Tag: retirement age

  • ಜನಸಂಖ್ಯೆ ಇಳಿಕೆ, ಆರ್ಥಿಕ ಸಂಕಷ್ಟ – ಚೀನಾದಲ್ಲಿ ನಿವೃತ್ತಿ ವಯಸ್ಸು ಏರಿಕೆ

    ಜನಸಂಖ್ಯೆ ಇಳಿಕೆ, ಆರ್ಥಿಕ ಸಂಕಷ್ಟ – ಚೀನಾದಲ್ಲಿ ನಿವೃತ್ತಿ ವಯಸ್ಸು ಏರಿಕೆ

    ಬೀಜಿಂಗ್‌: ಚೀನಾದಲ್ಲಿ ಜನಸಂಖ್ಯೆ (Population) ಜೊತೆ ಉದ್ಯೋಗಿಗಳ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಚೀನಾ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು (Retirement Age) ಹೆಚ್ಚಿಸಲು ನಿರ್ಧರಿಸಿದೆ.

    ಪುರುಷರ ನಿವೃತ್ತಿ ವಯಸ್ಸನ್ನು 63ಕ್ಕೆ ಏರಿಸಿದರೆ ಮಹಿಳೆಯರ ನಿವೃತ್ತಿ ವಯಸ್ಸನ್ನು ಅವರ ವೃತ್ತಿಗೆ ಅನುಗುಣವಾಗಿ 55 ಮತ್ತು 58ಕ್ಕೆ ಏರಿಸಲಾಗಿದೆ. ಮುಂದಿನ ವರ್ಷದ ಜನವರಿಯಿಂದ ಹೊಸ ನೀತಿ ಜಾರಿಯಾಗಲಿದೆ.

    1950 ರಿಂದ ಚೀನಾ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದು ಇದೇ ಮೊದಲು. ಪ್ರಸ್ತುತ ನಿವೃತ್ತಿ ವಯಸ್ಸು ಪುರುಷರಿಗೆ 60 ಮತ್ತು ಮಹಿಳೆಯರಿಗೆ ವೃತ್ತಿಗೆ ಅನುಗುಣವಾಗಿ 50 (ಬ್ಲೂ ಕಾಲರ್‌) ಮತ್ತು 55 (ವೈಟ್‌ ಕಾಲರ್‌) ಆಗಿದೆ.  ಇದನ್ನೂ ಓದಿ: PublicTV Explainer: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?

     

    ಈ ನಿರ್ಧಾರ ಯಾಕೆ?
    ಒಂದು ಕಡೆ ಜನಸಂಖ್ಯೆ ಇಳಿಕೆ ಆಗುತ್ತಿದೆ, ಇನ್ನೊಂದು ಕಡೆ ಹಿರಿಯ ನಾಗರಿಕರ ಸಂಖ್ಯೆ (Old Age People) ಏರಿಕೆ ಆಗುತ್ತಿದೆ. ಹಿಂದೆ ಜಾರಿಗೆ ತಂದ ಒಂದು ಕುಟುಂಬಕ್ಕೆ ಒಂದೇ ಮಗು ನೀತಿಯಿಂದಾಗಿ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ಈಗ ನಿವೃತ್ತಿ ವಯಸ್ಸು ಸಮೀಪಿಸುವವರ ಸಂಖ್ಯೆ ಹೆಚ್ಚಾಗಿದ್ದು ಪಿಂಚಣಿ ನಿಧಿ ನೀಡಲು ಕಷ್ಟವಾಗುತ್ತಿದೆ.

    ಅನೇಕ ಚೀನೀ ಪ್ರಾಂತ್ಯಗಳು ಈಗಾಗಲೇ ದೊಡ್ಡ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಈಗ ನಿವೃತ್ತಿ ವಯಸ್ಸು ಏರಿಕೆ ಮಾಡಿದ್ದರಿಂದ ಈ ಪ್ರಾಂತ್ಯಗಳಿಗೆ ಸ್ವಲ್ಪ ರಿಲೀಫ್‌ ಸಿಗಲಿದೆ.

    2035ರ ವೇಳೆಗೆ ಚೀನಾದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 2035 ರ ವೇಳೆಗೆ 28 ಕೋಟಿಯಿಂದ 40 ಕೋಟಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಚೀನಾದ ಸಂಖ್ಯೆ ಇದು ಬ್ರಿಟನ್ ಮತ್ತು ಅಮೆರಿಕದ ಒಟ್ಟು ಜನಸಂಖ್ಯೆಗೆ ಸಮಾನವಾಗಿರುತ್ತದೆ. ಒಂದು ವೇಳೆ ಸುಧಾರಣೆ ಕೈಗೊಳ್ಳದೇ ಇದ್ದರೆ ಸರ್ಕಾರದ ಬಜೆಟ್‌ನ ಬಹುಪಾಲು ಹಣ ಪಿಂಚಣಿ ಒಂದಕ್ಕೆ ಹೋಗುವ ಕಾರಣ ಸರ್ಕಾರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ.

    ವಿಶ್ವದಲ್ಲಿ ಸದ್ಯ ಭಾರತದ ಜನಸಂಖ್ಯೆ 142 ಕೋಟಿಗೆ ಏರಿದ್ದರೆ ಚೀನಾ ಜನಸಂಖ್ಯೆ 141 ಕೋಟಿಗೆ ಕುಸಿದಿದೆ.

     

  • ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ – ಸಚಿವ ಕಿರಣ್ ರಿಜಿಜು

    ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ – ಸಚಿವ ಕಿರಣ್ ರಿಜಿಜು

    ಮುಂಬೈ: ಸುಪ್ರೀಂ ಕೋರ್ಟ್ (Supreme Court) ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ (High Court Judges) ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiran Rijiju) ಹೇಳಿದ್ದಾರೆ. ನ್ಯಾಯಾಧೀಶರ ನಿವೃತ್ತಿ ವಯಸ್ಸು ಮತ್ತು ನ್ಯಾಯಾಂಗದಲ್ಲಿ ಪ್ರಕರಣಗಳು ಬಾಕಿ ಉಳಿಯಲು ಕಾರಣವಲ್ಲ ಎಂದು ತಿಳಿಸಿದರು.

    ಮುಂಬೈನಲ್ಲಿ ನಡೆದ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನ್ಯಾಯಾಧೀಶರ ಅಧಿಕಾರವಧಿಯನ್ನು ಹೆಚ್ಚಿಸುತ್ತಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ 65 ವರ್ಷ ಮತ್ತು ಹೈಕೋರ್ಟ್‌ಗೆ 62 ವರ್ಷ ನಿವೃತ್ತಿ ವಯಸ್ಸು ಸರಿ ಎಂದು ಭಾವಿಸುತ್ತೇವೆ. ಮುಂದೆ ಇದು ಬದಲಾಗಬಹುದು. ಆದರೆ ಸದ್ಯ ಸರ್ಕಾರದ ಮುಂದೆ ಈ ಬಗ್ಗೆ ಪ್ರಸ್ತಾಪಗಳಿಲ್ಲ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – BJPಗೆ ಗುಡ್ ಬೈ ಹೇಳಿದ ಹಿರಿಯ ನಾಯಕ

    court order law

    ನ್ಯಾಯಾಂಗದಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಪ್ರಕರಣಗಳ ಬಾಕಿ ಹೆಚ್ಚಿದೆ ಎಂಬ ತಪ್ಪು ಕಲ್ಪನೆ ಇದೆ. ಪ್ರಕರಣಗಳ ವಿಲೇವಾರಿಗೆ ನ್ಯಾಯಾಧೀಶರ ವಯಸ್ಸು ಅಥವಾ ಖಾಲಿ ಇರುವ ಹುದ್ದೆಗೆ ಯಾವುದೇ ಸಂಬಂಧವಿಲ್ಲ. ಜನರು ಈ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ದೊಡ್ಡ ಹುದ್ದೆಗಳ ಖಾಲಿ ಕಾರಣ ಪ್ರಕರಣಗಳು ಬಾಕಿ ಉಳಿದಿವೆ ಎನ್ನುವುದು ನಿಜವಲ್ಲ.

    ಈ‌ ನಡುವೆ ಅನರ್ಹ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿವೆ. ಇದು ನ್ಯಾಯಾಂಗದ ಹೊರೆಯನ್ನು ಹೆಚ್ಚಿಸುತ್ತವೆ. ಪ್ರಕರಣಗಳ ಸಂಖ್ಯೆಯನ್ನು ನೋಡಿದರೆ, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ವಾಸ್ತವವಾಗಿ ವಿಚಾರಣೆಗೆ ಪಟ್ಟಿ ಮಾಡಲು ಅರ್ಹವಾಗಿಲ್ಲ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳಲ್ಲಿ ತಮ್ಮನ್ನು ಏಕೆ ತೊಡಗಿಸಿಕೊಳ್ಳಬೇಕು? ಪ್ರತಿ ಜಾಮೀನು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದೆ. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ

    ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳ ವಿಚಾರಣೆಗಾಗಿ ಮಾಡಿದೆಯೇ? ಜಾಮೀನು ಅರ್ಜಿಗಳನ್ನು ಕೆಳ ನ್ಯಾಯಾಲಯಗಳು ವ್ಯವಹರಿಸಬೇಕು, ಸೀಮಿತ ಪ್ರಕರಣಗಳು ಹೈಕೋರ್ಟ್‌ಗೆ ಬರಬೇಕು, ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಕರಣಗಳ ವಿಚಾರಣೆ ನಡೆಯಬೇಕು, ಮರಣದಂಡನೆ ಅಥವಾ ಕೆಲವು ಗಂಭೀರ ಪ್ರಕರಣಗಳ ಹೊರತು ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳನ್ನು ಏಕೆ ನಿಭಾಯಿಸಬೇಕು ಎಂದು ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ

    ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ

    ಬೆಂಗಳೂರು: ಚುನಾವಣಾ ಸಮಯದಲ್ಲೇ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಗಿಫ್ಟ್ ಮೂಲಕ ರಾಜ್ಯದಲ್ಲಿರೋ ಸರ್ಕಾರಿ ನೌಕರರ ಜೊತೆ ಅವರ ಕುಟುಂಬದವರ ಮತವನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.

    ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿರೋ 5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಓಟ್ ಬ್ಯಾಂಕ್ ಸೆಳೆಯೋ ಸಲುವಾಗಿ ನಿವೃತ್ತಿ ವಯಸ್ಸನ್ನು ರಾಜ್ಯ ಸರ್ಕಾರ 2 ವರ್ಷ ಹೆಚ್ಚಿಸಲು ಮುಂದಾಗಿದೆ. ಈಗಿರುವ 60 ರ ಬದಲಾಗಿ ಇನ್ನೆರಡು ವರ್ಷ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಅಂದ್ರೆ ಇನ್ನು ಮುಂದೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62 ಆಗಲಿದೆ.

    ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರೋ ಸಿಎಂ, ಮುಂಬರುವ ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ ಅಂತ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರಂತೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಸಂಘದ ಇತರೆ ಬೇಡಿಕೆಗಳಿಗಳಿಗೂ ಅಸ್ತು ಅಂದಿರೋ ಸಿದ್ದರಾಮಯ್ಯ, ಜನವರಿ 18 ರಂದು ಕೈಗೊಂಡಿದ್ದ ಮುಷ್ಕರವನ್ನು ಕೈಬಿಡಬೇಕು ಅಂತ ಮನವಿ ಮಾಡಿದ್ದಾರೆ ಎನ್ನಲಾಗಿದೆ.