Tag: retro film

  • ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಸಾಲು ಸಾಲು 7 ಸಿನಿಮಾಗಳು ಫ್ಲಾಪ್ ಆಗಿವೆ. ಈ ಮಂಗಳೂರಿನ ಬೆಡಗಿಗೆ ಅದೃಷ್ಟ ಕೈಹಿಡಿಯೋದು ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

    ಇತ್ತೀಚಿನ ವರ್ಷಗಳಲ್ಲಿ ಪೂಜಾ ನಟಿಸಿರುವ ಸತತ 7 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಸ್ಟಾರ್ ನಟರಿಗೆ ಅವರು ನಾಯಕಿಯಾದ್ರೂ ಸಕ್ಸಸ್ ಸಿಗಲಿಲ್ಲ. ಪ್ರಭಾಸ್ ಜೊತೆ ರಾಧೆ ಶ್ಯಾಮ್, ದಳಪತಿ ವಿಜಯ್ ಜೊತೆ ಬೀಸ್ಟ್, ರಾಮ್ ಚರಣ್ ಜೊತೆ ಆಚಾರ್ಯ, ರಣವೀರ್ ಸಿಂಗ್ ಜೊತೆ ಸರ್ಕಸ್, ಸಲ್ಮಾನ್ ಖಾನ್ ಜೊತೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ಶಾಹಿದ್ ಕಪೂರ್ ಜೊತೆ ದೇವ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳೆಲ್ಲಾ ಸಕ್ಸಸ್ ಸಿಗದೆ ನೆಲಕಚ್ಚಿದೆ. ಇದನ್ನೂ ಓದಿ:ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

    ಮೇ 1ರಂದು ಸೂರ್ಯ (Suriya) ಜೊತೆ ನಟಿಸಿದ್ದ ‘ರೆಟ್ರೋ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಕ್ಸಸ್ ಸಿಗದೆ ಇರೋದನ್ನು ನೋಡಿ ಅಭಿಮಾನಿಗಳು ಕಂಗಲಾಗಿದ್ದಾರೆ. ಕರಾವಳಿ ಬೆಡಗಿಗೆ ಅದೃಷ್ಟ ಕೈ ಹಿಡಿಯೋದು ಯಾವಾಗ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

    ‘ಒಕಾ ಲೈಲಾ ಕೋಸಂ’ ಚಿತ್ರದ ಮೂಲಕ ಪೂಜಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ 7 ಫ್ಲಾಪ್ ಚಿತ್ರಕ್ಕೂ ಮುನ್ನ ಸಮತಾ, ಮಹರ್ಷಿ, ಅಲ ವೈಕುಂಠಪುರಮಲ್ಲೋ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗಳ ಮೂಲಕ ಪೂಜಾ ಸಕ್ಸಸ್ ಕಂಡಿದ್ದಾರೆ.

    ಸಾಲು ಸಾಲು ಸಿನಿಮಾ ಸೋತ್ರೂ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ತಲೈವಾ ನಟನೆಯ ‘ಕೂಲಿ’ ಚಿತ್ರದಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ವಿಜಯ್ ಜೊತೆ ‘ಜನ ನಾಯಗನ್’, ಸುನೀಲ್ ಶೆಟ್ಟಿ ಪುತ್ರನ ಸಿನಿಮಾದಲ್ಲೂ ನಾಯಕಿಯಾಕಿದ್ದಾರೆ.

  • ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಪ್ರಸ್ತುತ ಸೂರ್ಯ (Suriya) ಜೊತೆಗಿನ ‘ರೆಟ್ರೋ’ (Retro) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂರ್ದಶನವೊಂದರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಪೂಜಾ ಹೆಗ್ಡೆ ಸಂದರ್ಶನದಲ್ಲಿ ಮಾತನಾಡಿ, ನನ್ನ ಪೋಷಕರಿಂದ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಒತ್ತಡವಿದೆ. ನಾನು ಮೂಲತಃ ಕರ್ನಾಟಕದವಳು, ತುಳು ಹುಡುಗಿ. ಹಾಗಾಗಿ ನನ್ನ ಪೋಷಕರು ಆಗಾಗ ಕನ್ನಡದಲ್ಲಿ ಸಿನಿಮಾ (Kannada Films) ಮಾಡಲು ಹೇಳುತ್ತಾ ಇರುತ್ತಾರೆ. ಕನ್ನಡದಲ್ಲಿ ಹಲವು ಕಥೆಗಳನ್ನು ಈಗಾಗಲೇ ಕೇಳಿದ್ದೇನೆ. ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸುವ ಆಸಕ್ತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ

    ಅಂದಹಾಗೆ, ‘ರೆಟ್ರೋ’ ಸಿನಿಮಾ ಇದೇ ಮೇ 1ರಂದು ರಿಲೀಸ್ ಆಗಲಿದೆ. ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ದಳಪತಿಯೊಂದಿಗೆ ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.9ರಂದು ರಿಲೀಸ್ ಆಗಲಿದೆ.

  • ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಕಾಲಿವುಡ್ ನಟ ಸೂರ್ಯ (Suriya) ನಟನೆಯ ‘ರೆಟ್ರೋ’ (Retro Film) ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ರೆಟ್ರೋ’ ಚಿತ್ರದ 2ನೇ ಹಾಡಿನ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮಾ.21ರಂದು ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ:ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ

    ರೆಟ್ರೋ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಸೂರ್ಯ ಜೀವತುಂಬಿದ್ದಾರೆ. ಈಗಾಗಲೇ ‘ಕನ್ನಾಡಿ ಪೂವೇ’ ಎನ್ನುವ ಸಾಂಗ್‌ವೊಂದು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ ಎರಡನೇ ಹಾಡನ್ನು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

    ಮಾ.21ರಂದು ‘ಕನಿಮಾ’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಸೂರ್ಯ ಸ್ಟೈಲೀಶ್ ಲುಕ್‌ನಲ್ಲಿರುವ ಫೋಟೋವನ್ನು ಚಿತ್ರತಂಡ ರಿವೀಲ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಇನ್ನೂ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಇದೇ ಮೇ.1ರಂದು ಸಿನಿಮಾ ರಿಲೀಸ್ ಆಗಲಿದೆ.

    ಇನ್ನೂ ಸೂರ್ಯ ಜೊತೆ ಮೊದಲ ಬಾರಿಗೆ ಪೂಜಾ (Pooja Hegde) ನಟಿಸಿರೋದ್ರಿಂದ ‘ರೆಟ್ರೋ’ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಸತತ ಸೋಲುಗಳನ್ನೇ ಕಂಡಿರೋ ಪೂಜಾಗೆ ತಮಿಳಿನ ‘ರೆಟ್ರೋ’ ಚಿತ್ರ ಕೈಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ಪೂಜಾ ಹೆಗ್ಡೆ ಜೊತೆ ‘ರೆಟ್ರೋ’ ಕಥೆ ಹೇಳಲು ಹೊರಟ ಸೂರ್ಯ

    ಪೂಜಾ ಹೆಗ್ಡೆ ಜೊತೆ ‘ರೆಟ್ರೋ’ ಕಥೆ ಹೇಳಲು ಹೊರಟ ಸೂರ್ಯ

    ‘ಕಂಗುವ’ (Kanguva) ಸಿನಿಮಾ ಬೆನ್ನಲ್ಲೇ ಸೂರ್ಯ ರೆಟ್ರೋ ಸಿನಿಮಾದ ಕಥೆ ಹೇಳಲು ರೆಡಿಯಾಗಿದ್ದಾರೆ. ಗ್ಯಾಂಗ್‌ಸ್ಟರ್ ಆಗಿ ಮತ್ತೆ ಪ್ರೀತಿಗಾಗಿ ಬದಲಾಗೋ ನವಿರಾದ ಪ್ರೇಮಕಥೆಯನ್ನು ಪೂಜಾ ಹೆಗ್ಡೆ (Pooja Hegde) ಜೊತೆ ಹೇಳಲು ಸಿದ್ಧರಾಗಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

    ‘ಸೂರ್ಯ 44’ ಸಿನಿಮಾಗೆ ‘ರೆಟ್ರೋ’ (Retro)  ಎಂದು ಟೈಟಲ್ ಇಡಲಾಗಿದೆ. ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸೋ ಸೂರ್ಯ ಅದು ಹೇಗೆ ತಮ್ಮನ್ನು ತಾವು ಬದಲಾಗಿಸಿಕೊಳ್ತಾರೆ ಎಂಬುದನ್ನು ಟೀಸರ್‌ನಲ್ಲಿ ಸುಳಿವು ನೀಡಲಾಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಸೂರ್ಯ (Suriya)  ಮತ್ತು ಪೂಜಾ ಕೆಮಿಸ್ಟ್ರಿ ಮಸ್ತ್ ಆಗಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

    ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದ್ದು, ಕಾರ್ತಿಕ್ ಸುಬ್ಬರಾಜ್ (Karthik Subbaraj) ನಿರ್ದೇಶನ ಮಾಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ (Jyothika) ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ನಲ್ಲಿ ‘ರೆಟ್ರೋ’ (Retro)  ಮೂಲಕ ವಿಭಿನ್ನವಾಗಿರೋ ಕಥೆಯನ್ನೇ ಹೇಳಲು ಹೊರಟಿದ್ದಾರೆ.