Tag: reveal

  • ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

    ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅಂದು ಅವರು ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸಮೀರಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸಮೀರಾ ರೆಡ್ಡಿ ತನ್ನ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿರುವ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಗೆ ಇದುವರೆಗೂ 39 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

    ಶುಕ್ರವಾರ ಬೆಳಗ್ಗೆ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ. ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    Our little angel came this morning ????My Baby girl ! Thank you for all the love and blessings ❤️???????? #blessed

    A post shared by Sameera Reddy (@reddysameera) on

    ಇತ್ತೀಚೆಗಷ್ಟೇ ಅಂದರೆ 9ನೇ ತಿಂಗಳಿನಲ್ಲಿ ಸಮೀರಾ ಬಿಕಿನಿ ಧರಿಸಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದರು.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿದ್ದಾರೆ.

  • ಡಾರ್ಲಿಂಗ್ ಪ್ರಭಾಸ್‍ರಿಂದ ಸರ್ಪ್ರೈಸ್ ರಿವೀಲ್

    ಡಾರ್ಲಿಂಗ್ ಪ್ರಭಾಸ್‍ರಿಂದ ಸರ್ಪ್ರೈಸ್ ರಿವೀಲ್

    ಹೈದರಾಬಾದ್: ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್ ಈ ಚಿತ್ರದ ಪೋಸ್ಟರ್ ನನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ಪ್ರಭಾಸ್ ಚಿತ್ರದ ಪೋಸ್ಟರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ಎಲ್ಲಾ ಡಾರ್ಲಿಂಗ್ಸ್ ಗೆ ಇಲ್ಲಿದೆ ಸರ್ಪ್ರೈಸ್. ನನ್ನ ಮುಂದಿನ ಸಾಹೋ ಚಿತ್ರದ ಅಧಿಕೃತ ಪೋಸ್ಟರ್. ಅಗಸ್ಟ್ 15ರಂದು ನಿಮ್ಮನ್ನು ಚಿತ್ರದ ಮೂಲಕ ಭೇಟಿ ಮಾಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಪ್ರಭಾಸ್, “ಹಾಯ್ ಡಾರ್ಲಿಂಗ್ಸ್. ಹೇಗಿದ್ದೀರಾ? ನಾಳೆ ಅಂದರೆ ಮಂಗಳವಾರ ನಿಮಗೆಲ್ಲರಿಗೂ ಒಂದು ಸರ್ಪ್ರೈಸ್ ಇದೆ. ನಾಳೆ ನನ್ನ ಇನ್‍ಸ್ಟಾಗ್ರಾಂ ಚೆಕ್ ಮಾಡಿ. ಐ ಲವ್ ಯೂ” ಎಂದು ಹೇಳಿದ್ದರು.

    ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.

     

    View this post on Instagram

     

    Hello darlings… A surprise coming your way, tomorrow. Stay tuned… #SaahoSurprise

    A post shared by Prabhas (@actorprabhas) on

  • ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಮುಂಬೈ: ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ರಾಕಿ ಭಾಯ್ ಯಶ್ ಮುಂಬೈನಲ್ಲಿ ಭೇಟಿಯಾಗಿರುವ ಸೀಕ್ರೆಟ್ ಈಗ ರಿವೀಲ್ ಆಗಿದ್ದು, ರಾಜಾಹುಲಿ ಹಾಗೂ ಬಾಹುಬಲಿ ಅತೀ ದೊಡ್ಡ ಶೋವೊಂದರಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಿರ್ದೇಶಕ ಕರಣ್ ಜೋಹರ್ ಇಂದು ಬೆಳಗ್ಗೆ ಟ್ವಿಟ್ಟರಿನಲ್ಲಿ, “ನಾನು ‘ಕಾಫಿ ವಿತ್ ಕರಣ್’ ಕಾರ್ಯಕ್ರಮ ನಡೆಸಿಕೊಡಲು ಹೋಗುತ್ತಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡಲು ತುಂಬಾ ಹೆಮ್ಮೆಯಾಗುತ್ತಿದೆ. ಇಂದು ಹೆಮ್ಮೆಯ ಒಂದು ಕಾಫಿ ಯಾರೂ ಎಂದು ಗೆಸ್ ಮಾಡುತ್ತೀರಾ?” ಎಂದು ಟ್ವೀಟ್ ಮಾಡಿದರು.

    ಕರಣ್ ಜೋಹರ್ ಟ್ವೀಟಿಗೆ ಎಲ್ಲರೂ ಪ್ರಭಾಸ್, ರಾಜಾಮೌಳಿ ಹಾಗೂ ರಾಣಾ ಬರುತ್ತಾರೆ ಎಂದು ರೀ-ಟ್ವೀಟ್ ಮಾಡಿದರು. ಮತ್ತೆ ಕೆಲವರು ಪ್ರಭಾಸ್ ಹಾಗೂ ಯಶ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗೆಸ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಹುಬಲಿ-ಕೆಜಿಎಫ್ ‘ರಾಕಿ ಭಾಯ್’ ಮುಂಬೈನಲ್ಲಿ ಭೇಟಿಯಾಗಿದ್ದೇಕೆ?

    https://twitter.com/karanjohar/status/1071233254055911424?ref_src=twsrc%5Etfw%7Ctwcamp%5Etweetembed%7Ctwterm%5E1071233254055911424&ref_url=http%3A%2F%2Fenglish.sakshi.com%2Fentertainment%2F2018%2F12%2F08%2Fbaahubali-prabhas-on-koffee-with-karan-opens-about-anushka-and-martial-status

    ಪ್ರಭಾಸ್ ಹಾಗೂ ಯಶ್ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲ ಸೌತ್ ನಟರು ಯಶ್ ಹಾಗೂ ಪ್ರಭಾಸ್ ಆಗುತ್ತಾರೆ.

    ಮುಂಬೈನ ಪಾಲಿಭವನ್ ನಿಂದ ಹೊರಡುವಾಗ ಇಬ್ಬರು ನಟರೂ ಪರಸ್ಪರ ತಬ್ಬಿಕೊಂಡು ಬಾಯ್ ಹೇಳಿದ್ದಾರೆ. ಆ್ಯಕ್ಷನ್ ಸಿನಿಮಾದಿಂದ ಖ್ಯಾತಿಗೊಂಡ ಇಬ್ಬರನ್ನು ನೋಡಿ ಎಲ್ಲರಿಗೂ ಖುಷಿಯಾಗಿದೆ. ಇದೇ ವೇಳೆ ಇಬ್ಬರು ಸ್ಟಾರ್ ನಟರೂ ಯಾವುದೇ ಹಮ್ಮಿಲ್ಲದೆ ಫೋಟೋಗೆ ಪೋಸ್ ಕೊಟ್ಟು ಅಭಿಮಾನಿಗಳಿಗೆ ಖುಷಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧ್ರುವ ಸರ್ಜಾರಿಂದ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್

    ಧ್ರುವ ಸರ್ಜಾರಿಂದ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಮದುವೆ ಫಿಕ್ಸ್ ಆಗಿದ್ದು, ಈ ಬೆನ್ನಲ್ಲೇ ಇದೀಗ ಅವರು ತಮ್ಮ ಭಾವಿ ಪತ್ನಿಯ ಬಾಲ್ಯದ ಫೋಟೋ ರಿವೀಲ್ ಮಾಡಿದ್ದಾರೆ.

    ಧ್ರುವ ಸರ್ಜಾ ಮಕ್ಕಳ ಜೊತೆಗಿರುವ ಬ್ಲಾಕ್ ಎಂಡ್ ವೈಟ್ ಗ್ರೂಪ್ ಫೋಟೋ ಹಾಕಿ, ಅಲ್ಲಿ ತಮ್ಮ ಮತ್ತು ಪ್ರೇರಣಾ ಮುಖಕ್ಕೆ ಬಣ್ಣಗಳಲ್ಲಿ ಹೈಲೈಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಧ್ರುವ ಸರ್ಜಾ ಗ್ರೂಪ್ ಫೋಟೋ ಅಪ್ಲೋಡ್ ಮಾಡಿ, “ಪ್ರೇರಣಾ ಶಂಕರ್ ಎಂದು ಹೆಸರು ನಮೂದಿಸಿ ನಿಮ್ಮೆಲ್ಲರ ಆಶೀರ್ವಾದವಿರಲಿ ಜೈ ಆಂಜನೇಯ” ಎಂದು ಬರೆದಿದ್ದಾರೆ. ಧ್ರುವ ಪೋಸ್ಟ್ ಮಾಡಿದ ಫೋಟೋ ಮಾರ್ಚ್ 24, 1997ರಲ್ಲಿ ಕ್ಲಿಕ್ಕಿಸಿದ್ದು ಎನ್ನಲಾಗಿದೆ.

    ಮುಂದಿನ ತಿಂಗಳು 9 ರಂದು ಬಾಲ್ಯದ ಗೆಳತಿ ಪ್ರೇರಣಾ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೀಗ ಟ್ಟೀಟ್ ಮಾಡುವ ಮೂಲಕ ತಮ್ಮ ಭಾವೀ ಸಂಗಾತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

    ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ನವದೆಹಲಿ: ಬಾಲಿವುಡ್ ನಟ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಇಂದು 53 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ತಾವೇ ಅಭಿನಯಿಸಿರುವ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಶಾರುಕ್ ಅವರು ಮೊದಲ ಬಾರಿಗೆ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇಂದು ಸಂಜೆ ಟ್ರೇಲರ್ ಬಿಡುಗಡೆಯಾಗಲಿದೆ.

    ಝೀರೋ ಚಿತ್ರವನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದಾರೆ. ಗುರುವಾರ ಚಿತ್ರತಂಡ ಎರಡು ಫೋಟೋ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು.

    ಈ ಹಿಂದೆ 2012 ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿ ಶಾರೂಖ್ ಖಾನ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ತೆರೆಯನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಝೀರೋ ಸಿನಿಮಾದ ಮೂಲಕ ಮೂವರು ಸಿನಿ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. 21 ಡಿಸೆಂಬರ್ 2018 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಲುಕ್‍ನಲ್ಲಿ ರಕ್ಷಿತ್ ಶೆಟ್ಟಿ ಮಿಂಚಿಂಗ್

    ಹೊಸ ಲುಕ್‍ನಲ್ಲಿ ರಕ್ಷಿತ್ ಶೆಟ್ಟಿ ಮಿಂಚಿಂಗ್

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಲುಕ್‍ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸದ್ಯ ಈಗ ಅವರ ಹೊಸ ಸಿನಿಮಾದ ಹೊಸ ಲುಕ್ ರಿವಿಲ್ ಆಗಿದೆ.

    ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರಕ್ಕೆ `ತೆನಾಲಿ’ ಅಂತ ಟೈಟಲ್ ಇಡಲಾಗಿದೆ. ಹೇಮಂತ್ ರಾವ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಸ್ವತಂತ್ರ ಪೂರ್ವದ ಕಥೆಯನ್ನು ಹೇಳಲು ಚಿತ್ರತಂಡ ಹೊರಟಿದೆ. ರಕ್ಷಿತ್ ಶೆಟ್ಟಿ ಹೊಸ ಲುಕ್ ಅವರ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ. ಇಂಚರ ಮತ್ತು ವಿನಯ್ ಸ್ಟೈಲಿಂಗ್ ಮಾಡಿದ್ದು, ಶರತ್ ಕ್ಯಾಮರಾ ಕೈಚಳಕದಲ್ಲಿ ಈ ಫೋಟೋ ಸೆರೆ ಸಿಕ್ಕಿದೆ.

    ಹೇಮಂತ್ ರಾವ್ ಈಗಾಗಲೇ ರಕ್ಷಿತ್ ನಟನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು. ಇದೀಗ ಮತ್ತೇ ಈ ಜೋಡಿ ತೆನಾಲಿ ಚಿತ್ರದಲ್ಲಿ ಒಂದಾಗಿ ಜನರಿಗೆ ಮನೋರಂಜನೆ ನೀಡಲಿದ್ದಾರೆ. ಸದ್ಯ ಚಿತ್ರದ ನಿರ್ದೇಶಕ ಹೇಮಂತ್ ರಾವ್ ತಮ್ಮ ಟ್ವಟ್ಟರಿನಲ್ಲಿ ರಕ್ಷಿತ್ ಶೆಟ್ಟಿ ಅವರ ಹೊಸ ಲುಕ್ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ನಾನು ಯಾವಾಗಲೂ ಇತಿಹಾಸಗಳ ದೊಡ್ಡ ಅಭಿಮಾನಿಯಾಗಿದ್ದೇನೆ. ಈ ಚಿತ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಆದ ಘಟನೆಯನ್ನು ತೋರಿಸುವ ಐಡಿಯಾವನ್ನು ಹೊಂದಿದ್ದೇನೆ. ನಂತರ ನಾನು ಈ ಐಡಿಯಾ ಹಾಗೂ ಪಾತ್ರವನ್ನು ರಕ್ಷಿತ್ ಅವರೊಂದಿಗೆ ಹಂಚಿಕೊಂಡೆ. ಅವರು ಕೂಡ ಈ ಕತೆಯನ್ನು ಇಷ್ಟಪಟ್ಟಿದ್ದಾರೆ. ಕೆಲವು ಹೊಸ ಲುಕ್‍ಗಳನ್ನು ಪ್ರಯತ್ನಿಸಲು ನಾವು ನಿರ್ಧರಿಸಿದ್ದೇವೆ. ಹಾಗಾಗಿ ಕೆಲವು ಹೊಸ ಲುಕ್‍ಗಳನ್ನು ಮೋಜಿಗಾಗಿ ಟ್ರೈ ಮಾಡೋಣ ಎನ್ನಿಸಿತ್ತು ಎಂದು ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ.

    ತೆನಾಲಿ ಚಿತ್ರ ನನ್ನದೊಂದು ಐಡಿಯಾ ಅಷ್ಟೇ. ಈ ಚಿತ್ರ ತೆರೆಗೆ ಬರಲು ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ನಾನು ಈಗ ‘ಕವಲುದಾರಿ’ ಚಿತ್ರದಲ್ಲಿ ಬ್ಯುಸಿ ಇದ್ದೇನೆ. ಕವಲುದಾರಿ ಚಿತ್ರ ಮುಗಿದ ನಂತರ ತೆನಾಲಿ ಚಿತ್ರಕ್ಕೆ ಕತೆ ಬರೆಯಲು ಶುರು ಮಾಡುತ್ತೇನೆ. ಆದರೆ ತೆನಾಲಿ ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದು ಶುರುವಾದಾಗ ನನ್ನ, ಪುಷ್ಕರ್ ಹಾಗೂ ರಕ್ಷಿತ್ ಶೆಟ್ಟಿಯನ್ನು ಮತ್ತೇ ತೆರೆ ಮೇಲೆ ನೋಡುತ್ತೀರಿ. ನಾವು ಮೂವರು ಮತ್ತೇ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಹೇಮಂತ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತ್ಯಾಚಾರ ಸಂತ್ರಸ್ತ ಮಕ್ಕಳ ಬ್ಲರ್ ಫೋಟೋಗಳನ್ನೂ ಪ್ರಕಟಿಸುವಂತಿಲ್ಲ: ಮಾಧ್ಯಮಗಳಿಗೆ ಸುಪ್ರೀಂ

    ಅತ್ಯಾಚಾರ ಸಂತ್ರಸ್ತ ಮಕ್ಕಳ ಬ್ಲರ್ ಫೋಟೋಗಳನ್ನೂ ಪ್ರಕಟಿಸುವಂತಿಲ್ಲ: ಮಾಧ್ಯಮಗಳಿಗೆ ಸುಪ್ರೀಂ

    ನವದೆಹಲಿ: ಇನ್ನು ಮುಂದೆ ಅತ್ಯಾಚಾರ ಸಂತ್ರಸ್ತ ಮಕ್ಕಳ ಫೋಟೋವನ್ನು ಬ್ಲರ್ ಮಾಡಿ ಮಾಧ್ಯಮಗಳು ಸುದ್ದಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ.

    ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಮಕ್ಕಳ ಗುರುತು ಬಹಿರಂಗ ಕುರಿತು ಸ್ವಯಃ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ ಮಾಧ್ಯಮಗಳಿಗೆ ಸೂಚನೆ ನೀಡಿದೆ.

    ಕಳೆದ ಕೆಲ ದಿನಗಳ ಬಿಹಾರದ ಅಪ್ರಾಪ್ತ ಬಾಲಕಿಯರ ಮೇಲೆ ವಸತಿ ನಿಯಲಯದ ಅಧಿಕಾರಿಗಳೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರ್ಕಾರ ಹಾಗೂ ಬಿಹಾರ ರಾಜ್ಯಕ್ಕೆ ನೋಟಿಸ್ ಜಾರಿ ಮಾಡಿದೆ.

    ಬಿಹಾರದ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸುತ್ತಿದ್ದ ವಸತಿ ನಿಲಯದಲ್ಲಿದ್ದ ಸುಮಾರು 40 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೇ ಈ ಕುರಿತು ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಸಹ ಲೈಂಗಿಕ ದೌಜನ್ಯ ನಡೆದಿರುವುದನ್ನು ಖಚಿತ ಪಡಿಸಿತ್ತು. ಈ ವರದಿಯ ಅನ್ವಯ ಎನ್‍ಜಿಒ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ವಸತಿ ನಿಲಯದಲ್ಲಿದ್ದ ಎಲ್ಲಾ ಬಾಲಕಿಯನ್ನು ರಕ್ಷಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯಪಾಲರು ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಇಂತಹ ಇತರೇ ಎನ್‍ಜಿಒ ಗಳ ವಿರುದ್ಧ ನೇರ, ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.

    ಬಿಹಾರದ ಮುಜಾಫರ್ ನಗರದ ಬ್ರಿಜೆಷ್ ಠಾಕೂರ್ ಎಂಬಾತ ತನ್ನ ಎನ್‍ಜಿಒ ಅಡಿ ಎರಡು ಬಾಲಕಿಯರ ವಸತಿ ನಿಲಯಗಳನ್ನು ನಡೆಸುತ್ತಿದ್ದ. ಈ ವಸತಿ ನಿಲಯದಲ್ಲಿದ್ದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೇ 11 ಬಾಲಕಿಯರು ವಸತಿ ನಿಲಯದಿಂದ ನಾಪತ್ತೆಯಾಗಿದ್ದರು.

    ವಿಚಾರಣೆ ವೇಳೆ ದೇಶದಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಉದಾಹಣೆಯಾಗಿ ನೀಡಿದ ನ್ಯಾಯಾಲಯ, ಅಪ್ರಾಪ್ತ ಮಕ್ಕಳ ಗುರುತು ಬಹಿರಂಗವಾದ ಬಳಿಕ ಬಾಲಕಿಯರ ಭವಿಷ್ಯ ಮೇಲೆ ಬೀಳುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿತು.

    ಜಮ್ಮು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ವೇಳೆ ಬಾಲಕಿಯ ಫೋಟೋ ಹಾಗೂ ಧರ್ಮವನ್ನು ಕೆಲ ಮಾಧ್ಯಮಗಳು ಬಹಿರಂಗಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಹೈಕೋರ್ಟ್ 12 ಮಾಧ್ಯಮಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶಿಸಿತ್ತು. ದಂಡ ಹಣವನ್ನು ಜಮ್ಮು ಕಾಶ್ಮೀರದ ಸಂತ್ರಸ್ತ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಿತ್ತು.

    ಈ ವಿಚಾರಣೆ ವೇಳೆ ಮಾಧ್ಯಮಗಳ ಪರ ವಕೀಲರು ಕಾನೂನನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೋಪವಾಗಿದೆ. ಸಂತ್ರಸ್ತ ಬಾಲಕಿ ಮೃತಪಟ್ಟ ಕಾರಣ ನಾವು ಆಕೆಯ ಫೋಟೋವನ್ನು ಪ್ರಕಟಿಸಿದ್ದೇವೆ. ನಾವು ಎಸಗಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದರು. ಆದರೆ ಹೈಕೋರ್ಟ್ ಮಾಧ್ಯಮಗಳ ಕ್ಷಮೆಯನ್ನು ಒಪ್ಪದೇ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಈ ಪ್ರಕರಣ ಬಳಿಕ ನ್ಯಾಯಾಲಯ ಮತ್ತೊಮ್ಮೆ ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ.

    ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ. ಈ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾದರೆ ಸಂತ್ರಸ್ತರ ವಿವರ, ಫೋಟೋ ಸೇರಿದಂತೆ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.