Tag: retired KAS officer

  • ವ್ಯಾಪಾರಿ ಮೇಲೆ ಶೂಟೌಟ್ – ನಿವೃತ್ತ ಕೆಎಎಸ್ ಅಧಿಕಾರಿ ಮಗ ಸೇರಿ ಐವರ ಬಂಧನ

    ವ್ಯಾಪಾರಿ ಮೇಲೆ ಶೂಟೌಟ್ – ನಿವೃತ್ತ ಕೆಎಎಸ್ ಅಧಿಕಾರಿ ಮಗ ಸೇರಿ ಐವರ ಬಂಧನ

    ಬೆಂಗಳೂರು: ಕಳೆದ ತಿಂಗಳು ವ್ಯಾಪಾರಿಯೊಬ್ಬರ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಎಸ್ ಅಧಿಕಾರಿ ಮಗ ಸೇರಿ ಒಟ್ಟು ಐದು ಜನ ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.

    ನಿವೃತ್ತ ಕೆಎಎಸ್ ಅಧಿಕಾರಿ ಮಗ ಮೆಹತಾಬ್ ಬಂಧಿತ ಆರೋಪಿ. ಮೆಹತಾಬ್ ಜೊತೆ ಶೇಜ್ಹ್ ಜುಬೇರ್, ಮೆಹ್ತಾಬ್, ನಿಯಾಮತ್ ಉಲ್ಲಾ ಹಾಗೂ ಸೈಯದ್ ಇಸ್ರಾರ್ ಬಂಧಿತ ಆರೋಪಿಗಳು.

    ಮೇ 21ರಂದು ವ್ಯಾಪಾರಿ ಮಸೂದ್ ಅಲಿ ಅವರನ್ನು ಅಪಹಣ ಮಾಡಲು ಆರೋಪಿಗಳು ಮುಂದಾಗಿದ್ದರು. ಹೀಗಾಗಿ ಕಾರಿನಿಂದ ಗುದ್ದಿ ಮಸೂದ್ ಅವರನ್ನು ಕೆಳಗೆ ಬೀಳಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಮಸೂದ್ ಅವರ ಮೇಲೆ ಬಂಧಿತ ಆರೋಪಿಗಳು ಗುಂಡು ಹಾರಿಸಿದ್ದು, ಈ ಕುರಿತು ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.