Tag: revaluation

  • ಪಿಯು ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಪರಿಗಣನೆ

    ಪಿಯು ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಪರಿಗಣನೆ

    ಬೆಂಗಳೂರು: ದ್ವಿತೀಯ ಪಿಯುಸಿ (Second PUC) ಮರು ಮೌಲ್ಯಮಾಪನ (Revaluation) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ರಾಜ್ಯ ಸರ್ಕಾರ (Karnataka Government) ಮತ್ತು ಶಿಕ್ಷಣ ಇಲಾಖೆ ಮಾಡಿದೆ.

    ಇನ್ನು ಮುಂದೆ ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಬಂದರೂ ಅದನ್ನು ವಿದ್ಯಾರ್ಥಿಗಳ ಅಂಕಕ್ಕೆ ಪರಿಗಣನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 2023ರ ಪರೀಕ್ಷೆಯಿಂದಲೇ ಈ ನಿಯಮ ಜಾರಿ ಬರಲಿದೆ. ಇದನ್ನೂ ಓದಿ: ಕ್ರಶ್ ಮದುವೆ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಸುದೀಪ್ ಪುತ್ರಿ

     

    ಇಲ್ಲಿಯವರೆಗೆ ಮರು ಮೌಲ್ಯಮಾಪನದಲ್ಲಿ ಕನಿಷ್ಠ 6 ಅಂಕ ಬಂದರೆ ಮಾತ್ರ ವಿದ್ಯಾರ್ಥಿಗಳ ಅಂಕಕ್ಕೆ ಪರಿಗಣನೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಇನ್ನು ಮುಂದೆ ಒಂದು ಅಂಕ ಬಂದರೂ ಅದನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

    ಈ ಸಂಬಂಧ ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮ 1997 ನಿಯಮಕ್ಕೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರ ಪತ್ರಿಕೆ ಮೌಲ್ಯಮೌಪನದಲ್ಲೂ ಮೈಸೂರು ವಿವಿ ಸೋಮಾರಿತನ!

    ಉತ್ತರ ಪತ್ರಿಕೆ ಮೌಲ್ಯಮೌಪನದಲ್ಲೂ ಮೈಸೂರು ವಿವಿ ಸೋಮಾರಿತನ!

    – ವಿದ್ಯಾರ್ಥಿಗಳು ಬರೆದ ಉತ್ತರವನ್ನು ನೋಡದ ಮೌಲ್ಯಮಾಪನಕಾರರು!

    ಮೈಸೂರು: ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿ ಉತ್ತರ ಪತ್ರಿಕೆಯನ್ನು ಸರಿಯಾಗಿ ಮರು ಮೌಲ್ಯಮಾಪನ ಮಾಡದ ಪ್ರಕರಣವೊಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಅಂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ 1,760 ರೂ. ಪಾವತಿಸಿ, ಮರು ಮೌಲ್ಯಮಾಪನ ಹಾಗೂ ಉತ್ತರ ಪ್ರತಿ ಜೆರಾಕ್ಸ್ ಗಾಗಿ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸ್ವೀಕರಿಸಿ, ಮರು ಮೌಲ್ಯಮಾಪನ ಮಾಡಿದ ಬಳಿಕ ಕಳುಹಿಸಲಾದ ಪ್ರತಿಯಲ್ಲಿ ಕೆಲವು ಉತ್ತರಗಳನ್ನು ಮೌಲ್ಯಮಾಪಕರು ನೋಡಿಯೇ ಇಲ್ಲ. ಜೊತೆಗೆ ಅಂಕ ಎಣಿಕೆಯಲ್ಲಿಯೂ ತಪ್ಪಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ದೂರಿದ್ದಾರೆ.

    ಮೈಸೂರು ವಿವಿ ಪದವಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಒಂದು ವಿಷಯಕ್ಕೆ 1,100 ರೂ. ಹಾಗೂ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು 660 ರೂ. ಪಾವತಿಸಬೇಕು. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳು ಪಾವತಿಸಿದರೂ ಮೌಲ್ಯಮಾಪಕರು ಕೆಲವು ಉತ್ತರಗಳನ್ನೇ ಮೌಲ್ಯ ಮಾಪನ ಮಾಡಿಲ್ಲ. ಮೌಲ್ಯಮಾಪಕರ ಬೇಜಾವಾಬ್ದಾರಿತನ ವಿದ್ಯಾರ್ಥಿಗಳ ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯವು ಮರು ಮೌಲ್ಯಮಾಪನದ ಹೆಸರಿನಲ್ಲಿ ಹಣ ದೋಚುತ್ತಿದೆಯೇ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.

    ಮೌಲ್ಯಮಾಪಕರ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕಕಿಂತ ಹೆಚ್ಚಿನ ಹಣವನ್ನು ಮರು ಮೌಲ್ಯಮಾಪನಕ್ಕೆ ಪಾವತಿಸುವಂತಾಗುತ್ತಿದೆ. ಹಣ ಪಾವತಿ ಮಾಡಿದರೂ ಸರಿಯಾಗಿ ಮೌಲ್ಯಮಾಪನ ಮಾಡುತ್ತಿಲ್ಲ. ಹೀಗೆ ಮಾಡುವುದರಿಂದ ವಿಶ್ವವಿದ್ಯಾಲಯದ ಮೌಲ್ಯಮಾಪಕರ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ದಯವಿಟ್ಟು ನಮ್ಮ ಜೀವನ ಜೊತೆಗೆ ಆಟವಾಡಬೇಡಿ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!

    SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!

    ಬಳ್ಳಾರಿ: ಎಸ್‍ಎಸ್ ಎಲ್‍ಸಿ ಫಲಿತಾಂಶದ ವೇಳೆ ರಾಜ್ಯಕ್ಕೆ 6 ರ‍್ಯಾಂಕ್  ಪಡೆದಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದ ನಂತರ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾನೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ಸೂರಜ್ ಫಲಿತಾಂಶದ ಬಂದಾಗ 620 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಪಡೆದಿದ್ದನು. ಆದರೆ ಮರು ಮೌಲ್ಯ ಮಾಪನ ಮಾಡಿಸಿದಾಗ ಸೂರಜ್ ಗೆ ಮೂರು ಅಂಕಗಳು ಹೆಚ್ಚುವರಿಯಾಗಿ ದೊರೆತಿವೆ. ಈ ಮೂಲಕ ಸೂರಜ್ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

    ಅಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲೆಗೆ ಸೂರಜ್ ಗೆ ಪ್ರಥಮ ಸ್ಥಾನ ಲಭಿಸಿದೆ. ಮರು ಮೌಲ್ಯಮಾಪನದ ವೇಳೆ ಸೂರಜ್ ಗೆ ಇಂಗ್ಲೀಷ್, ಕನ್ನಡ ಮತ್ತು ಹಿಂದಿ ವಿಷಯಗಳಲ್ಲಿ ತಲಾ ಒಂದು ಹೆಚ್ಚುವರಿಯಾಗಿ ದೊರೆತಿದೆ.