Tag: retired police

  • ಕಾರು ಸಮೇತ ಲಕ್ಷ ಲಕ್ಷ ಹಣ ಕದ್ದು ಪರಾರಿ – ಸಿನಿಮೀಯ ಶೈಲಿಯಲ್ಲಿ ಆರೋಪಿ ಅರೆಸ್ಟ್

    ಕಾರು ಸಮೇತ ಲಕ್ಷ ಲಕ್ಷ ಹಣ ಕದ್ದು ಪರಾರಿ – ಸಿನಿಮೀಯ ಶೈಲಿಯಲ್ಲಿ ಆರೋಪಿ ಅರೆಸ್ಟ್

    – ನಿವೃತ್ತ ಪೊಲೀಸ್‌ಗೆ ಚಾಲಾಕಿ ಚಾಲಕ ವಂಚನೆ

    ಚಿತ್ರದುರ್ಗ: ಕಾರು ಚಾಲಕರನ್ನೇ ನಂಬಿ ಎಷ್ಟೋ ಜನರು ದೂರದೂರಿಗೆ ಪ್ರಯಾಣ ಮಾಡುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಚಾಲಕ ಕಾರು ಸಮೇತ ಲಕ್ಷಾಂತರ ರೂ. ಕದ್ದು (Money Theft) ಪಾರಾರಿಯಾಗಿದ್ದ. ಪೊಲೀಸರು ಸಿನಿಮೀಯ ಶೈಲಿಯಲ್ಲಿ ಆರೋಪಿ ಬೆನ್ನತ್ತಿ ಹೆಡೆಮುರಿ ಕಟ್ಟಿದ್ದಾರೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿಯೊಂದಿಗೆ ಬಳ್ಳಾರಿಯಲ್ಲಿ ಜಮೀನು ಮಾರಾಟ ಮಾಡಲು ಬಾಡಿಗೆ ಕಾರಿನಲ್ಲಿ ತೆರಳಿದ್ದರು. ಅಲ್ಲಿ ಸರಿ ಸುಮಾರು 97 ಲಕ್ಷ ರೂ.ಗೆ ಜಮೀನು ಮಾರಾಟ ಮಾಡಿದ್ದು, ಕಾರಲ್ಲಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಈ ಮಧ್ಯೆ ಚಳ್ಳಕೆರೆಯಲ್ಲಿ ಊಟಕ್ಕೆಂದು ಕಾರು ನಿಲ್ಲಿಸಿ ತೆರಳಿದ್ದರು. ಆಗ ಕಾರು ಚಾಲಕ ಇವರಿಗೆ ಗೊತ್ತಿಲ್ಲದೇ 97 ಲಕ್ಷ ಹಣದೊಂದಿಗೆ ಕಾರು ಸಮೇತ ಪರಾರಿಯಾಗಿದ್ದ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ಈ ಬಗ್ಗೆ ನಿವೃತ್ತ ಎಸ್ಪಿ ಗುರುಪ್ರಸಾದ್ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಚ್ಚೆತ್ತ ಪೊಲೀಸರ ತಂಡ ಕಳ್ಳನ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ರಮೇಶ್ ಮೂಲತಃ ಆಂಧ್ರದ ಹಿಂದೂಪುರ ಮೂಲದವನಾದ ಹಿನ್ನೆಲೆ ಆಂಧ್ರದತ್ತ ಪ್ರಯಾಣ ಬೆಳೆಸಿ ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದರು. ಆಂಧ್ರದ ಬಳಿ ರಮೇಶ್ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಕೂಡಲೇ ಆರೋಪಿಯನ್ನು ಸೆರೆಹಿಡಿದ ಪೊಲೀಸರು 97 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಆರೋಪಿ ರಮೇಶ್ ಚಳ್ಳಕೆರೆ ಪಟ್ಟಣದ ಹೋಟೆಲ್ ಬಳಿಯಿಂದ ಕಾರು ಸಮೇತ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ಆತನ ಹೆಡೆಮುರಿಕಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ

  • ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಹಿಟ್ ಅಂಡ್ ರನ್‌ಗೆ ನಿವೃತ್ತ ಪೊಲೀಸ್ ಬಲಿ

    ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಹಿಟ್ ಅಂಡ್ ರನ್‌ಗೆ ನಿವೃತ್ತ ಪೊಲೀಸ್ ಬಲಿ

    ಆನೇಕಲ್: ಆಕ್ಟಿವಾ ಬೈಕ್‌ಗೆ ಕ್ಯಾಂಟರ್ (Cantor) ಡಿಕ್ಕಿ ಹೊಡೆದಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ (Attibele) ಟಿವಿಎಸ್ ಕ್ರಾಸ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಬೆಂಗಳೂರಿನ (Bengaluru) ಆಡುಗೋಡಿ (Adugodi) ಮೂಲದ ನಿವೃತ್ತ ಎಎಸ್‌ಐ ಪ್ರಕಾಶ್ (61) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಟಿವಿಎಸ್ ಕ್ರಾಸ್ ಬಳಿ ಆಕ್ಟಿವಾ ಬೈಕ್‌ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಳೆ ಧರ್ಮಪುರಿಯಿಂದ ಮಂಗಳೂರಿಗೆ ಹೊರಟಿದ್ದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್‌ಗೆ ಸಿಲುಕಿ ಪ್ರಕಾಶ್ ದೇಹ ಛಿದ್ರ ಛಿದ್ರಗೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಕ್ಯಾಂಟರ್ ಚಾಲಕ ದಿನೇಶ್ ಪಾರಾಗಲು ಯತ್ನಿಸಿದ್ದು, ಪೊಲೀಸರು ಚಾಲಕ ಹಾಗೂ ಕ್ಯಾಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.

    ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

  • ದೇವರ ದರ್ಶನಕ್ಕೆಂದು ಹೊರಟಿದ್ದ ನಿವೃತ್ತ ಪೊಲೀಸ್ ಶವವಾಗಿ ಪತ್ತೆ – ಮೃತರ ಬಳಿಯಿದ್ದ ಚಿನ್ನಾಭರಣ, ಹಣ ನಾಪತ್ತೆ

    ದೇವರ ದರ್ಶನಕ್ಕೆಂದು ಹೊರಟಿದ್ದ ನಿವೃತ್ತ ಪೊಲೀಸ್ ಶವವಾಗಿ ಪತ್ತೆ – ಮೃತರ ಬಳಿಯಿದ್ದ ಚಿನ್ನಾಭರಣ, ಹಣ ನಾಪತ್ತೆ

    ಬೆಂಗಳೂರು: ದೇವರ ದರ್ಶನಕ್ಕೆ ತೆರಳುವುದಾಗಿ ಹೊರಟ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಮೆಜೆಸ್ಟಿಕ್‌ನ (Majestic) ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರದ (Doddaballapura) ಮದುರನ ಹೊಸಹಳ್ಳಿ ನಿವಾಸಿ, ನಿವೃತ್ತ ಪೊಲೀಸ್ (Retired police) ಸಿಬ್ಬಂದಿ ಮುನಿ ಆಂಜನೇಯ ಮೃತ ವ್ಯಕ್ತಿ. ಗೆಳೆಯರ ಜೊತೆ ಧರ್ಮಸ್ಥಳಕ್ಕೆ (Dharmasthala) ತೆರಳುವುದಾಗಿ ಮುನಿ ಆಂಜನೇಯ ಸೋಮವಾರ 2 ಗಂಟೆಗೆ ಮನೆಯಿಂದ ಹೊರಟಿದ್ದರು. ಬಳಿಕ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (KSRTC bus stand) ಗೆಳೆಯರಿಗಾಗಿ ಕಾದು ಕುಳಿತಿದ್ದಾಗ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ. ಇದನ್ನೂ ಓದಿ: ಹೋಳಿ ಬಣ್ಣ ತಾಗಬಾರದೆಂದು ಇಡೀ ಮಸೀದಿಯನ್ನೇ ಟಾರ್ಪಲ್‌ನಿಂದ ಮುಚ್ಚಿದ್ರು

    ಮೃತರ ಬಳಿ ಇದ್ದ ಚಿನ್ನಾಭರಣ ಹಾಗೂ ಕ್ಯಾಶ್ ನಾಪತ್ತೆಯಾಗಿದ್ದು, ಸಾವಿನ ಹಿಂದೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

  • ನಿವೃತ್ತ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ

    ನಿವೃತ್ತ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ

    ವಿಜಯಪುರ: ಕರ್ತವ್ಯದಲ್ಲಿದ್ದಾಗ ಬೇರೆಯವರ ಸಮಸ್ಯೆ ಬಗೆಹರಿಸುತ್ತಿದ್ದ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ ಪ್ರಾರಂಭವಾಗಿದೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ನಿವೃತ್ತ ಎಎಸ್‍ಐ ಬಸವರಾಜ ಲಿಂಗದಳ್ಳಿ ಮನೆಗೆ ಕೊರಿಯರ್ ಮುಖಾಂತರ ಭಾನಾಮತಿಯ ವಸ್ತುಗಳು ಬರುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಭಾನಾಮತಿಯ ಕೊರಿಯರ್ ಕಾಟ ಶುರುವಾಗಿದ್ದು, ಇದುವರೆಗೆ ನಾಲ್ಕು ಕೊರಿಯರ್ ಬಂದಿವೆಯಂತೆ.

    ಕೊರಿಯರ್ ನಲ್ಲಿ ಗೊಂಬೆ, ಡಬ್ಬಣ, ಸೂಜಿ, ಅರಿಶಿಣ, ಕುಂಕುಮ, ಮೆಣಶಿನಕಾಯಿ, ನಿಂಬೆಹಣ್ಣು ಸೇರಿದಂತೆ ಇತರೇ ವಸ್ತುಗಳು ಬರುತ್ತವೆ. ಪರಿಚಯಸ್ಥರ ಹೆಸರಿನಲ್ಲಿ ಕೊರಿಯರ್ ಮೂಲಕ ಬಾನಾಮತಿ ವಸ್ತುಗಳು ಬರುತ್ತಿವೆ.

    ಈ ಸಂಬಂಧ ಮುದ್ದೇಬಿಹಾಳ ಠಾಣೆಗೆ ದೂರು ಸಲ್ಲಿಸಿದ್ರೂ ಖದೀಮರು ಸಿಗುತ್ತಿಲ್ಲವಂತೆ. ಪೊಲೀಸ್ ಇಲಾಖೆಗೆ ಇದೊಂದು ತಲೆನೋವು ಕೇಸ್ ಆಗಿ ಹೋದಿದ್ದು, ಬಸವರಾಜ ಲಿಂಗದಳ್ಳಿ ಕುಟುಂಬಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

  • ಅಡ್ಡಾದಿಡ್ಡಿ ಕಾರ್ ಚಲಾಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ

    ಅಡ್ಡಾದಿಡ್ಡಿ ಕಾರ್ ಚಲಾಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ

    ಮಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅವಾಂತರ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ನಿವೃತ್ತ ಎಸ್‍ಪಿ ಮಿತ್ರ ಹೆರಾಜೆ ಕಾರು ಚಲಾಯಿಸುತ್ತಾ ಕದ್ರಿಯಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ್ದು, ಹಲವು ವಾಹನಗಳಿಗೆ ಡಿಕ್ಕಿಯಾಗಿದ್ದು, ಸ್ಕೂಟರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಆಕ್ರೋಶಗೊಂಡ ಸಾರ್ವಜನಿಕರು ಕಾರಿಗೆ ಮುತ್ತಿಗೆ ಹಾಕಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ತಾನು ನಿವೃತ್ತ ಎಸ್‍ಪಿ ಎನ್ನುತ್ತಿದ್ದಂತೆ ಜನ ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಕೂಡಲೇ ಕದ್ರಿ ಮತ್ತು ಉರ್ವಾ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಲು ಲಘು ಲಾಠಿ ಬೀಸಿದ್ದಾರೆ. ಮಧ್ಯರಾತ್ರಿ 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಕದ್ರಿಯ ಮನೆಯೊಂದರಲ್ಲಿ ಮೆಹಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವಕರು ಸ್ಥಳದಲ್ಲಿ ಸೇರಿದ್ದಾರೆ.

    ಈ ಕುರಿತು ಕದ್ರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಡಿಕೇರಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಾನಸಿಕವಾಗಿ ನೊಂದವರೇ ಹೆಚ್ಚು ಇರುತ್ತಾರೆ. ಆದರೆ ಮಾಂಸಾಹಾರ ಸೇವನೆ ಮಾಡಬೇಡಿ ಎಂದು ಸಲಹೆ ನೀಡಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿ ನಿವಾಸಿ ಬೆಳ್ಳಿಯಪ್ಪ (64) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಳ್ಳಿಯಪ್ಪ ಕಳೆದ ಹಲವು ವರ್ಷಗಳಿಂದ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಡಾಕ್ಟರ್ ನೀವು ಮಾಂಸಾಹಾರ ಸೇವನೆ ಮಾಡಬಾರದು ಅಂತ ಸಲಹೆ ನೀಡಿದ್ದಾರೆ.

    ವೈದ್ಯರು ಮಾಂಸಾಹಾರವನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ ಬಳಿಕ ಬೆಳ್ಳಿಯಪ್ಪ ಮಾನಸಿಕ ಖಿನ್ನತೆಗೆ ಜಾರಿದ್ದರು. ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv