Tag: Revati

  • ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

    ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

    ಬೆಂಗಳೂರು: ವಿವಾಹದ ಬಳಿಕ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ದಾಂಪತ್ಯ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸುತ್ತಾಟ ನಡೆಸುವ ಮೂಲಕ ಲಾಕ್‍ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ರೇವತಿ ಮನೆ ಕೆಲಸ ಮಾಡಿದ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಇದೀಗ ನಿಖಿಲ್ ಕುಮಾರಸ್ವಾಮಿಯವರು ವಿಡಿಯೋವೊಂದನ್ನು ರಿವೀಲ್ ಮಾಡಿದ್ದಾರೆ.

    ಹೌದು. ಈ ಕುರಿತು ನಿಖೀಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದು, ರೇವತಿಯವರು ಅಡುಗೆ ಮಾಡುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಒಂದು ಬಾರಿಯೂ ಪತ್ನಿ ಅಡುಗೆ ಮಾಡಿಲ್ಲ. ಆದರೆ ಅಡುಗೆ ಮಾಡಲು ಬರುತ್ತೆ ಎಂಬುದು ತಿಳಿದಿದ್ದೇನೆ ಎಂದು ನಿಖೀಲ್ ಹೇಳಿದ್ದರು. ಆದರೆ ಇದೀಗ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ.

    ರೇವತಿಯವರು ಅಡುಗೆ ಮಾಡುವ ಎರಡು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನಾನ್ ವೆಜ್ ಮಾಡುತ್ತಿರುವಂತೆ ಕಾಣುತ್ತದೆ. ಇದನ್ನು ಖುಷಿಯಿಂದಲೇ ನಿಖಿಲ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.

    ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದನ್ನು ನೋಡಿಲ್ಲ. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಅಣ್ಣ ವಿಷಯಕ್ಕೂ ಮಗು ರೀತಿ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಪತ್ನಿ ರೇವತಿಯನ್ನು ಕಿಚಾಯಿಸಿದ್ದರು.

    ನನ್ನ ಪತ್ನಿಗೆ ಸ್ವಚ್ಛತೆಯ ಗೀಳು ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ನಾನು ನನ್ನ ರೂಮಿಗೆ ಬಂದರೆ ತುಂಬಾ ವಸ್ತುಗಳು ಹರಡುತ್ತಿದ್ದವು. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ. ಆದರೆ ಈಗ ಸಾಕಷ್ಟು ಬದಲಾಗಿದ್ದೀನಿ. ನನ್ನ ಪತ್ನಿ ರೇವತಿಗೆ ಇದು ಸಾಲದಂತೆ, ಇನ್ನೂ ಬದಲಾಗಬೇಕೆಂತೆ ಎಂದು ನಿರೂಪಕಿ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ನಿಖಿಲ್ ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ.

    ನಾಲ್ಕು ತಿಂಗಳ ದಾಂಪತ್ಯ ಜೀವನವನ್ನು ಕಳೆದಿರುವ ನಿಖಿಲ್ ಹಾಗೂ ರೇವತಿ ಸಖತ್ ಆಗೇ ಎಂಜಾಯ್ ಮಾಡುತ್ತಿದ್ದಾರೆ ಎಂಬುದು ತಿಳಿದೇ ಇದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪೋಸ್ಟ್ ಗಳನ್ನು ಸಹ ಹಾಕುತ್ತಿರುತ್ತಾರೆ. ಇತ್ತೀಚೆಗೆ ಲಾಕ್‍ಡೌನ್ ಸಮಯದಲ್ಲಿ ಫಾರ್ಮ್ ಹೌಸ್‍ನಲ್ಲಿ ಸುತ್ತಾಡುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದರು.

    ಕಳೆದ ವಾರ ನಾಗರಹೊಳೆ ಅಭಯಾರಣ್ಯಕ್ಕೂ ಭೇಟಿ ನೀಡಿದ್ದ ಜೋಡಿ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ ಫೋಟೋ ತೆಗೆಸಿಕೊಂಡಿತ್ತು. ಅಲ್ಲದೆ ಕುಟುಂಬ ಸಮೇತರಾಗಿ ಸರಳವಾಗಿ ಗಣೇಶೋತ್ಸವ ಆಚರಿಸಿದ ಕುರಿತು ಸಹ ನಿಖಿಲ್ ಅಪ್‍ಡೇಟ್ ನೀಡಿದ್ದರು. ಲಾಕ್‍ಡೌನ್ ಬಳಿಕ ನಿಖಿಲ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇತ್ತೀಚೆಗಷ್ಟೇ ಅವರ ಮುಂದಿನ ರೈಡರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಮತ್ತೆ ನಟೆನೆಯತ್ತ ಮುಖ ಮಾಡಿದ್ದಾರೆ.

  • ನಿಗದಿಯಂತೆ ನಿಖಿಲ್ ಮದುವೆ – ವಧು ರೇವತಿ ಮನೆಯಲ್ಲಿ ಮುಹೂರ್ತ ಫಿಕ್ಸ್

    ನಿಗದಿಯಂತೆ ನಿಖಿಲ್ ಮದುವೆ – ವಧು ರೇವತಿ ಮನೆಯಲ್ಲಿ ಮುಹೂರ್ತ ಫಿಕ್ಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‍ನ ಅಟ್ಟಹಾಸ ಹಿನ್ನೆಲೆಯಲ್ಲಿ ನಿಗದಿಯಂತೆ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬ ಮುಂದಾಗಿದೆ ಎಂದು ತಿಳಿದುಬಂದಿದೆ.

    ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಮುಹೂರ್ತ ಏಪ್ರಿಲ್ 17 ರಂದು ಫಿಕ್ಸ್ ಆಗಿತ್ತು. ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ ಜಾನಪದ ಲೋಕದ ಬಳಿ ಅದ್ಧೂರಿಯಾಗಿ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಪುತ್ರನ ವಿವಾಹ ಮುಹೂರ್ತವನ್ನು ಮುಂದೂಡಬೇಕಾ? ಅಥವಾ ನಿಗದಿಯಂತೆ ನೆರವೇರಿಸಬೇಕಾ? ಎಂಬ ಗೊಂದಲದಲ್ಲಿ ಕುಮಾರಸ್ವಾಮಿ ಕುಟುಂಬವಿತ್ತು. ಆದರೆ ಭಾನುವಾರ ದೇವೇಗೌಡರ ಕುಟುಂಬ ಅಂತಿಮ ನಿರ್ಧಾರ ತೆಗೆದುಕೊಂಡಿದೆ.

    ತಂದೆ ದೇವೇಗೌಡರ ಜೊತೆಗೆ ನಿನ್ನೆ ಸಂಜೆ ಕುಮಾರಸ್ವಾಮಿ ವಿವಾಹದ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಾರನ್ನು ಮುಹೂರ್ತ ಕಾರ್ಯಕ್ಕೆ ಆಹ್ವಾನಿಸುವುದು ಬೇಡ. ಇಂತಹ ಸಂದರ್ಭದಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯಬಾರದು. ಕೊರೊನಾ ಹರಡುವಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಬಹಳ ಮುಖ್ಯವಾಗಿದೆ. ಸದ್ಯಕ್ಕೆ ನಾವು ರಾಮನಗರ ಹಾಗೂ ಚನ್ನಪಟ್ಟಣದ ಮಧ್ಯೆ ನಿಗದಿಯಂತೆ ವಿವಾಹ ನೆರವೇರಿಸಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಮಟ್ಟಿಗೆ ಮದುವೆ ಕಾರ್ಯ ನೆರವೇರಿಸುವ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ವಧು ರೇವತಿ ಅವರ ಮನೆಯಲ್ಲಿ ಎರಡು ಕುಟುಂಬಗಳ ಮುಖ್ಯ ಸದಸ್ಯರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗಲಿದ್ದು, 50 ಜನರೊಳಗೆ ಸೇರಿ ಮದುವೆ ಮುಹೂರ್ತ ನೆರವೇರಿಸುವ ತಿರ್ಮಾನಕ್ಕೆ ಬಂದಿದ್ದಾರೆ. ಅಲ್ಲದೇ ಲಾಕ್‍ಡೌನ್ ತೆರವಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಆರತಕ್ಷತೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಏಪ್ರಿಲ್ 17 ರಂದು ಒಳ್ಳೆಯ ಮುಹೂರ್ತ ಇದೆ. ಶ್ರೀ ಶಾರ್ವರೀನಾಮ ಸಂವತ್ಸರದ ಉತ್ತರಾಯಣದ ವಸಂತ ಋತುವಿನ ಚೈತ್ರಮಾಸದ ಕೃಷ್ಣ ಪಕ್ಷದ ದಶಮಿ ಒಳ್ಳೆಯ ಮುಹೂರ್ತ. ಇದನ್ನು ಬಿಟ್ಟರೆ ಶ್ರಾವಣ ಮಾಸದವರೆಗೂ ಕಾಯಬೇಕು. ಏಪ್ರಿಲ್ 17 ಬಿಟ್ಟರೆ ಮುಂದೆ ಮೂರ್ನಾಲ್ಕು ತಿಂಗಳು ಒಳ್ಳೆಯ ಮುಹೂರ್ತ ಇಲ್ಲ. ಹೀಗಾಗಿ ತಡ ಮಾಡುವುದು ಬೇಡ. ನಿಗದಿಯಂತೆ ಎರಡು ಕುಟುಂಬದ ಸದಸ್ಯರುಗಳ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸೋಣ ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಕುಮಾರಸ್ವಾಮಿ ವಧು ರೇವತಿ ಅವರ ಪೋಷಕರ ಬಳಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ವಧು ರೇವತಿ ನಿವಾಸ ಜ್ಞಾನಭಾರತಿ ಬಡಾವಣೆಯಲ್ಲಿ ಏಪ್ರಿಲ್ 17 ರಂದು ನಿಗದಿಯಂತೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

  • ನಿಖಿಲ್ ಮದ್ವೆ ಸ್ಥಳ ಶಿಫ್ಟ್ ಸಾಧ್ಯತೆ

    ನಿಖಿಲ್ ಮದ್ವೆ ಸ್ಥಳ ಶಿಫ್ಟ್ ಸಾಧ್ಯತೆ

    ಬೆಂಗಳೂರು: ಕೊರೊನಾ ಎಫೆಕ್ಟ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೂ ತಟ್ಟುವ ಸಾಧ್ಯತೆ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಈಗಾಗಲೇ ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಜಾಗದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಆದರೆ ಮೂಲಗಳ ಪ್ರಕಾರ ಮದುವೆ ಕಾರ್ಯವನ್ನು ಈಗ ಬೆಂಗಳೂರಿನ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡುವ ಕುರಿತು ಚರ್ಚೆಗಳು ಕುಟುಂಬದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:  ಹೆಚ್‍ಡಿಕೆ ಮನೆಯಲ್ಲಿ ಮದ್ವೆ ಸಂಭ್ರಮ- ನಿಖಿಲ್ ಲಗ್ನಪತ್ರಿಕೆಗೆ ಪೂಜೆ

    ಜನಸಂದಣಿ ದಟ್ಟಣೆಯಿಂದ ಕೊರೊನಾ ಸುಲಭವಾಗಿ ಹರಡುತ್ತದೆ. ಹೀಗಾಗಿ ಈ ಸ್ಥಳ ಬದಲಾವಣೆ ಬಗ್ಗೆ ಗೌಡರ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ಈಗಾಗಲೇ ಎರಡೂ ಕುಟುಂಬದಲ್ಲೂ ಮದುವೆಗೆ ಸಿದ್ಧತೆಗಳು ನಡೆಯುತ್ತಿದೆ. ಇದನ್ನೂ ಓದಿ: ನಿಖಿಲ್- ರೇವತಿ ವಿವಾಹಕ್ಕೆ ಭೂಮಿ ಪೂಜೆ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ

    ನಿಖಿಲ್ ಮತ್ತು ರೇವತಿ ವಿವಾಹಕ್ಕೆ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಗೌಡರ ಕುಟುಂಬಕ್ಕೂ ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟು ಕೂಡ ಇದೆ.

    ಹೀಗಾಗಿ ತಮ್ಮ ಮಗನ ಮದುವೆ ಸಂಭ್ರಮವನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ, ತಮ್ಮ ಪಕ್ಷದ ಬೆಂಬಲಿಗರು, ಅಭಿಮಾನಿಗಳ ಜೊತೆ ಕೂಡ ಸಂಭ್ರಮಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ ಈಗ ಕೊರೊನಾ ವೈರಸ್ ಪರಿಣಾಮದಿಂದ ನಿಖಿಲ್ ಮದುವೆಯನ್ನು ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

  • ನಿನ್ನ ತ್ಯಾಗ ಅಪಾರ – ಅಮ್ಮನ ಬಗ್ಗೆ ನಿಖಿಲ್ ಭಾವನಾತ್ಮಕ ಪೋಸ್ಟ್

    ನಿನ್ನ ತ್ಯಾಗ ಅಪಾರ – ಅಮ್ಮನ ಬಗ್ಗೆ ನಿಖಿಲ್ ಭಾವನಾತ್ಮಕ ಪೋಸ್ಟ್

    ಬೆಂಗಳೂರು: ಮದುವೆ ಸಂಭ್ರಮದಲ್ಲಿರುವ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟ್ ಮಾಡಿ ಶುಭಶಯ ಕೋರಿದ್ದಾರೆ. ನಿನ್ನ ತ್ಯಾಗ ಅಪಾರ, ಎಂದೆಂದಿಗೂ ಹೀಗೆ ನಗುತ್ತಿರು ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ.

    ಅಮ್ಮನ ಹುಟ್ಟುಹಬ್ಬಕ್ಕೆ ನಿಖಿಲ್ ಸ್ಪೆಷಲ್ ವಿಶ್ ಸದ್ಯ ಎಲ್ಲರ ಮನ ಗೆದ್ದಿದೆ. ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಿಖಿಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಪ್ರೀತಿಯಿಂದ ವಿಶ್ ಮಾಡಿ, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B87wb4dJvI9/

    ಪೋಸ್ಟ್ ನಲ್ಲಿ ಏನಿದೆ?
    ಹುಟ್ಟುಹಬ್ಬದ ಶುಭಾಶಯಗಳು ಅಮ್ಮ, ನಿನ್ನ ನನಗೆ ಜನ್ಮಕೊಟ್ಟಾಗಿನಿಂದಲೂ ನನಗಾಗಿ ನೀನು ಮಾಡಿದ ತ್ಯಾಗ ಅಪಾರ. ನನ್ನ ಜೀವನ ಪೂರ್ತಿ ನಾನು ನಿನಗೆ ಋಣಿಯಾಗಿರುತ್ತೇನೆ ಅಮ್ಮ. ನೀನು ಖುಷಿಯಾಗಿರುವುದನ್ನ ನೋಡಿದಾಗಲೆಲ್ಲಾ ನನ್ನ ಮುಖದಲ್ಲಿ ದೊಡ್ಡ ನಗು ಮೂಡುತ್ತದೆ. ಈ ಫೋಟೋದಲ್ಲಿ ಹೇಗೆ ನಗುತಿದಿಯೋ ಹಾಗೆಯೇ ಎಂದೆಂದಿಗೂ ನಗುತ್ತಿರು. ಯಾಕೆಂದರೆ ನೀನು ನಕ್ಕಾಗ ಇನ್ನೂ ಸುಂದರವಾಗಿ ಕಾಣುತ್ತೀಯ ಎಂದು ಬರೆದು ಲವ್ ಫಾರ್ ಎವರ್ ಹ್ಯಾಶ್‍ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B4g22oiJvjW/

    ಜೊತೆಗೆ ಭಾವಿ ಪತ್ನಿ ರೇವತಿ ಹಾಗೂ ತಮ್ಮ ಜೊತೆ ಅಮ್ಮ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಈ ಫೋಟೋದಲ್ಲಿ ಹೇಗೆ ಮುದ್ದಾಗಿ ಖುಷಿಯಿಂದ ನಗುತಿದಿಯೋ ಹಾಗೆಯೇ ಯಾವಾಗಲೂ ನಗುತ್ತಿರು ಅಮ್ಮ ಎಂದು ನಿಖಿಲ್ ವಿಶ್ ಮಾಡಿದ್ದಾರೆ.

    https://www.instagram.com/p/B8xVcAtpno-/

    ಈ ಹಿಂದೆ ಅಪ್ಪನೊಂದಿಗೆ ಇರುವ ಫೋಟೋವನ್ನು ನಿಖಿಲ್ ಹಂಚಿಕೊಂಡಿದ್ದರು. ಆ ಫೋಟೋ ಕೂಡ ಅಭಿಮಾನಿಗಳ ಮನ ಗೆದ್ದಿತ್ತು. ಏಪ್ರಿಲ್ 17ರಂದು ನಿಖಿಲ್ ಹಾಗೂ ರೇವತಿ ಮದುವೆ ರಾಮನಗರದಲ್ಲಿ ನಡೆಯಲಿದ್ದು, ಈಗಾಗಲೇ ಇರಡೂ ಕುಟುಂಬ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

  • ನಿಖಿಲ್- ರೇವತಿ ವಿವಾಹಕ್ಕೆ ಭೂಮಿ ಪೂಜೆ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ

    ನಿಖಿಲ್- ರೇವತಿ ವಿವಾಹಕ್ಕೆ ಭೂಮಿ ಪೂಜೆ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ವಿವಾಹದ ಸಿದ್ಧತಾ ಕಾರ್ಯಕ್ಕೆ ರಾಮನಗರ ಹೊರವಲಯದ ಜಾನಪದ ಲೋಕದ ಬಳಿಯ ಜಮೀನಿನಲ್ಲಿ ವಿಶೇಷ ಭೂಮಿ ಪೂಜೆ, ಹೋಮ- ಹವನ ನಡೆಸುವ ಮೂಲಕ ಚಾಲನೆ ನೀಡಲಾಯಿತು.

    ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ-ಅನಿತಾ ದಂಪತಿ ಮತ್ತು ರೇವತಿ ಪೋಷಕರಾದ ಮಂಜುನಾಥ್ ಮತ್ತು ಶ್ರೀದೇವಿ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಖ್ಯಾತ ಜ್ಯೋತಿಷಿ ಹರಿಶಾಸ್ತ್ರಿ ಗುರೂಜಿ ಹಾಗೂ ರಾಮನಗರದ ಬಲಮುರಿ ಗಣಪತಿ ದೇಗುಲದ ಗಣೇಶ ಭಟ್ ನೇತೃತ್ವದಲ್ಲಿ ಹೋಮ- ಹವನ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು.

    ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಏಪ್ರಿಲ್ 17ರಂದು ವಿವಾಹ ನಿಶ್ಚಯ ಆಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳಿಗೆ ಇಂದು ಪೂಜೆ ಮೂಲಕ ಚಾಲನೆ ನೀಡುತ್ತಿದ್ದೇವೆ. ಗಣ ಹೋಮ ಜೊತೆಗೆ ಭೂಮಿಪೂಜೆ ನಡೆದಿದೆ. ಇದು ನನ್ನ ಕುಟುಂಬದ ಮೊದಲ ಹಾಗೂ ಕೊನೆಯ ಶುಭ ಸಮಾರಂಭ. ನನ್ನೆಲ್ಲ ಕಾರ್ಯಕರ್ತರು ಸೇರಿ ಪ್ರತಿ ಕುಟುಂಬಕ್ಕೆ ಆಹ್ವಾನ ನೀಡುತ್ತೇನೆ. ಮದುವೆ ಹೆಸರಿನಲ್ಲಿ ನನ್ನೆಲ್ಲ ಮತದಾರರಿಗೆ ಧನ್ಯವಾದ ಹೇಳಲಿದ್ದೇನೆ. ಸಪ್ತಪದಿ ಮಂಟಪ ಸೇರಿದಂತೆ ಹಲವು ವೇದಿಕೆ ಇಲ್ಲಿ ನಿರ್ಮಾಣ ಆಗಲಿದೆ ಎಂದು ತಿಳಿಸಿದ್ರು.

    ನನ್ನ ಹುಟ್ಟೂರಾದ ಹೊಳೆ ನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಿಖಿಲ್ ಮದುವೆ ಮಾಡಬೇಕು ಎಂಬ ಆಲೋಚನೆ ಮೊದಲು ಇತ್ತು. ಆದರೆ ನನಗೆ ರಾಜಕೀಯ ಜನ್ಮ ನೀಡಿದ ರಾಮನಗರವನ್ನ ಜನ ತಮ್ಮ ಮೇಲೆ ಹೊರೆಸಿರುವ ಋಣದ ಭಾರವನ್ನ ಇಳಿಸಿಕೊಳ್ಳುವುದು ಹಾಗೂ ಜಿಲ್ಲೆಯ ಜನರಿಗೆ ಅಭಿಮಾನಿಗಳಿಗೆ ಊಟ ಹಾಕಿಸುವ ಸಲುವಾಗಿ ಈ ಜಾಗ ಆಯ್ಕೆ ಮಾಡಿದ್ದೇನೆ. ನನ್ನ ಹೃದಯದಲ್ಲಿ ಇರುವುದು ಇಲ್ಲಿನ ಜನ ಎಂದರು.

    ನಿಖಿಲ್- ರೇವತಿ ಮದುವೆಗೆ ಅದ್ಧೂರಿ ಸೆಟ್ ಹಾಕುವುದಿಲ್ಲ. ಸಪ್ತಪದಿ ಮಂಟಪ ನಿರ್ಮಾಣವಾಗುತ್ತೆ. ಆದರೆ ನನ್ನೆಲ್ಲ ಲಕ್ಷಾಂತರ ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮವೇ ಆಗಿರಲಿದೆ. ಮುಹೂರ್ತದ ಕಾರ್ಯಕ್ರಮ ಇಲ್ಲಿ ನಡೆಯಲಿದೆ.

    ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಬೇಕು ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಒಟ್ಟು 90ರಿಂದ 95 ಎಕರೆ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.