Tag: Revathi

  • ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್

    ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್

    ‘ಸೀತಾರಾಮ ಕಲ್ಯಾಣ’, ‘ಜಾಗ್ವಾರ್’ ಸಿನಿಮಾಗಳು ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಮದುವೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ. ಹಾಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಮೂಲ್ಯ ಉಡುಗೊರೆ ಎಂದು ಪತ್ನಿಗೆ ಪ್ರೀತಿಯಿಂದ ನಿಖಿಲ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರೀಲ್ಸ್ ಕೇಸ್: ನಿನ್ನೆ ಜೈಲು ಪಾಲು – ಇಂದು ರಜತ್‌ಗೆ ಜಾಮೀನು

    ನೀನು ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಮೂಲ್ಯ ಉಡುಗೊರೆ, ನಿನ್ನ ಪ್ರೀತಿ, ಶಕ್ತಿ, ತ್ಯಾಗ ಮತ್ತು ಕೃಪೆ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೀನು ನನಗೆ ಸ್ಫೂರ್ತಿಯಾಗಿರುವೆ. ನೀನು ನನ್ನ ಜೀವನಕ್ಕೆ ಬೆಳಕು ತಂದಿರುವುದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮೊಂದಿಗೆ ಜೀವನದ ಈ ಪ್ರಯಾಣದಲ್ಲಿ ಜೊತೆಯಾಗಿ ನಡೆಯಲು ನಾನು ತುಂಬಾ ಧನ್ಯನಾಗಿದ್ದೇನೆ. ಪ್ರತಿದಿನವೂ ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ, ನಮಗೆ ವಾರ್ಷಿಕೋತ್ಸವದ (Wedding Anniversary) ಶುಭಾಶಯಗಳು ಎಂದು ನಿಖಿಲ್ ಶುಭಕೋರಿದ್ದಾರೆ.

    2020ರಂದು ರೇವತಿ (Revathi) ಜೊತೆ ನಿಖಿಲ್ ಅದ್ಧೂರಿಯಾಗಿ ಮದುವೆಯಾದರು. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ. ಇವರ ದಾಂಪತ್ಯಕ್ಕೆ ಮುದ್ದಾದ ಗಂಡು ಮಗು ಸಾಕ್ಷಿಯಾಗಿದ್ದಾನೆ. ಇದನ್ನೂ ಓದಿ:ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಮಾಡಿ: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ

    ನಿನ್ನೆಯಷ್ಟೇ (ಏ.16) ಬನಶಂಕರಿ ದೇವಸ್ಥಾನಕ್ಕೆ ತೆರಳಿ ನಿಖಿಲ್ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದರು.

  • ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ‘ಘಜನಿ’, ‘7 ಆಮ್ ಅರಿವು’, ‘ತುಪಾಕಿ’, ‘ಕತ್ತಿ’, ‘ದರ್ಬಾರ್’ ಮುಂತಾದ ಸೂಪರ್ ಹಿಟ್ ತಮಿಳು ಚಿತ್ರಗಳ ನಿರ್ದೇಶಕರಾದ ಎ.ಆರ್. ಮುರುಗದಾಸ್ (Murugadoss), ಈಗ ಸದ್ದಿಲ್ಲದೆ ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

    ಮುರುಗದಾಸ್ ನಿರ್ಮಾಣದ ಚಿತ್ರದ ಹೆಸರು ‘ಆಗಸ್ಟ್ 16, 1947’. ಹೆಸರು ಕೇಳಿದರೆ, ಇದು ಸ್ವಾತಂತ್ರ್ಯ ಸಂಗ್ರಾಮ ಕಥೆ ಇದ್ದಿರಬಹುದು ಎಂದನಿಸಬಹುದು. ಹೌದು, ಇದು ಸ್ವಾತಂತ್ರ್ಯ ಸಂಗ್ರಾಮದ ಕಥೆಯೇ. ಆದರೆ, ಇದುವರೆಗೂ ಯಾರೂ ಹೇಳದ ಮತ್ತು ತೋರಿಸದ ಒಂದು ವಿಭಿನ್ನ ಮತ್ತು ವಿಶೇಷ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.. ಬ್ರಿಟಿಷ್ ಸಾಮ್ರಾಜ್ಯದ ಎದುರು ಒಂದು ಸಣ್ಣ ಹಳ್ಳಿಯ ಜನ ತೊಡೆ ತಟ್ಟಿ ನಿಲ್ಲುವುದರ ಜೊತೆಗೆ, ಹೇಗೆ ನಿದ್ದೆ ಕೆಡಿಸಿದರು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.

    ಅಂದಹಾಗೆ, ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ನವನಿರ್ದೇಶಕ ಎನ್.ಎಸ್. ಪೊನ್ ಕುಮಾರನ್. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಪರ್ಪಲ್ ಬುಲ್ ಎಂಟರ್ಟೈನ್ಮೆಂಟ್ ಅರ್ಪಿಸಿ, ಎ.ಆರ್. ಮುರುಗದಾಸ್, ಓಂಪ್ರಕಾಶ್ ಭಟ್ ಮತ್ತು ನರಸೀರಾಮ್ ಚೌಧರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಗೌತಮ್ ಕಾರ್ತಿಕ್ (Gautham Karthik), ನವನಟಿ ರೇವತಿ (Revathi), ಪುಗಳ್ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಅಭಿನಯಿಸಿದ್ದಾರೆ.  ಅಂದಹಾಗೆ, ‘ಆಗಸ್ಟ್ 16, 1947’ ಚಿತ್ರವು ಏಪ್ರಿಲ್ 07ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

  • ನಿಖಿಲ್ ಕುಮಾರಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    ನಿಖಿಲ್ ಕುಮಾರಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    ನಿನ್ನೆಯಷ್ಟೇ ನಟ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಇವರ ಪತ್ನಿ ಚೆನ್ನಮ್ಮ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ನಿಖಿಲ್ ಅವರ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದರು.

    ಮಧ್ಯಾಹ್ನ ಶುಭ ಮುಹೂರ್ತದ ವೇಳೆ ನಿಖಿಲ್ ಮತ್ತು ರೇವತಿ ದಂಪತಿಯ ಪುತ್ರನಿಗೆ ಅವ್ಯನ್ ದೇವ್ ಎಂದು ಹೆಸರಿಟ್ಟರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ತಮ್ಮ ಮಗನ ಪೂರ್ತಿ ಹೆಸರನ್ನು ಅವ್ಯನ್ ದೇವ್ ಎನ್‍.ಕೆ ಎಂದು ಹೇಳಿದರು. ಅಂದರೆ, ಅವ್ಯನ್ ದೇವ್ ನಿಖಿಲ್ ಕುಮಾರಸ್ವಾಮಿ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

     

    ಅವ್ಯನ್ ದೇವ್ ಎಂದು ಹೆಸರು ಕೇಳುತ್ತಿದ್ದಂತೆಯೇ ಇದರ ಅರ್ಥವೇನು ಅನ್ನುವುದರ ಹುಡುಕಾಟ ಕೂಡ ನಡೆಯಿತು. ಇಂತಹ ಹೆಸರನ್ನು ಆಯ್ಕೆ ಮಾಡಿದ್ದು ಯಾರು? ಎನ್ನುವ ಕುತೂಹಲ ಕೂಡ ಮೂಡಿತ್ತು. ಅದಕ್ಕೂ ನಿಖಿಲ್ ತೆರೆ ಎಳೆದಿದ್ದಾರೆ. ಅವ್ಯನ್ ಅಂದರೆ ಗಣೇಶ ಮತ್ತು ವಿಷ್ಣುದೇವನಿಗೆ ಕರೆಯುವ ಮತ್ತೊಂದು ಹೆಸರಂತೆ. ಈ ಹೆಸರನ್ನು ಆಯ್ಕೆ ಮಾಡಿದ್ದು ತಮ್ಮ ಪತ್ನಿ ರೇವತಿ ಎಂದು ಹೇಳಿದ್ದಾರೆ ನಿಖಿಲ್. 

  • ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಷೇಕ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನಡೆಯುತ್ತಿದ್ದು, ದೊಡ್ಡ ಗೌಡರ ಕುಟುಂಬವು ಮೊಮ್ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ನಿರ್ಧರಿಸಿದ್ದಾರಂತೆ.  ನಿಖಿಲ್ ಮತ್ತು ರೇವತಿ ದಂಪತಿಯ ಈ ಮಗುವಿಗೆ ಈಗ ಒಂಬತ್ತು ತಿಂಗಳು. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.  ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆಯಲಿದೆ.

  • ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಪ್ರೀತಿಯ ಪತ್ನಿ ರೇವತಿ ಜೊತೆಗೆ ರೋಮ್ಯಾಂಟಿಕ್ ಆಗಿ ನೃತ್ಯ ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಜಾಗ್ವಾರ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಿಖಿಲ್ ಸದ್ಯ ಕನ್ನಡದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ತಮ್ಮ ಅಭಿನಯ, ಡ್ಯಾನ್ಸ್, ಸ್ಟೈಲ್ ಮೂಲಕ ಮೊದಲ ಸಿನಿಮಾದಲ್ಲಿಯೇ ಅಭಿಮಾನಿಗಳ ಮನ ಕದ್ದಿದ್ದ ನಿಖಿಲ್ ರಾಜಕೀಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

    ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರೂ ನಿಖಿಲ್ ಈ ಮಧ್ಯೆ ಪತ್ನಿಗೂ ಸಹ ಅಷ್ಟೇ ಟೈಮ್ ನೀಡುತ್ತಾರೆ. ಆಗಾಗ ಪತ್ನಿ ಜೊತೆಗೆ ಕಾಲ ಕಳೆಯುತ್ತಿರುವ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ನಿಖಿಲ್ ಇದೀಗ ಪತ್ನಿ ಜೊತೆಗೆ ತಾವು ಅಭಿನಯಿಸಿರುವ ಬಹುನಿರೀಕ್ಷಿತ ರೈಡರ್ ಸಿನಿಮಾದ ಮೆಲೊಂಡಿ ಹಾಡೊಂದಕ್ಕೆ ಸೂಪರ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಚಿಕೊಂಡಿದ್ದಾರೆ. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಅಲ್ಲು ಅರ್ಜುನ್

    ವೀಡಿಯೋದಲ್ಲಿ ನಿಖಿಲ್ ಹಾಗೂ ರೇವತಿ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಸ್ಟೈಲಿಶ್ ಡ್ರೆಸ್ ತೊಟ್ಟು ರೈಡರ್ ಸಿನಿಮಾದ ನಿನ್ನಲ್ಲೇ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವೀಡಿಯೋ ನೋಡಿ ನಿಖಿಲ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    ಕೆಲವು ತಿಂಗಳ ಹಿಂದೆಯಷ್ಟೇ ನಿಖಿಲ್ ಹಾಗೂ ರೇವತಿಗೆ ಗಂಡು ಮಗು ಜನಿಸಿದ್ದು, ಮಗನ ಫೋಟೋವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಿಖಿಲ್ ಸಂತಸ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಕನ್ನಡದಲ್ಲಿ ನನಗೆ ಡಬ್ಬಿಂಗ್ ಮಾಡಲು ಆಗಲಿಲ್ಲ: ರಶ್ಮಿಕಾ ಮಂದಣ್ಣ

    ಜಾಗ್ವರ್ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ರೈಡರ್ ಸಿನಿಮಾಕ್ಕೆ ಬಣ್ಣಹಚ್ಚಿದ್ದು, ಈಗಾಗಲೇ ಈ ಸಿನಿಮಾದ ಹಾಡುಗಳು ಭಾರೀ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 24ರಂದು ರೈಡರ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ನಿಖಿಲ್ ರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

    ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಸೀಮಂತ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.

    ನಾಯಕ ನಟ ನಿಖಿಲ್ ಕುಮಾರಸ್ವಾಮಿ ಅವರ ಧರ್ಮಪತ್ನಿ ರೇವತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಮುನಿರತ್ನ ಅವರು ಪಾಲ್ಗೊಂಡು ಶುಭ ಕೋರಿದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸೀಮಂತ ಸಮಾರಂಭ ಇಂದು ನೇರವೇರಿತು. ಅನೇಕ ಗಣ್ಯರು ಸೀಮಂತ ಸಂಭ್ರಮದಲ್ಲಿರುವ ರೇವತಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ:  20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    nikhil kumaraswamy Wife revathi baby shower ceremony Bengaluru

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಇದೀಗ ಎಂಟು ತಿಂಗಳು ತುಂಬಿದ್ದು, ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಮಾನ್ವಿ ಕನ್ವೆನ್ಷನ್ ಹಾಲ್‍ನಲ್ಲಿ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    nikhil kumaraswamy Wife revathi baby shower ceremony Bengaluru

    2020ರ ಏಪ್ರಿಲ್ 17ರಂದು ಲಾಕ್‍ಡೌನ್ ಸಮಯದಲ್ಲಿ ನಿಖಿಲ್ ಹಾಗೂ ರೇವತಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವು ತಿಂಗಳ ಹಿಂದಷ್ಟೇ ಮಾಜಿ ಸಿಎಂ. ಹೆಚ್.ಡಿ ಕುಮಾರಸ್ವಾಮಿಯವರು ತಾವು ತಾತಾ ಆಗುತ್ತಿರುವ ಖುಷಿ ವಿಚಾರವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ಇದೀಗ ಮುದ್ದಿನ ಸೊಸೆ ಸೀಮಂತವನ್ನು ಅದ್ದೂರಿಯಾಗಿ ಆಚರಿಸಿದ್ದು, ಗೌಡರ ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

    nikhil kumaraswamy Wife revathi baby shower ceremony Bengaluru

    ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿರುವ ನಿಖಿಲ್ ಅವರು ಕುಟುಂಬದ ಕಡೆಗೂ ಹೆಚ್ಚು ಗಮನ ನೀಡುತ್ತಾರೆ. ಪತ್ನಿ ಜೊತೆ ಇರುವ ಫೋಟೋಗಳನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಸಂದರ್ಭದ ಫೋಟೋವನ್ನು ಹಂಚಿಕೊಂಡ ನಿಖಿಲ್, ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ನಿಖಿಲ್ ಮತ್ತು ರೇವತಿ ದಂಪತಿಗೆ ಎಲ್ಲರಿಂದ ಶುಭ ಹಾರೈಕೆಗಳು ಕೇಳಿಬರುತ್ತಿವೆ.

  • ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಸೀಮಂತ ಕಾರ್ಯಕ್ರಮ ಇಂದು ನಡೆಯುತ್ತಿದೆ.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಇದೀಗ ಎಂಟು ತಿಂಗಳು ತುಂಬಿದ್ದು, ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಮಾನ್ವಿ ಕನ್ವೆನ್ಷನ್ ಹಾಲ್‍ನಲ್ಲಿ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಲ್ಲದೇ ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

    nikil

    ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಿಖಿಲ್ ಆಗಾಗ ಪತ್ನಿ ಜೊತೆಗಿರುವ ಕೆಲವೊಂದು ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಕಳೆದ ವಾರವಷ್ಟೇ ಗಣೇಶ ಹಬ್ಬದಂದು ಪತ್ನಿ ಜೊತೆ ಹಬ್ಬ ಆಚರಿಸಿದ ನಿಖಿಲ್ ಸಂಪ್ರದಾಯಿಕ ಉಡುಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ನಿಖಿಲ್‍ಗೆ ಗಂಡು ಮಗುವಾಗಲಿದೆ: ವಿನಯ್ ಗುರೂಜಿ

    2020ರ ಏಪ್ರಿಲ್ 17ರಂದು ಲಾಕ್‍ಡೌನ್ ಸಮಯದಲ್ಲಿ ನಿಖಿಲ್ ಹಾಗೂ ರೇವತಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವು ತಿಂಗಳ ಹಿಂದಷ್ಟೇ ಮಾಜಿ ಸಿಎಂ. ಹೆಚ್.ಡಿ ಕುಮಾರಸ್ವಾಮಿಯವರು ತಾವು ತಾತಾ ಆಗುತ್ತಿರುವ ಖುಷಿ ವಿಚಾರವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ಇದೀಗ ಮುದ್ದಿನ ಸೊಸೆ ಸೀಮಂತವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಗೌಡರ ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ಎಂದಿಗೂ ಮರೆಯಲಾಗದ ದಿನದ ಫೋಟೋ ಹಂಚಿಕೊಂಡ ನಿಖಿಲ್

  • ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

    ಪತ್ನಿ ಜೊತೆಗಿನ ಲವ್ಲೀ ಫೋಟೋ ಶೇರ್ ಮಾಡಿದ ನಟ ನಿಖಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಪತ್ನಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

    ಪತ್ನಿ ಜೊತೆಗೆ ಫೋಟೋವನ್ನು ಸೆರೆ ಹಿಡಿದು ಅದಕ್ಕೆ ಮುದ್ದಾದ ಬರಹವನ್ನು ಬರೆದುಕೊಂಡಿದ್ದಾರೆ. ನನ್ನ ಧರ್ಮ ಪತ್ನಿ ಜೊತೆಗೆ ಒಂದು ಸೆಲ್ಫಿ ಎಂದು ಬರೆದುಕೊಂಡು ಫೋಟೋವನ್ನು ಸೋಶಿಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮುದ್ದಾದ ಜೋಡಿಯ ಕ್ಯೂಟ್ ಮೂಮೆಂಟ್ ನೋಡಿದ ನೆಟ್ಟಿಗರು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಹೌದು ತಂದೆಯಾಗುತ್ತಿರುವುದು ನಿಜ: ನಿಖಿಲ್

    ಸೂಪರ್ ಅಣ್ಣ, ಅತ್ತಿಗೆ, ಹಾರ್ಟ್ ಎಮೋಜಿಗಳು ಹೀಗೆ ಅನೇಕ ರೀತಿಯ ಕಮೆಂಟ್ ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಫೋಟೋದಲ್ಲಿ ರೇವತಿ ಮತ್ತು ನಿಖಿಲ್ ಕೂಡ ತುಂಬಾ ಮುದ್ದಾಗಿ ಕಾಣಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ಅವಕಾಶ ಇಲ್ಲ, ಸಂಸತ್​ನಲ್ಲೂ ಮಾತಾಡೋಕೆ ಬಿಡಲ್ಲ: ರಾಹುಲ್ ಗಾಂಧಿ

    ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಾವು ಅಜ್ಜನಾಗುತ್ತಿರುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸಂತಸದ ಸುದ್ದಿಯನ್ನು ರಿವೀಲ್ ಮಾಡಿದ್ದರು. ನಂತರ ನಿಖಿಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ಈ ಕುರಿತು ಈಗಾಗಲೇ ಸುದ್ದಿ ಹರಿದಾಡುತ್ತಿರುವುದು ಸತ್ಯ, ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ, ತಂದೆಯಾಗುತ್ತಿದ್ದೇನೆ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದರು.

    2020ರ ಫೆಬ್ರವರಿ 10ರಂದು ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ರೇವತಿ ಅವರ ಜೊತೆ ನಡೆದಿತ್ತು. ಮದುವೆಯನ್ನ ಅದ್ಧೂರಿಯಾಗಿ ನಡೆಸಲು ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ನಿರ್ಧರಿಸಿತ್ತು. ಕೊರೊನಾ ಹಿನ್ನೆಲೆ ಕೆಲ ಆಪ್ತರ ಸಮ್ಮುಖದಲ್ಲಿ 2020 ಏಪ್ರಿಲ್ 17ರಂದು ವಿವಾಹ ನಡೆದಿತ್ತು. ನಿಖಿಲ್ ಮತ್ತು ರೇವತಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಈ ಮುದ್ದಾದ ಫೋಟೋ ಮತ್ತೆ ಸುದ್ದಿಯಾಗುತ್ತಿದೆ.

  • ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

    ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

    ಚೆನ್ನೈ: ಟೋಕಿಯೋ ಒಲಿಂಪಿಕ್ಸ್‌ಗೆ ದಕ್ಷಿಣ ರೈಲ್ವೇ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ತಮಿಳುನಾಡಿನ ಮಧುರೈ ಮೂಲದ ರೇವತಿ ವೀರಮಣೆ ಆಯ್ಕೆಯಾಗಿದ್ದಾರೆ. ಸದ್ಯ ರೇವತಿ ದಕ್ಷಿಣ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ:  ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

    ಇದಕ್ಕೂ ಮೊದಲು 1988 ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಮಧುರೈ ಅಥ್ಲೀಟ್ ತಿರುಗ್ನಾನದುರೈ 4100 ಮೀಟರ್ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದರು. ರೇವತಿ ವೀರಮಣಿ ರಿಲೇಯಲ್ಲಿ ಭಾಗವಹಿಸಿದ್ದಾರೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

    ರೇವತಿಗೆ ಸುಮಾರು ಆರು ವರ್ಷ ವಯಸ್ಸಾಗಿದ್ದಾಗ, ಆಕೆಯ ತಂದೆ ಅನಾರೋಗ್ಯದಿಂದ ನಿಧನರಾದರು ಮತ್ತು ಅವರ ತಾಯಿ ಎಂಟು ತಿಂಗಳ ನಂತರ ನಿಧನರಾದರು. ನಂತರ ರೇವತಿ ಮತ್ತು ಆಕೆಯ ತಂದೆ ರೇಖಾ ಅಜ್ಜಿಯ ಜೊತೆಗೆ ಸಕ್ಕಿಮಂಗಲಂನಲ್ಲಿ ವಾಸವಾಗಿದ್ದಾರೆ.

    ರೇವತಿ ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಬಗ್ಗೆ ಆಸಕ್ತಿ ವಹಿಸಿದಳು ಮತ್ತು ತನ್ನ ಹಾಸ್ಟೆಲ್ ವಾರ್ಡನ್‍ಗಳ ಪ್ರೇರಣೆಯಿಂದ ರೇಸ್ ಕೋರ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದಳು. 2015 ರಲ್ಲಿ ಪಿಯುಸಿಯಲ್ಲಿದ್ದಾಗ ರೇವತಿ ಪ್ರತಿಭೆಯನ್ನು ಗುರುತಿಸಿದೆ. ನಾನು ಒಬ್ಬ ಕ್ರೀಡಾಪಟುವನ್ನು ದೇಶವನ್ನು ಪ್ರತಿನಿಧಿಸಲು ಒಲಿಂಪಿಕ್ಸ್‌ಗೆ ಕಳುಹಿಸುವ ಗುರಿಯನ್ನು ಹೊಂದಿದ್ದೇನೆ ಎಂದು ರೇವತಿಯ ಕೋಚ್ ಕೆ ಕಣ್ಣನ್ ಅವರು ಹೇಳಿದ್ದಾರೆ.

    ರೇವತಿ ಅವರನ್ನು ದೂರವಾಣಿ ಮೂಲಕ ಅಭಿನಂದಿಸಿದ ವಾಣಿಜ್ಯ ತೆರಿಗೆ ಮತ್ತು ಮಧುರೈ ಪೂರ್ವ ಶಾಸಕ ಪಿ ಮೂರ್ತಿ ಅವರು ಆಕೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಹೇಳಿದರು. ಹಣಕಾಸು ಸಚಿವ ಮತ್ತು ಮಧುರೈ ಕೇಂದ್ರ ಶಾಸಕ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಮತ್ತು ಮಧುರೈ ಸಂಸದ ಎಸ್.ವೆಂಕಟೇಶನ್ ಟ್ವೀಟ್ ಮಾಡಿ ಕ್ರೀಡಾಪಟುವಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ:  ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

    ಈ ನಡುವೆ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಅಥ್ಲಿಟ್ ಹಿಮಾದಾಸ್ ಒಲಿಂಪಿಕ್ಸ್‌ ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 100 ಮೀಟರ್ ಓಟದ ವೇಳೆ ಹಿಮಾ ದಾಸ್ ಮಂಡಿ ನೋವಿನಿಂದ ಬಳಲಿದ್ದರು. ಈಗ ಗಾಯದ ಸಮಸ್ಯೆಯಿಂದಲೇ ಅವರು ಒಲಿಂಪಿಕ್ಸ್ ಕ್ರೀಡಾಕೂಡದಿಂದ ಹೊರಗೆ ಉಳಿದಿದ್ದಾರೆ.

  • ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಅದು ಅಂತ ಯೋಚಿಸ್ತಿದ್ದೀರಾ? ಹೌದು ನಟ ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗಲಿದ್ದಾರೆ.

    ಇಂದು ನಿಖಿಲ್ ಮನದರಸಿ ರೇವತಿಯವರ ಹುಟ್ಟುಹಬ್ಬವಿದ್ದು, ಪ್ರೀತಿಯ ಪತ್ನಿಗೆ ನಿಖಿಲ್ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಇದೀಗ ಮಾಜಿ ಸಿಎಂ ಕುಮಾರ ಸ್ವಾಮಿಯವರ ಸೊಸೆ ರೇವತಿಯವರು 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ. ಇದನ್ನೂ ಓದಿ: ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ