಯ ಪ್ರಕರಣ ಬೆಳಕಿಗೆ ಬಂದ ನಂತರ ಗಂಡ ಲೂಟಿ ಮಾಡಿದ್ದ 60 ಲಕ್ಷ ರೂ. ಹಣವನ್ನ ಹೆಂಡತಿ ಮರಳಿ ಮುಜರಾಯಿ ಇಲಾಖೆಯ ಖಾತೆಗಳಿಗೆ ವಾಪಸ್ ಹಾಕಿದ್ದಾಳೆ. ಇನ್ನೂ ಆರ್‌ಐ ಹೇಮಂತ್ ಕುಮಾರ್‌ನನ್ನ ಸೇವೆಯಿಂದ ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಹೇಮಂತ್ ಕುಮಾರ್‌ನನ್ನ ಪರಪ್ಪನ ಆಗ್ರಹಾರ ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 20-02-2025