Tag: retired

  • ದೇಶ ಸೇವೆ ಮಾಡಿ ವಾಪಸಾದ ಯೋಧರಿಗೆ ಅದ್ದೂರಿ ಸ್ವಾಗತ

    ದೇಶ ಸೇವೆ ಮಾಡಿ ವಾಪಸಾದ ಯೋಧರಿಗೆ ಅದ್ದೂರಿ ಸ್ವಾಗತ

    ರಾಮನಗರ/ಹಾಸನ: ದೇಶ ಸೇವೆ ಮಾಡಿ ತವರಿಗೆ ವಾಪಸಾದ ಯೋಧರಿಗೆ (Soldier) ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ರಾಮನಗರ (Ramanagara) ಮತ್ತು ಹಾಸನದಲ್ಲಿ (Hassan) ಯೋಧರಿಗೆ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿ ಬರಮಾಡಿಕೊಂಡಿದ್ದಾರೆ.

    ಭಾರತೀಯ ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ರಾಮನಗರದ ಆರ್ಕೇಶ್ವರ ಬಡಾವಣೆಯ ಹೆಚ್ ಶಂಕರ್ ಅವರಿಗೆ ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಶಂಕರ್ ಅವರನ್ನು ಬರ ಮಾಡಿಕೊಂಡ ಸಾರ್ವಜನಿಕರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ಶಂಕರ್ ಅವರ ಪರವಾಗಿ ಘೋಷಣೆಗಳನ್ನು ಕೂಗಿ ಅಭಿನಂದಿಸಿದರು.

    ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮನೆಯವರೆಗೆ ಕರೆತಂದರು. ಎಂಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದ ಶಂಕರ್ ತ್ರಿವರ್ಣ ಧ್ವಜ ಹಿಡಿದು ಸಾರ್ವಜನಿಕರ ಗೌರವ ಸ್ವೀಕರಿಸಿದರು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಮೆರವಣಿಗೆಯಲ್ಲಿ ಸಾಥ್ ನೀಡಿದರು.

    20 ವರ್ಷ ದೇಶ ಸೇವೆ ಮಾಡಿ ಊರಿಗೆ ವಾಪಸ್ ಬಂದ ಸೈನಿಕನಿಗೆ ಸ್ನೇಹಿತರು ಹಾಗೂ ಸಂಬಂಧಿಕರು ಅದ್ದೂರಿ ಸ್ವಾಗತ ಕೋರಿದ್ದಾರೆ. ಹಾಸನ ತಾಲೂಕಿನ, ಅಂಬುಗ ಗ್ರಾಮದ ಚಿಕ್ಕೇಗೌಡ ಹಾಗೂ ಸಣ್ಣಮ್ಮ ದಂಪತಿಯ ಎರಡನೇ ಪುತ್ರ ದಿನೇಶ್ 2004 ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದು ಪಂಜಾಬ್, ಜಮ್ಮು ಕಾಶ್ಮೀರ ಸೇರಿ ಹಲವೆಡೆ ದೇಶ ಸೇವೆ ಸಲ್ಲಿಸಿದ್ದಾರೆ. 20 ವರ್ಷ ಸೇವೆ ಪೂರೈಸಿ ಭಾನುವಾರ ಹಾಸನದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

    ದೇಶದ ಗಡಿ ಕಾಯ್ದು ತವರಿಗೆ ಮರಳಿದ ದಿನೇಶ್‌ಗೆ ಪತ್ನಿ ವನಿತಾ, ಮಗಳು ಐಶ್ವರ್ಯ, ಕುಟುಂಬ ಸದಸ್ಯರು ಆರತಿ ಬೆಳಗಿ ವೀರ ಪುತ್ರನನ್ನು ತವರಿಗೆ ಸ್ವಾಗತ ಮಾಡಿದರು. ಕೊಡಗು ಡಿಹೆಚ್‌ಒ ಡಾ. ಸತೀಶ್ ಹಾರ ಹಾಕಿ ಶಾಲು ಹೊದಿಸಿ ಸ್ವಾಗತ ಕೋರಿದರು. ರೈಲ್ವೇ ನಿಲ್ದಾಣದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ದೇಶ ಪ್ರೇಮದ ಘೋಷಣೆ ಕೂಗಿ ಹಾಸನದ ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

    ದೇಶ ಸೇವೆಗೆ ಸೇರಿದ ನಂತರ ದಿನೇಶ್ ಎಂಎ ಪದವಿ ಪಡೆದಿದ್ದಾರೆ. ಕರ್ತವ್ಯ ಪೂರೈಸಿ ವಾಪಸ್ ಬಂದ ಸೈನಿಕನಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ ಗೆಳೆಯರು ದೇಶಾಭಿಮಾನ ಮೆರೆದರು. ಇದನ್ನೂ ಓದಿ: ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ – ಮಣಿಪುರ ಸಿಎಂ ಬಿರೇನ್ ಸಿಂಗ್ ಅನುಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ

    20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ

    -ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

    ಯಾದಗಿರಿ: 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸೈನಿಕನಿಗೆ ಹುಟ್ಟೂರಾದ ಯಾದಗಿರಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರು ಗ್ರಾಮದ ನಿವಾಸಿಯಾದ ವಿರೇಶ್ ಗುಳಬಾಳ ಅವರು 20 ವರ್ಷಗಳ ಕಾಲ ಜಮ್ಮುಕಾಶ್ಮೀರ,ರಾಜಸ್ತಾನ ಹಾಗೂ ವಿವಿಧೆಡೆ ಗಡಿಭಾಗದಲ್ಲಿ ಜೀವದ ಹಂಗು ತೊರೆದು ಶತ್ರುಗಳ ವಿರುದ್ಧ ಹೋರಾಟ ನಡೆಸಿ ದೇಶ ಸೇವೆ ಮಾಡಿದ್ದಾರೆ. ಇದನ್ನೂ ಓದಿ:  ಹೈದರಾಬಾದ್ ವಿರುದ್ಧ ಕೋಲ್ಕತ್ತಾಗೆ 6 ವಿಕೆಟ್ ಜಯ – ಪ್ಲೇ ಆಫ್ ಕನಸು ಜೀವಂತ

    ಸದ್ಯ ಅವರು ಸೇನೆಯಿಂದ ನಿವೃತ್ತಿಹೊಂದಿದ್ದು, ಈ ಹಿನ್ನೆಲೆ ರಾಜನಕೊಳ್ಳುರು ಗ್ರಾಮಸ್ಥರು ಮತ್ತು ಗೆಳೆಯರ ಬಳಗದಿಂದ ಹುಣಸಗಿ ಪಟ್ಟಣದಿಂದ ರಾಜನಕೊಳ್ಳುರು ಗ್ರಾಮದವರಗೆ ಸುಮಾರು 7 ಕಿಮೀ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ರಾಜನಕೊಳ್ಳುರು ಗ್ರಾಮದಲ್ಲಿ ವಿರೇಶ್ ಅವರಿಗೆ ಹಾಗೂ ಅವರ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

  • ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ

    ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ

    ವಿಜಯಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಊರಿಗೆ ಬಂದ ವೀರ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ರಾಘವೇಂದ್ರ ಸಂಗಪ್ಪ ಕ್ಷತ್ರಿಯ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಬಸವೇಶ್ವರ ಸರ್ಕಲ್ ಮೂಲಕ ಗಣಪತಿ ಸರ್ಕಲ್ ವರೆಗೂ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

    ನಂತರ ವೀರೇಶ್ವರ ಮಠದಲ್ಲಿ ರಾಘವೇಂದ್ರ ಕ್ಷತ್ರಿಯ ಅವರಿಗೆ ಸನ್ಮಾನ ಮಾಡಿ, ಇನ್ನುಳಿದ ವೀರ ಯೋಧರಿಗೆ ಲಕ್ಷೀ ವೇಂಕಟೇಶ್ವರ ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು. ನಿವೃತ್ತಿಗೊಂಡು ಊರಿಗೆ ಆಗಮಿಸಿದ ಯೋಧನಿಗೆ ಮೆರವಣಿಗೆ ವೇಳೆ ಸುಮಂಗಲೆಯರು ಆರತಿ ಎತ್ತಿದರು. ಇನ್ನೊಂದೆಡೆ ಸ್ಥಳೀಯರು ಹೂಮಳೆ ಸುರಿಸಿ ಸ್ವಾಗತಿಸಿದರು.

  • ಕನಸನ್ನು ನನಸು ಮಾಡಲು ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ – ವಿನಯ್ ಕುಮಾರ್ ಭಾವುಕ ನುಡಿ

    ಕನಸನ್ನು ನನಸು ಮಾಡಲು ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ – ವಿನಯ್ ಕುಮಾರ್ ಭಾವುಕ ನುಡಿ

    – ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ
    – ಸಚಿನ್ ಮಾರ್ಗದರ್ಶನ ಸಿಕ್ಕಿದ್ದು ನನ್ನ ಭಾಗ್ಯ

    ಬೆಂಗಳೂರು: ಭಾರತ ತಂಡದ ಮಾಜಿ ವೇಗದ ಬೌಲರ್ ಕರ್ನಾಟಕದ ಹೆಮ್ಮೆಯ ಕ್ರಿಕಟ್ ಪಟು ಆರ್ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ತನ್ನ ನಿವೃತ್ತಿ ಪತ್ರವನ್ನು ಟ್ವೀಟ್ ಮಾಡಿರುವ ವಿನಯ್, ಕಳೆದ 25 ವರ್ಷಗಳಿಂದ ಕ್ರಿಕೆಟ್‍ನಲ್ಲಿ ಹಳವು ಏರಿಳಿತಗಳನ್ನು ಕಂಡಿದ್ದೇನೆ ಇದೀಗ ಮಿಶ್ರಭಾವನೆಗಳ ಮೂಲಕ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದು ನನ್ನ ಪಾಲಿಗೆ ಸುಲಭವಾದ ವಿಷಯವಲ್ಲ ಆದರೆ ಎಲ್ಲ ಕ್ರೀಡಾಪಟುಗಳು ಒಂದಲ್ಲ ಒಂದು ದಿನ ನಿವೃತ್ತಿ ಹೇಳಲೇ ಬೇಕು ಇಂದು ನಾನು ಅದೇ ಹಾದಿಯಲ್ಲಿ ತೆರಳಿ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

    ನನ್ನ ಕ್ರಿಕೆಟ್ ಜೀವನದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅದೃಷ್ಟ ನನಗೆ ದೊರಕಿದ್ದು, ನನ್ನಿಂದಾಗುವ ಸರ್ವಸ್ವವನ್ನು ತಂಡಕ್ಕೆ ನೀಡಿದ್ದೇನೆ. ನನ್ನ ಕ್ರೀಡಾ ಜೀವನದ ದಾರಿಯಲ್ಲಿ ಹಲವು ಮರೆಯಾಲಾಗದ ಘಟನೆಗಳು ನನ್ನ ಮನಸಿನಲ್ಲಿ ತುಂಬಿಕೊಂಡಿದೆ. ನಾ ಕಂಡ ಕನಸನ್ನು ನನಸಾಗಿಸಲು ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದೆ. ಈ ಸಂದರ್ಭ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ರಾಜ್ಯ ತಂಡವನ್ನು ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟು ನನ್ನನ್ನು ಉತ್ತಮ ಕ್ರಿಕೆಟ್ ಆಟಗಾರನಾಗುವಂತೆ ಮಾಡಿದೆ. ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಎಲ್ಲ ಪ್ರಕಾರದ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದೇನೆ.

    ದೇಶದ ಪರ ಆಡುವುದು ಪತಿಯೊಬ್ಬ ಕ್ರೀಡಾಪಟುವಿನ ಕಟ್ಟಕಡೆಯ ಕನಸಾಗಿದೆ. ಅದನ್ನು ಸಾಧಿಸಲು ಸಾಧ್ಯವಾಗಿರುವುದು ಸಂತಸ ತಂದಿದೆ. ಭಾರತ ತಂಡದ ನೀಲಿ ಜೆರ್ಸಿ ಧರಿಸಿ ಎದುರಾಳಿಗಳ ವಿರುದ್ಧ ಆಟ ವಾಡಿರುವ ನೆನಪುಗಳು ಸದಾ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ರಿಕೆಟ್ ನನ್ನ ಪಾಲಿಗೆ ಆಟದೊಂದಿಗೆ ಅದು ನನ್ನ ಜೀವನ ಕೂಡ ಆಗಿತ್ತು. ಅನೇಕ ಅಂಶಗಳನ್ನು ಕ್ರಿಕೆಟ್ ನನಗೆ ಕಲಿಸಿದೆ. ಹಲವು ಏರಿಳಿತಗಳು, ಯಶಸ್ಸು ವೈಫಲ್ಯ, ಒಳ್ಳೆಯ ದಿನಗಳು, ಕೆಟ್ಟ ದಿನಗಳು. ಇವೆಲ್ಲವೂ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರುವಲ್ಲಿ ನೆರವಾಗಿದೆ ಎಂದು ತಿಳಿಸಿದ್ದಾರೆ.

    ಐಪಿಎಲ್ ಬಗ್ಗೆ ಬರೆದುಕೊಂಡಿರುವ ವಿನಯ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಬೆರೆತು ಆಡಿದ್ದೇನೆ ಅವರಿಗೆ ಧನ್ಯವಾದ. ಅದೇ ರೀತಿ ಹಲವು ಖ್ಯಾತನಾಮ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಆಡಿದ್ದೇನೆ. ಅವರೆಲ್ಲರಿಂದ ಹಲವು ಅನುಭವಗಳನ್ನು ಕಲಿತಿದ್ದೇನೆ. ನನ್ನ ಕ್ರಿಕಟ್ ಹಾದಿಯಲ್ಲಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನವು ಲಭಿಸಿತ್ತು ಇದು ನನ್ನ ಭಾಗ್ಯ ಎಂದು ಉಲ್ಲೇಖಿಸಿದರು.

    ಇವೆಲ್ಲ ಸಂಗತಿಗಳೊಂದಿಗೆ ತನ್ನ ಜೀವನದ ಜೊತೆಯಾಗಿರುವ ಹೆತ್ತವರು, ಪತ್ನಿ ರಿಚಾ, ಸ್ನೇಹಿತರು, ಸಹ ಆಟಗಾರರು, ದಾವಣೆಗೆರೆ ಯುನೈಟೆಡ್ ಕ್ರಿಕೆಟರ್ಸ್ ಹಾಗೂ ತರಬೇತುದಾರರ ಕೊಡುಗೆಯನ್ನು ವಿನಯ್ ಕುಮಾರ್ ಸ್ಮರಿಸಿಕೊಂಡು ವಿದಾಯವನ್ನು ತಿಳಿಸಿದ್ದಾರೆ.

    ವಿನಯ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಒಟ್ಟು 504 ವಿಕೆಟ್ (139 ಪಂದ್ಯ) ಪಡೆದಿದ್ದು, ರಣಜಿ ಪಂದ್ಯಗಳಲ್ಲಿ 442 ವಿಕೆಟ್‍ಕಬಳಿಸಿದ್ದಾರೆ. 2011-12 ರಲ್ಲಿ ಭಾರತ ತಂಡದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಭಾರತ ಪರ ಒಟ್ಟು 31 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

     

  • ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ- ಧೋನಿ ನಿವೃತ್ತಿ ಎಂದವ್ರಿಗೆ ಸಾಕ್ಷಿ ತಿರುಗೇಟು

    ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ- ಧೋನಿ ನಿವೃತ್ತಿ ಎಂದವ್ರಿಗೆ ಸಾಕ್ಷಿ ತಿರುಗೇಟು

    ನವದೆಹಲಿ: ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಎಂ.ಎಸ್ ಧೋನಿ ಅವರ ನಿವೃತ್ತಿಯ ಬಗ್ಗೆ ಮಾತನಾಡಿರುವರ ವಿರುದ್ಧ ಪತ್ನಿ ಸಾಕ್ಷಿ ಧೋನಿ ಕಿಡಿಕಾರಿದ್ದಾರೆ.

    ಇತ್ತೀಚೆಗೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಧೋನಿ ಅವರು ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಬಿಟ್ಟರೇ ಧೋನಿ ಮತ್ತೆ ಯಾವ ಪಂದ್ಯವನ್ನು ಆಡಿಲ್ಲ. ಈ ಕಾರಣಕ್ಕೆ ಅವರ ವಿದಾಯದ ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದೆ.

    ಧೋನಿ ಅವರ ನಿವೃತ್ತಿ ವಿಚಾರ ಮುನ್ನೆಲೆಯಲ್ಲಿ ಇದ್ದಾಗಲೇ ಬುಧವಾರ ಸಂಜೆ ಟ್ವಿಟ್ಟರ್‍ನಲ್ಲಿ ಧೋನಿ ನಿವೃತ್ತಿ ಬಗ್ಗೆ #DhoniRetires ಎಂಬ ಹ್ಯಾಸ್‍ಟ್ಯಾಗ್ ಬಳಸಿ ಟ್ರೆಂಡ್ ಹುಟ್ಟುಹಾಕಲಾಗಿತ್ತು. ಇದನ್ನು ಕಂಡು ಕೋಪಗೊಂಡ ಸಾಕ್ಷಿ, ಇದೊಂದು ಸಳ್ಳು ಸುದ್ದಿ. ಈ ಲಾಕ್‍ಡೌನ್ ಸಮಯದಲ್ಲಿ ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಂತರ ಈ ಟ್ವೀಟ್ ಡಿಲೀಟ್ ಕೂಡ ಮಾಡಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿದಿರುವ ಧೋನಿ, ಮಗಳು ಹಾಗೂ ಪತ್ನಿಯ ಜೊತೆ ತಮ್ಮ ತೋಟದ ಮನೆಯಲ್ಲಿ ಕಾಲಕಾಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೊಸ ಲುಕ್‍ನಲ್ಲಿ ಫಾರ್ಮ್ ಹೌಸ್ ನಲ್ಲಿ ಕಾಣಿಸಿಕೊಂಡ ಫೋಟೋಗಳು ಸಖತ್ ವೈರಲ್ ಆಗಿದ್ದವು. ಜೊತೆಗೆ ವಿಡಿಯೋದಲ್ಲಿ ಪುಟ್ಟ ಮಗಳು ಜೀವಾ ಜೊತೆ ಆಟವಾಡುತ್ತಿರುವುದು ಕಂಡುಬಂದಿತ್ತು.

    ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ನಂತರ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದಾದ ನಂತರ ಭಾರತೀಯ ಸೇನೆಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ಧೋನಿ. ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದಕ್ಕಾಗಿ ಚೆನ್ನೈಗೆ ಬಂದು ಅಭ್ಯಾಸ ಕೂಡ ಮಾಡಿದ್ದರು. ಆದರೆ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಮುಂದಕ್ಕೆ ಹೋಗಿದೆ.

    ಈ ನಡುವೆ ಧೋನಿ ಮತ್ತೆ ಕ್ರಿಕೆಟ್‍ಗೆ ಮರಳುತ್ತಾರ ಇಲ್ಲ ವಿದಾಯ ಘೋಷಿಸುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಈ ವಿಚಾರವಾಗಿ ಮಾತನಾಡಿದ್ದ ವಿರೇಂದ್ರ ಸೆಹ್ವಾಗ್, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದರು ಜೊತೆಗೆ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಧೋನಿ ಮತ್ತೆ ಟೀಂ ಇಂಡಿಯಾದ ಮರಳುವುದು ಅನುಮಾನ ಎಂದು ಹೇಳಿದ್ದರು.

  • ಹೆಚ್‍ಡಿಕೆ ರಾಜಕೀಯ ನಿವೃತ್ತಿಯ ಮಾತು

    ಹೆಚ್‍ಡಿಕೆ ರಾಜಕೀಯ ನಿವೃತ್ತಿಯ ಮಾತು

    ಹಾಸನ: ಮಾಜಿ ಸಿಎಂ ಹೆಚ್.ಡಿ.ಕು`ಮಾರಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

    ಇಂದು ಕೆ.ಆರ್.ಪೇಟೆಗೆ ತೆರಳೋ ಮಾರ್ಗ ಮಧ್ಯೆ ಹಾಸನಕ್ಕೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಕೊಟ್ಟ ಅವಕಾಶದಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಇವತ್ತು ಒಳ್ಳೆಯವರಿಗೆ ರಾಜಕಾರಣ ಇಲ್ಲ. ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಅಧಿಕಾರದ ಅಪೇಕ್ಷೆಯಿಂದ ಕುತಂತ್ರದ ರಾಜಕೀಯ ನಡೆಯುತ್ತಿದೆ. ಈ ರಾಜಕೀಯ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕು ಎಂದು ಅಂದುಕೊಂಡಿದ್ದೆ. ನನಗೆ ರಾಜಕೀಯದಲ್ಲಿ ಮುಂದುವರಿಯಲೇ ಬೇಕೆಂಬ ಹುಚ್ಚಿಲ್ಲ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದರು.

    ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಜನರು ನೋಡಿದ್ದು, ಅವರೇ ತೀರ್ಮಾನ ಮಾಡುತ್ತಾರೆ. ನಮ್ಮದು ಪಾಪದ ಸರ್ಕಾರ ಇತ್ತು ಈಗ ಪವಿತ್ರದ ಸರ್ಕಾರ ನಡೆಸುತ್ತಿದ್ದಾರೆ. ನಡೆಸಲಿ ಕಾದು ನೋಡೋಣ, ಯಾರು ಯಾರನ್ನು ಪವಿತ್ರ ಮಾಡುತ್ತಾರೆ. ನಾನು ಮಾತನಾಡೋಕೆ ಏನಿದೆ, ಏನೂ ಮಾತನಾಡಲ್ಲ ಎನ್ನುತ್ತಲೇ ಕುಮಾರಸ್ವಾಮಿ ಅವರು ಸರ್ಕಾರವನ್ನು ಕುಟುಕಿದರು.

  • ನಿವೃತ್ತಿ ಹಣ ಕೊಟ್ಟಿಲ್ಲವೆಂದು ಸಹೋದರಿಯರ ಜೊತೆ ಸೇರಿ ಅಪ್ಪನನ್ನೇ ಕೊಂದ!

    ನಿವೃತ್ತಿ ಹಣ ಕೊಟ್ಟಿಲ್ಲವೆಂದು ಸಹೋದರಿಯರ ಜೊತೆ ಸೇರಿ ಅಪ್ಪನನ್ನೇ ಕೊಂದ!

    ಹೈದರಾಬಾದ್: ನಿವೃತ್ತಿ ಹಣ ನೀಡಿಲ್ಲವೆಂದು ರಾಡ್ ನಿಂದ ಹೊಡೆದು ಮಗ ತನ್ನ ಇಬ್ಬರು ಸಹೋದರಿಯರ ಜೊತೆ ಸೇರಿ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

    ಈ ಘಟನೆ ತೆಲಂಗಾಣದ ರಾಚಕೊಂಡ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿ ತಂದೆಯನ್ನು ಕೃಷ್ಣಾ ಎಂದು ಗುರುತಿಸಲಾಗಿದೆ. ಇವರು ತನ್ನ 22 ವರ್ಷದ ತನ್ನ ಮಗ ತರುಣ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿಂದಲೇ ಕೊಲೆಗೀಡಾಗಿದ್ದಾರೆ.

    ಕೃಷ್ಣ ಅವರು ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಹೀಗಾಗಿ ಅವರಿಗೆ ಸರ್ಕಾರ 6 ಲಕ್ಷ ನಿವೃತ್ತಿ ಹಣವನ್ನು ನೀಡಿತ್ತು. ಇದರ ಜೊತೆಗೆ ತಮ್ಮ ಹೆಸರಿನಲ್ಲಿದ್ದ ಫ್ಲಾಟ್ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ವಿಚಾರವನ್ನು ತಿಳಿದ ಮಗ ತುರುಣ್ ಆ ಹಣದಲ್ಲಿ ತನಗೆ ಹಾಗೂ ಇಬ್ಬರು ಸಹೋದರಿಯರಿಗೆ ಪಾಲು ನೀಡಬೇಕೆಂದು ತಗಾದೆ ತೆಗೆದಿದ್ದಾನೆ ಅಂತ ವನಸ್ತಲಿಪುರಂನ ಎಸಿಪಿ ನಾರಾಯಣ ಅವರು ಘಟನೆ ಬಗ್ಗೆ ತಿಳಿಸಿದ್ದಾರೆ.

    ಮಗನ ಮಾತಿನಂತೆ ಕೃಷ್ಣ ಅವರು ತನ್ನಲ್ಲಿದ್ದ ಹಣದಲ್ಲಿ 2 ಲಕ್ಷ ಉಳಿಸಿಕೊಂಡು ಉಳಿದ ಹಣವನ್ನು ಮಕ್ಕಳಿಗೆ ನೀಡಿದ್ದಾರೆ. ಇದಾದ ಕೆಲ ತಿಂಗಳ ಬಳಿಕ ತರುಣ್ ತನ್ನ ತಂದೆಯ ಬಳಿ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ. ಈ ವೇಳೆ ಕೃಷ್ಣಾ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ತರುಣ್, ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆಯ ತಲೆಗೆ ಹೊಡೆದಿದ್ದಾನೆ. ತಂದೆಯ ಮೇಲೆ ಹಲ್ಲೆ ನಡೆಸಲು ತರುಣ್ ಸಹೋದರಿಯರು ಸಹಕರಿಸಿದ್ದಾರೆ.

    ಪರಿಣಾಮ ತೀವ್ರ ರಕ್ತಸ್ರಾವವಾಗಿ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಕೂಡಲೇ ಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅವರು ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಖರ್ಗೆ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾ ಸ್ಪರ್ಧೆ?

    ಖರ್ಗೆ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾ ಸ್ಪರ್ಧೆ?

    ಕಲಬುರಗಿ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ, ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಹೇಗಾದರೂ ಸೋಲಸಲೇಬೇಕೆಂದು ಬಿಜೆಪಿ ಮಾಸ್ಟರ್ ಮೈಂಡ್ ಪ್ಲಾನ್ ಸಿದ್ದಪಡಿಸಿದೆ. ಹೀಗಾಗಿ ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾರವರನ್ನು ಬಿಜೆಪಿಯಿಂದ ಕಣಕ್ಕಿಳಿಸಲು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿದು ಬಂದಿದೆ.

    ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರತ್ನಪ್ರಭಾರವರನ್ನು ಅಭ್ಯರ್ಥಿಯನ್ನಾಗಿಮಾಡಿದರೇ, ಎಡ ಸಮುದಾಯದ ಮತಗಳ ಜೊತೆಗೆ ಪ್ರಜ್ಞಾವಂತ ಮತದಾರರನ್ನು ಸೆಳೆಯಬಹುದು ಎಂಬುದು ಬಿಜೆಪಿಯ ಲೆಕ್ಕಚಾರವಾಗಿದೆ. ಅಲ್ಲದೇ ರತ್ನಪ್ರಭಾರವರು ಸಹ ಈಗಾಗಲೇ ಹಲವು ಬಾರಿ ಕಲಬುರಗಿ ಭೇಟಿ ನೀಡಿದ್ದಾರೆ. ಅಲ್ಲದೇ ಮತ್ತೆ ಸೆಪ್ಟಂಬರ್ ನಲ್ಲಿ ಭೇಟಿ ನೀಡುತ್ತಿದ್ದಾರೆ.

    ರತ್ನಪ್ರಭಾರ ಪದೇ ಪದೇ ಭೇಟಿಯಿಂದಾಗಿ, ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸುತ್ತಾರೆನ್ನು ಚರ್ಚೆ ಇದೀಗ ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದು, ಈ ಮೂಲಕ ಮೂಲಕ ಖರ್ಗೆ ಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಸಜ್ಜಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ತುಮಕೂರು: ಎಂಜಿನಿಯರ್, ಡಾಕ್ಟರ್ ಆಗಿ ಚೆನ್ನಾಗಿ ಸಂಪಾದನೆ ಮಾಡ್ಬೇಕು. ಲೈಫನ್ನ ಎಂಜಾಯ್ ಮಾಡ್ಬೇಕು. ಮಕ್ಕಳು ಮೊಮ್ಮಕ್ಕಳಿಗೂ ಕೂಡಿಡಬೇಕು ಅಂತಲೇ ಎಲ್ಲರ ಕನಸು ಕಾಣ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ.ಪ್ರಭಾಕರ್ ರೆಡ್ಡಿ ಅವರು ಮಾತ್ರ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ದಾನ ಮಾಡ್ತಿದ್ದಾರೆ.

    80 ವರ್ಷದ ಡಾ. ಪ್ರಭಾಕರ್ ರೆಡ್ಡಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ್ದಾರೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ವೈದ್ಯ ವೃತ್ತಿಗಾಗಿ ಲಂಡನ್‍ಗೆ ಹೋಗಿರೋ ಇವರು ಸದ್ಯ ನಿವೃತ್ತಿಯಾಗಿದ್ದಾರೆ.

    ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು ಕಡುಬಡತನದಲ್ಲಿ ಬೆಳೆದ ಇವರಿಗೆ ಡಾಕ್ಟರ್ ಆಗೋದು ಕನಸು. 1965ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾರೆ. ಅಂದಿನ ಕಾಲದಲ್ಲಿ 240 ರೂಪಾಯಿ ಶುಲ್ಕ ಕಟ್ಟಲು ಸಾಧ್ಯವಾಗದೆ ಪರಿತಪಿಸಿದ್ದರು. ಸ್ನೇಹಿತರ ಬಳಿ ಸ್ವಲ್ಪ ಹಣ ಸಿಕ್ಕರೂ ಉಳಿದ ಹಣಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿ, ಎಂಬಿಬಿಎಸ್ ಪಾಸ್ ಮಾಡಿದ್ರು. ಆಮೇಲೆ ಕೆಲ ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್‍ಗೆ ಹೋಗಿ ಅಲ್ಲಿಯೇ ನೆಲೆಸಿದ್ದರು.

    ತಮ್ಮ ಕಷ್ಟದ ದಿನಗಳನ್ನ ನೆನಸಿಕೊಳ್ಳುವ ಪ್ರಭಾಕರ ರೆಡ್ಡಿ ಅವರು, ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತಿದ್ದಾರೆ. ವಿದ್ಯಾರ್ಥಿ ವೇತನ, ಶಾಲಾ ಕಾಲೇಜ್‍ಗಳಿಗೆ ಕುಡಿಯುವ ನೀರು, ಬೆಂಚು, ಕ್ರೀಡಾಪಟುಗಳಿಗೆ ಸಮವಸ್ತ್ರವನ್ನ ನೀಡ್ತಿದ್ದಾರೆ. ಪಾವಗಡದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಾಡಿಗೆಗೆ ನೀಡಿದ್ದಾರೆ.

    ಬೆಂಗಳೂರಿನಲ್ಲಿದ್ದ 1.5 ಕೋಟಿ ರೂಪಯಿ ಮನೆ ಹಾಗೂ ಲಂಡನ್ನಿನಲಿದ್ದ ಸುಮಾರು 2 ಕೋಟಿ ರೂಪಾಯಿ ಮನೆಯನ್ನು ಮಾರಿದ್ದು, ಈಗ ಬಾಡಿಗೆ ಮನೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿನ ಜೊತೆಗೆ ಪರಿಸರ ಕಾಳಜಿ, ಸ್ವಚ್ಚತೆ, ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಸಹ ಮಾಡ್ತಿದ್ದಾರೆ.

    https://www.youtube.com/watch?v=GYvWiQGjB94

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ

    ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ

    ಬೆಂಗಳೂರು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲವೆಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

    ನಾನು ಇನ್ನು ಮುಂದೆ ಸಕ್ರೀಯವಾಗಿ ರಾಜಕಾರಣದಲ್ಲಿ ಇರುವುದಿಲ್ಲ, ಬೇರೆ ರೂಪದಲ್ಲಿ ಸಮಾಜಸೇವೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮಾಡುವ ಕೆಲಸ ಮಾಡಿ ಆಗಿದೆ, ಮಾಡಿದ ಕೆಲಸದಲ್ಲಿ ತೃಪ್ತಿ ಪಡೆದುಕೊಂಡು ಜೀವನ ಸಾಗಿಸುತ್ತೇನೆ ಎಂದು  ಹೇಳಿಕೆ ನೀಡಿದ್ದಾರೆ.

    ಮೈಸೂರು ಸಂಸ್ಥಾನದ ಸಾಗರದ ಕಾಗೋಡುವಿನಲ್ಲಿ 1932 ರ ಸೆಪ್ಟೆಂಬರ್ 10 ಜನಿಸಿದ್ದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಗರದಲ್ಲಿನ ಹೆಣ್ಣೂರಿನಲ್ಲಿ ಮುಗಿಸಿ, ಬಿ.ಕಾಂ. ಹಾಗೂ ಬಿ.ಎಲ್ ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದ್ದರು. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ತಿಮ್ಮಪ್ಪನವರು, 1961ರಲ್ಲಿ ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷರಾಗುವ ಮೂಲಕ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

    ರಾಜಕೀಯದಲ್ಲಿ ಸಕ್ರೀಯರಾಗಿ 5 ಬಾರಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು 1999 ರಲ್ಲಿ ಮೊದಲ ಬಾರಿಗೆ ಕಾಗೋಡು ಸಮಾಜ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಚಿವರಾಗಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು, ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ವಿಧಾನಸಭಾ ಅಧ್ಯಕ್ಷರಾಗಿ, ಬಳಿಕ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಶಿವಮೊಗ್ಗದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.