Tag: Revanth Reddy

  • ಅಲ್ಲು ಅರ್ಜುನ್‌ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ: ಎಸಿಪಿ ವಾರ್ನಿಂಗ್‌

    ಅಲ್ಲು ಅರ್ಜುನ್‌ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ: ಎಸಿಪಿ ವಾರ್ನಿಂಗ್‌

    ಹೈದರಾಬಾದ್: ತೆಲಂಗಾಣ (Telangana) ಸಿಎಂ ರೇವಂತ್‌ ರೆಡ್ಡಿಯ (Revanth Reddy) ಬಳಿಕ ಈಗ ಎಸಿಪಿ ಸಬ್ಬತಿ ವಿಷ್ಣು (ACP Vishnu) ಅವರು ಪುಷ್ಪ (Pushpa) ಸಿನಿಮಾದ ನಟ ಅಲ್ಲು ಅರ್ಜುನ್‌ (Allu Arjun) ವಿರುದ್ಧ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

    ಪುಷ್ಪ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಭದ್ರತಾ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಲ್ಲು ಅರ್ಜುನ್‌ ದೂರಿದ್ದರು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಸಿಪಿ, ಥಿಯೇಟರ್‌ಗೆ ಹೋಗಲು ಅನುಮತಿ ಇತ್ತು ಅಂತ ಸುಳ್ಳು ಹೇಳುತ್ತಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ಸಂವಿಧಾನಿಕ ಜ್ಞಾನದ ಕೊರತೆಯಿದೆ. ದುಡ್ಡಿನ ಮದದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೋರ್ಟ್ ಅಲ್ಲು ಅರ್ಜುನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿಲ್ಲ. ಆದರೆ ಈಗ ಮಧ್ಯಂತರ ಜಾಮೀನು ಮಾತ್ರ ನೀಡಿದೆ. ಮಧ್ಯಂತರ ಜಾಮೀನು ನಿಮ್ಮನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದರು.

    ಪುಷ್ಪ ಸಿನಿಮಾದ ಕಥಾವಸ್ತುವನ್ನೇ ಟೀಕಿಸಿದ ಅವರು ವಿಷಕಾರಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಬದಲು ಸಮಾಜಕ್ಕೆ ಪ್ರಯೋಜನಕಾರಿ ಸಂದೇಶ ನೀಡುವ ಸಿನಿಮಾಗನ್ನು ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಪುಷ್ಪಾದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಗೌರವವಾಗಿ ತೋರಿಸಿದ್ದನ್ನು ಖಂಡಿಸಿದ ಅವರು, ಪೊಲೀಸರನ್ನು ಅವಮಾನಿಸಬೇಡಿ ಅಥವಾ ಅವರಿಗೆ ಬೆದರಿಕೆ ಹಾಕಬೇಡಿ. ನಿಜ ಜೀವನದಲ್ಲಿ ಅದೇ ಅಗೌರವವನ್ನು ಪುನರಾವರ್ತಿಸಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು.

     

  • ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್‌ ಬೇಸರ

    ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್‌ ಬೇಸರ

    – ಕಾಲ್ತುಳಿತ ಪ್ರಕರಣ ಆಕಸ್ಮಿಕ ಘಟನೆ; ಬಾಲಕ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ
    – ಮೃತರ ಕುಟುಂಬಸ್ಥರಿಗೆ ಕ್ಷಮೆಯಾಚಿಸುತ್ತೇನೆ

    ಹೈದರಾಬಾದ್: ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ನಟ ಅಲ್ಲು ಅರ್ಜುನ್‌ ಬೇಸರ ವ್ಯಕ್ತಪಡಿಸಿದ್ದಾರೆ.

    ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ರೇವಂತ್‌ ರೆಡ್ಡಿ ಗಂಭೀರ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ನಟ, ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ನಾಯಕರನ್ನು ದೂಷಿಸಲ್ಲ. ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆಯಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್‌ ಮಾಡಬೇಡಿ. ಸಂಧ್ಯಾ ಥಿಯೇಟರ್‌ ಬಳಿ ನಡೆದ ಘಟನೆಗೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದು ಅತ್ಯಂತ ದುರದೃಷ್ಟಕರ ಘಟನೆ. ಆಕಸ್ಮಿಕವಾಗಿ ಘಟನೆ ಜರುಗಿದೆ. ಕುಟುಂಬಕ್ಕೆ ನನ್ನ ಸಂತಾಪ. ನಾನು ಮಗುವಿನ ಸ್ಥಿತಿಯ ಬಗ್ಗೆ ಪ್ರತಿ ಗಂಟೆಗೂ ಅಪ್‌ಡೇಟ್‌ ಪಡೆಯುತ್ತಿದ್ದೇನೆ. ಬಾಲಕ ಬೇಗ ಚೇತರಿಸಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ. ಪ್ರಕರಣ ಸಂಬಂಧ ಸಾಕಷ್ಟು ತಪ್ಪು ಮಾಹಿತಿ, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

  • ಅಲ್ಲು ಅರ್ಜುನ್‌ ವಿರುದ್ಧ ಮತ್ತೆ ಗುಡುಗಿದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

    ಅಲ್ಲು ಅರ್ಜುನ್‌ ವಿರುದ್ಧ ಮತ್ತೆ ಗುಡುಗಿದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

    ಹೈದರಾಬಾದ್: ಪುಷ್ಪ-2 (Pushpa 2) ಸಿನಿಮಾ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವನ್ನಪ್ಪಲು ನಟ ಅಲ್ಲು ಅರ್ಜುನ್‌ (Allu Arjun) ಕಾರಣ ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ (Revanth Reddy) ಆರೋಪ ಮಾಡಿದ್ದಾರೆ.

    ಪೊಲೀಸರು ಅನುಮತಿ ನಿರಾಕರಿಸಿದ್ದರೂ ತೆಲುಗು ನಟ ಅಲ್ಲು ಅರ್ಜುನ್ ಡಿ.4 ರಂದು ತಮ್ಮ ಚಿತ್ರ ಪುಷ್ಪ-2 ಪ್ರದರ್ಶನಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರವೂ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಲವಂತವಾಗಿ ಹೊರಗೆ ಕಳುಹಿಸುವವರೆಗೂ ಚಿತ್ರಮಂದಿರದಿಂದ ಹೊರಬರಲಿಲ್ಲ ಎಂದು ರೆಡ್ಡಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತ ಪ್ರಕರಣ: 9 ವರ್ಷದ ಬಾಲಕನ ಬ್ರೈನ್ ಡೆಡ್

    ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರ ರೆಡ್ಡಿ ಅವರು ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಉಲ್ಲೇಖಿಸಿದ ರೆಡ್ಡಿ, ಅಲ್ಲು ಅರ್ಜುನ್ ದೊಡ್ಡ ಜನಸ್ತೋಮವಿದ್ದರೂ ರೋಡ್‌ಶೋ ನಡೆಸಿ ಜನರತ್ತ ಕೈ ಬೀಸಿದ್ದು ಗೊಂದಲಕ್ಕೆ ಕಾರಣವಾಯಿತು ಎಂದು ಟೀಕಿಸಿದ್ದಾರೆ.

    ನಟ ಮತ್ತು ಇತರರ ಭೇಟಿಗೆ ಭದ್ರತೆ ಕೋರಿ ಥಿಯೇಟರ್ ಆಡಳಿತವು ಡಿ.2 ರಂದು ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಆದರೆ, ಜನಸಂದಣಿಯನ್ನು ನಿರ್ವಹಿಸುವ ಆತಂಕದಿಂದಾಗಿ ಪೊಲೀಸರು ವಿನಂತಿಯನ್ನು ತಿರಸ್ಕರಿಸಿದ್ದರು ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ಅಲ್ಲು ಅರ್ಜುನ್ ಬಂಧನದ ನಂತರ ಅವರ ನಿವಾಸಕ್ಕೆ ಭೇಟಿ ನೀಡಿದ ಚಿತ್ರರಂಗದ ಗಣ್ಯರ ವಿರುದ್ಧವೂ ಸಿಎಂ ಕಿಡಿಕಾರಿದ್ದಾರೆ. ಆದರೆ, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ವಿಚಾರದಲ್ಲಿ ಯಾರೂ ಸಹ ನಟನಿಗೆ ತೋರಿದ ಅನುಕಂಪ ತೋರಲಿಲ್ಲ ಎಂದು ಕಿಡಿಕಾರಿದ್ದಾರೆ.

  • ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ

    ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ

    – ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ
    – ನಾನು ಯಾರ ಅಭಿಮಾನಿಯೂ ಅಲ್ಲ, ನನಗೆ ನಾನೇ ಸ್ಟಾರ್

    ಅಮರಾವತಿ: ಪುಷ್ಪ 2 (Pushpa 2) ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಬಂಧನ ವಿಚಾರದಲ್ಲಿ ಪೊಲೀಸರ ನಡೆಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಸಮರ್ಥಿಸಿಕೊಂಡಿದ್ದಾರೆ.

    ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೊರ ಬಂದಿಲ್ಲ. ಅವರು ತಮ್ಮ ಕಾರಿನ ಸನ್‌ರೂಫ್‌ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಚಲನಚಿತ್ರದ ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದರಿಂದ ಪರಿಸ್ಥಿತಿ ಹತೋಟಿ ತಪ್ಪಿತು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾನು ಕಾನೂನು ಪಾಲಿಸುವ ನಾಗರಿಕ.. ತನಿಖೆಗೆ ಸಹಕರಿಸುತ್ತೇನೆ: ಜೈಲಿಂದ ರಿಲೀಸ್‌ ಆದ ಅಲ್ಲು ಅರ್ಜುನ್‌ ರಿಯಾಕ್ಷನ್‌

    ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ. ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್‌ ಜೈಲಿಂದ ರಿಲೀಸ್‌ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್‌

    ನಿಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಿಎಂ, ನಾನೇ ಸ್ಟಾರ್. ನಾನು ಯಾರ ಅಭಿಮಾನಿಯೂ ಅಲ್ಲ ಎಂದು ಹೇಳಿದ್ದಾರೆ.

  • ರೇವಂತ್ ರೆಡ್ಡಿ ಹೆಸರು ಹೇಳದ್ದಕ್ಕೆ ಬಂಧನ – ಸಿಎಂ ವಿರುದ್ಧ ಸಿಡಿದ ಅಲ್ಲು ಅಭಿಮಾನಿಗಳು

    ರೇವಂತ್ ರೆಡ್ಡಿ ಹೆಸರು ಹೇಳದ್ದಕ್ಕೆ ಬಂಧನ – ಸಿಎಂ ವಿರುದ್ಧ ಸಿಡಿದ ಅಲ್ಲು ಅಭಿಮಾನಿಗಳು

    ಸಂಧ್ಯಾ ಥಿಯೇಟರ್ ದುರಂತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ಗೆ (Allu Arjun) 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಈ ಕುರಿತು ಪರ ವಿರೋಧದ ಚರ್ಚೆ ಶುರುವಾಗಿದೆ. ಅಲ್ಲು ಅಭಿಮಾನಿಗಳು ಬಂಧನಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿರನ್ನು (CM Revanth Reddy) ದೂರಿದ್ದಾರೆ. ಇದರಲ್ಲಿ ರಾಜಕೀಯ ಕೈವಾಡವಿದೆ ಎಂಬ ಗುಮಾನಿ ಕೂಡ ಹಬ್ಬಿದೆ.

    ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಈ ಹಿಂದೆ ‘ಪುಷ್ಪ 2’ (Pushpa 2) ಸಕ್ಸಸ್ ಈವೆಂಟ್‌ನಲ್ಲಿ ನಟ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ:1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್‌ ಪಡೆದಿದ್ದ ಅಲ್ಲು ಅರ್ಜುನ್‌

    ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಸಿನಿಮಾಗೆ ಸಂಬಂಧಿಸಿದ ಅನೇಕರಿಗೆ ಥ್ಯಾಂಕ್ಯೂ ಹೇಳಿದರು. ಈ ವೇಳೆ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹೆಸರನ್ನು ಹೇಳುವುದನ್ನು ಮರೆತಿದ್ದರು. ಸಿಎಂ ಹೆಸರನ್ನು ಹೇಳಲು ಅರ್ಜುನ್ ತಡವರಿಸಿದ್ದ ವಿಡಿಯೋ ಸದ್ದು ಮಾಡುತ್ತಿದೆ. ಹಾಗಾಗಿ ಅಭಿಮಾನಿಗಳು ನಟನನ್ನು ಬಂಧಿಸಿರುವುದಕ್ಕೆ ರೇವಂತ್ ರೆಡ್ಡಿ ಕೈವಾಡವಿದೆ ಎಂದು ದೂರುತ್ತಿದ್ದಾರೆ ಅಲ್ಲು ಫ್ಯಾನ್ಸ್.

    ಸಿಎಂ ಹೆಸರು ಹೇಳಲು ತಡವರಿಸಿದ ಅಲ್ಲು ನಂತರ ಒಂದು ಗ್ಲಾಸ್ ನೀರು ಕುಡಿದು ರೇವಂತ್ ರೆಡ್ಡಿ ಹೆಸರನ್ನು ಹೇಳಿ ಧನ್ಯವಾದ ಅರ್ಪಿಸಿದ್ದರು. ಈ ಕಾರ್ಯಕ್ರಮ ಕೆಲ ದಿನಗಳ ಮೊದಲೇ ನಡೆದಿದ್ದರೂ ಅಲ್ಲು ಅರ್ಜುನ್ ಬಂಧನದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇನ್ನೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರ ಬಂಧನದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನು ಪ್ರಕ್ರಿಯೆ ನಡೆಸಲಾಗುವುದು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

  • ಅದಾನಿಯ 100 ಕೋಟಿ ದೇಣಿಗೆ ಬೇಡ ಎಂದ ತೆಲಂಗಾಣ ಸಿಎಂ

    ಅದಾನಿಯ 100 ಕೋಟಿ ದೇಣಿಗೆ ಬೇಡ ಎಂದ ತೆಲಂಗಾಣ ಸಿಎಂ

    ಹೈದರಾಬಾದ್: ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಅದಾನಿ ಫೌಂಡೇಶನ್ ವಾಗ್ದಾನ ಮಾಡಿದ್ದ 100 ಕೋಟಿ ರೂ. ದೇಣಿಗೆಯನ್ನು ತಮ್ಮ ಸರ್ಕಾರ ನಿರಾಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ತಿಳಿಸಿದ್ದಾರೆ.

    ಸೌರಶಕ್ತಿ ಪೂರೈಕೆ ಯೋಜನೆ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗೌತಮ್ ಅದಾನಿ ವಿರುದ್ಧ ದೋಷಾರೋಪಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಕೈಗಾರಿಕಾ ಉತ್ತೇಜನ, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಜಯೇಶ್ ರಂಜನ್ ಅವರು ಡಾ.ಪ್ರೀತಿ ಅದಾನಿಗೆ ಬರೆದ ಪತ್ರದಲ್ಲಿ, ‘ನಿಮ್ಮ ಪ್ರತಿಷ್ಠಾನದ ಪರವಾಗಿ ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ 100 ಕೋಟಿ ರೂ. ನೀಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ತಿಳಿಸುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಉದ್ಭವಿಸಿರುವ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಹಣ ವರ್ಗಾವಣೆ ಮಾಡದಂತೆ ಮಾನ್ಯ ಮುಖ್ಯಮಂತ್ರಿಗಳು ನನಗೆ ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.

    US ನಲ್ಲಿ ಅದಾನಿ ವಿರುದ್ಧ ದೋಷಾರೋಪಣೆ ಮಾಡಿದ ನಂತರ, ತೆಲಂಗಾಣ ಸರ್ಕಾರ ಮತ್ತು ಮುಖ್ಯಮಂತ್ರಿ ರೆಡ್ಡಿ ಅವರು ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿಯಿಂದ ಟೀಕೆಗೆ ಗುರಿಯಾದರು.

    ತೆಲಂಗಾಣದ ಗೌರವ ಮತ್ತು ಘನತೆಯನ್ನು ರಕ್ಷಿಸಲು, ನಾನು ಮತ್ತು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಒಳಗೊಂಡ ಯಾವುದೇ ಅನಗತ್ಯ ವಿವಾದಗಳನ್ನು ತಪ್ಪಿಸಲು, ನಾವು ಅದಾನಿ ಅವರ ದೇಣಿಗೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ. ನಾವು ಯಾರಿಂದಲೂ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

  • ತೆಲಂಗಾಣ | ಜಾತಿಗಣತಿ ಆರಂಭಿಸಿದ ಕಾಂಗ್ರೆಸ್ ಸರ್ಕಾರ – 1.17 ಕೋಟಿ ಕುಟುಂಬಗಳ ಸಮೀಕ್ಷೆ

    ತೆಲಂಗಾಣ | ಜಾತಿಗಣತಿ ಆರಂಭಿಸಿದ ಕಾಂಗ್ರೆಸ್ ಸರ್ಕಾರ – 1.17 ಕೋಟಿ ಕುಟುಂಬಗಳ ಸಮೀಕ್ಷೆ

    ಹೈದರಾಬಾದ್‌: ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಬಹುನಿರೀಕ್ಷಿತ ಜಾತಿ ಆಧಾರಿತ ಗಣತಿ (Caste Survey) ಕಾರ್ಯ ಆರಂಭಿಸಿದೆ.

    ಇದೊಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಕ್ಷಣ ಅಂತ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಬಣ್ಣಿಸಿದ್ದಾರೆ. ಇದನ್ನೂ ಓದಿ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ

    ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಮುಂದಿನ ಕೆಲವು ವಾರಗಳಲ್ಲಿ 80,000 ಗಣತಿದಾರರು ಮನೆ ಮನೆಗಳಿಗೆ ತೆರಳಿ ಜಾತಿ ಗಣತಿ ಕಾರ್ಯ ಮಾಡಲಿದ್ದಾರೆ. 33 ಜಿಲ್ಲೆಗಳಲ್ಲಿ 1.17 ಕೋಟಿ ಕುಟುಂಬಗಳನ್ನು ಗಣತಿ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ.

    1931 ರಿಂದ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಜಾತಿ ಆಧಾರಿತ ಗಣತಿ ಕಾರ್ಯ ನಡೀತಿದೆ. ರಾಹುಲ್ ಗಾಂಧಿ ಹೇಳಿದಂತೆ ಜಾತಿಗಣತಿ ನಡೀತಿದ್ದು, ಇದು ದೇಶದ ಜಾತಿಗಣತಿಯ ನೀಲನಕ್ಷೆಯಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಜಾತಿಗಣತಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗಿರುವ ಶೇ.50 ರಷ್ಟು ಮೀಸಲಾತಿಯ ಸುಪ್ರೀಂ ಕೋರ್ಟ್ ನಿರ್ಬಂಧವನ್ನು ರದ್ದುಗೊಳಿಸುವ ಕಾಂಗ್ರೆಸ್‌ಗೆ ದೂರ ದೃಷ್ಟಿಗೆ ಕೇಂದ್ರವಾಗಿದೆ ಅಂತಲೂ ಜೈರಾಮ್ ರಮೇಶ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

  • ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್‌

    ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್‌

    ಹೈದರಾಬಾದ್‌: ಟೀಂ ಇಂಡಿಯಾದ (Team India) ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

    ತೆಲಂಗಾಣ (Telangana) ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ (Revanth Reddy) ಅವರು ಆಗಸ್ಟ್‌ನಲ್ಲಿ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ ಮತ್ತು ಬಾಕ್ಸರ್ ನಿಖಾತ್ ಝರೀನ್ ಅವರು ಕ್ರೀಡೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆ ನೀಡುವುದಾಗಿ ಘೋಷಿಸಿದ್ದರು.

    ಈ ಘೋಷಣೆಯಂತೆ ಇಂದು ಸಿರಾಜ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮೊಹಮ್ಮದ್ ಸಿರಾಜ್‌ಗೆ ಸಂಸದ ಎಂ ಅನಿಲ್ ಕುಮಾರ್ ಯಾದವ್ ಮತ್ತು ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಹಾಜರಿದ್ದರು.  ಇದನ್ನೂ ಓದಿ: ಹೀನಾಯ ಸೋಲಿನೊಂದಿಗೆ 147 ವರ್ಷಗಳ ಟೆಸ್ಟ್​​​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಪಾಕ್‌

    ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಘೋಷಣೆಯ ನಂತರ ತೆಲಂಗಾಣ ಸರ್ಕಾರವು ಸಾರ್ವಜನಿಕ ಸೇವೆಗಳಿಗೆ ನೇಮಕಾತಿಗಳ ನಿಯಂತ್ರಣ ಮತ್ತು ಸಿಬ್ಬಂದಿ -1994 ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು.

    ಸಿರಾಜ್‌ ಅವರು ಟಿ20 ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಈ ಗೌರವ ನೀಡಿದೆ.

    ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣದ ಡಿಎಸ್‌ಪಿಯಾಗಿ ನೇಮಿಸಲಾಗಿದೆ. ಅವರ ಕ್ರಿಕೆಟ್‌ ಸಾಧನೆಗೆ ರಾಜ್ಯದಿಂದ ಈ ಗೌರವ ಸಲ್ಲಿಸಲಾಗಿದೆ. ಸಿರಾಜ್‌ ಅವರು ಕ್ರಿಕೆಟ್‌ ವೃತ್ತಿ ಜೀವನವನ್ನು ಮುಂದುವರಿಸುತ್ತಾರೆ ಮತ್ತು ಹೊಸ ಜವಾಬ್ದಾರಿ ಹಲವರಿಗೆ ಪ್ರೇರಣೆಯಾಗಲಿದೆ ಎಂದು ತೆಲಂಗಾಣ ಪೊಲೀಸ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ.

     

  • ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತೆಲಂಗಾಣ (Telangana) ಸಿಎಂ ರೇವಂತ್ ರೆಡ್ಡಿ (Revanth Reddy) ಕ್ಷಮೆಯಾಚಿಸಿದ್ದಾರೆ.

    ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾನು ದೃಢ ನಂಬಿಕೆಯುಳ್ಳವನು. ವರದಿಗಳಲ್ಲಿ ಬಿಂಬಿಸಲಾದ ಹೇಳಿಕೆಗಳಿಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಭಾರತ ಸಂವಿಧಾನ ಮತ್ತು ಅದರ ಸ್ವಾತಂತ್ರ‍್ಯದ ನನಗೆ ಗೌರವವಿದೆ ಮತ್ತು ಭವಿಷ್ಯದಲ್ಲಿಯೂ ಗೌರವವಿರುತ್ತದೆ ಆದ್ದರಿಂದ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ರೇವಂತ್ ರೆಡ್ಡಿ ಹೇಳಿದ್ದೇನು?
    ಮಾಧ್ಯಮಗಳ ಜೊತೆ ಮಾತನಾಡಿದ್ದ ರೇವಂತ್ ರೆಡ್ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ 15 ತಿಂಗಳ ಬಳಿಕ ಜಾಮೀನು ಸಿಕ್ಕಿತ್ತು. ಆಗ ಮುಖ್ಯಮಂತ್ರಿಗಳು ಇದನ್ನು ರಾಜಕೀಯ ನಾಟಕವೆಂದು ಕರೆದಿದ್ದರು. ಈಗ ಕವಿತಾ ಅವರಿಗೆ ಐದೇ ತಿಂಗಳಲ್ಲಿ ಜಾಮೀನು ಸಿಕ್ಕಿರುವ ಕುರಿತು ನನಗೆ ಅನುಮಾನವಿದೆ. ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ (K. Chandrashekar Rao) ನಡುವಿನ ಒಪ್ಪಂದದಿಂದ ಜಾಮೀನು ಸಿಕ್ಕಿರಬಹುದು ಎಂದು ಹೇಳಿಕೆ ನೀಡುವ ಮೂಲಕ ಸುಪ್ರೀಂ ಜಾಮೀನಿನ ಬಗ್ಗೆಯೇ ಅನಮಾನ ವ್ಯಕ್ತಪಡಿಸಿದ್ದರು.

    ಈ ಹೇಳಿಕೆಯ ಬಗ್ಗೆ ಗುರುವಾರ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿ, ಸಂವಿಧಾನಿಕ ಹುದ್ದೆಯಲ್ಲಿರುವ ನೀವು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯೇ? ನಿಮ್ಮ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ. ರಾಜಕೀಯ ಕಾರಣಗಳಿಗಾಗಿ ನಾವು ಏಕೆ ಆದೇಶವನ್ನು ನೀಡಬೇಕು? ನಿಮ್ಮ ರಾಜಕೀಯ ದ್ವೇಷಗಳ ನಡುವೆ ಏಕೆ ನ್ಯಾಯಾಲಯವನ್ನು ಎಳೆದು ತರುತ್ತೀರಿ ಎಂದು ಪ್ರಶ್ನಿಸಿ ರೇವಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

  • ಅಮಿತ್‌ ಶಾ ಫೇಕ್‌ ವಿಡಿಯೋ ಕೇಸ್‌ – ರೇವಂತ್‌ ರೆಡ್ಡಿಗೆ ಸಮನ್ಸ್‌, ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಅಮಿತ್‌ ಶಾ ಫೇಕ್‌ ವಿಡಿಯೋ ಕೇಸ್‌ – ರೇವಂತ್‌ ರೆಡ್ಡಿಗೆ ಸಮನ್ಸ್‌, ಓರ್ವ ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ನವದೆಹಲಿ: ಗೃಹ ಸಚಿವ ಅಮಿತ್‌ ಶಾ (Amit Shah ) ಅವರ ಮೀಸಲಾತಿ (Reservation) ಹೇಳಿಕೆಯನ್ನು ತಿರುಚಿ ವಿಡಿಯೋ ಅಪ್ಲೋಡ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ (Telangana CM Revanth Reddy) ಅವರಿಗೆ ದೆಹಲಿ ಪೊಲೀಸರು (Delhi Police) ಸಮನ್ಸ್‌ ಜಾರಿ ಮಾಡಿದ್ದಾರೆ.

    ರೇವಂತ್‌ ರೆಡ್ಡಿ ಸೇರಿದಂತೆ ತೆಲಂಗಾಣ ಮೂಲದ ಇತರ ನಾಲ್ವರಿಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್‌ ರಹಸ್ಯ ರಿವೀಲ್‌ ಮಾಡಿದ ಮೋದಿ

     

    ನೋಟಿಸ್‌ಗೆ ಪ್ರತಿಕ್ರಿಯಿಸಿದ ರೇವಂತ್‌ ರೆಡ್ಡಿ, ಬಿಜೆಪಿ ಸಿಬಿಐ, ಜಾರಿ ನಿರ್ದೇಶನಾಲಯವನ್ನು ಬಳಸುತ್ತಿತ್ತು. ಈಗ ದೆಹಲಿ ಪೊಲೀಸರ ಮೂಲಕ ವಿರೋಧಿ ಪಕ್ಷಗಳನ್ನು ನಿಯಂತ್ರಿಸಲು ಮುಂದಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಟೀಕಿಸಿದರು.

    ದೂರುಗಳ ನಂತರ ಪೊಲೀಸರು ಐಪಿಸಿ ಸೆಕ್ಷನ್ 153, 153 ಎ, 465, 469, 171 ಜಿ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೀಡಿಯೊವನ್ನು ಅಪ್‌ಲೋಡ್ ಮಾಡಿದ ಮತ್ತು ಹಂಚಿಕೊಂಡ ಖಾತೆಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಎಕ್ಸ್ ಮತ್ತು ಫೇಸ್‌ಬುಕ್‌ಗೆ ನೋಟಿಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ ಅಮಾನತು

    ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌:
    ಅಮಿತ್‌ ಶಾ ಅವರ ಫೇಕ್‌ ವಿಡಿಯೋವನ್ನು ಅಪ್ಲೋಡ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಓರ್ವ ಕಾಂಗ್ರೆಸ್‌ ಕಾರ್ಯಕರ್ತನನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಸ್ಸಾಂ (Assam) ಸಿಎಂ ಹಿಮಾಂತ ಬಿಸ್ವಾ ಶರ್ಮಾ (Himanta Biswa Sarma ) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.