Tag: revanna

  • ಪ್ರಜ್ವಲ್ ರೇವಣ್ಣ ಚುನಾವಣೆಗೆ ನಿಲ್ತಾರಾ: ಎಚ್‍ಡಿ ರೇವಣ್ಣ ಹೇಳಿದ್ದು ಹೀಗೆ

    ಪ್ರಜ್ವಲ್ ರೇವಣ್ಣ ಚುನಾವಣೆಗೆ ನಿಲ್ತಾರಾ: ಎಚ್‍ಡಿ ರೇವಣ್ಣ ಹೇಳಿದ್ದು ಹೀಗೆ

    ಹಾಸನ: ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಪ್ರಸ್ತುತ ನಮ್ಮ ಲೋಕಸಭೆಯ ಅಭ್ಯರ್ಥಿ ದೇವೇಗೌಡ ಅವರೇ ಇದ್ದಾರೆ. ಅವರು ಇರುವವರೆಗೂ ಈ ಪ್ರಶ್ನೆ ಉದ್ಭವವಾಗೊಲ್ಲ ಅಂತ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.

    ಮಗ ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ನಮ್ಮ ಮುಂದೆ ವಿಧಾನಸಭೆ ಚುನಾವಣೆಗಳಿದ್ದು, ಅದರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರು ಶ್ರಮಿಸಲಿ ಎಂದು ಹೇಳಿದರು.

    ಸದ್ಯಕ್ಕೆ ಪ್ರಜ್ವಲ್ ಸ್ಪರ್ಧೆ ಕುರಿತು ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿರಬಹುದು. ಆದ್ರೆ ಪಕ್ಷದ ಇತರೆ ನಾಯಕರು, ಕಾರ್ಯಕರ್ತರನ್ನೂ ಸಹ ಈ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಿದೆ ಎಂದರು.

    ಇನ್ನು ವಿಧಾನಸಭೆಗೆ ಪ್ರಜ್ವಲ್ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಈ ಹಿಂದೆಯೇ ನಾನು ಹೇಳಿದಂತೆ ನಾನು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರ್‍ಸ್ವಾಮಿ ಮಾತ್ರ ಸ್ಪರ್ಧಿಸಲಿದ್ದೇವೆ ಎಂದು ಹೇಳಿದ್ರು.

  • ನನ್ನ ವಿರುದ್ಧ ಹೇಳಿಕೆ ಕೊಟ್ರೆ ಪರಿಣಾಮ ನೆಟ್ಟಗಿರಲ್ಲ- ರೇವಣ್ಣಗೆ ಜಮೀರ್ ಖಡಕ್ ಎಚ್ಚರಿಕೆ

    ನನ್ನ ವಿರುದ್ಧ ಹೇಳಿಕೆ ಕೊಟ್ರೆ ಪರಿಣಾಮ ನೆಟ್ಟಗಿರಲ್ಲ- ರೇವಣ್ಣಗೆ ಜಮೀರ್ ಖಡಕ್ ಎಚ್ಚರಿಕೆ

    ತುಮಕೂರು: ದೇವೇಗೌಡರ ಹೊರತಾಗಿ ಬೇರೆ ಯಾರಾದ್ರೂ ನನ್ನ ವಿರುದ್ಧ ಹೇಳಿಕೆ ಕೊಟ್ಟರೆ ಅದರ ಪರಿಣಾಮ ನೆಟ್ಟಗಿರಲ್ಲ. ಅಂಥವರ ಬಂಡವಾಳ ಬಿಚ್ಚಿಡುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಎಚ್.ಡಿ.ರೇವಣ್ಣರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್, ನಾನು ಚಾಮರಾಜಪೇಟೆ ಕಾಂಗ್ರೆಸ್ ಮುಖಂಡ ದೇವರಾಜುಗೆ ಟೋಪಿ ಹಾಕಿರೋದಾಗಿ ಎಚ್‍ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ರೇವಣ್ಣ ನನ್ನ ವಿರುದ್ಧ ಹೇಳಿಕೆ ನೀಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಲಿ. ಜಮೀರ್ ಅಹಮದ್ ಖಾನ್ ಎಂದೂ ಭಯಪಡುವ ವ್ಯಕ್ತಿಯಲ್ಲ ಎಂದು ಗುಡುಗಿದ್ದಾರೆ.

    ನಾನು ಯಾರಿಗೂ ಟೋಪಿ ಹಾಕಿಲ್ಲ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ರೇವಣ್ಣ ಸ್ವತಃ ಕುಮಾರಸ್ವಾಮಿಯವರಿಗೆ ಹಾಗೂ ದೇವೇಗೌಡರಿಗೆ ಟೋಪಿ ಹಾಕಿದ್ದರು. ಕುಮಾರಸ್ವಾಮಿ ಹಾಗೇನಾದ್ರು ಮುಖ್ಯಮಂತ್ರಿ ಆದರೆ ದೇವೇಗೌಡರು ವಿಷ ಕುಡಿಯುತ್ತಾರೆ ಎಂದು ಕುಮಾರಸ್ವಾಮಿಯವರಿಗೆ ಭಯಹುಟ್ಟಿಸಿ ಸಿಎಂ ಆಗೋಕೆ ಅಡ್ಡಗಾಲು ಹಾಕಿದ್ದರು ಎಂದು ರೇವಣ್ಣ ವಿರುದ್ಧ ಕಟುಕಿದ್ದಾರೆ.

    ಮುಂದಿನ ಚುನಾವಣೆಯಲ್ಲಿ ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಬಹಿರಂಗ ಸವಾಲು ಹಾಕಿದ ಅವರು ಚಾಮರಾಜಪೇಟೆ ಜನರು ನನ್ನನ್ನು ಎಂದಿಗೂ ಕೈ ಬಿಡುವುದಿಲ್ಲ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಟರ್ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಜೆಡಿಎಸ್ ಒಂದು ಕೆರೆಯಿದ್ದ ಹಾಗೆ, ಈಗ ನಾನು ಸಮುದ್ರದಲ್ಲಿ ಈಜುತಿದ್ದೇನೆ. ಕೆಪಿಸಿಸಿ ಅಧ್ಯಕ್ಷರೇ ನನ್ನ ಕೈ ನನ್ನನ್ನು ಮುಸ್ಲಿಂ ಸಮುದಾಯದ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜೆಡಿಎಸ್‍ನಲ್ಲಿ ಯಾರನ್ನು ಬೆಳೆಯಲು ಅವಕಾಶ ಕೊಟ್ಟಿಲ್ಲ ಎಂದು ಜಮೀರ್ ಆರೋಪಿಸಿದರು.

  • ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

    ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

    ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡೋ ವಿಚಾರವಾಗಿ ಹೆಚ್‍ಡಿ ದೇವೇಗೌಡ ಹಾಗೂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ರೇವಣ್ಣ, ನಾವೇನು ನಾಮನಿರ್ದೇಶನ ಮಾಡಿ, ಹಿಂಬಾಗಿಲ ರಾಜಕಾರಣಕ್ಕೆ ಪ್ರವೇಶ ಬಯಸಿಲ್ಲ. ಪ್ರಜ್ವಲ್ ಜೆಡಿಎಸ್ ಕಾರ್ಯಕರ್ತ. ಕ್ಷೇತ್ರದಲ್ಲಿ ದುಡಿತಾ ಇದ್ದಾನೆ, ದುಡಿಯಲಿ. ಪ್ರಜ್ವಲ್‍ಗೆ ದೇವೇಗೌಡ, ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ. ಟಿಕೆಟ್ ಕೊಡ್ಬೇಕಾ, ಬೇಡ್ವಾ ಅಂತಾ ಕೋರ್ ಕಮಿಟಿ ತೀರ್ಮಾನ ಮಾಡುತ್ತೆ ಅಂತ ಹೇಳಿದ್ರು.

    ಇನ್ನು ಮಾಜಿ ಪ್ರಧಾನಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ದೇವೇಗೌಡ ಮಾತನಾಡಿ, ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ನಿಲ್ತಾರೆ ಅನ್ನೋದೆ ದೊಡ್ಡ ಚರ್ಚೆ ಆಗಿದೆ. ಅದನ್ನ ಮನೆಯ ಯಜಮಾನನಾಗಿ ತೀರ್ಮಾನ ಮಾಡೋನು ನಾನು. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಅಂದ್ರು.

    ರೇವಣ್ಣ ತಂದೆ ವಿರುದ್ಧ ಹೋಗಲ್ಲ. ಕುಮಾರಸ್ವಾಮಿ ನನ್ನ ಮಾತು ಮೀರಲ್ಲ. ರೇವಣ್ಣ ಕುಮಾರಸ್ವಾಮಿ ವಿರುದ್ಧ ಹೋಗ್ತಿದ್ದಾರೆ ಅನ್ನೋದು ಸುಳ್ಳು. ಕುಟುಂಬದ ಯಜಮಾನನಾಗಿ ಅಂತಿಮವಾಗಿ ತೀರ್ಮಾನ ಮಾಡುವುದು ನಾನೇ. ಕಾಂಗ್ರೆಸ್-ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಾಜ್ಯ ಅಭಿವೃದ್ಧಿಯಾಗಬೇಕಾದ್ರೆ ಜೆಡಿಎಸ್‍ಗೆ ಪೂರ್ಣ ಬಹುಮತ ನೀಡಬೇಕು ಅಂತ ಹೇಳಿದ್ರು.