ಹಾಸನ: ಹಳ್ಳಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್, ಹೆಂಡ್ತಿ, ಮಕ್ಕಳು ಸಾಕಲು ಆಗದೆ ರೇವಣ್ಣ ಅವರ ಬಳಿ ಬಂದು ದಮ್ಮಯ್ಯ ಅಂದು ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ್ದರು. ಆದರೆ ಅವರ ಮಗ ಇವತ್ತು ಶಾಸಕನಾಗಿ ಏಳನೇ ಕ್ಲಾಸ್ ಓದಿದವರು ಎಂದು ರೇವಣ್ಣನ (Revanna) ಬಗ್ಗೆ ಮಾತನಾಡ್ತಾನೆ ಎಂದು ಶಾಸಕ ಪ್ರೀತಂಗೌಡ (Preetham gowda) ವಿರುದ್ಧ ಭವಾನಿ ರೇವಣ್ಣ (Bhavani Revanna) ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಶಾಸಕರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕುತ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡ್ದೆ, ನನ್ನಿಂದಲೇ ಈ ಕೆಲಸ ಆಗಿದ್ದು ಎಂದು ಕೊಚ್ಚಿಕೊಳ್ಳುತ್ತಾರೆ. ಆ ಮಾತು ಅವರಿಗೆ ಎಷ್ಟು ಸರಿ ಅಂತ ಗೊತ್ತಿಲ್ಲ, ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ ಎಂದು ಪ್ರೀತಂಗೌಡ ವಿರುದ್ಧ ಕಿಡಿಕಾರಿದರು.
ಹಾಸನ ಜಿಲ್ಲೆ ಇಷ್ಟೊಂದು ಕೆಲಸ ಆಗಿದ್ದರೇ ರಸ್ತೆಯಲ್ಲಿ ಹೋಗುವ ಎಂತಹ ಅವಿದ್ಯಾವಂತನು ಕೂಡ ಇದು ರೇವಣ್ಣ ಅವರು ಮಾಡಿರುವ ಕೆಲಸ ಎಂದು ತೋರಿಸುತ್ತಾನೆ. ಆ ರೋಡ್‍ನಲ್ಲಿ ಓಡಾಡುವಂತಹ ಶಾಸಕರಿಗೆ ಈ ಬಿಲ್ಡಿಂಗ್ ಯಾರು ಕಟ್ಟಿಸಿದ್ದು ಅಂತ ಗೊತ್ತಾಗುವುದಿಲ್ಲವಾ ಎಂದು ಕುಟುಕಿದರು. ಇದನ್ನೂ ಓದಿ: ಕಾಂತಾರ ಎಫೆಕ್ಟ್ : ರಿಯಲ್ ಕಾಂತಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
7ನೇ ಕ್ಲಾಸ್ ಓದಿದವರು ಎಂದು ರೇವಣ್ಣ ಅವರನ್ನು ಖಂಡಿಸುತ್ತಾರೆ. ರೇವಣ್ಣ ಅವರ ವಿದ್ಯಾಭ್ಯಾಸನ ಜನರಿಗೆ ತೋರಿಸಿಕೊಂಡು ಕೆಲಸ ಮಾಡಬೇಕಾ? 8ನೇ ತರಗತಿ ಪಾಸ್ ಆಗಿರುವವರ ಹತ್ರನೇ ಅವರ ಅಪ್ಪ ಇಂಜಿನಿಯರ್ ಆಗಿದ್ದರೂ, ಬಂದು ದಮ್ಮಯ್ಯ ಅಂತ ಕೈಮುಗುದ್ರು ಬಿಬಿಎಂಪಿಗೆ ವರ್ಗಾವಣೆ ಮಾಡಿಸಿಕೊಂಡರು ಎಂದು ಹರಿಹಾಯ್ದರು.
ಇದೇ ವೇಳೆ ಪತಿ ರೇವಣ್ಣ ಅವರನ್ನು ಭವಾನಿ ಹಾಡಿ ಹೊಗಳಿದರು. ರೇವಣ್ಣ ಅವರು 365 ದಿನಗಳಲ್ಲಿ 50ದಿನ ಮೀಟಿಂಗ್‍ಗಾಗಿ ಬೆಂಗಳೂರಿನಲ್ಲಿ ಉಳಿತಾರೆ, ಮೀಟಿಂಗ್ ಇಲ್ಲ ಅಂದರೆ ಬೆಂಗಳೂರಿಗೆ ಹೋಗ್ತಾನೆ ಇರಲಿಲ್ಲ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಹೊಳೆನರಸೀಪುರ ತಾಲೂಕಿನ 24 ಹಾಸ್ಟೆಲ್‍ಗಳ ಉಸ್ತುವಾರಿ ನಾನೇ ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಗಡಿಜಿಲ್ಲೆಯಲ್ಲಿ ಮಧ್ಯರಾತ್ರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ
Live Tv
[brid partner=56869869 player=32851 video=960834 autoplay=true]
ಹಾಸನ: ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬಾರದು ಅಂತ ಹೇಳಲು ರೇವಣ್ಣ ಯಾರು? Who is he.!? ಹಾಸನ ವಿಧಾನಸಭಾ ಕ್ಷೇತ್ರಕ್ಕೂ ರೇವಣ್ಣನಿಗೂ ಏನು ಸಂಬಂಧ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲದಿನದಿಂದ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವಿನ ವಾಕ್ಸಮರ ಮುಂದುವರಿಸಿದ್ದು, ರೇವಣ್ಣ ಅವರ ವಿರುದ್ಧ ಪ್ರೀತಂ ಇಂದು ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದರು. ಎಲ್ಲವನ್ನು ಪರಿಶೀಲನೆ ಮಾಡಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಜೆಡಿಎಸ್ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯವನ್ನು ಬೆರೆಸುತ್ತಿದ್ದಾರೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ಕುಗ್ಗುವುದು ಇಲ್ಲ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು
ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ
ನಾನು ಇಂದೇ ಹೇಳುತ್ತೇನೆ ಬರೆದಿಟ್ಟುಕೊಳ್ಳಿ. ನನ್ನ ವಿರುದ್ಧ ರೇವಣ್ಣ ನಿಂತರೆ ನಾನು 50,000 ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. 50 ಸಾವಿರಕ್ಕಿಂತ ಒಂದು ಮತ ಕಡಿಮೆ ಬಂದರು ಅಂದೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರೀ ಎಲೆಕ್ಷನ್‍ಗೆ ಹೋಗುತ್ತೇನೆ ಎಂದು ಸವಾಲು ಹಾಕಿದರು.
ತಾಕತ್ತಿದ್ದರೆ ನೀವು ಘೋಷಣೆ ಮಾಡಿ, ಪ್ರೀತಮ್ ಗೌಡ ವಿರುದ್ಧ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದ ಪ್ರೀತಂ, ಹಾಸನದಲ್ಲಿ ಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇಲ್ಲ. ಆದ್ದರಿಂದ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದಾರೆ. ನಾನು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರೇವಣ್ಣ ಅವರು ಮಕ್ಕಳಂತೆ ಮಾತನಾಡುವುದನ್ನು ಬಿಟ್ಟು ಅವರ ಹುದ್ದೆಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಡಿಸಿ ಆಫೀಸಿನಲ್ಲಿ ಅಧಿಕಾರಿಗಳನ್ನು ಬಯ್ಯುವ ಇವರು ನಂತರ ಕ್ಷಮೆ ಕೇಳುತ್ತಾರೆ. ಇಂತಹ ವರ್ತನೆ ಅವರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣ 2023ಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಮೊದಲು ಅಸಲು ಎಲ್ಲಿದೆ ಅಂತ ಹುಡುಕಲು ಹೇಳಿ ಎಂದು ಟೀಕಿಸಿದ ಪ್ರೀತಂ, ಹಾಸನದಲ್ಲಿ ಚುನಾವಣೆಗೆ ನಿಂತು ಎರಡನೇ ಸ್ಥಾನ ಇರಲಿ, ಮೂರನೇ ಸ್ಥಾನಕ್ಕೆ ಹೋಗುತ್ತಾರೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಮೆಂಬರ್‌ಗಳು ಇವರಿಗಿಂತ ಚೆನ್ನಾಗಿ ನಡೆದುಕೊಳ್ಳುತ್ತಾರೆ. ಏಳನೇ 10ನೇ ತರಗತಿ ಓದಿರೋರು.. ಇದೇ ತರ ಆಡುವುದು. ವಿದ್ಯಾಭ್ಯಾಸ ಮಾಡುವುದರಲ್ಲಿ ಎಂತಹ ಕಷ್ಟ ಇದೆ ಅಂತ ಗೊತ್ತಿರುವುದಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಇಂತಹ ವರ್ತನೆ ಮಾಡುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರು ಹೇಳಿ ರಾಜಕಾರಣ ಮಾಡುವವರು, ಗಾಳಿಯಲ್ಲಿ ಗುಂಡು ಹೊಡೆಯುವವರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೂ ಒಂದು ಶಕ್ತಿ ಇದೆ ರಾಷ್ಟ್ರೀಯ ಪಕ್ಷದಿಂದ ಶಾಸಕನಾಗಿದ್ದೇನೆ ಎಂದರು.
ರೇವಣ್ಣ ನನಗೆ ಯಾವ ಲೆಕ್ಕ?
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕರ್ತರು ಎಲ್ಲಿದ್ದಾರೆ. ಅವರು ಬಹಳ ಹತಾಶರಾಗಿದ್ದಾರೆ. ಇರುವವರನ್ನು ಕಾಪಾಡಿಕೊಂಡು ಹೋಗುವುದು ನಿಮಗೆ ಒಳ್ಳೆಯದು ಎಂದು ಸಲಹೆ ಕೊಟ್ಟರು. ಮುಂದಿನ ದಿನಗಳಲ್ಲಿ ಅಸಲು ಬಡ್ಡಿ ಇಲ್ಲದಂತೆ ಖಾಲಿ ಮಾಡಬೇಕಾಗುತ್ತದೆ. ಈ ಹೇಳಿಕೆ ಹಿಟ್ಲರ್, ನಡಾಫ್ ಎಲ್ಲ ಕಳೆದು ಹೋಗಿದ್ದಾರೆ. ನನಗೆ ರೇವಣ್ಣ ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರೀತಮ್ ಗೌಡ ಕೆ.ಆರ್.ಪೇಟೆ , ಶಿರಾದಲ್ಲಿ ಅವರೇ ಉಸ್ತುವಾರಿ ಏನಾಯ್ತು. ಹಾಸನಕ್ಕೆ ಬಂದರೂ ಇದೇ ಕಥೆಯಾಗುತ್ತದೆ. ಬುಟ್ಟೀಲಿ ಹಾವಿದೆ ಅಂತಾರೆ ಅದರಲ್ಲಿ ಹಾವ್ರಾಣಿನೂ ಇರುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಲೇಜಿಗೆ ಹೋಗುವ ಹುಡುಗ ಮಾತನಾಡಿದರೆ ಉತ್ತರ ಕೊಡ್ತೀನಿ. ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿ ಇಲ್ಲದಂತೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ. ದೇವೇಗೌಡರ ಮಗ ಅನ್ನೋದು ಬಿಟ್ಟರೆ ಅವರಿಗೆ ಇನ್ಯಾವ ಅರ್ಹತೆಯಿದೆ. ಏಳು, 10ನೇ ತರಗತಿ ಪಾಸಾದವರಿಗೆ ಗೌರವದಿಂದ ನಡೆದುಕೊಳ್ಳಲು ಎಲ್ಲಿ ಬರುತ್ತೆ. ನಾನು ಅವನಲ್ಲ ದೇವರ ದಯೆಯಿಂದ ಡಬಲ್ ಡಿಗ್ರಿ ಪಡೆದಿದ್ದೇನೆ. ಇನ್ನಾದರೂ ರೇವಣ್ಣ ಅವರು ಗೌರವದಿಂದ ಇರಲಿ ಎಂದು ಖಾರವಾಗಿ ನುಡಿದರು.
ಮ್ಯೂಸಿಯಂಗಾಗಿ ಜಾಗದಲ್ಲಿ ಕಲ್ಯಾಣ ಮಂಟಪ
ಜೆಡಿಎಸ್‍ನ ಮಾಜಿ ಸಚಿವರು ಮ್ಯೂಸಿಯಂ ಮಾಡ್ತೀವಿ ಎಂದು ಹೇಳಿ ಹುಡಾದಿಂದ ಜಾಗ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿ ಎರಡು ಕಲ್ಯಾಣ ಮಂಟಪ ಕಟ್ಟಿ ತಿಂಗಳಿಗೆ 50 ಲಕ್ಷ ರೂ. ದುಡಿಮೆ ಮಾಡುತ್ತಿದ್ದಾರೆ. ಆದರೆ ಇದೀಗ ನನ್ನ ಅಭಿವೃದ್ಧಿ ಕೆಲಸಕ್ಕೆ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದ ಪ್ರೀತಂ, ಗಾಜಿನಮನೆಯಲ್ಲಿ ಕೂತಿದ್ದೀರಾ ಸಮಾಧಾನವಾಗಿ ಇದ್ರೆ ಒಳ್ಳೆಯದು ಇಲ್ಲ ಎಂದರೆ ಎಲ್ಲ ಹಗರಣಗಳನ್ನು ಬಿಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಸ್ವಿಮಿಂಗ್ ಪೂಲ್‌ನಲ್ಲಿ ಕೂತು ಉರಿವ ಸೂರ್ಯನಿಗೆ ಚಾಲೇಂಜ್ ಮಾಡಿದ ಪ್ರಿಯಾಂಕಾ ಚೋಪ್ರಾ
ರೇವಣ್ಣ ಅವರೇನು ಸ್ವಾಮಿ ವಿವೇಕಾನಂದ ಅಲ್ಲ
ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿದರೆ ದೊಡ್ಡಹಳ್ಳಿ ರೀತಿ ಗೋಲಿಬಾರ್ ಆಗುತ್ತೆ ಎಂಬ ರೇವಣ್ಣ ಹೇಳಿಕೆ ವಿರುದ್ಧ ಮಾತನಾಡಿದ ಅವರು, ಆಟ 1978ರಲ್ಲಿ ಮುಗಿದು ಹೋಗಿದೆ. ಅವರು ಕರೆದೊಡನೆ ಯುವಕರು ಬರಲು ರೇವಣ್ಣ, ಸ್ವಾಮಿ ವಿವೇಕಾನಂದ ಅಲ್ಲ. ಅವರು ಅಕ್ರಮ ಮಾಡಿರುವ ಎಲ್ಲ ದಾಖಲೆಗಳು ಇದೆ ಎಂದು ತಿಳಿಸಿದರು.
ನಾನು ಹೊಳೆ ನರಸೀಪುರದ ವಿಚಾರಕ್ಕೆ ಹೋದರೆ ಮುನಿಸಿಪಾಲಿಟಿಯಲ್ಲಿ ಏನು ಮಾಡಿದ್ದಾರೆ. ಯಾರ ಹೆಸರಿಗೆ ಡಿಡಿ ತೆಗೆದಿದ್ದಾರೆ ಗೊತ್ತಿದೆ. ಅವರ ಸ್ವಂತಕ್ಕಾಗಿ ಏನೇನು ಮಾಡಿಕೊಂಡಿದ್ದಾರೆ ಅಂತ ಕಥೆ ತೆಗೆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಿಗೆ ಸಮಯ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಸೋಲುವುದಕ್ಕೆ ಅವರ ದೊಡ್ಡಪ್ಪ ರೇವಣ್ಣನೇ ಕಾರಣ ಎಂದು ಸಚಿವ ಕೆ.ಸಿ. ನಾರಾಯಣ ಹೇಳಿದ್ದಾರೆ.
ನಗರದ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ. ನಿಖಿಲ್ ಕುಮಾರಸ್ವಾಮಿ ಬಗ್ಗೆ ನನಗೆ ಗೌರವ ಇದೆ. ಅವರು ಸುಮ್ಮನೆ ಮಾತನಾಡುವುದು ತಪ್ಪು. ಕುಮಾರಸ್ವಾಮಿ ಸುಪುತ್ರ ನಿಖಿಲ್ ಇನ್ನೂ ಚಿಕ್ಕ ರಾಜಕಾರಣಿ. ಪ್ರತಿಯೊಂದರ ಬಗ್ಗೆ ಮಾಹಿತಿ ತಿಳಿದಕೊಂಡು ನಿಖಿಲ್ ಮಾತನಾಡಬೇಕು. ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಾರೆ. ಆದರೆ ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಒಂದೇ ಒಂದು ಬಾರಿ ಎನರ್ಜಿ ಮಿನಿಸ್ಟರ್ ಆಗಿ ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ
ಚನ್ನರಾಯಪಟ್ಟಣ ತಾಲೂಕು – ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟುಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ಅವರ ದೊಡ್ಡಪ್ಪನನ್ನೇ ಕೇಳಲಿ. ಮಾಹಿತಿ ನೀಡಿ ಎಂಬ ಹಕ್ಕಿನಲ್ಲಿ ಕೇಳಲಿ. ಅವರ ದೊಡ್ಡಪ್ಪ ಬಂದ ಅನುದಾನವನ್ನು ಹಾಸನಕ್ಕೆ ಹಾಕಿಕೊಂಡಿರುವ ಬಗ್ಗೆ ಪಾಪ ನಿಖಿಲ್‍ಗೆ ವಿಷಯ ಗೊತ್ತಿಲ್ಲ. ಮಂಡ್ಯವನ್ನು ಖಾಲಿ ಬಿಟ್ಟರು. ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ಹಿಡಿದುಕೊಂಡು ಇಷ್ಟು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದರು. ಆದರೆ ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹುಡುಕಿಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನನ್ನು ಗೆಲ್ಲಿಸಿಕೊಂಡಿರು. ನಿಖಿಲ್‍ನ ಸೋಲಿಸಿದರು. ಅದಕ್ಕಿಂತ ನಮ್ಮ ನಿಖಿಲ್ ಕುಮಾರಣ್ಣಂಗೆ ಪಾಠ ಬೇಕಾ? ಈಗಲಾದರೂ ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್
ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನ ಕೆಲ ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮಿಷನ್ ಓಡುತ್ತಿದೆ. ಕಾಂಗ್ರೆಸ್ ಜೆಡಿಎಸ್‍ನ ಮಿಷನ್‍ಗೆ ಕೈ ಹಾಕಿ, ನಮ್ ಮಿಷನ್ ತೆಗೆದುಕೊಂಡು ಓರಲ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ ಮಿಷನ್ ಎಷ್ಟುಗಟ್ಟಿ ಇದೆ ಲೆಕ್ಕ ಹಾಕಲಿ ಎಂದಿದ್ದಾರೆ. ಇದನ್ನೂ ಓದಿ: ಕೊವೀಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ- ಕೇಂದ್ರದಿಂದ 7,274 ಕೋಟಿ ರೂ. ಬಿಡುಗಡೆ
ನಮ್ಮ ಮಿಷನ್ ಮುಳುಗುತ್ತಿದೆ ಅಂಥಾ ಬಿಜೆಪಿ ಲೀಡರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂತಲ್ಲಾ ಅಂಥಾ ವ್ಯಥೆಯಾಗುತ್ತಿದೆ. ದೇವರು ಕಣ್ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ. ಈಗಾಗಲೇ ಪಂಜಾಬ್‍ನಲ್ಲಿ ಕ್ಲೋಸ್ ಆಗುತ್ತಿದೆ. ಸುಳ್ಳು ಜಾಸ್ತಿ ದಿನ ನಡೆಯಲ್ಲ, ಧರ್ಮಕ್ಕೆ ಜಯ ಇದ್ದೇ ಇರುತ್ತದೆ. ನಮ್ಮದು ಫ್ಯಾಕ್ಟರಿ, 1983 ರಿಂದ ಹುಟ್ಟು ಹಾಕಿದ್ದೀವಿ. ನಮ್ಮ ಹತ್ರ ಟ್ರೈನಿಂಗ್ ತೆಗೆದುಕೊಳ್ಳುತ್ತಾರೆ. ಜಾಸ್ತಿ ಸಂಬಳ ಕೊಡುವ ಕಡೆ ಹೋಗುತ್ತಾರೆ ಎಂದು ರೇವಣ್ಣ ಪಕ್ಷ ಬಿಡುವವರ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇರುತ್ತೆ. ಕೇಂದ್ರ ಸರ್ಕಾರದಿಂದ ಸಮಸ್ಯೆ ಇಲ್ಲ ಅಂದ್ರೆ ನಾವು ರಾಜ್ಯಸಭೆಯಲ್ಲೂ ಸಹಕಾರ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಪದ್ಮನಾಭನಗರದಲ್ಲಿನ ನಿವಾಸಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ತೆಗಿಬೇಕು ಅಂತಾ ನಾವು ಹೇಳಿಲ್ಲ. 75 ವರ್ಷ ಅಂತಾ ನಿಬಂಧನೆ ಇದೆ ಅಂತಾ ಅವರ ಪಕ್ಷದವರು ಮನವಿ ಮಾಡಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಇವರಿಗೆ ನಮ್ಮ ಸಹಕಾರ ಇರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಪದ್ಮನಾಭಗರದ ನಿವಾಸಕ್ಕೆ ತೆರಳಿ ಎಚ್‍ಡಿಡಿ ಆಶೀರ್ವಾದ ಪಡೆದ ಸಿಎಂ
ಯಡಿಯೂರಪ್ಪ ಆಶೀರ್ವಾದ ಇಲ್ಲದೆ ಸರ್ಕಾರ ನಡೆಯಲ್ಲ. ಸರ್ಕಾರ ನಡೆಯಬೇಕಾದ್ರೆ ಯಡಿಯೂರಪ್ಪ ಆಶೀರ್ವಾದ ಇರಬೇಕು. ಯಡಿಯೂರಪ್ಪ ಅವರಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.
ದೆಹಲಿಯಲ್ಲಿ ಇದ್ದಾಗ ನಿಮ್ಮ ಭೇಟಿಗೆ ಬರುತ್ತೇನೆ ಎಂದು ಬೊಮ್ಮಾಯಿ ಅವರು ಹೇಳಿದ್ದರು. ಆಗ ಸಾಕಷ್ಟು ಬ್ಯುಸಿ ಶೆಡ್ಯೂಲ್ ಇತ್ತು ಆಗಲಿಲ್ಲ ಇವತ್ತು ಭೇಟಿಗೆ ಸಮಯವಕಾಶ ನಿಗದಿಮಾಡಲಾಗಿತ್ತು. ಕೆಳಗೆ ಇಳಿದು ಹತ್ರ ಹೋಗಿ ಸ್ವಾಗತ ಮಾಡಲು ಆಗಲ್ಲ ಅಂತಾ ಹಾಸನದಲ್ಲಿ ಇದ್ದ ರೇವಣ್ಣ ಅವರನ್ನು ಕರೆಸಿದ್ದೆ. ರೇವಣ್ಣ ಸಿಎಂ ಅವರನ್ನು ಸ್ವಾಗತ ಮಾಡಿ ಕರೆದುಕೊಂಡು ಬಂದ್ರು. ನಾನು, ಅವರ ತಂದೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಕಾಲದ ಹಿರಿ ಮನುಷ್ಯ ನಾನೊಬ್ಬನೇ ಈಗ. ಆಶೀರ್ವಾದ ಪಡೆಯಲು ಬರ್ತೀನಿ ಅಂದ್ರು, ಬನ್ನಿ ಎಂದು ಹೇಳಿದ್ದೆ ಎಂದರು.
ಎಲ್ಲರೂ ಮುಖ್ಯಮಂತ್ರಿ ಆಗಲು ಆಗಲ್ಲ:
ಜನತಾದಳದಿಂದ ಸಿದ್ದರಾಮಯ್ಯ ಜೊತೆಯಲ್ಲಿ ಹೋದವರು ಎಲ್ಲ ಮುಖ್ಯಮಂತ್ರಿಯಾಗಿದ್ದಾರಾ? ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಆಗಲೂ ಸಾಧ್ಯವಿಲ್ಲ. ಎಲ್ಲರೂ ಮಿನಿಸ್ಟರ್ ಆಗುವುದಕ್ಕೂ ಆಗಲಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜೊತೆ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದುಕೊಂಡ ರೀತಿ ನೋಡಿ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ನುಡಿದರು.
ಕೆಲಸ ಮಾಡಲು ವಯಸ್ಸು ಮುಖ್ಯ ಅಲ್ಲ, ವಯಸ್ಸಿದ್ದೂ ಮನೆಯಲ್ಲಿ ಮಲಗಿದ್ರೆ ಏನು ಪ್ರಯೋಜನ? ಮಹಾಭಾರತದಲ್ಲಿ ಭೀಷ್ಮ 10 ದಿನ ಹೋರಾಟ ಮಾಡುತ್ತಾನೆ, ಕರ್ಣ ಒಂದೂವರೆ ದಿನ ಹೋರಾಟ ಮಾಡುತ್ತಾನೆ, ವಯಸ್ಸು ಮುಖ್ಯ ಆಗಲ್ಲ. ಯಡಿಯೂರಪ್ಪ ಅವರಿಗೆ ನನಗಿಂತ ಇನ್ನೂ ವಯಸ್ಸಿದೆ, ನನಗೆ 89 ವರ್ಷ ವಯಸ್ಸು, ಯಡಿಯೂರಪ್ಪಗೆ 78 ವರ್ಷ ವಯಸ್ಸು ಅವರಿಗೆ ಇನ್ನೂ ಶಕ್ತಿ ಇದೆ. ಜಿಲ್ಲೆಗಳಿಗೆ ಹೋಗಬಹುದು. ನಾನು ಎಲ್ಲ ಜಿಲ್ಲೆಗಳಿಗೂ ಹೋಗಲು ಆಗುವುದಿಲ್ಲ ಆದರೆ ಕೆಲವು ಕಡೆ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ಹಾಸನ: ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.
ಯುವ ಮುಖಂಡ ಮುಖ್ಯಮಂತ್ರಿ ಆಗಿರುವುದು ಸಂತೋಷ. ಅವರು ಭ್ರಷ್ಟಾಚಾರ ತೆಗೆಯೋದು ನಮ್ಮಗುರಿ ಅಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ನೂತನ ಮುಖ್ಯಮಂತ್ರಿಗೆ ರೇವಣ್ಣ ಸಲಹೆ ನೀಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಕೃಷಿ ಯಂತ್ರಧಾರೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯನದವರೊಂದಿಗೆ ಮಾತನಾಡಿದ ಅವರು, ಹಿಂದಿನ ಎರಡು ವರ್ಷ ಸುಲಿಗೆ ನಡೆಯುತ್ತಿತ್ತು. ಈಗಿನ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿ. ಹಾಸನ ಜಿಲ್ಲೆಯ ಕೆಲಸ ತಡೆ ಹಿಡಿದದ್ದಾಗಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ರೈತಪರ, ಒಳ್ಳೆಯ ಕೆಲಸ ಮಾಡಲಿ. ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ರೇವಣ್ಣ ಶುಭ ಹಾರೈಸಿದ್ದಾರೆ.
ಇದೇ ವೇಳೆ, ನಾನು ಸಂತೋಷ್ ಅವರ ಮನೆಗಾಗಲಿ, ಪ್ರಹ್ಲಾದ್ ಜೋಶಿ ಅವರ ಮನೆಗಾಗಲಿ ಹೋಗಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹಿಂದೆ ಗಡ್ಕರಿ ಅವರೇ ಬಂದು ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು. ಹೀಗಾಗಿ ಆ ಬಗ್ಗೆ ಮಾತಾಡಲು ದೆಹಲಿಗೆ ಹೋಗಿದ್ದೆ. ನಾನು ಯಾವುದೇ ರಾಜಕೀಯ ಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ನಿರ್ಧಾರಕ್ಕೆ ಬದ್ಧ: ಮಾಜಿ ಸಚಿವ ನಿರಾಣಿ
ಹಾಸನ: ಯಾರಿಂದಲೂ ಸಹ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಎಂದು ಹೇಳಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ಎಚ್. ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ಉಳಿಯುವುದಾದರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂಬ ಸುಮಲತಾ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರು.
ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋದರೆ ನಾವು ಸಣ್ಣವರಾಗುತ್ತೇವೆ. ಕುಟುಂಬ ಒಡೆಯುವ ಇಂತಹ ಹೇಳಿಕೆಯನ್ನು ಸಂಸದೆ ಸುಮಲತಾ ಅವರು ನೀಡಬಾರದು. ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮ ಕೈಗೊಂಡು ಮುಟ್ಟುಗೋಲು ಹಾಕಬೇಕು. ಅದನ್ನು ಅದನ್ನು ಬಿಟ್ಟು ಕುಟುಂಬ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸುಮಲತಾ ಅವರ ಹೇಳಿಕೆ ಸಂಬಂಧ ಪ್ರಜ್ವಲ್ ರೇವಣ್ಣ ನನಗೆ ಫೋನ್ ಮಾಡಿ ನನ್ನ ಹೆಸರು ಏಕೆ ತರುತ್ತಿದ್ದಾರೆ ಎಂದು ಕೇಳಿದ್ದರು. ದಿವಂಗತ ನಟ ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ. ಕುಮಾರಸ್ವಾಮಿ ಹಾಗೂ ಅಂಬರೀಶ್ ಅವರೊಂದಿಗಿನ ಸಂಬಂಧ ಹೇಗಿತ್ತು ಎಂದು ನಾನು ಕಂಡಿದ್ದೇನೆ. ಕುಮಾರಸ್ವಾಮಿ ಎಂದಿಗೂ ಸಹ ದ್ವೇಷದ ರಾಜಕಾರಣ ಮಾಡಿಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣ ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್
ಪ್ರಜ್ವಲ್ ನನ್ನು ಎತ್ತಿಕಟ್ಟಿ ಕುಟುಂಬವನ್ನು ಒಡೆಯುವ ಕಾರ್ಯಕ್ರಮ ಯಾರಿಂದಲೂ ಆಗುವುದಿಲ್ಲ. ಜೆಡಿಎಸ್ ಪಕ್ಷ ಉಳಿಸಲು ಕಾರ್ಯಕರ್ತರಿದ್ದಾರೆ. ಕುಟುಂಬದಿಂದ ಪಕ್ಷ ಉಳಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು ನಮ್ಮದೇನಾದರೂ ಕ್ರಷರ್ ಇದ್ಯಾ? ಕಾಲೇಜುಗಳಿವೆಯಾ? ಕುಮಾರಸ್ವಾಮಿ ದುಡ್ಡು ಹೊಡೆಯುತ್ತಾನೆ ಎನ್ನುತ್ತಾರಲ್ಲ. ಅದು ನ್ಯಾಯವೇ? ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಅಂಬರೀಶ್ ಮೃತರಾದ ಮಂಡ್ಯಕ್ಕೆ ಹೆಲಿಕಾಪ್ಟರ್ ನಲ್ಲಿ ತೆಗೆದುಕೊಂಡು ಹೋದರು. ಕುಮಾರಸ್ವಾಮಿ ಪ್ರಚಾರ ಪಡೆಯಲು ಕೆಲಸ ಮಾಡಿಲ್ಲ. ಯಡಿಯೂರಪ್ಪ ಸರ್ಕಾರದ ಅಧಿಕಾರಿಗಳೇ ಕೆಆರ್‍ಎಸ್‍ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ ಎಂದರು.
– ಫೋಟೋ, ಹೆಸರು ಇದೆ ಅಂತ ಅಂಬುಲೆನ್ಸ್ ಸೀಜ್
– ತಹಶೀಲ್ದಾರ್, ಶಾಸಕರ ಕ್ರಮಕ್ಕೆ ದಾನಿ ರೇವಣ್ಣ ಆಕ್ರೋಶ
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಜನರಿಗೆ ಕೊರೊನಾ ಕಾಲದಲ್ಲಿ ಉಚಿತ ಸೇವೆಗೆಂದು ಸಮಾಜ ಸೇವಕ ಬಿ.ರೇವಣ್ಣ ಅವರು ಮೂರು ಅಂಬುಲೆನ್ಸ್ ಅನ್ನು ನೀಡಿದ್ದರು. ಆದರೆ ಇದೀಗ ಅಂಬುಲೆನ್ಸ್ ಗಳ ಮೇಲೆ ರೇವಣ್ಣ ಅವರ ಭಾವಚಿತ್ರವುಳ್ಳ ಸ್ಟಿಕರ್ ಇದೆ ಎಂದು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರು ಸೀಜ್ ಮಾಡಿದ್ದಾರೆ.
ಸದ್ಯ ಮಂಡ್ಯ ಜಿಲ್ಲೆಯಲ್ಲಿ ಅಂಬುಲೆನ್ಸ್ ಸಮಸ್ಯೆ ಎದುರಾಗಿದ್ದು, ಇದನ್ನು ನೀಗಿಸಲು ರೇವಣ್ಣ ಅವರು ಪಾಂಡವಪುರ ತಾಲೂಕಿನ ವ್ಯಾಪ್ತಿಯ ಜನರಿಗೆ ಉಚಿತವಾಗಿ ಅಂಬುಲೆನ್ಸ್ ಸೇವೆ ನೀಡಲು ಕಳೆದ ಐದು ದಿನಗಳ ಹಿಂದೆ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರೇ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಇದೀಗ ತಹಶೀಲ್ದಾರ್ ಅವರೇ ಈ ಅಂಬುಲೆನ್ಸ್ ಗಳ ಮೇಲೆ ಬಿ.ರೇವಣ್ಣ ಅವರ ಭಾವಚಿತ್ರ ಮತ್ತು ಅವರ ಹೆಸರು ಇದೆ ಎಂದು ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಗಳನ್ನು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: `ಆಮ್ಲಜನಕ’ ಸರ್ಕಾರವೇ ಸುಳ್ಳಿನ ಮಂಟಪದಿಂದ ಕೆಳಗಿಳಿಸಿ ನಡೆಸೆನ್ನನು..!
ಪ್ರಮೋದ್ ಪಾಟೀಲ್ ಅವರು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಅವರ ಒತ್ತಡದಿಂದ ಈ ಕೆಲಸವನ್ನು ಮಾಡಿದ್ದಾರೆ. ಪುಟ್ಟರಾಜು ಅವರು ನನ್ನ ಏಳಿಗೆಯನ್ನು ಸಹಿಸಲಾಗದೇ ನನ್ನ ಅಂಬುಲೆನ್ಸ್ ಗಳನ್ನು ಸೀಜ್ ಮಾಡಲು ತಹಶೀಲ್ದಾರ್ ಮೇಲೆ ಒತ್ತಡ ಹಾಕಿದ್ದಾರೆ ಎಂದು ಸಮಾಜ ಸೇವಕ ರೇವಣ್ಣ ಪುಟ್ಟರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ
ನಾನು ಮೂರು ಅಂಬ್ಯುಲೆನ್ಸ್ ನೀಡಿದ್ದರೆ ಪುಟ್ಟರಾಜು ಅವರು 30 ಅಂಬುಲೆನ್ಸ್ ನೀಡಿ ಸಮಾಜ ಸೇವೆ ಮಾಡಬೇಕು. ಅದನ್ನು ಬಿಟ್ಟು ಫೋಟೋ ಇದೆ ಹೆಸರು ಇದೆ ಎಂಬ ಕಾರಣಗಳನ್ನು ಹೇಳಿ ಅಧಿಕಾರಿಗಳಿಗೆ ಒತ್ತಡ ಹಾಕಿ ಸೀಜ್ ಮಾಡುವ ಕೆಲಸ ಮಾಡಬಾರದು. ರಾಜ್ಯದ ಹಲವು ಜಿಲ್ಲೆಯಲ್ಲಿ ಮೂರು ಪಕ್ಷದ ಮುಖಂಡರು ಅವರು ನೀಡಿರುವ ಅಂಬುಲೆನ್ಸ್ ಗಳ ಮೇಲೆ ಅವರವರ ಭಾವಚಿತ್ರ ಹಾಗೂ ಹೆಸರುಗಳನ್ನು ಹಾಕಿಸಿಕೊಂಡಿದ್ದಾರೆ. ಅಲ್ಲಿ ಅವುಗಳನ್ನು ಸೀಜ್ ಮಾಡಿಲ್ಲ. ಆದರೆ ಪಾಂಡವಪುರದಲ್ಲಿ ಮಾತ್ರ ಹೊಸ ಕಾನೂನು ಇದೆ. ಇದು ರಾಜಕೀಯ ದ್ವೇಷಕ್ಕಾಗಿ ಪುಟ್ಟರಾಜು ಅವರು ಈ ರೀತಿಯ ಕೆಲಸ ಮಾಡಿರುವುದು ಸರಿಯಲ್ಲಿ ಎಂದು ಬಿ.ರೇವಣ್ಣ ಅವರು ಆಕ್ರೋಶ ಹೊರಹಾಕಿದ್ದಾರೆ.
ಹಾಸನ : ಸರ್ವಾಧಿಕಾರಿ ಧೋರಣೆಯಿಂದಾಗಿ ಹಾಸನ ಜೆಡಿಎಸ್ ಭದ್ರಕೋಟೆ ಎಂಬ ಬೇಲಿ ಕಳಚಿ ಬಿದ್ದಿದೆ ಎಂದು ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಹೆಚ್‍ಡಿ ರೇವಣ್ಣ ವಿರುದ್ಧ ಠೀಕಾಪ್ರಹಾರ ನಡೆಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಮತದಾರರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, ಸಾಲಗಾಮೆ ಹೋಬಳಿಯ ಐದು ಪಂಚಾಯ್ತಿಗಳಲ್ಲಿ ಪ್ರತಿಸ್ಪರ್ಧಿ ಇಲ್ಲದೆ ಬಿಜೆಪಿ ಅಧಿಕಾರ ಹಿಡಿದಿದೆ. ಮೂವತ್ತು-ನಲವತ್ತು ವರ್ಷಗಳಿಂದ ಯಾವ ಪಕ್ಷಕ್ಕೂ ಸಿಗದ ಅಧಿಕಾರ ಈಗ ಬಿಜೆಪಿ ಪಕ್ಷಕ್ಕೆ ದೊರೆತಿದೆ ಎಂದು ಹೇಳಿದರು.
ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಜಯ ಸಿಕ್ಕಿದೆ. ಐದು ಪಂಚಾಯತಿಗಳಲ್ಲಿ ಒಂದು ಪಂಚಾಯತಿಯಲ್ಲೂ ಪ್ರತಿಸ್ಪರ್ಧಿಯೇ ಇಲ್ಲ, ಜೆಡಿಎಸ್ ಒಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸದ ಪರಿಸ್ಥಿತಿ ಜೆಡಿಎಸ್‍ಗೆ ಬಂದಿದೆ. ಸಾಲಗಾಮೆ ಹೋಬಳಿಯ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯ ಹೆಡ್ ಕ್ವಾರ್ಟರ್ ಹಾಸನದಲ್ಲಿ ಬಿಜೆಪಿ ಗೆದ್ದಿರುವುದು ಆಕಸ್ಮಿಕ, ಪ್ರೀತಂಗೌಡ ಆಕಸ್ಮಿಕ ಶಾಸಕ, ಇನ್ನು ಕೂಸು ಎಂದು ಮಾಜಿ ಸಚಿವ ರೇವಣ್ಣ ಜರೆದಿದ್ದರು. ಸಾಲಗಾಮೆ ಜನತೆ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಹಾಸನ ಜೆಡಿಎಸ್ ಭದ್ರಕೋಟೆ ಎಂದು ಬೇಲಿ ಹಾಕಿಕೊಂಡಿದ್ದರು. ಅದು ಈಗ ಕಳಚಿ ಬಿದ್ದಿದೆ. ಜೆಡಿಎಸ್ ಪಕ್ಷದವರು ಸರ್ವಾಧಿಕಾರಿ ಧೋರಣೆ ತೋರಿದ್ದರು. ನಾವು ಇದೇ ರೀತಿ ಮಾಡಿದರೆ ಮುಂದೆ ನಮಗೂ ಅದೇ ಪರಿಸ್ಥಿತಿ ಬರುತ್ತದೆ. ಹಾಗಾಗಿ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಹಾಸನ: ಇಷ್ಟು ದೊಡ್ಡ ಕಾಲೇಜು ಕಟ್ಟುವ ಮೊದಲು ರಸ್ತೆ ನಿರ್ಮಾಣ ಮಾಡಬೇಕಿತ್ತು ಇದನ್ನು ಹೊರತುಪಡಿಸಿ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ರೀತಿ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಇಂತಹದೊಂದು ಸಮಸ್ಯೆಯಾಗಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಮತ್ತೊಮ್ಮೆ ರೇವಣ್ಣ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಹಾಸನದ ಪಶುಸಂಗೋಪನಾ ಮತ್ತು ಸಂಶೋಧನಾ ಸಂಸ್ಥೆಗೆ ಇಂದು ಸಚಿವ ಪ್ರಭು ಚೌಹ್ಹಾಣ್ ಜೊತೆಯಲ್ಲಿ ಪ್ರೀತಂ ಗೌಡ ಭೇಟಿ ನೀಡಿದ ವೇಳೆ ಕಾಲೇಜು ಆಡಳಿತ ಮಂಡಳಿಯವರು, ರಿಂಗ್ ರಸ್ತೆಯಿಂದ ಕಾಲೇಜಿಗೆ ಬರಲು ಸರಿಯಾದ ರಸ್ತೆಯಿಲ್ಲ. ದಯಮಾಡಿ ಕಾಲೇಜಿಗೊಂದು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಹಿಂದೆ ರಸ್ತೆಗಾಗಿ 5-10 ಕೋಟಿ ಖರ್ಚಾಗುತ್ತಿತ್ತು. ಆದರೆ ಈಗ 20-30ಕೋಟಿ ಖರ್ಚಾಗುತ್ತೆ ಎಂದು ಸಚಿವರಿಗೆ ಮನವಿ ಮಾಡಿದಾಗ ಸ್ಥಳೀಯ ಶಾಸಕರ ಗಮನಕ್ಕೆ ತಂದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ತಿಳಿಸಿದರು. ಈ ವೇಳೆ ಮಾತಿನ ಮಧ್ಯೆ ಪ್ರವೇಶಿಸಿ ಮಾತನಾಡಿದ ಪ್ರೀತಂ ಗೌಡ, ನಾನು ಇಷ್ಟು ದೊಡ್ಡ ಕಾಲೇಜು ನಿರ್ಮಾಣ ಮಾಡುತ್ತಿರುವಾಗ ಮೊದಲು ರಸ್ತೆ ಮಾಡಬೇಕು. ನಂತರ ಕಾಲೇಜು ಮಾಡಬೇಕು ಎಂಬ ವಿಚಾರ ಈ ಹಿಂದೆ ಕಾಮಗಾರಿ ಮಾಡಿದವರಿಗೆ ಗೊತ್ತಿರಬೇಕಿತ್ತು. ಆದರೆ ಅವರು ನಾವು ಹೆಲಿಕಾಪ್ಟರ್ ನಲ್ಲಿ ಬರುವುದಲ್ಲವೇ ಎಂಬ ಯೋಚನೆಯಿಂದ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಕಾಲೇಜಿಗೆ ರಸ್ತೆ ಸಮಸ್ಯೆಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದರು.
2006-07ರಲ್ಲಿದ್ದ 20-20 ಸರ್ಕಾರದಲ್ಲಿ ಹಾಸನಕ್ಕೆ ಬೃಹತ್ ಕಟ್ಟಡವನ್ನು ಹೊಂದಿರು ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಅಲ್ಲಿಂದ ಇಲ್ಲಿಯ ತನಕ ರಸ್ತೆಯ ವಿಚಾರವಾಗಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾಲೇಜಿನ ರಸ್ತೆ ಸಂಪರ್ಕ ಇನ್ನು ಕಗ್ಗಂಟಾಗಿಯೇ ಉಳಿದಿದೆ.