Tag: Retired Employee

  • ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಫ್‍ಸಿಐನ ನಿವೃತ್ತ ಉದ್ಯೋಗಿ

    ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಫ್‍ಸಿಐನ ನಿವೃತ್ತ ಉದ್ಯೋಗಿ

    ಲಕ್ನೋ: ವ್ಯಕ್ತಿಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರಯಾಗರಾಜ್‍ನ ಶಾಹಗಂಜ್ ಪ್ರದೇಶದಲ್ಲಿ ನಡೆದಿದೆ.

    ಸ್ವರಣ್ ಸಿಂಗ್ (62) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ವರಣ್ ಅವರು ಭಾರತೀಯ ಆಹಾರ ನಿಗಮದ (ಎಫ್‍ಸಿಐ) ನಿವೃತ್ತ ಉದ್ಯೋಗಿಯಾಗಿದ್ದರು. ನಿವೃತ್ತ ಅಧಿಕಾರಿ ಬಾತ್ರೂಮ್‍ಗೆ ಬೀಗ ಹಾಕಿಕೊಂಡು ತನ್ನ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಪರವಾನಗಿ ಪಡೆದ 0.12 ಡಿಬಿಬಿಎಲ್ ಬಂದೂಕು ಆತ್ಮಹತ್ಯೆಗೆ ಬಳಸಲಾಗಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬೇಲ್‌ನಿಂದ ಹೊರಬಂದು ಮದುವೆಯಾಗು ಎಂದ – ರೌಡಿ ಅಂತ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಕೊಂದ

    ಪೊಲೀಸರ ಪ್ರಕಾರ, ಕೆಲವು ಆಸ್ತಿ ವಿವಾದಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಕುಟುಂಬಸ್ಥರು ಬಾತ್ ರೂಮ್‍ಗೆ ಧಾವಿಸಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಬೆಂಗ್ಳೂರಲ್ಲಿ ಲಾಕರ್ ಸಮೇತ 750 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳರು!

    ಬೆಂಗ್ಳೂರಲ್ಲಿ ಲಾಕರ್ ಸಮೇತ 750 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಕೈಚಳಕ ಮುಂದುವರಿದಿದ್ದು, ಈ ಬಾರಿ ರಾಜರಾಜೇಶ್ವರಿನಗರ ಬಳಿಯ ಬಿಎಚ್‍ಇಎಲ್ ಲೇಔಟ್ ಮನೆಯೊಂದರಲ್ಲಿ ಲಾಕರ್ ಸಮೇತ 750 ಗ್ರಾಂ ಗಿಂತಲೂ ಹೆಚ್ಚು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

    ಬಿಎಚ್‍ಇಎಲ್ ನಿವೃತ್ತ ನೌಕರ ಚಿಕ್ಕಣ್ಣ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಚಿಕ್ಕಣ್ಣ ಹಾಗೂ ಕುಟುಂಬಸ್ಥರು ಕಾರ್ಯಕ್ರಮ ನಿಮಿತ್ತ ಅರಸಿಕೆರೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

    ಇತ್ತ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಆಗಮಿಸಿದಾಗ ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಬಾಗಿಲು ತೆರೆದು ಮನೆಯ ಒಳಗೆ ಹೋಗುತ್ತಿದ್ದಂತೆ, ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಲಾಕರ್ ಸಮೇತ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.

    ವೃದ್ಧ ಚಿಕ್ಕಣ್ಣ ಹಾಗೂ ಅವರ ಪುತ್ರ ಮಂಜುನಾಥ್ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಈ ಕುರಿತು ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ತುಮಕೂರು: ನಿವೃತ್ತಿ ಸಂದರ್ಭದಲ್ಲಿ ಬಂದ ಹಣ ಕಿತ್ತುಕೊಂಡು ವೃದ್ಧ ತಂದೆಯನ್ನು ಮಕ್ಕಳು ಬೀದಿಗೆ ತಳ್ಳಿರೋ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಕೆಎಸ್‍ಆರ್‍ಟಿಸಿ ನಿವೃತ್ತ ನೌಕರರೊಬ್ಬರು ಮಕ್ಕಳಿಂದ ಮನೆ ಮಠ, ಪಿಂಚಣಿ ಹಣ ಎಲ್ಲವನ್ನೂ ಕಳೆದುಕೊಂಡು ಫುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದಾರೆ. ರಾಮಚಂದ್ರಪ್ಪ ಮಕ್ಕಳಿಂದ ದೌರ್ಜನ್ಯಕ್ಕೊಳಗಾಗಿ ಬೀದಿ ಪಾಲಾದವರು.

    ಕಳೆದ ಒಂದು ವಾರದಿಂದ ತುಮಕೂರಿನ ರೇಲ್ವೆ ನಿಲ್ದಾಣದ ಬಳಿಯ ಫುಟ್‍ಪಾತ್ ನಲ್ಲಿ ಮಲಗುತ್ತಿದ್ದಾರೆ. ದಾರಿ ಹೋಕರು, ತರಕಾರಿ ಮಾರುವವರು ಕೊಟ್ಟ ಹಣದಿಂದ ಊಟ ತಿಂಡಿ ಸೇವಿಸುತಿದ್ದಾರೆ. ಮೈಸೂರಿನ ಡಿಪೋ ನಂಬರ್ 2 ರಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದ ಇವರು ಐದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದಾರೆ. ಕೆಎಸ್‍ಆರ್‍ಟಿಸಿಯಲ್ಲಿ ಇವರ ದಾಖಲಾತಿ ಸಂಖ್ಯೆ-1926 ಆಗಿರುತ್ತದೆ.

    ನಿವೃತ್ತಿ ಸಂದರ್ಭದಲ್ಲಿ ಬಂದಂತಹ 20 ಲಕ್ಷ ರೂಪಾಯಿ ಹಾಗೂ ಪಿಂಚಣಿ ಹಣ ಬರುವ ದಾಖಲೆ ಎಲ್ಲವನ್ನೂ ಮಕ್ಕಳು ಕಿತ್ತುಕೊಂಡಿದ್ದಾರೆ ಎಂದು ರಾಮಚಂದ್ರಪ್ಪ ಹೇಳುತ್ತಾರೆ. ಮೈಸೂರಿನ ನಜರಾಬಾದ್ ನಿವಾಸಿಯಾದ ರಾಮಚಂದ್ರಪ್ಪ ಇದೀಗ ಕೆಲಸ ಹುಡುಕಿಕೊಂಡು ತುಮಕೂರಿಗೆ ಬಂದಿದ್ದಾರೆ.

    ಇವರು ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಲ್ಲಳ್ಳಿ ಗ್ರಾಮದವರಾಗಿದ್ದು, ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ ಮೈಸೂರಿನಲ್ಲೇ ಮನೆ ಕಟ್ಟಿಕೊಂಡು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೂ ನಾನು ಬೀದಿಗೆ ಬಂದಿದ್ದೇನೆ ಎಂದು ರಾಮಚಂದ್ರಪ್ಪ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾರೆ.