Tag: revenge

  • ಸೇಡಿನ ಕೊಲೆಗಳಲ್ಲಿ ದೇಶಕ್ಕೆ ಬೆಂಗಳೂರು ನಂ.1- ನಂತರದ ಸ್ಥಾನದಲ್ಲಿ ದೆಹಲಿ

    ಸೇಡಿನ ಕೊಲೆಗಳಲ್ಲಿ ದೇಶಕ್ಕೆ ಬೆಂಗಳೂರು ನಂ.1- ನಂತರದ ಸ್ಥಾನದಲ್ಲಿ ದೆಹಲಿ

    ಬೆಂಗಳೂರು: ದೇಶದಲ್ಲೇ ಹೆಚ್ಚು ಸೇಡಿನ ಕೊಲೆಗಳು ನಡೆದಿರುವ ಪೈಕಿ ಸಿಲಿಕಾನ್ ಸಿಟಿ ನಂ.1 ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ದೆಹಲಿ ಇದೆ.

    ಉದ್ಯಾನ ನಗರಿಯಲ್ಲಿ 2019ರಲ್ಲಿ 106 ಸೇಡಿನ ಕೊಲೆಗಳು ನಡೆದಿದ್ದು, ದೆಹಲಿಯಲ್ಲಿ 87 ಕೊಲೆಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್‍ಸಿಆರ್‍ಬಿ) ವರದಿ ಬಿಡುಗಡೆ ಮಾಡಿದೆ. 2019ರಲ್ಲಿ ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು, ಒಟ್ಟು ಕೊಲೆಗಳ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನ ಪಡೆದಿದೆ. ದೆಹಲಿಯಲ್ಲಿ ಒಟ್ಟು 505 ಕೊಲೆ ಪ್ರಕರಣಗಳು ನಡೆದಿವೆ.

    ಒಟ್ಟು ಕೊಲೆ ಪ್ರಕರಣಲ್ಲಿ ಶೇ.75 ಪ್ರಕರಣಗಳು ವೈಯಕ್ತಿಕ ದ್ವೇಷ, ಮಾರಾಟ ಹಾಗೂ ಪೂರ್ವ ನಿಯೋಜಿತ ಕೃತ್ಯಗಳಾಗಿವೆ. ಅಲ್ಲದೆ ಕೊಲೆಗಾರರು ಸಂತ್ರಸ್ತರಿಗೆ ಪರಿಚಿತರೇ ಆಗಿದ್ದಾರೆ. ವೈಯಕ್ತಿಕ ದ್ವೇಷದಿಂದಾಗಿಯೇ ಹೆಚ್ಚಿನ ಕೊಲೆಗಳು ನಡೆದಿದ್ದು, ಭೂಮಿ, ಮಹಿಳೆ ಹಾಗೂ ಸಂಪತ್ತಿಗಾಗಿ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ ಎಂಬುದು ಬಹಿರಂಗವಾಗಿದೆ. ವೈಯಕ್ತಿಕ ದ್ವೇಷದ ಕೊಲೆಗಳು ಕುಟುಂಬಗಳಲ್ಲಿ, ಸ್ನೇಹಿತರು ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ ನಡುವೆ ನಡೆದಿವೆ. ಲಾಭಕ್ಕಾಗಿ ನಡೆದಿರುವ ಕೊಲೆಗಳಿಗೆ ಈ ತನಿಖೆ ಕಷ್ಟವೇನಲ್ಲ. ಅಪರಾಧ ಉದ್ದೇಶವನ್ನು ಪತ್ತೆ ಹಚ್ಚಿದ ಬಳಿಕ ಶಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಬಂಧಿಸುವುದು ಸುಲಭವಾಗುತ್ತದೆ ಎಂದು ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.

    ವೈಯಕ್ತಿಕ ಲಾಭಕ್ಕಾಗಿ ನಡೆಯುವ ಕೊಲೆಗಳು ಹೆಚ್ಚು ಆತಂಕಕಾರಿ. ದ್ವೇಷದ ಆಧಾರಿತ ಕೊಲೆಗಳು ಹೆಚ್ಚಾಗಿ ನಡೆಯುವುದು ವೈಯಕ್ತಿಕ ಕಾರಣಗಳಿಂದ. ಲಾಭಾಕ್ಕಾಗಿ ಕೊಲೆ ಮಾಡುವ ಉದ್ದೇಶವೆಂದರೆ ಚಿನ್ನ, ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುವುದು. ಇತ್ತೀಚೆಗೆ ಬೆಂಗಳೂರಿನ ಹೆಬ್ಬಗೋಡುವಿನಲ್ಲಿ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆಗಾರ ಮೊಬೈಲ್ ಫೋನ್ ಹಾಗೂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಲಾಭಕ್ಕಾಗಿ ಮಾಡುವ ಕೊಲೆಯ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತವೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

  • ಶಪಥ ಮಾಡಿ ಕೊಲೆ- ರಕ್ತಮಯವಾದ ಲಾಂಗ್ ತೋರ್ಸಿ ಗ್ರಾಮದಲ್ಲಿ ವಿಷಯ ಹೇಳಿದ್ದ

    ಶಪಥ ಮಾಡಿ ಕೊಲೆ- ರಕ್ತಮಯವಾದ ಲಾಂಗ್ ತೋರ್ಸಿ ಗ್ರಾಮದಲ್ಲಿ ವಿಷಯ ಹೇಳಿದ್ದ

    – ಕೊಲೆ ಮಾಡಿದ್ದ 6 ಮಂದಿ ಅಂದರ್

    ರಾಮನಗರ: ಜಿಲ್ಲೆಯ ಜಾಲಮಂಗಲ ಗ್ರಾಮ ಪಂಚಾಯತ್‍ನ ಮಾಜಿ ಉಪಾಧ್ಯಕ್ಷ ಶ್ರೀಧರ್‍ನನ್ನ ಫೆ. 10 ರಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರು ಜನ ಆರೋಪಿಗಳನ್ನ ಬಂಧಿಸುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಮನಗರ ತಾಲೂಕಿನ ಜಾಲಮಂಗಲ ನಿವಾಸಿ ಅಭಿಷೇಕ್, ವಿಜಯ್, ತಡಕವಾಗಿಲು ಗ್ರಾಮದ ಮನು, ಚನ್ನೇನಹಳ್ಳಿ ಗ್ರಾಮದ ಹನುಮಾನ್, ಸಿದ್ದಲಿಂಗ ಹಾಗೂ ಮಹೇಶ್ ಬಂಧಿತ ಆರೋಪಿಗಳು.

    ಫೆಬ್ರವರಿ 10ರಂದು ಮಧ್ಯಾಹ್ನದ ವೇಳೆ ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ ಹಾಗೂ ಮಧು ಎಂಬವರನ್ನ ಇಂಡಿಕಾ ಕಾರಿನಲ್ಲಿ ಬಂದ ಅಭಿಷೇಕ್, ವಿಜಯ್, ಮನು, ಹನುಮಾನ್ ನಾಗರಕಲ್ಲುದೊಡ್ಡಿ ಬಳಿ ಕಾರಿನಿಂದ ಬೈಕ್ ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿದ್ದರು. ನಂತರ ಬೈಕ್ ನಿಂದ ಬಿದ್ದ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕತ್ತನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

    ವೇಳೆ ಬೈಕ್‍ನ ಹಿಂಭಾಗದಲ್ಲಿ ಇದ್ದ ಮಧು ಎಂಬಾತ ತಪ್ಪಿಸಿಕೊಂಡಿದ್ದ. ನಂತರ ಕೊಲೆ ಮಾಡಿರುವ ವಿಚಾರವನ್ನು ಆರೋಪಿಗಳು ಗ್ರಾಮದಲ್ಲಿ ಲಾಂಗ್ ತೋರಿಸಿ ಕೊಲೆ ಮಾಡಿದ್ದೇವೆ ಎಂದು ಹೇಳಿ ಹೋಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

    ಕೊಲೆಗೆ ಕಾರಣವೇನು:
    ಶ್ರೀಧರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್‍ನ ತಂದೆ ಕುಮಾರ ಅಲಿಯಾಸ್ ದತ್ತಾತ್ರೇಯ ಎಂಬಾತ ಅದೇ ಜಾಲಮಂಗಲ ಗ್ರಾಮಪಂಚಾಯಿತಿ ಸದಸ್ಯನಾಗಿದ್ದ. ಬೇರೆ ಬೇರೆ ಪಕ್ಷಕ್ಕೆ ಸೇರಿದ್ದ ಶ್ರೀಧರ್ ಹಾಗೂ ಕುಮಾರ್ ನಡುವೆ ಹಲವಾರು ವರ್ಷಗಳಿಂದ ಸಾಕಷ್ಟು ವೈರತ್ವವಿತ್ತು. ಹೀಗಾಗಿ 2016ರಲ್ಲಿ ತನ್ನ ಸಹೋದರರ ಜೊತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರನನ್ನ ಶ್ರೀಧರ್ ಹಾಗೂ ಆತನ ಟೀಂ ಬರ್ಬರವಾಗಿ ಹತ್ಯೆ ಮಾಡಿತ್ತು.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನಂತರ ಶ್ರೀಧರ್ ಜೈಲು ಪಾಲಾಗಿ 2018ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಹೊರ ಬಂದ ಮೇಲೆ ಸುಮ್ಮನಿರದ ಶ್ರೀಧರ್, ಕುಮಾರನ ಮಗನಾದ ಆರೋಪಿ ಅಭಿಷೇಕ್‍ಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೇ ಅಭಿಷೇಕ್ ತಾಯಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಜೊತೆಗೆ ಕುಮಾರ್ ಕೊಲೆ ಪ್ರಕರಣದ ಸಾಕ್ಷಿಗಳಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಅಭೀಷೇಕ್ ನನ್ನ ಮನೆಯಿಂದ ಹೊರ ಬಾರದ ರೀತಿಯಲ್ಲಿ ಬೆದರಿಸಿದ್ದ.

    ಶ್ರೀಧರ್‍ನ ಆಟಾಟೋಪದಿಂದ ರೋಸಿ ಹೋಗಿದ್ದ ಅಭಿಷೇಕ್, ಶ್ರೀಧರ್ ನನ್ನ ಹಾಗೆ ಬಿಟ್ಟರೇ ಉಳಿಗಾಲವಿಲ್ಲ ಎಂದು ಒಂದು ತಿಂಗಳಗಳ ಕಾಲ ಪ್ಲಾನ್ ಮಾಡಿದ್ದ. ಸ್ನೇಹಿತರ ಸಹಾಯ ಪಡೆದು ಬಾಡಿಗೆಗೆಂದು ಇಂಡಿಕಾ ಕಾರು ಬಾಡಿಗೆ ಮಾಡಿಕೊಂಡು, ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ ನನ್ನ ತನ್ನ ಸಂಗಡಿಗರ ಜೊತೆಗೂಡಿ ಹತ್ಯೆ ಮಾಡಿದ್ದ. ಅಲ್ಲದೇ ಮೊದಲೇ ತನ್ನ ತಂದೆಯ ಕೊಲೆಯ ಬಳಿಕ ಶ್ರೀಧರ್‍ನನ್ನ ಕೊಲೆ ಮಾಡುವ ಶಪಥ ಸಹ ಮಾಡಿದ್ದ ಅಭಿಷೇಕ್ ತನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಂಡಿದ್ದಾನೆ.

  • ಬೆಂಗಳೂರಿನಲ್ಲಿ ಮತ್ತೆ ಲಾಂಗ್ ಮಚ್ಚುಗಳ ಆರ್ಭಟ – ಫಿಲ್ಮಿಸ್ಟೈಲ್‍ನಲ್ಲಿ ರೌಡಿ ಮನೆಗೆ ನುಗ್ಗಿ ಅಟ್ಟಹಾಸ

    ಬೆಂಗಳೂರಿನಲ್ಲಿ ಮತ್ತೆ ಲಾಂಗ್ ಮಚ್ಚುಗಳ ಆರ್ಭಟ – ಫಿಲ್ಮಿಸ್ಟೈಲ್‍ನಲ್ಲಿ ರೌಡಿ ಮನೆಗೆ ನುಗ್ಗಿ ಅಟ್ಟಹಾಸ

    ಬೆಂಗಳೂರು: ರೌಡಿ ಮನೆಗೆ ನುಗ್ಗಿ ಮತ್ತೊಂದು ರೌಡಿ ಗ್ಯಾಂಗ್ ಅಟ್ಯಾಕ್ ಮಾಡಿದ ಘಟನೆ ಏ. 4ರಂದು ಬೆಂಗಳೂರಿನ ಹನುಮಂತನಗರ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರೌಡಿ ಮುಕುಂದ ಮೇಲೆ ರೌಡಿ ರಜ್ಜು ಗ್ಯಾಂಗ್ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ರೌಡಿ ರಜ್ಜು ಮತ್ತು ರೌಡಿ ಮುಕುಂದ ನಡುವೆ ಇದ್ದ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

    ವೈಷಮ್ಯದ ಹಿನ್ನೆಲೆ ರಜ್ಜು ಮೇಲೆ ಕಳೆದ ತಿಂಗಳು ಮುಕುಂದನ ಮೇಲೆ ಅಟ್ಯಾಕ್ ಮಾಡಿದ್ದ. ಈ ಪ್ರಕರಣದಲ್ಲಿ ಮುಕುಂದನನ್ನು ಪೊಲೀಸರು ಗೂಂಡಾ ಅಟ್ಯಾಕ್‍ನಲ್ಲಿ ಜೈಲಿಗೆ ಕಳುಹಿಸಿದ್ದರು. ರಜ್ಜು ಪ್ರಕರಣದ ಸೇಡು ತೀರಿಸಿಕೊಳ್ಳೋಕೆ ಮುಕುಂದನ ಹುಡುಗರ ಮೇಲೆ ಅಟ್ಯಾಕ್ ಮಾಡಿದ್ದಾನೆ.

    ರೌಡಿಶೀಟರ್ ರಜ್ಜು ಸಹಚರರಿಂದ ಮುಕುಂದನ ಹುಡುಗರ ಮನೆ ಮೇಲೆ ದಾಳಿ ನಡೆದಿದೆ. ಮನೆಗೆ ನುಗ್ಗಿ ಮನಬಂದಂತೆ ಮಚ್ಚು ಲಾಂಗ್‍ಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಕೋರರು ನಡೆಸಿದ ಈ ಭೀಕರ ಕೃತ್ಯ ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

  • ಹಳೆಯ ದ್ವೇಷಕ್ಕೆ ರೈತನ 3 ಹಸುಗಳಿಗೆ ಕಿಡಿಗೇಡಿಗಳಿಂದ ವಿಷ

    ಹಳೆಯ ದ್ವೇಷಕ್ಕೆ ರೈತನ 3 ಹಸುಗಳಿಗೆ ಕಿಡಿಗೇಡಿಗಳಿಂದ ವಿಷ

    ಬೀದರ್: ಹಳೆಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ರೈತರೊಬ್ಬರ ಮೂರು ಹಸುಗಳಿಗೆ ವಿಷ ಹಾಕಿ ಅಮಾನವೀಯತೆ ಮೆರೆದ ಘಟನೆ ಬೀದರ್ ನಲ್ಲಿ ನಡೆದಿದೆ.

    ವಿಷ ತಿಂದ ಹಸುಗಳು ಜಿಲ್ಲೆಯ ಔರಾದ್ ಪಟ್ಟಣದ ಗೋವಿಂದ ರೆಡ್ಡಿಗೆ ಸೇರಿದ್ದಾಗಿವೆ. ಯಾರೋ ಕಿಡಿಗೇಡಿಗಳು ಗೋವಿಂದ ಅವರ ಮೂರು ಹಸುಗಳಿಗೆ ವಿಷ ಹಾಕಿದ್ದಾರೆ. ವಿಷ ಹಾಕಿದ ಪರಿಣಾಮ ಮೂಕ ಪ್ರಾಣಿಗಳು ನರಳಿ ನರಳಿ ಕೊನೆಯುಸಿರೆಳೆದಿವೆ.

    ಬಸ್ ಸ್ಟ್ಯಾಂಡ್ ಹಿಂದಿನ ರಸ್ತೆ ಪಕ್ಕದಲ್ಲಿ ಹಸುಗಳಿಗೆ ಮೇವು ಹಾಕಲಾಗಿತ್ತು. ಆದರೆ ತಡರಾತ್ರಿ ಅಪರಿಚಿತರು ಮೇವಿನಲ್ಲಿ ಕ್ರಿಮಿನಾಶಕ ವಿಷ ಬೆರೆಸಿ ಹಸುಗಳ ಸಾವಿಗೆ ಕಾರಣರಾಗಿದ್ದಾರೆ. ತೀವ್ರ ಅಸ್ವಸ್ಥರಾದ ಹಸುಗಳಿಗೆ ಸ್ಥಳೀಯ ಪಶು ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹಸುಗಳು ಮತಪಟ್ಟಿದೆ.

    ಸದ್ಯ ಘಟನೆ ನಂತರ ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಕು ಹಸುಗಳನ್ನು ಕಳೆದುಕೊಂಡು ಕಂಗಾಲಾದ ಗೋವಿಂದ ರೆಡ್ಡಿ ಅವರು ಔರಾದ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ – ಪ್ರಕರಣಕ್ಕೆ ಸ್ಪೋಟಕ ತಿರುವು!

    ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ – ಪ್ರಕರಣಕ್ಕೆ ಸ್ಪೋಟಕ ತಿರುವು!

    ಬೆಂಗಳೂರು: ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಪ್ರಕರಣಕ್ಕೆ ಈಗ ಒಂದು ಸ್ಪೋಟಕ ತಿರುವು ಸಿಕ್ಕಿದೆ.

    ಕಳೆದ ರಾತ್ರಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರೈಲ್ವೇ ಗೊಲ್ಲಹಳ್ಳಿಯ ಮಾರುತಿ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರದಲ್ಲಿ ಯುವಕನನ್ನು ಬಿಯರ್ ಬಾಟಲುಗಳಿಂದ ಬಡಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಭೈರಶಟ್ಟಿಹಳ್ಳಿ ಗ್ರಾಮದ ನಿವಾಸಿ ಮಾರುತಿ ಕೊಲೆಯಾದ ದುರ್ದೈವಿಯಾಗಿದ್ದು, ಈ ಪ್ರಕರಣಕ್ಕೆ ಹೊಸ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.

    ಮಾರುತಿಯನ್ನ ಕೊಲೆ ಮಾಡಿದ ಆರೋಪಿಗಳು ಬಾಲ್ಯದ ಸ್ನೇಹಿತರಾಗಿದ್ದಾರೆ. ಒಂದು ವರ್ಷದ ಹಿಂದೆ ನಡೆದ ಗಲಾಟೆಯನ್ನು ಮನದಲ್ಲಿಟ್ಟು, ಮಾರುತಿಯನ್ನು ಕೊಲೆ ಮಾಡುವುದಾಗಿ ಮೊದಲೇ ತಿಳಿಸಿದ್ದರು ಎಂಬ ಮಾಹಿತಿ ದೊರಕಿದೆ.

    ಅಲ್ಲದೆ ರಾತ್ರಿ ಪಾನಮತ್ತರಾಗಿದ್ದ ರವಿ, ಮಂಜುನಾಥ್ ಹಾಗೂ ರಾಜೇಶ್ ಎಂಬುವವರು ಕೊಲೆಯಾದ ಮಾರುತಿಗೆ ಆತನ ತಮ್ಮನ ಧ್ವನಿಯಲ್ಲಿ ಫೋನ್ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ ಎಂದು ಮೃತನ ತಂದೆ ಕೃಷ್ಣಪ್ಪ ಗಂಭೀರವಾದ ಆರೋಪವನ್ನ ಮಾಡಿದ್ದಾರೆ.

    ಈ ವೇಳೆ ಕೊಲೆಯಾದ ಮಾರುತಿ ಸ್ನೇಹಿತ ಶಶಿಕುಮಾರ್ ಮೇಲೂ ಈ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ನಾಪತ್ತೆಯಾಗಿದ್ದರು. ಇನ್ನೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು ಓರ್ವ ಆರೋಪಿ ರಾಜೇಶ್‍ನನ್ನು ಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಇದನ್ನೂ ಓದಿ: ಜಾತ್ರೆಯ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

  • ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು- 5 ವರ್ಷದ ಅಪ್ರಾಪ್ತನನ್ನ ಕೊಂದ 7ರ ಬಾಲಕ

    ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು- 5 ವರ್ಷದ ಅಪ್ರಾಪ್ತನನ್ನ ಕೊಂದ 7ರ ಬಾಲಕ

    ಆಗ್ರಾ: ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹುಡುಗನೊಬ್ಬ 5 ವರ್ಷದ ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    7 ವರ್ಷದ ವಿವೇಕ್(ಹಸರು ಬದಲಾಯಿಸಲಾಗಿದೆ) ಕೊಲೆ ಮಾಡಿರುವ ಆರೋಪಿ. ಎರಡು ವಾರಗಳ ಹಿಂದೆ ಈ ಕೊಲೆ ನಡೆದಿದ್ದು, ಸೋಮವಾರದಂದು ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಬಾಲಕನ ಮೃತದೇಹ 10 ದಿನಗಳ ಬಳಿಕ ಚರಂಡಿಯಲ್ಲಿ ಪತ್ತೆಯಾಗಿದೆ.

    ಏನಿದು ಪ್ರಕರಣ: ವಿವೇಕ್‍ನ ಅಣ್ಣ 5 ವರ್ಷದ ಆಯುಶ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ. ಈ ವೇಳೆ ಆಯುಶ್ ಕಲ್ಲಿನಿಂದ ಹೊಡೆದಿದ್ದು, ವಿವೇಕ್ ಅಣ್ಣ ಗಾಯಗೊಂಡಿದ್ದ. ಈ ಬಗ್ಗೆ ವಿವೇಕ್ ಗೆ ಗೊತ್ತಾದ ನಂತರ ಹಲ್ಲೆಗೆ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದ. ಮರುದಿನ ಆಯುಶ್ ಪೋಷಕರು ಇಲ್ಲದ ವೇಳೆ ವಿವೇಕ್ ಆತನಿಗೆ ಚಾಕ್ಲೇಟ್ ಕೊಡುವುದಾಗಿ ಪುಸಲಾಯಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ.

    ಆಯುಶ್ ಮನೆಗೆ ಹಿಂದಿರುಗದ ಕಾರಣ ಆತನ ತಂದೆ ಪಪ್ಪು ಯಾದವ್ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 16ರಂದು ಪ್ರಕರಣ ದಾಖಲಿಸಿದ್ದರು. ಕೊನೆಯ ಬಾರಿಗೆ ವಿವೇಕ್‍ನೊಂದಿಗೆ ಆಯುಶ್ ಇದ್ದಿದ್ದನ್ನು ನೋಡಿದ್ದೆವು ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದರು. ಆದ್ರೆ ವಿವೇಕ್ ಆಯುಶ್‍ನನ್ನು ಅಂಗಡಿಯ ಬಳಿಯೇ ಬಿಟ್ಟು ಬಂದಿದ್ದಾಗಿ ಹೇಳಿದ್ದ. ಆದ್ರೆ ಅಲ್ಲೂ ಆಯುಶ್ ಪತ್ತೆಯಾಗಿರಲಿಲ್ಲ.

    ನವೆಂಬರ್ 27ರಂದು ಫ್ಯಾಕ್ಟರಿ ನೌಕರರೊಬ್ಬರು ಚರಂಡಿಯಲ್ಲಿ ಬಾಲಕನ ಶವ ತೇಲುತ್ತಿದ್ದುದನ್ನು ನೋಡಿದ್ದರು. ನಂತರ ಅದು ಆಯುಶ್ ಶವ ಎಂದು ಗುರುತಿಸಲಾಗಿತ್ತು.

    ಆಯುಶ್ ಕೊನೆಯ ಬಾರಿಗೆ ವಿವೇಕ್ ಜೊತೆ ಕಾಣಿಸಿಕೊಂಡಿದ್ದರಿಂದ ನಾವು ವಿವೇಕ್ ಹಾಗೂ ಆತನ ಪೋಷಕರನ್ನು ಕರೆತಂದು ವಿಚಾರಣೆ ಮಾಡಿದೆವು. ವಿವೇಕ್ ಆಯುಶ್‍ನನ್ನು ಚರಂಡಿಗೆ ತಳ್ಳಿದ್ದ. ಚರಂಡಿಯಲ್ಲಿ ಮುಳುಗಿ ಆಯುಶ್ ಸಾವನ್ನಪ್ಪಿದ್ದಾನೆಂದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ವಿವೇಕ್ ಮೊದಲು ನಮ್ಮ ದಾರಿ ತಪ್ಪಿಸಲು ಯತ್ನಿಸಿದ. ಕೊನೆಯದಾಗಿ ಮೊಹಮ್ಮದ್‍ಪುರದ ಮಹಿಳೆಯೊಬ್ಬರೊಂದಿಗೆ ಆಯುಶ್‍ನನ್ನು ನೋಡಿದ್ದಾಗಿ ಪೊಲೀಸಿರಿಗೆ ನಂಬಿಸಿದ್ದ. ಮಹಿಳೆಯ ಮನೆ ಮೇಲೆ ದಾಳಿ ಮಾಡಿದಾಗಲೂ ಆಯುಶ್ ಪತ್ತೆಯಾಗಿರಲಿಲ್ಲ. ಕಿಡ್ನಾಪ್ ಆಗಿರಬಹುದೆಂಬ ಶಂಕೆಯಿಂದ ತನಿಖೆ ಮಾಡಿದೆವು. ಆದ್ರೆ ಯಾವುದೇ ಸುಳಿವು ಸಿಗಲಿಲ್ಲ. ಇತ್ತ ವಿವೇಕ್ ಪದೇ ಪದೇ ತನ್ನ ಹೇಳಿಕೆಯನ್ನ ಬದಲಾಯಿಸುತ್ತಿದ್ದ. ಕೊನೆಗೆ ಕಟ್ಟುನಿಟ್ಟಾಗಿ ವಿಚಾರಣೆ ಮಾಡಿದಾಗ ಆಯುಶ್‍ನನ್ನು ಚರಂಡಿಗೆ ತಳ್ಳಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಸಿಓ ಶ್ಲೋಕ್ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಬಾಲಕನ ಹೇಳಿಕೆ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಸೋಮವಾರದಂದು ಚರಂಡಿಯಿಂದ ಆಯುಶ್‍ನ ಕೊಳೆತ ಶವವನ್ನು ಪೊಲೀಸರು ಹೊರತೆಗೆಸಿದ್ದಾರೆ. ಆಯುಶ್ ತಂದೆ ಇ- ರಿಕ್ಷಾ ಚಾಲಕರಾಗಿದ್ದು, ವಿವೇಕ್ ತಂದೆ ಫ್ಯಾಕ್ಟರಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು

    ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು

    ಬೆಂಗಳೂರು: ಶಿವಾಜಿನಗರ ರೌಡಿ ಶೀಟರ್ ನಾಸಿರ್ ಅಲಿಯಾಸ್ ಚೋಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಡಿ.ಕೆ ಹಳ್ಳಿ ಪೊಲೀಸರಿಗೆ ಶರಣಾಗಿದ್ದಾರೆ.

    ಶಾಕಿರ್, ಅಮ್ಜದ್, ಸೇರಿ ನಾಲ್ವರು ಪೊಲೀರ ಮುಂದೆ ಶರಣಾಗಿದ್ದು, ಇದೀಗ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಶ್ಯಾಂಪುರ ಬಳಿ ಸೆಪ್ಟೆಂಬರ್ 7 ರಂದು ಚೋಟನ್ ಮೇಲೆ ಹಲ್ಲೆ ನಡೆದಿತ್ತು. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡ ಚೋಟನ್ ನನ್ನು ನಿಮಾನ್ಸ್ ಗೆ ದಾಖಲಿಸಲಾಗಿತ್ತು.

    ಈ ಕುರಿತು ಡಿ.ಜೆ ಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಇದೀಗ ಆರೋಪಿಗಳೇ ಶರಣಾಗುವ ಮೂಲಕ ಬಂಧನವಾಗಿದ್ದಾರೆ, ಸದ್ಯ ಪೊಲೀಸರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

  • ಹಳೇ ವೈಷ್ಯಮ್ಯಕ್ಕೆ ಸಹೋದರರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

    ಹಳೇ ವೈಷ್ಯಮ್ಯಕ್ಕೆ ಸಹೋದರರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

    ಬೀದರ್: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ವರು ದುಷ್ಕರ್ಮಿಗಳು ಇಬ್ಬರು ಸಹೋದರರನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಚ್ಚರ್ ಕಾಲೋನಿಯಲ್ಲಿ ನಡೆದಿದೆ.

    32 ವರ್ಷದ ಇಬ್ರಾಹಿಮ್ ಮತ್ತು 26 ವರ್ಷದ ಹುಸೇನ್ ಕೊಲೆಯಾದ ದುರ್ದೈವಿ ಸಹೋದರರು. 43 ವರ್ಷದ ಅಲಾಶ್, 30 ವರ್ಷದ ದಸ್ತಗೀರ್, 24 ವರ್ಷದ ತೌಫಿಕ್ ಮತ್ತು 37 ವರ್ಷದ ಸದ್ದಾಂ ಕೊಲೆ ಮಾಡಿದ ಆರೋಪಿಗಳು. ಈ ನಾಲ್ವರು ಆರೋಪಿಗಳು ಭಾಲ್ಕಿ ನಗರ ಠಾಣೆಯಲ್ಲಿ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

    2013ರಲ್ಲಿ ಆರೋಪಿಗಳ ಮೇಲೆ ಇಂದು ಕೊಲೆಯಾದ ಸಹೋದರರು ಹಲ್ಲೆ ನಡೆಸಿದ್ರು. ಇದೇ ವೈಷಮ್ಯಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸ್ಥಳಕ್ಕೆ ಎಸ್.ಪಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.