Tag: Revathi

  • ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

    ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಜಾಗ್ವರ್ ನಿಖಿಲ್ ಕುಮಾರ್ ಸ್ವಾಮಿ ಪ್ರೀತಿಯ ಪತ್ನಿ ರೇವತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಿಖಿಲ್ ಕುಮಾರ್ ಸ್ವಾಮಿಯವರು ಪತ್ನಿ ರೇವತಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿಯವರು ತಮ್ಮ ಪತ್ನಿ ರೇವತಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಖಿಲ್ ತಮ್ಮ ಮಡದಿ ಜೊತೆ ತುಗುಯ್ಯಲೆ ಮೇಲೆ ಒಟ್ಟಿಗೆ ಕುಳಿತುಕೊಂಡಿದ್ದು, ರೇವತಿಯವರು ತಮ್ಮ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಕುಳಿತುಕೊಂಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತ್‍ಡೇ ಟೂ ಯು ಮೈ ಲವ್ (ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು) ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್‍ನಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ 2021ರ ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ನಂತರ ಪ್ರಣಯ ಪಕ್ಷಿಗಳಂತೆ ಇರುವ ಈ ಮುದ್ದಾದ ಜೋಡಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.

    ಇತ್ತೀಚೆಗಷ್ಟೇ ನಿಖಿಲ್‍ಕುಮಾರಸ್ವಾಮಿಯರು ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದನ್ನೂ ಓದಿ:ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ

  • ಪತ್ನಿ ಜೊತೆ ಆರ್ ಎಕ್ಸ್100 ಬೈಕ್ ಏರಿ ಹೊರಟ ‘ರೈಡರ್’

    ಪತ್ನಿ ಜೊತೆ ಆರ್ ಎಕ್ಸ್100 ಬೈಕ್ ಏರಿ ಹೊರಟ ‘ರೈಡರ್’

    ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ, ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ಜೊತೆ ಆರ್ ಎಕ್ಸ್ 100 ಬೈಕ್‍ನಲ್ಲಿ ಜಾಲಿ ರೈಡ್ ಹೋಗಿದ್ದಾರೆ.

     

    ನಿಖಿಲ್ ಕುಮಾರಸ್ವಾಮಿಯವರು ರಾಮನಗರದ ಬಿಡದಿಯ ಕೇತಿಗಾನ ಹಳ್ಳಿ ಬಳಿ ಇರುವ ತೋಟದ ಮನೆಯಲ್ಲಿ ಪತ್ನಿ ರೇವತಿ ಅವರನ್ನು ಆರ್ ಎಕ್ಸ್ 100 ಬೈಕ್‍ನಲ್ಲಿ ಕೂರಿಸಿಕೊಂಡು ರೌಂಡ್ ಹೊಡೆದಿದ್ದಾರೆ.

    ನಿಖಿಲ್ ಬಳಿ ಇರುವ ಬೈಕ್‍ಗಳಲ್ಲಿ ಆರ್ ಎಕ್ಸ್ 100 ಬೈಕ್ ತುಂಬಾ ಇಷ್ಟವಂತೆ. ಹಾಗಾಗೀ ಅದೇ ಬೈಕ್ ಏರಿ ಪತ್ನಿಯನ್ನು ತೋಟದ ಮನೆ ತುಂಬಾ ಸುತ್ತಾಡಿಸಿಕೊಂಡು ‘ರೈಡರ್’ ವಾಪಸ್ ಆಗಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆ ಕಾರ್ಯಕ್ರಮ 2019ರ ಏಪ್ರಿಲ್ ತಿಂಗಳಲ್ಲಿ ಇದೇ ತೋಟದ ಮನೆಯಲ್ಲಿ ಸರಳವಾಗಿ ನಡೆದಿತ್ತು.

  • ಮಡದಿ ಮಾತಿಗೆ ತಲೆಯಾಡಿಸಿ ನಸು ನಕ್ಕ ಅಭಿಮನ್ಯು

    ಮಡದಿ ಮಾತಿಗೆ ತಲೆಯಾಡಿಸಿ ನಸು ನಕ್ಕ ಅಭಿಮನ್ಯು

    ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಮಡದಿಯೊಂದಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯ ಮಾತಿಗೆ ತಲೆಯಾಡಿಸಿ ನಸು ನಕ್ಕಿದ್ದಾರೆ. ಇದನ್ನೂ ಓದಿ: ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

    ನಟ ನಿಖಿಲ್ ಇನ್‍ಸ್ಟಾಗ್ರಾಂನಲ್ಲಿ ಒಂದು ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮನೆಯ ಮೆಟ್ಟಿಲಿನ ಮೇಲೆ ನಿಖಿಲ್ ಕುಳಿತಿದ್ದಾರೆ. ಅಲ್ಲಿಯೇ ಪತ್ನಿ ರೇವತಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಕುಳಿತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ರೇವತಿ ಅಲ್ಲ, ಅತ್ತೆ ನನ್ನ ಅಭಿಮಾನಿ: ನಿಖಿಲ್

    ರೇವತಿ ಪತಿಯ ಮುಖವನ್ನು ನೋಡಿ ಏನೋ ಹೇಳಿದ್ದಾರೆ. ಅದಕ್ಕೆ ನಿಖಿಲ್ ಮೊದಲಿಗೆ ಏನು ಮಾತನಾಡದೆ ತಲೆಯಾಡಿಸಿದ್ದಾರೆ. ನಂತರ ನಸು ನಕ್ಕಿದ್ದಾರೆ. ಪತಿಯ ನಗುವನ್ನು ಕಂಡು ರೇವತಿ ಕೂಡ ಜೋರಾಗಿ ನಕ್ಕಿದ್ದಾರೆ. ಇಬ್ಬರು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೆ ಸಂದರ್ಶನವೊಂದರಲ್ಲಿ ನಿಖಿಲ್ ಪತ್ನಿಯ ಬಗ್ಗೆ ಮಾತನಾಡಿದ್ದರು. ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದು ನೋಡಿಲ್ಲ ನಾನು. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಪತ್ನಿಯ ಬಗ್ಗೆ ನಿಖಿಲ್ ಮನಬಿಚ್ಚಿ ಮಾತನಾಡಿದ್ದರು. ಇದರ ಬೆನ್ನಲ್ಲೆ ನಿಖಿಲ್ ತಮ್ಮ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

    ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತಲೂ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಕ್ಯೂಟ್ ಮಗುತರ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ನಿಖಿಲ್ ತಮ್ಮ ಪತ್ನಿ ರೇವತಿ ತಮಾಷೆಗಾಗಿ ಕಾಳೆದಿದ್ದರು.

    https://www.instagram.com/p/CFTic0RJMQV/?igshid=dpxpsa8g1k5h

    ಕುರುಕ್ಷೇತ್ರ ಸಿನಿಮಾವನ್ನು ರೇವತಿ ನೋಡಿರಲಿಲ್ಲ. ಅವರ ತಂದೆ-ತಾಯಿ ನೋಡಿದ್ದರು. ಇತ್ತೀಚೆಗೆ ನಾನು ಕುರುಕ್ಷೇತ್ರ ಸಿನಿಮಾ ತೋರಿಸಿದೆ. ಈ ವೇಳೆ ಅಭಿಮನ್ಯು ಸಾವನ್ನಪ್ಪಿದ ನಂತರ ಜೋರಾಗಿ ಅತ್ತರು. ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ, ನನ್ನ ಅತ್ತೆಯವರು ನನ್ನ ಫ್ಯಾನ್, ಅವರು ಸಿನಿಮಾಗಳನ್ನು ನೋಡಿದ್ದಾರೆ. ರೇವತಿ ಕೆಲವು ಸಿನಿಮಾಗಳನ್ನಷ್ಟೆ ನೋಡಿದ್ದಾರೆ ಎಂದು ನಿಖಿಲ್ ಹೇಳಿದ್ದರು.

  • ರೇವತಿ ಅಲ್ಲ, ಅತ್ತೆ ನನ್ನ ಅಭಿಮಾನಿ: ನಿಖಿಲ್

    ರೇವತಿ ಅಲ್ಲ, ಅತ್ತೆ ನನ್ನ ಅಭಿಮಾನಿ: ನಿಖಿಲ್

    – ಕಾವೇರಿಯನ್ನು ಕಣ್ಣಲ್ಲೇ ತುಂಬ್ಕೊಂಡಿದ್ದಾರೆ
    – ಪತ್ನಿಯ ಕಾಲೆಳೆದ ಅಭಿಮನ್ಯು

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯೊಂದಿಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಪತ್ನಿ ರೇವತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಇತ್ತೀಚೆಗಷ್ಟೆ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಿಖಿಲ್, ತಮ್ಮ ಪತ್ನಿ ರೇವತಿಯವರನ್ನು ಹೊಗಳಿದ್ದಾರೆ. ನನ್ನ ಪತಿ ನನಗೆ ಹೊಸಬರು ಎಂದು ಅನ್ನಿಸುತ್ತಿಲ್ಲ. ನಾವಿಬ್ಬರಿಗೂ ಸುಮಾರು ವರ್ಷಗಳ ಪರಿಚಯವಿದೆ ಎನ್ನಿಸುತ್ತದೆ. ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರ ಮನಸ್ಸು ಮಗುತರ. ಅವರನ್ನು ಪತ್ನಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದರು.

    ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತಲೂ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಕ್ಯೂಟ್ ಮಗುತರ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ನಿಖಿಲ್ ತಮ್ಮ ಪತ್ನಿ ರೇವತಿ ತಮಾಷೆಗಾಗಿ ಕಾಳೆದಿದ್ದಾರೆ.

    ಕುರುಕ್ಷೇತ್ರ ಸಿನಿಮಾವನ್ನು ರೇವತಿ ನೋಡಿರಲಿಲ್ಲ. ಅವರ ತಂದೆ-ತಾಯಿ ನೋಡಿದ್ದರು. ಇತ್ತೀಚೆಗೆ ನಾನು ಕುರುಕ್ಷೇತ್ರ ಸಿನಿಮಾ ತೋರಿಸಿದೆ. ಈ ವೇಳೆ ಅಭಿಮನ್ಯು ಸಾವನ್ನಪ್ಪಿದ ನಂತರ ಜೋರಾಗಿ ಅತ್ತರು. ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ, ನನ್ನ ಅತ್ತೆಯವರು ನನ್ನ ಫ್ಯಾನ್, ಅವರು ಸಿನಿಮಾಗಳನ್ನು ನೋಡಿದ್ದಾರೆ. ರೇವತಿ ಕೆಲವು ಸಿನಿಮಾಗಳನ್ನಷ್ಟೆ ನೋಡಿದ್ದಾರೆ ಎಂದು ನಿಖಿಲ್ ಹೇಳಿದರು.

    ನನ್ನ ಪತ್ನಿಗೆ ಸ್ವಚ್ಛತೆಯ ಒಸಿಡಿ (ಸ್ವಚ್ಛತೆಯ ಗೀಳು), ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ನಾನು ನನ್ನ ರೂಮಿಗೆ ಬಂದರೆ ತುಂಬಾ ವಸ್ತುಗಳು ಹರಡುತ್ತಿದ್ದವು. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ. ಆದರೆ ಈಗ ಸಾಕಷ್ಟು ಬದಲಾಗಿದ್ದೀನಿ. ಆದರೆ ನನ್ನ ಪತ್ನಿ ರೇವತಿ ಅವರಿಗೆ ಸಾಲದಂತೆ, ಇನ್ನೂ ಬದಲಾಗಬೇಕೆಂತೆ ಎಂದು ನಿಖಿಲ್ ನಕ್ಕರು.

    ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದು ನೋಡಿಲ್ಲ ನಾನು. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಪತ್ನಿಯ ಬಗ್ಗೆ ನಿಖಿಲ್ ಮನಬಿಚ್ಚಿ ಮಾತನಾಡಿದ್ದಾರೆ.

  • ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ತಮ್ಮ ಪತ್ನಿಯ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯನ್ನು ವಿಶೇಷವಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.

    ನಟ ನಿಖಿಲ್ ಹಬ್ಬದ ದಿನ ಅಥವಾ ವಿಶೇಷ ದಿನಗಳಲ್ಲಿ ಪತ್ನಿ ರೇವತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಿಖಿಲ್ ಪತ್ನಿ ರೇವತಿಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೇ ದಸರಾದಲ್ಲಿ ಅಂಬಾರಿ ಹೊರುವ ಗಜಪಡೆಯನ್ನು ಕೂಡ ಭೇಟಿ ಮಾಡಿಸಿದ್ದಾರೆ.

    “ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ” ಎಂದು ಇನ್‍ಸ್ಟಾಗ್ರಾಂನಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. ಜೊತೆಗೆ ಗಜಪಡೆಯ ಜೊತೆ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಸರಾದ ಎಲ್ಲಾ ಆನೆಗಳು ಮೈಸೂರಿಗೆ ಆಗಮಿಸಿ, ದಸರಾ ಉತ್ಸವದ ತಾಲೀಮಿನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಕೊರೊನಾ ಇರುವ ಕಾರಣ ಎಲ್ಲಾ ಆನೆಗಳು ಇನ್ನೂ ಶಿಬಿರದಲ್ಲಿಯೇ ಇದೆ. ಹೀಗಾಗಿ ನಿಖಿಲ್ ಪತ್ನಿಯೊಂದಿಗೆ ಶಿಬಿರಕ್ಕೆ ಭೇಟಿ ಕೊಟ್ಟಿದ್ದರು.

    https://www.instagram.com/p/CEvyTlspo9p/?igshid=i8frrrtsrlaq

  • ಪತ್ನಿಗಾಗಿ ಹೊಸ ಮನೆ ಕಟ್ಟಲು ಮುಂದಾದ ನಿಖಿಲ್

    ಪತ್ನಿಗಾಗಿ ಹೊಸ ಮನೆ ಕಟ್ಟಲು ಮುಂದಾದ ನಿಖಿಲ್

    – ರೇವತಿ ಹೆಗಲಿಗೆ ಕಟ್ಟಡದ ಉಸ್ತುವಾರಿ

    ಬೆಂಗಳೂರು: ಪತ್ನಿ ರೇವತಿ ಜೊತೆಗೆ ಕೃಷಿ ಕೆಲಸ, ವರ್ಕೌಟ್, ಯೋಗ ಮಾಡುವುದರಲ್ಲಿ ನಿರತರಾಗಿರುವ ನಟ ನಿಖಿಲ್ ಕುಮಾರಸ್ವಾಮಿ ಇದೀಗ ಹೊಸ ಮನೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ಹೌದು. ತಮ್ಮ ಪತ್ನಿ ರೇವತಿ ಅವರಿಗಾಗಿ ಫಾರ್ಮ್ ಹೌಸ್ ನಲ್ಲಿ ನಿಖಿಲ್ ಮನೆ ಕಟ್ಟಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಭೂಮಿ ಪೂಜೆ ಕೂಡ ನೆರವೇರಿದೆ.

    ಪತ್ನಿ ರೇವತಿ ಸ್ವತಃ ಆರ್ಕಿಟೆಕ್ಟ್ ಆಗಿರೋದರಿಂದ ಕಟ್ಟಡದ ಉಸ್ತುವಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಮನೆ ಪುಟ್ಟದಾಗಿರಲಿದ್ದು, ಅಲ್ಲದೆ ಪರಿಸರ ಸ್ನೇಹಿ ಆಗಿರಲಿದೆ. ಸುಮಾರು ಒಂದು ವರ್ಷದೊಳಗೆ ಮನೆ ಕೆಲಸ ಪೂರ್ಣವಾಗಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಗ ನಿಖಿಲ್ ಮದುವೆ ಅದ್ಧೂರಿಯಾಗಿಯೇ ನಡೆಯುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಮದುವೆ ಬಹಳ ಸರಳವಾಗಿ ನೆರವೇರಿತ್ತು. ಕೋವಿಡ್ 19 ಸಂಕಷ್ಟದ ಪರಿಸ್ಥಿತಿ ಇರುವುದರಿಂದ ಮದುವೆಯಾದ ಬಳಿಕ ನಿಖಿಲ್ ಹೊರಗಡೆ ಅಷ್ಟಾಗಿ ಕಾಣಿಸಿಕೊಂಡಿಲ್ಲವಾದರೂ, ಇತ್ತೀಚೆಗೆ ಮಳೆಯಿಂದ ಹಾನಿಯಾದ ಮಡಿಕೇರಿಯ ಕೆಲವು ಪ್ರದೇಶಗಳೀಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕಷ್ಟವನ್ನು ಆಲಿಸಿದ್ದರು.

    ಉಳಿದಂತೆ ಹೆಚ್ಚಿನ ಸಮಯವನ್ನು ನಿಖಿಲ್ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಪತ್ನಿಯ ಜೊತೆ ಕಳೆಯುತ್ತಿದ್ದಾರೆ. ಹೀಗಾಗಿ ಇದೀಗ ಅಲ್ಲಿಯೇ ತಮ್ಮ ಪತ್ನಿಗಾಗಿ ಹೊಸ ಮನೆಯೊಂದನ್ನು ಕಟ್ಟಲು ನಿಖಿಲ್ ನಿರ್ಧರಿಸಿದ್ದಾರೆ.

  • ಪತ್ನಿ ಜೊತೆ ‘ಅಭಿಮನ್ಯು’ ನಿಖಿಲ್ ವರ್ಕೌಟ್ – ವಿಡಿಯೋ ವೈರಲ್

    ಪತ್ನಿ ಜೊತೆ ‘ಅಭಿಮನ್ಯು’ ನಿಖಿಲ್ ವರ್ಕೌಟ್ – ವಿಡಿಯೋ ವೈರಲ್

    ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆಗಾಗ ಪತ್ನಿ ಜೊತೆಗಿನ ಫೋಟೋ ಮತ್ತು ತಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ನಿಖಿಲ್ ತಮ್ಮ ಪತ್ನಿ ರೇವತಿ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ನಟಿ ನಿಖಿಲ್ ಲಾಕ್‍ಡೌನ್ ಸಂದರ್ಭದಲ್ಲಿ ಪತ್ನಿ ಮತ್ತು ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಮನೆಯಲ್ಲಿದ್ದರೂ ಜಿಮ್ ಮಾಡುತ್ತಿದ್ದು, ಆಗಾಗ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಪತ್ನಿ ಜೊತೆಗೆ ವರ್ಕೌಟ್ ಮಾಡುತ್ತಿರುವ ಶೇರ್ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಪತ್ನಿ ರೇವತಿ ಜೊತೆ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ರೇವತಿ ಅವರು ಸರಿಯಾಗಿ ಕಾಣುತ್ತಿಲ್ಲ. ಅವರ ಪಕ್ಕದಲ್ಲಿಯೇ ನಿಖಿತ್ ವರ್ಕೌಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನಿಖಿಲ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    “ನಮಗೆ ಯಾವಾಗಲೂ ತರಬೇತಿ ನೀಡಲು ಜಿಮ್ ಅಗತ್ಯವಿಲ್ಲ. ಆದರೂ ನಮ್ಮ ಮನಸ್ಸಿಗೆ ಸ್ವಲ್ಪ ಪ್ರೇರಣೆ ಬೇಕು. ಹೀಗಾಗಿ ಪ್ರಕೃತಿಯ ಮಧ್ಯದಲ್ಲಿ ನನ್ನ ಸಂಗಾತಿಯೊಂದಿಗೆ ವರ್ಕೌಟ್ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CCQ7L-GpwbZ/?utm_source=ig_embed

    ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅನ್ನದಾತರ ಬಗ್ಗೆ ಬರೆದುಕೊಂಡಿದ್ದರು. “ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು. ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ, ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ” ಎಂದು ಹೇಳಿದ್ದರು.

  • ಮಡದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ನಿಖಿಲ್

    ಮಡದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ನಿಖಿಲ್

    ಬೆಂಗಳೂರು: ನಟ ನಿಖಿಲ್ ದಂಪತಿ ಲಾಕ್‍ಡೌನ್ ಸಮಯವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ತೋಟದ ಮನೆ ಸುತ್ತಾಟ ಸೇರಿದಂತೆ, ಒಟ್ಟಿಗೆ ಕಾಲ ಕಳೆಯುತ್ತಿದ್ದು, ಇದೀಗ ಪತ್ನಿಯ ಹುಟ್ಟುಹಬ್ಬವನ್ನು ನಿಖಿಲ್ ಕುಮಾರಸ್ವಾಮಿಯವರು ವಿಭಿನ್ನವಾಗಿ ಆಚರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣವೂ ಸ್ಥಗಿತಗೊಂಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಸಂಪೂರ್ಣ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ತೋಟದ ಮನೆ ಸುತ್ತಾಟ ಸೇರಿದಂತೆ ತಮ್ಮ ಸುತ್ತಲಿನ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಸುತ್ತಾಟದ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಮಳೆಯಲ್ಲಿ ನೀಲಿ ಬಣ್ಣದ ಛತ್ರಿ ಕೆಳಗೆ ಇಬ್ಬರೂ ನಿಂತಿರುವ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರೇವತಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ದಂಪತಿಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಾವಿಬ್ಬರೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇಕ್ ಕತ್ತರಿಸುತ್ತಿರುವ ಸಂದರ್ಭದ ಫೋಟೋ ಹಾಕಿರುವ ಅವರು, ಹುಟ್ಟು ಹಬ್ಬದ ಶುಭಾಶಯ ಚಿನ್ನ ಎಂದು ಪ್ರೀತಿಯಿಂದ ಮೂಗು ಮುರಿಯುತ್ತಿರುವ ಎಮೋಜಿಯನ್ನು ಹಾಕಿದ್ದಾರೆ.

     

    View this post on Instagram

     

    ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ????

    A post shared by Nikhil Kumar (@nikhilgowda_jaguar) on

    ಚಿತ್ರದಲ್ಲಿ ನಿಖಿಲ್ ಹಾಗೂ ರೇವತಿ ಇಬ್ಬರೂ ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡಿದ್ದು, ರೇವತಿಯವರು ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಹಾಕಲಾಗಿದೆ. ಪೋಸ್ಟ್‍ಗೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಹ್ಯಾಪಿ ಬರ್ಥ್ ಡೇ ಅತ್ತಿಗೆ, ಹ್ಯಾಪಿ ಬರ್ಥ್ ಡೇ ಮೇಡಂ ಎಂದು ಶುಭಾಶಯ ತಿಳಿಸುತ್ತಿದ್ದಾರೆ. ಸಾಕಷ್ಟು ಜನ ಕಮೆಂಟ್ ಮಾಡುವ ಮೂಲಕ ಹಾರೈಸುತ್ತಿದ್ದಾರೆ.

    ಇತ್ತೀಚೆಗೆ ನಿಖಿಲ್ ತೋಟದ ಮನೆಯಲ್ಲಿ ಇಬ್ಬರು ಕಾಲ ಕಳೆದಿರುವ ಫೊಟೋವನ್ನು ಹಂಚಿಕೊಂಡಿದ್ದರು. ಹೀಗೆ ತಮ್ಮ ಸಿನಿಮಾಗಳ ಅಪ್‍ಡೇಟ್‍ಗಿಂತ ಹೆಚ್ಚಾಗಿ ತಮ್ಮ ಕುಟುಂಬ ಹಾಗೂ ಪತ್ನಿ ಜೊತೆಗೆ ಕಾಲ ಕಲೆದ ಕುರಿತು ಪೋಸ್ಟ್ ಹಾಕುತ್ತಿದ್ದಾರೆ.

     

    View this post on Instagram

     

    ♥️

    A post shared by Nikhil Kumar (@nikhilgowda_jaguar) on

    ಲಾಕ್‍ಡೌನ್ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇಷ್ಟು ಮಾತ್ರವಲ್ಲದೆ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸಿನಿಮಾ ಕಾರ್ಮಿಕರಿಗೆ ನಿಖಿಲ್ ಸಹಾಯ ಮಾಡಿದ್ದು, ಬಡವರ ಖಾತೆಗೆ ಹಣ ಹಾಕುವ ಮೂಲಕ ನೆರವಾಗಿದ್ದಾರೆ. ಈಗಾಗಲೇ ಎರಡ್ಮೂರು ಚಿತ್ರಗಳಿಗೆ ನಿಖಿಲ್ ಸಹಿ ಹಾಕಿದ್ದು, ಇನ್ನೂ ಸೆಟ್ಟೇರಿಲ್ಲ. ಇನ್ನೇನು ಸಿನಿಮಾ ಕೆಲಸಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಪತ್ನಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

  • ತೋಟದ ಮನೆಯಲ್ಲಿ ಪತ್ನಿಯ ಕೈಹಿಡಿದು ಹೊರಟ ಯುವರಾಜ ನಿಖಿಲ್

    ತೋಟದ ಮನೆಯಲ್ಲಿ ಪತ್ನಿಯ ಕೈಹಿಡಿದು ಹೊರಟ ಯುವರಾಜ ನಿಖಿಲ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರು ತಮ್ಮ ಪತ್ನಿಯ ಜೊತೆ ಕೈಹಿಡಿದು ನಡೆದುಕೊಂಡು ಹೋಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಲಾಕ್‍ಡೌನ್ ವೇಳೆಯಲ್ಲಿ ಸಿಂಪಲ್ ಆಗಿ ಮದುವೆಯಾದ ನಿಖಿಲ್ ಮದುವೆಯ ನಂತರ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಲಾಕ್‍ಡೌನ್ ಸಮಯದವನ್ನು ತಮ್ಮ ಪತ್ನಿ ರೇವತಿಯವರ ಜೊತೆ ಕಾಲ ಕಳೆಯುತ್ತಿರುವ ನಿಖಿಲ್ ಬುಧವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/CAryvmCJwvr/

    ರೇವತಿಯವರ ಕೈಹಿಡಿದು ತೋಟದ ಮನೆಯಲ್ಲಿ ನಡೆದು ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ನಿಖಿಲ್ ಅವರು, ಇವತ್ತಿನ ದಿನ ಬಿಡದಿಯ ತೋಟದ ಮನೆಯ ಆವರಣದಲ್ಲಿ ಕಳೆದ ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರೇವತಿಯವರು ಪಿಂಕ್ ಕಲರ್ ಸೀರೆ ಧರಿಸಿದ್ದರೆ, ನಿಖಿಲ್ ಬಿಳಿ ಬಣ್ಣದ ಶರ್ಟ್ ತೊಟ್ಟು ಮಿಂಚುತ್ತಿದ್ದಾರೆ. ನಿಖಿಲ್ ಜೋಡಿಯ ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಸದ್ಯ ಯಾವುದೇ ಶೂಟಿಂಗ್ ಕೆಲಸವಿಲ್ಲದೇ ಮನೆಯಲ್ಲೇ ಕಾಲಕಳೆಯುತ್ತಿರುವ ನಿಖಿಲ್, ಪತ್ನಿ ರೇವತಿಯೊಂದಿಗೆ ಹಾಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಸಕ್ರಿಯವಾಗಿ ಇರುವ ನಿಖಿಲ್ ಮೊನ್ನೆಯಷ್ಟೇ ತಮ್ಮ ತಾತಾ ಅಜ್ಜಿಯ 66ನೇ ಮದುವೆ ವಾರ್ಷಿಕೋತ್ಸವಕ್ಕೆ ಶುಭಕೋರಿದ್ದರು. ಜೊತೆಗೆ ನಾಡಿನ ಆದರ್ಶ ದಂಪತಿ ಎಂದು ಹಾಡಿಹೊಗಳಿದ್ದರು.

    https://www.instagram.com/p/CAkCLkJJ5h-/

    ಲಾಕ್‍ಡೌನ್ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಹಾಗೂ ರೇವತಿ ಮದುವೆಯಲ್ಲಿ ಎರಡು ಕುಟುಂಬದವರ ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು.

    ಇತ್ತ ಕೊರೊನಾ ಲಾಕ್‍ಡೌನ್ ನಡುವೆ ಶೂಟಿಂಗ್‍ನಲ್ಲಿ ಕೆಲಸ ಮಾಡುವ ನೌಕರರಿಗೆ ಸಹಾಯ ಮಾಡಿದ್ದ ನಿಖಿಲ್, ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ ಸಿನಿಮಾದ ನಂತರ ರಾಜಕೀಯಕ್ಕೆ ಇಳಿದಿದ್ದರು. ಈಗ ಮತ್ತೆ ಸಿನಿಮಾದ ಕಡೆ ಮುಖ ಮಾಡಿದ್ದಾರೆ. ಹೊಸ ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಖಿಲ್ ಎಸ್.ಕೃಷ್ಣ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದ್ದು, ಚಿತ್ರದ ಶೀರ್ಷಿಕೆ ಇನ್ನೂ ಘೋಷಣೆಯಾಗಿಲ್ಲ.

  • ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    – ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
    – ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

    ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.