Tag: retired lokayuktha

  • ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಮೈಸೂರು: ರಾಜ್ಯಪಾಲರು ಕಾನೂನಾತ್ಮಕವಾಗಿನಡೆದುಕೊಂಡಿದ್ದಾರೆ. ಶಾಸಕರ ರೆಸಾರ್ಟ್ ರಾಜಕೀಯ ಮಾಡಿದರೆ ಮಾಡಲಿ. ರೆಸಾರ್ಟ್ ನವರಿಗೆ ಒಂದಷ್ಟು ದುಡ್ಡಾದರು ಆಗುತ್ತೆ ಅಂತ ನಿವೃತ್ತ ಲೋಕಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ರಾಜ್ಯ ರಾಜಕಾರಣದ ಬೆಳವಣಿಗೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯೇ ಬಿಜೆಪಿಯವರು ಬಹುಮತ ಸಾಬೀತು ಮಾಡಬೇಕು ಎಂಬ ಸುಪ್ರಿಂ ಆದೇಶ ಸ್ವಾಗಾತಾರ್ಹವಾಗಿದೆ. ಕುದುರೆ ವ್ಯಾಪಾರವನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಅಂದ್ರು.

    ರಾಜ್ಯಪಾಲರು ಬಿಜೆಪಿಯನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನ ಮಾಡಿದ್ದು ಸರಿ. ಇದರಲ್ಲಿ ಯಾವ ತಪ್ಪಿಲ್ಲ. ಆದರೆ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದು ತಪ್ಪು. ಇದನ್ನು ಸುಪ್ರಿಂ ಕೋರ್ಟ್ ಸರಿಪಡಿಸಿದೆ. ರಾಜ್ಯಪಾಲರ ನಡೆಯನ್ನು ರಾಜಕೀಯವಾಗಿ ಟೀಕೆ ಮಾಡುವುದು ಸುಲಭ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಅಂತ ಅವರು ಹೇಳಿದ್ರು.

    ಇವತ್ತಿನ ರಾಜ್ಯದ ರಾಜಕೀಯ ಪರಿಸ್ಥಿತಿಗೆ ಮತದಾರರೆ ಮೂಲ ಕಾರಣ. ಜಾತಿಗಾಗಿ, ಹಣಕ್ಕಾಗಿ ಮತಹಾಕಿರುವ ಪರಿಣಾಮ ಈ ರೀತಿ ಅಂತ್ರತರ ಸೃಷ್ಟಿಯಾಗಿದೆ ಇದು ಬೇಸರದ ಸಂಗತಿಯಾಗಿದೆ ಅಂತ ಹೆಗ್ಡೆ ಹೇಳಿದೆ.